Tag: firecracker

  • PublicTV Explainer: ಹಸಿರು ಪಟಾಕಿ ಅಂದ್ರೆ ಏನು? ಗುರುತಿಸೋದು ಹೇಗೆ?

    PublicTV Explainer: ಹಸಿರು ಪಟಾಕಿ ಅಂದ್ರೆ ಏನು? ಗುರುತಿಸೋದು ಹೇಗೆ?

    ಬೆಳಕಿನ ಹಬ್ಬ ದೀಪಾವಳಿ (Deepavali 2025) ಬರುತ್ತಿದೆ, ಬದುಕಿನ ಕತ್ತಲು ಸರಿಸಿ ಪ್ರತಿಯೊಬ್ಬರ ಬಾಳಲ್ಲೂ ಮೂಡಿಸುವ ಈ ಹಬ್ಬ ಎಲ್ಲರಿಗೂ ವಿಶೇಷ. ದೀಪಾವಳಿ ಎಂದಾಕ್ಷಣ ಮನಸ್ಸು ಪುಳಕಿತಗೊಳ್ಳುತ್ತದೆ, ಉತ್ಸಾಹದಿಂದ ಕುಣಿಯುತ್ತದೆ. ಮನೆ, ಮನಗಳಲ್ಲೂ ದೀಪಗಳು ಪ್ರಜ್ವಲಿಸುತ್ತವೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಪಟಾಕಿಗಳಿಲ್ಲದೇ ದೀಪಾವಳಿ ಪೂರ್ಣಗೊಳ್ಳುವುದಿಲ್ಲ. ಹೆಣ್ಣು ಮಕ್ಕಳು ದೀಪ ಹಚ್ಚಿ ಮನೆಯನ್ನು ಬೆಳಗಿದರೆ, ಗಂಡು ಮಕ್ಕಳು ಪಟಾಕಿ ಹಚ್ಚಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಮತ್ತೊಂದು ಕಡೆ ಪಟಾಕಿ ಬಳಕೆ ಹೆಚ್ಚಾಗುತ್ತಿದ್ದಂತೆ ಪರಿಸರ ಮಾಲಿನ್ಯ ಕೂಡ ಆಗುತ್ತದೆ ಅನ್ನೋ ಕಾರಣಕ್ಕೆ ಪಟಾಕಿಗೆ ಬೇಡಿಕೆ ಕಡಿಮೆಯೂ ಆಯ್ತು. ಆ ಬಳಿಕ ಕಡಿಮೆ ಮಾಲಿನ್ಯ ಹೊರಸೂಸುವ ಹಸಿರುವ ಪಟಾಕಿಗೆ ಅವಕಾಶ ಮಾಡಿಕೊಡಲಾಯಿತು. ಅದರಲ್ಲೂ ದೆಹಲಿಯಲ್ಲಿ ಪ್ರತಿ ವರ್ಷ ಉಂಟಾಗುವ ಮಾಲಿನ್ಯ ತಡೆಯಲು ಸುಪ್ರೀಂ ಕೋರ್ಟ್‌ (Supreme Court) ಕೂಡ ಹಸಿರುವ ಪಟಾಕಿಗಷ್ಟೇ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ಸಮವನ್ನೂ ನಿಗದಿ ಮಾಡಿದೆ.

    ಆದ್ರೆ ಹಸಿರು ಪಟಾಕಿ (Green Firecracker) ಅಂದ್ರೇನು ಅನ್ನೋ ವಿಷಯದ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಹಸಿರು ಪಟಾಕಿ ಅಂದ್ರೆ ಏನು? ಸಾಮಾನ್ಯ ಪಟಾಕಿಗಿಂತ ಇದು ಹೇಗೆ ಭಿನ್ನ? ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಹಸಿರು ಪಟಾಕಿ ಎಂದರೇನು?

    ಹಸಿರು ಪಟಾಕಿಗಳು ಪರಿಸರ ಸ್ನೇಹಿ ಪಟಾಕಿಗಳಾಗಿದ್ದು, ಸಾಂಪ್ರದಾಯಿಕ ಪಟಾಕಿಗಳಿಗಿಂತ ಕಡಿಮೆ ವಾಯು ಮತ್ತು ಶಬ್ದ ಮಾಲಿನ್ಯ ಉಂಟುಮಾಡುತ್ತವೆ. ಇವುಗಳನ್ನ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು ಅದರ ಅಂಗಸಂಸ್ಥೆಯಾದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (NEERI) ಅಭಿವೃದ್ಧಿಪಡಿಸಿದೆ. ಹಸಿರು ಪಟಾಕಿಗಳು ಕಡಿಮೆ ಹಾನಿಕಾರಕ ರಾಸಾಯನಿಕಗಳನ್ನ ಹೊಂದಿದ್ದು, ಸ್ಫೋಟಗೊಂಡಾಗ ಕಡಿಮೆ ಹೊಗೆ ಹೊರಸೂಸುತ್ತವೆ.

    ʻಹಸಿರು ಪಟಾಕಿ’ ಪರಿಸರ ಸ್ನೇಹಿಯೇ?

    ಹಸಿರು ಪಟಾಕಿ ಪರಿಸರಕ್ಕೆ ತೊಂದರೆಯಾಗದಂತೆ ಬಳಸಲೆಂದು ತಯಾರಿಸಲ್ಪಟ್ಟ ಪಟಾಕಿಗಳು. ಇವು ಕಡಿಮೆ ಶಬ್ದ ಹೊಂದಿರುವುದರ ಜೊತೆಗೆ ಇದರಿಂದ ಹೊರಸೂಸುವ ಮಲಿನ ಹೊಗೆಯೂ ಕಡಿಮೆಯಾಗಿರುತ್ತದೆ. ಈ ಕಾರಣದಿಂದ ಈ ಪಟಾಕಿಗಳು ಪರಿಸರ ಸ್ನೇಹಿ ಎನಿಸಿಕೊಂಡಿವೆ. ಜೊತೆಗೆ ಮಾನವನ ಆರೋಗ್ಯದ ಮೇಲೂ ಈ ಪಟಾಕಿಗಳು ಗಣನೀಯ ಪರಿಣಾಮ ಬೀರುವುದಿಲ್ಲ. ಇದು ಇತರ ಪಟಾಕಿಗಳಿಂದ ಈ ಪಟಾಕಿಗಳನ್ನ ಭಿನ್ನವಾಗಿಸುತ್ತವೆ.

