Tag: flight attendant

  • ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ

    ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ

    ಪಣಜಿ: ಏರ್ ಇಂಡಿಯಾ (Air India) ವಿಮಾನದಲ್ಲಿ (Flight) ಪ್ರಯಾಣಿಕನೊಬ್ಬ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದ ಬಳಿಕ ಇದೀಗ ಗೋ ಫಸ್ಟ್ (Go First) ವಿಮಾನದಲ್ಲಿ ಕಿರುಕುಳದ (Harassment) ಇನ್ನೊಂದು ಪ್ರಕರಣ ವರದಿಯಾಗಿದೆ.

    ಜನವರಿ 5 ರಂದು ನವದೆಹಲಿಯಿಂದ ಗೋವಾಗೆ ಹೋಗುತ್ತಿದ್ದ ಗೋ ಫಸ್ಟ್ ವಿಮಾನದಲ್ಲಿ ಮಹಿಳಾ ಗಗನಸಖಿಗೆ (Flight Attendant) ವಿದೇಶಿ ಪ್ರಯಾಣಿಕನೊಬ್ಬ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ. ಪ್ರಯಾಣಿಕ ಆಕೆಗೆ ತನ್ನೊಂದಿಗೆ ಕುಳಿತುಕೊಳ್ಳುವಂತೆ ಹೇಳಿ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

    ವರದಿಗಳ ಪ್ರಕಾರ ವ್ಯಕ್ತಿ ಪದೇ ಪದೇ ತನ್ನೊಂದಿಗೆ ಕುಳಿತುಕೊಳ್ಳುವಂತೆ ಪೀಡಿಸಿದ್ದಾನೆ. ಆತ ಈ ವೇಳೆ ಮದ್ಯಪಾನ ಮಾಡಿದ್ದನೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ವಿಮಾನ ಗೋವಾದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಆತನನ್ನು ವಿಮಾನ ಭದ್ರತಾ ಸಂಸ್ಥೆ ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದಿರುವ ಬೆನ್ನಲ್ಲೇ ಈ ಘಟನೆಯೂ ನಡೆದಿದೆ. ಆದರೆ ಇದು ಬೆಳಕಿಗೆ ಬಂದಿರುವುದು ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಬಳಿಕ.

    ನವೆಂಬರ್ 26ರಂದು ಏರ್ ಇಂಡಿಯಾ ವಿಮಾನದಲ್ಲಿ ಆರೋಪಿ ಶಂಕರ್ ಮಿಶ್ರಾ ತನ್ನ ಪ್ಯಾಂಟ್ ಬಿಚ್ಚಿ ವಯಸ್ಸಾದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಏರ್ ಇಂಡಿಯಾ ಆತನನ್ನು ಹೋಗಲು ಬಿಟ್ಟಿತ್ತು. ಆದರೆ ಘಟನೆ ಬಗ್ಗೆ ಮಹಿಳೆ ಜನವರಿ 5 ರಂದು ವಿಮಾನಯಾನ ಸಂಸ್ಥೆ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮಗ್ಗಿ ಹೇಳಿ ವಿಶ್ವ ದಾಖಲೆ ಬರೆದ ಚೈತನ್ಯ ಶಾಲೆ

    ಘಟನೆ ಬೆಳಕಿಗೆ ಬರುತ್ತಲೇ ಶಂಕರ್ ಮಿಶ್ರಾ ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದ. ಶುಕ್ರವಾರ ದೆಹಲಿ ಪೊಲೀಸರ ತಂಡ ಆತನನ್ನು ಬೆಂಗಳೂರಿನಲ್ಲಿ ಬಂಧಿಸಿದೆ. ಶನಿವಾರ ಬೆಳಗ್ಗೆ ಆತನನ್ನು ದೆಹಲಿಗೆ ಒಯ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏರ್‌ಲೈನ್ ಸಿಬ್ಬಂದಿ ಸಹಾಯದಿಂದ ವಿಮಾನದಲ್ಲೇ ಆಯ್ತು ಹೆರಿಗೆ

