Tag: fishing boat

  • ಅಲೆಗಳ ಹೊಡೆತಕ್ಕೆ ಅರಬ್ಬಿ ಸಮುದ್ರದಲ್ಲಿ ಮುಳುಗಿದ ಪರ್ಷಿಯನ್ ಬೋಟ್ – 25 ಮೀನುಗಾರರ ರಕ್ಷಣೆ

    ಅಲೆಗಳ ಹೊಡೆತಕ್ಕೆ ಅರಬ್ಬಿ ಸಮುದ್ರದಲ್ಲಿ ಮುಳುಗಿದ ಪರ್ಷಿಯನ್ ಬೋಟ್ – 25 ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಷಿಯನ್ ಬೋಟ್ (Persian Boat) ಅಲೆಗಳ ಹೊಡೆತಕ್ಕೆ ಭಟ್ಕಳ (Bhatkal) ತಾಲೂಕಿನ ನೇತ್ರಾಣಿ ಬಳಿ ಮುಳುಗಿದೆ. ಅದರಲ್ಲಿದ್ದ 25 ಜನ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

    ಭಟ್ಕಳದ ಅಣ್ಣಪ್ಪ ಮೊಗೇರ್ ಎಂಬವರಿಗೆ ಸೇರಿದ ಮಹಾ ಮುರುಡೇಶ್ವರ ಹೆಸರಿನ ಪರ್ಷಿಯನ್ ಬೋಟ್ ಇದಾಗಿದೆ. ಮೀನುಗಾರಿಕೆಗೆ ಅರಬ್ಬಿ ಸಮುದ್ರದಲ್ಲಿ ಹೋಗುತ್ತಿರುವಾಗ ಅಲೆಗಳ ಅಬ್ಬರಕ್ಕೆ ಬೋಟ್ ಮುಳುಗಡೆಯಾಗಿದೆ. ತಕ್ಷಣ ಕರಾವಳಿ ಕಾವಲುಪಡೆ ಕಂಟ್ರೋಲ್ ರೂಮ್‌ಗೆ ಕರೆಮಾಡಿದ್ದು, ಸ್ಥಳೀಯ ವೆಲ್ಲನ್ಕಿಣಿ ಮತ್ತು ಮಚ್ಚೆದುರ್ಗ ಎಂಬ ಎರಡು ಬೋಟ್ ಗಳು ಸಹಾಯಕ್ಕೆ ಆಗಮಿಸಿ 25 ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ನೋಡನೋಡುತ್ತಿದ್ದಂತೆ ಮುಳುಗಿದ ಬೋಟ್ – 6 ಮೀನುಗಾರರ ರಕ್ಷಣೆ

    ಬೋಟ್ ಮುಳುಗಿದ್ದರಿಂದ ಅಂದಾಜು 80 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

  • ಉಡುಪಿ| ಮರದ ದಿಮ್ಮಿಗೆ ಡಿಕ್ಕಿಯಾಗಿ ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ

    ಉಡುಪಿ| ಮರದ ದಿಮ್ಮಿಗೆ ಡಿಕ್ಕಿಯಾಗಿ ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ

    ಉಡುಪಿ: ಜಿಲ್ಲೆಯ ಮಲ್ಪೆ ಬಂದರಿನ ಮೀನುಗಾರಿಕಾ ಬೋಟ್ ಗಂಗೊಳ್ಳಿ ಅಳಿವೆ ಸಮೀಪ ಮರದ ದಿಮ್ಮಿಗೆ ಡಿಕ್ಕಿಯಾಗಿದೆ. ಘಟನೆ ಪರಿಣಾಮ ಬೋಟ್ ಭಾಗಶಃ ಮುಳುಗಡೆಗೊಂಡು ಲಕ್ಷಾಂತರ ರುಪಾಯಿ ನಷ್ಟವಾಗಿದೆ.

    ಸಂಜಾತ ಅವರ ಮಾಲೀಕತ್ವದ ತವಕಲ್ ಎನ್ನುವ ಹೆಸರಿನ ಮೀನುಗಾರಿಕೆ ಬೋಟನ್ನು ಜ.4 ರಂದು ದುರಸ್ತಿಗೆಂದು ಮೀನುಗಾರರಾದ ರವಿ ಸಾಲ್ಯಾನ್ ಮತ್ತು ಹರೀಶ್ ಅವರು ಮಲ್ಪೆ ಬಂದರಿನಿಂದ ಗಂಗೊಳ್ಳಿಗೆ ಕೊಂಡೊಯ್ಯುತ್ತಿದ್ದರು.

