Tag: Flights

  • ವಿಮಾನ ಪ್ರಯಾಣಕ್ಕೆ ದರ ನಿಗದಿ – ಬೆಂಗಳೂರಿನಿಂದ ಎಲ್ಲೆಲ್ಲಿಗೆ ಎಷ್ಟು ರೂ.? – ದರಪಟ್ಟಿ ಓದಿ

    ವಿಮಾನ ಪ್ರಯಾಣಕ್ಕೆ ದರ ನಿಗದಿ – ಬೆಂಗಳೂರಿನಿಂದ ಎಲ್ಲೆಲ್ಲಿಗೆ ಎಷ್ಟು ರೂ.? – ದರಪಟ್ಟಿ ಓದಿ

    ನವದೆಹಲಿ: ಕೋವಿಡ್ 19 ನಿಂದಾಗಿ ಆಗಿರುವ ನಷ್ಟವನ್ನು ತುಂಬಲು ವಿಮಾನಯಾನ ಕಂಪನಿಗಳು ದುಬಾರಿ ಟಿಕೆಟ್ ದರವನ್ನು ವಿಧಿಸುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ನಾಗರಿಕ ವಿಮಾನಯಾನ ನಿರ್ದೇಶನಾಲಯ ದರವನ್ನು ನಿಗದಿ ಪಡಿಸಿದೆ.

    ಲಾಕ್‍ಡೌನ್ ಘೋಷಣೆಯಾದ ಬಳಿಕ ಸ್ಥಗಿತಗೊಂಡಿರುವ ದೇಶಿಯ ವಿಮಾನ ಸಂಚಾರ ಮೇ 25ರಿಂದ ಆರಂಭವಾಗಲಿದೆ. ವಿಮಾನ ಸೇವೆಗೆ ವಿಮಾನಯಾನ ಸಚಿವಾಲಯ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಕಂಪನಿಗಳು ವಿಮಾನದ ಒಳಗಡೆ ಸಾಮಾಜಿಕ ಆಂತರ ಕಾಪಾಡುವ ನಿಟ್ಟಿನಲ್ಲಿ ದುಬಾರಿ ಟಿಕೆಟ್ ದರ ವಿಧಿಸುತ್ತಿವೆ ಎಂದು ಗ್ರಾಹಕರು ದೂರು ನೀಡಿದ್ದರು.

    ವರ್ಗ ಹೇಗೆ?
    ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನ ಹಾರಾಟದ ಮಾರ್ಗವನ್ನು ಎ,ಬಿ,ಸಿ,ಡಿ,ಇ,ಎಫ್,ಜಿ ವಿಂಗಡಿಸಿ ಗರಿಷ್ಠ ಮತ್ತು ಕನಿಷ್ಠ ದರವನ್ನು ನಿಗದಿ ಪಡಿಸಿದೆ. 40 ನಿಮಿಷ ಪ್ರಯಾಣದ ಅವಧಿ ಹೊಂದಿರುವ ಮಾರ್ಗಗಳು ‘ಎ’ ವರ್ಗದಲ್ಲಿ ಬರುತ್ತವೆ. 180 -210 ನಿಮಿಷ ಪ್ರಯಾಣ ಅವಧಿ ಹೊಂದಿರುವ ಮಾರ್ಗಗಳು ‘ಜಿ’ ವರ್ಗದಲ್ಲಿ ಬರುತ್ತದೆ.

    ದರ ಎಷ್ಟು?
    ಎ ವರ್ಗ – ಕನಿಷ್ಠ 2,000 ರೂ. ಗರಿಷ್ಠ 6,000 ರೂ.
    ಮಾರ್ಗಗಳು : ಬೆಂಗಳೂರು – ಚೆನ್ನೈ, ಬೆಂಗಳೂರು – ಕೊಚ್ಚಿ, ಬೆಂಗಳೂರು – ಮಂಗಳೂರು. ಇದನ್ನೂ ಓದಿ: ವಿಮಾನ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ

    ಬಿ ವರ್ಗ – ಕನಿಷ್ಠ 2,500 ರೂ. ಗರಿಷ್ಠ 7,500
    ಮಾರ್ಗಗಳು: ಬೆಂಗಳೂರು – ಕ್ಯಾಲಿಕಟ್, ಬೆಂಗಳೂರು – ಕೊಯಮತ್ತೂರ್, ಬೆಂಗಳೂರು – ಹೈದರಾಬಾದ್, ಬೆಂಗಳೂರು – ತಿರುವನಂತಪುರಂ.

