Tag: fish kabab

  • ರುಚಿಕರವಾದ ಫಿಶ್ ಕಬಾಬ್ ಮಾಡುವುದು ಹೇಗೆ ಗೊತ್ತಾ?

    ರುಚಿಕರವಾದ ಫಿಶ್ ಕಬಾಬ್ ಮಾಡುವುದು ಹೇಗೆ ಗೊತ್ತಾ?

    ಮಾಂಸಹಾರಿಗಳಿಗೆ ವಾರಕ್ಕೊಮ್ಮೆಯಾದರೂ ನಾಲಿಗೆ ಮಾಂಸದ ಆಹಾರವನ್ನು ತಿನ್ನಲು ಬಯಸುತ್ತದೆ. ಫಿಶ್‌ ಸಾಂಬಾರ್‌, ಫಿಶ್‌ ಫ್ರೈ ಮಾಡಿರುವ ನೀವು ಇಂದು ಫಿಶ್ ಕಬಾಬ್ ಮಾಡಲು ಟ್ರೈ ಮಾಡಿ.  ಮನೆಯಲ್ಲಿ ಇರುವ ಸಾಮಾಗ್ರಿಗಳನ್ನು ಬಳಸಿ ಫಿಶ್ ಕಬಾಬ್‌ನ್ನು ಸರಳ ವಿಧಾನದ ಜೊತೆಗೆ ಮಾಡಬಹುದು.


    ಬೇಕಾಗುವ ಸಾಮಗ್ರಿಗಳು:
    * ಮೀನು- 1 ಕೆಜಿ
    * ನಿಂಬೆಹಣ್ಣಿನ ರಸ- 2 ಚಮಚ
    * ಕಡಲೆಹಿಟ್ಟು-1 ಕಪ್
    * ಬೆಳ್ಳುಳ್ಳಿ, ಶುಂಠಿ ಪೆಸ್ಟ್- ಸ್ವಲ್ಪ
    * ಹಸಿಹಸಿಮೆಣಸಿನ ಪೇಸ್ಟ್- ಚಮಚ
    * ದನಿಯಾ ಪುಡಿ- ಚಮಚ
    * ಅರಿಶಿಣ ಪುಡಿ – ಅರ್ಧ ಚಮಚ
    * ಜೀರಿಗೆ ಪುಡಿ- 1 ಚಮಚ
    * ಗರಂಮಸಾಲೆ- ಅರ್ಧ ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಈರುಳ್ಳಿ-1
    * ಅಡುಗೆ ಎಣ್ಣೆ- 2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲು ಮೀನನ್ನು ಚೆನ್ನಾಗಿ ತೊಳೆದು ಒಣಗಿಸಿ ಬೌಲ್ ಒಂದರಲ್ಲಿ ಹಾಕಿ ಅದಕ್ಕೆ ಉಪ್ಪು ಹಾಗೂ ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಎಣ್ಣೆಯನ್ನು ಬಿಸಿಮಾಡಿ ಮೀನನ್ನು ಎಣ್ಣೆಯಲ್ಲಿ ಹಾಕಿ ಸ್ವಲ್ಪ ಕರಿದುಕೊಳ್ಳಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

    * ನಂತರ ಮೀನಿಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಉಪ್ಪು ಹಾಗೂ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ


    * ಈ ಮಿಶ್ರಣವನ್ನು 30 ನಿಮಿಷ ಹಾಗೆ ಇಟ್ಟಿರಬೇಕು.
    * ನಂತರ ಕಡಲೆಹಿಟ್ಟು ಹಾಗೂ ಈರುಳ್ಳಿ ಸೇರಿಸಿ ಮಿಶ್ರಣ ಮಾಡಿ. ಎಣ್ಣೆ ಬಿಸಿ ಮಾಡಿ ಎಣ್ಣೆಯಲ್ಲಿ ಮೀನನ್ನು ಕರಿದರೆ ರುಚಿಯಾದ ಮೀನಿನ ಕಬಾಬ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

  • ಮಧ್ಯಾಹ್ನ ಊಟಕ್ಕೆ ಮಾಡಿ ಬಿಸಿ, ಬಿಸಿ ಫಿಶ್ ಕಬಾಬ್

    ಮಧ್ಯಾಹ್ನ ಊಟಕ್ಕೆ ಮಾಡಿ ಬಿಸಿ, ಬಿಸಿ ಫಿಶ್ ಕಬಾಬ್

    ಮಾಂಸಪ್ರಿಯರು ವೀಶೆಷ ಮತ್ತು ವಿಭಿನ್ನವಾದ ಆಹಾರ ಸೇವೆನೆ ಮಾಡಲು ಇಷ್ಟ ಪಡುತ್ತಾರೆ. ಪ್ರತಿನಿತ್ಯ ಹೊಸ ಬಗೆಯ ಆಹಾರಗಳನ್ನು ತಯಾರಿಸಲು, ಸೇವಿಸಲು ನಾಲಿಗೆ ಬಯಸುತ್ತದೆ. ಚಿಕನ್, ಮಟನ್ ಕಬಾಬ್ ಮಾಡಿರುವ ನೀವು ಇಂದು ಕೊಂಚ ಡಿಫರೆಂಟ್ ಆಗಿ ಫಿಶ್ ಕಬಾಬ್ ಮಾಡಿ ಸವಿಯಿರಿ. ಮಳೆ ಇರುವುದರಿಂದ ಚಳಿ ಹೆಚ್ಚಾಗಿದೆ, ಹೀಗಾಗಿ ಮಧ್ಯಾಹ್ನ ಊಟಕ್ಕೆ ಫಿಶ್ ಕಬಾಬ್ ಇದ್ದರೆ ಚೆನ್ನಾಗಿರುತ್ತದೆ. ಇದನ್ನೂ ಓದಿ:  ಮಕ್ಕಳಿಗೆ ಇಷ್ಟವಾಗುವ ಕಡಲೆ ಸಲಾಡ್ ಮಾಡಿ

    ಬೇಕಾಗುವ ಸಾಮಗ್ರಿಗಳು:
    *ಮೀನು – ಅರ್ಧ ಕೆಜಿ
    * ಕಡಲೆಬೆಳೆ (ಚನ್ನಾ ದಾಲ್) – 4 ಟೀ ಸ್ಪೂನ್
    *ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೀ ಸ್ಪೂನ್
    *ಈರುಳ್ಳಿ ಪೇಸ್ಟ್ – 2 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಕಡಲೆ ಹಿಟ್ಟು – 4 ಟೀ ಸ್ಪೂನ್
    * ಅಡುಗೆ ಎಣ್ಣೆ – 2 ಚಮಚ
    * ಕಾರದಪುಡಿ – ಅರ್ಧ ಟೀ ಸ್ಪೂನ್

    ಮಾಡುವ ವಿಧಾನ:
    * ಮೀನಿನ ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. 10 ನಿಮಿಷಗಳ ಕಾಲ ಈ ತುಂಡುಗಳನ್ನು ನೀರಿನಲ್ಲಿ ಬೇಯಿಸಿಕೊಳ್ಳಿ.

    * ನಂತರ ಇದು ಮೀನಿನ ಮುಳ್ಳನ್ನು ಹೊರತೆಗೆದು ನಿಮ್ಮ ಕೈಗಳಿಂದ ಚೆನ್ನಾಗಿ ಹಿಸುಕಿಕೊಳ್ಳಬೇಕು.
    * ಕಡಲೆಬೆಳೆ (ಚನ್ನಾ ದಾಲ್) ಅನ್ನು ನುಣ್ಣನೆ ರುಬ್ಬಿಕೊಂಡು ಪೇಸ್ಟ್ ಸಿದ್ಧಪಡಿಸಿಕೊಳ್ಳಬೇಕು. ಇದನ್ನೂ ಓದಿ:  ಇಂದು ಮಾಡಿ ಹಲಸಿನ ಹಣ್ಣಿನ ಕಡುಬು

    * ಹಿಸುಕಿದ ಮೀನನ್ನು ಬೌಲ್‍ನಲ್ಲಿ ಹಾಕಿ ಚನ್ನಾ ದಾಲ್ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಈರುಳ್ಳಿ ಪೇಸ್ಟ್, ಕಾರದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
    * ಮಿಶ್ರಣವನ್ನು ತೆಗೆದುಕೊಂಡು ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಕಟ್ಲೇಟ್ ಮಾದರಿಯಲ್ಲಿ ತಯಾರಿಸಿ. ಇದನ್ನೂ ಓದಿ:  ಬಿಗ್‍ಬಾಸ್ ಮನೆಯಲ್ಲಿ ಮಂಜು ಮದುವೆ ಸಂಭ್ರಮ

    * ಕಡಲೆಹಿಟ್ಟನ್ನು ನೀರಿನೊಂದಿಗೆ ಮಿಶ್ರ ಮಾಡಿ ದಪ್ಪ ಹಿಟ್ಟು ಮಾಡಿಕೊಂಡು ಕಬಾಬ್ ಅನ್ನು ಮುಳುಗಿಸಬೇಕು.
    * ತವಾ ಬಿಸಿ ಮಾಡಿ ಎಣ್ಣೆ ಕಾದಿದ್ದರೆ ಮೀನು ಕಬಾಬ್‍ಗಳನ್ನು ಹಾಕಿ ಚೆನ್ನಾಗಿ ಬೇಯಿಸಿದರೆ ಫಿಶ್ ಕಬಾಬ್ ಸವಿಯಲು ಸಿದ್ಧವಾಗುತ್ತದೆ.