Tag: Fishes

  • ಮಳೆಯ ಅಬ್ಬರ- ಕಾರವಾರದಲ್ಲಿ ರಾಶಿ ರಾಶಿ ಮೀನುಗಳು ಬಲೆಗೆ

    ಮಳೆಯ ಅಬ್ಬರ- ಕಾರವಾರದಲ್ಲಿ ರಾಶಿ ರಾಶಿ ಮೀನುಗಳು ಬಲೆಗೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಪ್ರಾರಂಭವಾಗಿ ಮೂರು ದಿನಗಳು ಕಳೆದಿವೆ. ಕೊರೊನಾ ಕಾರಣಕ್ಕೆ ಎರಡು ದಿನಗಳ ಕಾಲ ಮೀನುಗಾರರು ಮತ್ಸ್ಯ ಬೇಟೆಗೆ ತೆರಳಿರಲಿಲ್ಲ. ಇಂದು ಮೀನುಗಾರಿಕೆಗೆ ತೆರಳಿದ್ದು, ತಾವು ಬೀಸಿದ ಬಲೆಗೆ ರಾಶಿ ರಾಶಿ ಮೀನುಗಳು ಅನಾಯಾಸವಾಗಿ ದೊರೆಯುತ್ತಿವೆ.

    ಕಳೆದ ನಾಲ್ಕು ತಿಂಗಳಲ್ಲಿ ಸಮುದ್ರದಲ್ಲಿ ಆದ ಹವಾಮಾನ ಬದಲಾವಣೆ ಮೀನುಗಳ ಸಂತಾನೋತ್ಪತ್ತಿಗೆ ಹೆಚ್ಚು ಪೂರಕವಾಗಿತ್ತು. ಇದೀಗ ಮೀನುಗಳು ಎತೇಚ್ಚವಾಗಿ ದರೆಯುತ್ತಿವೆ. ಲೋಡ್ ಗಟ್ಟಲೆ ಮೀನುಗಳು ಸಿಕ್ಕರೂ ಕೇರಳ, ಆಂಧ್ರ ಭಾಗದಲ್ಲಿ ಲಾಕ್‍ಡೌನ್ ಇರುವುದರಿಂದ ಉತ್ತಮ ಬೆಲೆ ಸಿಗದಂತಾಗಿದೆ.

    ಮಳೆಯ ಅಬ್ಬರ ಜೋರು
    ಬೆಳಗಿನಿಂದ ಬಿಡುವುಕೊಟ್ಟಿದ್ದ ಮಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಪ್ರಾರಂಭವಾಗಿದ್ದು, ಜಿಲ್ಲೆಯಾದ್ಯಂತ ಅಬ್ಬರದ ಮಳೆ ಸುರಿಯುತ್ತಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಹವಾಮಾನ ಇಲಾಖೆ ಮಾಹಿತಿ ನೀಡಿ, ಇನ್ನೂ ಮೂರು ದಿನ ಹೆಚ್ಚಿನ ಮಳೆಯಾಗುತ್ತದೆ ಎಂದು ಸೂಚಿಸಿದೆ. ಹೆಚ್ಚಿನ ಮಳೆಯಾದರೆ ಸಂಪ್ರದಾಯಿಕ ಮೀನುಗಾರರಿಗೆ ಈ ಬಾರಿ ಹೆಚ್ಚಿನ ಲಾಭ ತರುವ ನಿರೀಕ್ಷೆ ಮಾಡಲಾಗಿದೆ.

  • 500 ಕೆಜಿಯ ಬೃಹತ್ ಮೀನು ಬಲೆಗೆ- ಒಂದು ಲಕ್ಷಕ್ಕೂ ಅಧಿಕ ಬೆಲೆ

    500 ಕೆಜಿಯ ಬೃಹತ್ ಮೀನು ಬಲೆಗೆ- ಒಂದು ಲಕ್ಷಕ್ಕೂ ಅಧಿಕ ಬೆಲೆ

    ಕಾರವಾರ: ಸುಮಾರು 500 ಕೆ.ಜಿ.ಗೂ ಹೆಚ್ಚು ತೂಕವಿರುವ ಬೃಹತ್ ಗಾತ್ರದ ಮೂರು ತೊರ್ಕೆ ಮೀನುಗಳು ಭಟ್ಕಳ ಮೀನುಗಾರರ ಬಲೆಗೆ ಬಿದ್ದಿದ್ದು, ಮೀನುಗಾರರು ಫುಲ್ ಖುಷ್ ಆಗಿದ್ದಾರೆ.

    ಇಂದು ಬೆಳಗ್ಗೆ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ ಬೋಟ್ ಗಳಿಗೆ ಬ್ರಹತ್ ಗಾತ್ರದ ಮೂರು ತೊರ್ಕೆ ಮೀನು ಸಿಕ್ಕಿದ್ದು, ಪ್ರತಿ ಮೀನಿನ ತೂಕ 500 ಕೆ.ಜಿ. ಮೀರಿಲಿದೆ ಎಂದು ಅಂದಾಜಿಸಲಾಗಿದೆ. ಸುಮಾರು 2 ಮೀಟರ್ ಗೂ ಅಧಿಕ ಉದ್ದದ ಈ ಮೀನುಗಳನ್ನು ಹರಸಾಹಸಪಟ್ಟು ಮೀನುಗಾರರು ದಡಕ್ಕೆ ತಂದಿದ್ದು ಕ್ರೇನ್ ಮೂಲಕ ಬೋಟ್ ನಿಂದ ಮೇಲೆತ್ತಲಾಗಿದೆ.

    ಸಾಮಾನ್ಯವಾಗಿ ಮೀನುಗಾರರ ಬಲೆಗೆ ಬೀಳುವ ಮೀನುಗಳು 50 ರಿಂದ 100 ಕೆಜಿ ತೂಕ ಹೊಂದಿರುತ್ತವೆ. ಅಪರೂಪ ಎಂಬಂತೆ ಇಂತಹ ಬೃಹತ್ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತವೆ ಎಂದು ಮೀನುಗಾರರು ತಿಳಿಸಿದ್ದಾರೆ.

    ವೈಜ್ಞಾನಿಕವಾಗಿ ರೇ ಫೀಶ್, ಮೆಂಟ್ ರೇ ಎಂದು ಕರೆಯಲ್ಪಡುವ ಈ ಮೀನು ಸಂಪೂರ್ಣ ಬೆಳವಣಿಗೆಯ ನಂತರ ಸುಮಾರು ನಾಲ್ಕು ಸಾವಿರ ಪೌಂಡ್ ತೂಕ ಹೊಂದಿರುತ್ತವೆ. ಈ ಬೃಹತ್ ಗಾತ್ರದ ಮೀನನ್ನು ನೋಡಲು ಇಂದು ಮುಂಜಾನೆ ಭಟ್ಕಳ ಬಂದರಿನಲ್ಲಿ ನೂರಾರು ಜನ ಸೇರಿದ್ದು, ಕಳದೆರಡು ದಿನಗಳಿಂದ ಬೃಹತ್ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿವೆ.

  • ಕಲುಷಿತಗೊಂಡ ಕುರ್ಕಿ ಕೆರೆ- 3 ಲಕ್ಷಕ್ಕೂ ಅಧಿಕ ಮೀನುಗಳ ಮಾರಣಹೋಮ

    ಕಲುಷಿತಗೊಂಡ ಕುರ್ಕಿ ಕೆರೆ- 3 ಲಕ್ಷಕ್ಕೂ ಅಧಿಕ ಮೀನುಗಳ ಮಾರಣಹೋಮ

    ಕೋಲಾರ: ತಾಲೂಕಿನ ನರಸಾಪುರ ಬಳಿ ಇರುವ ಕುರ್ಕಿ ಕೆರೆ ಕಲುಷಿತಗೊಂಡಿದ್ದು, ಸುಮಾರು 3 ಲಕ್ಷಕ್ಕೂ ಅಧಿಕ ಮೀನುಗಳ ಮಾರಣ ಹೋಮ ನಡೆದಿದೆ.

    ನೀರು ಕಲುಷಿತಗೊಂಡ ಪರಿಣಾಮ ಲಕ್ಷಾಂತರ ಮೀನುಗಳು ಕರೆಯಲ್ಲಿ ಸಾವನ್ನಪ್ಪಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕೆರೆ ಇದಾಗಿದ್ದು, ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಸಮೀರ್ ಖಾನ್ ಎಂಬುವವರು ಸುಮಾರು 3 ಲಕ್ಷ ರೂಪಾಯಿಗೆ ಮೀನುಗಾರಿಕೆ ಇಲಾಖೆ ಮೂಲಕ ಟೆಂಡರ್ ಪಡೆದಿದ್ದಾರೆ. ಅದರಂತೆ ತಮಿಳುನಾಡಿನಿಂದ 3 ಲಕ್ಷದಷ್ಟು ವಿವಿಧ ತಳಿಯ ಮೀನು ಮರಿಗಳನ್ನ ಎರಡು ತಿಂಗಳ ಹಿಂದೆಯೆ ಕರೆಯಲ್ಲಿ ತಂದು ಬಿಟ್ಟಿದ್ದಾರೆ. ಆದರೆ ಕಳೆದ 2 ದಿನಗಳಿಂದ ಕೆರೆಯಲ್ಲಿರುವ ಲಕ್ಷಾಂತರ ಮೀನುಗಳು ಒಂದೊಂದಾಗಿ ಮೃತಪಡುತ್ತಿವೆ.

    ಮೀನುಗಳ ಸಾವಿಗೆ ಕೆರೆ ಪಕ್ಕದಲ್ಲಿರುವ ಪ್ರಕಾಶ್ ಬಸ್ ತಯಾರಿಕ ಘಟಕದಿಂದ ಕಲುಷಿತ ನೀರು ಮಿಶ್ರಣವಾಗಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಖಾನೆ ತ್ಯಾಜ್ಯ ನೀರು ಕೆರೆ ಸೇರಿರುವ ಪರಿಣಾಮ ಲಕ್ಷಾಂತರ ಮೀನುಗಳ ಸಾವನ್ನಪ್ಪಿರಬಹುದು ಎಂಬ ಅನುಮಾನ ಹುಟ್ಟುಕೊಂಡಿದೆ. ಮೀನುಗಳ ಸಾವಿನಿಂದ ಕೆರೆ ದರ್ವಾಸನೆ ಹೊಡೆಯುತ್ತಿದ್ದು, ಮೃತ ಮೀನುಗಳನ್ನ ಪ್ರಾಣಿ ಪಕ್ಷಿಗಳು ಕೂಡ ಸೇವಿಸದೆ ಇರುವುದು ಯಾರಾದರು ದುಷ್ಕರ್ಮಿಗಳು ವಿಷ ಪ್ರಾಶನ ಮಾಡಿದ್ದಾರ ಅನ್ನೋ ಅನುಮಾನ ಕೂಡ ಮೂಡಿದೆ.

    ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ್ದ ಸಮೀರ್ ಅವರಿಗೆ ಇಲಾಖೆ ಸೂಕ್ತ ಪರಿಹಾರ ಕೊಡಬೇಕು ಎಂಬುದು ಸ್ಥಳೀಯರ ಮನವಿಯಾಗಿದೆ. ಅಲ್ಲದೆ ಮೀನುಗಳ ಸಾವಿಗೆ ನಿಖರವಾದ ಕಾರಣ ತಿಳಿಯದೆ ಇರುವುದರಿಂದ ಕೆರೆಯಲ್ಲಿರುವ ಹಾವು-ಏಡಿ ಸೇರಿದಂತೆ ಜಲಚರಗಳು ಮೃತಪಡುವ ಆತಂಕ ಸ್ಥಳೀಯರಲ್ಲಿ ಶುರುವಾಗಿದೆ. ಮೀನುಗಳ ಸಾವಿಗೆ ನಿಖರವಾದ ಕಾರಣ ಹುಡುಕಿ ಸಮೀರ್ ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಇದರ ಜೊತೆಗೆ ಮತ್ತಷ್ಟು ಜಲಚರಗಳು ಮೃತಪಡುವ ಮುನ್ನ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

  • ಅರಳೂರು ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ

    ಅರಳೂರು ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ

    ಬೆಂಗಳೂರು: ಬೆಳ್ಳಂದೂರು ಸಮೀಪದ ಅರಳೂರು ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಶ್ರೀನಿವಾಸ್ ಎಂಬವರು ಗುತ್ತಿಗೆ ಪಡೆದು ಮೀನುಗಳನ್ನ ಸಾಕಾಣಿಕೆ ಮಾಡುತ್ತಿದ್ದರು. ನಗರದಲ್ಲಿ ಕಳೆದ ಹಲವು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ಮಳೆ ನೀರಿನ ಜೊತೆ ಕಾರ್ಖಾನೆಗಳ ಹಾಗೂ ಒಳಚರಂಡಿ ನೀರನ್ನು ಕೆರೆಗೆ ಬಿಟ್ಟಿರುವುದರಿಂದ ಮೀನುಗಳು ಸಾವನ್ನಪ್ಪಿವೆ ಎಂದು ಶ್ರೀನಿವಾಸ್ ಹೇಳಿದ್ದಾರೆ.

    ಮೀನುಗಳ ಸಾವಿನಿಂದ ಗುತ್ತಿಗೆದಾರ ಶ್ರೀನಿವಾಸ್ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಆದರೆ ಸಾವಿರಾರು ಮೀನುಗಳು ಸಾವನ್ನಪ್ಪಿದರೂ ಇನ್ನೂ ಕಾರ್ಖಾನೆಗಳ ಕಲುಷಿತ ನೀರು ಕೆರೆಗಳಿಗೆ ಸೇರುವುದು ನಿಂತಿಲ್ಲ ಎಂಬುದು ವಿಪರ್ಯಾಸವಾಗಿದೆ.