Tag: Fish Shop

  • ಬೆಂಗಳೂರಿನಲ್ಲಿ ಪುಂಡರ ಹಾವಳಿ – ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ರೌಡಿ

    ಬೆಂಗಳೂರಿನಲ್ಲಿ ಪುಂಡರ ಹಾವಳಿ – ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ರೌಡಿ

    ಬೆಂಗಳೂರು: ಹಫ್ತಾ ನೀಡಲಿಲ್ಲ ಎನ್ನುವ ಕಾರಣಕ್ಕೆ ರೌಡಿಯೊಬ್ಬ (Rowdy) ಮೀನಿನ ಅಂಗಡಿ (Fish Shop)  ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ಘಟನೆ ಬೆಂಗಳೂರಿನ (Bengaluru) ಬಾಣಸವಾಡಿಯ ಜೈ ಭಾರತ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

    ರೌಡಿ ಸುಜೀತ್ ಎಂಬಾತ ನಿನ್ನೆ ರಾತ್ರಿ ಬಾಣಸವಾಡಿಯ ಜೈ ಭಾರತ್ ನಗರದಲ್ಲಿರುವ ಮೀನಿನ ಅಂಗಡಿ ಬಳಿಬಂದು ಹಫ್ತಾ ಕೇಳಿದ್ದಾನೆ. ಈ ವೇಳೆ ಮೀನಿನ ಅಂಗಡಿ ಸಿಬ್ಬಂದಿ ಹಪ್ತಾ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸುಜೀತ್ ಲಾಂಗ್ ಬೀಸಿ ಪುಂಡಾಟ ಮೆರೆದಿದ್ದಾನೆ. ಇದನ್ನೂ ಓದಿ: ಮಂಗಳೂರಿನಲ್ಲಿ ಬಾಲಕಿಯೊಂದಿಗೆ ಅಸಭ್ಯ ವರ್ತನೆ – ಯುವಕನನ್ನ ಕಂಬಕ್ಕೆ ಕಟ್ಟಿ, ಹಿಗ್ಗಾಮುಗ್ಗ ಥಳಿತ

    ಘಟನೆಯ ಬಳಿಕ ಬಾಣಸವಾಡಿ ಪೊಲೀಸರು ಆರೋಪಿ ಫ್ರೇಜರ್ ಟೌನ್ ನಿವಾಸಿ ಸುಜೀತ್‍ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮೀನಿನ ಅಂಗಡಿ ಮಾಲೀಕ ಮತ್ತು ಸುಜೀತ್ ನಡುವೆ ಹಣದ ವಿಚಾರಕ್ಕೆ ಗಲಾಟೆ ನಡೆದಿತ್ತು. ಹಾಗಾಗಿ ನಿನ್ನೆ ಸುಜೀತ್ ತಲ್ವಾರ್ ಹಿಡಿದು ಅಂಗಡಿಯಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿರುವ ಬಗ್ಗೆ ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಸದಾಶಿವ ಫಿಶ್ ಅಂಗಡಿ ಮಾಲೀಕ ಮನೋಜ್, ಪ್ರತಿದಿನ ಇಲ್ಲಿ ಪುಡಿರೌಡಿಗಳು ಬಂದು ಹಫ್ತಾ ಕೇಳ್ತಾರೆ. ಈತ ಕೂಡ ದಿನಾ ಬಂದು ಹಣ ಕೊಡಿ ಅಂತಾನೆ. ಈ ಹಿಂದೆ ಸಾಕಷ್ಟು ಭಾರಿ ಹಣ ನೀಡಿದ್ದೇವೆ. ನಿನ್ನೆ ಕೂಡ ಬಂದು ಹಣ ನೀಡುವಂತೆ ಗಲಾಟೆ ಮಾಡಿದ್ದಾನೆ. ನಾವು ಹಣ ನೀಡಲಿಲ್ಲ ಅನ್ನೋ ಕಾರಣಕ್ಕೆ ಮಧ್ಯಾಹ್ನದ ವೇಳೆ ಬಂದು ನಮ್ಮ ಸಿಬ್ಬಂದಿ ಬೈಕ್‍ಗಳನ್ನು ಒದ್ದು ಗಲಾಟೆ ಮಾಡಿ ಹೋಗಿದ್ದಾನೆ. ರಾತ್ರಿ ಮತ್ತೆ ಬಂದು ಏಕಾಏಕಿ ಲಾಂಗ್ ಬೀಸಿ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಇಲ್ಲಿ ಪುಡಿ ರೌಡಿಗಳ ಹಾವಳಿ ಜಾಸ್ತಿ ಇದೆ. ಜೀವನ ಮಾಡೋಕೆ ದೂರದ ಊರುಗಳಿಂದ ಬಂದಿದ್ದೀವಿ. ನಮಗೆ ಇಲ್ಲಿ ತುಂಬಾ ತೊಂದರೆ ಆಗುತ್ತಿದೆ. ಪೊಲೀಸರಿಗೆ ಹೇಳಿದ್ರು ಯಾವುದೇ ಪ್ರಯೋಜನ ಇಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ಮಧ್ಯೆ ಮೀನಿಗಾಗಿ ಕ್ಯೂ..!

    ಕೊರೊನಾ ಮಧ್ಯೆ ಮೀನಿಗಾಗಿ ಕ್ಯೂ..!

    ಉಡುಪಿ: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಜನರು ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಈ ಟೈಮ್‍ನಲ್ಲಿ ನಾನ್‍ವೆಜ್ ಪ್ರಿಯರ ಪಾಡು ಕೇಳುವುದೇ ಬೇಡ. ಅದರಲ್ಲೂ ಮೀನಿನೂಟ ಇಲ್ಲದೇ ಬಹುತೇಕ ಕರಾವಳಿಯವರಿಗೆ ಊಟ ಸಪ್ಪೆ ಸಪ್ಪೆ. ಈಗ ಲಾಕ್‍ಡೌನ್ ಎಫೆಕ್ಟ್ ಇರುವ ಹಿನ್ನೆಲೆಯಲ್ಲಿ ಮೀನು ಸಿಗುವುದೆ ಅಪರೂಪ.

    ಮೀನು ಸಿಗುವ ಮೀನಿನಂಗಡಿಯಲ್ಲಿ ಈಗ ಕಿಲೋ ಮೀಟರ್‌ಗಟ್ಟಲೇ ಉದ್ದದ ಕ್ಯೂ ಇರುತ್ತದೆ. ಹೆಬ್ರಿ ಮುದ್ರಾಡಿಯ ಮೀನಿನಂಗಡಿಯಲ್ಲಿ ಪ್ರತಿನಿತ್ಯವೂ ಜನ ಮೀನುಕೊಳ್ಳಲು ಸೋಷಿಯಲ್ ಡಿಸ್ಟೆನ್ಸ್‌ನಲ್ಲಿ ಕಿಲೋ ಮೀಟರ್‌ಗಟ್ಟಲೇ ಕ್ಯೂ ನಿಲ್ಲುತ್ತಾರೆ. ಮೀನು ಬಂದ ಒಂದು ಗಂಟೆಯೊಳಗೆ ಖಾಲಿ ಖಾಲಿಯಾಗುತ್ತದೆ. ಇದನ್ನೂ ಓದಿ: ಲಾಕ್‍ಡೌನ್ ನಡುವೆಯೂ ಸಾಂಪ್ರದಾಯಿಕ ಮೀನುಗಾರಿಕೆ ಪ್ರಾರಂಭ

    ಮೀನಿನಂಗಡಿ ತೆರೆಯುವ ಮುನ್ನವೇ ಗಂಟೆಗಟ್ಟಲೆ ಜನ ಕ್ಯೂನಲ್ಲಿ ಕಾದುನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ಡಿಮ್ಯಾಂಡ್‍ಗೆ ತಕ್ಕಂತೆ ರೇಟ್ ಕೂಡ ಕೊಂಚ ಜಾಸ್ತಿಯಾಗಿದೆ.