    ಹಸಿರು ಪಟಾಕಿ ಮತ್ತು ಸಾಮಾನ್ಯ ಪಟಾಕಿಗೆ ಇರುವ ವ್ಯತ್ಯಾಸ ಏನು?

    * ಹಸಿರು ಪಟಾಕಿ ಹಾಗೂ ಸಾಮಾನ್ಯ ಪಟಾಕಿ ಎರಡು ಕೂಡ ಮಾಲಿನ್ಯ ಉಂಟು ಮಾಡುತ್ತವೆ.
    * ಆದ್ರೆ ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇ.30 ರಷ್ಟು ಕಡಿಮೆ ವಾಯು ಮಾಲಿನ್ಯಕಾರಕ ಹೊರಸೂಸುತ್ತದೆ.
    * ಹಸಿರು ಪಟಾಕಿಗಳು ಮಾಲಿನ್ಯಕಾರಕ ಹೊಗೆ ಹೊರಸೂಸುವುದನ್ನ ಗಣನೀಯವಾಗಿ ಕಡಿಮೆ ಮಾಡುತ್ತದೆ, ಧೂಳನ್ನು ಹೀರಿಕೊಳ್ಳುತ್ತದೆ. ಅಲ್ಲದೇ ಬೇರಿಯಮ್ ನೈಟ್ರೇಟ್‌ನಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವುದಿಲ್ಲ.
    * ಸಾಮಾನ್ಯ ಪಟಾಕಿಗಳಲ್ಲಿನ ವಿಷಕಾರಿ ಲೋಹಗಳನ್ನು ಕಡಿಮೆ ಅಪಾಯಕಾರಿ ಸಂಯುಕ್ತಗಳೊಂದಿಗೆ ಬದಲಾಯಿಸಲಾಗುತ್ತದೆ. ಸಾಮಾನ್ಯ ಪಟಾಕಿಗಳಂತೆ ಅಧಿಕ ಶಬ್ದ ಹಾಗೂ ಹೊಗೆ ಸೂಸುವ ಬದಲಾಗಿ ನೀರಿನ ಆವಿಯನ್ನು ಮಾತ್ರ ಬಿಡುಗಡೆ ಮಾಡುತ್ತದೆ.
    * ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಪ್ರಕಾರ, ಗಾಳಿಯ ಗುಣಮಟ್ಟ ಮಧ್ಯಮ ಅಥವಾ ಕಳಪೆಯಾಗಿರುವ ನಗರಗಳು ಮತ್ತು ಪಟ್ಟಣಗಳಲ್ಲಿ ಮಾತ್ರ ಹಸಿರು ಪಟಾಕಿಗಳನ್ನು ಅನುಮತಿಸಲಾಗಿದೆ.

    ಹಸಿರು ಪಟಾಕಿ ಪರಿಕಲ್ಪನೆ ಶುರುವಾಗಿದ್ದು ಯಾವಾಗ?

    ಪ್ರತಿವರ್ಷವೂ ದೀಪಾವಳಿಯ ಸಮಯದಲ್ಲಿ ದೆಹಲಿ ಸೇರಿ ಇತರೆ ಬೃಹತ್ ನಗರ ಭಾಗಗಳಲ್ಲಿ ವಾಯುಗುಣಮಟ್ಟ ಅಪಾಯಕಾರಿ ಮಟ್ಟವನ್ನು ತಲುಪುತ್ತಿದೆ. ಈ ಕಾರಣದಿಂದಲೇ ಸಾಮಾನ್ಯ ಪಟಾಕಿಗಳಿಗಿಂತ ಶೇ.30ರಷ್ಟು ಕಡಿಮೆ ಮಾಲಿನ್ಯತೆ ಹೊರಸೂಸುವ ಹಸಿರು ಪಟಾಕಿಗಳನ್ನು 2019ರಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಪರಿಚಯಿಸಿತು. ಇವುಗಳಲ್ಲಿ ಬೇರಿಯಂ ಲವಣಗಳು, ಅಲ್ಯೂಮಿನಿಯಂ, ಸ್ಟ್ರ್ಯಾಷಿಯಂ, ಲಿಥಿಯಂ, ಆರ್ಸೆನಿಕ್, ಆಂಟಿಮನಿ ಮತ್ತು ಸೀಸದಂತಹ ನಿಷೇಧಿತ ವಸ್ತುಗಳನ್ನ ಬಳಸದೆಯೇ ತಯಾರಿಸಲಾಗುತ್ತದೆ.

    ಹಸಿರು ಪಟಾಕಿಗಳ ತಯಾರಿಕೆ ಹೇಗೆ?

    ಸಿಎಸ್‌ಐಆ‌ರ್-ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್‌ಇಇಆರ್‌ಐ) ಪ್ರಕಾರ, ಹಸಿರು ಪಟಾಕಿಗಳನ್ನು ಕಡಿಮೆ ಗಾತ್ರದ ಶೆಲ್, ಬೂದಿ ಬಳಕೆಯಿಲ್ಲದೇ, ಸಂಯೋಜನೆ ವೇಳೆ ಕಚ್ಚಾವಸ್ತುಗಳನ್ನ ಕಡಿಮೆ ಬಳಸಿ ಹಾಗೂ ಕಡಿಮೆ ಹೊಗೆ ಹೊರಸೂಸುವಿಕೆಯ ದೃಷ್ಟಿಯಿಂದ ಧೂಳು ನಿರೋಧಕಗಳಂತೆ ನೀರಿನ ಆವಿಯನ್ನು ಬಳಸಲಾಗುತ್ತದೆ. ಹಸಿರು ಪಟಾಕಿಯಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ಮತ್ತು ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ.

    ಹಸಿರು ಪಟಾಕಿ ಎಲ್ಲಿ ಸಿಗುತ್ತೆ? ಗುರುತಿಸುವುದು ಹೇಗೆ?

