Tag: First Look Teaser

  • ಸ್ಪಾರ್ಕ್ ಸಿನಿಮಾದ ವಿಭಿನ್ನ ಪಾತ್ರದಲ್ಲಿ ಉಪೇಂದ್ರ ಸಹೋದರನ ಮಗ

    ಸ್ಪಾರ್ಕ್ ಸಿನಿಮಾದ ವಿಭಿನ್ನ ಪಾತ್ರದಲ್ಲಿ ಉಪೇಂದ್ರ ಸಹೋದರನ ಮಗ

    ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ (Niranjan Sudhindra) ನಾಯಕನಾಗಿ ನಟಿಸುತ್ತಿರುವ ಸಿನಿಮಾ ಸ್ಪಾರ್ಕ್ (Spark Kannada Movie). ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ನಿರಂಜನ್ ಪತ್ರಕರ್ತನಾಗಿ ಅಭಿನಯಿಸಿದ್ದು, ಈ ಚಿತ್ರದಲ್ಲಿ ಒಂದು ವಿಶಿಷ್ಟ ಪಾತ್ರದಲ್ಲಿ ನೆನಪಿರಲಿ ಪ್ರೇಮ್ ಕಾಣಿಸಿಕೊಂಡಿದ್ದಾರೆ. ಒಂದು ಹಗರಣದ ಸುತ್ತ ಸಾಗುವ ಕಥೆಯನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಸತ್ಯಕ್ಕಾಗಿ ನಿರಂಜನ್ ಹೋರಾಟ ಹೇಗಿದೆ ಅನ್ನೋದನ್ನು ಟೀಸರ್ ನಲ್ಲಿ ತೋರಿಸಲಾಗಿದೆ.

    ಟೀಸರ್ ಬಿಡುಗಡೆ (SPARK Teaser) ಬಳಿಕ ಮಾತನಾಡಿದ ನಟ ನಿರಂಜನ್ ಸುಧೀಂದ್ರ, ಸ್ಪಾರ್ಕ್ ಎಲ್ಲರ ಮನಸ್ಸಿನಲ್ಲಿರುವ ಕಿಡಿ. ಏನೇ ಹಗರಣ, ಏನೇ ನಡೆದರು ಮೊದಲು ಧ್ವನಿ ಎತ್ತುವುದು ಪತ್ರಕರ್ತರು. ಅವರಿಗೆ ಸಿಗುವ ಗೌರವ ಹಾಗೂ ಗುರುತಿಸುವಿಗೆ ಮಿಸ್ ಆಗುತ್ತಿದೆ. ನಾನು ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರ ನಿರ್ವಹಿಸುತ್ತಿದ್ದೇನೆ. ಇದು ದೊಡ್ಡ ಜವಾಬ್ದಾರಿ. ಇದರಲ್ಲಿ ಬರವಣಿಗೆ ತುಂಬಾ ಸ್ಟ್ರಾಂಗ್ ಆಗಿದೆ. ಇದು ಹಗರಣ ಕಥಾಹಂದರ ಹೊಂದಿರುವ ಚಿತ್ರ. ಕಮರ್ಷಿಯಲ್ ಆಗಿ ಈ ಸಿನಿಮಾ ಮೂಡಿಬಂದಿದೆ ಎಂದರು.

    ನೆನಪಿರಲಿ ಪ್ರೇಮ್ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುರಸುಂದರಾಗ ಹೀರೋಗಳು ಇದ್ದಾರೆ. ಅದಕ್ಕೆ ಹೊಸ ಸೇರ್ಪಡೆ ನಿರಂಜನ್. ಗರಿಮ ಮೇಡಂ ಇರುವ ರೇಂಜ್ ಗೆ ಬೇರೆ ಯಾವುದೋ ಭಾಷೆ ಸಿನಿಮಾ ಮಾಡಬಹುದು. ಆದರೆ ನಿಮಗೆ ಕನ್ನಡದ ಮೇಲೆ ಇರುವ ಅಭಿಮಾನದಿಂದ ಕನ್ನಡ ಚಿತ್ರ ಮಾಡಿದ್ದೀರ. ಧನ್ಯವಾದ ನಿಮಗೆ. ನಾನು ಇಂಡಸ್ಟ್ರಿಗೆ ಮಾಸ್ ಹೀರೋ ಅಗಬೇಕು ಎಂದು ಬಂದೆ. ಆದರೆ ಬ್ಯಾಕ್ ಟು ಬ್ಯಾಕ್ ಲವ್ ಸ್ಟೋರಿ ಸಿನಿಮಾ ಮಾಡಿ ಅದು ಹಿಟ್ ಆಗಿ ನನ್ನ ಕ್ಲಾಸ್ ಹೀರೋ ಎಂದು ಪ್ರಿಂಟ್ ಹೊಡೆದು ಇಟ್ಟರು. ನನ್ನಲ್ಲಿರುವ ಸ್ಪಾರ್ಕ್ ನೋಡಿ ಮಹಾಂತೇಶ್ ನನಗೆ ಮಾಸ್ ಕ್ಯಾರೆಕ್ಟರ್ ಕೊಟ್ಟಿದ್ದಾರೆ ಎಂದರು.

    ನಿರ್ದೇಶಕ ಮಹಾಂತೇಶ್ ಮಾತನಾಡಿ, ಪ್ರೇಮ್ ಸರ್ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಅವರ ಡೆಡಿಕೇಷನ್, ಪಾತ್ರಕ್ಕೆ ತಯಾರಾಗುವು ರೀತಿ ನೋಡಿ ನಾನು ಸ್ಫೂರ್ತಿ ಪಡೆದುಕೊಂಡೆ. ನಿರಂಜನ್ ಅವರು ತುಂಬಾ ಹಂಬಲ್ ನಟ. ಒಬ್ಬ ಹೊಸ ನಿರ್ದೇಶಕನಿಗೆ ಆರ್ಟಿಸ್ಟ್ ಹಾಗೂ ಟೆಕ್ನಿಷಿಯನ್ಸ್ ಸಪೋರ್ಟ್ ಚೆನ್ನಾಗಿ ಸಿಗಬೇಕು. ನನಗೆ ಈ ಚಿತ್ರದಲ್ಲಿ ಅದು ಸಿಕ್ಕಿದೆ. ಸ್ಪಾರ್ಕ್ ಸಿನಿಮಾ ಒಂದು ಸ್ಕ್ಯಾಮ್ ಬಗ್ಗೆ ಹೇಳೋದಿಕ್ಕೆ ಹೊರಟಿರುವ ಚಿತ್ರ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಸಚಿನ್ ಬಸ್ರೂರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ ಎಂದರು.

    ಜೇಮ್ಸ್, ಭರಾಟೆ, ಕನಕ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ದುಡಿದಿರುವ ಡಿ.ಮಹಾಂತೇಶ್ ಹಂದ್ರಾಳ್ ಸ್ಪಾರ್ಕ್ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ರಚನಾ ಇಂದರ್ ಅಭಿನಯಿಸುತ್ತಿದ್ದಾರೆ. ರಮೇಶ್ ಇಂದಿರಾ, ಧರ್ಮಣ್ಣ ಕಡೂರು, ಸಾಧು ಕೋಕಿಲಾ, ಬಲರಾಜವಾಡಿ, ನರೇಂದ್ರ ಬಾಬು ಹಾಗೂ ಗಣೇಶ್ ರಾವ್ ತಾರಾಬಳಗದಲ್ಲಿದ್ದಾರೆ.

    ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸ್ಪಾರ್ಕ್ ಚಿತ್ರ ಡಾ.ಗರಿಮಾ ಅವಿನಾಶ್ ವಸಿಷ್ಠ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸ್ವಾಮಿ ಜೆ ಗೌಡ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಮಧು ಸಂಕಲನ ಈ ಚಿತ್ರಕ್ಕಿದೆ.

  • ನಟ ಪ್ರಖ್ಯಾತ್ ಹುಟ್ಟು ಹಬ್ಬಕ್ಕೆ ‘JC’ ಸಿನಿಮಾದ ಫಸ್ಟ್ ಲುಕ್ ಟೀಸರ್

    ನಟ ಪ್ರಖ್ಯಾತ್ ಹುಟ್ಟು ಹಬ್ಬಕ್ಕೆ ‘JC’ ಸಿನಿಮಾದ ಫಸ್ಟ್ ಲುಕ್ ಟೀಸರ್

    ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ (Dolly Dhananjay) ಅವರ ‘ಡಾಲಿ ಪಿಕ್ಚರ್ಸ್’ ನಿರ್ಮಾಣದ ‘ಜೆಸಿ’ (JC) ಸಿನಿಮಾದ ಹೀರೋ ಪ್ರಖ್ಯಾತ್ (Prakyath) ಹುಟ್ಟು ಹಬ್ಬಕ್ಕೆ ಚಿತ್ರದ ಫಸ್ಟ್ ಲುಕ್ ಟೀಸರ್ (First Look Teaser) ರಿಲೀಸ್ ಆಗಿದೆ. ಪ್ರಖ್ಯಾತ ಹುಟ್ಟು ಹಬ್ಬಕ್ಕೆ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ ಡಾಲಿ ಧನಂಜಯ್.

    ‘ಡಾಲಿ ಪಿಕ್ಚರ್ಸ್’ನಿಂದ ನಿರ್ಮಾಣವಾಗುತ್ತಿರುವ 5ನೇ ಸಿನಿಮಾ  ಇದಾಗಿದ್ದು, ಸೂಪರ್ ಸಕ್ಸಸ್ ನೀಡಿರುವ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ ಡಾಲಿ ಪಿಕ್ಚರ್ಸ್ ನಿಂದ ‘ನಡುವೆ ಅಂತರವಿರಲಿ’ ಖ್ಯಾತಿಯ ನಟ ಪ್ರಖ್ಯಾತ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೆಸಿ ಎಂದರೆ ಜುಡಿಸಿಯಲ್ ಕಸ್ಟಡಿ. ಜೈಲಿಂದ ಹೊರ ಬಂದ ಯುವಕನ ಕಥೆ ಇದಾಗಿದೆ.

    ಮೊನ್ನೆಯಷ್ಟೇ ಜೆಸಿ ಸಿನಿಮಾದ ಮುಹೂರ್ತ ನೆರವೇರಿದೆ. ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಮಾಡುವ ಮೂಲಕ ಜೆಸಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಮುಹೂರ್ತದ ಸಮಯದಲ್ಲಿ ಇಡೀ ಸಿನಿಮಾತಂಡ ಹಾಜರಿತ್ತು. ಡಾಲಿ ಧನಂಜಯ ತಮ್ಮದೇ ನಿರ್ಮಾಣದ 5ನೇ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿ ತಂಡಕ್ಕೆ ಶುಭಹಾರೈಸಿದರು.

    ಜೆಸಿ ಫಸ್ಟ್ ಲುಕ್ ನಲ್ಲಿ ಬೆಂಗಳೂರು ಕಾರಾಗೃಹ, ಜೈಲು ಕಂಬಿಗಳನ್ನು ನೋಡಬಹುದು. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಬಿಟ್ಟುಕೊಡಲಿದ್ದಾರೆ. ಇನ್ನು 2018ರಲ್ಲಿ ರಿಲೀಸ್ ಆಗಿದ್ದ ನಡುವೆ ಅಂತವಿರಲಿ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಪ್ರಖ್ಯಾತ್ ನಟನೆಯ 2ನೇ ಸಿನಿಮಾ ಇದಾಗಿದೆ. ಸುಮಾರು 5 ವರ್ಷಗಳ ಬಳಿಕ  ಪ್ರಖ್ಯಾತ್ ಹೀರೋ ಆಗಿ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

    ಅಂದಹಾಗೆ ‘ಜೆಸಿ’ ಸಿನಿಮಾಗೆ ಚೇತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ಚೇತನ್ ಜೈರಾಮ್ ಅವರಿಗೂ ಇದು ಮೊದಲ ಸಿನಿಮಾ. ಪಕ್ಕಾ ಮಾಸ್ ಸಿನಿಮಾ ಇದಾಗಿದ್ದು ಚಿತ್ರಕ್ಕೆ ಮಾಸ್ತಿ ಅವರ ಖಡಕ್ ಡೈಲಾಗ್ ಇರಲಿದೆ.  ಕಾರ್ತಿಕ್ ಅವರ ಛಾಯಾಗ್ರಾಹಣ, ರೋಹಿತ್ ಸೋವರ್ ಅವರ ಸಂಗೀತ ಜೆಸಿ ಸಿನಿಮಾಗೆ ಇರಲಿದೆ.