    ಗಂಗೊಳ್ಳಿ ಬಂದರಿನ ಅಳಿವೆಯಿಂದ ಸುಮಾರು 2 ನಾಟಿಕಲ್ ಮೈಲು ದೂರದಲ್ಲಿ ಚಲಿಸುತ್ತಿರುವಾಗ ಭಾರೀ ಗಾತ್ರದ ಮರದ ದಿಮ್ಮಿ ತೇಲಿ ಬಂದು ಬೋಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೋಟಿನ ಮುಂಭಾಗದ ತಳಬದಿಯಲ್ಲಿ ಹಾನಿಯಾಗಿ ನೀರು ಒಳ ಬರಲು ಪ್ರಾರಂಭಿಸಿತ್ತು.

    ನೀರಿನ ಒಳ ಹರಿವು ಜಾಸ್ತಿಯಾಗಿ ಬೋಟು ಮುಳುಗುವ ಸಂದರ್ಭದಲ್ಲಿ ಮಾಹಿತಿ ಪಡೆದ ಮೀನುಗಾರರು ಜಲರಾಣಿ ಎಂಬ ಹೆಸರಿನ ಬೋಟ್ ರವಾನಿಸಿ ಇಬ್ಬರನ್ನೂ ಬಚಾವ್ ಮಾಡಿದ್ದಾರೆ.

  • ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಭಾರತೀಯ ನೌಕಾಪಡೆ ಜಲಾಂತರ್ಗಾಮಿ – ಇಬ್ಬರು ಮೀನುಗಾರರು ನಾಪತ್ತೆ

    ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಭಾರತೀಯ ನೌಕಾಪಡೆ ಜಲಾಂತರ್ಗಾಮಿ – ಇಬ್ಬರು ಮೀನುಗಾರರು ನಾಪತ್ತೆ

    ನವದೆಹಲಿ: 13 ಮಂದಿ ಸಿಬ್ಬಂದಿಯೊಂದಿಗೆ ಭಾರತೀಯ ಮೀನುಗಾರಿಕಾ ಹಡಗು ಗೋವಾ ಕರಾವಳಿಯ ಬಳಿ ಭಾರತೀಯ ನೌಕಾ ಜಲಾಂತರ್ಗಾಮಿ ನೌಕೆಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರು ಹಡಗುಗಳು ಮತ್ತು ವಿಮಾನಗಳನ್ನು ನಿಯೋಜಿಸಿರುವ ಭಾರತೀಯ ನೌಕಾಪಡೆಯು ಬೃಹತ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. 11 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಇಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ.

    ಗೋವಾ ಕರಾವಳಿಯಿಂದ 70 ನಾಟಿಕಲ್ ಮೈಲು ದೂರದಲ್ಲಿ ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆಗೆ ಮಾರ್ಥೋಮಾ ಡಿಕ್ಕಿ ಹೊಡೆದಿದೆ ಎಂದು ರಕ್ಷಣಾ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

    ಉಳಿದ ಇಬ್ಬರಿಗಾಗಿ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ. ಮಾರಿಟೈಮ್ ಪಾರುಗಾಣಿಕಾ ಸಮನ್ವಯ ಕೇಂದ್ರ ಮುಂಬೈ (ಎಂಆರ್‌ಸಿಸಿ)ನೊಂದಿಗೆ ಸಮನ್ವಯಗೊಳಿಸಲಾಗುತ್ತಿದೆ. ಘಟನೆಗೆ ಕಾರಣ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    ಸ್ಕಾರ್ಪೀನ್-ವರ್ಗದ ಜಲಾಂತರ್ಗಾಮಿ ನೌಕೆಗಳು ಹಿಂದೂ ಮಹಾಸಾಗರದಲ್ಲಿ ಭಾರತದ ನೌಕಾ ಶಕ್ತಿಯ ಪ್ರಮುಖ ಭಾಗವಾಗಿದೆ. ಏಕೆಂದರೆ ಜಲಾಂತರ್ಗಾಮಿ ವಿರೋಧಿ ಯುದ್ಧ, ಗುಪ್ತಚರ, ಪ್ರದೇಶದ ಕಣ್ಗಾವಲು ಸೇರಿದಂತೆ ಬಹುವಿಧದ ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು.

  • ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ ಬೆಂಕಿಗಾಹುತಿ

    ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ ಬೆಂಕಿಗಾಹುತಿ

    ಮಂಗಳೂರು: ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ (Fishing Boat) ಬೆಂಕಿಗಾಹುತಿಯಾಗಿರುವ ಘಟನೆ ಮಂಗಳೂರಿನ (Mangaluru) ಬೆಂಗ್ರೆಯ (Bengre) ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ.

    ಮಂಗಳವಾರ ಮುಂಜಾನೆ ಬೋಟ್‌ನಲ್ಲಿ ಏಕಾಏಕಿ ಬೆಂಕಿ (Fire) ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಡೀಸೆಲ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೋಟ್ ಹೊತ್ತಿ ಉರಿದಿದೆ. ಬೆಂಕಿ ಆವರಿಸಿ ಕೋಟ್ಯಂತರ ಮೌಲ್ಯದ ವಸ್ತುಗಳು ನಾಶವಾಗಿದೆ.

    ಒಂದು ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲಂಗರು ಹಾಕಿದ್ದ ಇನ್ನಷ್ಟು ಬೋಟ್‌ಗಳಿಗೆ ಬೆಂಕಿ ಹರಡುವ ಮುನ್ನ ಸ್ಥಳೀಯ ಮೀನುಗಾರರು ಎಚ್ಚೆತ್ತುಕೊಂಡಿದ್ದಾರೆ. ಬೆಂಕಿ ತಗುಲಿದ ಬೋಟ್ ಅನ್ನು ಬಂದರಿನಿಂದ ನದಿ ಕಡೆಗೆ ಸಾಗಿಸಿದ್ದಾರೆ. ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ದಂಪತಿ ಸಾವು- ಅನಾಥವಾದ ವೃದ್ಧಾಶ್ರಮ

    ಬೆಂಕಿಗೆ ಆಹುತಿಯಾದ ಮೀನಿಗಾರಿಕಾ ಬೋಟ್ ಅರುಣ್ ಎಂಬವರಿಗೆ ಸೇರಿದ್ದಾಗಿದೆ. ಸ್ಥಳಕ್ಕೆ ಆಗಮಿಸಿದ ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇದನ್ನೂ ಓದಿ: ನಾಳೆ CWRC ಸಭೆ – ಈ ಬಾರಿ ತಮಿಳುನಾಡು ಬೇಡಿಕೆಯಿಟ್ಟ ನೀರಿನ ಪ್ರಮಾಣ ಎಷ್ಟು ಗೊತ್ತಾ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂ ಮಹಾಸಾಗರದಲ್ಲಿ ಚೀನಾದ ದೋಣಿ ಮುಳುಗಡೆ – 39 ಜನ ನಾಪತ್ತೆ

    ಹಿಂದೂ ಮಹಾಸಾಗರದಲ್ಲಿ ಚೀನಾದ ದೋಣಿ ಮುಳುಗಡೆ – 39 ಜನ ನಾಪತ್ತೆ

    – ರಕ್ಷಣೆಗೆ ಕ್ಸಿ ಜಿನ್‌ಪಿಂಗ್ ಆದೇಶ

    ಬೀಜಿಂಗ್: ಮೀನುಗಾರಿಕೆಗೆ ತೆರಳಿದ್ದ ಚೀನಾದ (China) ದೋಣಿಯೊಂದು (Fishing Boat) ಹಿಂದೂ ಮಹಾಸಾಗರದಲ್ಲಿ (Indian Ocean) ಮುಳುಗಡೆಯಾಗಿದ್ದು, ಅದರಲ್ಲಿದ್ದ 39 ಜನರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

    ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದೋಣಿಯಲ್ಲಿ ಚೀನಾದ 17 ಪ್ರಜೆಗಳು, ಇಂಡೋನೇಷ್ಯಾದ 17 ಜನ ಹಾಗೂ ಫಿಲಿಪೈನ್ಸ್‌ನ ಐವರು ಇದ್ದರು ಎಂದು ಚೀನಾ ಸೆಂಟ್ರಲ್ ಟೆಲಿವಿಷನ್ (CCTV) ತಿಳಿಸಿದೆ.

    ಇದೀಗ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಹಾಗೂ ಪ್ರಧಾನಿ ಲಿ ಕಿಯಾಂಗ್ (Li Qiang)ವಿದೇಶಗಳಲ್ಲಿರುವ ಚೀನಾದ ರಾಜತಾಂತ್ರಿಕರಿಗೆ ಹಾಗೂ ಕೃಷಿ ಮತ್ತು ಸಾರಿಗೆ ಸಚಿವಾಲಯಗಳಿಗೆ ಬದುಕುಳಿದವರನ್ನು ಹುಡುಕಲು ಹಾಗೂ ರಕ್ಷಿಸಲು ಆದೇಶಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಲೇಡಿ ಡಾನ್‌ನಿಂದ ಉದ್ಯಮಿ ಮೇಲೆ ಹಲ್ಲೆ

    ಆಸ್ಟ್ರೇಲಿಯಾ ಮತ್ತು ಇತರ ಹಲವು ದೇಶಗಳಿಂದ ರಕ್ಷಣಾ ತಂಡಗಳು ಹುಡುಕಾಟಕ್ಕಾಗಿ ಘಟನಾ ಸ್ಥಳಕ್ಕೆ ತೆರಳಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಚೀನಾ 2 ಹಡಗುಗಳನ್ನು ನಿಯೋಜಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕಕ್ಕೆ ಹಾರಲಿದ್ದಾರೆ ರಾಹುಲ್ – 10 ದಿನ ಪ್ರವಾಸ

  • ದೋಣಿ ದುರಂತ – ಗರಿಷ್ಠ ಪರಿಹಾರಕ್ಕೆ ವೇದವ್ಯಾಸ ಕಾಮತ್ ಮನವಿ

    ದೋಣಿ ದುರಂತ – ಗರಿಷ್ಠ ಪರಿಹಾರಕ್ಕೆ ವೇದವ್ಯಾಸ ಕಾಮತ್ ಮನವಿ

    ಮಂಗಳೂರು: ಇತ್ತೀಚೆಗೆ ಮೀನುಗಾರಿಕೆಗೆ ತೆರಳಿದ್ದ ಶ್ರೀರಕ್ಷಾ ದೋಣಿ ದುರಂತಕ್ಕೆ ಸಂಬಂಧಿಸಿ ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪರಿಹಾರ ಧನ ಬಿಡುಗಡೆಗೊಳಿಸುವಂತೆ ಶಾಸಕ ವೇದವ್ಯಾಸ ಕಾಮತ್ ಸದನದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ 25 ಜನರಿದ್ದ ಶ್ರೀರಕ್ಷಾ ಹೆಸರಿನ ದೋಣಿ ಮುಳುಗಡೆಯಾಗಿ 19 ಜನರು ಪ್ರಾಣಾಪಾಯದಿಂದ ಪಾರಾಗಿ 6 ಜನರು ಮೃತಪಟ್ಟಿದ್ದರು. ಈ ಘಟನೆಯ ಕುರಿತು ಸದನದಲ್ಲಿ ಮಾತನಾಡಿದ ಶಾಸಕ ಕಾಮತ್ 6 ಜನರಲ್ಲಿ ಒಬ್ಬರ ಮೃತದೇಹ ಇನ್ನೂ ಪತ್ತೆಯಾಗಿಲ್ಲ, ಮೃತದೇಹದ ಶೋಧ ಕಾರ್ಯ ನಡೆಯುತ್ತಿದೆ ಎಂದರು.

