Tag: first night

  • ಫಸ್ಟ್‌ನೈಟ್‌ನಲ್ಲಿ ಸೆಕ್ಸ್‌ಗೆ ಗಂಡ ನಿರಾಕರಿಸಿದ್ದಕ್ಕೆ ಪತ್ನಿಯಿಂದ 2 ಕೋಟಿ ಹಣಕ್ಕೆ ಡಿಮ್ಯಾಂಡ್ ಆರೋಪ

    ಫಸ್ಟ್‌ನೈಟ್‌ನಲ್ಲಿ ಸೆಕ್ಸ್‌ಗೆ ಗಂಡ ನಿರಾಕರಿಸಿದ್ದಕ್ಕೆ ಪತ್ನಿಯಿಂದ 2 ಕೋಟಿ ಹಣಕ್ಕೆ ಡಿಮ್ಯಾಂಡ್ ಆರೋಪ

    ಬೆಂಗಳೂರು: ಫಸ್ಟ್‌ನೈಟ್‌ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಕ್ಕೆ ಪತ್ನಿ ಹಾಗೂ ಕುಟುಂಬದವರು 2 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆಂದು ಆರೋಪಿಸಿ ಗಂಡ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ನೊಂದ ಪತಿ ಪ್ರವೀಣ್ ಎಂಬಾತ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ಹಾಗೂ ಪತ್ನಿ ಸಂಬಂಧಿಕರ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಜೀವನಾಂಶಕ್ಕೆ ಪತ್ನಿ ಬರೋಬ್ಬರಿ ಎರಡು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿ | ನೇಣು ಬಿಗಿದು 20ರ ಯುವತಿ ಆತ್ಮಹತ್ಯೆ

    ಪ್ರವೀಣ್ ಕಳೆದ ಮೇ ತಿಂಗಳಲ್ಲಿ ಚಿಕ್ಕಮಗಳೂರು ಮೂಲದ ಯುವತಿಯನ್ನ ವಿವಾಹವಾಗಿದ್ದ. ಮದುವೆಯಾಗಿ ಫಸ್ಟ್‌ನೈಟ್ ವೇಳೆ ಪತ್ನಿಯನ್ನು ಮುಟ್ಟಲು ಗಂಡ ಪ್ರವೀಣ್ ಹಿಂದೇಟು ಹಾಕಿದ್ದಾರೆಂದು ಆರೋಪ ಮಾಡಲಾಗಿದೆ. ಮದುವೆ ಆದ ಗಂಡ ನಪುಂಸಕ ಎಂದು ಪತ್ನಿಯಿಂದ ಗಲಾಟೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

    ಗಂಡನ ಬಗ್ಗೆ ಅನುಮಾನಗೊಂಡು ಪತ್ನಿ ಕುಟುಂಬಸ್ಥರು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಾಗಿದ್ದಾನೆಂದು ವೈದ್ಯರು ದೃಢಪಡಿಸಿದ್ದರು. ಆದರೆ, ‘ಮಾನಸಿಕ ಒತ್ತಡದಿಂದ ಸ್ಬಲ್ಪ ಹಿಂದೇಟು ಹಾಕಿರಬಹುದು. ಸ್ವಲ್ಪ ತಾಳ್ಮೆಯಿಂದಿರುವಂತೆ’ ವೈದ್ಯರು ಸಲಹೆ ನೀಡಿದ್ದರು. ತಾಳ್ಮೆ ಕಳೆದುಕೊಂಡ ಪತ್ನಿ ಹಾಗೂ ಕುಟುಂಬಸ್ಥರಿಂದ ದಾಂದಲೆ ನಡೆಸಲಾಗಿದೆ. ಆ.17 ರಂದು ಪ್ರವೀನ್‌ನ ಗೋವಿಂದರಾಜನಗರ ಮನೆಗೆ‌ ನುಗ್ಗಿ ಪತ್ನಿ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆಂಬ ಆರೋಪವಿದೆ. ಇದನ್ನೂ ಓದಿ: ಕಾರವಾರ| ಸಿಲಿಂಡರ್‌ ಸ್ಫೋಟಗೊಂಡು ಯುವತಿ ಸಾವು

    ಬಂದು ಗಲಾಟೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇತ್ತ ಘಟನೆ ಸಂಬಂಧ ಗಂಡ ಹಾಗೂ ಸಂಬಂಧಿಕರ ವಿರುದ್ಧ ಪಶ್ಚಿಮ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿಯಿಂದ ವರದಕ್ಷಿಣೆ ಕಿರುಕುಳ ಕೇಸ್ ಕೂಡ ದಾಖಲಾಗಿದೆ.

  • ಫಸ್ಟ್ ನೈಟ್ ಅನ್ನೋದೇ ಇಲ್ಲ ಎಂದು ಹೇಳಿ ಪತಿಯನ್ನೇ ಬೆಚ್ಚಿ ಬೀಳಿಸಿದ ನಟಿ ಆಲಿಯಾ ಭಟ್

    ಫಸ್ಟ್ ನೈಟ್ ಅನ್ನೋದೇ ಇಲ್ಲ ಎಂದು ಹೇಳಿ ಪತಿಯನ್ನೇ ಬೆಚ್ಚಿ ಬೀಳಿಸಿದ ನಟಿ ಆಲಿಯಾ ಭಟ್

    ತ್ತೀಚೆಗಷ್ಟೇ ಮದುವೆಯಾಗಿ, ಇದೀಗ ತಾನು ತಾಯಿ ಆಗುತ್ತಿರುವುದಾಗಿಯೂ ಘೋಷಣೆ ಮಾಡಿರುವ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತೆ ಸುದ್ದಿಯಾಗಿದ್ದಾರೆ. ಮದುವೆಯಾಗಿ 50 ದಿನಕ್ಕೆ ತಾವು ತಾಯಿ ಆಗುತ್ತಿರುವುದಾಗಿ ತಿಳಿಸಿ, ಅಭಿಮಾನಿಗಳಿಗೆ ಅಚ್ಚರಿ ತಂದಿದ್ದರು. ಇದೀಗ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮತ್ತೊಂದು ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಇದೂ ಇನ್ನೂ ಅಚ್ಚರಿ ಮೂಡಿಸಿದೆ.

    ಬಾಲಿವುಡ್ ನಟ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿ ಭಾಗಿಯಾಗಿದೆ. ಈಗಾಗಲೇ ಇವರ ಕಂತು ಚಿತ್ರೀಕರಣ ಕೂಡ ಆಗಿದೆ. ಇದರ ಒಂದು ತುಣುಕನ್ನು ಕರಣ್ ಜೋಹಾರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಪ್ರೋಮೋದಲ್ಲಿ ಆಲಿಯಾ ಆಡಿದ ಮಾತು ನಿಜಕ್ಕೂ ಅಚ್ಚರಿ ಮೂಡಿಸಿದೆ. ಶೋನ ರಾಪಿಡ್ ಫಯರ್ ರೌಂಡ್ ನಲ್ಲಿ ಕರಣ್ ಜೋಹಾರ್, ಆಲಿಯಾ ಭಟ್ ಅವರಿಗೆ ‘ಮದುವೆಯ ನಂತರ ನಿಮಗೆ ಅರ್ಥವಾದ ಒಂದು ಸಂಗತಿ ಯಾವುದು? ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಅಷ್ಟೇ ಚುರುಕಾಗಿ ಉತ್ತರ ನೀಡಿದ್ದಾರೆ ಆಲಿಯಾ ಭಟ್. ಇದನ್ನೂ ಓದಿ: ‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?

    ಕರಣ್ ಪ್ರಶ್ನೆಗೆ ಉತ್ತರಿಸಿರುವ ಆಲಿಯಾ ಭಟ್,  ಮದುವೆ ದಿನ ಎಲ್ಲರೂ ಸುಸ್ತಾಗಿರುತ್ತದೆ. ಮದುವೆಯಾದ ನಂತರ, ಮದುವೆಯ ದಿನ ಸುಸ್ತಾಗಿರುತ್ತದೆ. ಹಾಗಾಗಿ ಫಸ್ಟ್ ನೈಟ್ ಅನ್ನುವುದೇ ಇರುವುದಿಲ್ಲ ಎಂದು ಹೇಳಿದ್ದಾರೆ. ಅದು ಪತಿ ಎದುರಿಗೆ ಇದ್ದಾಗಲೇ ಹೇಳಿದ್ದರಿಂದ ವಿಡಿಯೋ ಭಾರೀ ವೈರಲ್ ಕೂಡ ಆಗಿದೆ. ಅಲ್ಲದೇ, ಆಲಿಯಾ ಭಟ್ ಗೆ ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಫಸ್ಟ್ ನೈಟ್ ದಿನವೇ ಹೆಂಡತಿ ಗರ್ಭಿಣಿ – ಪತಿ ಶಾಕ್

    ಫಸ್ಟ್ ನೈಟ್ ದಿನವೇ ಹೆಂಡತಿ ಗರ್ಭಿಣಿ – ಪತಿ ಶಾಕ್

    ಲಕ್ನೋ: ಹೊಸ ಜೀವನವನ್ನು ಆರಂಭಿಸಲು ಸಜ್ಜಾಗಿದ್ದ ಗಂಡನಿಗೆ ತನ್ನ ಮೊದಲ ರಾತ್ರಿಯಂದೇ ಪತ್ನಿ 5 ತಿಂಗಳ ಗರ್ಭಿಣಿ ಎಂದು ತಿಳಿದಿದೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರಪ್ರದೇಶದ ಮೀರತ್‍ನಲ್ಲಿ ನಡೆದಿದೆ.

    ಮದುವೆಯಾದ ಮೊದಲ ರಾತ್ರಿಯೇ ವಧುವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಸ್ಕ್ಯಾನಿಂಗ್ ಮಾಡಿದ ವೈದ್ಯರು ಆಕೆ 5 ತಿಂಗಳ ಗರ್ಭಿಣಿ ಎಂಬ ವಿಷಯವನ್ನು ತಿಳಿಸಿದ್ದಾರೆ. ದನ್ನೂ ಓದಿ:   ಕುಟುಂಬಕ್ಕೆ ಹೊಸ ಅತಿಥಿಯ ಆಗಮನದ ಸಂತೋಷದಲ್ಲಿ ಕಾಜಲ್ ಅಗ್ರವಾಲ್

    ಈ ವಿಷಯವನ್ನು ಆ ವಧುವಿನ ಮನೆಯವರಿಗೆ ಹೇಳಿದಾಗ ಅವರು ತಮ್ಮ ಮಗಳು ಗರ್ಭಿಣಿಯಾಗಲು ಸಾಧ್ಯವೇ ಇಲ್ಲ, ನೀವೇ ಬೇಕೆಂದೇ ಸುಳ್ಳು ಹೇಳುತ್ತಿದ್ದೀರಿ ಎಂದು ವಾದಿಸಿದ್ಧಾರೆ. ಅಷ್ಟೇ ಅಲ್ಲದೆ, ಸುಳ್ಳು ಕೇಸ್ ಹಾಕಿ ಜೈಲಿಗಟ್ಟುವ ಬೆದರಿಕೆಯೊಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಹೆಂಡತಿ ಬೇರೆಯವರ ಮಗುವಿಗೆ ತಾಯಿಯಾಗುತ್ತಿದ್ದಾಳೆ, ಎಂದು ತಿಳಿದ ನಂತರವೂ ಆ ವ್ಯಕ್ತಿ ಸುಮ್ಮನಾಗಿದ್ದಾನೆ. ಇದನ್ನೂ ಓದಿ:  ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಗಲ್ರಾನಿ

    ನಂತರ ಹುಡುಗಿಯ ಮನೆಯವರೇ ಆತನಿಗೆ ಬ್ಲಾಕ್‍ಮೇಲ್ ಮಾಡಲು ಶುರುಮಾಡಿದ್ದು, 10 ಲಕ್ಷ ರೂ. ಕೊಡದಿದ್ದರೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಬೇರೆ ದಾರಿ ಕಾಣದೆ ಆ ವ್ಯಕ್ತಿ ತನ್ನ ಹೆಂಡತಿಯ ಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಬಳಿಕ ಪೊಲೀಸರ ಮಧ್ಯಪ್ರವೇಶಿಸಿದ ನಂತರ ಆ ಯುವತಿ ತನಗೆ ಬೇರೊಬ್ಬನೊಂದಿಗೆ ಸಂಬಂಧವಿದ್ದು, ಆತನೇ ತನ್ನ ಹೊಟ್ಟೆಯಲ್ಲಿರುವ ಮಗುವಿನ ತಂದೆ ಎಂದು ಹೇಳಿದ್ದಾಳೆ.

  • ಮದ್ವೆಯಾದ ಮೊದಲ ರಾತ್ರಿಯೇ ತಾನು ಯಾವುದಕ್ಕೂ ಉಪಯೋಗವಿಲ್ಲದವನೆಂದ ವರ- ವಧು ಕಂಗಾಲು

    ಮದ್ವೆಯಾದ ಮೊದಲ ರಾತ್ರಿಯೇ ತಾನು ಯಾವುದಕ್ಕೂ ಉಪಯೋಗವಿಲ್ಲದವನೆಂದ ವರ- ವಧು ಕಂಗಾಲು

    ಹೈದರಾಬಾದ್: ಮದುವೆಯಾದ ಮೊದಲ ರಾತ್ರಿಯೇ ವರನ ಮಾತು ಕೇಳಿ ವಧು ಕಂಗಾಲಾದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

    ತೆನಾಲಿ ಮೂಲದ ಎಂಡಿ ಜಲಾಲುದ್ದೀನ್ ಹಾಗೂ ಕೌಸರ್ ಜಾನ್ ದಂಪತಿಯ ಮಗಳಿಗೆ ವಿಜಯವಾಡದ ಆಟೋನಗರ ಮೂಲದ ಖಜಖಾನ್ ಗೆ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಇವರಿಬ್ಬರ ವಿವಾಹ ಸಮಾರಂಭ ಏಪ್ರಿಲ್ 4ರಂದು ತೆನಾಲಿಯ ಪಾಂಡುರಂಗ ಪೇಟಾದಲ್ಲಿ ಅದ್ಧೂರಿಯಾಗಿ ನಡೆಯಿತು. ಆದರೆ ಪತಿ ಮೇಲೆ ಹಲವು ಭರವಸೆಗಳನ್ನು ಇಟ್ಟುಕೊಂಡಿದ್ದ ಯುವತಿಗೆ ಮಾತ್ರ ಆಘಾತ ಕಾದಿತ್ತು.

    ಮದುವೆ ಬಳಿಕ ಕೆನಾಡಾಗೆ ಹೋಗುವುದಾಗಿ ವರನು ವಧು ಬಳಿ ಹೇಳಿದ್ದನು. ಈ ಹಿನ್ನೆಲೆಯಲ್ಲಿ ವಧು ಕೂಡ ಕೆನಡಾ ಕನಸು ಹೊತ್ತಿದ್ದಳು. ಆದರೆ ಮದುವೆ ಬಳಿಕ ಆಗಿದ್ದೇ ಬೇರೆ. ಮೊದಲ ರಾತ್ರಿಯೇ ವರನ ಮಾತು ಕೇಳಿ ವಧು ದಂಗಾಗಿ ಹೋಗಿದ್ದಾಳೆ. ನಾನು ಯಾವುದಕ್ಕೂ ಉಪಯೋಗವಿಲ್ಲದವನು ಎಂದು ವರ ಹೇಳಿದ್ದು, ವಧು ಶಾಕ್ ಆಗಿದ್ದಾಳೆ. ಇದನ್ನೂ ಓದಿ: ಹುಡುಗಿಯ ಹೊಟ್ಟೆಯಲ್ಲಿದ್ದ 2 ಕೆಜಿ ಕೂದಲನ್ನು ಹೊರತೆಗೆದ ವೈದ್ಯರು..!

    ವರನ ಮಾತು ಕೇಳಿ ಏನೂ ತೋಚದಾದ ವಧು ಕೂಡಲೇ ಈ ವಿಚಾರವನ್ನು ತನ್ನ ಮನೆಯವರಿಗೆ ತಿಳಿಸಿದ್ದಾಳೆ. ಅಲ್ಲದೆ ಪೋಷಕರ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಸದ್ಯ ವರನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: ಗೋಲ್‍ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಿಯತಮೆಗೆ ಪ್ರಪೋಸ್ ಮಾಡಿದ ಯುವಕ..!

  • ಫಸ್ಟ್ ನೈಟಿನಲ್ಲೇ ಪತ್ನಿಯನ್ನ ಕೊಂದು ಆತ್ಮಹತ್ಯೆ ಮಾಡ್ಕೊಂಡ ವರ

    ಫಸ್ಟ್ ನೈಟಿನಲ್ಲೇ ಪತ್ನಿಯನ್ನ ಕೊಂದು ಆತ್ಮಹತ್ಯೆ ಮಾಡ್ಕೊಂಡ ವರ

    – ರೂಮಿನಲ್ಲಿ ಟಿವಿ ಹಾಕ್ಕೊಂಡು ಗಲಾಟೆ
    – ವಧು ಕಿರುಚಿದಾಗ ಸಂಬಂಧಿಕರಿಗೆ ಎಚ್ಚರ

    ಚೆನ್ನೈ: ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮೊದಲ ರಾತ್ರಿಯೇ ಪತ್ನಿಯನ್ನು ಕೊಂದು ವರ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುವೆಲ್ಲೂರ್ ನಲ್ಲಿ ನಡೆದಿದೆ.

    ಸಂಧ್ಯಾ (20) ಕೊಲೆಯಾದ ವಧು. ನೀತಿವಾಸನ್ (24) ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವರ. ಮೃತ ಸಂಧ್ಯಾ ಮತ್ತು ನೀತಿವಾಸನ್ ಇಬ್ಬರು ಸಂಬಂಧಿಗಳಾಗಿದ್ದರು. ದೇಶಾದ್ಯಂತ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದ ಕಾರಣ ಎರಡು ಕುಟುಂಬದ 20 ಮಂದಿಯ ಸಮ್ಮುಖದಲ್ಲಿ ಬುಧವಾರ ಬೆಳಗ್ಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬುಧವಾರ ರಾತ್ರಿಯೇ ನವ ದಂಪತಿಗೆ ಮೊದಲ ರಾತ್ರಿಯನ್ನು ಕುಟುಂಬಸ್ಥರು ಆಯೋಜನೆ ಮಾಡಿದ್ದರು. ಸಂಬಂಧಿಕರು ಮನೆಯ ಹಾಲ್‍ನಲ್ಲಿ ನಿದ್ದೆ ಮಾಡುತ್ತಿದ್ದರು, ದಂಪತಿ ರೂಮಿನಲ್ಲಿದ್ದರು.

    ಸ್ವಲ್ಪ ಸಮಯ ನಂತರ ರೂಮಿನಲ್ಲಿ ಸಂಧ್ಯಾ ಜೋರಾಗಿ ಕೂಗಿಕೊಂಡಿದ್ದಾಳೆ. ತಕ್ಷಣ ಗಾಬರಿಯಿಂದ ಎಚ್ಚರಗೊಂಡ ಸಂಬಂಧಿಕರು ಬಾಗಿಲು ಬಡಿದಿದ್ದಾರೆ. ಆಗ ನೀತಿವಾಸನ್ ಬಾಗಿಲು ತೆರೆದು ಅವರನ್ನು ತಳ್ಳಿ ರೂಮಿನಿಂದ ಓಡಿ ಹೋಗಿದ್ದಾನೆ. ಸಂಬಂಧಿಕರು ರೂಮಿನೊಳಗೆ ಹೋಗಿ ನೋಡಿದ್ದಾರೆ. ಅಲ್ಲಿ ಸಂಧ್ಯಾ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ತಕ್ಷಣ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿ ಸಂಧ್ಯಾಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಸಂಧ್ಯಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ವರ ನೀತಿವಾಸನ್‍ಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಗ್ರಾಮಸ್ಥರು ಮರಕ್ಕೆ ಯಾರೋ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದ್ದು, ಅಲ್ಲಿ ವರ ನೀತಿವಾಸನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

    ರೂಮಿನಲ್ಲಿ ದಂಪತಿ ಟಿವಿ ಹಾಕಿ ಜೋರಾಗಿ ಸೌಂಡ್ ಕೊಟ್ಟಿದ್ದರು. ಹೀಗಾಗಿ ಯಾವ ಕಾರಣಕ್ಕೆ ದಂಪತಿ ಜಗಳ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ನೀತಿವಾಸನ್ ಪತ್ನಿಯನ್ನು ಕೊಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇತ್ತ ಎರಡು ಕುಟುಂಬದವರು ಇಬ್ಬರ ಸಾವಿನಿಂದ ಆಘಾತಕ್ಕೋಳಗಾಗಿದ್ದಾರೆ.

  • ಮದ್ವೆಯಾಗಿ ಮೂರು ರಾತ್ರಿ ಕಳೆದ್ರೂ ಬದ್ಲಾಗದ ಪತಿಯ ವಿರುದ್ಧ ದೂರು

    ಮದ್ವೆಯಾಗಿ ಮೂರು ರಾತ್ರಿ ಕಳೆದ್ರೂ ಬದ್ಲಾಗದ ಪತಿಯ ವಿರುದ್ಧ ದೂರು

    – ಫಸ್ಟ್ ನೈಟ್‍ನಲ್ಲಿ ನಂಗೆ ಫೀಲಿಂಗ್ಸ್ ಇಲ್ಲ ಎಂದ ಗಂಡ

    ಕೋಲ್ಕತ್ತಾ: ಮದುವೆಯಾಗಿ ಮೂರು ದಿನ ಕಳೆದರೂ ಪತಿಯ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣದಿದ್ದಕ್ಕೆ ಪತ್ನಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಕಳೆದ ವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನ ಯುವತಿ ಅದೇ ಪ್ರದೇಶದ ಯುವಕನ ಜೊತೆ ಮದುವೆಯಾಗಿದ್ದಾಳೆ. ಮರುದಿನ ದಂಪತಿಗೆ ಕುಟುಂಬದವರು ಮೊದಲ ರಾತ್ರಿಯನ್ನು ಏರ್ಪಡಿಸಿದ್ದರು. ನವವಧು ಅನೇಕ ಕನಸುಗಳನ್ನು ಇಟ್ಟುಕೊಂಡು ಫಸ್ಟ್ ನೈಟ್ ರೂಮಿಗೆ ಹಾಲು ತೆಗೆದುಕೊಂಡು ಹೋಗಿದ್ದಾಳೆ. ಪತಿ ರೂಮಿನಲ್ಲಿ ಹಾಸಿಗೆ ಮೇಲೆ ಕುಳಿತುಕೊಂಡಿದ್ದನು.

    ಪತಿ ಹಾಲು ಕುಡಿದು ತಕ್ಷಣ ಮಲಗಿಕೊಂಡಿದ್ದಾನೆ. ಇದನ್ನು ನೋಡಿದ ಪತ್ನಿ ಅಚ್ಚರಿಗೊಂಡಿದ್ದಾಳೆ. ನಂತರ ಪತಿಯನ್ನು ಎಬ್ಬಿಸಲು ಪ್ರಯತ್ನ ಮಾಡಿದ್ದಾಳೆ. ಆಗ ಪತಿ “ನನಗೆ ಅಂತಹ ಭಾವನೆಗಳಿಲ್ಲ” ಎಂದು ಹೇಳಿ ಮಲಗಿಕೊಂಡಿದ್ದಾನೆ. ಪತಿಯ ಮಾತು ಕೇಳಿ ಶಾಕ್ ಆದ ಪತ್ನಿ ಕೆಲವು ದಿನಗಳ ನಂತರ ಸರಿ ಹೋಗಬಹುದು ಎಂದು ಸುಮ್ಮನಾಗಿದ್ದಾಳೆ.

    ಆದರೆ ಮೂರು ರಾತ್ರಿ ಕಳೆದರು ಪತಿಯ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಜೊತೆ ಹೊಸದಾಗಿ ಮದುವೆಯಾಗಿದ್ದರು ಪತ್ನಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದನು. ತಕ್ಷಣ ಪೋಷಕರಿಗೆ ಫೋನ್ ಮಾಡಿ ಮೂರು ರಾತ್ರಿ ರೂಮಿನಲ್ಲಿ ನಡೆದುದ್ದನ್ನು ಹೇಳಿಕೊಂಡಿದ್ದಾಳೆ.

    ಇತ್ತ ಅತ್ತೆ ಮನೆಯವರು ನನ್ನ ಮಗನಲ್ಲಿ ಯಾವುದೇ ದೋಷವಿಲ್ಲ, ನೀನು ಸುಮ್ಮನೇ ಸುಳ್ಳು ಆರೋಪ ಮಾಡುತ್ತಿದ್ದೀಯಾ ಎಂದು ವಾದಿಸಿದ್ದಾರೆ. ಇದರಿಂದ ಕೋಪಗೊಂಡ ಪತ್ನಿ ಪೊಲೀಸ್ ಠಾಣೆಗೆ ಹೋಗಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಫಸ್ಟ್ ನೈಟ್ ರೂಮಿಗೆ ಹೋದ ವಧು ನಾಪತ್ತೆ -ಮರುದಿನ ವರ ಶಾಕ್

    ಫಸ್ಟ್ ನೈಟ್ ರೂಮಿಗೆ ಹೋದ ವಧು ನಾಪತ್ತೆ -ಮರುದಿನ ವರ ಶಾಕ್

    -ಹಣ, ಒಡವೆ ದೋಚಿ ಅಣ್ಣನೊಂದಿಗೆ ಎಸ್ಕೇಪ್

    ಡೆಹ್ರಾಡೂನ್: ಮದುವೆಯ ಮೊದಲ ರಾತ್ರಿಯೇ ನವವಧು ಹಣ, ಚಿನ್ನವನ್ನು ದೋಚಿಕೊಂಡು ತನ್ನ ಸ್ವಂತ ಸಹೋದರನ ಜೊತೆ ಪರಾರಿಯಾಗಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.

    ಶಹಜಹಾನ್ಪುರ ನಿವಾಸಿ ನವವಧು ವರನ ಮನೆಯಿಂದ ಹಣ, ಒಡವೆಯನ್ನು ದೋಚಿಕೊಂಡು ಅಣ್ಣನೊಂದಿಗೆ ಪರಾರಿಯಾಗಿದ್ದಾಳೆ.

    ಏನಿದು ಪ್ರಕರಣ:
    ಚಂಡೀಗಢದ ಕಲ್ಕಾ ಪ್ರದೇಶದ ನಿವಾಸಿ ವರನ ಸೋದರಿ ಸೋನಿಯಾ ತಮ್ಮ ಸಂಬಂಧಿಕರ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಶಹಜಹಾನ್ಪುರದ ಹುಡುಗಿಯ ಬಗ್ಗೆ ತಿಳಿದುಕೊಂಡಿದ್ದಾಳೆ. ಆಕೆ ತನ್ನ ಅಣ್ಣನ ಜೊತೆ ವಾಸವಾಗಿದ್ದಳು. ನಂತರ ಹುಡುಗಿಯನ್ನು ಒಪ್ಪಿಕೊಂಡು ಸೋನಿಯಾ ತಮ್ಮ ಸಹೋದರನ ಜೊತೆ ಮದುವೆ ಮಾಡಿಸಿದ್ದಾಳೆ.

    ವರನ ಕುಟುಂದವರು ನವ ವಧು ಮತ್ತು ವರನಿಗೂ ಹರಿದ್ವಾರದಲ್ಲಿ ಮದುವೆ ಮಾಡಿ ಹೋಟೆಲಿನಲ್ಲಿ ಫಸ್ಟ್ ನೈಟ್ ಏರ್ಪಡಿಸಿದ್ದರು. ಅದರಂತೆಯೇ ಫಸ್ಟ್ ನೈಟ್ ರೂಮಿಗೆ ವಧುವನ್ನು ಕಳುಹಿಸಿ ಸಂಬಂಧಿಕರು ಬೇರೆ ರೂಮಿನಲ್ಲಿ ಹೋಗಿ ಮಲಗಿಕೊಂಡಿದ್ದರು.

    ಮರುದಿನ ವರನಿಗೆ ಎಚ್ಚರವಾದಾಗ ವಧು ಕಾಣಿಸಲಿಲ್ಲ. ಬಳಿಕ ಪಕ್ಕದ ರೂಮಿನಲ್ಲಿರಬೇಕು ಎಂದು ಹೋಗಿ ನೋಡಿದ್ದಾನೆ. ಅಲ್ಲೂ ವಧು ಇರಲಿಲ್ಲ. ನಂತರ ವರನ ಜೊತೆ ಸಂಬಂಧಿಕರು ಸೇರಿಕೊಂಡು ಇಡೀ ಹೋಟೆಲ್ ಹುಡುಕಾಡಿದ್ದಾರೆ. ಆದರೆ ವಧು ಮಾತ್ರ ಎಲ್ಲೂ ಪತ್ತೆಯಾಗಿಲ್ಲ. ಇತ್ತ ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 50,000 ಸಾವಿರ ನಗದು ಕೂಡ ಕಾಣೆಯಾಗಿತ್ತು. ಆಗ ಸಂಬಂಧಿಕರಿಗೆ ವಧುವಿನ ಬಗ್ಗೆ ಅನುಮಾನ ಬಂದಿದೆ.

