Tag: flight ticket

  • ಹಳೇ ಚಾಳಿಯನ್ನೇ ಮುಂದುವರಿಸಿದ ಖಾಸಗಿ ಬಸ್‍ಗಳು- ಫ್ಲೈಟ್ ದರಕ್ಕಿಂತಲೂ ದುಬಾರಿ ಟಿಕೆಟ್

    ಹಳೇ ಚಾಳಿಯನ್ನೇ ಮುಂದುವರಿಸಿದ ಖಾಸಗಿ ಬಸ್‍ಗಳು- ಫ್ಲೈಟ್ ದರಕ್ಕಿಂತಲೂ ದುಬಾರಿ ಟಿಕೆಟ್

    ಬೆಂಗಳೂರು: ಖಾಸಗಿ ಬಸ್‍ (Private Bus) ಗಳು ತಮ್ಮ ಹಳೆ ಚಾಳಿಯನ್ನ ಮತ್ತೆ ಮುಂದುವರಿಸಿವೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಫ್ಲೈಟ್ ಟಿಕೆಟ್ (Flight Ticket) ದರಕ್ಕಿಂತಲೂ ಹೆಚ್ಚು ದರವನ್ನ ನಿಗದಿಪಡಿಸಿವೆ.

    ದೀಪಾವಳಿ (Deepavali) ಹಬ್ಬಕ್ಕೆ ಖಾಸಗಿ ಬಸ್‍ಗಳು ತಮ್ಮ ಆಟಾಟೋಪ ಶುರುಮಾಡಿದ್ದು, ಲೂಟಿಕೋರ ಬಸ್‍ಗಳನ್ನ ಸೀಸ್ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಇಂದಿನಿಂದ ದುಪ್ಪಟ್ಟು ಹಣ ಪೀಕುವ ಬಸ್‍ಗಳನ್ನ ಹಾಗೂ ಟ್ರಾವೆಲ್ ಏಜೆನ್ಸಿ (Travel Agency) ಗಳ ಪರಿಶೀಲನೆ ನಡೆಸಲಿದ್ದಾರೆ. ಇದನ್ನೂ ಓದಿ: ಕೋರ್ಟ್‌ ನೋಟಿಸ್‌ಗೆ ಥಂಡಾ – ಕರೆ ಮಾಡಿ ಹೆಚ್ಚುವರಿ ಅಂಕ ನೀಡ್ತೀವಿ ಎಂದ ಪಿಯು ಬೋರ್ಡ್‌

    ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೆಲ ಬಸ್‍ಗಳಲ್ಲಿ ಒಂದು ಸೀಟಿಗೆ ಬರೋಬ್ಬರಿ 5 ಸಾವಿರದಿಂದ, 6 ಸಾವಿರ ಹಣ ನಿಗದಿ ಮಾಡಲಾಗಿದೆ. ಫ್ಲೈಟ್ ಟಿಕೆಟ್ ದರ 4,849 ರೂ. ಇದೆ. ಬೆಂಗಳೂರಿನಿಂದ ಮಂಗಳೂರಿಗೆ 3 ಸಾವಿರದ 600 ರೂ. ಬಸ್ ಟಿಕೆಟ್ (Bus Ticket) ದರ ಇದ್ರೆ, ಫ್ಲೈಟ್ ಟಿಕೆಟ್ ದರ 3 ಸಾವಿರದ 700 ರೂ. ಇದೆ. ಇಷ್ಟೊಂದು ದುಬಾರಿ ಹಣ ಪೀಕುವ, ಖಾಸಗಿ ಬಸ್ ಮಾಲೀಕರ ಜೊತೆ ಒಂದು ಸುತ್ತಿನ ಮಾತುಕತೆಗೂ ಸಾರಿಗೆ ಇಲಾಖೆ ಮುಂದಾಗಿದೆ.