    ಈಗಾಗಲೇ ಮೀನುಗಾರಿಕಾ ಇಲಾಖೆಯು ಮೃತರ ಕುಟುಂಬಗಳಿಗೆ ತಲಾ 6 ಲಕ್ಷ ರೂಪಾಯಿ ಪರಿಹಾರ ಧನವನ್ನು ಸಂಸದ ನಳಿನ್ ಕುಮಾರ್ ಕಟೀಲ್, ಮೀನುಗಾರಿಕಾ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನೀಡಲಾಗಿದೆ. ಬೇರೆಡೆಗಳಲ್ಲಿ ಸಂಭವಿಸಿದ ದೋಣಿ ದುರಂತ ಘಟನೆಗಳಲ್ಲಿ 10 ಲಕ್ಷದ ವರೆಗೆ ಪರಿಹಾರ ನೀಡಲಾಗಿದೆ. ಹಾಗಾಗಿ ಸರ್ಕಾರವು ಮುತುವರ್ಜಿ ವಹಿಸಿ ಹೆಚ್ಚಿನ ಪರಿಹಾರ ಧನ ಬಿಡುಗಡೆಗೊಳಿಸುವಂತೆ ಶಾಸಕ ಕಾಮತ್ ಮನವಿ ಮಾಡಿಕೊಂಡರು.

    ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್, ಮೀನುಗಾರಿಕಾ ಸಚಿವರು ಹಾಗೂ ಸರ್ಕಾರದ ಜೊತೆ ಈ ಕುರಿತು ಚರ್ಚಿಸಲಾಗುವುದು ಎಂದರು.

  • ಸುವರ್ಣ ತ್ರಿಭುಜಕ್ಕೆ ಡಿಕ್ಕಿ ಹೊಡೆದಿತ್ತ ಐಎನ್‍ಎಸ್ ಕೊಚ್ಚಿ?

    ಸುವರ್ಣ ತ್ರಿಭುಜಕ್ಕೆ ಡಿಕ್ಕಿ ಹೊಡೆದಿತ್ತ ಐಎನ್‍ಎಸ್ ಕೊಚ್ಚಿ?

    – ದುರಂತಕ್ಕೆ ಕಾರಣವಾಗಿದ್ದು ನೌಕಾದಳದ ನಿರ್ಲಕ್ಷವೇ!

    ಕಾರವಾರ: ಸುವರ್ಣ ತ್ರಿಭುಜ ಬೋಟ್‍ಗೆ ನೌಕಾದಳದ ಐಎನ್‍ಎಸ್ ಕೊಚ್ಚಿ ಯುದ್ಧ ನೌಕೆಯು ಡಿಕ್ಕಿ ಹೊಡೆದಿತ್ತು ಎನ್ನುವ ಶಂಕೆ ವ್ಯಕ್ತವಾಗಿದೆ.

    163 ಮೀಟರ್ ಉದ್ದವಿರುವ ಐಎನ್‍ಎಸ್ ಕೊಚ್ಚಿ ಯುದ್ಧ ನೌಕೆಯು ಡಿಸೆಂಬರ್ 15ರ ಮಧ್ಯರಾತ್ರಿ ಸುವರ್ಣ ತ್ರಿಭುಜ ಬೋಟ್ ಇದ್ದ ಜಾಗದಲ್ಲಿ ವೇಗವಾಗಿ ಹೋಗಿತ್ತು. ಈ ವೇಳೆ ಬೋಟ್ ಇರುವುದನ್ನು ಗಮನಿಸದ ಐಎನ್‍ಎಸ್ ನೌಕೆಯ ನಾವಿಕ ಡಿಕ್ಕಿ ಹೊಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನೌಕಾಸೇನೆಯಿಂದ ಏಳು ಮೀನುಗಾರರ ಕೊಲೆ – ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

    ಐಎನ್‍ಎಸ್ ಕೊಚ್ಚಿನ ಮುಂಭಾಗದ ತಳಭಾಗವು ಡ್ಯಾಮೇಜ್ ಆಗಿತ್ತು. ಅಷ್ಟೇ ಅಲ್ಲದೆ ನೌಕೆಗೆ ಅಳವಡಿಸಿದ್ದ ಕ್ಯಾಮೆರಾ ಸಹ ಸಂಪೂರ್ಣ ಜಖಂಗೊಂಡಿತ್ತು. ನಂತರ ಇದನ್ನು ಮುಂಬೈನ ಶಿಪ್‍ಯಾರ್ಡನಲ್ಲಿ ಸತತ ಮೂರು ತಿಂಗಳ ಕಾಲ ದುರಸ್ತಿಗೊಳಿಸಿ ಬಳಿಕ ಸಮುದ್ರಕ್ಕೆ ಇಳಿಸಲಾಗಿತ್ತು. ಹೀಗಾಗಿ ಸುವರ್ಣ ತ್ರಿಭುಜ ಮುಳುಗಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸುವರ್ಣ ತ್ರಿಭುಜ ಅವಶೇಷ ಪತ್ತೆ- ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ

    ಈ ಸಂಬಂಧ ತನಿಖೆ ಕೈಗೊಳ್ಳಬೇಕು. ಐಎನ್‍ಎಸ್ ಕೊಚ್ಚಿ ಯುದ್ಧ ನೌಕೆ ಎಲ್ಲಿ? ಯಾವಾಗ ಡ್ಯಾಮೆಜ್ ಆಗಿತ್ತು ಅಂತ ನೌಕಾದಳದ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ತನಿಖೆ ಕೈಗೊಂಡಲ್ಲಿ ಸುವರ್ಣ ತ್ರಿಭುಜದ ರಹಸ್ಯ ಬಯಲಾಗಲಿದೆ ಎಂದು ಮೀನುಗಾರರು ಆಗ್ರಹಿಸಿದ್ದಾರೆ.

  • ಮಲ್ಪೆಯಿಂದ ಹೊರಟು ನಾಪತ್ತೆಯಾಗಿದ್ದ ಬೋಟ್ ಮಹಾರಾಷ್ಟ್ರದಲ್ಲಿ ಪತ್ತೆ?

    ಮಲ್ಪೆಯಿಂದ ಹೊರಟು ನಾಪತ್ತೆಯಾಗಿದ್ದ ಬೋಟ್ ಮಹಾರಾಷ್ಟ್ರದಲ್ಲಿ ಪತ್ತೆ?

    ಕಾರವಾರ: ಮಹಾರಾಷ್ಟ್ರ ರಾಜ್ಯದ ಕಡಲ ತೀರದಲ್ಲಿ ಮೀನುಗಾರಿಕಾ ದೋಣಿಯೊಂದು ಪತ್ತೆಯಾಗಿದೆ.

    ಕಡಲ ತೀರದಲ್ಲಿ ಮುಳುಗಿದ್ದ ದೋಣಿಯ ಬಿಡಿ ಭಾಗವು ಮಹಾರಾಷ್ಟ್ರದ ರತ್ನಗಿರಿ ಬಳಿ ಪತ್ತೆಯಾಗಿದ್ದು, ನಾಪತ್ತೆಯಾದ ಮಲ್ಪೆ ಮೂಲದ ಬೋಟಿನ ಅವಶೇಷ ಎನ್ನುವ ಶಂಕೆ ವ್ಯಕ್ತವಾಗಿದೆ.

    ರತ್ನಗಿರಿ ಬಳಿ ಮೀನುಗಾರಿಕೆಗೆ ತೆರಳಿದ್ದ ಅಂಕೋಲಾ ತಾಲೂಕಿನ ಬೇಲೆಕೇರಿ ಮೂಲದ ಮೀನುಗಾರರ ಕಣ್ಣಿಗೆ ಈ ಅವಶೇಷಗಳು ಕಾಣಿಸಿದೆ. ಹೀಗಾಗಿ ಅವರು ಈ ಅವಶೇಷ ಮಲ್ಪೆ ಮೂಲದ ಬೋಟಿನದ್ದಾಗಿರಬಹುದೆಂದು ಶಂಕಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಏಳು ಮೀನುಗಾರರ ನಾಪತ್ತೆ- 1 ಹಡಗಿನ ಮೆಸೇಜ್ ಬಗ್ಗೆ ತನಿಖೆಗಿಳಿದ ಪೊಲೀಸರು

    ಡಿಸೆಂಬರ್ 15 ರಂದು ಮಲ್ಪೆಯಿಂದ ಮಹರಾಷ್ಟ್ರದ ರತ್ನಗಿರಿಗೆ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಎನ್ನುವ ಬೋಟ್ ಸಮೇತ ಅದರಲ್ಲಿದ್ದ ರಾಜ್ಯದ 7 ಮೀನುಗಾರರು ನಾಪತ್ತೆಯಾಗಿದ್ದರು. ಈವರೆಗೂ ಮೀನುಗಾರರ ಅಥವಾ ಬೋಟಿನ ಕುರಿತು ಯಾವುದೇ ಮಾಹಿತಿ ದೊರೆತಿರಲಿಲ್ಲ. ಇದನ್ನೂ ಓದಿ: ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv