Tag: flex

  • ದಾವಣಗೆರೆ | `ಐ ಲವ್ ಮಹಮ್ಮದ್’ ಬ್ಯಾನರ್ ಗಲಾಟೆಯಾಗಿದ್ದ ಜಾಗದಲ್ಲೇ ರಾಮನ ಫ್ಲೆಕ್ಸ್ ಹರಿದು ವಿಕೃತಿ

    ದಾವಣಗೆರೆ | `ಐ ಲವ್ ಮಹಮ್ಮದ್’ ಬ್ಯಾನರ್ ಗಲಾಟೆಯಾಗಿದ್ದ ಜಾಗದಲ್ಲೇ ರಾಮನ ಫ್ಲೆಕ್ಸ್ ಹರಿದು ವಿಕೃತಿ

    ದಾವಣಗೆರೆ: ನಗರದ (Davangere) ಬೇತೂರು ರಸ್ತೆಯ ವೆಂಕಟೇಶ್ವರ ಸರ್ಕಲ್‍ನಲ್ಲಿ ಅಳವಡಿಸಿದ್ದ ರಾಮ, ಆಂಜನೇಯ ಹಾಗೂ ದುರ್ಗಾ ದೇವಿಯ ಫ್ಲೆಕ್ಸ್‌ಗಳನ್ನು (Flex) ಕಿಡಿಗೇಡಿಗಳು ಹರಿದು ಹಾಕಿದ್ದಾರೆ.

    ಸಾರ್ವಜನಿಕ ದಸರಾ ಮಹೋತ್ಸವದ ಶೋಭಾಯಾತ್ರೆ ಹಿನ್ನಲೆ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಈ ಫ್ಲೆಕ್ಸ್‌ಳಿಗೆ ಬ್ಲೇಡ್‍ನಿಂದ ಕತ್ತರಿಸಿ ಕಿಡಿಗೇಡಿಗಳು ವಿಕೃತಿ ಮರೆದಿದ್ದಾರೆ. ಈ ಹಿಂದೆ ಇದೇ ಜಾಗದಲ್ಲಿ `ಐ ಲವ್ ಮಹಮ್ಮದ್’ ಬ್ಯಾನರ್ (I Love Mohammed Flex) ವಿಚಾರಕ್ಕೆ ಗಲಾಟೆಯಾಗಿತ್ತು. ಇದನ್ನೂ ಓದಿ: ದಾವಣಗೆರೆಯಲ್ಲಿ ವಿಜಯದಶಮಿ ಶೋಭಾಯಾತ್ರೆ – 50,000 ಮಂದಿ ಭಾಗಿ, ಕಣ್ಮನ ಸೆಳೆಯುತ್ತಿರುವ ಟ್ಯಾಬ್ಲೋಗಳು

    ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ಸಂಬಂಧ ಅಜಾದ್ ನಗರ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಕಿಡಿಗೇಡಿಗಳನ್ನು ಬಂಧಿಸಲು ಆ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದಾವಣಗೆರೆ | ದೇವಸ್ಥಾನದ ಮುಂದೆ ತಲ್ವಾರ್‌ ಹಿಡಿದು ಓಡಾಡಿದ ಅನ್ಯಕೋಮಿನ ಯುವಕ – ವೀಡಿಯೋ ವೈರಲ್

  • ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಡಿಕೆಶಿ ಗರಂ – ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧವೇ 12 ಎಫ್‌ಐಆರ್‌, 12 ಲಕ್ಷ ದಂಡ

    ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಡಿಕೆಶಿ ಗರಂ – ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧವೇ 12 ಎಫ್‌ಐಆರ್‌, 12 ಲಕ್ಷ ದಂಡ

    – ಪದಗ್ರಹಣ ಸ್ವೀಕರಿಸಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷಗೆ 1 ಲಕ್ಷ ರೂ. ದಂಡ

    ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಿರುವವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ (D.K.Shivakumar) ನಿರ್ದೇಶನದ ಮೇರೆಗೆ ಬಿಬಿಎಂಪಿ ಆಯುಕ್ತರು ಕ್ರಮಕೈಗೊಂಡಿದ್ದಾರೆ.

    ಬಳ್ಳಾರಿ ರಸ್ತೆಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಪಶ್ಚಿಮ, ಪೂರ್ವ ಹಾಗೂ ಯಲಹಂಕ ವಲಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪರಿಶೀಲಿಸಿ ತೆರವು ಕಾರ್ಯಾಚರಣೆ ನಡೆಸಿದರು. ಇದನ್ನೂ ಓದಿ: ಡಿಕೆಶಿ ಎಚ್ಚರಿಕೆಗೆ ಕ್ಯಾರೇ ಅನ್ನದ ಯುವ ಕಾರ್ಯಕರ್ತರು – ಈಗಲೂ ರಾರಾಜಿಸುತ್ತಿವೆ ಬ್ಯಾನರ್‌ಗಳು

    ಫ್ಲೆಕ್ಸ್ ತೆರವುಗೊಳಿಸಲು ಖರ್ಚಾಗುವ ಹಣವನ್ನು ಫ್ಲೆಕ್ಸ್‌ಗಳನ್ನು ಅಳವಡಿಸಿರುವವರಿಂದಲೇ ವಸೂಲಿಗೆ ಕ್ರಮವಹಿಸಲಾಗಿದೆ. ಫ್ಲೆಕ್ಸ್‌ ಅಳವಡಿಸಿದವರ ವಿರುದ್ಧ ಇದುವರೆಗೂ 12 ಎಫ್‌ಐಆರ್ ದಾಖಲಿಸಲಾಗಿದ್ದು, 12 ಲಕ್ಷ ರೂ. ದಂಡ ವಿಧಿಸಲಾಗಿದೆ.

    ನಗರದ ಪೂರ್ವ, ಪಶ್ಚಿಮ ಹಾಗೂ ಯಲಹಂಕ ಸೇರಿದಂತೆ ಮೂರೂ ವಲಯಗಳ ಅನಧಿಕೃತ ಫ್ಲೆಕ್ಸ್ ತೆರವು ಮಾಡಲಾಗಿದೆ. ನಿನ್ನೆಯಿಂದ 1,350 ಕ್ಕೂ ಹೆಚ್ಚು ಫ್ಲೆಕ್ಸ್, ಬ್ಯಾನರ್‌ಗಳು ಹಾಗೂ 600 ಕ್ಕೂ ಹೆಚ್ಚು ಪಕ್ಷದ ಧ್ವಜಗಳನ್ನು ತೆಗೆಯಲಾಗಿದೆ. ಇದನ್ನೂ ಓದಿ: ರನ್ಯಾ ರಾವ್ ಕೇಸ್ | ತಾಕತ್ತಿದ್ದರೆ ಸಚಿವರ ಹೆಸರು ಬಹಿರಂಗಪಡಿಸಲಿ – ಯತ್ನಾಳ್‌ಗೆ ಕಾಂಗ್ರೆಸ್ ಸಚಿವರ ಸವಾಲು

    ಅರಮನೆ ಮೈದಾನದಲ್ಲಿ ನಡೆದ ಯುವಸಂಕಲ್ಪ ಕಾರ್ಯಕ್ರಮದಲ್ಲಿ ಪದಗ್ರಹಣ ಸ್ವೀಕರಿಸಿದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಅವರಿಗೂ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಕಾರ್ಯಕ್ರಮಕ್ಕೆ ಶುಭಾಶಯ ಕೋರಿದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಾಲಾ ಪ್ರದೀಪ್‌, ಮಾಜಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದರ್ಶನ್ ಸುಧಾಕರ್, ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಕುಮಾರ್‌, ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಚೈತ್ರಾ ಗಿರೀಶ್‌, ಬೆಂಗಳೂರು ಕೇಂದ್ರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದರ್ಶನ್ ದಿವಾಕರ್, INTUC ರಾಜ್ಯ ಸಂಘಟನೆ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರಗೆ ತಲಾ 1 ಲಕ್ಷ ರೂ. ಹಾಗೂ ತೆರವುಗೊಳಿಸುವ ಚಾರ್ಜ್ 5,000 ರೂ. ದಂಡ ಹಾಕಲಾಗಿದೆ.

  • ಬೆಂಗ್ಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ ತೆರವಿಗೆ ಸೂಚನೆ – ಆದೇಶ ಉಲ್ಲಂಘಿಸಿದ್ರೆ ಯಾವುದೇ ಪಕ್ಷದವರಾದ್ರೂ ಕ್ರಮ: ಡಿಕೆಶಿ

    ಬೆಂಗ್ಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ ತೆರವಿಗೆ ಸೂಚನೆ – ಆದೇಶ ಉಲ್ಲಂಘಿಸಿದ್ರೆ ಯಾವುದೇ ಪಕ್ಷದವರಾದ್ರೂ ಕ್ರಮ: ಡಿಕೆಶಿ

    ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅರಮನೆ ಮೈದಾನ ಸುತ್ತಮುತ್ತ ಸೇರಿದಂತೆ ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಬಿಬಿಎಂಪಿ ಕಮಿಷನರ್ ಅವರಿಗೆ ಸೂಚನೆ ನೀಡಿದ್ದಾರೆ.

    ಮಾರ್ಚ್ 17 ರಂದು ಸೋಮವಾರ ಅರಮನೆ ಮೈದಾನದಲ್ಲಿ (ಸೋಮವಾರ) ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಾಕಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನ ಕೂಡಲೇ ತೆರವುಗೊಳಿಸಬೇಕು ಎಂದು ಡಿಸಿಎಂ ಅವರು ಸೂಚಿಸಿದ್ದಾರೆ.

    ಒಂದೊಮ್ಮೆ ತೆರವು ಮಾಡದಿದ್ದರೆ ಸಂಬಂಧಪಟ್ಟವರ ವಿರುದ್ಧ ದಂಡ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಅವರು ಸೂಚನೆ ನೀಡಿದ್ದಾರೆ.

    ಬೆಂಗಳೂರು ನಗರದ ಸೌಂದರ್ಯವನ್ನು ಹಾಳು ಮಾಡಬಾರದು ಎಂದು ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳನ್ನು ನಿಷೇಧಿಸಲಾಗಿದೆ. ಸರ್ಕಾರದ ಈ ಆದೇಶವನ್ನು ಪದೇ ಪದೆ ನಿರ್ಲಕ್ಷಿಸಲಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಆದೇಶ ಉಲ್ಲಂಘಿಸಿರುವವರು ನಮ್ಮ ಪಕ್ಷದವರಾದರೂ ಸರಿ, ಬೇರೆ ಪಕ್ಷದವರಾದರೂ ಸರಿ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿರುವುದಾಗಿ ಡಿಸಿಎಂ ತಿಳಿಸಿದ್ದಾರೆ.

  • ಮಂಡ್ಯದಲ್ಲಿ ಜೆಡಿಎಸ್ ಫ್ಲೆಕ್ಸ್‌ಗಳಿಂದ ಹೆಚ್.ಡಿ ರೇವಣ್ಣ ಕಿಕ್ ಔಟ್!

    ಮಂಡ್ಯದಲ್ಲಿ ಜೆಡಿಎಸ್ ಫ್ಲೆಕ್ಸ್‌ಗಳಿಂದ ಹೆಚ್.ಡಿ ರೇವಣ್ಣ ಕಿಕ್ ಔಟ್!