    ವರ, ಆತನ ಸಂಬಂಧಿಕರು ಮಲಗಿಕೊಂಡ ನಂತರ ಹಣ, ಒಡೆಯವನ್ನು ದೋಚಿಕೊಂಡು ವಧು ತನ್ನ ಸೋದರನೊಂದಿಗೆ ಪರಾರಿಯಾಗಿದ್ದಾಳೆ ಎಂದು ತಿಳಿದಿದೆ. ತಕ್ಷಣ ವರನ ಸಂಬಂಧಿಕರು ಹರಿದ್ವಾರ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ರುಡ್ಕಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ ಎಂದು ಹೇಳಿದ್ದಾರೆ. ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

  • ಮೊದಲ ರಾತ್ರಿಯೇ ಕಣ್ಣೀರಿಟ್ಟು ಮನೆ ಬಿಟ್ಟು ಬಂದ ವಧು

    ಮೊದಲ ರಾತ್ರಿಯೇ ಕಣ್ಣೀರಿಟ್ಟು ಮನೆ ಬಿಟ್ಟು ಬಂದ ವಧು

    ಲಕ್ನೋ: ನೂರಾರು ಕನಸು ಕಟ್ಟಿಕೊಂಡು ವಧು ಮದುವೆಯಾಗಿ ಪತಿಯ ಮನೆಗೆ ಹೋಗಿರುತ್ತಾಳೆ. ಆದರೆ ಉತ್ತರ ಪ್ರದೇಶ ಆಗ್ರಾದಲ್ಲಿ ಮೊದಲ ರಾತ್ರಿಯೇ ಪತಿಯೊಬ್ಬ ಮಾನಸಿಕ ಅಸ್ವಸ್ಥ ಎಂದು ತಿಳಿದು ಕಣ್ಣೀರಿಟ್ಟು ಮನೆ ಬಿಟ್ಟು ಹೋಗಿದ್ದಾರೆ.

    ಈ ಘಟನೆ ಆಗ್ರದ ಬಾಹ್ ತೆಹ್ಸಿಲ್ ಅಶೋಕ್ ನಗರದಲ್ಲಿ ನಡೆದಿದೆ. ಆಗ್ರಾದ ನಿವಾಸಿಯಾದ ಸುರೇಶ್ ಮಿಶ್ರಾ ಅವರ ಮಗ ಧೀರಜ್ ಗೆ ಜನವರಿ 22ರಂದು ವಧು ತನು ಜೊತೆ ಮದುವೆ ನಡೆದಿತ್ತು. ನಂತರ ಜನವರಿ 23ರಂದು ತನು ಪತಿಯ ಮನೆಗೆ ಹೋಗಿದ್ದಾರೆ. ಅಂದು ಮೊದಲ ರಾತ್ರಿಯ ಕಾರ್ಯಕ್ರಮವಿತ್ತು. ಆದ್ದರಿಂದ ತನು ರೂಮಿಗೆ ಹೋಗಿದ್ದು, ಆಗ ಪತಿ ಧೀರಜ್ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲದೇ ಧೀರಜ್ ತಂದೆ-ತಾಯಿ ಕೂಡ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದಿದೆ. ಇದರಿಂದ ನೊಂದ ವಧು ತನು ಕಣ್ಣೀರಿಟ್ಟು ಮುಂಜಾನೆ ಮನೆಯನ್ನು ಲಾಕ್ ಮಾಡಿ ತವರು ಮನೆಗೆ ಹೋಗಿದ್ದಾರೆ.

    ಇತ್ತ ಎರಡು ದಿನಗಳ ಬಳಿಕ ರೂಮಿನಲ್ಲಿ ಬಂಧಿಯಾಗಿದ್ದ ಧೀರಜ್ ಹಾಗೂ ಪೋಷಕರ ಕಿರುಚಾಡಿದ್ದಾರೆ. ಆಗ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಮನೆ ಬೀಗ ಮುರಿದು ಅವರನ್ನು ರಕ್ಷಿಸಿ, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾದ ಮೆಂಟಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಕಳೆದ ವರ್ಷದ ಅಂದರೆ ಜುಲೈನಲ್ಲಿ ಧೀರಜ್ ಮತ್ತು ತನು ನಿಶ್ಚಿತಾರ್ಥ ನಡೆದಿತ್ತು. ಅಂದು ಹುಡುಗ ಮತ್ತು ಪೋಷಕರ ಆರೋಗ್ಯದಲ್ಲಿ ಅಷ್ಟೇನು ವ್ಯತ್ಯಾಸ ಕಂಡು ಬಂದಿಲ್ಲ. ಆದರೆ ಇದ್ದಕ್ಕಿದ್ದಂತೆ ಮೂವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಸದ್ಯಕ್ಕೆ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಮುಂದುವೆರಿಸಿದ್ದಾರೆ. ಆದರೆ ಒಂದೇ ಬಾರಿ ಮೂವರ ಮಾನಸಿಕ ಸ್ಥಿತಿ ಹದಗೆಡಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಫಸ್ಟ್ ನೈಟ್‍ಗೂ ಮುನ್ನ ಕಿಡ್ನ್ಯಾಪ್ ಆಗಿದ್ದಲ್ಲ, ಆಕೆಗೆ ಮೊದಲೇ ಮದುವೆಯಾಗಿತ್ತು!

    ಫಸ್ಟ್ ನೈಟ್‍ಗೂ ಮುನ್ನ ಕಿಡ್ನ್ಯಾಪ್ ಆಗಿದ್ದಲ್ಲ, ಆಕೆಗೆ ಮೊದಲೇ ಮದುವೆಯಾಗಿತ್ತು!

    – ಕೊಪ್ಪಳ ಜಿಲ್ಲಾ ಎಸ್‍ಪಿ ಕಚೇರಿಗೆ ಬಂದು ರಕ್ಷಣೆ ಕೊಡಿ ಅಂದ್ಳು ವಧು

    ಕೊಪ್ಪಳ: ಫಸ್ಟ್ ನೈಟ್ ದಿನದಂದೇ ವಧು ಕಿಡ್ನ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ನವ ವಧು ಗಾಯತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ದಿಢೀರ್ ಅಂತಾ ಗುರುವಾರ ಸಂಜೆ ಆಗಮಿಸಿದ್ದಾರೆ.

    ಮಾಧ್ಯಮಗಳಲ್ಲಿ ವಧು ನಾಪತ್ತೆ ಪ್ರಕರಣ ವರದಿಯಾಗುತ್ತಿದ್ದಂತೆ ಎಚ್ಚೆತ್ತ ವಧು ನಾಪತ್ತೆ ಕುರಿತು ಸ್ಪಷ್ಟನೆ ನೀಡಲು ಖುದ್ದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದಾರೆ. ಅಲ್ಲದೇ ನಮ್ಮ ಜೀವಕ್ಕೆ ಅಪಾಯವಿದ್ದು, ನಮಗೆ ರಕ್ಷಣೆ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗಾಯತ್ರಿ, ನನ್ನನ್ನು ಯಾರೂ ಅಪಹರಣ ಮಾಡಿಲ್ಲ, ನಾನು ಸ್ವ-ಇಚ್ಛೆಯಿಂದಲೇ ಅವರೊಂದಿಗೆ ಹೋಗಿದ್ದೇನೆ. ನಾನು ಅಂಜುಕುಮಾರ್ ಮೊದಲಿನಿಂದಲೂ ಪ್ರೀತಿಸುತ್ತಿದ್ದೆವು. ನಾವು ಈಗಾಗಲೇ ಮದುವೆಯಾಗಿದ್ದೇವೆ. ನಮ್ಮ ಮನೆಯಲ್ಲಿ ನಮ್ಮ ಪ್ರೀತಿಗೆ ವಿರೋಧವಿತ್ತು. ವಿಷಯ ಗೊತ್ತಿದ್ದರೂ ಸಹ ನಮ್ಮ ಕುಟುಂಬದವರು ನಮ್ಮ ಮಾವನ ಜೊತೆ ಬಲವಂತವಾಗಿ ಮದುವೆ ಮಾಡಿಕೊಟ್ಟಿದ್ದರು. ಹೀಗಾಗಿ ನಾನು ಒಪ್ಪಿಯೇ ಅಂಜನ್ ಜೊತೆ ಹೋಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಕಿಡ್ನ್ಯಾಪ್ ದೂರು ನೀಡಿದ್ದ ಸಂಬಂಧಿಕರು ಪೇಚಿಗೆ ಸಿಲುಕಿದ್ದಾರೆ. ಅಲ್ಲದೇ ಕಾರಟಗಿಯಲ್ಲಿ ಸಂಬಂಧಿಕರ ವಿರುದ್ಧವೂ ಪ್ರತಿ ದೂರು ಕೊಡಲು ಗಾಯತ್ರಿ ಹಾಗೂ ಅಂಜುಕುಮಾರ್ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಏನಿದು ಪ್ರಕರಣ?
    ಕಳೆದ 15 ದಿನದ ಹಿಂದಷ್ಟೇ ಮಲ್ಲನಗೌಡ ಮತ್ತು ಗಾಯತ್ರಿ ಮದುವೆ ನಡೆದಿತ್ತು. ಕುಷ್ಟಗಿ ತಾಲೂಕಿನ ಪುರ ಗ್ರಾಮದಲ್ಲಿ 2 ಕುಟುಂಬಗಳ ಒಪ್ಪಿ ಮದುವೆ ಮಾಡಿಕೊಟ್ಟಿದ್ದರು. ಗಂಗಾವತಿ ತಾಲೂಕಿನ ಗುಡುರು ಗ್ರಾಮದಲ್ಲಿ ಹಿರಿಯರು ನಿಶ್ಚಯಿಸಿದಂತೆ ವಧುವಿನ ತವರು ಮನೆಯಲ್ಲೇ ಫಸ್ಟ್ ನೈಟ್ ನಿಗದಿಯಾಗಿತ್ತು. ಆದರೆ ಆ ಮೊದಲ ರಾತ್ರಿಯಂದೇ ಯುವಕರ ಗುಂಪೊಂದು ಬಂದು ನವ ವಧು ಗಾಯತ್ರಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದರು.

    ಸೋಮನಾಳ ಗ್ರಾಮದ ಅಂಜುಕುಮಾರ್ ರೆಡ್ಡಿ ಮತ್ತು 6 ಜನ ಸಹಚರರು ಸೇರಿ ವಧುವನ್ನು ಕಿಡ್ನಾಪ್ ಮಾಡಿದ್ದರು. ಮನೆಯಲ್ಲಿದ್ದವರು ಇದನ್ನು ತಡೆಯಲು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದಂತೆಯೇ ಸಂಬಂಧಿಕರು ಸಮೀಪದ ಕಾರಟಗಿ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣವನ್ನು ದಾಖಲಿಸಿದ್ದರು. ಇದನ್ನೂ ಓದಿ: ಮದ್ವೆ ಆಯ್ತು ಅಂತಾ ನೆಮ್ಮದಿಯಿಂದಿದ್ದ ನವಜೋಡಿಗೆ ಮೊದಲ ರಾತ್ರಿ ದಿನವೇ ಕಾದಿತ್ತು ಆಪತ್ತು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ವೆ ಆಯ್ತು ಅಂತಾ ನೆಮ್ಮದಿಯಿಂದಿದ್ದ ನವಜೋಡಿಗೆ ಮೊದಲ ರಾತ್ರಿ ದಿನವೇ ಕಾದಿತ್ತು ಆಪತ್ತು

