Tag: Firebrigade

  • ಬಸ್ಸುಗಳ ಮಧ್ಯೆ ಸಿಲುಕಿ ಅಟೋ ಅಪ್ಪಚ್ಚಿ – ಹೊರಬರಲಾಗದೆ ಚಾಲಕನ ಗೋಳಾಟ

    ಬಸ್ಸುಗಳ ಮಧ್ಯೆ ಸಿಲುಕಿ ಅಟೋ ಅಪ್ಪಚ್ಚಿ – ಹೊರಬರಲಾಗದೆ ಚಾಲಕನ ಗೋಳಾಟ

    ಧಾರವಾಡ: ಎರಡು ಬಸ್ ಮತ್ತು ಗೂಡ್ಸ್ ಆಟೋ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಆಟೋ ಚಾಲಕ ವಾಹನದಲ್ಲೇ ಸಿಲುಕಿ ಗೋಳಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಪಾಲಿಕೆ ಕಚೇರಿ ಎದುರಿನ ರಸ್ತೆಯಲ್ಲಿ ಎರಡು ಬಸ್‍ಗಳ ಮಧ್ಯೆಯಿಂದ ಹೋಗಲು ಹೋಗಿ ಗೂಡ್ಸ್ ಆಟೋ ಮಧ್ಯದಲ್ಲಿ ಸಿಲುಕಿ ಅಪಚ್ಚಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಗೂಡ್ಸ್ ಚಾಲಕ ಲೋಹಿತ ಲಕ್ಕುಂಡಿಮಠ (26) ಕುಳಿತಲ್ಲೇ ಸಿಲುಕಿಕೊಂಡು ಹೊರಬರಲಾಗದೆ ಗೋಳಾಡಿದ್ದಾನೆ.

    ಆಟೋ ಒಳಗೆ ಸಿಲುಕಿ ಹೊರಬರಲಾರದೇ ನೋವಿನಿಂದ ಗೋಳಾಡ್ತಾ ಇದ್ದಾಗ ಸ್ಥಳೀಯರೆಲ್ಲ ಸೇರಿ ಆತನನ್ನು ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ. ಆದರೆ ಕೊನೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಚಾಲಕ ಲೋಹಿತನನ್ನು ಸುರಕ್ಷಿತವಾಗಿ ಹೊರತೆಗೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ರಸ್ತೆಯಲ್ಲೇ ಘಟನೆ ನಡೆದಿದ್ದರಿಂದ ಹಾಗೂ ಇದನ್ನು ನೋಡಲು ಸಾಕಷ್ಟು ಜನ ಸೇರಿದ್ದರಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

  • ನಿರ್ಮಾಣ ಹಂತದ ಮೂರಂತಸ್ತಿನ ಕಟ್ಟಡ ಕುಸಿತ- ಅವಶೇಷಗಳಡಿ ಮೂವರು ಸಿಲುಕಿರುವ ಶಂಕೆ

    ನಿರ್ಮಾಣ ಹಂತದ ಮೂರಂತಸ್ತಿನ ಕಟ್ಟಡ ಕುಸಿತ- ಅವಶೇಷಗಳಡಿ ಮೂವರು ಸಿಲುಕಿರುವ ಶಂಕೆ

    ಬೆಂಗಳೂರು: ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ಅವಶೇಷಗಳಡಿ ಮೂವರು ಸಿಲುಕಿ ಹಾಕಿಕೊಂಡಿರುವ ಘಟನೆ ರಾಜಧಾನಿಯ ತ್ಯಾಗರಾಜನಗರದಲ್ಲಿ ನಡೆದಿದೆ.

    ತ್ಯಾಗರಾಜನಗರದಲ್ಲಿ ಇಂದು ಮಧ್ಯಾಹ್ನ 4.30ರ ವೇಳೆಗೆ ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮ ಕಟ್ಟಡದ ಅವಶೇಷಗಳಡಿ ಮೂವರು ಸಿಲುಕಿರುವ ಕುರಿತು ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಮುಂದಾಗಿದ್ದಾರೆ.

    ನಿರ್ಮಾಣ ಹಂತದ ಕಟ್ಟಡದಲ್ಲಿ ಸುಹೇಲ್ ಹಾಗೂ ಶಬ್ಬೀರ್ ಎಂಬ ವೆಲ್ಡೀಂಗ್ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಟ್ಟಡದ ಒಳಗೆ ಸುಹೇಲ್ ಕೆಲಸ ಮಾಡುತ್ತಿದ್ದರೇ, ಕಟ್ಟಡದ ಹೊರಗೆ ಶಬ್ಬೀರ್ ಕೆಲಸ ಮಾಡುತ್ತಿದ್ದರು. ಕಟ್ಟಡ ಏಕಾಏಕಿ ನೆಲಕ್ಕಪ್ಪಳಿಸುತ್ತಿದ್ದಂತೆ ಶಬ್ಬೀರ್ ಓಡಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಆದರೆ ಕಟ್ಟಡದಲ್ಲಿದ್ದ ಸುಹೇಲ್ ಏನಾಗಿದ್ದರೆಂಬ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

    ನಿರ್ಮಾಣ ಹಂತದ ಕಟ್ಟಡ ಬಿಲ್ಡ್ ಬೆಂಗಳೂರು ಇನ್ಫ್ರ ಪ್ರಾಜೆಕ್ಟ್ ಎಂಬವರಿಗೆ ಸೇರಿದ್ದಾಗಿದೆ. ಕಟ್ಟಡದ ಪಕ್ಕದಲ್ಲೇ ಖಾಲಿ ಸೈಟಿನಲ್ಲಿ ನಡೆಯುತ್ತಿದ್ದ ಕಾಮಗಾರಿಯಿಂದ ಕಟ್ಟಡ ಕುಸಿದು ಬಿದ್ದಿದೆ. ಪಕ್ಕದ ಖಾಲಿ ಸೈಟಿನವರು ಕಟ್ಟಡ ನಿರ್ಮಾಣಕ್ಕಾಗಿ ತುಂಬಾ ಆಳವಾಗಿ ಪಾಯ ತೆಗೆದಿದ್ದರು. ಆಳವಾಗಿ ಪಾಯ ತೆಗೆದಿದ್ದರಿಂದ ಪಕ್ಕದಲ್ಲಿನ ಕಟ್ಟಡ ಉರುಳಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಾಕೆಟ್ ಪಟಾಕಿಯಿಂದ ಫರ್ನೀಚರ್ ಗೋದಾಮು ಭಸ್ಮವಾಯ್ತು!

    ರಾಕೆಟ್ ಪಟಾಕಿಯಿಂದ ಫರ್ನೀಚರ್ ಗೋದಾಮು ಭಸ್ಮವಾಯ್ತು!

    ಬೆಂಗಳೂರು: ಪಟಾಕಿಯೊಂದು ಸಿಡಿದ ಪರಿಣಾಮ ಫರ್ನೀಚರ್ ತುಂಬಿದ್ದ ಗೋದಾಮಿಗೆ ಬೆಂಕಿ ತಗುಲಿ, ಸಂಪೂರ್ಣ ಕಟ್ಟಡ ಹೊತ್ತಿ ಉರಿದ ಘಟನೆ ಆನೇಕಲ್ ತಾಲೂಕಿನ ಚಂದಾಪುರದ ಬನಹಳ್ಳಿಯಲ್ಲಿ ನಡೆದಿದೆ.

    ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಸ್ಥಳೀಯರು ಹಚ್ಚಿದ್ದ ಪಟಾಕಿಯೊಂದು, ಫರ್ನೀಚರ್ ತುಂಬಿದ್ದ ಗೋದಾಮಿಗೆ ತಗುಲಿದೆ. ಪರಿಣಾಮ ಸಂಪೂರ್ಣ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಕಟ್ಟಡದಲ್ಲಿ ಮರದ ವಸ್ತುಗಳೇ ಹೆಚ್ಚಾಗಿ ಸಂಗ್ರಹಿಸಿದ್ದರಿಂದ ಅಗ್ನಿಯ ಕೆನ್ನಾಲಿಗೆ ತೀವ್ರತೆಯನ್ನು ಪಡೆದುಕೊಂಡಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ 2 ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ ರಾಕೆಟ್ ಪಟಾಕಿಯೊಂದು, ಗೋದಾಮಿನ ಮೇಲೆ ಸಂಗ್ರಹಿಸಿಟ್ಟಿದ್ದ ಸ್ಪಾಂಜ್‍ಗೆ ತಗುಲಿದ್ದರಿಂದ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ.

    ಫರ್ನೀಚರ್ ಗೋದಾಮು ಕೇರಳ ಮೂಲದ ಶಾಜಿ ಎಂಬವರಿಗೆ ಸೇರಿದ್ದಾಗಿದೆ. ಘಟನೆ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾರ್ಬಲ್ ಅಂಗಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಮಾರ್ಬಲ್ ಅಂಗಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಮಾರ್ಬಲ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದೆ.

    ಮಾರ್ಬಲ್ ಅಂಗಡಿ ರಾಜಸ್ಥಾನ ಮೂಲದ ಪುರುಷೋತ್ತಮ್ ಎಂಬವರಿಗೆ ಸೇರಿದ ಮಳಿಗೆಯಾಗಿದ್ದು, ಆಕಸ್ಮಿಕವಾಗಿ ಸಂಭವಿಸಿದ ಈ ಅಗ್ನಿ ಅವಘಡದಿಂದಾಗಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ 3 ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಕುರಿತು ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೈಸೂರಿನ ಮಿನಿ ವಿಧಾನಸೌಧದಲ್ಲಿ ಬೆಂಕಿ ಅವಘಡ- ಪ್ರಾಣಾಪಾಯದಿಂದ ಪಾರು

    ಮೈಸೂರಿನ ಮಿನಿ ವಿಧಾನಸೌಧದಲ್ಲಿ ಬೆಂಕಿ ಅವಘಡ- ಪ್ರಾಣಾಪಾಯದಿಂದ ಪಾರು

    ಮೈಸೂರು: ಜೀಪ್ ನ ಹಳೆಯ ಟೈರ್ ಗಳು ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿರುವ ಘಟನೆ ಜಿಲ್ಲೆಯ ಟಿ. ನರಸೀಪುರದ ಮಿನಿ ವಿಧಾನಸೌಧದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಮಿನಿ ವಿಧಾನಸೌಧದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಈ ಘಟನೆ ಸಂಭವಿಸಿದ್ದು, ವಾಹನಗಳ ಟೈರುಗಳು ಹಳೆಯದಾದ ಕಾರಣ ತಹಶೀಲ್ದಾರರ ಹಳೆಯ ಜೀಪು ಹಾಗೂ ಮೂರು ಬೈಕ್‍ಗಳು ಭಸ್ಮವಾಗಿದೆ.

    ಬೆಂಕಿ ಕಾಣಿಸಿಕೊಂಡ ಪರಿಣಾಮ ಯಾರಾದರೂ ಒಳಗೆ ಸಿಲುಕಿ ಕೊಂಡಿರಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ ಅವಘಡ ಸಂಭವಿಸಿದ ಕೂಡಲೇ ಎಲ್ಲರೂ ಹೊರಬಂದಿದ್ದಾರೆ. ಜೀಪ್ ನ ಟೈರ್ ಸ್ಫೋಟಗೊಳ್ಳುತ್ತಿದ್ದಂತೆ ಬೆಂಕಿ ಕಾಣಿಕೊಂಡಿದ್ದು, ಪಕ್ಕದಲ್ಲಿ ಪಾರ್ಕಿಂಗ್ ಮಾಡಿದ್ದ ಮೂರು ಬೈಕ್ ಗಳು ಕೂಡ ಬೆಂಕಿಗೆ ಆಹುತಿಯಾಗಿವೆ.

    ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

  • ಮಂಡ್ಯ: ತೆಂಗಿನಕಾಯಿ ನಾರು ಹೊತ್ತೊಯ್ತಿದ್ದ ತಮಿಳುನಾಡು ಲಾರಿಯಲ್ಲಿ ಬೆಂಕಿ- ಗ್ರಾಮಸ್ಥರ ನೆರವಿನಿಂದ ತಪ್ಪಿದ ದುರಂತ

    ಮಂಡ್ಯ: ತೆಂಗಿನಕಾಯಿ ನಾರು ಹೊತ್ತೊಯ್ತಿದ್ದ ತಮಿಳುನಾಡು ಲಾರಿಯಲ್ಲಿ ಬೆಂಕಿ- ಗ್ರಾಮಸ್ಥರ ನೆರವಿನಿಂದ ತಪ್ಪಿದ ದುರಂತ

    ಮಂಡ್ಯ: ತೆಂಗಿನಕಾಯಿ ಸಿಪ್ಪೆಯ ನಾರನ್ನು ತುಂಬಿಕೊಂಡು ಹೋಗುತ್ತಿದ್ದ ತಮಿಳುನಾಡು ಮೂಲದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳೇಗಾಲ ಗ್ರಾಮದ ಬಳಿ ನಡೆದಿದೆ.

    ಟಿಎನ್34, ಎಸ್ 3818 ನಂಬರಿನ ಲಾರಿಯಲ್ಲಿ ತಮಿಳುನಾಡಿಗೆ ತೆಂಗಿನಕಾಯಿ ಸಿಪ್ಪೆಯ ನಾರನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ತೆಂಗಿನ ನಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಬೆಂಕಿಯ ಬಗ್ಗೆ ಚಾಲಕನ ಗಮನಕ್ಕೆ ತಂದಿದ್ದಾರೆ.

    ತಕ್ಷಣ ಲಾರಿ ನಿಲ್ಲಿಸಿದ ಚಾಲಕ ಸ್ಥಳೀಯರ ಸಹಾಯದಿಂದ ಅಗ್ನಿ ಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಕಾಲಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

    ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.