    ಏರ್‌ಲೈನ್ ಸಿಬ್ಬಂದಿ ಸಹಾಯದಿಂದ ವಿಮಾನದಲ್ಲೇ ಆಯ್ತು ಹೆರಿಗೆ

    ವಾಷಿಂಗ್ಟನ್: ವಿಮಾನಗಳಲ್ಲಿ ಗರ್ಭಿಣಿಯರು ಮಕ್ಕಳಿಗೆ ಜನ್ಮನೀಡುವಂತಹ ಹಲವು ಘಟನೆಗಳನ್ನು ಈ ಹಿಂದೆ ಕೇಳಿದ್ದೇವೆ. ಇಲ್ಲೊಬ್ಬರಿಗೆ ಏರ್‌ಲೈನ್ ಸಿಬ್ಬಂದಿಯ ಸಹಾಯದಿಂದ ವಿಮಾನ ಹಾರಾಟದ ಸಂದರ್ಭದಲ್ಲೇ ಹೆರಿಗೆ ನಡೆಸಲಾಗಿದೆ.

    ಅಮೆರಿಕದ ಫ್ರಾಂಟಿಯರ್ ಏರ್‌ಲೈನ್ಸ್ ಫ್ಲೈಟ್ ಅಟೆಂಡೆಂಟ್ ಡಯಾನಾ ಗಿರಾಲ್ಡೋ ಕೊಲೊರಾಡೋದಿಂದ ಫ್ಲೋರಿಡಾಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಗರ್ಭಿಣಿಯ ಹೆರಿಗೆ ನಡೆಸಲು ಸಹಾಯ ಮಾಡಿ ಭಾರೀ ಪ್ರಶಂಸೆಗೆ ಒಳಗಾಗಿದ್ದಾರೆ. ಇದನ್ನೂ ಓದಿ: ನವಜೋತ್‌ ಸಿಂಗ್‌ ಸಿಧುಗೆ 1 ವರ್ಷ ಜೈಲು ಶಿಕ್ಷೆ

    ಸಾಮಾಜಿಕ ಮಾಧ್ಯಮದಲ್ಲಿ ಘಟನೆ ಬಗ್ಗೆ ತಿಳಿಸಿದ ಫ್ರಾಂಟಿಯರ್ ಏರ್‌ಲೈನ್ಸ್, ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒರ್ಲ್ಯಾಂಡೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೆಡೆಗೆ ಪ್ರಯಾಣಿಸುತ್ತಿರುವಾಗ, ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಕೆಯನ್ನು ಪ್ರಯಾಣದ ಮಧ್ಯದಲ್ಲಿ ಯಾವುದೇ ಚಿಕಿತ್ಸಾಲಯಕ್ಕೆ ಒಯ್ಯಲಾಗದೇ, ವಿಮಾನದಲ್ಲಿಯೇ ಹೆರಿಗೆ ನಡೆಸಲಾಯಿತು ಎಂದು ತಿಳಿಸಿದೆ. ಇದನ್ನೂ ಓದಿ: ಶಿವಲಿಂಗದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ AIMIM ನಾಯಕ ಅರೆಸ್ಟ್

    ಗರ್ಭಿಣಿಗೆ ಅನಿರೀಕ್ಷಿತ ಹೆರಿಗೆ ನೋವು ಕಾಣಿಸಿಕೊಂಡಾಗ ನಮ್ಮ ಸಿಬ್ಬಂದಿ ಡಯಾನಾ ಆಕೆಯನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ, ಹೆರಿಗೆ ನಡೆಸಲು ಸಹಾಯ ಮಾಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಫ್ರಾಂಟಿಯರ್ ಏರ್‌ಲೈನ್ಸ್ ತಿಳಿಸಿದೆ.

    ಘಟನೆ ಬಗ್ಗೆ ನೆಟ್ಟಿಗರು ಹೆರಿಗೆಗೆ ಸಹಾಯ ಮಾಡಿದ ಡಯಾನಾ ಅವರನ್ನು ಶ್ಲಾಘಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಒಬ್ಬ ಫ್ಲೈಟ್ ಅಟೆಂಡೆಂಟ್ ತೆಗೆದುಕೊಂಡ ನಿರ್ಧಾರ, ಜ್ಞಾನ ಹಾಗೂ ಅವರ ಸಹಾಯಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.