Tag: Fishermans

  • ಸಮುದ್ರದಲ್ಲಿ ಕಲ್ಲುಬಂಡೆಗೆ ಮೀನುಗಾರಿಕಾ ದೋಣಿ ಡಿಕ್ಕಿ – ಐವರು ಮೀನುಗಾರರ ರಕ್ಷಣೆ

    ಸಮುದ್ರದಲ್ಲಿ ಕಲ್ಲುಬಂಡೆಗೆ ಮೀನುಗಾರಿಕಾ ದೋಣಿ ಡಿಕ್ಕಿ – ಐವರು ಮೀನುಗಾರರ ರಕ್ಷಣೆ

    ಮಂಗಳೂರು: ಮಂಗಳೂರು (Mangaluru)  ಹೊರವಲಯದ ಉಳ್ಳಾಲ (Ullal) ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದ ದೋಣಿ ಕಲ್ಲುಬಂಡೆಗೆ ಡಿಕ್ಕಿಯಾಗಿ ದೋಣಿಯಲ್ಲಿ (Boat)  ಮುಳುಗುತ್ತಿದ್ದ 5 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

    ಉತ್ತರ ಪ್ರದೇಶದ ಸಮರ ಬಹುದ್ದೂರ್, ರಾಮ್ ಮನೋಜ್, ರೋಹಿತ್, ಪ್ರಕಾಶ್, ವಾಸು ಬೋಟ್‌ನಲ್ಲಿದ್ದ ಮೀನುಗಾರರು. ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಟ್ರಾಲ್‌ಬೋಟ್‌ಗೆ ಕಲ್ಲುಬಂಡೆ ತಾಗಿ ಪ್ರೊಫೈಲರ್ ಸ್ಥಗಿತವಾದ ಕಾರಣ ಅವಘಡ ಸಂಭವಿಸಿದೆ. ಇದನ್ನೂ ಓದಿ:  ಕಾಂಗ್ರೆಸ್ ಸಂಸದನ ದೇಶ ವಿಭಜನೆ ಹೇಳಿಕೆ – ಸೋನಿಯಾ ಗಾಂಧಿ ಭಾರತೀಯರ ಕ್ಷಮೆಯಾಚಿಸಲಿ: ಜೋಶಿ ಆಗ್ರಹ

    ಉಳ್ಳಾಲ ನಿವಾಸಿಯಾದ ನಯನಾ ಪಿ.ಸುವರ್ಣ ಅವರಿಗೆ ಸೇರಿದ ‘ನವಾಮಿ-ಶಿವಾನಿ’ ಎಂಬ ಬೋಟ್ ಮೀನುಗಾರಿಕೆಗೆ ತೆರಳಿ ವಾಪಸ್ಸಾಗುತ್ತಿತ್ತು. ನಯನಾ ಪತಿ ಪ್ರವೀಣ್ ಸುವರ್ಣ ಬೋಟ್ ಅನ್ನು ಚಲಾಯಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಬೋಟ್‌ಗೆ ಕಲ್ಲುಬಂಡೆ ತಾಗಿ ನೀರಿನಲ್ಲಿ ಮುಳುಗುತ್ತಿತ್ತು. ಈ ವೇಳೆ ವಿಷಯ ತಿಳಿದ ಮತ್ತೊಂದು ಬೋಟ್‌ನಲ್ಲಿದ್ದ ರಾಮ ಸುವರ್ಣ ಮತ್ತು ಯತೀಶ್ ಸುವರ್ಣ ಎಂಬವರು ನಾಡದೋಣಿಯಲ್ಲಿ ಬಂದು ಮೂವರನ್ನು ರಕ್ಷಿಸಿದ್ದಾರೆ. ಬಳಿಕ ಪ್ರಕಾಶ್ ಖಾರ್ವಿ ಮಾಲೀಕತ್ವದ ದುರ್ಗಾ ಲಕ್ಷ್ಮಿ ದೋಣಿ ಮತ್ತು ಮನೋಜ್ ಖಾರ್ವಿ ಮಾಲೀಕತ್ವದ ಶ್ರೀಗೌರಿ ದೋಣಿಯ ಮೀನುಗಾರರು ಬಂದು ಉಳಿದ ಇಬ್ಬರ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಸುಮಲತಾರಿಂದ ಅಂತರ ಕಾಯ್ದುಕೊಂಡ್ರಾ ಆಪ್ತ ಸಚ್ಚಿದಾನಂದ?

    ಮುಳುಗಡೆಯಾಗಿರುವ ದೋಣಿಯಲ್ಲಿದ್ದ ಮೀನುಗಳು ಮತ್ತು ಮೀನು ಬಲೆ ಸಮುದ್ರದ ಪಾಲಾಗಿದೆ. ಇದರಿಂದ ಮಾಲೀಕರಿಗೆ ಲಕ್ಷಾಂತರ ರೂಪಾಯಿಯಷ್ಟು ನಷ್ಟವಾಗಿದೆ. ಇದನ್ನೂ ಓದಿ: ಕಲ್ಲು ಹೊಡೆದುಕೊಂಡು ಇದ್ದೋರನ್ನ ಲೋಕಸಭೆಗೆ ಕಳುಹಿಸಿದ್ರೆ ಇನ್ನೇನಾಗುತ್ತೆ: ಡಿ.ಕೆ.ಸುರೇಶ್‌ಗೆ ಹೆಚ್‌ಡಿಕೆ ತಿರುಗೇಟು

  • 43 ತಮಿಳುನಾಡಿನ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

    43 ತಮಿಳುನಾಡಿನ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

    ಚೆನ್ನೈ: ಶ್ರೀಲಂಕಾಕ್ಕೆ ಸೇರಿದ ಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ 43 ತಮಿಳುನಾಡಿನ ಮೀನುಗಾರರನ್ನು ಮತ್ತು ಆರು ದೋಣಿಗಳನ್ನು ಶ್ರೀಲಂಕಾದ ನೌಕಾಪಡೆ ವಶಕ್ಕೆ ಪಡೆದಿದೆ.

    ಶನಿವಾರ ರಾತ್ರಿ ಸಮುದ್ರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ 43 ತಮಿಳುನಾಡಿನ ಮೀನುಗಾರರೊಂದಿಗೆ, 6 ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.

    ಮೀನುಗಾರರು ಡಿಸೆಂಬರ್ 18 ರಂದು 500ಕ್ಕೂ ಹೆಚ್ಚು ದೋಣಿಗಳಲ್ಲಿ ಇಲ್ಲಿಂದ ಹೊರಟ್ಟಿದ್ದು, ಕಚ್ಚತೀವು ದ್ವೀಪದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಅವರಲ್ಲಿ 43 ಮಂದಿಯನ್ನು ಬಂಧಿಸಿ ಆರು ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

    ಬಂಧನದ ನಂತರ ಅವರನ್ನು ಕಂಗೆಸಂತುರೈ ಶಿಬಿರಕ್ಕೆ ಕರೆದೊಯ್ಯಲಾಯಿತು ಎಂದು ಮೀನುಗಾರರ ಸಂಘದ ನಾಯಕ ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

    ಘಟನೆಯ ಬಳಿಕ ರಾಮನಾಥಪುರದ ಸಂಸದ ಕೆ.ನವಾಸ್ ಕಣಿ ಅವರು ಕೇಂದ್ರ ಸಚಿವರೊಂದಿಗೆ ಮಾತಾನಾಡಿ ಮೀನುಗಾರರು ಮತ್ತು ಅವರ ದೋಣಿಗಳ ಬಿಡುಗಡೆಗೆ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

  • ಏಳು ಮೀನುಗಾರರ ನಾಪತ್ತೆ- 1 ಹಡಗಿನ ಮೆಸೇಜ್ ಬಗ್ಗೆ ತನಿಖೆಗಿಳಿದ ಪೊಲೀಸರು

    ಏಳು ಮೀನುಗಾರರ ನಾಪತ್ತೆ- 1 ಹಡಗಿನ ಮೆಸೇಜ್ ಬಗ್ಗೆ ತನಿಖೆಗಿಳಿದ ಪೊಲೀಸರು

    ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಸುವರ್ಣ ತ್ರಿಭುಜ ಬೋಟಲ್ಲಿ ತೆರಳಿದ್ದ ಏಳು ಮಂದಿ ಮೀನುಗಾರರು ಕಣ್ಮರೆಯಾಗಿ ಒಂದು ತಿಂಗಳು ಕಳೆದಿದೆ. ಆದರೆ ಇಲ್ಲಿಯವರೆಗೆ ನಾಪತ್ತೆಯಾದವರ ಬಗ್ಗೆ ಒಂದು ಸುಳಿವು ಕೂಡ ಸಿಕ್ಕಿಲ್ಲ.

    ಡಿಸೆಂಬರ್ 15 ರಂದು ಮಲ್ಪೆಯ `ಸುವರ್ಣ ತ್ರಿಭುಜ’ ಬೋಟು ಸಂಪರ್ಕ ಕಡಿತವಾಗಿತ್ತು. ಬಳಿಕ ಆ ಭಾಗದಲ್ಲಿ ಸಂಚರಿಸಿದ ಎಲ್ಲಾ ಹಡಗುಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಒಂದು ಮೂಲದ ಪ್ರಕಾರ ಆ ಭಾಗದಲ್ಲಿ ಹಾದು ಹೋದ ಹಡಗಿನ ಮೂಲಕ ಒಂದು ವಯರ್ ಲೆಸ್ ಮೆಸೇಜ್ ಹೋಗಿದೆ. ಆ ಮೆಸೇಜಿನಲ್ಲಿ ಬೋಟು ಅಪಘಾತದ ಬಗ್ಗೆ ಪ್ರಸ್ತಾಪವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಆ ಹಡಗು ಯಾವುದು? ಅವರು ನೋಡಿದ ಬೋಟು ಅಪಘಾತ ಯಾವುದು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉಡುಪಿ ಪೊಲೀಸರು ಮಾಲ್ವಾನಲ್ಲಿ ಬೀಡುಬಿಟ್ಟು ತನಿಖೆ ಮುಂದುವರಿಸಿದ್ದು, ಉಡುಪಿ ಎಸ್.ಪಿ ಮಾಲ್ವಾನ್ ಹಾಗೂ ಮಹಾರಾಷ್ಟ್ರದ ದೇವಘಡ ಎಸ್.ಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲಿನ ಮೀನುಗಾರ ಸಂಘಗಳಿಂದ ಸ್ಥಳೀಯ ಪೊಲೀಸ್ ಠಾಣೆಯ ಮೂಲಕ ಮಾಹಿತಿಯನ್ನು ಕೂಡ ಕಲೆ ಹಾಕುತ್ತಿದ್ದಾರೆ.

    ಜಿಲ್ಲೆಯಲ್ಲಿ ಕಳೆದ ಭಾನುವಾರ ಮೀನುಗಾರರ ಪತ್ತೆಗೆ ಬೃಹತ್ ಪ್ರತಿಭಟನೆ ನಡೆಸಿ ಒಂದು ವಾರದ ಗಡುವು ನೀಡಿದ್ದರು. ಈಗ ಮೀನುಗಾರರು ಕೊಟ್ಟ ಸಮಯ ಮುಗಿದಿದೆ. ಆದ್ರೆ ಪೊಲೀಸ್ ತನಿಖೆ ನಿರ್ಣಾಯಕ ಘಟ್ಟದಲ್ಲಿ ಇರುವುದರಿಂದ ಮತ್ತೆ ಮೂರು ದಿನ ಕಾಯಲು ಮೀನುಗಾರರ ಸಂಘಟನೆ ನಿರ್ಧರಿಸಿದೆ. ಸದ್ಯ ಮಹಾರಾಷ್ಟ್ರದ ಮಾಲ್ವಾನಲ್ಲೇ ತನಿಖೆಯನ್ನು ಕೇಂದ್ರೀಕರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಪತ್ತೆಯಾಗಿ 10 ದಿನ ಕಳೆದ್ರೂ ಪತ್ತೆಯಾಗಿಲ್ಲ ಮೀನುಗಾರರು- ಕಡಲಿನಿಂದ್ಲೇ ಅಪಹರಣ ಮಾಡಿದ್ರಾ ಉಗ್ರರು!

    ನಾಪತ್ತೆಯಾಗಿ 10 ದಿನ ಕಳೆದ್ರೂ ಪತ್ತೆಯಾಗಿಲ್ಲ ಮೀನುಗಾರರು- ಕಡಲಿನಿಂದ್ಲೇ ಅಪಹರಣ ಮಾಡಿದ್ರಾ ಉಗ್ರರು!

    ಉಡುಪಿ: ಇಲ್ಲಿನ ಮಲ್ಪೆ ಬಂದರಿನಿಂದ ಆಳಸಮುದ್ರಕ್ಕೆ ಮೀನುಗಾರಿಕೆಗೆ ಹೊರಟಿದ್ದ ಬೋಟ್ ನಾಪತ್ತೆಯಾಗಿ ಇಂದಿಗೆ 10 ದಿನ ಕಳೆದರೂ ಮೀನುಗಾರರು ಪತ್ತೆಯಾಗಿಲ್ಲ. ಅರಬ್ಬೀ ಸಮುದ್ರದ ನಡುವಿನಿಂದ ಬೋಟ್ ಸಮೇತ ಮೀನುಗಾರರನ್ನು ಪಾಕಿಸ್ತಾನದ ಉಗ್ರರು ಅಪಹರಣ ಮಾಡಿರಬಹುದು ಎಂಬ ಗುಮಾನಿ ಶುರುವಾಗಿದೆ.

