Tag: fish market

  • 7 ತಿಂಗಳು ಕಳೆದರೂ ಸ್ಮಾರ್ಟ್, ಹೈಟೆಕ್ ಮೀನು ಮಾರುಕಟ್ಟೆಗೆ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ

    7 ತಿಂಗಳು ಕಳೆದರೂ ಸ್ಮಾರ್ಟ್, ಹೈಟೆಕ್ ಮೀನು ಮಾರುಕಟ್ಟೆಗೆ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ

    – ಹಳ್ಳ ಹಿಡಿದ ಐದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಾರುಕಟ್ಟೆ
    – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಬ್ಬಳ್ಳಿ ಜನರ ಆಕ್ರೋಶ

    ಹುಬ್ಬಳ್ಳಿ: ಸ್ಮಾರ್ಟ್ ಸಿಟಿ(Smart City) ಮಾಡುವ ನಿಟ್ಟಿನಲ್ಲಿ ನೂರಾರು ಕಾಮಗಾರಿಗಳು ನಗರದಲ್ಲಿ ಆರಂಭಗೊಂಡಿವೆ. ಈಗಾಗಲೇ ಇನ್ನೂ ಕೆಲವು ಕಾಮಗಾರಿಗಳು ಮುಗಿದಿವೆ. ಹೀಗೆ ಸ್ಮಾರ್ಟ್ ಸಿಟಿ ಅನುದಾನದಡಿಯಲ್ಲಿ ನಿರ್ಮಾಣಗೊಂಡಿರುವ ಹೈ-ಟೆಕ್ ಫಿಶ್ ಮಾರ್ಕೆಟ್ ಜನರಿಗೆ ಅನುಕೂಲ ಮಾಡುವ ಬದಲು ಅನಾನುಕೂಲ ಮಾಡಿದೆ.

    ಹೌದು. ಸ್ಮಾರ್ಟ್ ಸಿಟಿ ಯೋಜನೆ ಅನುದಾನದಡಿಯಲ್ಲಿ ಹುಬ್ಬಳ್ಳಿ (Hubballi) ನಗರದ ಗಣೇಶ ಪೇಟೆಯಲ್ಲಿ ಸುಮಾರು 5.6 ಕೋಟಿ ವೆಚ್ಚದಲ್ಲಿ ವಿಶ್ವ ದರ್ಜೆಯ ಹೈಟೆಕ್ ಮೀನು ಮಾರುಕಟ್ಟೆ(High Tech Fish Market) ನಿರ್ಮಾಣ ಮಾಡಲಾಗಿದೆ. ಈ ಕಟ್ಟಡ ಕಾಮಗಾರಿ ಮುಕ್ತಾಯಗೊಂಡು ಈಗಾಗಲೇ ಏಳು ತಿಂಗಳು ಕಳೆದಿದ್ದರೂ ಇನ್ನೂ ಇದಕ್ಕೆ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಹೀಗಾಗಿ ಮೀನು ಮಾರುಕಟ್ಟೆಗೆ ತೆರಳುವ ರಸ್ತೆಯಲ್ಲಿಯೇ ಸದ್ಯ ಮೀನು ಮಾರಾಟ ನಡೆಯುತ್ತಿದೆ. ಇದರಿಂದಾಗಿ ಮೀನುಗಳ ಅವಶೇಷಗಳು, ತ್ಯಾಜ್ಯ ನೀರು ಸಂಗ್ರಹವಾಗಿ ಈ ಏರಿಯಾದ ದಾರಿಯಲ್ಲಿ ಸಾಗುವುದೇ ಕಷ್ಟವಾಗಿದೆ. ಪಕ್ಕದ ನಿವಾಸಿಗಳು ವ್ಯಾಪಾರಿಗಳು ಮೂಗು ಮುಚ್ಚಿಕೊಂಡೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.  ಇದನ್ನೂ ಓದಿ: ಅಮ್ಮ ನನ್ನ ಚಾಕ್ಲೇಟ್ ಕದ್ದಿದ್ದು, ಅವಳನ್ನು ಜೈಲಿಗೆ ಹಾಕಿ- ಪೊಲೀಸರಿಗೆ ದೂರು ನೀಡಿದ ಪುಟಾಣಿ

    ಮೀನು ಮಾರಾಟಗಾರರಿಗೆ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಮಾಲಿನ್ಯ ಸಂಸ್ಕರಣಾ ಘಟಕ ಇಲ್ಲದಿರುವುದರಿಂದ ತ್ಯಾಜ್ಯಗಳು ರಾಶಿ ರಾಶಿಯಾಗಿ ಬಿದ್ದುಕೊಂಡು ಸ್ವಚ್ಛತೆಯಿಲ್ಲದಂತಾಗಿದೆ. ಸದ್ಯ ರಸ್ತೆಯಲ್ಲಿಯೇ ಮೀನು ಮಾರಾಟ ಮಾಡುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಇನ್ನೂ ಸತ್ತ ಮೀನುಗಳಿಂದ ಬರುವ ದುರ್ಗಂಧದಿಂದಾಗಿ ಜನರ ಉಸಿರಾಟಕ್ಕೂ ಸಹ ತೊಂದರೆಯಾಗುತ್ತಿದೆ. ಈ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಕೇಳಿದರೆ ಕುಂಟು ನೆಪಗಳನ್ನು ಹೇಳುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹಲವೆಡೆ ಸ್ವಯಂಪ್ರೇರಿತ ಬಂದ್, ಸೀಲ್‍ಡೌನ್

    ರಾಜ್ಯದ ಹಲವೆಡೆ ಸ್ವಯಂಪ್ರೇರಿತ ಬಂದ್, ಸೀಲ್‍ಡೌನ್

    ಬೆಂಗಳೂರು: ಬಿಎಸ್‍ವೈ ನೇತೃತ್ವದ ಸರ್ಕಾರ, ಮತ್ತೆ ಲಾಕ್‍ಡೌನ್ ಜಾರಿ ಮಾಡ್ಬೇಕಾ ಬೇಡ್ವಾ ಎಂಬ ಸಂದಿಗ್ಧತೆಯಲ್ಲಿ ಸಿಲುಕಿದ್ರೆ, ರಾಜ್ಯದ ಹಲವು ಕಡೆ, ಸ್ಥಳೀಯ ಆಡಳಿತಗಳು, ಜನರ ಸಹಕಾರದಿಂದ ಸ್ವಯಂಪ್ರೇರಿತವಾಗಿ ಬಂದ್, ಲಾಕ್‍ಡೌನ್ ಜಾರಿ ಮಾಡಿಕೊಳ್ತಿವೆ.

    ಮೈಸೂರಲ್ಲಿ ಮತ್ತೆ ಕೊರೋನಾ ಸ್ಫೋಟಗೊಂಡಿರುವ ಕಾರಣ ಗುರುವಾರದಿಂದ ದೇವರಾಜ ಮಾರುಕಟ್ಟೆ, ಮನ್ನಾರ್ಸ್ ಮಾರುಕಟ್ಟೆ, ಬೋಟಿ ಬಜಾರ್, ಸಂತೇಪೇಟೆ, ಶಿವರಾಂಪೇಟೆ ಸೇರಿ ಪ್ರಮುಖ ಸ್ಥಳಗಳನ್ನು ನಾಲ್ಕು ದಿನ ಬಂದ್ ಮಾಡಿ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಸುತ್ತೂರು ಮಠಕ್ಕೆ ಭಕ್ತರ ಪ್ರವೇಶವನ್ನು ರದ್ದು ಮಾಡಲಾಗಿದೆ.

    ಅಂತಾರಾಜ್ಯದಿಂದ ಮೀನು ಖರೀದಿಗೆ ಬಂದವರಿಂದ ಮಂಗಳೂರಿನ ಮೀನುಗಾರರೊಬ್ಬರಿಗೆ ಸೋಂಕು ವ್ಯಾಪಿಸಿರುವ ಕಾರಣ, ಮೀನುಗಾರಿಕಾ ಬಂದರನ್ನು ಸೀಲ್‍ಡೌನ್ ಮಾಡಲಾಗಿದೆ. ಕನಕಪುರ, ಮಾಗಡಿ ಬಳಿಕ ಇಂದಿನಿಂದ ರಾಮನಗರವೂ ಲಾಕ್‍ಡೌನ್ ಆಗಿದೆ. ಹರಿಹರದಲ್ಲಿ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ಶಾಸಕ ರಾಮಪ್ಪ ಮನವಿ ಮಾಡಿದ್ದಾರೆ.

  • ನಾನ್‍ವೆಜ್ ಪ್ರಿಯರಿಗೂ ಕೊರೊನಾ ಭೀತಿ- ಕಾರವಾರದಲ್ಲಿ ಮೀನು, ಮಾಂಸದ ಬೆಲೆ ಭಾರೀ ಇಳಿಕೆ

    ನಾನ್‍ವೆಜ್ ಪ್ರಿಯರಿಗೂ ಕೊರೊನಾ ಭೀತಿ- ಕಾರವಾರದಲ್ಲಿ ಮೀನು, ಮಾಂಸದ ಬೆಲೆ ಭಾರೀ ಇಳಿಕೆ

    ಕಾರವಾರ: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಎಲ್ಲೆಡೆ ಹರಡುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಕೊರೊನಾ ವೈರಸ್ ಭೀತಿ ಮತ್ಸ್ಯ ಪ್ರಿಯ ಕರಾವಳಿ ಜನರಲ್ಲಿಯೂ ಆತಂಕ ಮನೆ ಮಾಡಿದ್ದು, ಮಾಂಸಹಾರದ ಬೇಡಿಕೆ ಇಳಿಮುಖವಾಗಿದೆ. ಮೀನು, ಮಾಂಸವನ್ನು ಕೊಳ್ಳುವವರೇ ಇಲ್ಲದಂತಾಗಿದೆ.

    ಕರಾವಳಿ ಮೀನುಪ್ರಿಯರಿಗೆ ಮೆಚ್ಚಿನ ತಾಣ. ಇಲ್ಲಿ ಸಿಗುವ ಮೀನುಗಳ ರುಚಿ ಸವಿದವರಿಗೇ ಗೊತ್ತು. ಇಲ್ಲಿನ ಮೀನುಗಳು ಕೇವಲ ರಾಜ್ಯಕ್ಕೆ ಮಾತ್ರವಲ್ಲದೇ ಹೊರ ರಾಜ್ಯ, ವಿದೇಶಕ್ಕೂ ರಫ್ತಾಗುತ್ತದೆ. ಆದರೆ ಕೊರೊನಾ ವೈರಸ್ ಜಲಚರ ಜೀವಿಗಳನ್ನು ಹಾಗೂ ಮಾಂಸಹಾರ ಮಾಡುವುದರಿಂದಾಗಿ ಹರಡುತ್ತದೆ ಎಂಬುದು ದೃಢಪಟ್ಟಿದೆ. ಭಾರತೀಯ ಆಹಾರ ಸಂರಕ್ಷಣಾ ಇಲಾಖೆ ಕರಾವಳಿ ಭಾಗದ ಮಾಂಸದ ಅಂಗಡಿಗಳಿಗೆ, ಮೀನಿನ ಹೋಟೆಲ್‍ಗಳಿಗೆ ಶುಚಿತ್ವ ಕಾಪಾಡುವಂತೆ ನೋಟಿಸ್ ನೀಡಿದೆ. ಇದರ ಜೊತೆಯಲ್ಲಿ ಜಿಲ್ಲಾ ಆಹಾರ ಇಲಾಖೆ ಸಹ ಮೀನುಗಳನ್ನು ಕುದಿಸಿದ ನೀರಲ್ಲಿ ಬೇಯಿಸಿ ಸೇವಿಸುವಂತೆ ಮಾಂಸಪ್ರಿಯರಿಗೆ ತಿಳಿಹೇಳುತ್ತಿದ್ದಾರೆ. ಜಿಲ್ಲಾಡಳಿತ ಕೂಡ ಮಾಂಸದ ಅಂಗಡಿಗಳಿಗೆ, ಹೋಟಲ್‍ಗಳಿಗೆ ಜಾಗೃತಿ ಮೂಡಿಸುತ್ತಿದ್ದು ಜನ ಮಾಂಸ, ಮೀನು ಭಕ್ಷಿಸಲು ಭಯಪಡುತ್ತಿದ್ದಾರೆ.

    ಕರಾವಳಿ ಭಾಗದಲ್ಲಿ ಆಹಾರ ಇಲಾಖೆ ಎಚ್ಚರಿಕೆ ನೀಡುತ್ತಿದ್ದಂತೆ ಮಾಂಸಪ್ರಿಯರು ಸಸ್ಯಹಾರಿಗಳಾಗಿ ಬದಲಾಗಿದ್ದಾರೆ. ಪ್ರತಿ ದಿನ ಮೀನು, ಮಾಂಸ ತಿನ್ನುವವರು ಈಗ ಬಂದ್ ಮಾಡಿದ್ದಾರೆ. ಇದರ ಪರಿಣಾಮವೀಗ ಮೀನು ಮಾರುಕಟ್ಟೆಗಳ ಮೇಲೆ ಹಾಗೂ ಕೋಳಿ ಮಾಂಸದ ಮಾರುಕಟ್ಟೆಯ ಮೇಲೆ ಬಿದ್ದಿದೆ. ಮೀನುಗಳಿಗೆ ಉತ್ತಮ ದರವಿದ್ದರೂ ಮೀನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರಿಲ್ಲದೇ ದರ ಇಳಿಸುವಂತಾಗಿದ್ದು ಬಿಕೋ ಎನ್ನುತಿದ್ರೆ, ಕೋಳಿ ಮಾಂಸದ ಅಂಗಡಿಗಳಿಗೆ ಗ್ರಾಹಕರಿಲ್ಲದೆ ದರವನ್ನು ದೊಡ್ಡ ಮಟ್ಟದಲ್ಲಿ ಕಡಿತಗೊಳಿಸಿದ್ದು, ಗ್ರಾಹಕರಿಲ್ಲದೆ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.

    ಸದ್ಯ ಕರಾವಳಿ ಭಾಗದಲ್ಲಿ ಮೀನಿನ ದರ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ. ಲೆಪ್ಪೆ-80 ರಿಂದ 50 ರೂ., ಚಟ್ಲೆ (ಸಿಗಡಿ)-180 ರಿಂದ 150ರೂ., ಪಾಂಪ್ಲೆಟ್-800 ರಿಂದ 600ರೂ., ಏಡಿ -120 ರಿಂದ 50ರೂ. ಇಳಿಕೆ ಕಂಡಿದೆ. ಆದರೆ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಕೋಳಿ ಮಾಂಸ ಕೆಜಿ ಒಂದಕ್ಕೆ 200 ರೂ. ಇದ್ದಿದ್ದು ಕಳೆದ ಎರಡು ದಿನದಿಂದ 120 ರಿಂದ 159ರ ಒಳಗೆ ಇಳಿಮುಖವಾಗಿದೆ. ಕರಾವಳಿ ಭಾಗದ ಮಾಂಸ ಪ್ರಿಯರಿಗೆ ಕೊರೊನಾ ಭೀತಿ ಮಾಂಸಹಾರಕ್ಕೆ ಬ್ರೇಕ್ ಹಾಕಿದ್ದು ಸಸ್ಯಹಾರಿಗಳನ್ನಾಗಿ ಬದಲಿಸಿದೆ.

  • ಕುಮಾರಸ್ವಾಮಿಯವರೇ ನೀವು ನಮ್ಮ ಸಿಎಂ ಅಲ್ಲ- ಉಡುಪಿಯ ಮೀನು ಮಾರುಕಟ್ಟೆಯಲ್ಲಿ ಮೊಗವೀರ ಮಹಿಳೆಯರಿಂದ ವಿಶೇಷ ಪ್ರತಿಭಟನೆ

    ಕುಮಾರಸ್ವಾಮಿಯವರೇ ನೀವು ನಮ್ಮ ಸಿಎಂ ಅಲ್ಲ- ಉಡುಪಿಯ ಮೀನು ಮಾರುಕಟ್ಟೆಯಲ್ಲಿ ಮೊಗವೀರ ಮಹಿಳೆಯರಿಂದ ವಿಶೇಷ ಪ್ರತಿಭಟನೆ

    ಉಡುಪಿ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಿದ ನಂತರ ಕರಾವಳಿ ಜನ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕರಾವಳಿಯ ಪ್ರಬಲ ಸಮುದಾಯ ಮೊಗವೀರರು ಎಚ್ ಡಿಕೆ ವಿರುದ್ಧ ಕೋಪಗೊಂಡಿದ್ದಾರೆ. ಬಜೆಟ್ ನಲ್ಲಿ ನಮಗೆ ಏನು ಕೊಟ್ಟಿದ್ದೀರಿ? ನೀವು ನಮ್ಮ ಸಿಎಂ ಅಲ್ಲವೇ ಅಲ್ಲ ಅಂತ ಎಂದು ಹೇಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಕರಾವಳಿ ಜೊತೆ ತಾರತಮ್ಯ ನಿಲ್ಲಿಸಿ. ಪ್ರಜಾಪ್ರಭುತ್ವದ ಕೊಲೆಗಾರ ನೀವು. ಕುಮಾರಸ್ವಾಮಿಯವರೇ ನೀವು ನಮ್ಮ ಸಿಎಂ ಅಲ್ಲ ಇಂತಹ ಸ್ಲೋಗನ್ ಗಳನ್ನು ಪಕ್ಕದಲ್ಲಿಟ್ಟು ಉಡುಪಿಯ ಮೀನು ಮಾರುಕಟ್ಟೆಯಲ್ಲಿ ಮೊಗವೀರ ಮಹಿಳೆಯರು ವ್ಯಾಪಾರ ಮಾಡುತ್ತಿದ್ದಾರೆ.

    ಉಡುಪಿ ಜಿಲ್ಲೆಯ ಪ್ರಬಲ ಮೀನುಗಾರ ಸಮುದಾಯ ಸಿಎಂ ಕುಮಾರಸ್ವಾಮಿ ವಿರುದ್ಧ ಗರಂ ಆಗಿದೆ. ಮೊನ್ನೆಯ ಬಜೆಟ್ ನಲ್ಲಿ ಕರಾವಳಿಗೆ ಯಾವುದೇ ಅನುದಾನ ಕೊಡದೆ, ಯೋಜನೆಗಳನ್ನು ಘೋಷಣೆ ಮಾಡದೆ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಈ ನಡುವೆ ಉಡುಪಿಯಲ್ಲಿ ಮೀನುಗಾರ ಮಹಿಳೆಯರು ಮೀನು ಮಾರುಕಟ್ಟೆಯಲ್ಲಿ ಬೋರ್ಡ್ ಗಳನ್ನು ಅಳವಡಿಸಿದ್ದಾರೆ. ಮೀನು ಖರೀದಿಗೆ ಬರುವವರ ಬಳಿ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.

    ನಾವು ಸಾಲ ಮಾಡಿ ಜೀವನ ಮಾಡುವುದಿಲ್ಲ. ದುಡಿದು ತಿನ್ನುತ್ತೇವೆ. ಸಂಪಾದನೆ ಆಗದಿದ್ದರೆ ಉಪವಾಸ ಕೂರುವ ಸ್ವಾಭಿಮಾನಿಗಳು. ಆದ್ರೆ ನಮ್ಮ ವಿರುದ್ಧ ನಿಮ್ಮ ಸಮರ ಯಾಕೆ. ನಾವು ನಿಮಗೆ ಏನು ದ್ರೋಹ ಮಾಡಿದ್ದೇವೆ ಅಂತ ಮೀನು ಮಾರಾಟಗಾರ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಸಾಲಿಯಾನ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಆಕ್ರೋಶ ವ್ಯಕ್ತಗೊಳಿಸಿದ್ದಾರೆ. ಇದನ್ನೂ ಓದಿ: #KumaraswamynotmyCm- ಎಚ್ ಡಿಕೆ ವಿರುದ್ಧ ಕರಾವಳಿಯ ಜನರಿಂದ ಆನ್‍ಲೈನ್ ಹೋರಾಟ

    ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹೇಟ್ ಹೆಚ್ ಡಿಕೆ ಎಂಬ ಅಭಿಯಾನ ಶುರುಮಾಡಿದ್ದಾರೆ. ಕುಮಾರಸ್ವಾಮಿ ಈಸ್ ನಾಟ್ ಅವರ್ ಸಿಎಂ ಎಂಬ ಬರಹಗಳು ಓಡಾಡುತ್ತಿದೆ. ನಾವು ಸಾಲನೂ ಮಾಡಿಲ್ಲ, ಮಾಡಿದ ಸಾಲವನ್ನು ಸಮುದ್ರದಲ್ಲಿ ದುಡಿದು ತೀರಿಸುತ್ತೇವೆ. ಇಷ್ಟಿದ್ದರೂ ನಮ್ಮ ಮೇಲೆ ಮುಖ್ಯಮಂತ್ರಿಗಳಿಗೆ ಯಾಕೆ ಅನ್ನೋ ಪ್ರಶ್ನೆ ಕೇಳಿದ್ದಾರೆ. ಪ್ರತೀ ಮೀನುಗಾರಿಕಾ ಬೋಟ್, ಸಂಘ ಸಂಸ್ಥೆಗಳು, ವಾಹನಗಳಲ್ಲಿ ಇಂತಹ ಸ್ಟಿಕ್ಕರ್ ಗಳನ್ನು ಅಂಟಿಸುವುದಾಗಿ ಮೀನುಗಾರ ಯುವ ಮುಖಂಡ ಯತೀಶ್ ಕೋಟ್ಯಾನ್ ಎಚ್ಚರಿಕೆ ನೀಡಿದರು.

    13 ವಿಧಾನಸಭಾ ಕ್ಷೇತ್ರಗಳ ಕರಾವಳಿಯ ಎರಡು ಜಿಲ್ಲೆಯಲ್ಲಿ ಒಂದು ಕಾಂಗ್ರೆಸ್ ಗೆದ್ದಿದೆ. 13 ಶಾಸಕರು ಬಿಜೆಪಿಯಿಂದ ಗೆದ್ದಿದ್ದಾರೆ. ಹೀಗಾಗಿ ಈ ಬಾರಿ ಸರಕಾರದಿಂದ ಕರಾವಳಿ ಭಾಗಕ್ಕೆ ಅನುದಾನವನ್ನು ಸಿಎಂ ನೀಡಿಲ್ಲ. ಮುಂದಿನ ಚುನಾವಣೆಯಲ್ಲಿ ಸರಕಾರಕ್ಕೆ ಮತ್ತು ಜೆಡಿಎಸ್ ಬೆಂಬಲ ನೀಡಿದ ಕಾಂಗ್ರೆಸ್ಸಿಗೆ ಇದರಿಂದ ಹಿನ್ನಡೆಯಾಗುವ ಸಾಧ್ಯತೆಯಿದೆ.