Tag: Flight crash

  • Breaking: ಚಾಮರಾಜನಗರದಲ್ಲಿ ಲಘು ವಿಮಾನ ಪತನ – ಪೈಲಟ್‌ಗಳು ಗ್ರೇಟ್‌ ಎಸ್ಕೇಪ್‌

    Breaking: ಚಾಮರಾಜನಗರದಲ್ಲಿ ಲಘು ವಿಮಾನ ಪತನ – ಪೈಲಟ್‌ಗಳು ಗ್ರೇಟ್‌ ಎಸ್ಕೇಪ್‌

    ಚಾಮರಾಜನಗರ: ಜಿಲ್ಲೆಯ ಭೋಗಪುರದ ಹೊರವಲಯದಲ್ಲಿ ಲಘು ವಿಮಾನ ಪತನಗೊಂಡಿದ್ದು (Flight Crash), ಪೈಲಟ್‌ಗಳು (Pilot) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ವಿಮಾನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಪೈಲಟ್‌ಗಳು ಪ್ಯಾರಾಚೂಟ್‌ಗಳ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ. ವಿಮಾನ ಸಂಪೂರ್ಣ ಸುಟ್ಟು ಬೆಂಕಿಗೆ ಆಹುತಿಯಾಗಿದೆ. ಇದನ್ನೂ ಓದಿ ತಾಂತ್ರಿಕ ತೊಂದರೆಯಿಂದ ತರಬೇತಿ ವಿಮಾನ ತುರ್ತು ಭೂಸ್ಪರ್ಶ- ತಪ್ಪಿದ ಭಾರೀ ಅನಾಹುತ

    ಸದ್ಯ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿದ್ದು, ವಿಮಾನ ಪತನಕ್ಕೆ ನಿಖರ ಕಾರಣ ಏನೆಂಬುದನ್ನು ತಿಳಿಯಲು ತಪಾಸಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವೀಕೆಂಡ್ ಶೋ: ಡಿಸಿಎಂ ಡಿಕೆಶಿ ಬರೋದು ಖಚಿತ, ಭಾನುವಾರ ಶೂಟಿಂಗ್ ನಿಶ್ಚಿತ, ಮನರಂಜನೆ ಉಚಿತ

  • ಡಿವೋರ್ಸ್‌ ಆಗಿದ್ದರೂ ಮಕ್ಕಳೊಂದಿಗೆ ಪ್ರವಾಸ: ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಬಲಿ

    ಡಿವೋರ್ಸ್‌ ಆಗಿದ್ದರೂ ಮಕ್ಕಳೊಂದಿಗೆ ಪ್ರವಾಸ: ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಬಲಿ

    ಕಠ್ಮಂಡು: ನೇಪಾಳ ವಿಮಾನ ಪತನಗೊಂಡ ಸ್ಥಳದಲ್ಲಿ ಇದುವರೆಗೂ 16 ಮೃತದೇಹ ಪತ್ತೆಯಾಗಿದ್ದು, ಅದರಲ್ಲಿ 4 ಮಂದಿ ಭಾರತೀಯರು ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ.

    ಅಶೋಕ್ ಕುಮಾರ್ ತ್ರಿಪಾಠಿ(54) ಮತ್ತು ಪತ್ನಿ ವೈಭವಿ(51) ತಮ್ಮ ಮಕ್ಕಳೊಂದಿಗೆ ನೇಪಾಳ ಪ್ರವಾಸಕ್ಕಾಗಿ ಹೋಗಿದ್ದರು. ಈ ವೇಳೆ ವಿಮಾನ ಅಪಘಾತಕ್ಕೀಡಾಗಿ ನಾಲ್ಕು ಮಂದಿ ಸುಟ್ಟು ಹೋಗಿದ್ದಾರೆ. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್ 

    ಒಡಿಶಾದಲ್ಲಿ ಕಂಪನಿಯೊಂದನ್ನು ನಡೆಸುತ್ತಿದ್ದ ಅಶೋಕ್ ತ್ರಿಪಾಠಿ ಮತ್ತು ಮುಂಬೈನ ಬಿಕೆಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವೈಭವಿ ಬಾಂದೇಕರ್ ತ್ರಿಪಾಠಿ ವಿಚ್ಛೇದನ ಪಡೆದುಕೊಂಡಿದ್ದರು. ಇವರ ಮಗ ಧನುಷ್ (22) ಮತ್ತು ಮಗಳು ರಿತಿಕಾ(15) ಥಾಣೆ ನಗರದ ಬಲ್ಕಮ್ ಪ್ರದೇಶದ ರುಸ್ತಂಜೀ ಅಥೇನಾ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದರು.

    ಭಾನುವಾರ ಅಶೋಕ್ ತ್ರಿಪಾಠಿ, ವೈಭವಿ ಮತ್ತು ಅವರ ಇಬ್ಬರು ಮಕ್ಕಳು ತಾರಾ ಏರ್‌ಲೈನ್ಸ್ ವಿಮಾನವನ್ನು ಹತ್ತಿದ್ದರು. ಆದರೆ ಮುಸ್ತಾಂಗ್ ಜಿಲ್ಲೆಯ ಕೋವಾಂಗ್ ಗ್ರಾಮದ ಲಾಮ್ಷೆ ನದಿಯ ಸಮೀಪ 14,500 ಅಡಿ ಎತ್ತರದಲ್ಲಿ ಪರ್ವತದ ತುದಿಗೆ ಡಿಕ್ಕಿ ಹೊಡೆದು ವಿಮಾನ ಪತನಗೊಂಡಿದೆ. ಈ ಹಿನ್ನೆಲೆ ಪ್ರವಾಸ ಕೈಗೊಂಡಿದ್ದ ಇಡೀ ಕುಟುಂಬ ಸುಟ್ಟು ಹೋಗಿದ್ದು, ಅವರ ಅವಶೇಷಗಳು ನೇಪಾಳದ ಪರ್ವತಮಯ ಮುಸ್ತಾಂಗ್ ಜಿಲ್ಲೆಯಲ್ಲಿ ಸೋಮವಾರ ಸಿಕ್ಕಿದೆ.

    ವೈಭವಿ ಅವರ 80 ವರ್ಷದ ತಾಯಿ ಮನೆಯಲ್ಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ಚಿಕ್ಕಮಗಳು ನೋಡಿಕೊಳ್ಳುತ್ತಿದ್ದಾಳೆ. ವಿಮಾನ ಪತನವಾದ ವಿಷಯವನ್ನು ಇನ್ನೂ ವೈಭವಿ ಅವರ ತಾಯಿಗೆ ತಿಳಿಸಿಲ್ಲ ಎಂದು ಥಾಣೆಯ ಕಪುರ್‍ಬಾವಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:  ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್ 

    ಟರ್ಬೊಪ್ರೊಪ್ ಟ್ವಿನ್ ಓಟರ್ 9N-AET ವಿಮಾನ ನಾಲ್ವರು ಭಾರತೀಯ ಪ್ರಜೆಗಳು, ಇಬ್ಬರು ಜರ್ಮನ್ನರು ಮತ್ತು 13 ನೇಪಾಳಿ ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತಿತ್ತು. ಮೂವರು ನೇಪಾಳಿ ಸಿಬ್ಬಂದಿ ವಿಮಾನದಲ್ಲಿದ್ದರು.

  • 132 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ ಉದ್ದೇಶಪೂರ್ವಕ – ಅಮೆರಿಕ ವರದಿ ಹೇಳಿದ್ದೇನು?

    132 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ ಉದ್ದೇಶಪೂರ್ವಕ – ಅಮೆರಿಕ ವರದಿ ಹೇಳಿದ್ದೇನು?

    ಬೀಜಿಂಗ್: 132 ಜನರನ್ನು ಬಲಿ ಪಡೆದ ಚೀನಾ ವಿಮಾನ ದುರಂತ ಉದ್ದೇಶಪೂರ್ವಕ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ.

    ವಿಮಾನ ಪತನಗೊಂಡ ಸ್ಥಳದಲ್ಲಿ ಸಿಕ್ಕ ಬ್ಲಾಕ್‌ಬಾಕ್ಸ್‌ನಿಂದ ಈ ಮಾಹಿತಿ ಪತ್ತೆಯಾಗಿದೆ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್ ವರದಿ ಮಾಡಿದೆ. ಇದನ್ನೂ ಓದಿ: ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ? 

    FLIGHT

    ಕಳೆದ ಮಾರ್ಚ್‌ ಚೀನಾದ ಈಸ್ಟರ್ನ್ ಜೆಟ್ ಕಂಪನಿಗೆ ಸೇರಿದ ವಿಮಾನ ಇಲ್ಲಿನ ಗುವಾಂಗ್ಸಿ ಪ್ರದೇಶದಲ್ಲಿ ಪತನಗೊಂಡು 132 ಜನರು ಮೃತಪಟ್ಟಿದ್ದರು. ಈ ವೇಳೆ ಪೈಲಟ್ ತಪ್ಪಿನಿಂದಾಗಿ ಅಥವಾ ಆತ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ವಿಮಾನವನ್ನು ಉದ್ದೇಶಪೂರ್ವಕವಾಗಿಯೇ ಪತನಗೊಳಿಸಿರಬಹುದು ಎಂಬ ವಾದಗಳು ಹುಟ್ಟಿಕೊಂಡಿದ್ದವು. ಇದೀಗ ಅಮೆರಿಕ ತಜ್ಞರ ವರದಿ ಈ ಕುರಿತು ಸ್ಪಷ್ಟನೆ ನಿಡಿದೆ.

    ಫ್ಲೈಟ್‌ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಅನ್ನು ಈಗಾಗಲೇ ಪರೀಕ್ಷೆಗಾಗಿ ಕಳುಹಿಸಲಾಗಿದೆ. 30 ದಿನಗಳಲ್ಲಿ ಪ್ರಾಥಮಿಕ ವರದಿಗಳು ಬರಬಹುದು ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: 133 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ

    ಏನಿದು ಘಟನೆ?: ಕಳೆದ ಮಾರ್ಚ್ 21ರಂದು 133 ಜನರಿದ್ದ ಚೈನಾ ಈಸ್ಟರ್ನ್ ಏರ್‌ಲೈನ್ಸ್ ಬೋಯಿಂಗ್-737 ವಿಮಾನವು ದಕ್ಷಿಣ ಪ್ರಾಂತ್ಯದ ಗುವಾಂಗ್ಸಿಯಲ್ಲಿ ಪತನಗೊಂಡಿತ್ತು. ವಿಮಾನ ಬಿದ್ದ ರಭಸಕ್ಕೆ ಪರ್ವತದ ಅರಣ್ಯ ಪ್ರದೇಶ ಹೊತ್ತಿ ಉರಿದಿತ್ತು. ವಿಮಾನ ಪರ್ವತಕ್ಕೆ ಅಪ್ಪಳಿಸಿದೆ. ಪರಿಣಾಮವಾಗಿ ಪರ್ವತದ ಪ್ರದೇಶವೆಲ್ಲಾ ಬೆಂಕಿಗಾಹುತಿಯಾಗಿತ್ತು.

    ಶಾಂಘೈ ಮೂಲದ ಚೈನಾ ಈಸ್ಟರ್ನ್, ಚೀನಾದ ಪ್ರಮುಖ ಮೂರು ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ. ವಿಮಾನ ಟ್ಯಾಕಿಂಗ್‌ ವೆಬ್‌ಸೈಟ್ `ಫ್ಲೈಟ್‌ ರೇಡರ್-24′ ಮಾಹಿತಿ ಪ್ರಕಾರ, ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ಪ್ರಯಾಣಿಸುತ್ತಿದ್ದ ಎಂಯು 5735 ವಿಮಾನ ಅಪಘಾತಕ್ಕೀಡಾಗಿತ್ತು. ಲ್ಯಾಂಡಿಂಗ್ ಆಗಲು ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ವೇಗ ಕಳೆದುಕೊಂಡು ಪತನಗೊಂಡಿತ್ತು.

  • ಬಣ್ಣಬಣ್ಣದ ಚಿತ್ತಾರ ಮೂಡಿಸುತ್ತಿದ್ದ ಸೂರ್ಯಕಿರಣ್ ಆಕಾಶದಲ್ಲಿ ಪತನ! – ವಿಮಾನದ ವಿಶೇಷತೆ ಏನು?

    ಬಣ್ಣಬಣ್ಣದ ಚಿತ್ತಾರ ಮೂಡಿಸುತ್ತಿದ್ದ ಸೂರ್ಯಕಿರಣ್ ಆಕಾಶದಲ್ಲಿ ಪತನ! – ವಿಮಾನದ ವಿಶೇಷತೆ ಏನು?

    ಬೆಂಗಳೂರು: ನಗರದ ಯಲಹಂಕದಲ್ಲಿ ಏರ್ ಶೋಗೆ ತಯಾರಿ ನಡೆಸುತ್ತಿದ್ದ ವೇಳೆ ಸೂರ್ಯ ಕಿರಣ್ ವಿಮಾನಗಳೆರಡು ಡಿಕ್ಕಿಯಾಗಿ ನೆಲಕ್ಕೆ ಅಪ್ಪಳಿಸಿವೆ.

    ಈ ಘಟನೆಯಲ್ಲಿ ಓರ್ವ ಪೈಲಟ್ ಮೃತಪಟ್ಟಿದ್ದಾರೆ. ಬುಧವಾರದಿಂದ 12ನೇ ಆವೃತ್ತಿಯ ಏರೋ ಇಂಡಿಯಾಗೆ ಚಾಲನೆ ಸಿಗಲಿದ್ದು, ಭಾನುವಾರದವರೆಗೆ ಈ ಶೋ ನಡೆಯಲಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 2 ಸೂರ್ಯಕಿರಣ್ ಯುದ್ಧವಿಮಾನಗಳು ಡಿಕ್ಕಿ

    ಸೂರ್ಯಕಿರಣ್ ವಿಶೇಷತೆ ಏನು?
    ವೈಮಾನಿಕ ಪ್ರದರ್ಶನದ ವೇಳೆ ಆಗಸದಲ್ಲಿ ತ್ರಿವರ್ಣ ಚಿತ್ತಾರ ಬಿಡಿಸಿ ಬಾನಂಗಳದಲ್ಲಿ ದೇಶ ಭಕ್ತಿಯ ಕಿಚ್ಚು ಮೊಳಗಿಸುವ ವಿಮಾನವೇ ಸೂರ್ಯಕಿರಣ್. ವೈಮಾನಿಕ ಪ್ರದರ್ಶನದ ವೇಳೆ ಸೂರ್ಯಕಿರಣ ಇದ್ರೆ ಇನ್ನಷ್ಟು ಕೌತುಕ ಹೆಚ್ಚಾಗುತ್ತೆ. ಅತ್ಯಂತ ಹೆಚ್ಚು ಆಕರ್ಷಕವಾದ ಸೂರ್ಯ ಕಿರಣ ಪ್ರತಿ ಏರ್ ಶೋನಲ್ಲೂ ಸುಮಾರು ಒಂಬತ್ತು ವಿಮಾನಗಳು ವಜ್ರಾಕಾರದಲ್ಲಿ ಹಾರಾಡುತ್ತಾ, ಬಣ್ಣ ಬಣ್ಣದ ಹೊಗೆಯನ್ನು ಹೊರಸೂಸುವ ಮೂಲಕ ಆಕಾಶದಲ್ಲಿ ರಂಗೋಲಿ ಬಿಡಿಸುತ್ತವೆ.

    ಸುಮಾರು 30 ನಿಮಿಷ ಆಗಸದಲ್ಲಿ ಸೂರ್ಯ ಕಿರಣನ ಅಬ್ಬರ ಇರುತ್ತದೆ. ಸಾಮಾನ್ಯವಾಗಿ ಏರ್ ಶೋಗೂ ಮುನ್ನಾ ತಾಲೀಮು ನಡೆಸುವಾಗಲೂ ಜನ ಸೂರ್ಯ ಕಿರಣನನ್ನು ಕಣ್ತುಂಬಿಸಿಕೊಳ್ಳಲು ಆಕಾಶ ನೋಡಲು ಮುಗಿಬೀಳ್ತಾರೆ.

    1996ರಿಂದ ಭಾರತೀಯ ವಾಯುಸೇನೆಯಲ್ಲಿ ಸಕ್ರೀಯವಾಗಿರುವ ಈ ಸೂರ್ಯಕಿರಣ್ ವಿಮಾನ ಪೈಲಟ್‍ಗಳಿಗೆ ತರಬೇತಿ ನೀಡಲು ಬಳಕೆ ಮಾಡಲಾಗುತ್ತದೆ. 5 ಟನ್ ತೂಕವಿರುವ ಸೂರ್ಯಕಿರಣ್ ಜೆಟ್ ವಾಯುಸೇನೆಯ 52 ನೇ ಸ್ಕ್ವಾಡರ್ನ್ ಆಗಿ ಸೇರ್ಪಡೆಯಾಗಿತ್ತು. ಗಂಟೆಗೆ 780 ಕಿಮಿ ವೇಗದ ಹಾರಾಟದಲ್ಲಿ ಸಾಮರ್ಥ್ಯ ಹೊಂದಿರುವ ಸೂರ್ಯಕಿರಣ್ 2006ರ ಮಾರ್ಚ್ 18 ರಂದು ಬೀದರ್ ವಾಯುನೆಲೆಯಲ್ಲಿ ಪತನ ಹೊಂದಿತ್ತು. ಈ ಘಟನೆಯಲ್ಲಿ ಇಬ್ಬರು ಪೈಲಟ್‍ಗಳು ಗಂಭೀರವಾಗಿ ಗಾಯಗೊಂಡಿದ್ದರು.

    https://www.youtube.com/watch?v=S8anwX84c_8

    https://www.youtube.com/watch?v=OOoChcGXCvI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv