Tag: First Glimpse

  • ‘ಡೆವಿಲ್’ ಅಂಗಳದಲ್ಲಿ ಪವರ್ ಫುಲ್ ರಾಜಕಾರಣಿಯಾದ ಮಾಳವಿಕ

    ‘ಡೆವಿಲ್’ ಅಂಗಳದಲ್ಲಿ ಪವರ್ ಫುಲ್ ರಾಜಕಾರಣಿಯಾದ ಮಾಳವಿಕ

    ಜ್ಯೂನಿಯರ್‌ ಎನ್‌ಟಿಆರ್‌ ಸಹೋದರ ಕಲ್ಯಾಣ್‌ ರಾಮ್‌ ಸದಾ ಹೊಸಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಸಿನಿಮಾವೇ ಡೆವಿಲ್. ಫಸ್ಟ್ ಗ್ಲಿಂಪ್ಸ್ (First Glimpse) ಮೂಲಕ ಭಾರೀ ಸದ್ದು ಮಾಡಿದ್ದ ಈ ಚಿತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ (Nandamuri Kalyan Ram) ಗೂಢಚಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಡೆವಿಲ್ (Devil) ಚಿತ್ರತಂಡ ಪವರ್ ಫುಲ್ ಪೊಲಿಟಿಕಲ್ ಲೇಡಿಯನ್ನು ಪರಿಚಯಿಸಿದೆ.

    ಡೆವಿಲ್ ಸಿನಿಮಾ ಅಂಗಳಕ್ಕೆ ಮಾಳವಿಕಾ ನಾಯರ್ (Malavika Nair) ಎಂಟ್ರಿ ಕೊಟ್ಟಿದ್ದಾರೆ. ಮಣಿಮೇಕಲಾ ಎಂಬ ಪ್ರಬಲ ರಾಜಕಾರಣಿ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ರಾಜಕಾರಣಿಯಂತೆ ಬಿಳಿ ಬಣ್ಣದ ಕಾಟನ್ ಸೀರೆ ತೊಟ್ಟು ಭಾಷಣ ಮಾಡುತ್ತಿರುವ ಮಾಳವಿಕಾ ನಾಯರ್ ಫಸ್ಟ್ ಲುಕ್ ನಲ್ಲಿ ಶಾಂತಿಯ ಸಂಕೇತವಾದ ಪಾರಿವಾಳವೂ ಇದೆ.

    ಡೆವಿಲ್ ಸಿನಿಮಾವನ್ನು ದೇವಾಂಶ್ ನಾಮಾ ಅರ್ಪಿಸುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಭಿಷೇಕ್ ನಾಮಾ ನಿರ್ಮಿಸುತ್ತಿದ್ದಾರೆ. ನವೀನ್ ಮೇಡಾರಂ ನಿರ್ದೇಶನದ ಡೆವಿಲ್ ಚಿತ್ರಕ್ಕೆ ಶ್ರೀಕಾಂತ್ ವಿಸ್ಸಾ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

    ಹರ್ಷವರ್ಧನ್ ರಾಮೇಶ್ವರ್ ಈ ಚಿತ್ರಕ್ಕೆ ಸಂಗೀತ, ಸೌಂದರ್ಯ ರಾಜನ್ ಛಾಯಾಗ್ರಹಣ ಮಾಡಲಿದ್ದಾರೆ. ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಡೆವಿಲ್ ಸಿನಿಮಾ ತಯಾರಾಗುತ್ತಿದ್ದು,‌ ನವೆಂಬರ್ 24ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಮ ಜನ್ಮಭೂಮಿಯಲ್ಲಿ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡಿದ ನಟ ಅರು

    ರಾಮ ಜನ್ಮಭೂಮಿಯಲ್ಲಿ ಫಸ್ಟ್ ಗ್ಲಿಂಪ್ಸ್ ರಿಲೀಸ್ ಮಾಡಿದ ನಟ ಅರು

    ಮುದ್ದು ಮನಸ್ಸೆ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅರುಣ್ ರಾಮ್ ಗೌಡ (Arun Ram Gowda), ನಂತರ 3 ಗಂಟೆ 30 ದಿನ 30 ಸೆಕೆಂಡ್, ಪತಿ ಬೇಕು.ಕಾಮ್ ಹಾಗೂ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರಗಳಲ್ಲಿ ನಟಿಸಿದ್ದರು. ಆನಂತರ ಸಿನಿಮಾ ರಂಗದಿಂದ ದೂರವಾದರು. ಒಳ್ಳೊಳ್ಳೆ ಚಿತ್ರಗಳನ್ನು ಮಾಡಿದ್ದವರು ಸಡನ್ನಾಗಿ ದೂರವಾಗಿದ್ದು ಯಾಕೆ ಎಂಬ ಪ್ರಶ್ನೆ ಮೂಡಿತ್ತು.

    ಇದೀಗ ಕೆಲವು ವರ್ಷಗಳ ಬಳಿಕ ಅರುಣ್ ರಾಮ್ ಗೌಡ ಪ್ಯಾನ್ ಇಂಡಿಯಾ ಚಿತ್ರವೊಂದರ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ. ಅರುಣ್ ರಾಮ್ ಗೌಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಪ್ರಮುಖಪಾತ್ರದಲ್ಲೂ ನಟಿಸುತ್ತಿದ್ದಾರೆ. ಇಂದು ಅವರ ಹುಟ್ಟುಹಬ್ಬ. ಈ ದಿನದಂದು ತಮ್ಮ ಚಿತ್ರದ ಮೊದಲ ಗ್ಲಿಂಪ್ಸನ್ನು (First Glimpse)  ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ

    ಇದೊಂದು ಬಿಗ್ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾ ಎಂದು ತಿಳಿಸಿರುವ ಅರುಣ್ ರಾಮ್ ಗೌಡ, ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದೇನೆ. ಈ ಚಿತ್ರದ ನಾಯಕಿ, ವಿಲನ್ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ನುರಿತರವೇ ಇರುತ್ತಾರೆ ಎನ್ನುತ್ತಾರೆ ಅರು ಗೌಡ.

    ಮುಂದುವರೆದು ಮಾತನಾಡಿರುವ ಅವರು, ‘ನನ್ನ ಹುಟ್ಟುಹಬ್ಬದ ದಿನ ಅಯೋಧ್ಯೆಯಲ್ಲಿ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡಿ, ಶ್ರೀರಾಮನ ಆಶೀರ್ವಾದ ಪಡೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ನೀಡುತ್ತೇನೆ’ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]