Tag: fitness secret

  • ಫಿಟ್ನೆಸ್‌ ರಹಸ್ಯ ಕೇಳಿದ ಮಹಿಳೆ- ನಾಚಿ ನೀರಾದ ಸಿಎಂ ಸ್ಟಾಲಿನ್

    ಫಿಟ್ನೆಸ್‌ ರಹಸ್ಯ ಕೇಳಿದ ಮಹಿಳೆ- ನಾಚಿ ನೀರಾದ ಸಿಎಂ ಸ್ಟಾಲಿನ್

    ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಮುಂಜಾನೆ ವಾಕಿಂಗ್‍ಗೆ ಹೋಗಿದ್ದಾಗ ಎದುರಲ್ಲಿ ಸಿಕ್ಕ ಜನರು ಕೇಳಿದ ಪ್ರಶ್ನೆಗೆ ನಾಚಿ ನೀರಾಗಿದ್ದಾರೆ.

    ವಾಕಿಂಗ್ ಹೋಗುತ್ತಿದ್ದ ಮುಖ್ಯಮಂತ್ರಿ ಸ್ಟಾಲಿನ್ ಅವರ ಬಳಿ ಕೆಲವು ಮಹಿಳೆಯರು ರಸ್ತೆಯಲ್ಲಿ ಮಾತನಾಡಿದ್ದು, ನೀವು ಸದಾ ಯುವಕರಂತೆ ಕಾಣುತ್ತೀರಲ್ಲ, ನಿಮ್ಮ ಸೌಂದರ್ಯ, ಉತ್ಸಾಹದ ಗುಟ್ಟೇನು? ಎಂದು ಕೇಳಿದ್ದಾರೆ. ಇದನ್ನು ಕೇಳಿ ಸಿಎಂ ಸ್ಟಾಲಿನ್ ನಾಚಿಕೊಂಡಿದ್ದಾರೆ. ಮಹಿಳೆ ಆ ಪ್ರಶ್ನೆ ಕೇಳುತ್ತಿದ್ದಂತೆ ಜೋರಾಗಿ ನಕ್ಕು, ನಾನು ಡಯಟ್ ಕಂಟ್ರೋಲ್ ಮಾಡುತ್ತೇನೆ. ಅದರಿಂದಲೇ ನಾನಿನ್ನೂ ಫಿಟ್ ಆಗಿದ್ದೇನೆ ಎಂದಿದ್ದಾರೆ. ಈ ವೀಡಿಯೋವನ್ನು ಡಿಎಂಕೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸಖತ್ ವೈರಲ್ ಆಗಿದೆ.

    ನನ್ನ ಬಿಡುವಿಲ್ಲದ ದಿನಚರಿಯ ನಡುವೆಯೇ ನನ್ನ ಆರೋಗ್ಯಕ್ಕೆಂದು ಸ್ವಲ್ಪ ಸಮಯವನ್ನು ಮೀಸಲಿಡುತ್ತೇನೆ. ಹಾಗೇ ನನ್ನ ಬಿಡುವಿನ ಸಮಯದಲ್ಲಿ ಮೊಮ್ಮಕ್ಕಳೊಂದಿಗೆ ಎಂಜಾಯ್ ಮಾಡಿ, ರಿಲ್ಯಾಕ್ಸ್ ಆಗುತ್ತೇನೆ. ಬೆಳಗ್ಗೆ ಬಹಳ ಬೇಗ ಏಳುವ ನಾನು ದಿನವೂ ವಾಕಿಂಗ್ ಹೋಗುತ್ತೇನೆ. ವಾಕಿಂಗ್ ಬಳಿಕ ಯೋಗ ಮಾಡುತ್ತೇನೆ. 10 ದಿನಗಳಿಗೆ ಒಮ್ಮೆ ಸೈಕ್ಲಿಂಗ್ ಮಾಡುತ್ತೇನೆ. ಇದರಿಂದ ನನ್ನ ದೇಹ ಫಿಟ್ ಆಗಿರುತ್ತದೆ. ಇದರಿಂದಲೇ ನಾನು ಎಷ್ಟೇ ಬ್ಯುಸಿಯಾಗಿದ್ದರೂ ಸುಸ್ತಾಗುವುದಿಲ್ಲ ಎಂದಿದ್ದಾರೆ.

    ಎಂ.ಕೆ. ಸ್ಟಾಲಿನ್ ಜಿಮ್‍ನಲ್ಲಿ ಬೆವರಿಳಿಸುತ್ತಿದ್ದ ವೀಡಿಯೋವೊಂದನ್ನು ಇತ್ತೀಚೆಗೆ ಡಿಎಂಕೆ ಹಂಚಿಕೊಂಡಿತ್ತು. ಸ್ಟಾಲಿನ್ ಅಧಿಕಾರಕ್ಕೆ ಬಂದಾಗಿನಿಂದಲೂ ಅವರ ಫಿಟ್ನೆಸ್‌ ವೀಡಿಯೋಗಳನ್ನು ಟ್ವಿಟ್ಟರ್‌ನಲ್ಲಿ ಆಗಾಗ ಪೋಸ್ಟ್ ಮಾಡಲಾಗುತ್ತಿದೆ. ಸ್ಟಾಲಿನ್ ಫಿಟ್ನೆಸ್‌ ವೀಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.