Tag: fisrt look

  • ‘ಅದ್ದೂರಿ ಲವರ್’ ಸ್ಟೈಲಿಶ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ ನಿರ್ದೇಶಕ ಎ.ಪಿ ಅರ್ಜುನ್

    ‘ಅದ್ದೂರಿ ಲವರ್’ ಸ್ಟೈಲಿಶ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ ನಿರ್ದೇಶಕ ಎ.ಪಿ ಅರ್ಜುನ್

    ಸ್ಟಾರ್ ಡೈರೆಕ್ಟರ್ ಎ.ಪಿ ಅರ್ಜುನ್ ಮತ್ತೊಮ್ಮೆ ಅದ್ದೂರಿ ಪ್ರೇಮ್ ಕಹಾನಿಯನ್ನು ಸಿಲ್ವರ್ ಸ್ಕ್ರೀನ್ ಮೇಲೆ ಚಿತ್ರಿಸಲು ಮುಂದಾಗಿರುವ ಚಿತ್ರ `ಅದ್ದೂರಿ ಲವರ್’. ಎ.ಪಿ ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿರುವ ಹ್ಯಾಂಡ್ಸಂ ಹುಡುಗ ವಿರಾಟ್ ಮತ್ತೊಮ್ಮೆ ಎ.ಪಿ ಅರ್ಜುನ್ ಚಿತ್ರದಲ್ಲಿ ಅದ್ದೂರಿ ಲವರ್ ಆಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಟೈಟಲ್ ಮೂಲಕವೇ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾ ತಂಡ ಇಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಸಖತ್ ಸ್ಟೈಲಿಶ್ ಆಗಿ ಮೂಡಿ ಬಂದಿರುವ ಫಸ್ಟ್ ಲುಕ್ ಪೋಸ್ಟರ್ ಎಲ್ಲರ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.‌

    ಲವ್ ಸಬ್ಜೆಕ್ಟ್ ಜೊತೆಗೆ ಪಕ್ಕಾ ಕಮರ್ಷಿಯಲ್ ಆ್ಯಂಡ್ ಆಕ್ಷನ್ ಓರಿಯೆಂಟೆಡ್ ಸಿನಿಮಾವಿದು. ಅದಕ್ಕೆ ತಕ್ಕಂತೆ ನಾಯಕ ನಟ ವಿರಾಟ್ ಕೂಡ ಸಖತ್ ಆಗಿಯೇ ಪ್ರಿಪರೇಶನ್ ನಡೆಸಿದ್ದಾರೆ. ಚಿತ್ರದಲ್ಲಿ ಎನರ್ಜೆಟಿಕ್ ಹುಡುಗನಾಗಿ ನಯಾ ಅವತಾರ ತಾಳಿರುವ ವಿರಾಟ್ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಹೋಪ್ ಇಟ್ಟುಕೊಂಡಿದ್ದಾರೆ. ಅದ್ದೂರಿ ಸಿನಿಮಾ ಮೂಲಕ ಟ್ರೆಂಡ್ ಸೆಟ್ ಮಾಡಿರುವ ನಿರ್ದೇಶಕ ಎ.ಪಿ ಅರ್ಜುನ್ ‘ಅದ್ದೂರಿ ಲವರ್’ ಮೂಲಕ ನಯಾ ಟ್ರೆಂಡ್ ಸೃಷ್ಟಿಸಲು ಸಕಲ ರೀತಿಯಲ್ಲಿ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಏಕಕಾಲದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

    ನಿರ್ದೇಶನದ ಜೊತೆಗೆ ಎ.ಪಿ ಅರ್ಜುನ್ ಫಿಲಂಸ್ ಮೂಲಕ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡು ಹೈ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಟೀಂ ವ್ಯಾಲಂಟೈನ್ಸ್ ಡೇ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಗಮನ ಸೆಳೆಯುತ್ತಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಾರಥ್ಯ ಚಿತ್ರಕ್ಕಿರಲಿದ್ದು, ಸಂಕೇತ್ ಎಂವೈಸ್ ಕ್ಯಾಮೆರಾ ವರ್ಕ್, ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ.