Tag: First Lady

  • ನಾನಾ ವೇಷ ತೊಟ್ಟು ಜನರಿಗೆ ಟೋಪಿ ಹಾಕಿದ್ದ ಸ್ವಾಮೀಜಿ ಪೊಲೀಸರ ಅತಿಥಿ!

    ನಾನಾ ವೇಷ ತೊಟ್ಟು ಜನರಿಗೆ ಟೋಪಿ ಹಾಕಿದ್ದ ಸ್ವಾಮೀಜಿ ಪೊಲೀಸರ ಅತಿಥಿ!

    – ಪೊಲೀಸರಿಗೂ 45 ಸಾವಿರ ರೂ. ವಂಚನೆ

    ಕೊಪ್ಪಳ: ನಾನಾ ವೇಷ ತೊಟ್ಟು ಜನರಿಗೆ ಟೋಪಿ ಹಾಕಿದ್ದ ಸ್ವಾಮೀಜಿಯನ್ನು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಬಂಧಿಸಿದ್ದಾರೆ.

    ಕಪಟ ಸ್ವಾಮೀಜಿ ಶಿವಾನಂದ ಕಡಿಯನ್ನು ಪೊಲೀಸರು ಬಂಧಿಸಿದ್ದು, ಮೂಲತಃ ಈತನ ಹೆಸರು ಸಿದ್ದರಾಮ ಆಗಿದ್ದು, ಕಲಬುರಗಿ ಜಿಲ್ಲೆಯ ಜೇವರ್ಗಿ ನಿವಾಸಿಯಾಗಿದ್ದಾನೆ. ನಾನು ಸ್ವಾಮೀಜಿ ಎಂದು ಸುಳ್ಳು ಹೇಳಿ ನೂರಾರು ಜನರಿಗೆ ವಂಚನೆ ಮಾಡಿದ್ದನು. ಅಲ್ಲದೆ ಅಪ್ರಾಪ್ತ ಬಾಲಕಿಗೂ ಸಹ ಈ ಸ್ವಾಮೀಜಿ ವಂಚನೆಯನ್ನು ಮಾಡಿದ್ದನು. ಬಾಲಕಿಯನ್ನು ಈತ ನಾನು ಟಿಕೆಟ್ ಕಲೆಕ್ಟರ್ ಎಂದು ವಂಚನೆ ಮಾಡಿದ್ದಾನೆ. ಈ ಹಿನ್ನೆಲೆ ಬಾಲಕಿ ತಂದೆ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮೆಟ್ರೋ ನಿಲ್ದಾಣದ ಗ್ರಿಲ್‍ನಲ್ಲಿ ಸಿಲುಕಿದ್ದ ಬಾಲಕಿ ರಕ್ಷಿಸಿದ CISF ಸಿಬ್ಬಂದಿ!

    ಅಲ್ಲದೆ ಸಿದ್ದರಾಮ ಈ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದನು. ಈ ವಿಷಯ ತಿಳಿದ ಬಾಲಕಿ ತಂದೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿದ್ದರಾಮನ ಆಟ ಬಯಲಾಗಿದೆ. ಈ ಪರಿಣಾಮ ಸ್ವಾಮೀಜಿಯನ್ನು ಕೊಪ್ಪಳದ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರಿಗೂ ಮೋಸ ಮಾಡಿದ ಈತ, ಪೊಲೀಸ್ ವಾಕಿ ಟಾಕಿಗೆ ಪೂಜೆ ಮಾಡುತ್ತೇನೆ ಎಂಬ ಹೆಸರಲ್ಲಿ 45 ಸಾವಿರ ಹಣ ವಸೂಲಿ ಮಾಡಿದ್ದಾನೆ. ಸಿದ್ದರಾಮ ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಪೋತಲಕಟ್ಟಿಯಲ್ಲಿ ಮಠ ಮಾಡಿಕೊಂಡಿದ್ದು, ಅಲ್ಲಿಗೆ ಬಂದ ಜನರಿಗೆ ವಂಚನೆ ಮಾಡುತ್ತಿದ್ದಾನೆ ಎಂಬುದು ತನಿಖೆ ಮೂಲಕ ಬೆಳಕಿಗೆ ಬಂದಿದೆ.

    ಅಷ್ಟೇ ಅಲ್ಲದೆ ನಿಧಿ ತಗೆದುಕೊಡೋದಾಗಿ ಹೇಳಿ ನಿಧಿ ತಗೆಯೋದೆಲ್ಲಾ ವೀಡಿಯೋ ಮಾಡಿಸಿಕೊಂಡಿದ್ದಾನೆ ಈ ಕಪಟ ಸ್ವಾಮೀ. ‘ಮಂತ್ರದಿಂದ ಹಣ ಉದುರತ್ತೆ’ ಎಂದು ಜನರಿಗೆ ಟೋಪಿ ಹಾಕಿ ಲಕ್ಷಾಂತರ ಹಣ ವಂಚನೆ ಮಾಡಿದ್ದಾನೆ. ರಾಯಚೂರು, ಕೊಪ್ಪಳ ಮಾತ್ರವಲ್ಲದೆ ರಾಜ್ಯದ ನಾನಾ ಭಾಗದಲ್ಲಿ ಇವನು ಜನರನ್ನು ವಂಚನೆ ಮಾಡಿದ್ದು, ಈಗ ಪೊಲೀಸರ ಬಲೆ ಸಿಕ್ಕಿ ಬಿದ್ದಿದ್ದಾನೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ

    ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಅಪ್ರಾಪ್ತ ಬಾಲಕಿ ತಂದೆಯ ದೂರಿನ ಆಧಾರದ ಮೇಲೆ ಕೊಪ್ಪಳ ಮಹಿಳಾ ಪೊಲೀಸರು ಕಳ್ಳ ಸ್ವಾಮೀಜಿಯನ್ನು ಬಂಧಿಸಿದ್ದಾರೆ.

  • ಫಸ್ಟ್ ಟೈಂ, ಪುರುಷರ ಕ್ರಿಕೆಟ್‍ಗೆ ಮಹಿಳಾ ಅಂಪೈರ್!

    ಫಸ್ಟ್ ಟೈಂ, ಪುರುಷರ ಕ್ರಿಕೆಟ್‍ಗೆ ಮಹಿಳಾ ಅಂಪೈರ್!

    ಸಿಡ್ನಿ: ಐಸಿಸಿ ಇತ್ತೀಚೆಗೆ ಹಲವು ಬದಲಾವಣೆಗಳನ್ನು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕ್ರಿಕೆಟ್‍ನಲ್ಲಿ ಮಹಿಳೆಯರಿಗೆ ಎಲ್ಲಾ ರೀತಿಯ ಸ್ಥಾನಮಾನ ನೀಡುವ ದೃಷ್ಟಿಯಿಂದ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಮಹಿಳೆಯೊಬ್ಬರು ಪುರುಷರ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಲು ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ.

    ಹೌದು. ಕ್ರಿಕೆಟ್ ಜಗತ್ತಿನಲ್ಲಿ ಇಂತಹದ್ದೊಂದು ಇತಿಹಾಸ ನಿರ್ಮಾಣವಾಗಿದೆ. ಆಸ್ಟ್ರೇಲಿಯಾ ಮೂಲದ 29 ವರ್ಷದ ಕ್ಲೇರ್ ಪೊಲೊಸಾಕ್ ಆಯ್ಕೆಯಾಗುವ ಮೂಲಕ ಪುರುಷರ ಕ್ರಿಕೆಟ್‍ಗೆ ಅಂಪೈರ್ ಆದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

                       

    ಆಸ್ಟ್ರೇಲಿಯಾದ ಹಸರ್ಟ್ ವಿಲ್ಲೆ ಓವಲ್‍ನಲ್ಲಿ ನಡೆಯಲಿರುವ ಪುರುಷರ ಪ್ರಥಮ ದರ್ಜೆ ಪಂದ್ಯದಲ್ಲಿ ಮಹಿಳಾ ಅಂಪೈರ್ ಕ್ಲೇರ್ ಪೊಲೊಸಾಕ್ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 8ರಂದು ಭಾನುವಾರ ನಡೆಯಲಿರುವ ನ್ಯೂ ಸೌತ್ ವೆಲ್ಸ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವನ್ ನಡುವಿನ ಏಕದಿನ ಪಂದ್ಯದಲ್ಲಿ ಪೊಲೊಸಾಕ್ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

    ಈ ಬಗ್ಗೆ ಸಿಡ್ನಿಯಲ್ಲಿ ಮಾತನಾಡಿದ ಪೊಲೊಸಾಕ್, ನನಗೆ 29 ವರ್ಷ ವಯಸ್ಸಾಗಿದ್ದು ಈವರೆಗೂ ಯಾವುದೇ ಹಂತದ ಕ್ರಿಕೆಟ್ ಆಡಿಲ್ಲ. ಆದರೆ ಪಂದ್ಯಗಳನ್ನು ಕುತೂಹಲದಿಂದ ವಿಕ್ಷಣೆ ಮಾಡುತ್ತಿದ್ದೆ. ಇದರಿಂದ ನನ್ನ ತಂದೆ ಗೊಲ್ಬರ್ನ್‍ನಲ್ಲಿ ಇರುವ ಅಂಪೈರ್ ಕೋರ್ಸ್‍ಗೆ ಸೇರಿಸಿದರು. ಅಲ್ಲದೇ ಕೆಲವು ಬಾರಿ ಅಂಪೈರ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದೆ. ಉತ್ಸಾಹ ಕಳೆದುಕೊಳ್ಳದೆ ಅಂತಿಮವಾಗಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ತೀರ್ಪುಗಾರ್ತಿಯಾಗಿ ಆಯ್ಕೆಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

                          

    ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಅಂಪೈರ್ ಆಗಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದೆ. ಇದೀಗ ಅಂತಾರಾಷ್ಟ್ರೀಯ ಪುರುಷರ ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.

    ಕ್ಲೇರ್ ಈ ಹಿಂದೆ ಕೆಲ ಪ್ರಾದೇಶಿಕ ಪಂದ್ಯಗಳಿಗೆ ಅಂಪೈರ್ ಆಗಿದ್ದು ಬಿಟ್ಟರೆ ನಂತರ ಕ್ಲಬ್ ಹಂತದ ಕ್ರಿಕೆಟ್‍ಗೆ ಅಂಪೈರ್ ಆಗಿದ್ದರು. ತದನಂತರ ಅಂತಾರಾಷ್ಟ್ರೀಯಾ ಮಹಿಳಾ ಪಂದ್ಯಗಳಿಗೆ ಪೊಲೊಸಾಕ್ ಆಯ್ಕೆಯಾಗಿ 2016ರ ಐಸಿಸಿ ಮಹಿಳಾ ಟಿ-20 ವಿಶ್ವಕಪ್‍ನಲ್ಲಿ, 2017ರ ಐಸಿಸಿ ಮಹಿಳಾ ಎಕದಿನ ವಿಶ್ವಕಪ್‍ನಲ್ಲಿ ತಿರ್ಪುಗಾರರಾಗಿ ಕೆಲಸ ಮಾಡಿದ್ದಾರೆ.

    ಕ್ಲೇರ್ ಸಾಲಿನಲ್ಲಿ ನ್ಯೂಜಿಲೆಂಡ್‍ನ ಕೆಥಿ ಕ್ರಾಸ್, ವೆಸ್ಟ್ ಇಂಡೀಸ್ ಜಾಕ್ವೇಲಿನ್ ಮತ್ತು ಇಂಗ್ಲೆಂಡ್‍ನ ಸ್ಯೂ ರೆಡ್ಮಂಡ್ ಇವರುಗಳು ಇದ್ದಾರೆ. ಅಲ್ಲದೇ ಕಿರಿಯ ವಯಸ್ಸಿಗೆ ಕ್ಲೇರ್ ಇಂತಹ ಸಾಧನೆ ಮಾಡಿದ್ದಾರೆ. ಈ ಹಿಂದೆ ಪೊಲೊಸಾಕ್ ಕೂಡ ಸಣ್ಣ ಸಣ್ಣ ಪಂದ್ಯಗಳಲ್ಲಿ ಗುರುತಿಸಿಕೊಂಡವರು. ಉತ್ತಮ ಪರಿಶ್ರಮದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿದೆ ಎಂದು ಆಸ್ಟ್ರೇಲಿಯಾ ಸಿಇಓ ಜೇಮ್ಸ್ ಸುತರ್‍ಲೆಂಡ್ ಅಭಿನಂದನೆ ಸಲ್ಲಿಸಿದ್ದಾರೆ.