Tag: Fire tenders

  • ದೆಹಲಿಯಲ್ಲಿ ಕುಸಿದು ಬಿದ್ದ 4 ಅಂತಸ್ತಿನ ಕಟ್ಟಡ – 14 ತಿಂಗಳ ಮಗು ಸೇರಿ 8 ಮಂದಿ ರಕ್ಷಣೆ

    ದೆಹಲಿಯಲ್ಲಿ ಕುಸಿದು ಬಿದ್ದ 4 ಅಂತಸ್ತಿನ ಕಟ್ಟಡ – 14 ತಿಂಗಳ ಮಗು ಸೇರಿ 8 ಮಂದಿ ರಕ್ಷಣೆ

    – ಹಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆ

    ನವದೆಹಲಿ: ಈಶಾನ್ಯ ದೆಹಲಿಯ ಸೀಲಾಮ್‌ಪುರದಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು (Building Collapses) ಬಿದ್ದ ಅವಘಡ ಸಂಭವಿಸಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

    ದೆಹಲಿಯ ವೆಲ್ಕಮ್ ಪ್ರದೇಶದಲ್ಲಿರುವ (Delhi’s Welcome area) ಜನತಾ ಮಜ್ದೂರ್ ಕಾಲೋನಿಯಲ್ಲಿ ಶನಿವಾರ‌ ಜುಲೈ 12 ರಂದ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈಗಾಗಲೇ 14 ತಿಂಗಳ ಮಗು ಸೇರಿ 8 ಮಂದಿಯನ್ನ ರಕ್ಷಿಸಲಾಗಿದೆ. ಇನ್ನೂ 6ಕ್ಕೂ ಹೆಚ್ಚು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, 7 ಅಗ್ನಿಶಾಮಕ ದಳದವರಿಂದ (Fire Tenders) ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    ಬೆಳಗ್ಗೆ 7 ಗಂಟೆಗೆ ಕಟ್ಟಡ ಕುಸಿದ ಬಗ್ಗೆ ನಮಗೆ ಕರೆ ಬಂದಿದೆ. ಹಲವು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಏಳು ಅಗ್ನಿಶಾಮಕ ಟೆಂಡರ್‌ಗಳು ಸ್ಥಳದಲ್ಲಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸಿಲುಕಿರುವವರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಜೋಡಿಗೆ ನೇಗಿಲು ಕಟ್ಟಿ ಎತ್ತುಗಳಂತೆ ಉಳುಮೆ ಮಾಡಿಸಿ ಚಿತ್ರಹಿಂಸೆ

    ದೆಹಲಿಯಲ್ಲಿ ಶುಕ್ರವಾರವೂ ಕಟ್ಟಡ ಕುಸಿದಿತ್ತು. ವಾರದಲ್ಲಿ 2 ಭೂಕಂಪ ಸಂಭವಿಸಿತ್ತು. ಇದೀಗ ಶನಿವಾರವೂ ಕಟ್ಟಡ ಕುಸಿತ ಆಗಿದ್ದು, ಸಾಲು ಸಾಲು ಅನಾಹುತಗಳು ರಾಷ್ಟ್ರರಾಜಧಾನಿಯಲ್ಲಿ ಸಂಭವಿಸುತ್ತಿದ್ದು, ಜನರ ನಿದ್ದೆಗೆಡುವಂತೆ ಮಾಡಿದೆ. ಇದನ್ನೂ ಓದಿ: ಮೋದಿ ನಿವೃತ್ತಿಗೆ‌ ಮೋಹನ್ ಭಾಗವತ್ ಸೂಚನೆ? – ವಿಪಕ್ಷಗಳಿಂದ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ

  • New Delhi| ರಜೌರಿ ಗಾರ್ಡನ್ ರೆಸ್ಟೋರೆಂಟ್‌ನಲ್ಲಿ ಭಾರೀ ಅಗ್ನಿ ಅವಘಡ

    New Delhi| ರಜೌರಿ ಗಾರ್ಡನ್ ರೆಸ್ಟೋರೆಂಟ್‌ನಲ್ಲಿ ಭಾರೀ ಅಗ್ನಿ ಅವಘಡ

    – 10 ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ

    ನವದೆಹಲಿ: ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ (Rajouri Garden) ಪ್ರದೇಶದ ಜಂಗಲ್ ಜಾಂಬೋರಿ ರೆಸ್ಟೋರೆಂಟ್‌ನಲ್ಲಿ (Jungle Jamboree Restaurant) ಸೋಮವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ.

    ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ 10 ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಸೋಮವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ರಾಜೌರಿ ಗಾರ್ಡನ್ ಮೆಟ್ರೋ ನಿಲ್ದಾಣದ ಬಳಿ ಬೆಂಕಿ ಅವಘಡ ಸಂಭವಿಸಿರುವುದಾಗಿ ನಮಗೆ ಕರೆ ಬಂದಿದೆ. ಬೆಂಕಿಯನ್ನು ನಿಯಂತ್ರಿಸಲು 10 ಅಗ್ನಿಶಾಮಕ ಟೆಂಡರ್‌ಗಳನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗಾರ್ಗ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಪಕ್ಷದ ಚೌಕಟ್ಟಿನಲ್ಲಿ ಏನೇ ತೀರ್ಮಾನ ಆದರೂ ಪಾಲಿಸಲು ಬದ್ಧ – ರಾಜ್ಯಧ್ಯಕ್ಷ ಹುದ್ದೆ ಬಗ್ಗೆ ನಿಖಿಲ್ ಮಾತು

    ಅಗ್ನಿ ಅವಘಡಕ್ಕೆ ಕಾರಣವೇನು ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಘಟನೆಯಿಂದ ಅಕ್ಕಪಕ್ಕದ ಅಂಗಡಿಯವರಲ್ಲಿ ಆತಂಕ ಮನೆಮಾಡಿದೆ. ಘಟನೆ ನಡೆದ ವೇಳೆ ರೆಸ್ಟೋರೆಂಟ್‌ನಲ್ಲಿ ಸುಮಾರು 20 ಮಂದಿ ಇದ್ದರು. ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಎಲ್ಲರೂ ಹೋಟೆಲ್‌ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 9 ಕಂಪನಿಗಳಿಗೆ ನೀಡಿರೋ 5,150 ಎಕ್ರೆ ಗುತ್ತಿಗೆ ಅರಣ್ಯ ಭೂಮಿ ವಶಕ್ಕೆ ‌ಕ್ರಮ: ಈಶ್ವರ್ ಖಂಡ್ರೆ

  • ಕಾಳಿ ಪೂಜೆ ವೇಳೆ ಅಗ್ನಿ ಅವಘಡ – ಬೆಂಕಿ ಕೆನ್ನಾಲಿಗೆಗೆ ಮೂವರು ಮಕ್ಕಳು ಬಲಿ

    ಕಾಳಿ ಪೂಜೆ ವೇಳೆ ಅಗ್ನಿ ಅವಘಡ – ಬೆಂಕಿ ