Tag: firing

  • ನಟಿ ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ; ಇಬ್ಬರು ಅಪ್ರಾಪ್ತರು ಅರೆಸ್ಟ್

    ನಟಿ ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ; ಇಬ್ಬರು ಅಪ್ರಾಪ್ತರು ಅರೆಸ್ಟ್

    ಟಿ ದಿಶಾ ಪಟಾನಿ (Disha Patani) ಮನೆ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣ ಸಂಬಂಧ ಇದೀಗ ದೆಹಲಿ ಪೊಲೀಸರು (Delhi Police) ಮತ್ತಿಬ್ಬರು ಅಪ್ರಾಪ್ತರರನ್ನು ಬಂಧಿಸಿದ್ದಾರೆ.

    ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ನಡೆದ ಒಂದು ದಿನ ಮೊದಲು ಅಂದರೆ ಸೆ.11 ರಂದು ನಸುಕಿನ 4 ಗಂಟೆ ಸುಮಾರಿಗೆ ಇಬ್ಬರು ಅಪ್ರಾಪ್ತರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ʻಇದಿನ್ನೂ ಟ್ರೈಲರ್‌ʼ ಗೋಲ್ಡಿ ಬ್ರಾರ್ ಗ್ಯಾಂಗ್ ವಾರ್ನಿಂಗ್‌

    ಉತ್ತರ ಪ್ರದೇಶದ (Uttarpradesh) ಬರೇಲಿಯಲ್ಲಿರುವ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆ ಹೊರಗೆ ಇದೇ ಸೆ.12ರಂದು ನಸುಕಿನ 3:30ರ ಸುಮಾರಿಗೆ ಗುಂಡಿನ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿ ಎಸ್ಕೇಪ್ ಆಗಿದ್ದರು. ಗುಂಡಿನ ದಾಳಿ ನಡೆದ ಮನೆಯಲ್ಲಿ ದಿಶಾ ಪಟಾನಿ ಕುಟುಂಬ ವಾಸವಿತ್ತು. ಆ ಸಮಯದಲ್ಲಿ ದಿಶಾ ಅವರ ತಂದೆ ನಿವೃತ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಸಿಂಗ್ ಪಟಾನಿ, ತಾಯಿ ಅಕ್ಕ ಖುಷ್ಬು ಪಟಾನಿ ಇದ್ದರು. ಬಳಿಕ ಗೋಲ್ಡಿ ಬ್ರಾರ್ ಗ್ಯಾಂಗ್ ಗುಂಡಿನ ದಾಳಿ ಹೊಣೆ ಹೊತ್ತುಕೊಂಡಿತ್ತು. ಇದನ್ನೂ ಓದಿ: ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ

    ದುಷ್ಕರ್ಮಿಗಳ ಬೆನ್ನತ್ತಿ ಪೊಲೀಸರ ಮೇಲೆಯೇ ಶಂಕಿತರು ಗುಂಡಿನ ದಾಳಿಗೆ ಮುಂದಾದ್ರು. ಬಳಿಕ ಪೊಲೀಸರು ಪ್ರತಿದಾಳಿ ನಡೆಸಿದರು. ಈ ವೇಳೆ ಗಾಯಗೊಂಡಿದ್ದ ಶಂಕಿತರು ಬಳಿಕ ಸಾವನ್ನಪ್ಪಿದರು.

    ಗುಂಡಿನ ದಾಳಿಗೆ ಕಾರಣ ಏನು?
    ದಾಳಿ ಹೊಣೆ ಹೊತ್ತಿದ್ದ ಗೋಲ್ಡಿ ಬ್ರಾರ್ ಗ್ಯಾಂಗ್ ಅದಕ್ಕೆ ಕಾರಣ ಉಲ್ಲೇಖಿಸಿ ಪತ್ರವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಎಲ್ಲಾ ಸಹೋದರರಿಗೆ ರಾಮ್ ರಾಮ್ ನಾನು, ವೀರೇಂದ್ರ ಚರಣ್, ಮಹೇಂದ್ರ ಶರಣ್. ‘ಸಹೋದರರೇ, ಇಂದು ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದೇವೆ. ಅವರು ನಮ್ಮ ಪೂಜ್ಯ ಸಂತರಾದ ಪ್ರೇಮಾನಂದ ಜಿ ಮಹಾರಾಜ್ ಮತ್ತು ಅನಿರುದ್ಧಾಚಾರ್ಯ ಜಿ ಮಹಾರಾಜ್ ಅವರನ್ನು ಅವಮಾನಿಸಿದ್ದಾರೆ. ಅಲ್ಲದೇ ನಮ್ಮ ಸನಾತನ ಧರ್ಮವನ್ನು ಅವಮಾನಿಸಲು ಪ್ರಯತ್ನಿಸಿದರು. ನಮ್ಮ ದೇವತೆಗಳ ಮೇಲಿನ ಅವಮಾನ ಸಹಿಸಲಾಗದು. ಇದು ಕೇವಲ ಟ್ರೈಲರ್ ಅಷ್ಟೇ. ಮುಂದಿನ ಬಾರಿ, ಅವರು ಅಥವಾ ಬೇರೆ ಯಾರಾದರೂ ನಮ್ಮ ಧರ್ಮದ ಬಗ್ಗೆ ಅಗೌರವ ತೋರಿಸಿದ್ರೆ, ಅವರ ಮನೆಯಲ್ಲಿ ಯಾರೂ ಜೀವಂತವಾಗಿ ಉಳಿಯುವುದಿಲ್ಲ’ ಎಂದು ಎಚ್ಚರಿಕೆ ನೀಡಿತ್ತು.

  • ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ

    ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ

    ಬಾಲಿವುಡ್ (Bollywood) ನಟಿ ದಿಶಾ ಪಟಾನಿ (Disha Patani) ಅವರ ಮನೆ ಬಳಿ ಇತ್ತೀಚೆಗೆ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ದುಷ್ಕರ್ಮಿಗಳು ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    disha patani 3

    ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರೋಹ್ಟಕ್‌ ಮೂಲದ ರವೀಂದ್ರ ಅಲಿಯಾಸ್ ಕಲ್ಲು ಮತ್ತು ಹರಿಯಾಣದ ಸೋನಿಪತ್ ನಿವಾಸಿ ಅರುಣ್ ಹತ್ಯೆಯಾಗಿದ್ದಾರೆ. ಇಬ್ಬರೂ ಗೋಲ್ಡಿ ಬ್ರಾರ್ ಗ್ಯಾಂಗ್‌ನ ಸಕ್ರಿಯ ಸದಸ್ಯರಾಗಿದ್ದರು. ಜೊತೆಗೆ ಬಹು ಕ್ರಿಮಿನಲ್‌ ಪ್ರಕರಣಗಳಲ್ಲಿ ಮೋಸ್ಟ್‌ ವಾಂಟೆಡ್‌ಗಳಾಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ʻಇದಿನ್ನೂ ಟ್ರೈಲರ್‌ʼ ಗೋಲ್ಡಿ ಬ್ರಾರ್ ಗ್ಯಾಂಗ್ ವಾರ್ನಿಂಗ್‌

    disha patani 4

    ಇಂದು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF)ಯ ನೋಯ್ಡಾ ಘಟಕ ಹಾಗೂ ದೆಹಲಿ ಪೊಲೀಸರ ಅಪರಾಧ ಗುಪ್ತಚರ (CI) ಘಟಕ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ಮುಂಭಾಗದಲ್ಲಿದ್ದ ಪೊಲೀಸ್‌ ಘಟಕದ ಮೇಲೆ ಶಂಕಿತರು ಗುಂಡಿನ ದಾಳಿಗೆ ಮುಂದಾದ್ರು, ಬಳಿಕ ಪೊಲೀಸರು ಪ್ರತಿದಾಳಿ ನಡೆಸಿದರು. ಈ ವೇಳೆ ಗಾಯಗೊಂಡಿದ್ದ‌ ಶಂಕಿತರು ಬಳಿಕ ಸಾವನ್ನಪ್ಪಿದರು. ಘಟನಾ ಸ್ಥಳದಿಂದ, ಅಧಿಕಾರಿಗಳು ಗ್ಲಾಕ್ ಪಿಸ್ತೂಲ್, ಜಿಗಾನಾ ಪಿಸ್ತೂಲ್ ಮತ್ತು ಬಹು ಲೈವ್ ಕಾರ್ಟ್ರಿಡ್ಜ್‌ಗಳು ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಕಿನಿಯಲ್ಲಿ ಶಿವಲಿಂಗ ನಟಿ ಚಿಲ್‌ – ಪಡ್ಡೆ ಹೈಕ್ಳ ಮೈಬಿಸಿ ಹೆಚ್ಚಿಸಿದ ವೇದಿಕಾ

    ದಿಶಾ ಪಟಾನಿ ಮನೆ ಬಳಿ ಏನಾಗಿತ್ತು?
    ಉತ್ತರ ಪ್ರದೇಶದ ಬರೇಲಿಯಲ್ಲಿರುವ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆ ಹೊರಗೆ ಇದೇ ಸೆ.12ರಂದು ಬೆಳಗ್ಗಿನ ಜಾವ 3:30ರ ಸುಮಾರಿಗೆ ಗುಂಡಿನ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೂರರಿಂದ ನಾಲ್ಕು ಸುತ್ತು ಗುಂಡು (Fire) ಹಾರಿಸಿ ಎಸ್ಕೇಪ್‌ ಆಗಿದ್ದರು. ಗುಂಡಿನ ದಾಳಿ ನಡೆದ ಮನೆಯಲ್ಲಿ ದಿಶಾ ಪಟಾನಿ ಕುಟುಂಬ ವಾಸವಿತ್ತು. ಆ ಸಮಯದಲ್ಲಿ ದಿಶಾ ಅವರ ತಂದೆ ನಿವೃತ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಸಿಂಗ್ ಪಟಾನಿ, ತಾಯಿ ಅಕ್ಕ ಖುಷ್ಬು ಪಟಾನಿ ಇದ್ದರು. ಬಳಿಕ ಗೋಲ್ಡಿ ಬ್ರಾರ್ ಗ್ಯಾಂಗ್ ಗುಂಡಿನ ದಾಳಿ ಹೊಣೆ ಹೊತ್ತುಕೊಂಡಿತ್ತು. ಇದನ್ನೂ ಓದಿ: ʻಕೊತ್ತಲವಾಡಿʼ ಕಿರಿಕ್‌ – ಸಹನಟಿ ಸ್ವರ್ಣ ವಿರುದ್ಧ ದೂರು ದಾಖಲು

    Disah

    ಗುಂಡಿನ ದಾಳಿಗೆ ಕಾರಣ ಏನು?
    ದಾಳಿ ಹೊಣೆ ಗೊತ್ತಿದ್ದ ಗೋಲ್ಡಿ ಬ್ರಾರ್‌ ಗ್ಯಾಂಗ್‌ ಅದಕ್ಕೆ ಕಾರಣ ಉಲ್ಲೇಖಿಸಿ ಪತ್ರವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ʻಎಲ್ಲಾ ಸಹೋದರರಿಗೆ ರಾಮ್ ರಾಮ್… ನಾನು, ವೀರೇಂದ್ರ ಚರಣ್, ಮಹೇಂದ್ರ ಶರಣ್ (ದೆಲಾನಾ). ಸಹೋದರರೇ, ಇಂದು ಖುಷ್ಬೂ ಪಟಾನಿ/ದಿಶಾ ಪಟಾನಿ (ಬಾಲಿವುಡ್ ನಟಿ) ಮನೆಯಲ್ಲಿ (ವಿಲ್ಲಾ ನಂ. 40, ಸಿವಿಲ್ ಲೈನ್ಸ್, ಬರೇಲಿ, ಯುಪಿ) ನಡೆದ ಗುಂಡಿನ ದಾಳಿಯನ್ನು ನಾವು ಮುಗಿಸಿದ್ದೇವೆ. ಅವರು ನಮ್ಮ ಪೂಜ್ಯ ಸಂತರನ್ನು (ಪ್ರೇಮಾನಂದ ಜಿ ಮಹಾರಾಜ್ ಮತ್ತು ಅನಿರುದ್ಧಾಚಾರ್ಯ ಜಿ ಮಹಾರಾಜ್) ಅವಮಾನಿಸಿದ್ದಾರೆ. ಅಲ್ಲದೇ ನಮ್ಮ ಸನಾತನ ಧರ್ಮವನ್ನು ಅವಮಾನಿಸಲು ಪ್ರಯತ್ನಿಸಿದರು. ನಮ್ಮ ದೇವತೆಗಳ ಮೇಲಿನ ಅವಮಾನ ಸಹಿಸಲಾಗದು. ಇದು ಕೇವಲ ಟ್ರೈಲರ್‌ ಅಷ್ಟೇ. ಮುಂದಿನ ಬಾರಿ, ಅವರು ಅಥವಾ ಬೇರೆ ಯಾರಾದರೂ ನಮ್ಮ ಧರ್ಮದ ಬಗ್ಗೆ ಅಗೌರವ ತೋರಿಸಿದ್ರೆ, ಅವರ ಮನೆಯಲ್ಲಿ ಯಾರೂ ಜೀವಂತವಾಗಿ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು.

  • ಬಿಗ್ ಬಾಸ್‌ ವಿಜೇತ ಎಲ್ವಿಶ್ ಮನೆ ಮೇಲೆ 25 ಸುತ್ತು ಗುಂಡಿನ ದಾಳಿ – ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

    ಬಿಗ್ ಬಾಸ್‌ ವಿಜೇತ ಎಲ್ವಿಶ್ ಮನೆ ಮೇಲೆ 25 ಸುತ್ತು ಗುಂಡಿನ ದಾಳಿ – ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

    ಫೇಮಸ್‌ ಯೂಟ್ಯೂಬರ್ (YouTuber), ಮಾಜಿ ಬಿಗ್ ಬಾಸ್‌ ವಿಜೇತ (Bigg Boss winner) ಹಾಗೂ ನಟನೂ ಆಗಿರುವ ಎಲ್ವಿಶ್ ಯಾದವ್ ಅವ್ರ ಮನೆ ಮೇಲೆ ಇಂದು ಬೆಳಗ್ಗೆ ಭೀಕರ ಗುಂಡಿನ ದಾಳಿ ನಡೆದಿದೆ.

    ಬೆಳಗ್ಗೆ 5:30 ರಿಂದ 6 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಮನೆಯ ಬಳಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು 2 ಡಜನ್‌ಗಿಂತಲೂ ಅಧಿಕ ಸುತ್ತು ಗುಂಡು ಹಾಅರಿಸಿ, ಎಸ್ಕೇಪ್‌ ಆಗಿದ್ದಾರೆ. ಅದೃಷ್ಟವಶಾತ್‌ ಆ ಸಂದರ್ಭದಲ್ಲಿ ಎಲ್ವಿಶ್‌ (Elvish Yadav) ಮನೆಯಲ್ಲಿ ಇರಲಿಲ್ಲವಾದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಫೈರಿಂಗ್‌ (Bullets Fire) ಬಳಿಕ ಇಡೀ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಬೆಂಗಳೂರು | ಐವರನ್ನು ಬಲಿ ಪಡೆದಿದ್ದ ಅಗ್ನಿ ದುರಂತ ಪ್ರಕರಣ – ಕಟ್ಟಡದ ಮಾಲೀಕ ಅರೆಸ್ಟ್

    ಏನಾಯಿತು?
    ಎಲ್ವಿಶ್ ಯಾದವ್ ತಮ್ಮ ಯೂಟ್ಯೂಬ್ ಮತ್ತು ಸೋಷಿಯಲ್‌ ಮೀಡಿಯಾ ಆಕ್ಟಿವಿಟೀಸ್‌ಗಳಿಂದ ಫೇಮಸ್‌ ಆಗಿದ್ದಾರೆ. ಗುಂಡು ಹಾರಿಸಿದ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗುರುಗ್ರಾಮ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಹಳೇ ಅಕ್ರಮ ಸಂಬಂಧಕ್ಕೆ ಶಿಕ್ಷೆ – ಹೆತ್ತ ತಾಯಿಯನ್ನೇ 2 ಬಾರಿ ಅತ್ಯಾಚಾರಗೈದ ಪಾಪಿ ಮಗ

    ಮೊದಲಿಗೆ ಮನೆಯವರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳ ತಪಾಸಣೆ ನಡೆಸುತ್ತಿದ್ದಾರೆ. 20 ರಿಂದ 25 ಸುತ್ತು ಗುಂಡು ಹಾರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: Video Viral | ಸ್ವಾತಂತ್ರ‍್ಯ ದಿನಾಚರಣೆಯಂದು ಅಂಚೆ ಕಚೇರಿಯಲ್ಲಿ ಭರ್ಜರಿ ಬಾಡೂಟ; ಕ್ರಮಕ್ಕೆ ಆಗ್ರಹ

  • ಧಾರವಾಡ | ವಿಚಾರಣೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಕಳ್ಳರಿಬ್ಬರ ಕಾಲಿಗೆ ಗುಂಡೇಟು

    ಧಾರವಾಡ | ವಿಚಾರಣೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಕಳ್ಳರಿಬ್ಬರ ಕಾಲಿಗೆ ಗುಂಡೇಟು

    ಧಾರವಾಡ: ವಿಚಾರಣೆ ವೇಳೆ ಪೊಲೀಸರ ಮೇಲೆ ಹಲ್ಲೆ ಯತ್ನಿಸಿದ್ದ ಇಬ್ಬರು ಕಳ್ಳರ ಕಾಲಿಗೆ ಫೈರಿಂಗ್ ಮಾಡಿರುವ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.

    ವಿಜಯ ಅಣ್ಣಿಗೇರಿ ಮತ್ತು ಮುಜಮ್ಮಿಲ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬೈಕ್ ಮೇಲೆ ಹೊರಡಿದ್ದ ಯುವಕನನ್ನ ನಿಲ್ಲಿಸಿ ಹುಸೇನ್ ಎನ್ನುವವನ ಬಳಿ ಕಳ್ಳತನ ಮಾಡಲು ಯತ್ನಿಸಿದ್ದ. ಈ ಮಾಹಿತಿ ಮೇರೆಗೆ ಆತನನ್ನ ವಶಕ್ಕೆ ಪಡೆದು, ಆತನ ಸಹಚರರ ಬಳಿ ಕರೆದುಕೊಂಡು ಹೋದ ಪೊಲೀಸರ ಮೇಲೆಯೇ ಮತ್ತಿಬ್ಬರು ಕಳ್ಳರು ದಾಳಿ ಮಾಡಿದ್ದರು. ಈ ಹಿನ್ನೆಲೆ ಪೊಲೀಸರು ಕೂಡ ಇಬ್ಬರ ಮೇಲೆ ಪ್ರತಿ ದಾಳಿ ಮಾಡಿ ಬಂಧಿಸಿದ್ದರು. ಇದನ್ನೂ ಓದಿ: ನಕಲಿ ಬಿಲ್ ಪಾವತಿಗಾಗಿ ಹಿರಿಯ ಅಧಿಕಾರಿಗಳ ಕಿರುಕುಳ – ಮಹಿಳಾ ಎಂಜಿನಿಯರ್ ಸೂಸೈಡ್

    ಈ ವೇಳೆ ವಿಜಯ ಮತ್ತು ಮುಜಮ್ಮಿಲ್ ಎಂಬ ಕಳ್ಳರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ, ಘಟನೆಯಲ್ಲಿ ಗಾಯಗೊಂಡ ಪಿಎಸ್‌ಐ ಮಲ್ಲಿಕಾರ್ಜುನ ಹಾಗೂ ಪೊಲೀಸ್ ಪೇದೆ ಇಸಾಕ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. ಇದನ್ನೂ ಓದಿ: ಕನ್ನಡ ಮಾತಾಡಿ ಎಂದಿದ್ದಕ್ಕೆ ರೂಲ್ಸ್ ಇದೆಯಾ ಎಂದು ದರ್ಪ ಮೆರೆದ ಬ್ಯಾಂಕ್ ಸಿಬ್ಬಂದಿ

    ಈ ವೇಳೆ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮಾತನಾಡಿ, ಬುಧವಾರ ರಾತ್ರಿ ಕಲಘಟಗಿ ರಸ್ತೆಯಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಬಳಿ 3 ಜನ ಕಳ್ಳರು ಓರ್ವನನ್ನು ಅಡ್ಡಗಟ್ಟಿ, ಆತನ ಬೈಕ್ ಕಸಿದುಕೊಳ್ಳಲು ಯತ್ನಿಸಿದರು. ಆ ಕೆಲಸ ಆಗದೇ ಹೋದಾಗ ಅಲ್ಲಿಂದ 3 ಜನ ಪರಾರಿಯಾಗಿದ್ದರು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಧಾರವಾಡದ 3 ಠಾಣೆಯವರು ಚೆಕ್‌ಪೋಸ್ಟ್ ಹಾಕಿ, ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕುಡಿತಕ್ಕೆ ದಾಸನಾಗಿದ್ದ ಪತಿಯೊಂದಿಗೆ ಗಲಾಟೆ – ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ

    ಬೆಳಗ್ಗಿನ ಜಾವ ಹುಸೇನ್‌ಸಾಬ್ ಎಂಬಾತನನ್ನು ಹಿಡಿಯಲಾಗಿದ್ದು, ಈತ 35ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ಕಂಡುಬಂತು. ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ಆತ ಇನ್ನೋರ್ವ ಕಳ್ಳ ಇರುವ ಜಾಗಕ್ಕೆ ಪೊಲೀಸರನ್ನು ಕರೆದುಕೊಂಡು ಹೋದ. ಅಲ್ಲಿ ಇಬ್ಬರು ಕಳ್ಳರು ಇದ್ದದ್ದು ಗೊತ್ತಾಯಿತು. ಈ ವೇಳೆ ಹುಸೇನ್‌ಸಾಬ್ ಪೊಲೀಸರನ್ನು ನೂಕಿ ಓಡಿದ್ದ. ಸ್ಥಳದಲ್ಲಿದ್ದ ವಿಜಯ ಅಣ್ಣಿಗೇರಿ ಮತ್ತು ಮುಜಮ್ಮಿಲ್ ಎಂಬಾತನನ್ನು ನಮ್ಮ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವಾಗ ಪೊಲೀಸರ ಮೇಲೆ ಅವರು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಪೊಲೀಸರು ಮೂರು ಸುತ್ತು ಫೈರಿಂಗ್ ನಡೆಸಿದ್ದು, ಆರೋಪಿಗಳ ಕಾಲಿಗೆ ಗುಂಡು ತಾಗಿದೆ. ತಪ್ಪಿಸಿಕೊಂಡ ಹುಸೇನ್‌ಸಾಬ್ ಪತ್ತೆಗೆ ಹುಡುಕಾಟ ನಡೆಯುತ್ತಿದೆ. ಗಾಯಾಳುಗಳು ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

  • ಪಾಟ್ನಾ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್‌ ಹತ್ಯೆ – ಐವರು ಆರೋಪಿಗಳು ಕೋಲ್ಕತ್ತಾದಲ್ಲಿ ಅರೆಸ್ಟ್‌

    ಪಾಟ್ನಾ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್‌ ಹತ್ಯೆ – ಐವರು ಆರೋಪಿಗಳು ಕೋಲ್ಕತ್ತಾದಲ್ಲಿ ಅರೆಸ್ಟ್‌

    ಪಾಟ್ನಾ: ಇಲ್ಲಿನ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ದರೋಡೆಕೋರ ಚಂದನ್ ಮಿಶ್ರಾನನ್ನ (Chandan Mishra) ಗುಂಡಿಕ್ಕಿ (Firing) ಕೊಂದ್ದಿದ್ದ ಐವರು ಆರೋಪಿಗಳನ್ನು ಕೋಲ್ಕತ್ತಾದಲ್ಲಿ (Kolkata) ಪೊಲೀಸರು ಶನಿವಾರ (ಇಂದು) ಬಂಧಿಸಿದ್ದಾರೆ.

    ಬಿಹಾರ ಪೊಲೀಸರು (Bihar Police) ಮತ್ತು ಪಶ್ಚಿಮ ಬಂಗಾಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಕೋಲ್ಕತ್ತಾದ ಉಪನಗರದ ವಸತಿ ಸಂಕೀರ್ಣದಲ್ಲಿ ಬಂಧಿಸಿದ್ದಾರೆಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ‘Sher’ Will Roar | ನಿಮಿಷಕ್ಕೆ 700 ಬುಲೆಟ್‌ ಹಾರಿಸಬಲ್ಲ `AK-203′ ರೈಫಲ್‌ ಸೇನೆಗೆ!

    ಆ ದಿನ ಆಸ್ಪತ್ರೆ ವಾರ್ಡ್‌ನಲ್ಲಿ ನಡೆದಿದ್ದೇನು?
    ಪೆರೋಲ್ ಮೇಲೆ ಹೊರಗಿದ್ದ ದರೋಡೆಕೋರ ಚಂದನ್ ಮಿಶ್ರಾನನ್ನ ಪಾಟ್ನಾದ ಆಸ್ಪತ್ರೆಯ ಐಸಿಯುನಲ್ಲೇ ಗುಂಡು ಹಾರಿಸಿ ಐವರು ದುಷ್ಕರ್ಮಿಗಳು ಕೊಂದಿದ್ದರು. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಗ್ಯಾಂಗ್‌ಸ್ಟಾರ್ ಚಂದನ್ ಮಿಶ್ರಾನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಪೆರೋಲ್ ಮೇಲೆ ಪಾಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮೈದುನನ ಜೊತೆ ಲವ್ವಿಡವ್ವಿ – ಪತಿ ಕೊಂದು ಆಕಸ್ಮಿಕ ಸಾವು ಅಂತ ಬಿಂಬಿಸಿದ್ದ ಮಹಿಳೆ ಬಂಧನ

    ಇದನ್ನರಿತ ಎದುರಾಳಿ ಗ್ಯಾಂಗ್‌ನವರು ಗನ್ ಸಮೇತ ಆಸ್ಪತ್ರೆಗೆ ನುಗ್ಗಿ ಮನಸೋ ಇಚ್ಛೆ ಗುಂಡಿನ ಸುರಿಮಳೆಗೈದಿದ್ದರು. ಚಂದನ್ ಮಿಶ್ರಾ ದೇಹಕ್ಕೆ 12 ಬುಲೆಟ್ ಹೊಕ್ಕಿದ್ದು, ಆಸ್ಪತ್ರೆಯಲ್ಲೆ ಹತನಾಗಿದ್ದ. ಫೈರಿಂಗ್ ಬಳಿಕ ದಾಳಿಕೋರರು ಎಸ್ಕೇಪ್ ಆಗಿದ್ದರು. ಪಾಟ್ನಾದಿಂದ ಪರಾರಿಯಾಗಿ ಕೋಲ್ಕತ್ತಾದ ನ್ಯೂ ಟೌನ್‌ ವಸತಿ ಪ್ರದೇಶದಲ್ಲಿ ಅಡಗಿಕೊಂಡಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡಿದ್ದ ಬಿಹಾರ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: Uttar Pradesh | ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – 6 ಜನ ದುರ್ಮರಣ

    ಈ ಮಧ್ಯೆ ಎಲ್ಲಾ ಆರೋಪಿಗಳು ಕೋಲ್ಕತ್ತಾದ ನ್ಯೂ ಟೌನ್‌ ಪ್ರದೇಶದ ವಸತಿ ಸಂಕೀರ್ಣದ ಫ್ಲಾಟ್‌ನಲ್ಲಿ ಅಡಗಿರುವುದಾಗಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಬಳಿಕ ಬಂಗಾಳ ಪೊಲೀಸರ ಸಹಾಯ ಪಡೆದು ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ಪೈಕಿ ನಾಲ್ವರು ಆರೋಪಿಗಳು ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಐದನೇ ಆರೋಪಿ ಅಪರಾಧದಲ್ಲಿ ಭಾಗಿಯಾಗಿದ್ದನೇ ಅಥವಾ ಕೊಲೆಗಾರರು ಅಡಗಿಕೊಳ್ಳಲು ಸಹಾಯ ಮಾಡಿದ್ದನೇ ಎಂಬುದರ ಬಗ್ಗೆ ತರನಿಖೆ ನಡೆಸಲಾಗುತ್ತಿದೆ.

    ಸದ್ಯ ಬಂಧಿತ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಿ ಕೋಲ್ಕತ್ತಾದಿಂದ ಬಿಹಾರಕ್ಕೆ ಕರೆತರುವ ಪ್ರಕ್ರಿಯೆಗಳು ನಡೆಯುತ್ತಿವೆ. ಇದನ್ನೂ ಓದಿ: ಅಪ್ರಾಪ್ತನ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ – ಇಬ್ಬರು ಬಾಲಕರು ಅರೆಸ್ಟ್‌

  • ಸರ್ಕಾರಿ ಜಾಗದಲ್ಲಿ ರಸ್ತೆ ಮಾಡುವ ವಿಚಾರಕ್ಕೆ ಗಲಾಟೆ – ಕ್ರಷರ್ ಮಾಲೀಕನಿಂದ ರೈತನಿಗೆ ಗುಂಡೇಟು

    ಸರ್ಕಾರಿ ಜಾಗದಲ್ಲಿ ರಸ್ತೆ ಮಾಡುವ ವಿಚಾರಕ್ಕೆ ಗಲಾಟೆ – ಕ್ರಷರ್ ಮಾಲೀಕನಿಂದ ರೈತನಿಗೆ ಗುಂಡೇಟು

    ಚಿಕ್ಕಬಳ್ಳಾಪುರ: ಸರ್ಕಾರಿ ಜಾಗದಲ್ಲಿ ರಸ್ತೆ ಮಾಡಲು ಮುಂದಾದ ಕ್ರಷರ್ ಮಾಲೀಕ ಹಾಗೂ ಸ್ಥಳೀಯ ರೈತರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಕ್ರಷರ್ ಮಾಲೀಕ ರೈತರೊಬ್ಬರ (Farmer) ಕಾಲಿಗೆ ಗುಂಡು ಹಾರಿಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಮಂಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಾಜಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸಂಬಂಧಿ ಸಕಲೇಶ್ ಕುಮಾರ್ ಎಂಬಾತ ಮಂಚೇನಹಳ್ಳಿ ಗ್ರಾಮದ ಚಿಕನ್ ರವಿ ಅಲಿಯಾಸ್ ಜಿಮ್ ರವಿ ಎಂಬ ರೈತರೊಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ – ಪ್ರಹ್ಲಾದ್ ಜೋಶಿ

    ಸಕಲೇಶ್ ಕುಮಾರ್‌ಗೆ ಕೋಟಗಾನ ಗುಟ್ಟ ಎಂಬ ಬೆಟ್ಟದಲ್ಲಿ ಕ್ರಷರ್ ಮಾಡಲು ಮಂಜೂರಾತಿ ಸಿಕ್ಕಿತ್ತು. ಆದರೆ ಬೆಟ್ಟಕ್ಕೆ ತೆರಳಲು ದಾಳಿ ಇರಲಿಲ್ಲ. ಹೀಗಾಗಿ ಸಕಲೇಶ್ ತಾನೇ ಮುಂದೆ ನಿಂತು ಸರ್ಕಾರಿ ಜಾಗದಲ್ಲಿ ರಸ್ತೆ ಮಾಡಲು ಮುಂದಾಗಿದ್ದು, ಇದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: Pahalgam Terror Attack | ಭಾರತ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಿದೆ – ಉಗ್ರರಿಗೆ ರಾಜನಾಥ್‌ ಸಿಂಗ್‌ ಎಚ್ಚರಿಕೆ

    ಇಂದು ಸಹ ಸಕಲೇಶ್ ಕಡೆಯವರು ಜೆಸಿಬಿಗಳ ಮೂಲಕ ರಸ್ತೆ ಮಾಡಲು ಮುಂದಾಗಿದ್ದು, ಗ್ರಾಮಸ್ಥರು ಕ್ರಷರ್ ಮಾಡಬಾರದು. ರಸ್ತೆಯನ್ನೂ ಅಗೆಯಬಾರದು ಎಂದು ಅಡ್ಡಿಪಡಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಸಕಲೇಶ್ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕಿರುತೆರೆ ದಂಪತಿ

    ಈ ವೇಳೆ ಸಕಲೇಶ್ ತನ್ನ ಪರವಾನಿಗೆ ಸಹಿತ ರಿವಾಲ್ವರ್‌ನಿಂದ ಚಿಕನ್ ರವಿ ಎಂಬ ರೈತರೊಬ್ಬರ ಕಾಲಿಗೆ ಗುಂಡು ಹಾರಿಸಿದ್ದಾನೆ. ಬಳಿಕ ನನ್ನ ತಲೆಗೆ ಕಲ್ಲಿನಿಂದ ಹೊಡೆದವರು ಯಾರು ಎಂದು ಕೂಗಾಡುತ್ತಾ ರಿವಾಲ್ವರ್ ಕೈಯಲ್ಲಿ ಹಿಡಿದು ಜನರನ್ನ ಬೆದರಿಸಿದ್ದಾನೆ. ಇದನ್ನೂ ಓದಿ: ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

    ಘಟನೆಯಲ್ಲಿ ಗಾಯಗೊಂಡ ರವಿ ಎಂಬ ರೈತನಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಆರೋಪಿ ಸಕಲೇಶ್‌ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಮಹಜರು ವೇಳೆ ಬಿಯರ್‌ ಬಾಟಲಿಯಿಂದ ಹಲ್ಲೆ – ಆರೋಪಿಯ ಕಾಲಿಗೆ ಗುಂಡೇಟು

    ಮಹಜರು ವೇಳೆ ಬಿಯರ್‌ ಬಾಟಲಿಯಿಂದ ಹಲ್ಲೆ – ಆರೋಪಿಯ ಕಾಲಿಗೆ ಗುಂಡೇಟು

    ಮೈಸೂರು: ಗೋಪಾಲಪುರ ಗ್ರಾಮದಲ್ಲಿ ದರೋಡೆ ಪ್ರಕರಣದ ಪ್ರಮುಖ ಆರೋಪಿಯ ಕಾಲಿಗೆ ಪೊಲೀಸರು (Police) ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

    ಕೇರಳದ ಆದರ್ಶ್‌ ಗುಂಡೇಟು ತಿಂದ ಆರೋಪಿ. ಸ್ಥಳ ಮಹಜರು ಸಮಯದಲ್ಲಿ ಬಿಯರ್ ಬಾಟಲಿಯಿಂದ ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಆದರ್ಶ್‌ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಮೈಸೂರು-ಮಾನಂದವಾಡಿ ಹೆದ್ದಾರಿಯಲ್ಲಿ ಮುಸುಕುಧಾರಿಗಳ ತಂಡವೊಂದು ಗುಜ್ಜೇಗೌಡನ ಪುರ ಗ್ರಾಮದಲ್ಲಿ ಕೇರಳ (Kerala) ಉದ್ಯಮಿಯೊಬ್ಬರ ಕಾರು (Car) ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗಿತ್ತು. ಆರೋಪಿಗಳು ಗೋಪಾಲಪುರ ಗ್ರಾಮದಲ್ಲಿ ಒಂದು ಕಾರನ್ನು ಬಿಟ್ಟು ಪರಾರಿಯಾಗಿದ್ದರು.  ಇದನ್ನೂ ಓದಿ: ಕನ್ನಡಿಗರಿಗಾಗಿ ಕರೆದ ಬಂದ್ ಯಶಸ್ವಿಯಾಗಿದೆ: ವಾಟಾಳ್ ನಾಗರಾಜ್

     

     ಪ್ರಕರಣದ ಆರೋಪಿ ಆದರ್ಶ್‌ನನ್ನು ಸ್ಥಳ ಮಹಜರಿಗಾಗಿ ಶುಕ್ರವಾರ ರಾತ್ರಿ 9ಕ್ಕೆ ಗೋಪಾಲಪುರ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ಆರೋಪಿಯು ಜಯಪುರ ಠಾಣಾ ಪಿ.ಎಸ್.ಐ ಪ್ರಕಾಶ್ ಯತ್ತಿಮನಿ ಮತ್ತು ಪೊಲೀಸ್ ಸಿಬ್ಬಂದಿ ಹರೀಶ್ ಅವರಿಗೆ ಬಾಟಲಿಯಿಂದ ಚುಚ್ಚಿ, ಪರಾರಿಯಾಗಲು ಯತ್ನಿಸಿದ್ದಾನೆ.

    ಈ ಸಂದರ್ಭದಲ್ಲಿ ತಂಡದಲ್ಲಿದ್ದ ಬೈಲಕುಪ್ಪೆ ಠಾಣೆ ಪಿಎಸ್ಐ ಎಂ.ಕೆ.ದೀಪಕ್ ಫೈಯರಿಂಗ್ ನಡೆಸಿದ್ದಾರೆ. ಇಬ್ಬರು ಪೊಲೀಸರಿಗೆ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಗುಂಡೇಟು ಬಿದ್ದ ಆರೋಪಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ 7 ಜನರನ್ನು ಬಂಧಿಸಲಾಗಿದೆ.

     

  • ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್‌

    ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್‌

    ಹಾಸನ: ಬೆಂಗಳೂರಿನಿಂದ ಮಂಗಳೂರಿಗೆ (Bengaluru to Mangaluru) ತೆರಳುತ್ತಿದ್ದ ಖಾಸಗಿ ಬಸ್ (Private Bus) ತಡೆದು ಲಾಂಗ್‌ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದ ಪುಡಿರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಶಾಂತಿಗ್ರಾಮ ಬಳಿ ನಡೆದಿದೆ.

    ಒಂದು ಕೊಲೆ,  ಮೂರು ಕೊಲೆ ಯತ್ನ ಪ್ರಕರಣಗಳ ಆರೋಪಿಯಾಗಿರುವ ಮನುವನ್ನು (23) ಬೆಂಗಳೂರಿನಲ್ಲಿ ಬಂಧಿಸಿ ನಗರ ಠಾಣೆ ಪೊಲೀಸರು ಹಾಸನಕ್ಕೆ ಕರೆ ತರುತ್ತಿದ್ದರು. ಈ ವೇಳೆ ಮೂತ್ರ ವಿಸರ್ಜನೆಗೆ ಅನುಮತಿ ನೀಡಬೇಕೆಂದು ಕೇಳಿದ್ದಾನೆ.

    ಶಾಂತಿಗ್ರಾಮ ಬಳಿ ರಸ್ತೆ ಬದಿ ಜೀಪ್ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಅವಕಾಶ ನೀಡಿದಾಗ ಪೊಲೀಸರ ಮೇಲೆಯೇ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಮನು ಯತ್ನಿಸಿದ್ದಾನೆ.

    ಈ ಸಂದರ್ಭದಲ್ಲಿ ಹಾಸನ ನಗರಠಾಣೆ ಇನ್ಸ್‌ಪೆಕ್ಟರ್ ಮೋಹನ್‌ಕೃಷ್ಣ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಸಬ್‌ಇನ್ಸ್‌ಪೆಕ್ಟರ್ ಕುಮಾರ್ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ‌. ಇದನ್ನೂ ಓದಿ: ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆ!


    ಬುಧವಾರ ನಸುಕಿನ ಜಾವ 2 ಗಂಟೆಗೆ ಬೈಪಾಸ್‌ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ಕೆಎ 51 ಎಂವಿ 8912 ನಂಬರ್‌ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಮನು ಅಡ್ಡ ಹಾಕಿ ನಿಲ್ಲಿಸಿದ್ದ. ಕಾರಿನಿಂದ ಇಳಿದ ಬಳಿಕ ಗಲಾಟೆ ಮಾಡಿ ಬಸ್ಸಿನ ಗ್ಲಾಸನ್ನು ಒಡೆದು ಹಾಕಿದ್ದ. ಪುಡಿ ರೌಡಿ ಮನುವಿನ ಹುಚ್ಚಾಟ ಬಸ್ಸಿನಲ್ಲಿದ್ದವರ ಮೊಬೈಲಿನಲ್ಲಿ ಸೆರೆಯಾಗಿತ್ತು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಇದನ್ನೂ ಓದಿ: ತನ್ನನ್ನು ಮೋದಿ ಕೈಗೊಂಬೆ ಎಂದ ಡೆಮಾಕ್ರಟಿಕ್‌ ಸಂಸದರ ವಿರುದ್ಧ US ಗುಪ್ತಚರ ವಿಭಾಗದ ಬಾಸ್‌ ಕೆಂಡಾಮಂಡಲ

    ಬಸ್ಸಿಗೆ ಹೀಗೆ ಆದರೆ ಇನ್ನೂ ಕಾರು, ಬೈಕಿನಂತ ವಾಹನದಲ್ಲಿ ‌ಪ್ರಯಾಣ ಮಾಡುವವರು ಏನು ಮಾಡಬೇಕು ಎಂದು ನೆಟ್ಟಿಗರು ಪೊಲೀಸರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದರು.

  • ಅಮೆರಿಕದಲ್ಲಿ ಹೈದರಾಬಾದ್ ಮೂಲದ ಯುವಕನ ಹತ್ಯೆ

    ಅಮೆರಿಕದಲ್ಲಿ ಹೈದರಾಬಾದ್ ಮೂಲದ ಯುವಕನ ಹತ್ಯೆ

    ವಾಷಿಂಗ್ಟನ್: ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಮೂಲದ ಯುವಕನೋರ್ವ ಬಲಿಯಾದ ಘಟನೆ ಅಮೆರಿಕದ (America) ವಾಷಿಂಗ್ಟನ್ ಡಿಸಿಯ (Washington DC) ಗ್ಯಾಸ್ ಸ್ಟೇಷನ್‌ನಲ್ಲಿ ನಡೆದಿದೆ.

    ರವಿತೇಜ (26) ಮೃತ ಯುವಕ. ರವಿತೇಜ ಹೈದರಾಬಾದ್‌ನ (Hyderabad) ಆರ್‌ಕೆ ಪುರಂ ಗ್ರೀನ್ ಹಿಲ್ಸ್ ಕಾಲೋನಿಯ ನಿವಾಸಿಯಾಗಿದ್ದು, ಸ್ನಾತಕೋತ್ತರ ಪದವಿ ಪಡೆಯುವ ಸಲುವಾಗಿ 2022ರಲ್ಲಿ ಅಮೆರಿಕಗೆ ತೆರಳಿದ್ದರು. ಶಿಕ್ಷಣ ಮುಗಿಸಿದ ಬಳಿಕ ಅಲ್ಲಿಯೇ ಉದ್ಯೋಗ ಅರಸುತ್ತಿದ್ದರು. ಇದನ್ನೂ ಓದಿ:  ಹುಬ್ಬಳ್ಳಿ | ಬೀಗ ಮುರಿದು ರಾಷ್ಟ್ರೀಕೃತ ಬ್ಯಾಂಕ್ ದರೋಡೆಗೆ ಯತ್ನ

    ಸ್ಥಳೀಯ ಪೊಲೀಸರು ದಾಳಿಯ ಹಿಂದಿನ ಉದ್ದೇಶವನ್ನು ತನಿಖೆ ಮಾಡುತ್ತಿದ್ದಾರೆ ಮತ್ತು ದುಷ್ಕರ್ಮಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅವಾಚ್ಯ ಶಬ್ದ ಬಳಸಿ ಸಾಲಗಾರರಿಗೆ ಬೆದರಿಕೆ ಆರೋಪ – ಮೈಕ್ರೋ ಫೈನಾನ್ಸ್ ಬ್ರಾಂಚ್ ಮ್ಯಾನೇಜರ್ ಬಂಧನ

    ಕಳೆದ ಕೆಲವು ತಿಂಗಳುಗಳಲ್ಲಿ ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳು ಕೊಲ್ಲಲ್ಪಟ್ಟ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಇದನ್ನೂ ಓದಿ: PUBLiC TV Impact | ಕಾರ್ಮಿಕರಿಗೆ ಥಳಿತ ಪ್ರಕರಣ – ಮಾಲೀಕ ಸೇರಿ ಮೂವರು ಅರೆಸ್ಟ್

  • ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಮಾದಕ ವಸ್ತು ಮಾರಾಟ ಮಾಡ್ತಿದ್ದ ಆರೋಪಿ ಮೇಲೆ ಫೈರಿಂಗ್‌!

    ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಮಾದಕ ವಸ್ತು ಮಾರಾಟ ಮಾಡ್ತಿದ್ದ ಆರೋಪಿ ಮೇಲೆ ಫೈರಿಂಗ್‌!

    ಕಲಬುರಗಿ: ಅಕ್ರಮವಾಗಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಆರೋಪಿಯ ಮೇಲೆ ಬೆಳ್ಳಂಬೆಳಗ್ಗೆ ಪೋಲಿಸರು ಫೈರಿಂಗ್ ಮಾಡಿರುವ ಘಟನೆ ನಗರದ ಹೊರವಲಯದ ತಾವರಗೇರಾ (Tavaragera ) ಬಳಿ ನಡೆದಿದೆ.

    ಆರೋಪಿಯನ್ನು ಸುಪ್ರೀತ್ ನವಲೆ (32 ) ಎಂದು ಗುರುತಿಸಲಾಗಿದೆ. ಆರೋಪಿ ಅಕ್ರಮವಾಗಿ ಕಾರಿನಲ್ಲಿ ಡ್ರಗ್ಸ್‌ನ್ನು ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಖಾಕಿ ಪಡೆ ದಾಳಿ ಮಾಡಿದ್ದು, ಕಾರು ನಿಲ್ಲಿಸಿ ತಪಾಸಣೆ ಮಾಡುವಾಗ ಪೋಲಿಸರ ಮೇಲೆ ಚಾಕುವಿನಿಂದ ಆರೋಪಿ ದಾಳಿ ಮಾಡಿದ್ದಾನೆ. ಹೆಡ್ ಕಾನ್‌ಸ್ಟೇಬಲ್ ಗುರುಮೂರ್ತಿಯ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದು, ಈ ವೇಳೆ ಚೌಕ್ ಪೋಲಿಸ್ ಠಾಣೆಯ ಪಿಐ ರಾಘವೇಂದ್ರ ಅವರು ಆರೋಪಿ ಮೇಲೆ ಫೈರಿಂಗ್ ನಡೆಸಿದ್ದಾರೆ.ಇದನ್ನೂ ಓದಿ: ಮದ್ವೆಯಾಗುವಂತೆ ಒತ್ತಡ – ಲಿವ್‌ ಇನ್‌ ಗೆಳತಿ ಕೊಂದು ಶವವನ್ನ 8 ತಿಂಗಳು ಫ್ರಿಡ್ಜ್‌ನಲ್ಲಿಟ್ಟಿದ್ದ ಸೈಕೋ

    ಫೈರಿಂಗ್ ಮಾಡಿದ ಪರಿಣಾಮ ಆರೋಪಿ ಗಾಯಗೊಂಡಿದ್ದು, ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೆರ್ ಸೆಂಟರ್‌ಗೆ ದಾಖಲು ಮಾಡಲಾಗಿದೆ. ಇನ್ನೂ ಪ್ರಕರಣ ಸಂಬಂಧ ಅಸ್ಪತ್ರೆಗೆ ಪೊಲೀಸ್ ಆಯುಕ್ತ‌ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2016 ರಿಂದ ಆರೋಪಿ ಅಕ್ರಮ ಡ್ರಗ್ ಸಪ್ಲೈ‌ ಮಾಡುತ್ತಿದ್ದು, ಒಟ್ಟು 3 ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ದಾಖಲಾಗಿವೆ. ಅಲ್ಲದೆ ನೆರೆಯ ಹೈದ್ರಾಬಾದ್‌ನಲ್ಲಿ ಸಹ ಅಕ್ರಮ ಡ್ರಗ್ಸ್‌ ಮಾರಾಟ ಸಂಬಂಧ ಆರೋಪಿ ಮೇಲೆ ಪ್ರಕರಣ ದಾಖಲಾಗಿರುವುದ್ದಾಗಿ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಅಭಿನೇತ್ರಿಯ ಕಾಲು ಹಿಡಿದು ಕ್ಷಮೆ ಕೇಳಬೇಕು – ಸಿ.ಟಿ ರವಿಗೆ ಅನಾಧೇಮಯ ಬೆದರಿಕೆ ಪತ್ರ