Tag: Fishers

  • ಬಿಜೆಪಿ ಶಾಸಕ ಸುನಿಲ್ ನಾಯ್ಕ್ ಬೆಂಬಲಿಗರ ಅಟ್ಟಹಾಸ – ರಾಡ್ ಹಿಡಿದು ಮೀನುಗಾರರ ಮೇಲೆ ದೌರ್ಜನ್ಯ

    ಬಿಜೆಪಿ ಶಾಸಕ ಸುನಿಲ್ ನಾಯ್ಕ್ ಬೆಂಬಲಿಗರ ಅಟ್ಟಹಾಸ – ರಾಡ್ ಹಿಡಿದು ಮೀನುಗಾರರ ಮೇಲೆ ದೌರ್ಜನ್ಯ

    ಕಾರವಾರ: ಭಟ್ಕಳ ಶಾಸಕ ಸುನಿಲ್ ನಾಯ್ಕ್ ಆಪ್ತ ಗುತ್ತಿಗೆದಾರರಿಂದ ಮೀನುಗಾರರ ಮೇಲೆ ರಾಡ್ ಹಿಡಿದು ಗೂಂಡಾಗಿರಿ ನಡೆಸಿದ ಘಟನೆ ಹೊನ್ನಾವರ ಕಾಸರಕೋಡ ಟೊಂಕಾದ ಕಡಲತೀರದ ಬಳಿ ನಡೆದಿದೆ.

    ಉತ್ತರ ಕನ್ನಡದ ಭಟ್ಕಳದ ಬಿಜೆಪಿ ಶಾಸಕ ಸುನಿಲ್ ನಾಯ್ಕ್ ಬೆಂಬಲಿಗರ ಅಟ್ಟಹಾಸ ಎಲ್ಲೆ ಮೀರಿದೆ. ಶಾಸಕರ ಆಪ್ತ ಗುತ್ತಿಗೆದಾರರು ರಾಡ್ ಹಿಡಿದು ಮೀನುಗಾರರ ಮೇಲೆ ದೌರ್ಜನ್ಯ ನಡೆಸಲು ಯತ್ನಿಸಿದ ಘಟನೆ ಕಾಸರಕೋಡ ಟೊಂಕಾದ ಕಡಲತೀರದ ಬಳಿ ನಡೆದಿದೆ. ವಾಣಿಜ್ಯ ಬಂದರು ನಿರ್ಮಾಣಕ್ಕೆ ಕೋರ್ಟ್ ತಡೆಯಾಜ್ಞೆ ಇದ್ದರೂ, ಕಳೆದ ಮೂರು ದಿನದಿಂದ ಅಕ್ರಮವಾಗಿ ಕಾಮಗಾರಿ ನಡೆಸಲು ಶಾಸಕರ ಬೆಂಬಲಿಗರು ಯತ್ನಿಸಿದ್ರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ

    ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿತ್ತು. ಆದರೇ ಇಂದು ಕೂಡ, ಶಾಸಕರ ಆಪ್ತರಾದ ತುಂಬೊಳ್ಳಿ ಜಗದೀಶ್, ರಮೇಶ್ ಅಕ್ರಮ ಕಾಮಗಾರಿಗೆ ಯತ್ನಿಸಿದ್ರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ವಾಹನಗಳನ್ನು ತಡೆದ ಮೀನುಗಾರರ ಮೇಲೆ ರಾಡ್ ಮೂಲಕ ಬೆದರಿಸಲು ನೋಡಿದ್ದಾರೆ. ಮೀನುಗಾರರು ವಿರೋಧ ವ್ಯಕ್ತಪಡಿಸಿ ವಾಹನಗಳನ್ನು ತಡೆದಿದ್ದು, ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ವಾಹನದಿಂದ ರಾಡ್ ಅನ್ನು ಹೊರತೆಗೆದ ಶಾಸಕರ ಆಪ್ತರು ಮೀನುಗಾರರಿಗೆ ಹೆದರಿಸಿದ್ದಾರೆ. ನಂತರ ತಮ್ಮ ಆತ್ಮ ರಕ್ಷಣೆಗಾಗಿ ರಾಡ್ ಇಟ್ಟುಕೊಂಡಿರುವುದಾಗಿ ಸಮಜಾಯಿಸಿ ನೀಡಿದ್ದು, ಈ ಕುರಿತು ಮೀನುಗಾರರು ಮತ್ತೊಂದು ಕಂಪ್ಲೇಂಟ್ ನೀಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಯುವತಿಯ ಮೇಲೆ ಬೆಂಗ್ಳೂರಿನಲ್ಲಿ ಗ್ಯಾಂಗ್‌ ರೇಪ್‌ – 7 ಮಂದಿಗೆ ಜೀವಾವಧಿ ಶಿಕ್ಷೆ

     

  • ಲಾರಿಗೆ ವ್ಯಾನ್ ಡಿಕ್ಕಿ – 4  ಮೀನುಗಾರರು ಸಾವು

    ಲಾರಿಗೆ ವ್ಯಾನ್ ಡಿಕ್ಕಿ – 4 ಮೀನುಗಾರರು ಸಾವು

    ತಿರುವನಂತಪುರಂ: ಮಂಗಳವಾರ ಮುಂಜಾನೆ ಲಾರಿಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಮೀನುಗಾರರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡ ಘಟನೆ ಕೇರಳದ ಕೊಲ್ಲಂನಲ್ಲಿ ಸಂಭವಿಸಿದೆ.

    ಕರುಣಾಂಬರಂ (56) ಮತ್ತು ಬಾರ್ಕುಮಾನ್ಸ್ (45), ಜಸ್ಟಿನ್ (56) ಮತ್ತು ತಮಿಳುನಾಡು ಮೂಲದ ಬಿಜು (35) ಮೃತ ದುರ್ದೈವಿಗಳು. ಮೀನುಗಾರರು ಮೀನುಗಾರಿಕೆಗಾಗಿ ವಿಝಿಂಜಂನಿಂದ ಬೇಪೂರ್‍ಗೆ ತೆರಳುತ್ತಿದ್ದ ವ್ಯಾನ್ ನಿಂದಕರ್ ಕಡೆಗೆ ಮೀನು ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಸಿಎಂ ಬದಲಾವಣೆ ಕೇವಲ ಊಹಾಪೋಹ: ನಳಿನ್‍ ಕುಮಾರ್ ಕಟೀಲ್

    ವ್ಯಾನ್‍ನಲ್ಲಿ 34 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡವರನ್ನು ಕರುನಾಗಪಲ್ಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕನಿಷ್ಠ 12 ಮಂದಿ ತಮಿಳುನಾಡು ಮೂಲದವರಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ:  ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

    ಗಾಯಗೊಂಡ ಇಬ್ಬರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

  • ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ – 6 ಮಂದಿ ಮೀನುಗಾರರ ರಕ್ಷಣೆ

    ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ – 6 ಮಂದಿ ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಅಳಿವೆ ಪ್ರದೇಶದಲ್ಲಿ ನಡೆದಿದೆ.

    ಇಂದು ಹೊನ್ನಾವರದ ಬಂದರಿನಿಂದ ಶ್ರೀಕೃಷ್ಣ ಭಂಡಾರಿ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಬಳಿಕ ಮೀನು ಹಿಡಿದುಕೊಂಡು ವಾಪಸ್ ಬರುವಾಗ ಜಲ ಮಾರ್ಗದ ಮಧ್ಯದ ಅಳಿವೆ ಪ್ರದೇಶದಲ್ಲಿ ಹೂಳು ತುಂಬಿದ್ದರಿಂದ ಇಂಜಿನ್‍ನಲ್ಲಿ ಸಮಸ್ಯೆ ಕಂಡು ಬಂದು ಮುಳುಗಡೆ ಆಗಿದೆ. ಇದರಿಂದಾಗಿ ಬೋಟ್‍ನಲ್ಲಿದ್ದ ಮೀನುಗಾರರು ಅಪಾಯಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಇಂಧನ ಬೆಲೆ ಫ್ಲೆಕ್ಸಿಬಲ್ ಇರುತ್ತೆ, ಏನೂ ಸಮಸ್ಯೆ ಆಗಲ್ಲ: ನಾರಾಯಣಗೌಡ ಉಡಾಫೆ

    ಬೋಟ್‍ನಲ್ಲಿದ್ದ 6 ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಶ್ರೀಕೃಷ್ಣ ಭಂಡಾರಿ ಹೆಸರಿನ ಶಿವರಾಮ ಶ್ರೀಯಾನ್ ಮಾಲೀಕತ್ವದ ಬೋಟ್ ಇದಾಗಿದ್ದು, ಬೋಟ್ ಮುಳುಗಡೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟವಾಗಿದೆ. ಇದನ್ನೂ ಓದಿ: ಅವೈಜ್ಞಾನಿಕ ಮೀನುಗಾರಿಕೆ – ಕಡಲ ಜೀವಿಗಳಿಗೆ ತಂದ ಆತಂಕ

  • ಹೊನ್ನಾವರ ಖಾಸಗಿ ಬಂದರು ವಿವಾದ, ಶೀಘ್ರ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ: ಹೆಬ್ಬಾರ್

    ಹೊನ್ನಾವರ ಖಾಸಗಿ ಬಂದರು ವಿವಾದ, ಶೀಘ್ರ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ: ಹೆಬ್ಬಾರ್

    ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದಲ್ಲಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೀನುಗಾರರು ವಿರೋಧ ವ್ಯಕ್ತಪಡಿಸಿ, ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಹಿನ್ನಲೆ ಭಾನುವಾರ ಯಲ್ಲಾಪುರ ಪಟ್ಟಣದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಕಾರ್ಮಿಕ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರ ಮುಖಂಡರೊಂದಿಗೆ ಸಭೆ ನಡೆಸಿದರು.

    ಬಂದರು ನಿರ್ಮಾಣದ ಸಾಧಕ ಬಾಧಕಗಳ ಕುರಿತು ಸ್ಥಳೀಯ ಮುಖಂಡರೊಂದಿಗೆ ವಿಸ್ತೃತವಾಗಿ ಚರ್ಚಿಸಿದ ಅವರು, ಮೀನುಗಾರರ ಅಹವಾಲನ್ನು ಸ್ವೀಕರಿಸಿದರು. ನಂತರ ಮಾತನಾಡಿದ ಸಚಿವರು, ಸಾಂಪ್ರದಾಯಿಕ ಮೀನುಗಾರಿಕೆ ಹಾಗೂ ವಾಸ್ತವ ಇರುವ ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಬಂದರನ್ನು ನಿರ್ಮಾಣ ಮಾಡಲು ಕ್ರಮ ವಹಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಬಂದರು ನಿರ್ಮಾಣದ ಬಗ್ಗೆ ಸ್ಥಳೀಯರಲ್ಲಿ ಇದ್ದ ಕೆಲ ಗೊಂದಲಗಳ ಬಗ್ಗೆ ಹಲವು ಸುತ್ತಿನ ಚರ್ಚೆಯಲ್ಲಿ ಮೀನುಗಾರ ಮನ ಒಲಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂದರು.

    ಮೀನುಗಾರರ ಹಿತ ಕಾಯುವುದು ನನ್ನ ಉದ್ದೇಶವಾಗಿದೆ. ಇದಕ್ಕೆ ಸರ್ಕಾರ ಸಹ ಕಟಿಬದ್ಧವಾಗಿದೆ. ಕೆಲವೇ ದಿನಗಳಲ್ಲಿ ಅಧಿಕಾರಿಗಳ ತಂಡದೊಂದಿಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಮೀನುಗಾರರ ಹಾಗೂ ಮುಖಂಡರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

    ಈ ಸಂದರ್ಭದಲ್ಲಿ ಶಾಸಕ ಸುನೀಲ್ ನಾಯ್ಕ, ಜಿಲ್ಲಾಧಿಕಾರಿ ಮುಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜ್, ಭಟ್ಕಳ ಡಿ.ಎಸ್.ಪಿ ಬೆಳ್ಳಿಯಪ್ಪ, ಹೊನ್ನಾವರ ಪಿ.ಐ ಶ್ರೀಧರ್, ಬಂದರಿನ ಕ್ಯಾಪ್ಟನ್ ಸ್ವಾಮಿ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಾಗರಾಜ್, ಕಂಪನಿಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಸೂರ್ಯಪ್ರಕಾಶ್ ಗುತ್ತಾ ಉಪಸ್ಥಿತರಿದ್ದರು.