    ಮಂಡ್ಯ: ಜೆಡಿಎಸ್ ಫ್ಲೆಕ್ಸ್ ಗಳಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ (HD  DeveGowda)) ಹಿರಿಯ ಮಗ ಹೆಚ್.ಡಿ ರೇವಣ್ಣ ಅವರನ್ನು ಕಿಕ್ ಔಟ್ ಮಾಡಲಾಗಿದೆ.

    ಹೌದು. ಕುಮಾರಸ್ವಾಮಿ (hD Kumaraswamy) ಕೇಂದ್ರ ಸಚಿವರಾದ ಬಳಿಕ ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಜೆಡಿಎಸ್‍ನಿಂದ ಬೃಹತ್ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. ಆದರೆ ಈ ಫ್ಲೆಕ್ಸ್ ಗಳಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಫೋಟೋವೇ ಇಲ್ಲ. ಈ ಮೂಲಕ ಮುಜುಗರದಿಂದ ಪಾರಾಗಲು ದಳಪತಿಗಳು ಕ್ರಮ ಕೈಗೊಂಡ್ರಾ ಎಂಬ ಪ್ರಶ್ನೆ ಎದ್ದಿದೆ.

    ಫ್ಲೆಕ್ಸ್ ಗಳಲ್ಲಿ ಜೆಡಿಎಸ್ ಮುಖಂಡರ ಜೊತೆಗೆ ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರ ಫೋಟೋಗಳನ್ನು ಬಳಸಲಾಗಿದೆ. ಜೊತೆಗೆ ಮಾಜಿ ಸಂಸದೆ ಸುಮಲತಾ, ಮಾಜಿ ಸಚಿವ ಹೆಚ್.ವಿಶ್ವನಾಥ್ ಫೋಟೋಗೂ ಪ್ಲೆಕ್ಸ್ ನಲ್ಲಿ ಸ್ಥಾನ ಕಲ್ಪಿಸಲಾಗಿದೆ. ಆದರೆ ರೇವಣ್ಣ (HD Revanna) ಫೋಟೋವನ್ನು ಮಾತ್ರ ಮಂಡ್ಯ ಜೆಡಿಎಸ್ ನಾಯಕರು ಕೈಬಿಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

    ಪಕ್ಷದಿಂದ ಉಚ್ಛಾಟನೆ ಮಾಡದಿದ್ರೂ ನಾಯಕರು ಅಂತರ ಕಾಯ್ದುಕೊಂಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ರೇವಣ್ಣ & ಫ್ಯಾಮಿಲಿ ಸಾಲು ಸಾಲು ಆರೋಪಗಳನ್ನು ಎದುರಿಸುತ್ತಿದೆ. ಕಿಡ್ನಾಪ್ ಕೇಸ್ ನಲ್ಲಿ ರೇವಣ್ಣ ಜೈಲಿಗೆ ಹೋಗಿ ಬಂದರೆ, ಪತ್ನಿ ಭವಾನಿ ರೇವಣ್ಣ ಜಾಮೀನು ಪಡೆದಿದ್ದಾರೆ. ಇನ್ನೊಂದೆಡೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜೈಲು ಸೇರಿದ್ದಾರೆ, ಮತ್ತೊಂದೆಡೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡಾ. ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿದ್ದಾರೆ. ಇದರಿಂದ ದೇವೇಗೌಡರ ಕುಟುಂಬದ ಜೊತೆಗೆ ಪಕ್ಷಕ್ಕೂ ಡ್ಯಾಮೇಜ್ ಆಗಿದೆ.

    ಈ ಡ್ಯಾಮೆಜ್ ಕಂಟ್ರೋಲ್ ಗೆ ರೇವಣ್ಣರಿಂದ ದಳಪತಿಗಳು ಅಂತರ ಕಾಯ್ದುಕೊಂಡಿದ್ದಾರೆ. ಈ ಹಿಂದೆ ಪಕ್ಷದ ಪ್ರತೀ ಫ್ಲೆಕ್ಸ್ ಗಳಲ್ಲೂ ರೇವಣ್ಣ ಫೋಟೋ ಕಡ್ಡಾಯವಾಗಿ ಇರುತ್ತಿತ್ತು. ರೇವಣ್ಣ ಜೊತೆಗೆ ಪ್ರಜ್ವಲ್, ಸೂರಜ್ ಫೋಟೋ ಕೂಡ ಬಳಸಲಾಗುತ್ತಿತ್ತು. ಒಟ್ಟಿನಲ್ಲಿ ಮಂಡ್ಯದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದ ರೇವಣ್ಣ ಕುಟುಂಬವನ್ನು ಇದೀಗ ದಳಪತಿಗಳು ದೂರ ಇಟ್ಟಿರುವುದು ಫ್ಲೆಕ್ಸ್ ವಿಚಾರದಲ್ಲಿ ಎದ್ದು ಕಾಣುತ್ತಿದೆ.

  • ಪ್ರತಾಪ್ ಸಿಂಹ ಭಯೋತ್ಪಾದಕ – ಮೈಸೂರು ಮಹಾರಾಜ ವೃತ್ತ ಬಳಿ ಫ್ಲೆಕ್ಸ್

    ಪ್ರತಾಪ್ ಸಿಂಹ ಭಯೋತ್ಪಾದಕ – ಮೈಸೂರು ಮಹಾರಾಜ ವೃತ್ತ ಬಳಿ ಫ್ಲೆಕ್ಸ್

    ಮೈಸೂರು: ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ (Smoke Bomb) ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಳಿಕೊರರಿಗೆ ಪಾಸ್ ನೀಡಿದ್ದಕ್ಕೆ ಸಂಸದ ಪ್ರತಾಪ್ ಸಿಂಹ (Pratap Simha) ವಿರುದ್ಧ ಮೈಸೂರಿನಲ್ಲಿ (Mysuru) ವಿವಾದಿತ ಫ್ಲೆಕ್ಸ್ (Flex) ಅಳವಡಿಸಲಾಗಿದೆ.

    ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮೈಸೂರಿನ ಮಹಾರಾಜ ವೃತ್ತದ ಬಳಿ ಫ್ಲೆಕ್ಸ್ ಅಳವಡಿಸಿದ್ದು, ಪ್ರತಾಪ್ ಸಿಂಹ ದೇಶದ್ರೋಹಿ ಎಂದು ಬರೆಯಲಾಗಿದೆ. ಫ್ಲೆಕ್ಸ್‌ನಲ್ಲಿ ಬಾಂಬ್ ಹಾಗೂ ಪಾಸ್ ಹಿಡಿದು ನಿಂತಿರುವ ರೀತಿಯ ತಿರುಚಿದ ಫೋಟೋವನ್ನು ಅಳವಡಿಸಲಾಗಿದೆ.

    ಸಂಸದ ಸ್ಥಾನದಿಂದ ಪ್ರತಾಪ್ ಸಿಂಹ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ ನಡೆಸಲಾಗುತ್ತಿದೆ. ಸಂಸತ್ ಭವನಕ್ಕೆ ದುಷ್ಕರ್ಮಿಗಳಿಗೆ ನುಗ್ಗಲು ಪಾಸ್ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಪ್ರತಿಭಟಸಿದೆ. ಇದನ್ನೂ ಓದಿ: ಸಂಸತ್‌ ಸ್ಮೋಕ್‌ ಬಾಂಬ್‌ ಕೇಸ್‌ – ಟಿಎಂಸಿ ಶಾಸಕನ ಜೊತೆ ಆರೋಪಿ – ಫೋಟೋ ಹರಿಬಿಟ್ಟ ಬಿಜೆಪಿ

    ವಿಷಯ ತಿಳಿಯುತ್ತಿದ್ದಂತೆ ಪಾಲಿಕೆ ಸಿಬ್ಬಂದಿ ಪ್ರತಾಪ್ ಸಿಂಹ ವಿವಾದಿತ ಫ್ಲೆಕ್ಸ್ ಅನ್ನು ತೆರವುಗೊಳಿಸಲು ಮುಂದಾಗಿದೆ. ಈ ವೇಳೆ ಹಿಂದುಳಿದ ಜಾಗೃತ ವೇದಿಕೆ ಸದಸ್ಯರು ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕಾಲ್!

  • ಬ್ಯಾನರ್ ಅಳವಡಿಕೆ; ಸಚಿವ ಪ್ರಿಯಾಂಕ್ ಖರ್ಗೆಗೆ 5,000 ರೂ. ದಂಡ

    ಬ್ಯಾನರ್ ಅಳವಡಿಕೆ; ಸಚಿವ ಪ್ರಿಯಾಂಕ್ ಖರ್ಗೆಗೆ 5,000 ರೂ. ದಂಡ

    ಕಲಬುರಗಿ: ಕಲಬುರಗಿ (Kalaburagi) ಮಹಾನಗರ ಪಾಲಿಕೆಯ ಅನುಮತಿ ಪಡೆಯದೇ ಬ್ಯಾನರ್ (Banner) ಹಾಕಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೆ ಪಾಲಿಕೆಯಿಂದ 5,000 ರೂ. ದಂಡ ವಿಧಿಸಲಾಗಿದೆ.

    ಕಲಬುರಗಿ ನಗರದ ಹೊರವಲಯದ ಬಂಗರಗಾ ಕಲ್ಯಾಣ ಮಂಟಪದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಆಗಮಿಸುತ್ತಿದ್ದ ಸಂದರ್ಭದಲ್ಲಿ ಖರ್ಗೆ ಬೆಂಬಲಿಗರು ಸ್ವಾಗತ ಕೋರುವ ಹಿನ್ನೆಲೆಯಲ್ಲಿ ಬ್ಯಾನರ್ ಹಾಕಿದ್ದರು. ಇದನ್ನೂ ಓದಿ: ಬಿಜೆಪಿ ಅವರದ್ದು ಬಿಚ್ಚೋ ಕಾಲ ಬರುತ್ತೆ, ಬಿಚ್ತೀನಿ: ಡಿಕೆಶಿ ತಿರುಗೇಟು

    ಸಚಿವರು ಸದರಿ ವಿಷಯವನ್ನು ಮನಗಂಡು, ಪಾಲಿಕೆಯ ಕ್ರಮವನ್ನು ಬೆಂಬಲಿಸಿ, ದಂಡದ ಮೊತ್ತವನ್ನು ಪಾವತಿಸಲು ಸಮ್ಮತಿ ಸೂಚಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ ಸಂಪೂರ್ಣ ಬ್ಯಾನ್;‌ ಯಾರ ಹೆಸರಿರುತ್ತೋ ಅವರಿಗೂ 50,000 ರೂ. ದಂಡ: ಡಿಕೆಶಿ ಎಚ್ಚರಿಕೆ

    ಬೆಂಗ್ಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ ಸಂಪೂರ್ಣ ಬ್ಯಾನ್;‌ ಯಾರ ಹೆಸರಿರುತ್ತೋ ಅವರಿಗೂ 50,000 ರೂ. ದಂಡ: ಡಿಕೆಶಿ ಎಚ್ಚರಿಕೆ

    ಬೆಂಗಳೂರು: ಆಗಸ್ಟ್‌ 15ರ ನಂತರ ಬೆಂಗಳೂರಿನಲ್ಲಿ (Bengaluru) ಸಂಪೂರ್ಣವಾಗಿ ಫ್ಲೆಕ್ಸ್, ಬ್ಯಾನರ್ ನಿಷೇಧಿಸಲಾಗಿದೆ. ಯಾರಾದರು ಫ್ಲೆಕ್ಸ್‌, ಬ್ಯಾನರ್‌ ಹಾಕಿದರೆ 50,000 ರೂ. ದಂಡ ಹಾಕಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (D.K. Shivakumar) ಎಚ್ಚರಿಸಿದರು.

    ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊರಗಡೆ ನೋಡಿದಾಗ ನನಗೆ ಅಸಹ್ಯ ಎನ್ನಿಸಿದೆ. ಬ್ಯಾನರ್, ಫ್ಲೆಕ್ಸ್ ಯಾರದೇ ಆಗಲಿ ಸಂಪೂರ್ಣ ಬ್ಯಾನ್. ಯಾರು ಕೂಡ ಹಾಕಬಾರದು. ಯಾರದಾದರು ಹೆಸರಲ್ಲಿ ಹಾಕಿದರೆ ಅವರಿಗೂ 50 ಸಾವಿರ ದಂಡ ಹಾಕುತ್ತೇವೆ. ಇನ್ಮೇಲೆ ಫ್ಲೆಕ್ಸ್ ಹಾಕಿದರೆ ಎಫ್‌ಐಆರ್ ಕೂಡ ದಾಖಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರವನ್ನ ಟೀಕಿಸಿದ್ದ ಹೆಚ್‍ಡಿಕೆ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ

    ನಾನು ಉಸ್ತುವಾರಿ ಆದಾಗಲೆ ಘೋಷಣೆ ಮಾಡಬೇಕು ಎಂದುಕೊಂಡಿದ್ದೆ. ಕೆಲವು ಕಾರಣಕ್ಕೆ ತಡವಾಗಿ ಘೋಷಣೆ ಮಾಡಿದ್ದೇನೆ. ಒಂದು ಪಾಲಿಸಿ ಮಾಡುತ್ತೇವೆ. ಸರ್ಕಾರದ್ದು ಯಾವುದಾದರು ಹಾಕವಂತಹ ಪ್ರಸಂಗ ಬಂದರೆ ಅದು ಹೇಗೆ ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

    ಬೆಂಗಳೂರು ಸಿಟಿಯೊಳಗೆ ಫ್ಲೆಕ್ಸ್, ಬ್ಯಾನರ್ ಯಾರೂ ಹಾಕಬಾರದು. ನಾನು ಸೇರಿ ಯಾರು ಕೂಡ ಹಾಕಬಾರದು. ಇನ್ಮೇಲೆ ಅಕ್ರಮವಾಗಿರುವ ಫ್ಲೆಕ್ಸ್ ಹಾಕುವಂತಿಲ್ಲ. ಯಾರಾದ್ರೂ ಫ್ಲೆಕ್ಸ್ ಹಾಕಿದ್ರೆ 50 ಸಾವಿರ ದಂಡ. ಈಗಿರುವ ಫ್ಲೆಕ್ಸ್ ತೆರವು ಮಾಡಬೇಕು. ಫ್ಲೆಕ್ಸ್ ಬಗ್ಗೆ ಹೈಕೋರ್ಟ್ ಆದೇಶವೂ ಇದೆ. ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ಸಂಪೂರ್ಣ ತೆರವು ಮಾಡಲಾಗುವುದು. ಹೋಲ್ಡಿಂಗ್ಸ್ ಕೂಡ ತೆರವು ಮಾಡಬೇಕು. ಬೆಳಗ್ಗೆ ಸಚಿವರು, ಶಾಸಕರಿಗೂ ಹೇಳಿದ್ದೇನೆ. ಬರ್ತ್ ಡೇ, ಡೆತ್ ಡೇ, ಶುಭಹಾರೈಕೆ ಫ್ಲೆಕ್ಸ್ ಹಾಕುವಂತಿಲ್ಲ. ಫ್ಲೆಕ್ಸ್ ಹಾಕಿದ್ರೆ ಎಫ್‌ಐಆರ್ ದಾಖಲಿಸಲಾಗುವುದು. ಮಲ್ಟಿನ್ಯಾಷನಲ್ ಹೋಲ್ಡಿಂಗ್ಸ್‌ಗೂ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಾನು ಯಾರಿಗೂ ಪ್ರಮಾಣ ಮಾಡ್ಬೇಕಾದ ಅವಶ್ಯಕತೆ ಇಲ್ಲ, ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ, ಇಲ್ಲ ಅಂದ್ರೆ ಹಣ ಇಲ್ಲ: ಡಿಕೆಶಿ

    ಬೆಂಗಳೂರು ಟ್ರಾಫಿಕ್ ಕಿರಿಕಿರಿ ಈಸ್ ಔಟ್ ಪ್ರಯತ್ನ ನಡೆದಿದೆ. ಶಾಲಾ ಮಕ್ಕಳಿಂದ ಹಿಡಿದು ಎಲ್ಲರ ಸಲಹೆ ಬಂದಿವೆ. ಕೆಲವು ಸಂಸ್ಥೆಗಳಿಗೆ ಡಿಬೇಟ್‌ಗೆ ಕೊಟ್ಟಿದ್ದೆವು. ಈ ಸಲಹೆಗಳನ್ನ ಆಧರಿಸಿ ವರದಿಗೆ ಕೊಟ್ಟಿದ್ದೆವು. ದೆಹಲಿಯಲ್ಲಿ ಗಡ್ಕರಿಯವರನ್ನ ಭೇಟಿ ಮಾಡಿದ್ದೆವು. ಯಶವಂತಪುರ, ಕೋಲಾರ, ಮೈಸೂರು ಹೈವೇ, ಹೊಸಕೋಟೆ ಕಡೆಯಿಂದ ಹೈವೇಗಳು ರೀಚ್ ಆಗುತ್ತವೆ. ಇದರಿಂದ ಟ್ರಾಫಿಕ್ ಪ್ರಾಬ್ಲಂ ಹೆಚ್ಚಾಗಿದೆ. ವಾಹನಗಳ ಹೆಚ್ಚಳವೂ ಇದೆ. ಕೇಂದ್ರ ಸಚಿವರು ಇದಕ್ಕೆ ಸಲಹೆ ಕೊಟ್ಟಿದ್ದರು. ಟನಲ್, ಫ್ಲೈಓವರ್ ಬಗ್ಗೆ ಸಲಹೆಗಳನ್ನೂ ಕೊಟ್ಟಿದ್ದರು. ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡು ಬನ್ನಿ ಎಂದಿದ್ದಾರೆ‌ ಎಂದರು.

    ಡಿಕೆಶಿ ಬ್ಲ್ಯಾಕ್‌ಮೇಲ್ ಮಾಡ್ತಾರೆ ಎಂಬ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿ.ಟಿ. ರವಿ ನನ್ನ ಸ್ನೇಹಿತ. ರಾಜ್ಯ ರಾಜಕಾರಣಕ್ಕೆ ಬರ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅನಧಿಕೃತ ಫ್ಲೆಕ್ಸ್‌ ತೆಗೆಯಲು ಶುಭ ಘಳಿಗೆಗೆ ಕಾಯ್ತಿದ್ದೀರಾ? – ಬಿಬಿಎಂಪಿಗೆ ಹೈಕೋರ್ಟ್ ತರಾಟೆ

    ಅನಧಿಕೃತ ಫ್ಲೆಕ್ಸ್‌ ತೆಗೆಯಲು ಶುಭ ಘಳಿಗೆಗೆ ಕಾಯ್ತಿದ್ದೀರಾ? – ಬಿಬಿಎಂಪಿಗೆ ಹೈಕೋರ್ಟ್ ತರಾಟೆ

    – ಅನಧಿಕೃತ ಫ್ಲೆಕ್ಸ್‌ ಕಂಡರೆ ತಲಾ 50,000 ರೂ. ದಂಡ ಹಾಕುವಂತೆ ಸೂಚನೆ

    ಬೆಂಗಳೂರು: ರಾಜಧಾನಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ತಡೆಗೆ ವಿಫಲವಾಗಿದೆ ಎಂದು ಕ್ರಮ ಕೈಗೊಳ್ಳದ ಬಿಬಿಎಂಪಿ (BBMP), ರಾಜ್ಯ ಸರ್ಕಾರವನ್ನು ಹೈಕೋರ್ಟ್ (Karnataka High Court) ತರಾಟೆ ತೆಗೆದುಕೊಂಡಿದೆ.

    ಪ್ರಸನ್ನ ಬಿ. ವರಾಳೆ, ನ್ಯಾ. ಎಂ.ಜಿ.ಎಸ್. ಕಮಲ್ ಅವರಿದ್ದ ಪೀಠವು, ಅನಧಿಕೃತ ಜಾಹೀರಾತು ಹಾವಳಿ ತಡೆಯಲು ಪಂಚವಾರ್ಷಿಕ ಯೋಜನೆ ಬೇಕೇ? ಫ್ಲೆಕ್ಸ್ ತೆರವಿಗೆ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ? ಚುನಾವಣೆ ವೇಳೆ 60,000 ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಲಾಗಿದೆ. ಆದರೆ ಕೇವಲ 134 ದೂರು ಪರಿಗಣಿಸಿ 40 ಎಫ್‌ಐಆರ್ ದಾಖಲಿಸಲಾಗಿದೆ. ಉಳಿದ ಪ್ರಕರಣಗಳು ಏನಾಯ್ತು ಎಂದು ಗರಂ ಆಗಿದೆ. ಇದನ್ನೂ ಓದಿ: ಆರಗ ಜ್ಞಾನೇಂದ್ರ ಅವರನ್ನು ನಿಮ್ಹಾನ್ಸ್‌ಗೆ ಕಳಿಸೋಣ: ಶಿವಕುಮಾರ್

    ಫ್ಲೆಕ್ಸ್ ಅಳವಡಿಸಿದ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ. ಬೆಂಗಳೂರು ಸುಂದರವಾಗಿರುವುದು ಸರ್ಕಾರಕ್ಕೆ ಬೇಕಿಲ್ಲವೇ? ನಗರದ ತುಂಬೆಲ್ಲಾ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ಇರಬೇಕೆಂದು ಸರ್ಕಾರದ ಅಪೇಕ್ಷೆಯೇ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

    ಬ್ರ್ಯಾಂಡ್ ಬೆಂಗಳೂರಿಗೆ ಫ್ಲೆಕ್ಸ್, ಬ್ಯಾನರ್‌ಗಳಿಂದ ಕಳಂಕ. ಬೆಂಗಳೂರಿನ ಬಗ್ಗೆ ಹೂಡಿಕೆದಾರರಿಗೆ ಎಂತಹ ಚಿತ್ರಣ ನೀಡುತ್ತಿದ್ದೀರಿ? ಬೆಂಗಳೂರಿನ ಸ್ಥಿತಿ ಸುಧಾರಿಸದಿದ್ದರೆ ಹೂಡಿಕೆ ಹೇಗೆ ತರುತ್ತೀರಿ? ಬೆಂಗಳೂರನ್ನು ಅದರ ಅದೃಷ್ಟಕ್ಕೇ ಬಿಡಲಾಗಿದೆ. ಇದು ಅಚ್ಚರಿ, ಆಘಾತಕಾರಿ ಹಾಗೂ ಆತ್ಮಸಾಕ್ಷಿ ಕಲಕುವಂಥದ್ದಾಗಿದೆ. ಬಿಬಿಎಂಪಿ ಅಸಹಾಯಕತೆಯಿಂದ ಕೈ ಎತ್ತಿದೆ. ನೀವೇನು ಮಾಡುತ್ತಿದ್ದೀರ ಎಂದು ರಾಜ್ಯ ಸರ್ಕಾರಕ್ಕೆ ಸಿಜೆ ಪ್ರಸನ್ನ ಬಿ. ವರಾಳೆ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ವೀರೇಂದ್ರ ಹೆಗ್ಗಡೆಯವರಿಗೆ ಮಾನಸಿಕ ಹಿಂಸೆ ನೀಡಲಾಗ್ತಿದೆ: ಜೈನಮುನಿ ಗುಣದರನಂದಿ ಶ್ರೀ

    ಇನ್ಮುಂದೆ ಒಂದೇ ಒಂದು ಅನಧಿಕೃತ ಫ್ಲೆಕ್ಸ್ ಕಂಡರೂ ತಲಾ 50 ಸಾವಿರ ರೂ. ದಂಡ ವಿಧಿಸಬೇಕು. ಬಿಬಿಎಂಪಿ, ರಾಜ್ಯ ಸರ್ಕಾರ ತಲಾ 50 ಸಾವಿರ ರೂ. ಠೇವಣಿ ಇಡಬೇಕು. ಫ್ಲೆಕ್ಸ್ ಮೂಲಕ ಶುಭಾಶಯ ಕೋರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನ ಆಡಳಿತದ ಹೊಣೆ ಹೊತ್ತವರು ಈ ಬಗ್ಗೆ ಗಮನಹರಿಸಬೇಕು ಎಂದು ಬಿಬಿಎಂಪಿ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಾರ್ನಿಂಗ್ ಮಾಡಿದೆ. ಮೂರು ವಾರಗಳಲ್ಲಿ ಕ್ರಮ ಕೈಗೊಂಡ ವರದಿ ಸಲ್ಲಿಕೆಗೆ ಹೈಕೋರ್ಟ್‌ ತಾಕೀತು ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿದ್ದರಾಮಯ್ಯ ಮನೆ ಮುಂದೆ ಅಭಿಮಾನಿಗಳ ಸಂಭ್ರಮ

    ಸಿದ್ದರಾಮಯ್ಯ ಮನೆ ಮುಂದೆ ಅಭಿಮಾನಿಗಳ ಸಂಭ್ರಮ

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸಿಎಂ ಘೋಷಣೆ ಬೆನ್ನಲ್ಲೆ ನಿವಾಸದ ಬಳಿ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. 2 ಬಾರಿಗೆ ಸಿಎಂ ಆಗ್ತಿರುವ ಸಿದ್ದರಾಮಯ್ಯಗೆ ಶುಭಕೋರಿ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಜೊತೆಗೆ ಸಿದ್ದರಾಮಯ್ಯ ನಿವಾಸದ ಬಳಿ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

    ಕುಮಾರಕೃಪ ರಸ್ತೆಯಲ್ಲಿರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಬಳಿ ಸಿಎಂ ಸಿದ್ದರಾಮಯ್ಯ 2.0 ಎಂಬ ಬರಹವುಳ್ಳ ಸುಮಾರು 7 ಕೆಜಿ ತೂಕದ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದರು. ಸಿದ್ದರಾಮಯ್ಯ ಸರ್ಕಾರಿ ನಿವಾಸ ಮುಂಭಾಗದ ನಾಮಫಲಕಕ್ಕೆ ಮಲ್ಲಿಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಅಲ್ಲದೇ ಸಿದ್ದು ಹೆಸರಲ್ಲಿ ಅಭಿಮಾನಿಗಳು ಬನ್ನೇರುಘಟ್ಟದ ಪುರಾತನಕಾಲದ ಚಂಪಕದಾಮ ದೇವಾಲಯದಲ್ಲಿ ಅರ್ಚನೆ ಮಾಡಿಸಿ ಪ್ರಸಾದವನ್ನು ತಂದು ಹಂಚಿದರು. ಇದನ್ನೂ ಓದಿ: ಕಾಂಗ್ರೆಸ್‌ನವರು ಮಧ್ಯರಾತ್ರಿ ಕೂಪನ್ ಹಂಚಿ ನನ್ನನ್ನ ಸೋಲಿಸಿದ್ದಾರೆ – ನಿಖಿಲ್ ಕುಮಾರಸ್ವಾಮಿ

    ಇನ್ನೊಂದೆಡೆ ಸಿದ್ದರಾಮಯ್ಯ ಗೆದ್ದ ಖುಷಿಯಲ್ಲಿ ಸಿದ್ದರಾಮನ ಹುಂಡಿ ಗ್ರಾಮದಿಂದ ಅಭಿಮಾನಿ ಜಗದೀಶ್ ಸಿದ್ದು ಭಾವಚಿತ್ರವನ್ನ ಟ್ಯಾಟೋ ಹಾಕಿಸಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಆಗೋದನ್ನ ನೋಡ್ಕೊಂಡೇ ವಾಪಸ್ ಹೋಗ್ತೇನೆ ಅಂತ ಸಂತಸ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯನವರ ಮನೆ ಮುಂದೆ ಸಿದ್ದರಾಮಯ್ಯ ಬ್ಯಾನರ್ (Banner) ಹಿಡಿದು ನಾದಸ್ವರ ವಾದ್ಯ ನುಡಿಸುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದ್ರು.

    ಸಿದ್ದರಾಮಯ್ಯ ಸಿಎಂ ಆಗಲೆಂದು ಅಭಿಮಾನಿಗಳು ಹರಕೆ ಹೊತ್ತಿದ್ದ ಕಾರಣ ಇಂದು ಸಿದ್ದರಾಮಯ್ಯ ಮನೆ ಮುಂದೆ ಈಡುಗಾಯಿ ಹೊಡೆದು ಹರಕೆ ತೀರಿಸಿ, ಕರ್ಪೂರ ಹಚ್ಚಿ ಸಿದ್ದರಾಮಯ್ಯ ಫೋಟೋಗೆ ಆರತಿ ಮಾಡಿದ್ದಾರೆ. ಸಿದ್ದರಾಮಯ್ಯ ಮನೆ ಬಳಿ ಅಭಿಮಾನಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಿದ್ದಾರೆ. 1 ಕೆಎಸ್‍ಆರ್ ಪಿ ತುಕಡಿ, 50ಕ್ಕೂ ಹೆಚ್ಚು ಸ್ಥಳೀಯ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

  • ಕೇಸರಿಮಯವಾದ ಮಂಡ್ಯ- ಬಿಜೆಪಿ ಫ್ಲೆಕ್ಸ್‌ನಲ್ಲಿ ಸ್ವಾಭಿಮಾನಿ ಸಂಸದೆ ಫೋಟೋ!

    ಕೇಸರಿಮಯವಾದ ಮಂಡ್ಯ- ಬಿಜೆಪಿ ಫ್ಲೆಕ್ಸ್‌ನಲ್ಲಿ ಸ್ವಾಭಿಮಾನಿ ಸಂಸದೆ ಫೋಟೋ!

    ಮಂಡ್ಯ: ಸಕ್ಕರೆ ನಾಡು ಮಂಡ್ಯ (mandya) ಗೆ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah) ಆಗಮಿಸುತ್ತಿರುವ ಹಿನ್ನೆಲೆ ಮಂಡ್ಯ ನಗರವನ್ನು ಬಿಜೆಪಿ (BJP) ಮುಖಂಡರು ಕೇಸರಿ ಮಯವಾಗಿ ಮಾಡಿದ್ದಾರೆ. ಜೊತೆಗೆ ಅಮಿತ್ ಶಾ ಅವರನ್ನು ಸ್ವಾಗತಿಸಿ ಹಾಕಿದ ಫ್ಲೆಕ್ಸ್ ನಲ್ಲಿ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಫೋಟೋ ರಾರಾಜಿಸುತ್ತಿದೆ.

    ಹೌದು. ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಬಾವುಟ ಹಾರಾಡುತ್ತಿದ್ದು, ನಾಯಕರು ಅಮಿತ್ ಶಾಗೆ ಸ್ವಾಗತ ಕೋರುವ ಫ್ಲೆಕ್ಸ್ ಗಳು ಕೂಡ ರಾರಾಜಿಸುತ್ತಿವೆ. ಅಮಿತ್ ಶಾ ಗೆ ಸ್ವಾಗತ ಕೋರಿದ ಫ್ಲೆಕ್ಸ್ ನಲ್ಲಿ ಸ್ವಾಭಿಮಾನಿ ಸಂಸದೆ ಸುಮಲತಾ ಭಾವಚಿತ್ರವಿರುವುದು ಗಮನಸೆಳೆದಿದೆ. ಇದನ್ನೂ ಓದಿ: ಪಹಣಿ ತಿದ್ದುಪಡಿಗೆ 5,000 ಲಂಚ ಪಡೆದ ಅಧಿಕಾರಿ – ವೀಡಿಯೋ ಮಾಡಿ ಹರಿಬಿಟ್ಟ ರೈತರು

    ಸಂಸದೆ ಆಪ್ತ ಇಂಡವಾಳು ಸಚ್ಚಿದಾನಂದ (Indavalu Sacchidananda) ಸ್ವಾಗತ ಕೋರಿರುವ ಫ್ಲೆಕ್ಸ್ ನಲ್ಲಿ ಸುಮಲತಾ ಫೋಟೋ ಹಾಕಲಾಗಿದೆ. ಸುಮಲತಾ ಅನುಮತಿ ಪಡೆದೆ ಬಿಜೆಪಿ ಸೇರಿರುವುದಾಗಿ ಹೇಳಿದ್ದ ಸಚ್ಚಿದಾನಂದ, ಇದೀಗ ಆಪ್ತ ಕೋರಿರುವ ಫ್ಲೆಕ್ಸ್ ನಲ್ಲಿ ಸುಮಲತಾ ರಾರಾಜಿಸುತ್ತಿದ್ದಾರೆ. ನಾಳೆ 11 ಗಂಟೆಗೆ ಮಂಡ್ಯಗೆ ಹೆಲಿಕಾಪ್ಟರ್ ಮೂಲಕ ಬರಲಿರುವ ಶಾ, 11.15ಕ್ಕೆ ಗೆಜ್ಜಲಗೆರೆಯ ಮನ್‍ಮುಲ್‍ನ ಮೆಗಾ ಡೈರಿ ಉದ್ಘಾಟನೆ ಮಾಡಲಿದ್ದಾರೆ.

    ಈ ಹಿನ್ನೆಲೆಯಲ್ಲಿ ಮಂಡ್ಯ ಎಲ್ಲಾ ರಸ್ತೆಗಳು ಕೇಸರಿ ಮಯವಾಗಿದೆ. ಮಂಡ್ಯ ವಿವಿ ಆವರಣದಲ್ಲಿ ನಡೆಯುವ ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಜರ್ಮನ್ ಟೆಂಟ್ ಮೂಲಕ ನಿರ್ಮಾಣವಾಗುತ್ತಿದ್ದು, 1 ಲಕ್ಷ ಮಂದಿ ಸೇರಿಸುವ ಗುರಿಯನ್ನು ಬಿಜೆಪಿ ನಾಯಕರು ಹೊಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]