Tag: Flakes

  • ಆರ್ಕೇಸ್ಟ್ರಾದಲ್ಲಿ ಫ್ಲೆಕ್ಸ್ ಹಾಕಿಸೋ ವಿಚಾರಕ್ಕೆ ಜಗಳ ಕೊಲೆಯಲ್ಲಿ ಅಂತ್ಯ

    ಆರ್ಕೇಸ್ಟ್ರಾದಲ್ಲಿ ಫ್ಲೆಕ್ಸ್ ಹಾಕಿಸೋ ವಿಚಾರಕ್ಕೆ ಜಗಳ ಕೊಲೆಯಲ್ಲಿ ಅಂತ್ಯ

    ಮಂಡ್ಯ: ಆರ್ಕೇಸ್ಟ್ರಾದಲ್ಲಿ ಫ್ಲೆಕ್ಸ್ ಹಾಕಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಜಗಳದಲ್ಲಿ ಯುವಕನನ್ನು ಆತನ ಸ್ನೇಹಿತರೇ ಹೊಡೆದು ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ (Mandya) ನಡೆದಿದೆ.

    ಮೃತ ಯುವಕನನ್ನು ಅರುಣ್(22) ಎಂದು ಗುರುತಿಸಲಾಗಿದ್ದು, ಈತ ತನ್ನ 18ನೇ ವಯಸ್ಸಿನಲ್ಲೇ ಪೊಲೀಸ್‍ರ ರೌಡಿಶೀಟರ್‌ನ ಲಸ್ಟ್‌ನಲ್ಲಿ ಸೇರಿಕೊಂಡಿದ್ದ. ಆಗಾಗ ಊರಿನಲ್ಲಿ ನಡೆಯುತ್ತಿದ್ದ ಸಣ್ಣ-ಪುಟ್ಟ ಗಲಾಟೆಯಲ್ಲಿ ಭಾಗಿಯಾಗುತ್ತಿದ್ದ. ಇದೀಗ ಜೊತೆಯಲ್ಲಿ ಇದ್ದವರೇ ಆತನನ್ನು ಹೊಡೆದು ಕೊಲೆ ಗೈದಿದ್ದಾರೆ. ಇದನ್ನೂ ಓದಿ: ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ಮಾರಾಟ – ಆಪ್ ವಿರುದ್ಧ ಬಿಜೆಪಿ ಗಂಭೀರ ಆರೋಪ

    ಅರುಣ್ ಕೊಲೆಗೆ ಇದೇ ತಿಂಗಳ 19 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಆರ್ಕೇಸ್ಟ್ರಾವೇ ಕಾರಣ. ಅರುಣ್ ಹಾಗೂ ಆತನ ಸ್ನೇಹಿತರು ಈ ಹಿಂದೆ ಶಾಸಕ ಡಿಸಿ ತಮ್ಮಣ್ಣ ಅವರ ಬೆಂಬಲಿಗರಾಗಿದ್ದರು. ಆದರೆ ಕನ್ನಡ ರಾಜ್ಯೋತ್ಸವದ ಆರ್ಕೇಸ್ಟ್ರಾದಲ್ಲಿ ದೊಡ್ಡರಸಿನಕೆರೆ ಗ್ರಾಮದಲ್ಲಿ ಸಮಾಜ ಸೇವಕ ಕದಲೂರು ಉದಯ್ ಅವರ ಫ್ಲೆಕ್ಸ್ ಮಾತ್ರ ಹಾಕಿದ್ದಾರೆ. ಈ ಬಗ್ಗೆ ಅರುಣ್ ಸ್ನೇಹಿತರೊಂದಿಗೆ ಇಷ್ಟು ದಿನ ನೀವು ತಮ್ಮಣ್ಣ ಜೊತೆಗೆ ಇದ್ದು ಈಗ ಉದಯ್ ಫೋಟೋ ಹಾಕಿಸಿದ್ದೀರಾ ಎಂದು ಮಾತನಾಡಿದ್ದಾನೆ. ಇದೇ ಜಗಳ ನಡೆದು ಅರುಣ್‍ನನ್ನು ದೊಡ್ಡರಸಿನಕೆರೆ ಗ್ರಾಮದ ದೊಡ್ಡಯ್ಯ, ದೇವರಾಜು, ಅಭಿ, ಗಜ, ಬೆಳ್ಳಾ ರಾಘುಳಿ ಸೇರಿದಂತೆ 8 ಮಂದಿ ನನ್ನ ಮಗನನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಅರಣ್ ತಂದೆ ರಮೇಶ್ ಆರೋಪಿಸಿದ್ದಾರೆ.

