Tag: fishermen

  • ಮಂಗಳೂರು| ಭಾರತೀಯ ತಟ ರಕ್ಷಣಾ ಪಡೆಯಿಂದ 31 ಮೀನುಗಾರರ ರಕ್ಷಣೆ

    ಮಂಗಳೂರು| ಭಾರತೀಯ ತಟ ರಕ್ಷಣಾ ಪಡೆಯಿಂದ 31 ಮೀನುಗಾರರ ರಕ್ಷಣೆ

    ಮಂಗಳೂರು: ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಗೋವಾದ ಮೀನುಗಾರಿಕಾ ಬೋಟ್‌ನಲ್ಲಿದ್ದ 31 ಮೀನುಗಾರರನ್ನು ಭಾರತೀಯ ತಟ ರಕ್ಷಣಾ ಪಡೆ ರಕ್ಷಿಸಿದೆ.

    ಅ.24 ರಂದು ಸಂಪರ್ಕಕ್ಕೆ ಸಿಗದೆ IFB ಸಂತ ಆಂಟನಿ ಹೆಸರಿನ ಬೋಟ್ ಕಾಣೆಯಾಗಿತ್ತು. ತುರ್ತು ಮಾಹಿತಿ ಪಡೆದು ಕೋಸ್ಟ್ ಗಾರ್ಡ್‌ನ ICGS ಕಸ್ತೂರ ಬಾ ಗಾಂಧಿ ಹಡಗು ಕಾರ್ಯಾಚರಣೆ ನಡೆಸಿತ್ತು. ಇದನ್ನೂ ಓದಿ: Anekal | ಕಂದಕಕ್ಕೆ ಉರುಳಿದ ಕಂಟೈನರ್ ಲಾರಿ – ಇಬ್ಬರು ದುರ್ಮರಣ, ನಾಲ್ವರು ಗಂಭೀರ

    ಆಳ ಸಮುದ್ರದಲ್ಲಿ ಸ್ಟೇರಿಂಗ್ ಹಾಗೂ ಗೇರ್‌ನ ವೈಫಲ್ಯದಿಂದಾಗಿ ಮೀನುಗಾರಿಕಾ ಬೋಟ್ ಅಪಾಯಕ್ಕೆ ಸಿಲುಕಿತ್ತು. ಆಳ ಸಮುದ್ರದಲ್ಲಿ ತೂಫಾನ್ ನಡುವೆ ಸಿಲುಕಿ ಮೀನುಗಾರಿಕಾ ಬೋಟ್‌ನಲ್ಲಿದ್ದ 31 ಮೀನುಗಾರರು ಅಪಾಯದಲ್ಲಿದ್ದರು.

    ಸಮುದ್ರ ತಟದಿಂದ 100 ನಾಟಿಕಲ್ ಮೈಲ್ಸ್ ದೂರುದಲ್ಲಿ ಬೋಟ್ ಅಪಾಯಕ್ಕೆ ಸಿಲುಕಿತ್ತು. ಆಳ‌ ಸಮುದ್ರದಲ್ಲಿ ಅಪಾಯದಲ್ಲಿದ್ದ ಬೋಟನ್ನು ಕೋಸ್ಟ್ ಗಾರ್ಡ್‌ನ ಡೋನಿಯರ್ ಗಸ್ತು ವಿಮಾನ ಪತ್ತೆ ಮಾಡಿತ್ತು. ಮೀನುಗಾರಿಕಾ ಬೋಟ್ ಬಗ್ಗೆ ಕಡಲಲ್ಲಿ ಗಸ್ತು ತಿರುಗುತ್ತಿದ್ದ ICGS ಕಸ್ತೂರ ಬಾ ಗಾಂಧಿ ಹಡಗಿಗೆ ಮಾಹಿತಿ ರವಾನಿಸಿತು. ಇದನ್ನೂ ಓದಿ: ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರದಿಂದ ಕತ್ತಲೆ ಭಾಗ್ಯ – ಸ್ಥಳೀಯರ ಆಕ್ರೋಶ

    ಪ್ರತಿಕೂಲ ಹವಾಮಾನ ನಡುವೆ ಕಾರ್ಯಾಚರಣೆ ನಡೆಸಿದ ಭಾರತೀಯ ತಟ ರಕ್ಷಣಾ ಪಡೆಯ ಯೋಧರು, ಅಪಾಯದಲ್ಲಿ ಮೀನುಗಾರರನ್ನು ರಕ್ಷಿಸಿದರು. ಹಾನಿಗೊಂಡಿದ್ದ ಮೀನುಗಾರಿಕಾ ಬೋಟನ್ನು ಹೊನ್ನಾವರ ಮೀನುಗಾರಿಕಾ ಬಂದರಿಗೆ ಎಳೆತಂದು ನಿಲ್ಲಿಸಿದರು.

  • ಮಹಾರಾಷ್ಟ್ರದಲ್ಲಿ ದೋಣಿ ಮುಳುಗಿ ಮೂವರು ಮೀನುಗಾರರು ನಾಪತ್ತೆ

    ಮಹಾರಾಷ್ಟ್ರದಲ್ಲಿ ದೋಣಿ ಮುಳುಗಿ ಮೂವರು ಮೀನುಗಾರರು ನಾಪತ್ತೆ

    ಮುಂಬೈ: ಅರಬ್ಬಿ ಸಮುದ್ರದಲ್ಲಿ (Arabian Sea) ಮೀನುಗಾರರನ್ನು (Fisherman) ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿ (Boat Capsized) ಮೂವರು ನಾಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ (Maharashtra) ರಾಯಗಢ (Raigad) ಜಿಲ್ಲೆಯಲ್ಲಿ ನಡೆದಿದೆ.

    ದೋಣಿ ಖಾಂಡೇರಿಯಿಂದ ಅಲಿಬಾಗ್ ಬಳಿಯ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ದೋಣಿ ಮಗುಚಿದೆ. ಕೂಡಲೇ ಎಚ್ಚೆತ್ತ ಮೀನುಗಾರರು ನೀರಿಗೆ ಹಾರಿದ್ದಾರೆ. 8 ಮಂದಿ ಮೀನುಗಾರರ ಪೈಕಿ 5 ಮಂದಿ ಈಜಿಕೊಂಡು ದಡ ಸೇರಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಳೆಯಬ್ಬರ – ಪಾಯ ಕುಸಿದು ಪಕ್ಕಕ್ಕೆ ವಾಲಿದ 4 ಅಂತಸ್ತಿನ ಕಟ್ಟಡ

    ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ನಾಪತ್ತೆಯಾಗಿರುವ ಮೂವರು ಮೀನುಗಾರರನ್ನು ಪತ್ತೆಹಚ್ಚಲು ಪೊಲೀಸರು ಮತ್ತು ಸ್ಥಳೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಜೊತೆಗೆ ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿದೆ. ಇನ್ನು ಈಜಿ ದಡ ಸೇರಿದ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ: ಭಾರತ-ಪಾಕ್‌ನಂತೆಯೇ ಥಾಯ್ಲೆಂಡ್‌-ಕಾಂಬೋಡಿಯಾ ಯುದ್ಧ ನಿಲ್ಲಿಸಿದ್ದು ನಾನೇ: ಟ್ರಂಪ್‌

  • ಕರಾವಳಿಯಲ್ಲಿ `OP TRIGGER’ ಆಪರೇಷನ್ – ಕಡಲಿನಲ್ಲಿ ಕಟ್ಟೆಚ್ಚರ

    ಕರಾವಳಿಯಲ್ಲಿ `OP TRIGGER’ ಆಪರೇಷನ್ – ಕಡಲಿನಲ್ಲಿ ಕಟ್ಟೆಚ್ಚರ

    ಕಾರವಾರ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ರಾಜ್ಯದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಕರಾವಳಿ ಭಾಗಗಳಲ್ಲಿ ಹದ್ದಿನ ಕಣ್ಣಿರಿಸಿರುವ ಇಂಡಿಯನ್ ನೇವಿ, ಇಂಡಿಯನ್ ಕೋಸ್ಟ್ ಗಾರ್ಡ್‌ ಹಾಗೂ ಕೋಸ್ಟಲ್ ಪೊಲೀಸರು ಕೂಮಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

    ʻOP TRIGGERʼ ಹೆಸರಿನಲ್ಲಿ ಆಪರೇಷನ್ ನಡೆಸ್ತಿರುವ ಇಂಡಿಯನ್ ನೇವಿ, ಇಂಡಿಯನ್ ಕೋಸ್ಟ್ ಗಾರ್ಡ್‌ ಹಾಗೂ ಕೋಸ್ಟಲ್ ಪೊಲೀಸರು ಅರಬ್ಬಿ ಸಮುದ್ರ ಭಾಗದಲ್ಲಿ ತಪಾಸಣೆ ನಡೆಸುತಿದ್ದಾರೆ.

    ದೇಶದ ಆಂತರಿಕ ಭದ್ರತೆ ಹಿನ್ನಲೆಯಲ್ಲಿ ಸಮುದ್ರದಲ್ಲಿರುವ ಸಾಗುವ ಪ್ರತಿ ಬೋಟುಗಳು ಹಾಗೂ ಬಂದರುಗಳಲ್ಲಿರುವ ಬೋಟುಗಳು, ಕಾರ್ಮಿಕರ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕುತಿದ್ದಾರೆ. ಯಾವುದೇ ಉಗ್ರರು ರಾಜ್ಯದ ಕರಾವಳಿಯ ಮೂಲಕ ದೇಶಕ್ಕೆ ಎಂಟ್ರಿಕೊಡಬಾರದು ಎಂಬ ಉದ್ದೇಶದಿಂದ ತಪಾಸಣೆ ಚುರುಕುಗೊಳಿಸಲಾಗಿದೆ. ಇದನ್ನೂ ಓದಿ: ಮರ ಬಿದ್ದು ಮೃತಪಟ್ಟಿದ್ದ ಆಟೋ ಚಾಲಕನ ಅಂತ್ಯಸಂಸ್ಕಾರ – ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹೇಶ್

    ಅತಿ ಸೂಕ್ಷ್ಮ ಪ್ರದೇಶವಾಗಿರುವ ಕಾರವಾರದ ನೌಕಾನೆಲೆ ಹಾಗೂ ಕೈಗಾ ಅಣುವಿದ್ಯುತ್ ಸ್ಥಾವರದ ಸುತ್ತಮುತ್ತಲೂ ಭಿಗಿ ಭದ್ರತೆ ನೀಡಲಾಗಿದೆ. ಜೊತೆಗೆ ತೀರ ಪ್ರದೇಶಗಳಲ್ಲಿ ಡ್ರೋನ್‌ಗಳನ್ನು ಕೂಡ ಬಳಸಿ ಪರಿಶೀಲನೆ‌ ನಡೆಸಲಾಗುತ್ತಿದೆ. ಇನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಪ್ರತಿದಿನ ಕೂಮಿಂಗ್ ಕಾರ್ಯಾಚರಣೆಯನ್ನು ಹೆಚ್ಚಿಸಿದ್ದು ಮೀನುಗಾರರಿಗೆ ಯಾರೇ ಅನುಮಾನಸ್ಪದ ಬೋಟುಗಳು ಅರಬ್ಬಿ ಸಮುದ್ರದಲ್ಲಿ ಕಂಡಲ್ಲಿ ತಕ್ಷಣ ಮಾಹಿತಿ ನೀಡಲು ತಿಳಿಸಾಗಿದೆ.  ಇದನ್ನೂ ಓದಿ: ಪಾಕ್ ಯುವತಿಯನ್ನು ಮದ್ವೆಯಾಗಿ ಕೆಲಸ ಕಳೆದುಕೊಂಡ ಸಿಆರ್‌ಪಿಎಫ್‌ ಯೋಧ!

  • ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಭಾರತೀಯ ನೌಕಾಪಡೆ ಜಲಾಂತರ್ಗಾಮಿ – ಇಬ್ಬರು ಮೀನುಗಾರರು ನಾಪತ್ತೆ

    ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಭಾರತೀಯ ನೌಕಾಪಡೆ ಜಲಾಂತರ್ಗಾಮಿ – ಇಬ್ಬರು ಮೀನುಗಾರರು ನಾಪತ್ತೆ

    ನವದೆಹಲಿ: 13 ಮಂದಿ ಸಿಬ್ಬಂದಿಯೊಂದಿಗೆ ಭಾರತೀಯ ಮೀನುಗಾರಿಕಾ ಹಡಗು ಗೋವಾ ಕರಾವಳಿಯ ಬಳಿ ಭಾರತೀಯ ನೌಕಾ ಜಲಾಂತರ್ಗಾಮಿ ನೌಕೆಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರು ಹಡಗುಗಳು ಮತ್ತು ವಿಮಾನಗಳನ್ನು ನಿಯೋಜಿಸಿರುವ ಭಾರತೀಯ ನೌಕಾಪಡೆಯು ಬೃಹತ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. 11 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಇಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ.

    ಗೋವಾ ಕರಾವಳಿಯಿಂದ 70 ನಾಟಿಕಲ್ ಮೈಲು ದೂರದಲ್ಲಿ ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆಗೆ ಮಾರ್ಥೋಮಾ ಡಿಕ್ಕಿ ಹೊಡೆದಿದೆ ಎಂದು ರಕ್ಷಣಾ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

    ಉಳಿದ ಇಬ್ಬರಿಗಾಗಿ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ. ಮಾರಿಟೈಮ್ ಪಾರುಗಾಣಿಕಾ ಸಮನ್ವಯ ಕೇಂದ್ರ ಮುಂಬೈ (ಎಂಆರ್‌ಸಿಸಿ)ನೊಂದಿಗೆ ಸಮನ್ವಯಗೊಳಿಸಲಾಗುತ್ತಿದೆ. ಘಟನೆಗೆ ಕಾರಣ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    ಸ್ಕಾರ್ಪೀನ್-ವರ್ಗದ ಜಲಾಂತರ್ಗಾಮಿ ನೌಕೆಗಳು ಹಿಂದೂ ಮಹಾಸಾಗರದಲ್ಲಿ ಭಾರತದ ನೌಕಾ ಶಕ್ತಿಯ ಪ್ರಮುಖ ಭಾಗವಾಗಿದೆ. ಏಕೆಂದರೆ ಜಲಾಂತರ್ಗಾಮಿ ವಿರೋಧಿ ಯುದ್ಧ, ಗುಪ್ತಚರ, ಪ್ರದೇಶದ ಕಣ್ಗಾವಲು ಸೇರಿದಂತೆ ಬಹುವಿಧದ ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು.

  • ಅಬ್ಬರದ ಮಳೆಗೆ ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ – 4 ಮಂದಿ ಮೀನುಗಾರರ ರಕ್ಷಣೆ

    ಅಬ್ಬರದ ಮಳೆಗೆ ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ – 4 ಮಂದಿ ಮೀನುಗಾರರ ರಕ್ಷಣೆ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿ ಭಾಗದಲ್ಲಿ ಅಬ್ಬರದ ಗಾಳಿ ಜೊತೆ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಭಟ್ಕಳದಲ್ಲಿ (Bhatkal) ಅರಬ್ಬಿ ಸಮುದ್ರದಲ್ಲಿ (Arabian Sea) ಮೀನುಗಾರಿಕೆಗೆ (Fishing) ತೆರಳಿದ್ದ ಬೋಟ್ ಮುಳುಗಡೆಯಾಗಿದೆ.

    ಅಬ್ಬರದ ಮಳೆಗೆ ಓಂ ಗಣೇಶ್ ಹೆಸರಿನ ಮಹಾದೇವ ಖಾರ್ವಿ ಎಂಬವರಿಗೆ ಸೇರಿದ ಬೋಟ್ (Boat) ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ ನಾಲ್ಕು ಜನ ಮೀನುಗಾರರನ್ನು (Fishermen) ರಕ್ಷಣೆ ಮಾಡಲಾಗಿದೆ. ಘಟನೆಯಿಂದ ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ಇದನ್ನೂ ಓದಿ: ನನ್ನ ಹೇಳಿಕೆಯಿಂದ ನೇಹಾ ಪೋಷಕರಿಗೆ ಬೇಸರವಾಗಿದ್ದರೆ ವಿಷಾದವಿರಲಿ: ಪರಮೇಶ್ವರ್

    ಕರಾವಳಿ ಭಾಗದ ಕಾರವಾರ, ಅಂಕೋಲ, ಕುಮಟಾ, ಭಟ್ಕಳ ಭಾಗದಲ್ಲಿ ಗುಡುಗು ಸಹಿತ ಮಳೆ ಪ್ರಾರಂಭವಾಗಿದ್ದು, ಬಿಸಿಲಿನ ಅಬ್ಬರಕ್ಕೆ ಇದೇ ಮೊದಲ ಬಾರಿಗೆ ವರುಣ ಕರಾವಳಿ ಭಾಗದಲ್ಲಿ ತಂಪೆರೆದಿದ್ದಾನೆ. ಇದನ್ನೂ ಓದಿ: ನನ್ನ ಮಗ ತಪ್ಪು ಮಾಡಿದ್ದಾನೆ.. ಅವನಿಗೆ ಶಿಕ್ಷೆ ಆಗಲೇಬೇಕು: ಕೊಲೆಗಾರ ಫಯಾಜ್‌ ತಾಯಿ ಕಣ್ಣೀರು

  • ಅರಬ್ಬಿ ಸಮುದ್ರದಲ್ಲಿ 26 ಜನ ಮೀನುಗಾರರ ರಕ್ಷಣೆ

    ಅರಬ್ಬಿ ಸಮುದ್ರದಲ್ಲಿ 26 ಜನ ಮೀನುಗಾರರ ರಕ್ಷಣೆ

    ಕಾರವಾರ: ಎಂಜಿನ್ ಸಮಸ್ಯೆಯಿಂದ ಅರಬ್ಬಿ ಸಮುದ್ರದಲ್ಲಿ (Arabian Sea) ದಾರಿ ತಪ್ಪಿದ್ದ ಬೋಟನ್ನು (Boat) ಸುರಕ್ಷಿತವಾಗಿ ಕೋಸ್ಟ್ ಗಾರ್ಡ್ (Coast Guard) ಸಿಬ್ಬಂದಿ ಕಾರವಾರದ (Karwar) ವಾಣಿಜ್ಯ ಬಂದರಿಗೆ ಕರೆತಂದಿದ್ದಾರೆ.

    ಗೋವಾ ಮೂಲದ ಕ್ರಿಸ್ಟೋ ರೇ ಹೆಸರಿನ ಮೀನುಗಾರಿಕಾ ಬೋಟ್ ಇದಾಗಿದ್ದು, ಇದರಲ್ಲಿದ್ದ 26 ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. 3 ಕನ್ನಡಿಗರು ಸೇರಿ 26 ಮಂದಿ ಕಾರ್ಮಿಕರಿದ್ದ ಮೀನುಗಾರಿಕಾ ಬೋಟ್ ಇದಾಗಿದ್ದು, ಗೋವಾದ ಪಣಜಿ ಮೂಲಕ ಅಂಕೋಲ ತಾಲೂಕಿನ ಬೇಲಿಕೇರಿ ಬಂದರು ಬಳಿ ಮೀನುಗಾರಿಕೆ ನಡೆಸುತಿತ್ತು. ಈ ವೇಳೆ ಎಂಜಿನ್ ಸಮಸ್ಯೆಯಾಗಿ 30 ನಾಟಿಕಲ್ ಮೈಲು ದೂರದವರೆಗೆ ಬೋಟ್ ತೇಲಿ ಹೋಗಿದೆ. ಇದನ್ನೂ ಓದಿ: 9 ಸಾವಿರ ಸಾರಿಗೆ ಸಿಬ್ಬಂದಿ ನೇಮಕ: ರಾಮಲಿಂಗಾರೆಡ್ಡಿ

    ಇನ್ನು ಬಾಹ್ಯ ಸಂಪರ್ಕ ಕಡಿದುಹೋದ ಹಿನ್ನೆಲೆ 4 ದಿನ ಸಮುದ್ರದಲ್ಲೇ ಕಾಲ ಕಳೆದ ಮೀನುಗಾರರು ಬೇರೆ ಬೋಟು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ ಸಂಕಷ್ಟದಲ್ಲಿದ್ದರು. ಇಂದು ಬೆಳಗ್ಗೆ ಬೋಟಿನ ಲೋಕೇಶನ್ ಪತ್ತೆಹಚ್ಚಿದ ಕೋಸ್ಟ್‌ಗಾರ್ಡ್‌ನವರು ಮೀನುಗಾರರನ್ನು ಸಂಪರ್ಕಿಸಿ ಸ್ಥಳೀಯ ಮೀನುಗಾರರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ ಹಾಳಾಗಿದ್ದ ಬೋಟ್ ಅನ್ನು ಮತ್ತೊಂದು ಮೀನುಗಾರಿಕಾ ಬೋಟ್ ಸಹಾಯದಿಂದ ಕಾರವಾರದ ವಾಣಿಜ್ಯ ಬಂದರಿಗೆ ಕರೆತರಲಾಗಿದೆ. ಇದನ್ನೂ ಓದಿ: ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ – ತಿದ್ದುಪಡಿ ಮಸೂದೆ ಮಂಡನೆ : ಏನು ಬದಲಾವಣೆ?

  • ಶ್ರೀಲಂಕಾ ನೌಕಾಪಡೆಯಿಂದ 37 ಭಾರತೀಯ ಮೀನುಗಾರರ ಬಂಧನ – 5 ದೋಣಿಗಳು ವಶ

    ಶ್ರೀಲಂಕಾ ನೌಕಾಪಡೆಯಿಂದ 37 ಭಾರತೀಯ ಮೀನುಗಾರರ ಬಂಧನ – 5 ದೋಣಿಗಳು ವಶ

    ಕೊಲಂಬೊ: ಶ್ರೀಲಂಕಾ ನೌಕಾಪಡೆಯು (Sri Lanka Navy) ಭಾನುವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 37  ಭಾರತೀಯ ಮೀನುಗಾರರನ್ನು (Indian Fishermen) ಬಂಧಿಸಿದ್ದು, ಐದು ದೋಣಿಗಳನ್ನು (Boat) ವಶಪಡಿಸಿಕೊಂಡಿದೆ.

    ಗೌಪ್ಯ ಮೂಲಗಳ ಪ್ರಕಾರ, ಶ್ರೀಲಂಕಾದ ನೀರಿನಲ್ಲಿ ಚೀನಾದ ನೌಕಾಪಡೆಯ ಬೇಹುಗಾರಿಕಾ ಹಡಗು ಲಂಗರು ಹಾಕಿದ ನಂತರ ನೌಕಾಪಡೆಯು ಗಸ್ತು ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಮೊದಲನೇ ಪ್ರಕರಣದಲ್ಲಿ ತಲೈಮನ್ನಾರ್ ಬಳಿ ಮೀನುಗಾರಿಕೆ ನಡೆಸುತ್ತಿದ್ದ ರಾಮೇಶ್ವರಂನ (Rameswaram) 23 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸುತ್ತುವರಿದಿವೆ. ನಂತರ ಅವರನ್ನು ಬಂಧಿಸಿದ್ದು, ಅವರ ಮೂರು ದೋಣಿಗಳನ್ನು ತಲೈಮನ್ನಾರ್ ನೌಕಾ ಶಿಬಿರಕ್ಕೆ ಕರೆದೊಯ್ಯುವ ಮೊದಲು ವಶಪಡಿಸಿಕೊಳ್ಳಲಾಯಿತು. ಇದನ್ನೂ ಓದಿ: ಹಾಟ್‍ಟಬ್‍ನಲ್ಲಿ ನಟ ಶವವಾಗಿ ಪತ್ತೆ

    ಮತ್ತೊಂದು ಘಟನೆಯಲ್ಲಿ ನೆಡುಂತೀವು ಬಳಿ 14 ಮೀನುಗಾರರನ್ನು ಬಂಧಿಸಲಾಗಿದ್ದು, ಅವರ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಅವರನ್ನು ಮಾಯಿಲಟ್ಟಿ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಅಕ್ಟೋಬರ್ 14 ರಿಂದ, ಶ್ರೀಲಂಕಾ ನೌಕಾಪಡೆಯು 64 ಮೀನುಗಾರರನ್ನು ಬಂಧಿಸಿದೆ ಮತ್ತು ಪ್ರತ್ಯೇಕ ಘಟನೆಗಳಲ್ಲಿ 10 ದೋಣಿಗಳನ್ನು ವಶಪಡಿಸಿಕೊಂಡಿದೆ. ಇದನ್ನೂ ಓದಿ: ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಅವಘಡ – 32 ಮಂದಿ ಸಜೀವ ದಹನ
    ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಶನಿವಾರ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರಿಗೆ ಪತ್ರ ಬರೆದಿದ್ದು, ಮಾಲ್ಡೀವ್ಸ್ ಕೋಸ್ಟ್ ಗಾರ್ಡ್ ವಶದಲ್ಲಿರುವ 12 ಮೀನುಗಾರರನ್ನು ಮತ್ತು ಅವರ ಮೀನುಗಾರಿಕಾ ದೋಣಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಗುಂಡಿನ ದಾಳಿ ನಡೆಸಿದ್ದ ಶೂಟರ್ 2 ದಿನಗಳ ಬಳಿಕ ಶವವಾಗಿ ಪತ್ತೆ
    ಅಕ್ಟೋಬರ್ 1 ರಂದು ತೂತುಕುಡಿ ಜಿಲ್ಲೆಯಿಂದ ಮೀನುಗಾರಿಕೆಗೆ ತೆರಳಿದ ಮೀನುಗಾರರನ್ನು ಅಕ್ಟೋಬರ್ 23 ರಂದು ಬಂಧಿಸಲಾಯಿತು ಎಂದು ಪತ್ರದಲ್ಲಿ ಸ್ಟಾಲಿನ್ ಉಲ್ಲೇಖಿಸಿದ್ದಾರೆ. ಅವರನ್ನು ಬಿಡುಗಡೆ ಮಾಡಲು ಮಾಲ್ಡೀವ್ಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವಂತೆ ಜೈಶಂಕರ್ ಅವರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ದಾಳಿ ನಡೆಸಿ ಹಮಾಸ್‌ ಕಮಾಂಡರ್‌ ಹತ್ಯೆ; 36 ಮಂದಿ ಬಂಧಿಸಿದ ಇಸ್ರೇಲ್‌ ರಕ್ಷಣಾ ಪಡೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರ ರಕ್ಷಣೆ

    ಬಂಗಾಳಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರ ರಕ್ಷಣೆ

    ನವದೆಹಲಿ: ಮೀನುಗಾರಿಕೆಂದು (Fishing) ತೆರಳಿ ಬಂಗಾಳಕೊಲ್ಲಿಯಲ್ಲಿ (Bay Of Bengal) ಸಿಲುಕಿಕೊ0ಡಿದ್ದ 36 ಭಾರತೀಯ ಮೀನುಗಾರರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

    ಭಾರತೀಯ ನೌಕಾ ಹಡಗು (INS) ಖಂಜಾರ್ ಮೂಲಕ ತಮಿಳುನಾಡು ಕರಾವಳಿಯಿಂದ 130 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್ ತಿಳಿಸಿದ್ದಾರೆ. ಇದನ್ನೂ ಓದಿ: ಪಟಾಕಿ ಗೋದಾಮಿನಲ್ಲಿ ಸ್ಫೋಟ – ಒಂದೇ ಕುಟುಂಬದ ನಾಲ್ವರು ಸೇರಿ 9 ಮಂದಿ ಸಾವು

    ಮೀನುಗಾರರು 3 ಮೀನುಗಾರಿಕಾ ಹಡಗುಗಳಲ್ಲಿ ತೆರಳಿದ್ದು, 30 ಗಂಟೆಗಳ ಕಾರ್ಯಾಚರಣೆಯ ಮೂಲಕ ಮೀನುಗಾರರನ್ನು ಅಪಾಯದಿಂದ ಪಾರು ಮಾಡಲಾಗಿದೆ. ಖಂಜಾರ್ ನೌಕೆ ಸಮುದ್ರದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ತಮಿಳುನಾಡು (Tamil Nadu) ಕರಾವಳಿಯಿಂದ ಸರಿಸುಮಾರು 130 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮೂರು ಮೀನುಗಾರಿಕಾ ಹಡಗುಗಳಾದ ಶಬರನಾಥನ್, ಕಲೈವಾಣಿ ಮತ್ತು ಮಿಸಾಮಿ ಪತ್ತೆಯಾಗಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ CBI

    36 ಮೀನುಗಾರರು  ಮೂರು ಹಡಗುಗಳಲ್ಲಿ ತಮಿಳುನಾಡಿನ ನಾಗಪಟ್ಟಣದಿಂದ ತೆರಳಿದ್ದ ವೇಳೆ ಹಡಗಿನ ಇಂಧನ ಖಾಲಿಯಾಗಿದ್ದಲ್ಲದೇ ಪ್ರತಿಕೂಲ ಹವಾಮಾನ ಹಾಗೂ ಎಂಜಿನ್ ಸ್ಥಗಿತಗೊಂಡ ಕಾರಣ ಎರಡು ದಿನಗಳಿಂದ ಸಮುದ್ರದಲ್ಲಿ ಸಿಲುಕಿಕೊಂಡಿದ್ದರು ಎಂದು ಕಮಾಂಡರ್ ಮಧ್ವಲ್ ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರಿ ಉದ್ಯೋಗಕ್ಕೆ ತರಬೇತಿ ನಡೆಸಿದ್ದ ಯುವತಿ -‌ ಕೊಲೆಗೆ 3 ದಿನಗಳ ಹಿಂದೆಯೇ ಸ್ಕೆಚ್‌ ಹಾಕಿದ್ದ ಪಾಪಿ ಪ್ರೇಮಿ!

    ಪ್ರತಿಕೂಲ ಹವಾಮಾನದ ನಡುವೆಯೂ 30 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮೀನುಗಾರರನ್ನು ಸುರಕ್ಷಿತವಾಗಿ ಚೆನ್ನೈ ಬಂದರಿಗೆ ಕರೆತರಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮರನಾಥ ಯಾತ್ರೆ ಮುಗಿಸಿ ವಾಪಸ್ ಆಗ್ತಿದ್ದ ಬಸ್ ಅಪಘಾತ – ಐವರ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2ನೇ ಬ್ಯಾಚ್ – ಮತ್ತೆ 200 ಭಾರತದ ಮೀನುಗಾರರು ಪಾಕ್ ಜೈಲಿನಿಂದ ಬಿಡುಗಡೆ

    2ನೇ ಬ್ಯಾಚ್ – ಮತ್ತೆ 200 ಭಾರತದ ಮೀನುಗಾರರು ಪಾಕ್ ಜೈಲಿನಿಂದ ಬಿಡುಗಡೆ

    ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ (Pakistan) ಸೇರಿದ ಸಮುದ್ರದಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡಿರುವ ಆರೋಪದ ಮೇಲೆ ಬಂಧಿತರಾಗಿರುವ 200 ಭಾರತೀಯ ಮೀನುಗಾರರನ್ನು (Fishermen) ಗುರುವಾರ ಕರಾಚಿಯ ಜಿಲ್ಲಾ ಕಾರಾಗೃಹದಿಂದ (Jail) ಬಿಡುಗಡೆ ಮಾಡಲಾಗುತ್ತಿದೆ.

    ಇದು ಇತ್ತೀಚೆಗೆ ಪಾಕಿಸ್ತಾನದ ಕಾರಾಗೃಹದಿಂದ ಬಿಡುಗಡೆ ಮಾಡಲಾಗುತ್ತಿರುವ ಮೀನುಗಾರರ 2ನೇ ಬ್ಯಾಚ್ ಆಗಿದೆ. ಬಂಧಿತ ಮೀನುಗಾರರನ್ನು ವಾಘಾ ಗಡಿಯ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

    ಮೇ 12 ರಂದು 198 ಭಾರತೀಯ ಮೀನುಗಾರರನ್ನು ಮಲಿರ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆರಂಭದಲ್ಲಿ 200 ಮೀನುಗಾರರನ್ನು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಅವರಲ್ಲಿ ಇಬ್ಬರು ಬಿಡುಗಡೆಗೆ ಕೆಲವೇ ದಿನ ಬಾಕಿಯಿದ್ದಾಗ ಜೈಲಿನಲ್ಲಿಯೇ ಸಾವನ್ನಪ್ಪಿದ್ದರು. ಮೇ 6 ರಂದು ಜುಲ್ಫಿಕರ್ ಹಾಗೂ ಮೇ 9 ರಂದು ಸೋಮ ದೇವ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕಾವೇರಿ ನಿವಾಸವನ್ನು ತೊರೆದ ಯಡಿಯೂರಪ್ಪ- ಸಿಎಂಗಳಿಗೆ ಇದು ಅದೃಷ್ಟದ ಮನೆ ಯಾಕೆ?

    ಜುಲೈ 3 ರಂದು 100 ಭಾರತೀಯ ಮೀನುಗಾರರ 3ನೇ ಬ್ಯಾಚ್ ಅನ್ನು ಪಾಕಿಸ್ತಾನದ ಜೈಲಿನಿಂದ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಇದನ್ನೂ ಓದಿ: 20 ಟನ್ ಅಕ್ಕಿ ಕದ್ದೊಯ್ದ ಪ್ರಕರಣ – ಕಳುವಾದ ಲಾರಿಯಲ್ಲಿ ಇರಲೇ ಇಲ್ಲ GPS

  • ಐಎಎಸ್ ಅಧಿಕಾರಿಯನ್ನೇ ಒತ್ತೆಯಾಳಾಗಿ ಇರಿಸಿ, ಥಳಿಸಿದ ಜನಸಮೂಹ

    ಐಎಎಸ್ ಅಧಿಕಾರಿಯನ್ನೇ ಒತ್ತೆಯಾಳಾಗಿ ಇರಿಸಿ, ಥಳಿಸಿದ ಜನಸಮೂಹ

    ಗಾಂಧಿನಗರ: ಐಎಎಸ್ ಅಧಿಕಾರಿಯೊಬ್ಬರನ್ನು (IAS officer) ಜನಸಮೂಹವೊಂದು ಒತ್ತೆಯಾಳಾಗಿ (Hostage) ಇರಿಸಿ ಥಳಿಸಿರುವ ಘಟನೆ ಗುಜರಾತ್‌ನಲ್ಲಿ (Gujarat) ನಡೆದಿದೆ.

    ಗುಜರಾತ್‌ನ ಐಎಎಸ್ ಅಧಿಕಾರಿ ನಿತಿನ್ ಸಾಂಗ್ವಾನ್ (Nitin Sangwan) ಅವರು ಸಬರ್‌ಕಾಂತ್ ಜಿಲ್ಲೆಯ ಘರೋಯ್ ಅಣೆಕಟ್ಟಿನ ಬಳಿಯ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ಮೀನುಗಾರಿಕೆಯಲ್ಲಿ ತೊಡಗಿದ್ದ ಗುಂಪೊಂದು ಅವರನ್ನು ಒತ್ತೆಯಾಳಾಗಿ ಇರಿಸಿ, ಥಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    CRIME 2

    ವರದಿಗಳ ಪ್ರಕಾರ ಮೀನುಗಾರಿಕೆ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆ ಐಎಎಸ್ ಅಧಿಕಾರಿಯನ್ನು ಜನರ ಗುಂಪು ಒತ್ತೆಯಾಳಾಗಿ ಇರಿಸಿ ಥಳಿಸಿದೆ ಎನ್ನಲಾಗಿದೆ.

    ಮೀನುಗಾರಿಕಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಂಗ್ವಾನ್ ಅವರು ಸೋಮವಾರ ತಮ್ಮ ಅಧೀನ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮೀನುಗಾರಿಕೆಯಲ್ಲಿ ತೊಡಗಿದ್ದವರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ತಮ್ಮ ಜೊತೆಗಿದ್ದ ಸಿಬ್ಬಂದಿ ಹಲ್ಲೆಯಲ್ಲಿ ಗಾಯಗೊಂಡಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    KILLING CRIME

    ಸಾಂಗ್ವಾನ್ ಅವರು ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಮೀನುಗಾರಿಕಾ ಗುತ್ತಿಗೆದಾರರಲ್ಲಿ ಒಬ್ಬರಾದ ಬಾಬು ಪರ್ಮಾರ್ ಪ್ರಮುಖ ಆರೋಪಿ. ಸಾಂಗ್ವಾನ್ ಸ್ಥಳಕ್ಕೆ ಭೇಟಿ ನೀಡಿದ್ದಾಗ ಆತ ವಾಗ್ವಾದ ಪ್ರಾರಂಭಿಸಿದ್ದಾನೆ. ಇದಕ್ಕೆ ಸಾಂಗ್ವಾನ್ ಬಾಬು ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಅಂತರ ಕಾಯ್ದುಕೊಂಡ ನಾರಾಯಣಗೌಡ- ಶಕ್ತಿಪ್ರದರ್ಶನಕ್ಕೆ ಸಿದ್ಧತೆ ನಡೆಸ್ತಿದ್ದಾರಾ ಸಚಿವರು?

    ಈ ವೇಳೆ ಕೋಪಗೊಂಡ ಬಾಬು, ಸಾಂಗ್ವಾನ್ ಅವರ ಮೊಣಕಾಲನ್ನು ಕಚ್ಚಿದ್ದಾನೆ. ಬಳಿಕ ಇನ್ನೂ ನಾಲ್ವರು ಅಲ್ಲಿಗೆ ಬಂದು ಐಎಎಸ್ ಅಧಿಕಾರಿಗೆ ಥಳಿಸಿದ್ದಾರೆ. ಬಳಿಕ ಬಾಬು ಇನ್ನೂ 10-12 ಜನರನ್ನು ಕರೆದಿದ್ದು, ಅವರೆಲ್ಲರೂ ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದಾರೆ. ಬಳಿಕ ಸಾಂಗ್ವಾನ್ ಅವರನ್ನು ಒತ್ತೆಯಾಳಾಗಿ ಇರಿಸಿ, ಥಳಿಸಿದ್ದಾರೆ.

    CRIME

    ತಮ್ಮ ಮೇಲೆ ಪೊಲೀಸ್ ದೂರನ್ನು ನೀಡಬಾರದು ಎಂದು ಜನರ ಗುಂಪು ಸಾಂಗ್ವಾನ್ ಅವರಿಗೆ ಬೆದರಿಕೆ ಹಾಕಿದೆ. ಇದಕ್ಕೆ ಸಾಂಗ್ವಾನ್ ಒಪ್ಪಿದ್ದು, ಕಾಗದದಲ್ಲಿ ಇದನ್ನು ಬರೆದು ಸಹಿಯನ್ನೂ ಹಾಕಿದ್ದಾರೆ. ಬಳಿಕ ಸಾಂಗ್ವಾನ್ ಅವರನ್ನು ಗುಂಪು ಹೋಗಲು ಬಿಟ್ಟಿದೆ.

    ಐಎಎಸ್ ಅಧಿಕಾರಿ ಮೇಲೆ ದಾಳಿ ನಡೆಸಿರುವ ಆರೋಪದ ಮೇಲೆ ಪೊಲೀಸರು ಇದೀಗ ಮೂವರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಎಂಎಫ್ ಹಾಲು ವಿತರಣೆಯಲ್ಲಿ ತೊಂದರೆ- ನಂದಿನಿ ಬೂತ್‍ಗಳಿಗೆ ಅರ್ಧಕರ್ಧ ಸಪ್ಲೈ