    ಹಸಿರು ಪಟಾಕಿಗಳ ಲಭ್ಯತೆ ಹಾಗೂ ಅವುಗಳನ್ನ ಗುರುತಿಸುವ ಬಗ್ಗೆ ಜನರಲ್ಲಿ ಗೊಂದಲ ಇದೆ. ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಂದ ಅಧಿಕೃತ ಪರವಾನಗಿ ಪಡೆದಿರುವ ಮಳಿಗೆಗಳಿಗಷ್ಟೇ ಮಾರಾಟಕ್ಕೆ ಅನುಮತಿ ನೀಡಿರುತ್ತದೆ. ಗ್ರಾಹಕರು ತಾವು ಖರೀದಿಸುವ ಪಟಾಕಿಗಳು ಹಸಿರು ಪಟಾಕಿ ಹೌದೆ? ಅಥವಾ ಇಲ್ಲವೇ? ಎಂಬುದನ್ನು ತಿಳಿದುಕೊಳ್ಳಲು, ಪಟಾಕಿ ಪ್ಯಾಕ್‌ ಮೇಲಿನ ಬಾರ್‌ ಕೋಡ್‌ ಸ್ಕ್ಯಾನ್‌ ಮಾಡಬೇಕು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಮೂಲಕ ಸಹ ಹಸಿರು ಪಟಾಕಿಗಳನ್ನು ಗುರುತಿಸಬಹುದಾಗಿದೆ. SWAS, SAFAL ಮತ್ತು STAR ಎಂಬ ಮೂರು ವರ್ಗದಲ್ಲಿ ಹಸಿರು ಪಟಾಕಿಗಳು ಸಿಗುತ್ತವೆ. ಇವನ್ನು CSIR ಅಭಿವೃದ್ಧಿಪಡಿಸಿದೆ.

    ಪಟಾಕಿ ಸಿಡಿಸುವ ಮುನ್ನ ಗಮನದಲ್ಲಿಡಿ

    * ಹಸಿರು ಪಟಾಕಿಗಳನ್ನು ಸಿಡಿಸುವಾಗ ಪಟಾಕಿ ಹಾಗೂ ನಿಮ್ಮ ನಡುವಿನ ಅಂತರ ಹೆಚ್ಚಿರಬೇಕು.
    * ಕೈಯನ್ನು ನೇರವಾಗಿ ಇರಿಸಿ ಪಟಾಕಿಗೆ ಕಿಡಿ ತಾಗಿಸಬೇಕು. ಪಟಾಕಿಗಳನ್ನು ಸಿಡಿಸುವಾಗ ಬೂಟುಗಳನ್ನು ಧರಿಸುವುದು ಉತ್ತಮ.
    * ಆಟದ ಮೈದಾನಗಳಂತಹ ತೆರೆದ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸುವುದು ಒಳಿತು.
    * ಹಸಿರು ಪಟಾಕಿಗಳನ್ನು ಬೆಳಗಿಸುವ ಸಂದರ್ಭದಲ್ಲಿ ಒಂದೆರಡು ಬಕೆಟ್‌ಗಳಷ್ಟು ನೀರನ್ನು ಹತ್ತಿರದಲ್ಲಿ ಇಟ್ಟುಕೊಳ್ಳಬೇಕು.
    * ಪಟಾಕಿ ಸಿಡಿಸುವವರು ಉದ್ದವಾದ, ಸಡಿಲವಾದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು.

  • ಪಟಾಕಿ ನಿಷೇಧ ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ: ದೆಹಲಿ ಸರ್ಕಾರದ ಕಿವಿ ಹಿಂಡಿದ ಸುಪ್ರೀಂ ಕೋರ್ಟ್‌

    ಪಟಾಕಿ ನಿಷೇಧ ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ: ದೆಹಲಿ ಸರ್ಕಾರದ ಕಿವಿ ಹಿಂಡಿದ ಸುಪ್ರೀಂ ಕೋರ್ಟ್‌

    ನವದೆಹಲಿ: ಪಟಾಕಿ (Firecracker) ನಿಷೇಧ ಕೇವಲ ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ ಎಂದು ಸುಪ್ರೀಂ ಕೋರ್ಟ್‌ (Supreme Court) ದೆಹಲಿ (Delhi) ಸರ್ಕಾರ ಮತ್ತು ಪೊಲೀಸರಿಗೆ ಚಾಟಿ ಬೀಸಿದೆ.

    ದೀಪಾವಳಿ ಹಬ್ಬದ (Deepavali Festival) ನಂತರ ಕೆಲವು ದಿನಗಳ ಕಾಲ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಉಸಿರುಗಟ್ಟಿಸುವ ವಿಷಕಾರಿ ಗಾಳಿಯಿಂದ ತುಂಬಿದ್ದಕ್ಕೆ ಸುಪ್ರಿಂ ಕೋರ್ಟ್‌ ಸರ್ಕಾರ ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧ ಕ್ರಮವನ್ನು ಪ್ರತಿ ವರ್ಷ ಘೋಷಿಸುವ ಮತ್ತು ನಿರ್ಲಕ್ಷಿಸುವ ವಿಚಾರದ ಬಗ್ಗೆ ಸರ್ಕಾರ ಮತ್ತು ಪೊಲೀಸರು ತಕ್ಷಣ ಪ್ರತಿಕ್ರಿಯೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್‌ ವಿವಾದ ಮತ್ತೆ ಮುನ್ನೆಲೆಗೆ – ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಮಹಿಳೆ ಅರೆಸ್ಟ್‌

    ಪಟಾಕಿಗಳ ನಿಷೇಧವನ್ನು ದೆಹಲಿ ಎನ್‌ಸಿಆರ್‌ನಲ್ಲಿ ಜಾರಿಗೆ ತರಲಾಗಿಲ್ಲ ಎಂದು ವ್ಯಾಪಕ ವರದಿಗಳಿವೆ. ಇದು ಮಾಲಿನ್ಯವನ್ನು ಕಡಿಮೆ ಮಾಡಲು ಪ್ರಮುಖ ಕ್ರಮವಾಗಬೇಕಿತ್ತು ಎಂದು ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

    ಪಟಾಕಿ ನಿಷೇಧ ಕುರಿತು ಸರ್ಕಾರದ ಆದೇಶವೇನು? ಅದನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತಿದೆ? ಎಂದು ನ್ಯಾಯಾಲಯ ಸರ್ಕಾರಕ್ಕೆ ಪ್ರಶ್ನಿಸಿದೆ. 2025 ರಲ್ಲಿ ದೆಹಲಿಯು ಮಾಲಿನ್ಯಕಾರಕಗಳಿಂದ ಉಸಿರುಗಟ್ಟುವ ವಾತಾವರಣ ಸೃಷ್ಠಿಯಾಗುವುದಿಲ್ಲ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಸರ್ಕಾರದ ಆದೇಶ ಏನಾದರೂ ಕೆಲಸ ಮಾಡಬೇಕು ಎಂದು ಪೀಠ ಸರ್ಕಾರದ ಕಿವಿ ಹಿಂಡಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಲ್ಯಾಂಡ್ ಜಿಹಾದ್ – ಬಿಜೆಪಿ ಆಕ್ರೋಶ

    ಪಟಾಕಿ ನಿಷೇಧದ ಬಳಿಕವೂ ದೆಹಲಿಯಲ್ಲಿ ದೀಪಾವಳಿ ಸಮಯದಲ್ಲಿ ಭಾರೀ ಪಟಾಕಿ ಸಿಡಿಸಲಾಗಿದೆ. ಈಗಾಗಲೇ ವಿಶ್ವದ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ಪಟಾಕಿ ನಿಷೇಧಿಸಿದ ಉದ್ದೇಶ ಈಡೇರಿದಿಯೇ? ಎಂದು ಸುಪ್ರೀಂಕೋರ್ಟ್ ದೆಹಲಿ ಸರ್ಕಾರಕ್ಕೆ ಪ್ರಶ್ನಿಸಿದೆ.

    ದೆಹಲಿಯ ಮಾಲಿನ್ಯದ ಮಟ್ಟವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಇದು ಹಿಂದಿನ ಎರಡು ವರ್ಷಗಳಿಗಿಂತ ಹೆಚ್ಚಾಗಿದೆ. ಅಲ್ಲದೇ ದೀಪಾವಳಿಯ ಆಸುಪಾಸಿನಲ್ಲಿ ಹುಲ್ಲು ಸುಡುವ ಪ್ರಕರಣಗಳು ಹೆಚ್ಚುತ್ತಿವೆ. ಅಕ್ಟೋಬರ್‌ನ ಕೊನೆಯ ಹತ್ತು ದಿನಗಳಲ್ಲಿ ಹುಲ್ಲು ಸುಟ್ಟ ಪ್ರಕರಣಗಳ ವಿವರಗಳ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

    ಈ ವರ್ಷ ಪಟಾಕಿ ನಿಷೇಧವನ್ನು ಜಾರಿಗೆ ತರಲು ತೆಗೆದುಕೊಂಡ ಕ್ರಮಗಳು ಮತ್ತು ಮುಂದಿನ ವರ್ಷ ನಿಷೇಧವನ್ನು ಖಚಿತಪಡಿಸಿಕೊಳ್ಳಲು ಒಂದು ವಾರದೊಳಗೆ ಪ್ರಸ್ತಾಪಿಸಲಾದ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸ್ ಕಮಿಷನರ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

    ಇದೇ ವೇಳೆ ಸಾರಿಗೆ ಮಾಲಿನ್ಯ, ಭಾರೀ ಟ್ರಕ್‌ಗಳ ಪ್ರವೇಶದಿಂದ ಉಂಟಾಗುವ ಮಾಲಿನ್ಯ ಮತ್ತು ಕೈಗಾರಿಕಾ ಮಾಲಿನ್ಯ ಸೇರಿದಂತೆ ಇತರ ಮಾಲಿನ್ಯಕಾರಕ ಪಾಲುದಾರರನ್ನು ಪರಿಗಣಿಸುವುದಾಗಿ ಕೋರ್ಟ್ ಹೇಳಿದೆ. ನ.14 ರಂದು ವಿಚಾರಣೆ ನಡೆಸುವುದಾಗಿ ಕೋರ್ಟ್‌ ಹೇಳಿದೆ.

  • ಮಂಗಳೂರಿನ ಕುಕ್ಕೇಡಿಯಲ್ಲಿ ಪಟಾಕಿ ಗೋಡೌನ್‌ ಸ್ಫೋಟಕ್ಕೆ ಕಾರಣ ಏನು? – ತನಿಖೆಯಲ್ಲಿ ರಹಸ್ಯ ಬಯಲು

    ಮಂಗಳೂರಿನ ಕುಕ್ಕೇಡಿಯಲ್ಲಿ ಪಟಾಕಿ ಗೋಡೌನ್‌ ಸ್ಫೋಟಕ್ಕೆ ಕಾರಣ ಏನು? – ತನಿಖೆಯಲ್ಲಿ ರಹಸ್ಯ ಬಯಲು

    ಮಂಗಳೂರು: ವೇಣೂರಿನ ಕುಕ್ಕೇಡಿ ಪಟಾಕಿ ಘಟಕ (Firecracker Godown) ಸ್ಪೋಟದಿಂದ ಮೂವರ ಸಾವು ಪ್ರಕರಣದಲ್ಲಿ ಸತ್ಯಾಂಶ ಬಯಲಾಗಿದೆ. ಪಟಾಕಿ ಘಟಕ ಸ್ಫೋಟಕ್ಕೆ ನಿಯಮ ಮೀರಿ 100 Kg ಗನ್ ಪೌಡರ್ ದಾಸ್ತಾನು ಇರಿಸಿದ್ದೇ ಕಾರಣ ಎಂಬ ರಹಸ್ಯ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

    ಈ ಪಟಾಕಿ‌ ತಯಾರಿಕಾ ಘಟಕಕ್ಕೆ 15 ಕೆಜಿ ಸ್ಫೋಟಕ (Explosives) ಸಂಗ್ರಹಿಸಿಟ್ಟುಕೊಳ್ಳಲು ಮಾತ್ರ ಅನುಮತಿ ನೀಡಲಾಗಿತ್ತು. ಆದ್ರೆ ಅಂಗಡಿ ಆರೋಪಿ ಬಶೀರ್‌, 100 ಕೆ.ಜಿ ಸ್ಟಾಕ್ ಇಟ್ಟಿದ್ದ. ಪಟಾಕಿ ತಯಾರಿಕೆಗಾಗಿ ಪೊಟ್ಯಾಶಿಯಂ ಕ್ಲೋರೈಡ್‌, ಪೊಟ್ಯಾಶಿಯಂ ನೈಟ್ರೇಟ್ ಬಳಕೆ ಮಾಡುತ್ತಿದ್ದ. ಇದರಿಂದ ಪಟಾಕಿ ಲೋಡಿಂಗ್ ವೇಳೆ ಒತ್ತಡ ಉಂಟಾಗಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶೆಟ್ಟರ್ ಡೀಸೆಂಟ್ ಜಂಟಲ್‍ ಮ್ಯಾನ್, ಕಾಂಗ್ರೆಸ್ಸಿಗರು ಉಳಿಸಿಕೊಳ್ಳಬೇಕಾಗಿತ್ತು: ಹರಿಪ್ರಸಾದ್

    ಅತಿಯಾಗಿ ಸ್ಫೋಟಕ ದಾಸ್ತಾನು ಇಟ್ಟಿದ್ದ ಕಾರಣಕ್ಕೆ ಇಂತಹ ಭೀಕರ ಸ್ಫೋಟ ಉಂಟಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸದ್ಯ ಚಾರ್ಕೋಲ್, ಗಂಧಕ, ಅಲ್ಯೂಮಿನಿಯಂ ಪೌಡರ್ ಸಹಿತ 85ಕ್ಕೂ ಹೆಚ್ಚು ಸ್ಯಾಂಪಲ್‌ಗಳನ್ನ ಎಫ್ಎಸ್ಎಲ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಗೆ ಕಿರುಕುಳ; ಅನ್ಯಕೋಮಿನ ಯುವಕ ಅರೆಸ್ಟ್ – ಹಿಂದೂ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

    ಫೈರ್ ಸೇಫ್ಟಿ ಬಳಕೆ ಮಾಡದೇ ನಿಯಮ ಉಲ್ಲಂಘಿಸಿ ಪಟಾಕಿ ತಯಾರಿಸುತ್ತಿದ್ದು, ಮೈಸೂರು ಭಾಗದ ಕಾರ್ಯಕ್ರಮದಲ್ಲಿ ಸಂಭ್ರಮಿಸಲು ಪಟಾಕಿ ತಯಾರಿಸುತ್ತಿದ್ದ ಎನ್ನಲಾಗಿದೆ. ಇದಕ್ಕಾಗಿಯೇ ನಿಯಮ ಬಾಹಿರವಾಗಿ ಭಾರೀ ಪ್ರಮಾಣದ ಸ್ಫೋಟಕವನ್ನು ದಾಸ್ತಾನು ಇಟ್ಟಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೋಚಿಮುಲ್ ನೇಮಕಾತಿ ಅಕ್ರಮದಲ್ಲಿ ಮಂಗಳೂರು ವಿವಿ ಭಾಗಿಯಾಗಿರುವ ಶಂಕೆ – ಇಡಿ ವಿಚಾರಣೆ

  • ಮೃತ ಮೂವರು ಯುವಕರ ಗ್ರಾಮದಲ್ಲಿ ಪಟಾಕಿ ಹಚ್ಚದೆ ಗಣೇಶ ಹಬ್ಬ ಆಚರಣೆ- ಯಾಕೆ..?

    ಮೃತ ಮೂವರು ಯುವಕರ ಗ್ರಾಮದಲ್ಲಿ ಪಟಾಕಿ ಹಚ್ಚದೆ ಗಣೇಶ ಹಬ್ಬ ಆಚರಣೆ- ಯಾಕೆ..?

    ಹಾವೇರಿ: ಕಳೆದ ತಿಂಗಳು ಆಗಸ್ಟ್ 29 ರಂದು ನಡೆದ ಪಟಾಕಿ ಅಂಗಡಿಯ ಅಗ್ನಿ ದುರಂತದಲ್ಲಿ ಒಂದೇ ಗ್ರಾಮದ ಮೂವರು ಯುವಕರು ಮೃತಪಟ್ಟಿದ್ದರು. ಆ ಯುವಕರ ಸ್ವಗ್ರಾಮ ಹಾವೇರಿ ತಾಲೂಕಿನ ಕಾಟೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಪಟಾಕಿ (Firecracker) ಹಚ್ಚದೆ ಗಣಪತಿ ಹಬ್ಬವನ್ನು (Ganesh Chaturthi) ಸರಳವಾಗಿ ಆಚರಣೆ ಮಾಡಿದ್ದಾರೆ.

    ಗ್ರಾಮದ ದೇವಸ್ಥಾನದಿಂದ ಗ್ರಾಮದ ಶಾಲೆಗೆ ಗಣಪತಿಯ ಮೆರವಣಿಗೆಯಲ್ಲಿ ಪಟಾಕಿ ಬಳಕೆ ಮಾಡದೆ ತಂದಿದ್ದಾರೆ. ಸಪ್ಟೆಂಬರ್ 29 ರಂದು ಹಾವೇರಿಯ ಆಲದಕಟ್ಟಿ ಪಟಾಕಿ ಅಂಗಡಿಯಲ್ಲಿ ಒಂದೇ ಗ್ರಾಮದ ಯುವಕರಾದ, ಶಿವಲಿಂಗ ಅಕ್ಕಿ, ರಮೇಶ ಬಾರ್ಕಿ, ದ್ಯಾಮಪ್ಪ ಓಲೇಕಾರ ಮೃತಪಟ್ಟಿದ್ದರು. ಈ ಮೂವರು ಕಾಟೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು. ಹಳೆ ವಿದ್ಯಾರ್ಥಿಗಳ ಸ್ಮರಣಾರ್ಥ ಪಟಾಕಿ ಹಚ್ಚದೆ ಗಣೇಶ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ದೇಶದ ಶ್ರೀಮಂತ ಗಣೇಶನಿಗೆ ಬರೋಬ್ಬರಿ 360 ಕೋಟಿ ಇನ್ಶುರೆನ್ಸ್‌; 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿ ಅಲಂಕಾರ

    ಗ್ರಾಮದ ಬಹುತೇಕ ಜನರು ಪಟಾಕಿ ಬಳಸದೆ ಗಣೇಶ ಪ್ರತಿಷ್ಠಾಪನೆ ಮಾಡಿ, ಪಟಾಕಿ ದುರಂತದಲ್ಲಿ ಮೃತಪಟ್ಟ ಯುವಕರಿಗೆ, ಸರಳವಾಗಿ ಗಣೇಶ ಹಬ್ಬ ಆಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿದರು. ಇದನ್ನೂ ಓದಿ: ಗಣೇಶ ಹಬ್ಬದಂದು ಮಗ ಮನೆಗೆ ಬಂದಿದ್ದಾನೆ- ಧ್ರುವ ಸರ್ಜಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಚೀಪುರಂನ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ – 8 ಜನ ಸಜೀವದಹನ

    ಕಾಂಚೀಪುರಂನ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ – 8 ಜನ ಸಜೀವದಹನ

    – 19 ಜನರಿಗೆ ಗಾಯ

    ಚೆನ್ನೈ: ಪಟಾಕಿ ಕಾರ್ಖಾನೆಯಲ್ಲಿ (Firecracker Factory) ಭೀಕರ ಬೆಂಕಿ (Fire) ಅವಘಡ ಉಂಟಾಗಿ 8 ಜನರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ (Tamil Nadu) ಕಾಂಚೀಪುರಂನಲ್ಲಿ (Kancheepuram) ನಡೆದಿದೆ.