    ಭಾನುವಾರ ಸಂಜೆ ಅರುಣ್ ಮೇಲೆ ದೊಡ್ಡರಸಿನಕೆರೆ ಗ್ರಾಮದ ಸರ್ಕಲ್‍ನಲ್ಲಿ ನಾಲ್ವರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಬಳಿಕ ಗ್ರಾಮಸ್ಥರು ಗಲಾಟೆ ಬಿಡಿಸಿ ಕಳುಹಿಸಿದ್ದಾರೆ. ನಂತರ ಅರುಣ್‍ನನ್ನು ಕೆ.ಎಂ.ದೊಡ್ಡಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದೇವರಹಳ್ಳಿ ಬಳಿಕ ಮತ್ತೆ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ದೊಣ್ಣೆ, ಕಲ್ಲಿನಿಂದ ಹಲ್ಲೆ ಮಾಡಿರುವ ಕಾರಣ ಅರುಣ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ನಂತರ ಅರುಣ್‍ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅರುಣ್ ಸಾವನ್ನಪ್ಪಿದ್ದಾನೆ. ಸದ್ಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಎಂ ದೊಡ್ಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನೂ ಅರುಣ್ ಮೇಲೆ ಹಲ್ಲೆ ಮಾಡಿದವರ ಮನೆ ಮೇಲೆ ಅರುಣ್ ಸ್ನೇಹಿತರು ಕಲ್ಲು ಎಸೆದು ಕಿಟಕಿ ಗಾಜುಗಳನ್ನು ಪುಡಿಗೊಳಿಸಿದ್ದಾರೆ.

    ಒಟ್ಟಾರೆ ಮೀಸೆ ಚಿಗುರೋ ವಯಸ್ಸಿನಲ್ಲಿ ರೌಡಿಶೀಟರ್ ಆಗಿದ್ದವ, ಇದೀಗ ಆರ್ಕೇಸ್ಟ್ರಾದ ಫ್ಲೆಕ್ಸ್‌ ವಿಚಾರಕ್ಕೆ ಬಾಳಿ ಬದುಕಬೇಕಾದವ ಹೆಣವಾಗಿ ಮಲಗಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್- ಜಾಗತಿಕ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿದ್ದ ಶಾರೀಕ್: ADGP

    Live Tv
    [brid partner=56869869 player=32851 video=960834 autoplay=true]

  • ಜೆಡಿಎಸ್‍ಗೆ ಸೇರ್ಪಡೆ ಆದ್ರಾ ಮಂಡ್ಯದ ಗಂಡು ಅಂಬರೀಶ್?

    ಜೆಡಿಎಸ್‍ಗೆ ಸೇರ್ಪಡೆ ಆದ್ರಾ ಮಂಡ್ಯದ ಗಂಡು ಅಂಬರೀಶ್?

    ಮಂಡ್ಯ: ಸಚಿವರಾದ ನಂತರ ಇದೇ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಮಂಡ್ಯದ ಮದ್ದೂರಿಗೆ ಆಗಮಿಸುತ್ತಿರುವ ಸಚಿವ ಡಿಸಿ ತಮ್ಮಣ್ಣ ಅವರನ್ನು ಸ್ವಾಗತಿಸಲು ಹಾಕಿರುವ ಫ್ಲೆಕ್ಸ್ ಗಳು ಮಂಡ್ಯದ ಗಂಡು ಅಂಬರೀಶ್ ಫೋಟೋ ರಾರಾಜಿಸುತ್ತಿದ್ದು, ಅಂಬಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಮದ್ದೂರಿಗೆ ಆಗಮಿಸಿದ ಡಿಸಿ ತಮ್ಮಣ್ಣ ಅವರಿಗೆ ಸ್ವಾಗತ ಕೋರಲು ಬೆಂಬಲಿಗರು ದಾರಿ ಉದ್ದಕ್ಕೂ ಫ್ಲೆಕ್ಸ್ ಹಾಕಿದ್ದಾರೆ. ಸ್ವಾಗತ ಕೋರಿ ಹಾಕಿರುವ ಫ್ಲೆಕ್ಸ್ ಗಳಲ್ಲಿ ಜೆಡಿಎಸ್ ಮುಖಂಡರ ಭಾವಚಿತ್ರದ ಜೊತೆಗೆ ಅಂಬರೀಶ್ ಭಾವಚಿತ್ರವೂ ರಾರಾಜಿಸುತ್ತಿದೆ. ಇದನ್ನು ಓದಿ: ಅಂಬರೀಶ್, ನಾನು ಅಣ್ಣ-ತಮ್ಮಂದಿರಿದ್ದಂತೆ: ಕುಮಾರಸ್ವಾಮಿ

    ಸಮ್ಮಿಶ್ರ ಸರ್ಕಾರದಲ್ಲಿ ಡಿಸಿ ತಮ್ಮಣ್ಣಗೆ ಪ್ರಮುಖ ಸಾರಿಗೆ ಸಚಿವ ಸ್ಥಾನ ಸಿಗಲು ಅಂಬರೀಶ್ ಪ್ರಮುಖ ಕಾರಣ ಎಂಬ ಮಾತು ಕೇಳಿ ಬಂದಿತ್ತು. ಚುನಾವಣೆಯ ಮತದಾನದ ವೇಳೆಯೂ ಅಂಬರೀಶ್ ಅವರು ಡಿಸಿ ತಮ್ಮಣ್ಣ ಅವರ ಕಾರಿನಲ್ಲಿ ಬಂದು ಮತ ಚಲಾಯಿಸಿದ್ದರು. ಇಷ್ಟೆಲ್ಲ ಚರ್ಚೆಗಳ ಜೊತೆಗೆ ಇದೀಗ ಡಿಸಿ ತಮ್ಮಣ್ಣ ಅವರಿಗೆ ಸ್ವಾಗತ ಕೋರಲು ಹಾಕಿರುವ ಫ್ಲೆಕ್ಸ್ ಗಳಲ್ಲಿ ಜೆಡಿಎಸ್ ಮುಖಂಡರ ಜೊತೆ ಅಂಬಿ ಭಾವಚಿತ್ರವೂ ಕಾಣಿಸಿಕೊಂಡಿದೆ. ಸದ್ಯ ಜೆಡಿಎಸ್ ಫ್ಲೆಕ್ಸ್ ನಲ್ಲಿ ಅಂಬರೀಶ್ ಭಾವಚಿತ್ರ ಹಾಕಿರುವುದರಿಂದ ಮಂಡ್ಯದಲ್ಲಿ ಅಂಬರೀಶ್ ಜೆಡಿಎಸ್ ಪಕ್ಷದ ಮೂಲಕ ಮತ್ತೆ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡಲಿದ್ದಾರಾ ಎನ್ನುವ ಚರ್ಚೆ ಈಗ ಆರಂಭವಾಗಿದೆ. ಇದನ್ನು ಓದಿ:  ಅಂಬರೀಶ್ ಜೊತೆಗಿನ ಮಾತುಕತೆಯ ಗುಟ್ಟು ಜೆಡಿಎಸ್ ಅಭ್ಯರ್ಥಿಯಿಂದ ಬಯಲು!