Tag: first aid

  • ಆಸ್ಪತ್ರೆ ಸಿಬ್ಬಂದಿಯಿಂದ ಪ್ರಥಮ ಚಿಕಿತ್ಸೆಯ ಎಡವಟ್ಟು- ರಟ್ಟು ಇಟ್ಟು ಬ್ಯಾಂಡೇಜ್!

    ಆಸ್ಪತ್ರೆ ಸಿಬ್ಬಂದಿಯಿಂದ ಪ್ರಥಮ ಚಿಕಿತ್ಸೆಯ ಎಡವಟ್ಟು- ರಟ್ಟು ಇಟ್ಟು ಬ್ಯಾಂಡೇಜ್!

    ನೆಲಮಂಗಲ: ಅಪಘಾತವಾದ ಬಳಿಕ ಆಸ್ಪತ್ರೆ ಸಿಬ್ಬಂದಿ ಪ್ರಥಮ ಚಿಕಿತ್ಸೆಯ ವೇಳೆ ಎಡವಟ್ಟು ಮಾಡಿದ ಪ್ರಸಂಗವೊಂದು ನಡೆದಿದೆ.

    ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಪ್ರಥಮ ಚಿಕಿತ್ಸೆ ಸಂದರ್ಭದಲ್ಲಿ ಸಿಬ್ಬಂದಿ ಪೇಪರ್ ರಟ್ಟು ಇಟ್ಟು ಡ್ರೆಸ್ಸಿಂಗ್ ಮಾಡಿದ್ದಾರೆ.

    ಬೈಕ್ ಅಪಘಾತಕ್ಕೀಡಾಗಿ ಬಿಹಾರ (Bihar) ಮೂಲದ ಪ್ರಭು ಎಂಬ ಕಾರ್ಮಿಕ ಕಾಲು ಮುರಿದುಕೊಂಡಿದ್ದಾರೆ. ಕೂಡಲೇ ಅವರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಅಲ್ಲಿ ವೈದ್ಯರಿರಲಿಲ್ಲ. ಹೀಗಾಗಿ ಸಿಬ್ಬಂದಿ ಗಾಯಾಳು ಕಾಲಿಕೆ ಪೇಪರ್ ರಟ್ಟಿನಿಂದ ಬ್ಯಾಂಡೇಜ್ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದು ವಾರ ಯುರೋಪ್ ಪ್ರವಾಸ

    ವೈದ್ಯರು ಇಲ್ಲದೆ ಆಸ್ಪತ್ರೆಯ ಸಿಬ್ಬಂದಿ ಮಾಡಿರುವ ಎಡವಟ್ಟಿಗೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]