    ಇಲಾಖೆಯ ಎಚ್ಚರಿಗೂ ಬಗ್ಗದಿದ್ರೆ, ದಂಡಂ ದಶಗುಣಂ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. 22 ರಂದು 4ನೇ ಶನಿವಾರ ಸೇರಿ, ದೀಪಾವಳಿಗೆ ನಿರಂತರ 5 ದಿನ ರಜೆಯಿದೆ. ಶುಕ್ರವಾರ ಸಂಜೆಯಿಂದಲೇ ಸಾಕಷ್ಟು ಜನ, ತಮ್ಮೂರುಗಳಿಗೆ ತೆರಳುತ್ತಾರೆ. ಖಾಸಗಿ ಬಸ್ ಗಳಿಗೆ ಇಂತಿಷ್ಟೆ ದರ ತೆಗೆದುಕೊಳ್ಳಬೇಕು ಎಂಬ ಒಪ್ಪಂದ ಸಾರಿಗೆ ಇಲಾಖೆಯೊಂದಿಗೆ ಆಗಿಲ್ಲ. ಇದೇ ಕಾರಣಕ್ಕೂ ಯದ್ವಾತದ್ವ ಟಿಕೆಟ್ ದರ ಏರಿಕೆ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಮ್ಮೊಂದಿಗೆ, ನಾಯಿಗೂ ವಿಮಾನ ಟಿಕೆಟ್ ಬುಕ್ ಮಾಡಲು ಹೇಳುತ್ತಾರಂತೆ ರಶ್ಮಿಕಾ ಮಂದಣ್ಣ

    ತಮ್ಮೊಂದಿಗೆ, ನಾಯಿಗೂ ವಿಮಾನ ಟಿಕೆಟ್ ಬುಕ್ ಮಾಡಲು ಹೇಳುತ್ತಾರಂತೆ ರಶ್ಮಿಕಾ ಮಂದಣ್ಣ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾನಾ ಕಾರಣಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಚಾರ್ಲಿ 777 ಸಿನಿಮಾ ರಿಲೀಸ್ ಆದ ನಂತರ, ನಾಯಿ ಕಾರಣಕ್ಕಾಗಿ ಅವರು ಸುದ್ದಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ತಮ್ಮ ಮುದ್ದಿನ ನಾಯಿಯನ್ನು ಮುದ್ದಿಸುವ ರಶ್ಮಿಕಾ  ಫೋಟೋ ಸಖತ್ ವೈರಲ್ ಆಗಿತ್ತು. ಚಾರ್ಲಿ ಸಿನಿಮಾವನ್ನು ಕದ್ದುಮುಚ್ಚಿ ನೋಡಿರುವ ರಶ್ಮಿಕಾ, ತನ್ನ ನಾಯಿ ಜೊತೆ ಭಾವನಾತ್ಮಕವಾಗಿ ಕ್ಷಣಗಳನ್ನು ಕಳೆಯುತ್ತಿದ್ದಾರೆ ಎಂದು ಟ್ರೋಲ್ ಆಗಿತ್ತು. ಇದೀಗ ಅದೇ ನಾಯಿಯ ವಿಚಾರಕ್ಕಾಗಿ ಮತ್ತೊಂದು ಸುದ್ದಿಯಾಗಿದ್ದಾರೆ ಕೊಡಗಿನ ಹುಡುಗಿ.

    ರಶ್ಮಿಕಾ ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವುದರಿಂದ ಸಖತ್ ಬ್ಯುಸಿಯಾಗಿದ್ದಾರೆ. ಮನೆಗೆ ಹೋಗುವುದೇ ಅಪರೂಪ ಎನ್ನುವಂತಾಗಿದೆಯಂತೆ. ಅದರಲ್ಲೂ ತಮ್ಮ ಪ್ರೀತಿಯ ನಾಯಿಯನ್ನು ಬಿಟ್ಟು ಇರಲು ಅವರಿಂದ ಸಾಧ್ಯವಾಗುತ್ತಿಲ್ಲವಂತೆ. ಹಾಗಾಗಿ ತಮ್ಮೊಂದಿಗೆ, ನಾಯಿಗೂ ಫ್ಲೈಟ್ ಟಿಕೆಟ್ ಮಾಡಿಸುವಂತೆ ನಿರ್ಮಾಪಕರಿಗೆ ದುಂಬಾಲು ಬೀಳುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಹಲವು ಮಾಧ್ಯಮಗಳು ಈ ಕುರಿತು ಸುದ್ದಿಯನ್ನೂ ಮಾಡಿವೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಈ ವಿಷಯದ ಕುರಿತಂತೆ ಸ್ವತಂ ರಶ್ಮಿಕಾ ಮಂದಣ್ಣ ಕೂಡ ಪ್ರತಿಕ್ರಿಯೆ ನೀಡಿದ್ಧಾರೆ. “ಈ ವಿಷಯ ನನಗೆ ಫನ್ನಿ ಅನಿಸುತ್ತಿದೆ. ಈ ದಿನವನ್ನು ಉಲ್ಲಾಸಗೊಳಿಸಿದೆ. ಸುದ್ದಿ ಕೇಳಿ ನಾನೂ ನಕ್ಕೆ. ನನ್ನ ನಾಯಿಯು ನನ್ನೊಂದಿಗೆ ಬರಲು ಇಚ್ಚೆ ಪಡುವುದಿಲ್ಲ. ಅದು ಹೈದರಾಬಾದ್ ಮನೆಯಲ್ಲೇ ಇರಲು ಇಷ್ಟ ಪಡುತ್ತಿದೆ. ಉಳಿದಂತೆ ಏನೂ ಹೇಳಲಾರೆ. ಒಳ್ಳೆಯದಾಗಲಿ’ ಎಂದು ಟ್ವಿಟ್ ಮಾಡಿದ್ದಾರೆ. ತಮ್ಮೊಂದಿಗೆ ನಾಯಿಗೂ ಟಿಕೆಟ್ ಹಾಕಬೇಕು ಎನ್ನುವುದನ್ನು ಅವರು ಈ ಮೂಲಕ ನಿರಾಕರಿಸಿದ್ದಾರೆ.

    Live Tv

  • ಸಾವನ್ನಪ್ಪಿದ ಮಗನ ನೆನಪಿನಲ್ಲಿ 61 ಭಾರತೀಯರನ್ನು ದುಬೈನಿಂದ ಕರೆಸುತ್ತಿರುವ ತಂದೆ

    ಸಾವನ್ನಪ್ಪಿದ ಮಗನ ನೆನಪಿನಲ್ಲಿ 61 ಭಾರತೀಯರನ್ನು ದುಬೈನಿಂದ ಕರೆಸುತ್ತಿರುವ ತಂದೆ

    ತಿರುವನಂತಪುರಂ: ಸಾವನ್ನಪ್ಪಿದ ಮಗನ ನೆನಪಿನಲ್ಲಿ ಕೇರಳದ ಮೂಲದ ತಂದೆಯೊಬ್ಬರು ದುಬೈನಲ್ಲಿ ಸಿಲುಕಿದ್ದ ಭಾರತೀಯರು ತಾಯ್ನಾಡಿಗೆ ವಾಪಸ್ ಬರಲು ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದಾರೆ.

    ಕೇರಳದ ತಿರುವನಂತಪುರಂನ ಟಿ.ಎನ್ ಕೃಷ್ಣಕುಮಾರ್ ಅವರ ಮಗ ಕಳೆದ ವರ್ಷ ರಸ್ತೆ ಅಫಘಾತದಲ್ಲಿ ಮೃತಪಟ್ಟಿದ್ದರು. ಈ ಮಗನ ನೆನಪಿನಲ್ಲಿ ಕೃಷ್ಣ ಕುಮಾರ್ ಅವರು, ದುಬೈನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆಸಲು ತೀರ್ಮಾನ ಮಾಡಿದ್ದರು. ಹೀಗಾಗಿ ಸುಮಾರು 61 ಕೇರಳಿಗರು ಭಾರತಕ್ಕೆ ದುಬೈನಿಂದ ವಾಪಸ್ ಬರಲು ತಮ್ಮ ಸ್ವಂತ ಹಣದಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡಿ ಮಾನವೀಯತೆ ಮರೆದಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಖಾಸಗಿ ಸಂಸ್ಥೆಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕರಾಗಿ ಉದ್ಯೋಗದಲ್ಲಿರುವ ಕೃಷ್ಣಕುಮಾರ್ ಅವರು, ಈ ಕೊರೊನಾ ಸಮಯದಲ್ಲಿ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅಂತವರಿಗೆ ನಾನು ಸಹಾಯ ಮಾಡಲು ಬಯಸುತ್ತೇನೆ. ದುಬೈನಲ್ಲಿ ಕೆಲಸ ಮಾಡುವ ನಮ್ಮ ದೇಶದ ಕೆಲವರು ಅಲ್ಲಿ ಕೆಲಸ ಕಳೆದುಕೊಂಡು ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಅಂತವರಿಗೆ ಸಹಾಯ ಮಾಡಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

    ಇವರ ಪುತ್ರ 2019ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪುತ್ರನ ನೆನಪಿನಲ್ಲಿ ಇವರು 61 ಜನರನ್ನು 14 ಲಕ್ಷ ಖರ್ಚು ಮಾಡಿ ಇಂಡಿಯಾಗೆ ವಾಪಸ್ ಕರೆಸುತ್ತಿದ್ದಾರೆ. ಇವರು ಕೂಡ 32 ವರ್ಷ ದುಬೈನಲ್ಲಿ ಕೆಲಸ ಮಾಡಿ ಬಂದಿದ್ದಾರೆ. ಇವರು ಈ ರೀತಿ ಸಮಾಜ ಸೇವೆ ಮಾಡುತ್ತಿರುವುದು ಇದೇ ಮೊದಲೇನಲ್ಲ, 2018ರಲ್ಲಿ ಕೇರಳದಲ್ಲಿ ಪ್ರವಾಹ ಬಂದಾಗಲೂ ಇವರು ಧನಸಹಾಯ ಮಾಡಿದ್ದಾರೆ. ಜೊತೆಗೆ ಪ್ರತಿವರ್ಷ ಇಫ್ತಾರ್ ವೇಳೆ ಕಾರ್ಮಿಕರ ಶಿಬಿರಗಳಿಗೆ ಆಹಾರ ಕಿಟ್ ಕೂಡ ಕಳುಹಿಸಿ ಕೊಡುತ್ತಾರೆ.

    1988ರಲ್ಲಿ ತಿರುವನಂತಪುರಂ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾದ ಕೃಷ್ಣಕುಮಾರ್ ಅವರು, ಕೇರಳದ ವಿಜ್ಞಾನ ಮತ್ತು ಕಲಾ ಕಾಲೇಜುಗಳಿಂದ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡ ಯುಎಇಯಲ್ಲಿ ಸ್ಥಾಪಿಸಲಾದ ಸ್ವಯಂಸೇವಕ ಗುಂಪಿನ ಆಲ್ ಕೇರಳ ಕಾಲೇಜು ಅಲುಮ್ನಿ ಫ್ರಂಟ್ (ಎಕೆಸಿಎಎಫ್)ನ ಸಕ್ರಿಯ ಸದಸ್ಯರಾಗಿದ್ದಾರೆ.

  • ಮಂಗಳೂರು-ಬೆಂಗಳೂರು 1 ವಿಮಾನ ಟಿಕೆಟ್ ದರ 16 ಸಾವಿರಕ್ಕೆ ಏರಿಕೆ

    ಮಂಗಳೂರು-ಬೆಂಗಳೂರು 1 ವಿಮಾನ ಟಿಕೆಟ್ ದರ 16 ಸಾವಿರಕ್ಕೆ ಏರಿಕೆ

    ಮಂಗಳೂರು: ಮಳೆಯಿಂದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕಿಸುವ ಹೆದ್ದಾರಿಗಳೆಲ್ಲಾ ಮುಚ್ಚಿ ಹೋಗಿವೆ. ಹೀಗಾಗಿ ತುರ್ತು ಸಂಪರ್ಕಕ್ಕೆ ಏಕೈಕ ದಾರಿಯಾಗಿರುವ ವಿಮಾನ ಪ್ರಯಾಣಕ್ಕೆ ಬೇಡಿಕೆ ಹೆಚ್ಚಿದ ಹಿನ್ನೆಲೆ ವಿಮಾನಯಾನ ಕಂಪನಿಗಳು ಈಗ ಪ್ರಯಾಣಿಕರನ್ನು ಸುಲಿಗೆ ಮಾಡಲಾರಂಭಿಸಿದೆ.

    ಹೌದು. ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದಿದ್ದರೆ, ಮೈಸೂರು ಬಂಟ್ವಾಳ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಕುಶಾಲನಗರದ ಕೊಪ್ಪದಲ್ಲಿ ಕಾವೇರಿ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ಸಂಪರ್ಕ ಕಡಿತಗೊಂಡಿದೆ.

    ಇತ್ತ ಭಾರೀ ಮಳೆಗೆ ಹಳಿಗಳ ಮೇಲೆ ನೀರು ನಿಂತಿರುವ ಕಾರಣಕ್ಕೆ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಹೀಗಾಗಿ ಮಂಗಳೂರಿನಿಂದ ಬೆಂಗಳೂರು ತೆರೆಳಲು ಜನರು ವಿಮಾನಯಾನದ ಮೊರೆಹೋಗಿದ್ದಾರೆ. ಹೆಚ್ಚು ಹೆಚ್ಚು ಮಂದಿ ವಿಮಾನಗಳಲ್ಲಿ ತೆರಳುತ್ತಿರುವ ಕಾರಣಕ್ಕೆ ವಿಮಾನಯಾನ ಕಂಪನಿಗಳು ಈಗ ಪ್ರಯಾಣಿಕರನ್ನು ಸುಲಿಗೆ ಮಾಡಲಾರಂಭಿಸಿದೆ. ಸಾಮಾನ್ಯ ದಿನಗಳಲ್ಲಿ ಮಂಗಳೂರು – ಬೆಂಗಳೂರು ಪ್ರಯಾಣಕ್ಕೆ ಕೇವಲ 2 ಸಾವಿರ ರೂ. ಟಿಕೆಟ್ ದರ ಇರುತ್ತದೆ. ಆದರೆ ಭಾನುವಾರ ಟಿಕೆಟ್ ದರ 16 ಸಾವಿರಕ್ಕೆ ಏರಿಕೆ ಮಾಡಲಾಗಿತ್ತು.

    ಇಂಡಿಗೋ ಮತ್ತು ಸ್ಪೈಸ್ ಜೆಟ್ ಕಂಪನಿಗಳಿಂದ ಮಂಗಳೂರಿನಿಂದ ಬೆಂಗಳೂರಿಗೆ ದಿನದಲ್ಲಿ ನಾಲ್ಕು ಬಾರಿ ವಿಮಾನ ಸಂಚಾರದ ವ್ಯವಸ್ಥೆಯಿದೆ. ರಸ್ತೆ ಹಾಗೂ ರೈಲು ಮಾರ್ಗ ಬಂದ್ ಆಗಿರುವ ಹಿನ್ನೆಲೆ ವಿಮಾನಯಾನಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ವಿಮಾನ ಟಿಕೆಟ್ ದರವನ್ನು ಕಂಪನಿಗಳು ವಿಪರೀತವಾಗಿ ಏರಿಕೆ ಮಾಡಿದೆ. ಒಂದೆಡೆ ಪ್ರವಾಹದಿಂದ ಸಂತ್ರಸ್ತರಿಗೆ ರಾಜ್ಯದೆಲ್ಲೆಡೆ ದೇಣಿಗೆ ಸಂಗ್ರಹಿಸುತ್ತಿರುವ ಹೊತ್ತಲ್ಲಿ ವಿಮಾನ ಕಂಪನಿಗಳು ಪ್ರಯಾಣಿಕರ ಸುಲಿಗೆ ಮಾಡುತ್ತಿರುವುದು ಸರಿಯಲ್ಲವೆಂದು ಪ್ರಯಾಣಿಕರು ಕಿಡಿಕಾರಿದ್ದಾರೆ.

    ಮಂಗಳೂರು- ಬೆಂಗಳೂರು ವಿಮಾನ ಟಿಕೆಟ್ ದರ ಒಬ್ಬರಿಗೆ ಎಷ್ಟು?
    ಸಾಮಾನ್ಯ ದಿನಗಳಲ್ಲಿ 2,280 ರೂ. ಇದ್ದರೆ, ಶುಕ್ರವಾರದಂದು 9,715 ರೂಪಾಯಿಂದ 53,600 ರೂ. ಏರಿಕೆಯಾಗಿತ್ತು. ಆಗಸ್ಟ್ 11ರ ಏರ್ ಇಂಡಿಯಾ ಟಿಕೆಟ್ ದರ 14,600 ರೂಪಾಯಿಂದ 15,596 ರೂ., ಇಂಡಿಗೋ ಟಿಕೆಟ್ ದರ 17,599 ರೂ. ಇದೆ. ಆಗಸ್ಟ್ 12ರ ಏರ್ ಇಂಡಿಯಾ ಟಿಕೆಟ್ ದರ 18,851 ರೂ., ಇಂಡಿಗೋ 10,673 ರೂ., ಸ್ಪೈಸ್ ಜೆಟ್ 10,214 ರೂ. ನಿಗದಿಗೊಳಿಸಲಾಗಿದೆ.

    https://www.facebook.com/yeshwanth.kadri/posts/10158767011494937