    ಸಿ ವರ್ಗ – ಕನಿಷ್ಠ 3,000 ರೂ. ಗರಿಷ್ಠ 9,000 ರೂ.
    ಮಾರ್ಗಗಳು: ಬೆಂಗಳೂರು – ಮುಂಬೈ, ಬೆಂಗಳೂರು – ನಾಗ್ಪುರ, ಬೆಂಗಳೂರು – ಪೋರ್ಟ್‍ಬ್ಲೇರ್, ಬೆಂಗಳೂರು – ಪುಣೆ, ಬೆಂಗಳೂರು – ವಿಶಾಖಪಟ್ಟಣ.

    ಡಿ ವರ್ಗ – ಕನಿಷ್ಠ 3,500 ರೂ., ಗರಿಷ್ಠ 10,000 ರೂ.
    ಮಾರ್ಗಗಳು : ಬೆಂಗಳೂರು – ಅಹಮದಾಬಾದ್, ಬೆಂಗಳೂರು – ಭೋಪಾಲ್, ಬೆಂಗಳೂರು – ಭುವನೇಶ್ವರ, ಬೆಂಗಳೂರು – ಇಂದೋರ್, ಬೆಂಗಳೂರು – ರಾಯ್‍ಪುರ.

    ಇ ವರ್ಗ – ಕನಿಷ್ಠ 4,500 ರೂ. ಗರಿಷ್ಠ 13,000 ರೂ.
    ಮಾರ್ಗಗಳು: ಬೆಂಗಳೂರು – ದೆಹಲಿ, ಬೆಂಗಳೂರು – ಜೈಪುರ, ಬೆಂಗಳೂರು – ಲಕ್ನೋ, ಬೆಂಗಳೂರು – ಪಾಟ್ನಾ, ಬೆಂಗಳೂರು- ರಾಂಚಿ.

    ಎಫ್ ವರ್ಗ – ಕನಿಷ್ಠ 5,500 ರೂ., ಗರಿಷ್ಠ 15,700 ರೂ.
    ಮಾರ್ಗಗಳು: ಬೆಂಗಳೂರು – ಚಂಡೀಗಢ, ಬೆಂಗಳೂರು ಗುವಹಾಟಿ, ಬೆಂಗಳೂರು – ಇಂಫಾಲ್, ಬೆಂಗಳೂರು- ವಾರಣಾಸಿ.

    ಜಿ ವರ್ಗ – ಕನಿಷ್ಠ 6,500 ರೂ., ಗರಿಷ್ಠ 18,500 ರೂ.
    ಮಾರ್ಗಗಳು: ದೆಹಲಿ – ಕೊಯಮತ್ತೂರು, ದೆಹಲಿ – ತಿರುವನಂತಪುರಂ, ದೆಹಲಿ – ಪೋರ್ಟ್ ಬ್ಲೇರ್.

  • ಹೊರಗಡೆ ಬರಬೇಡಿ, ಮನೆಯಲ್ಲಿರಿ – ಜನರಲ್ಲಿ ಕೇಂದ್ರ ಮನವಿ

    ಹೊರಗಡೆ ಬರಬೇಡಿ, ಮನೆಯಲ್ಲಿರಿ – ಜನರಲ್ಲಿ ಕೇಂದ್ರ ಮನವಿ

    – 65 ವರ್ಷ ಮೇಲ್ಪಟ್ಟವರು, 10 ವರ್ಷದ ಒಳಗಿನವರು ಮನೆಯಲ್ಲಿರಲಿ
    – ಮನೆಯಿಂದಲೇ ಕರ್ತವ್ಯ ನಿರ್ವಹಿಸಿ

    ನವದೆಹಲಿ: ಕೊರೊನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಮತ್ತು 10 ವರ್ಷದ ಒಳಗಿನ ಮಕ್ಕಳು ಮನೆಯಲ್ಲಿರುವಂತೆ ಜನರಲ್ಲಿ ಮನವಿ ಮಾಡಿದೆ.

    ಸಾರ್ವಜನಿಕ ಪ್ರತಿನಿಧಿಗಳು, ಸರ್ಕಾರಿ ಸಿಬ್ಬಂದಿ, ಮೆಡಿಕಲ್ ಸಿಬ್ಬಂದಿ, ಅಗತ್ಯ ವಸ್ತುಗಳನ್ನು ಪೂರೈಸುವ ಮಂದಿ ಹೊರತು ಪಡಿಸಿ ಉಳಿದವರು ಮನೆಯಲ್ಲಿರಬೇಕು. ಕೇಂದ್ರ ಸರ್ಕಾರದ ನೌಕರರು ರೊಟೆಷನ್ ಆಧಾರದಲ್ಲಿ ಪಾಳಿಗೆ ಬರಬೇಕು. ರಾಜ್ಯ ಸರ್ಕಾರಗಳು ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ನಿರ್ದೇಶಿಸಬೇಕು ಎಂದು ಸರ್ಕಾರ ಸೂಚಿಸಿದೆ.

    ಮಾರ್ಚ್ 22 ರಿಂದ ಒಂದು ವಾರ ಯಾವುದೇ ಅಂತಾರಾಷ್ಟ್ರೀಯ ಕಂಪನಿಯ ವಿಮಾನ ಭಾರತದಲ್ಲಿ ಲ್ಯಾಂಡ್ ಆಗಲು ಅನುಮತಿ ನೀಡುವುದಿಲ್ಲ ತಿಳಿಸಿದೆ.

    ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಇದುವರೆಗೂ ದೇಶದಲ್ಲಿ 142 ಮಂದಿ ಭಾರತೀಯರು 25 ವಿದೇಶಿ ಪ್ರವಾಸಿಗರಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ. ಇದುವರೆಗೂ 15 ಮಂದಿ ಸಂಪೂರ್ಣ ಗುಣ ಮುಖರಾಗಿದ್ದಾರೆ.  ಕರ್ನಾಟಕದಲ್ಲಿ 14 ಮಂದಿಯಲ್ಲಿ ವೈರಸ್ ಸೋಂಕು ದೃಢಪಟ್ಟಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

  • ವಿಮಾನ ಪ್ರಯಾಣ ಬಂದ್ – ರದ್ದುಗೊಂಡ ವಿದೇಶಿ ವಾಯುಮಾರ್ಗಗಳ ವಿವರ ಓದಿ

    ವಿಮಾನ ಪ್ರಯಾಣ ಬಂದ್ – ರದ್ದುಗೊಂಡ ವಿದೇಶಿ ವಾಯುಮಾರ್ಗಗಳ ವಿವರ ಓದಿ

    ನವದೆಹಲಿ: ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಭಾರತದ ಹಲವು ವಿಮಾನಯಾನ ಕಂಪನಿಗಳು ವಿದೇಶಗಳಿಗೆ ನೀಡುವ ಸೇವೆಯನ್ನು ಬಲವಂತವಾಗಿ ರದ್ದುಗೊಳಿಸಿದೆ.

    ಏರ್ ಇಂಡಿಯಾ ಮಾರ್ಚ್ 16 ರಿಂದ ಏಪ್ರಿಲ್ 30ರವರೆಗೆ ನೇಪಾಳದ ಕಠ್ಮಂಡು, ದುಬೈ, ಸೌದಿ ಅರೆಬಿಯಾದ ರಾಜಧಾನಿ ರಿಯಾದ್, ದಮ್ಮಂ, ಜೆಡ್ಡಾ, ಕತಾರ್ ರಾಜಧಾನಿ ದೋಹಾ, ಓಮನ್ ರಾಜಧಾನಿ ಮಸ್ಕತ್‍ಗೆ ದೇಶದ ವಿವಿಧ ವಿಮಾನ ನಿಲ್ದಾಣಗಳಿಂದ ಹೋಗುವ ವಿಮಾನ ಸೇವೆಯನ್ನು ರದ್ದುಮಾಡಿದೆ.

    ಏರ್ ಇಂಡಿಯಾ ಈಗಾಗಲೇ ಸ್ಪೇನ್ ಮ್ಯಾಡ್ರಿಡ್, ಫ್ರಾನ್ಸಿನ ಪ್ಯಾರಿಸ್, ಜರ್ಮನಿಯ ಫ್ರಂಕ್‍ಫರ್ಟ್, ಇಸ್ರೇಲಿನ ಟೆಲ್ ಎವಿವ್, ಇಟಲಿಯ ರೋಮ್ ಮತ್ತು ಮಿಲನ್, ದಕ್ಷಿಣ ಕೊರಿಯದ ಇಂಚಿಯಾನ್, ಕುವೈತ್, ಕೊಲೊಂಬೋಗೆ ಏಪ್ರಿಲ್ 30ರವರೆಗೆ ವಿಮಾನ ಸೇವೆಯನ್ನು ರದ್ದು ಮಾಡಿದೆ.

    ಆರಂಭದಲ್ಲಿ ಭಾರತ ಯುರೋಪ್, ಇಂಗ್ಲೆಂಡ್ ಮತ್ತು ಟರ್ಕಿ ದೇಶದ ಪ್ರಯಾಣಿಕರಿಗೆ ನಿರ್ಬಂಧ ಹೇರಿತ್ತು. ಇದರಿಂದಾಗಿ ಹಲವು ಮಾರ್ಗಗಳು ಬಂದ್ ಆಗಿತ್ತು. ಭಾರತ ಸರ್ಕಾರ ತಾತ್ಕಾಲಿಕವಾಗಿ ಏಪ್ರಿಲ್ 15ರವರೆಗೆ ವಿಶ್ವಸಂಸ್ಥೆ, ರಾಯಭಾರ ಸೇವೆಯಲ್ಲಿ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಹೊರತು ಪಡಿಸಿ ಬೇರೆ ಯಾರಿಗೂ ವೀಸಾ ನೀಡುವುದಿಲ್ಲ ಎಂಬ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಈಗ ವಿಮಾನಯಾನ ಕಂಪನಿಗಳು ಸೇವೆಯನ್ನು ರದ್ದುಗೊಳಿಸುತ್ತಿವೆ.

    ರದ್ದುಗೊಂಡ ವಾಯುಮಾರ್ಗಗಳು
    ಹಾಂಕಾಂಗಿನಿಂದ ಭಾರತಕ್ಕೆ ಬರುವ ಕ್ಯಾಥೆಡ್ರಾಗನ್ ಸೇವೆ ಜೊತೆ ಬ್ಯಾಂಕಾಕ್, ಸಿಂಗಾಪುರ, ದೋಹಾ, ಕೊಲಂಬೋಗೆ ಸಂಚರಿಸುವ ಇಂಡಿಗೋ ವಿಮಾನ ಸೇವೆ ರದ್ದಾಗಿದೆ.

    ಕೊಲಂಬೋಗೆ ಸಂಚರಿಸುವ ಗೋ ಏರ್, ಬ್ಯಾಂಕಾಂಕ್‍ನಿಂದ ಭಾರತಕ್ಕೆ ಬರುವ ಥಾಯ್ ಏರ್‍ವೇಸ್, ಮಲೇಷ್ಯಾ ಏರ್ ಲೈನ್ಸ್,  ಕೌಲಾಲಂಪುರ್, ಸಿಂಗಾಪುರಕ್ಕೆ ಕೊಚ್ಚಿಯಿಂದ ಪ್ರಯಾಣಿಸುವ ಏರ್ ಇಂಡಿಯಾ ಎಕ್ಸ್ ಪ್ರೆಸ್, ರಿಯಾದಿಗೆ ಹೋಗುವ ಸೌದಿ ಅರೆಬಿಯಾ ಏರ್‍ಲೈನ್ಸ್, ಆಡಿಸ್ ಅಬಾಬಾದಿಂದ ಬರುವ ಇಥಿಯೋಪಿಯನ್ ಏರ್‍ಲೈನ್ಸ್ ಸೇವೆ ರದ್ದುಗೊಂಡಿದೆ.

    ಕುವೈತ್‍ನಿಂದ ಬರುವ ಕುವೈತ್ ಏರ್‍ವೇಸ್, ಜರ್ಮನಿಯಿಂದ ಫ್ರಂಕ್‍ಫರ್ಟ್ ನಿಂದ ಹೊರಡುವ ಲುಫ್ತಾನ್ಸ ಏರ್‍ಲೈನ್ಸ್, ಮಸ್ಕತ್ ನಿಂದ ಹೊರಡುವ ಓಮನ್ ಏರ್, ಪ್ಯಾರಿಸ್‍ನಿಂದ ಬರುವ ಏರ್ ಫ್ರಾನ್ಸ್,  ಬ್ಯಾಂಕಾಕ್‍ಗೆ ಸಂಪರ್ಕ ಕಲ್ಪಿಸುವ ಥಾಯ್ ಏರ್, ಬಹ್ರೇನ್ ದೇಶದಿಂದ ಬರುವ ಗಲ್ಫ್ ಏರ್, ಯುಎಇ ಶಾರ್ಜಾದಿಂದ ಬರುವ ಏರ್ ಅರೇಬಿಯಾ, ಲಂಡನ್‍ನಿಂದ ಹೊರಡುವ ಬ್ರಿಟಿಷ್ ಏರ್‍ವೇಸ್, ದುಬೈನಿಂದ ಬರುವ ಎಮಿರೇಟ್ಸ್ ವಿಮಾನ ಸೇವೆಗಳು ರದ್ದಾಗಿದೆ.