    ಬುಧವಾರ ಮಧ್ಯಾಹ್ನದ ವೇಳೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರ್ಖಾನೆಯಲ್ಲಿ ಸುಮಾರು 25 ಜನರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ವರದಿಗಳ ಪ್ರಕಾರ ಪಟಾಕಿಗಳನ್ನು ಒಣಗಲು ಬಿಸಿಲಿಗೆ ಹಾಕಿದ್ದಾಗ ಬೆಂಕಿ ಹುಟ್ಟಿಕೊಂಡಿದೆ. ಬಳಿಕ ಬೆಂಕಿ ಇಡೀ ಕಾರ್ಖಾನೆಗೆ ಹರಡಿಕೊಂಡಿದೆ. ಈ ವೇಳೆ ಕಾರ್ಮಿಕರು ಕಾರ್ಖಾನೆಯೊಳಗೆ ಸಿಲುಕಿಕೊಂಡಿದ್ದು, ಹಲವರ ಸಾವು ಸಂಭವಿಸಿದೆ. ಇದನ್ನೂ ಓದಿ:  ಉಕ್ರೇನ್‌ ಶಾಲೆ ಮೇಲೆ ರಷ್ಯಾ ಡ್ರೋನ್‌ ದಾಳಿ – 3 ಸಾವು

    ಘಟನೆಗೆ ಸಂಬಂಧಪಟ್ಟಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಸಿಗುತ್ತಲೇ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯಲ್ಲಿ 19 ಜನರಿಗೆ ಸುಟ್ಟ ಗಾಯಗಳಗಿದ್ದು, ಅವರ ಪೈಕಿ 11 ಜನರನ್ನು ಕಾಂಚೀಪುರಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ 8 ಗಾಯಾಳುಗಳನ್ನು ಬೇರೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಇದನ್ನೂ ಓದಿ: ಭೂಕಂಪನದ ಮಧ್ಯೆಯೇ ವೈದ್ಯರು ಹೆರಿಗೆ ಮಾಡಿಸಿ ತಾಯಿ, ಮಗುವಿನ ಜೀವ ಉಳಿಸಿದ್ರು!

    ಇದೀಗ ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸಲು ನಿರಾಕರಿಸಿದ ಯುವಕ – ಮೂವರು ಅಪ್ರಾಪ್ತರಿಂದ ಹತ್ಯೆ

    ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸಲು ನಿರಾಕರಿಸಿದ ಯುವಕ – ಮೂವರು ಅಪ್ರಾಪ್ತರಿಂದ ಹತ್ಯೆ

    ಮುಂಬೈ: ದೀಪಾವಳಿ (Diwali) ಹಿನ್ನೆಲೆಯಲ್ಲಿ ಗಾಜಿನ ಪಟಾಕಿ (FireCracker) ಸಿಡಿಸಲು ಅನುಮತಿಸಿದ ಯುವಕನನ್ನು ಮೂವರು ಅಪ್ರಾಪ್ತರು ಸೇರಿ ಕೊಲೆ ಮಾಡಿರುವ ಘಟನೆ ಮುಂಬೈನ ಶಿವಾಜಿ ನಗರದ ನಟವರ್ ಪರೇಖ್ ಕಾಂಪೌಂಡ್‍ನಲ್ಲಿ ನಡೆದಿದೆ.

    ಸುನೀಲ್ ಶಂಕರ್ ನಾಯ್ಡು (21) ಮೃತ ಯುವಕ. 12 ವರ್ಷದ ಬಾಲಕನು ಗಾಜಿನ ಬಾಟಲಿಯಲ್ಲಿ (Glass Bottle) ಪಟಾಕಿ ಸಿಡಿಸುತ್ತಿದ್ದನ್ನು ಸುನೀಲ್ ನೋಡಿದ್ದಾನೆ. ಇದಾದ ಬಳಿಕ ಆ ಬಾಲಕನ ಬಳಿ ಸುನೀಲ್‌ ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುವುದು ಬೇಡ ಅಂದಿದ್ದಾರೆ.

    crime

    ಈ ಹಿನ್ನೆಲೆಯಲ್ಲಿ ಕೋಪಗೊಂಡ ಆ ಬಾಲಕ ಸುನೀಲ್ ವಿರುದ್ಧ ಹೋರಾಡಲು 14 ವರ್ಷದ ಸಹೋದರ ಹಾಗೂ 15 ವರ್ಷದ ಸ್ನೇಹಿತನನ್ನು ಕರೆತಂದಿದ್ದಾನೆ. ಮೊದಲಿಗೆ ನಾಲ್ವರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ಆ ಮೂವರು ಅಪ್ರಾಪ್ತರು ಸೇರಿ ಸುನೀಲ್‍ನನ್ನು ಥಳಿಸಿದ್ದಾರೆ. ಈ ವೇಳೆ ಒಬ್ಬಾತ ಸುನೀಲ್ ಕುತ್ತಿಗೆಗೆ ಚಾಕು ಇರಿದ್ದಾನೆ. ನಂತರ ಅಲ್ಲಿಂದ ಮೂವರು ಅಪ್ರಾಪ್ತರು ಪರಾರಿಯಾಗಿದ್ದಾರೆ.

    ಈ ವೇಳೆ ಸುನೀಲ್ ಗಂಭೀರ ಗಾಯಗೊಂಡಿದ್ದ. ತಕ್ಷಣ ಸುನೀಲ್‍ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಕೊಲೆ ಮಾಡುತ್ತಿರುವ ವೀಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ- 4 ಮಂದಿ ಸಾವು

    ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ- 4 ಮಂದಿ ಸಾವು

    ಚೆನ್ನೈ: ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಹಲವರಿಗೆ ಗಾಯವಾಗಿ 4 ಮಂದಿ ಸಾವನ್ನಪ್ಪಿರುವ ಘಟನೆ ಶಿವಕಾಶಿ ಬಳಿಯ ಪುಥುಪಟ್ಟಿಯಲ್ಲಿರುವ  ಖಾಸಗಿ ಕಾರ್ಖಾನೆಯಲ್ಲಿ ನಡೆದಿದೆ.

    ಕೊಠಡಿಯೊಂದರಲ್ಲಿ ಸ್ಫೋಟವುಂಟಾದ ಹೊತ್ತಲ್ಲಿ, ಕಾರ್ಖಾನೆಯಲ್ಲಿ 30ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಫೋಟದ ರಭಸಕ್ಕೆ ಫ್ಯಾಕ್ಟರಿಯ ಎರಡು ಕೋಣೆಗಳು ಸಂಪೂರ್ಣ ಧ್ವಂಸಗೊಂಡಿವೆ. ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಧ್ವಂಸಗೊಂಡ ಕಾರ್ಖಾನೆ ಬಳಿ ಅಗ್ನಿಶಾಮಕದಳದ ಸಿಬ್ಬಂದಿ, ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    ಕಳೆದ ವರ್ಷ 12ಕ್ಕೂ ಹೆಚ್ಚು ಪಟಾಕಿ ತಯಾರಿಕಾ ಕಾರ್ಖಾನೆಗಳು ಸ್ಫೋಟಗೊಂಡು ಒಟ್ಟಾರೆ 50ಕ್ಕೂ ಹೆಚ್ಚು ಮಂದಿಯ ಜೀವ ಕಳೆದುಕೊಂಡಿದ್ದರು. 2021ರ ಫೆಬ್ರವರಿಯಲ್ಲಿ ಫ್ಯಾಕ್ಟರಿಯೊಂದರಲ್ಲಿ ಅಗ್ನಿದುರಂತವಾಗಿ ಆರು ಮಂದಿ ಸಾವನ್ನಪ್ಪಿದ್ದರು. . ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

  • ಪಟಾಕಿ ನಿಷೇಧಿಸಿದರೆ ನಿರ್ದಿಷ್ಟ ಸಮುದಾಯ ವಿರೋಧಿ ಎಂದರ್ಥವಲ್ಲ- ಸುಪ್ರೀಂ ಕೋರ್ಟ್‌

    ಪಟಾಕಿ ನಿಷೇಧಿಸಿದರೆ ನಿರ್ದಿಷ್ಟ ಸಮುದಾಯ ವಿರೋಧಿ ಎಂದರ್ಥವಲ್ಲ- ಸುಪ್ರೀಂ ಕೋರ್ಟ್‌

    ನವದೆಹಲಿ: ಪಟಾಕಿಯನ್ನು ನಿಷೇಧಿಸುವುದು ನಿರ್ದಿಷ್ಟ ಗುಂಪು ಅಥವಾ ಸಮುದಾಯಕ್ಕೆ ವಿರುದ್ಧವಾದದ್ದು ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ. ಸಂಭ್ರಮದ ನೆಪದಲ್ಲಿ ನಾಗರಿಕರ ಹಕ್ಕುಗಳ ಉಲ್ಲಂಘನೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

    fireworks

    ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್‌.ಷಾ ಮತ್ತು ಎ.ಎಸ್‌.ಬೋಪಣ್ಣ ಅವರಿದ್ದ ಪೀಠವು, ತನ್ನ ಆದೇಶಗಳ ಸಂಪೂರ್ಣ ಅನುಷ್ಠಾನವನ್ನು ಬಯಸುತ್ತದೆ ಎಂದು ಸ್ಪಷ್ಟಪಡಿಸಿತು. ಇದನ್ನೂ ಓದಿ: ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‍ಗೆ ಜಾಮೀನು ಮಂಜೂರು

    ಸಂಭ್ರಮದ ನೆಪವನ್ನು ಮುಂದಿಟ್ಟು ನೀವು (ತಯಾರಕರು) ನಾಗರಿಕರ ಜೀವನದಲ್ಲಿ ಆಟವಾಡುವುದು ಸರಿಯಲ್ಲ. ನಾವು ಯಾವುದೇ ಸಮುದಾಯದ ವಿರುದ್ಧವಿಲ್ಲ. ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ನಾವಿದ್ದೇವೆ ಎಂಬ ಸ್ಪಷ್ಟ ಸಂದೇಶ ನೀಡುತ್ತಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.

    ಈ ಹಿಂದೆ ಪಟಾಕಿ ನಿಷೇಧ ಆದೇಶವನ್ನು ವಿಸ್ತೃತ ಕಾರಣಗಳನ್ನು ನೀಡಿದ ನಂತರ ಜಾರಿಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

    FIREWORKS

    ಎಲ್ಲ ಪಟಾಕಿಗಳನ್ನು ನಿಷೇಧಿಸಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಅನಿಸಿಕೆ ವ್ಯಕ್ತವಾಗಿದೆ. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ನಿಷೇಧಿಸಲಾಗಿದೆ ಎಂದು ಬಿಂಬಿಸಬಾರದು ಎಂದು ಕೋರ್ಟ್‌ ಹೇಳಿದೆ.

    ಇಂದಿಗೂ ಪಟಾಕಿಗಳು ಮಾರುಕಟ್ಟೆಯಲ್ಲಿ ಮುಕ್ತವಾಗಿ ಲಭ್ಯವಿವೆ ಎಂದು ಪೀಠ ಹೇಳಿದೆ. ಇದನ್ನೂ ಓದಿ: ಬಿಸಿಲಿಗೆ ತಲೆ ಸುತ್ತಿ ಬಿದ್ದ ವಿದ್ಯಾರ್ಥಿಗಳು – ಹಾಡಿಗೆ ನೃತ್ಯ ಮಾಡಿದ ಅಧಿಕಾರಿಗಳು

    ಜನರ ಹಕ್ಕುಗಳ ರಕ್ಷಣೆಗೆ ನಾವಿದ್ದೇವೆಂಬ ಸಂದೇಶವನ್ನು ನೀಡುತ್ತಿದ್ದೇವೆ. ಶೇ. 100 ಪಟಾಕಿಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಆದರೆ ದೆಹಲಿಯಲ್ಲಿ ವಾಯುಮಾಲಿನ್ಯದಿಂದಾಗಿ ಜನರು ಎಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ ಎಂದು ಪೀಠ ಎಚ್ಚರಿಸಿತು.

    ಪೀಠವು  ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ

    ಪಟಾಕಿ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲು ಈ ಹಿಂದೆ ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ಪರವಾನಗಿ ಹೊಂದಿರುವ ವ್ಯಾಪಾರಿಗಳು ಮಾತ್ರ ಮಾರಾಟ ಮಾಡಬಹುದು, ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದು ಎಂದು ಈಗ ತಿಳಿಸಿದೆ. ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

  • ಪಟಾಕಿ ಸ್ಫೋಟಕ್ಕೆ 16 ಮಂದಿ ಬಲಿ – ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ

    ಪಟಾಕಿ ಸ್ಫೋಟಕ್ಕೆ 16 ಮಂದಿ ಬಲಿ – ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ

    – ಪ್ರಧಾನಿ ಮೋದಿ ಸಂತಾಪ

    ತಮಿಳುನಾಡು: ಫೆಬ್ರವರಿ 13ರಂದು ತಮಿಳುನಾಡಿನ ವಿರುಧುನಗರದ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 16 ಮಂದಿ ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಪ್ರಕರಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

    ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಆಘಾತಕಾರಿಯಾಗಿದೆ. ನಾನು ಕುಟುಂಬಸ್ಥರ ದುಃಖದಲ್ಲಿ ಭಾಗಿಯಾಗಿದ್ದೇನೆ. ಘಟನೆ ವೇಳೆ ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ಸದ್ಯ ಅನಾಹುತದಲ್ಲಿ ಗಾಯಗೊಂಡವರಿಗೆ ಅಧಿಕಾರಿಗಳು ಸಹಾಯ ಮಾಡುವಲ್ಲಿ ಕಾರ್ಯ ನಿರತರಾಗಿದ್ದಾರೆ ಎಂದು ಮೋದಿ ಸಂತಾಪ ಸೂಚಿಸಿದ್ದಾರೆ.

    ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪಿಎಮ್‍ಎನ್‍ಆರ್‍ಎಫ್ ವತಿಯಿಂದ 2 ಲಕ್ಷ ರೂ. ಮತ್ತು ಗಂಭೀರವಗಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ.

    ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ರಾಸಾಯನಿಕಗಳನ್ನು ಬೆರೆಸುವಾಗ ಉಂಟಾದ ಘರ್ಷಣೆಯಿಂದ ಅವಘಡ ಸಂಭವಿಸಿದೆ. ಬೆಂಕಿ ನಾಂದಿಸಲು ವಿವಿಧ ಸ್ಥಳಗಳಿಂದ ಹತ್ತು ಅಗ್ನಿ ಶಾಮಕ ದಳವನ್ನು ಸ್ಥಳಕ್ಕೆ ಧಾವಿಸಿತ್ತು. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಮೃತಪಟ್ಟ ಕುಟುಂಬಸ್ಥರಿಗೆ 3 ಲಕ್ಷ ರೂ.ವನ್ನು ಮತ್ತು ಘಟನೆಯಲ್ಲಿ ಗಾಯಗೊಂಡವರಿಗೆ 1 ಲಕ್ಷರೂ ಪರಿಹಾರ ಘೋಷಿಸಿದ್ದಾರೆ.

  • ದೆಹಲಿಯ ಪಟಾಕಿ ಗೋದಾಮಿನಲ್ಲಿ ಬೆಂಕಿ- 17 ಮಂದಿ ಸಾವು, ಕಟ್ಟಡದಿಂದ ಜಿಗಿದು ಇಬ್ಬರು ಪಾರು

    ದೆಹಲಿಯ ಪಟಾಕಿ ಗೋದಾಮಿನಲ್ಲಿ ಬೆಂಕಿ- 17 ಮಂದಿ ಸಾವು, ಕಟ್ಟಡದಿಂದ ಜಿಗಿದು ಇಬ್ಬರು ಪಾರು

    ನವದೆಹಲಿ: ಇಲ್ಲಿನ ಭಾವನ ಕೈಗಾರಿಕ ಪ್ರದೇಶದ ಪಟಾಕಿ ಗೋದಾಮಿಲ್ಲಿ ನಡೆದ ಬೆಂಕಿ ಅವಘಡದಲ್ಲಿ 10 ಮಹಿಳೆಯರು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದಾರೆ.

    ಶನಿವಾರ ಸಂಜೆ 6.20ರ ವೇಳೆಗೆ ದುರಂತ ಸಂಭವಿಸಿದ್ದು, ಸ್ಥಳಕ್ಕೆ 15ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಗಿಳಿಯಿತು. ಸಂಪೂರ್ಣವಾಗಿ ಬೆಂಕಿಯನ್ನ ಆರಿಸಿಸಲು 3 ಗಂಟೆಗಳ ಸಮಯ ಹಿಡಿಯಿತು. ತಡರಾತ್ರಿವರೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿತ್ತು.

    ಮೊದಲನೇ ಮಹಡಿಯಲ್ಲಿ 13 ಮಂದಿ, ನೆಲ ಮಹಡಿಯಲ್ಲಿ 3 ಮಂದಿ, ಬೇಸ್‍ಮೆಂಟ್‍ನಲ್ಲಿ ಓರ್ವ ಅಗ್ನಿಗಾಹುತಿಯಾಗಿದ್ದಾರೆ ಅಂತಾ ಅಗ್ನಿಶಾಮಕ ದಳ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ. ಮೂರು ಅಂತಸ್ತಿನ ಕಟ್ಟಡದ ಟೆರೆಸ್‍ನಿಂದ ಜಿಗಿದು ಮಹಿಳೆ ಹಾಗೂ ಓರ್ವ ಪುರುಷ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಇಬ್ಬರಿಗೂ ಗಾಯಗಳಾಗಿವೆ.

    ಈ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದು ದುರಂತದಲ್ಲಿ ಸಾವು-ನೋವು ಹೆಚ್ಚಾಗಿದ್ದು ಬೇಸರ ಮೂಡಿಸಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ ಅಂತಾ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಮೃತರ ಕುಟಂಬಕ್ಕೆ 5 ಲಕ್ಷ, ಗಾಯಾಳುಗಳಿಗೆ 1 ಲಕ್ಷ ಪರಿಹಾರ ಘೋಷಿಸಿದ್ದಾರೆ.

    ಘಟನೆಯ ಹಿನ್ನೆಲೆಯಲ್ಲಿ ಪಟಾಕಿ ಫ್ಯಾಕ್ಟರಿಯ ಮಾಲೀಕ ಮನೋಜ್ ಜೈನ್‍ರನ್ನು ಪೊಲೀಸರು ಬಂಧಿಸಿದ್ದಾರೆ.