    ಮದ್ವೆ ಆಯ್ತು ಅಂತಾ ನೆಮ್ಮದಿಯಿಂದಿದ್ದ ನವಜೋಡಿಗೆ ಮೊದಲ ರಾತ್ರಿ ದಿನವೇ ಕಾದಿತ್ತು ಆಪತ್ತು

    ಕೊಪ್ಪಳ: ಅಂತು-ಇಂತು ಮದುವೆ ಆಯ್ತು ಅಂತಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ನವ ಜೋಡಿಗೆ ಮೊದಲ ರಾತ್ರಿ ದಿನವೇ ಆಪತ್ತು ಕಾದಿತ್ತು. ನವವಧು ರೂಮ್‍ಗೆ ಹೋಗುವ ಮೊದಲೇ ಕಿರಾತಕರು ಕಿಡ್ನಾಪ್ ಮಾಡಿದ ಪ್ರಕರಣವೊಂದು ಕೊಪ್ಪಳದ ಗಂಗಾವತಿಯಲ್ಲಿ ಬೆಳಕಿಗೆ ಬಂದಿದೆ.

    ಕಳೆದ 15 ದಿನದ ಹಿಂದಷ್ಟೇ ಮಲ್ಲನಗೌಡ ಮತ್ತು ಗಾಯಿತ್ರಿ ಮದುವೆ ಆಗಿತ್ತು. ಕುಷ್ಟಗಿ ತಾಲೂಕಿನ ಪುರ ಗ್ರಾಮದಲ್ಲಿ 2 ಕುಟುಂಬಗಳ ಒಪ್ಪಂದದಿಂದಾನೆ ಮದುವೆ ನಡೆದಿತ್ತು. ಯುವತಿಯ ತವರು ಮನೆ ಗಂಗಾವತಿ ತಾಲೂಕಿನ ಗುಡುರು ಗ್ರಾಮದಲ್ಲಿ ಹಿರಿಯರು ನಿಶ್ಚಯಿಸಿದಂತೆ ವಧು ತವರು ಮನೆಯಲ್ಲೇ ಮೊದಲ ದಿನದ ಪ್ರಸ್ತಾ ಕಾರ್ಯಕ್ರಮವಿತ್ತು.

                                                                 ಮಲ್ಲನಗೌಡ

    ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ನವಜೋಡಿಗಳು ಇಂದು ಸೌಖ್ಯದಿಂದ ಇರುತ್ತಿದ್ದರು. ಆದರೆ ಆ ಮೊದಲ ರಾತ್ರಿ ದಿನ ನಡೆದಿದ್ದೆ ಬೇರೆ. ಆ ದಿನದ ಎಲ್ಲಾ ಸಾಂಪ್ರದಾಯಿಕ ಕಾರ್ಯಕ್ರಮಗಳ ನಂತರ ವಧು ಇನ್ನೇನು ವರ ಕಾಯುತ್ತಿದ್ದ ರೋಮ್‍ಗೆ ಹೋಗಬೇಕಿತ್ತು. ಅಷ್ಟರೊಳಗೆ ಎಲ್ಲಾ ರೀತಿಯ ಪ್ಲ್ಯಾನ್ ಮಾಡಿಕೊಂಡು ಬಂದಿದ್ದ ಒಂದು ಟೀಂ, ವಧು ಗಾಯಿತ್ರಿಯನ್ನು ಕಿಡ್ನಾಪ್ ಮಾಡಿತ್ತು.

                                                                                            ಅಂಜುಕುಮಾರ್ ರೆಡ್ಡಿ

    ಸೋಮನಾಳ ಗ್ರಾಮದ ಅಂಜುಕುಮಾರ್ ರೆಡ್ಡಿ ಮತ್ತು 6 ಜನ ಸಹಚರರು ಸೇರಿ ವಧುವನ್ನು ಕಿಡ್ನಾಪ್ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದವರು ಇದನ್ನು ತಡೆಯಲು ಯತ್ನಿಸಿದ್ರೂ ಅದು ಸಾಧ್ಯವಾಗಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದಂತೆಯೇ ಸಮೀಪದ ಕಾರಟಗಿ ಪೊಲೀಸ್ ಠಾಣೆಗೆ ಕಿಡ್ನಾಪ್ ಮಾಡಿದವರ ವಿರುದ್ಧ ದೂರು ನೀಡಲು ಕುಟುಂಬಸ್ಥರು ಹೋಗಿದ್ದಾರೆ. ಆದರೆ ಪೊಲೀಸರು ಮಾತ್ರ ಕಾಟಾಚಾರಕ್ಕೆ ಎಂಬಂತೆ ದೂರು ಸ್ವೀಕರಿಸಿ ತನಿಖೆ ಕೈಗೊಳ್ಳದೆ ಕೂತಿದ್ದಾರೆ.

    ಪ್ರಕರಣ ದಾಖಲಾಗಿ ಇಂದಿಗೆ ಮೂರು ದಿನ ಕಳೆದರೂ ದೂರು ನೀಡಿದವರಲ್ಲಿ ಯಾರೊಬ್ಬರನ್ನೂ ಕರೆದು ವಿಚಾರಣೆ ನೆಡಸಿಲ್ಲ. ಅಂದು ನಮ್ಮ ಕಣ್ಣ ಮುಂದೆ ಕಿಡ್ನಾಪ್ ಮಾಡಿದವರು ಇಂದು ನಮ್ಮ ಕಣ್ಣೆದುರಿಗೆ ತಿರುಗಾಡುತ್ತಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ತನಿಖೆ ನೆಡಸುತ್ತಿಲ್ಲ ಎಂದು ದೂರು ನೀಡಿದ ಮಲ್ಲನಗೌಡ ಕುಟುಂಬದವರು ಪೊಲೀಸರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv