Tag: Firozabad

  • ಯುಪಿಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ – ಇಬ್ಬರು ಮಕ್ಕಳು ಸೇರಿ ಐವರು ಸಾವು, ಹಲವರಿಗೆ ಗಾಯ

    ಯುಪಿಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ – ಇಬ್ಬರು ಮಕ್ಕಳು ಸೇರಿ ಐವರು ಸಾವು, ಹಲವರಿಗೆ ಗಾಯ

    ಫಿರೋಜಾಬಾದ್: ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ, ಇಬ್ಬರು ಮಕ್ಕಳು, ಮಹಿಳೆ ಸೇರಿದಂತೆ ಐವರು ಸಾವನ್ನಪ್ಪಿದ್ದು ಹಲವು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಫಿರೋಜಾಬಾದ್ (Firozabad) ಜಿಲ್ಲೆಯಲ್ಲಿ ನಡೆದಿದೆ.

    ಶಿಕೋಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ನೌಶೇರಾ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಸೋಮವಾರ ರಾತ್ರಿ 10:30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ: ಮಾಗಡಿಯಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ – ಒಂದೇ ಕುಟುಂಬದ ಐವರು ದುರ್ಮರಣ

    ಮಾಹಿತಿ ಪ್ರಕಾರ ಚಂದ್ರಪಾಲ್ ಎಂಬವರ ಖಾಲಿ ಮನೆಯಲ್ಲಿ ಪಟಾಕಿ ವ್ಯಾಪಾರಿಯೊಬ್ಬರು ಬಾಡಿಗೆ ಪಡೆದು ಪಟಾಕಿ ವ್ಯಾಪಾರ ಮಾಡುತ್ತಿದ್ದರು. ಅದರಲ್ಲಿ ಭಾರೀ ಪ್ರಮಾಣದ ಗನ್ ಪೌಡರು ಶೇಖರಿಸಲಾದ್ದು ಅದರಿಂದ ಸ್ಫೋಟ ಸಂಭವಿಸಿದೆ. ಇದರಿಂದಾಗಿ ಮನೆ ಮೇಲ್ಛಾವಣಿ ಕುಸಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡೀಸೆಲ್ ಟ್ಯಾಂಕರ್, ಲಾರಿ ಡಿಕ್ಕಿ – ಇಬ್ಬರು ಟೋಲ್ ಸಿಬ್ಬಂದಿ ಸೇರಿ ಮೂವರಿಗೆ ಗಂಭೀರ ಗಾಯ

    ಮೃತರನ್ನು ಮೀರಾದೇವಿ(52), ಅಮನ್(20), ಗೌತಮ್ ಕುಶ್ವಾಹ(18), ಇಚ್ಛಾ ಕುಮಾರಿ(03) ಮತ್ತು ಅಭಿನೇಯ (1.5) ವರ್ಷ ಎಂದು ಗುರುತಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    ಅಗ್ನಿಶಾಮಕ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ತಂಡ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ಫಿರೋಜಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಮೇಶ್ ರಂಜನ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ

  • ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಅಗ್ನಿ ಅವಘಡ – 3 ಮಕ್ಕಳು ಸೇರಿ ಕುಟುಂಬದ 6 ಮಂದಿ ಸಾವು

    ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಅಗ್ನಿ ಅವಘಡ – 3 ಮಕ್ಕಳು ಸೇರಿ ಕುಟುಂಬದ 6 ಮಂದಿ ಸಾವು

    ಲಕ್ನೋ: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ (Firozabad Fire) ಕಟ್ಟಡದ ನೆಲಮಹಡಿಯಲ್ಲಿರುವ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದಾರೆ.

    ಕುಟುಂಬದ ಇತರ ಮೂವರು ಸದಸ್ಯರು ಕೂಡ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಡಿಸೆಂಬರ್ 1 ರಿಂದ ಮಾರುಕಟ್ಟೆಗೆ ಟಿಜಿಟಲ್ ರುಪಿ – ಬೆಂಗ್ಳೂರಿನಲ್ಲೇ ಮೊದಲ ಪ್ರಯೋಗ

    ಇನ್ವರ್ಟರ್ ಕಾರ್ಖಾನೆಯಲ್ಲಿ ಕಾಣಿಸಿಕೊಂಡ ಬೆಂಕಿ ಶೀಘ್ರದಲ್ಲೇ ಕುಟುಂಬ ವಾಸಿಸುತ್ತಿದ್ದ ಮಹಡಿಗೆ ವ್ಯಾಪಿಸಿತು. 18 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ಮಾಡಿತು ಎಂದು ಫಿರೋಜಾಬಾದ್‌ನ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ತಿವಾರಿ ಹೇಳಿದ್ದಾರೆ.

    ಕಾರ್ಖಾನೆಯಲ್ಲಿನ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂಬ ಅನುಮಾನವಿದ್ದು, ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅವಘಡದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: ಪಕ್ಕದ್ಮನೆ ಯುವಕನೊಂದಿಗೆ ಆಂಟಿ ಎಸ್ಕೇಪ್ – 10 ದಿನಗಳ ನಂತರ ಬಯಲಾಯ್ತು ರಹಸ್ಯ

    ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ತಂಗಿಯನ್ನೇ ಮದುವೆಯಾದ ಅಣ್ಣ

    ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ತಂಗಿಯನ್ನೇ ಮದುವೆಯಾದ ಅಣ್ಣ

    lಲಕ್ನೋ: ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಜನರು ಎಲ್ಲ ರೀತಿಯ ತಂತ್ರಗಳನ್ನು ಮಾಡುತ್ತಾರೆ. ಅದರಂತೆ ಇಲ್ಲಿ ಅಣ್ಣ-ತಂಗಿ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಮದುವೆಯಾಗಿರುವ ವಿಲಕ್ಷಣ ಪ್ರಕರಣ ವರದಿಯಾಗಿದೆ.

    ಡಿಸೆಂಬರ್ 11 ರಂದು ಉತ್ತರ ಪ್ರದೇಶದ ಫಿರೋಜಾಬಾದ್‍ನ ತುಂಡ್ಲಾದಲ್ಲಿ ಸಾಮೂಹಿಕ ವಿವಾಹವನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಮದುವೆಯಾದ ಪ್ರತಿ ದಂಪತಿಗಳಿಗೆ ರಾಜ್ಯ ಸರ್ಕಾರ ಉಡುಗೊರೆಗಳನ್ನು ಹೊರತುಪಡಿಸಿ 35,000 ರೂ.  ಕೊಡುತ್ತದೆ. ಈ ಯೋಜನೆಯ ಪ್ರಕಾರ, ವಧುವಿನ ಬ್ಯಾಂಕ್ ಖಾತೆಗೆ 20,000 ರೂ. ಠೇವಣಿ ಮಾಡಿ, 10,000 ರೂ. ಅನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ಹಿನ್ನೆಲೆ ಇದೇ ಊರಿನ ಸಹೋದರ ತನ್ನ ಸ್ವಂತ ಸಹೋದರಿಯನ್ನು ಮದುವೆಯಾಗಿದ್ದು, ಈಗ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದುರ್ಗಾಪೂಜೆಗೆ ಪಾರಂಪರಿಕ ಸ್ಥಾನಮಾನ ಕೊಟ್ಟ UNESCO

    ಫಿರೋಜಾಬಾದ್‍ನ ತುಂಡ್ಲಾದಲ್ಲಿ ವಿವಾಹ ನಡೆದಿದ್ದು, ಸ್ಥಳೀಯ ಗ್ರಾಮಸ್ಥರು ದಂಪತಿಯನ್ನು ಸಹೋದರ ಮತ್ತು ಸಹೋದರಿಯೆಂದು ಗುರುತಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಮದುವೆಯ ವೀಡಿಯೋಗಳು ಮತ್ತು ಫೋಟೋಗಳು ಪ್ರಸಾರವಾದ ನಂತರ, ಗ್ರಾಮಸ್ಥರು ಈ ಸಾಮೂಹಿಕವಾಗಿ ವಿವಾಹವಾದ ದಂಪತಿ ಪೈಕಿ  ಒಬ್ಬರನ್ನು ಸಹೋದರ ಮತ್ತು ಸಹೋದರಿ ಎಂದು ಗುರುತಿಸಿದ್ದಾರೆ.

    ಏನಿದು ಘಟನೆ?
    ಪಂಜಾಬಿ ವ್ಯಕ್ತಿಯೊಬ್ಬ ತನ್ನ ಸ್ವಂತ ಸಹೋದರಿಯನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ಯುವ ಸಲುವಾಗಿ ಈ ಕೃತ್ಯವನ್ನು ಮಾಡಿದ್ದಾನೆ. ಬಟಿಂಡಾದ ಹಳ್ಳಿಯ ನಿವಾಸಿಯಾಗಿರುವ ಮನ್‍ಪ್ರೀತ್ ಸಿಂಗ್ 2012 ರಿಂದ ಆಸ್ಟ್ರೇಲಿಯಾಕ್ಕೆ ಹೋಗಿ ಅಲ್ಲಿ ನೆಲೆಸಿದ್ದಾನೆ. ಅವರ ಸಹೋದರಿ ಅಮನ್‍ದೀಪ್ ಕೌರ್ ಕೂಡ ಆಸ್ಟ್ರೇಲಿಯಾಕ್ಕೆ ಹೋಗಲು ಬಯಸಿದ್ದು, ಹಲವು ಬಾರಿ ವೀಸಾಗೆ ಅಪ್ಲೈ ಮಾಡಿದ್ದರೂ ಅದು ರಿಜೆಕ್ಟ್ ಆಗುತ್ತಿತ್ತು. ಹಾಗಾಗಿ ಈ ಸಹೋದರ-ಸಹೋದರಿ ನಕಲಿ ವಿವಾಹದ ಕುತಂತ್ರವನ್ನು ರೂಪಿಸಿದರು. ಪರಿಣಾಮ ತುಂಡ್ಲಾ ಬ್ಲಾಕ್ ಡೆವಲಪ್‍ಮೆಂಟ್ ಕಛೇರಿಯ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 51 ಜೋಡಿಗಳು ವಿವಾಹವಾಗಿದ್ದು, ಅದರಲ್ಲಿ ಜೋಡಿಯೂ ಮದುವೆಯಾಗಿದೆ.  ಇದನ್ನೂ ಓದಿ: ಹುಮ್ನಾಬಾದ್‍ನಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡಬೇಕಾದ್ರೆ ಎರಡು ಡೋಸ್ ಲಸಿಕೆ ಕಡ್ಡಾಯ

    ತುಂಡಲ ಬ್ಲಾಕ್ ಅಭಿವೃದ್ಧಿ ಅಧಿಕಾರಿ ನರೇಶ್‍ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಈ ಪ್ರಕರಣದ ಬಗ್ಗೆ ತಿಳಿದ ತಕ್ಷಣ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಸಹೋದರನ ವಿರುದ್ಧವೂ ಎಫ್‍ಐಆರ್ ದಾಖಲಿಸಲಾಗಿದ್ದು, ಯೋಜನೆಯಡಿ ‘ದಂಪತಿ’ಗೆ ನೀಡಲಾಗಿದ್ದ ಗೃಹೋಪಯೋಗಿ ವಸ್ತುಗಳನ್ನೂ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದರು.

  • ಮದುವೆಯಾಗಿ 10 ದಿನ ಆಗಿಲ್ಲ ಪತಿ ಸಾವು, ವಧು ಸೇರಿ 9 ಮಂದಿಗೆ ಕೊರೊನಾ ಸೋಂಕು!

    ಮದುವೆಯಾಗಿ 10 ದಿನ ಆಗಿಲ್ಲ ಪತಿ ಸಾವು, ವಧು ಸೇರಿ 9 ಮಂದಿಗೆ ಕೊರೊನಾ ಸೋಂಕು!

    ಫಿರೋಜಾಬಾದ್‌ (ಉತ್ತರ ಪ್ರದೇಶ): ಇದು ಮದುವೆಯಾಗಿ ಪತಿಯ ಜೊತೆ ಸುಂದರ ಜೀವನ ಕಟ್ಟಿಕೊಳ್ಳಬೇಕು ಎಂದು ಕನಸು ಕಂಡವಳ ಕಣ್ಣೀರ ಕಥೆ. ಮದುವೆಯಾಗಿ ಆಕೆಯ ಕೈಯಿಂದ ಮದರಂಗಿಯ ಕೆಂಪು ಇನ್ನೂ ಮಾಸಿರಲಿಲ್ಲ. ಅಷ್ಟರಲ್ಲಿಯೇ ಆಕೆಯ ಪತಿ ಸಾವನ್ನಪ್ಪಿದ್ದಾನೆ. ಈಗ ಆಕೆಯೂ ಸೇರಿ ಅದೇ ಕುಟುಂಬದ 9 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಫೀರೋಜಾಬಾದ್‌ನ ಮುಖ್ಯ ಆರೋಗ್ಯಾಧಿಕಾರಿ ಡಾ.ನೀತಾ ಕುಲಶ್ರೇಷ್ಠ ಖಚಿತಪಡಿಸಿದ್ದಾರೆ. 10 ದಿನಗಳ ಹಿಂದಷ್ಟೇ ಮೃತಪಟ್ಟ ವ್ಯಕ್ತಿಯ ಮದುವೆ ಸಮಾರಂಭ ನಡೆದಿತ್ತು. ಮದುವೆ ಮುಗಿಯುತ್ತಿದ್ದಂತೆಯೇ ಆತನ ಆರೋಗ್ಯ ಹದಗೆಟ್ಟು, ಡಿಸೆಂಬರ್‌ 4ರಂದು ಸಾವನ್ನಪ್ಪಿದ್ದಾನೆ. ಆದರೆ ಆತ ಮೃತಪಟ್ಟಾಗ ಕೋವಿಡ್‌ ಟೆಸ್ಟ್‌ ಮಾಡಿಸಿರಲಿಲ್ಲ. ಹೀಗಾಗಿ ಆತ ಕೋವಿಡ್‌ನಿಂದಾಗಿಯೇ ಸಾವನ್ನಪ್ಪಿದ್ದಾನೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಆತನ ಕುಟುಂಬಸ್ಥರನ್ನು ಟೆಸ್ಟ್‌ ಮಾಡಿದಾಗ ವಧು ಸೇರಿ 9 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

    ವಧು, ಆಕೆಯ ಅತ್ತೆ, ಮಾವ ಸೇರಿ 9 ಮಂದಿಗೆ ಸೋಂಕು ತಗುಲಿದ್ದು, ಎಲ್ಲರಿಗೂ ಚಿಕಿತ್ಸೆ ಮುಂದುವರಿದಿದೆ ಎಂದು ನೀತಾ ಹೇಳಿದ್ದಾರೆ.

    ಸದ್ಯ ಈ ಗ್ರಾಮದಲ್ಲಿ ಮೆಡಿಕಲ್‌ ಕ್ಯಾಂಪ್‌ ಆರಂಭಿಸಿದ್ದು, ಗ್ರಾಮಸ್ಥರಿಗೆ ಟೆಸ್ಟ್‌ ಮಾಡುವ ಕೆಲಸ ನಡೆಯುತ್ತಿದೆ. ಫಿರೋಜಾಬಾದ್‌ ಜಿಲ್ಲೆಯಲ್ಲಿ ಇದುವರೆಗೆ 3673 ಮಂದಿಯಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 67 ಮಂದಿ ಸಾವನ್ನಪ್ಪಿದ್ದರೆ, 171 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಉಳಿದವರು ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.