    ಮಲ್ಪೆಯ ಸರ್ವ ಋತು ಬಂದರಿನಲ್ಲಿ ಕಣ್ಣು ಹಾಯಿಸಿದಷ್ಟೂ ಮೀನುಗಾರಿಕಾ ಬೋಟ್‍ಗಳೇ ಕಾಣುತ್ತವೆ. ಆದರೆ ಕಳೆದ ವಾರದಿಂದ ಇಲ್ಲಿ ನೀರವ ಮೌನ ಆವರಿಸಿದೆ. ಇದಕ್ಕೆ ಕಾರಣ ಮಲ್ಪೆ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಎಂಟು ಮಂದಿ ಮೀನುಗಾರರು ಬೋಟು ಸಮೇತ ನಾಪತ್ತೆಯಾಗಿರುವುದು. ಈ ಸಂಬಂಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

    ನಾಪತ್ತೆಯಾದವರಿಗೆ ಮಂಗಳೂರು, ಗೋವಾದ ಕರಾವಳಿ ಕಾವಲು ಪಡೆ ತೀವ್ರ ಶೋಧ ನಡೆಸುತ್ತಿದ್ದರೂ ಮೀನುಗಾರರು ಮಾತ್ರ ಪತ್ತೆಯಾಗಿಲ್ಲ. ಮೀನುಗಾರಿಕೆಗೆ ತೆರೆಳಿದ್ದ ಬೋಟ್ ಗೆ ಅಳವಡಿಸಿದ್ದ ಜಿಪಿಎಸ್ ಸಂಪರ್ಕಕ್ಕೆ ಸಿಗುತ್ತಿಲ್ಲ. 8 ಮೀನುಗಾರರ ಫೋನ್ ಗಳು ಸ್ವಿಚ್ ಆಫ್ ಆಗಿದ್ದು, ಎಲ್ಲಿ ಏನಾಗಿದೆ ಎಂಬ ಮಾಹಿತಿ ಸಿಗುತ್ತಿಲ್ಲ. ಇದರ ನಡುವೆ ಈಗ ಮೀನುಗಾರರನ್ನು ಪಾಕಿಸ್ತಾನದ ಉಗ್ರರು ಅಪಹರಿಸಿರಬಹುದು ಎಂಬ ಅನುಮಾನ ಸೃಷ್ಟಿಯಾಗಿದೆ.

    ಸಾಮಾನ್ಯವಾಗಿ ಆಳಸಮುದ್ರದ ಮೀನುಗಾರಿಕೆಗೆ ತೆರಳುವ ಬೋಟ್‍ಗಳು ಎರಡು ವಾರಗಳ ಕಾಲ ಸಮುದ್ರದಲ್ಲಿರುತ್ತವೆ. ಸುವರ್ಣ ತ್ರಿಭುಜ ಎಂಬ ಬೋಟಿನಲ್ಲಿ ಡಿಸೆಂಬರ್ 13 ರಂದು ರಾತ್ರಿ 11 ಗಂಟೆ ಸುಮಾರಿಗೆ ಹೊರಟ 8 ಮಂದಿ ಡಿಸೆಂಬರ್ 15ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದರು. ನಂತರ ಸಂಪರ್ಕ ಸಿಗದೆ ನಾಪತ್ತೆಯಾಗಿದ್ದಾರೆ. ಮೀನುಗಾರರ ಮುಖಂಡರ ಪ್ರಕಾರ ಒಂದೋ ನಾಪತ್ತೆಯಾದ ಬೋಟ್ ದರೋಡೆಗೆ ಒಳಗಾಗಿರಬಹುದು. ಇಲ್ಲವೇ ಪಾಕಿಸ್ತಾನ ಗಡಿಯ ಭಯೋತ್ಪಾದಕರು ಬೋಟನ್ನು ಹೈಜಾಕ್ ಮಾಡಿರಬಹುದು ಎಂದು ಶಂಕಿಸಲಾಗಿದೆ.

    ಈ ಹಿಂದೆ ಇಂತಹ ಅವಘಡ ಸಂಭವಿಸಿದಾಗ ಮೀನುಗಾರರು ಮೊಬೈಲ್ ಮೂಲಕ ಸಂಪರ್ಕ ಮಾಡಿ ಮಾಹಿತಿ ನೀಡುತ್ತಿದ್ದರು. ಈ ಬಾರಿ ಅಂತಹ ಯಾವುದೇ ಸುಳಿವೂ ಇಲ್ಲದೇ ಇರುವುದು ಮೀನುಗಾರರನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv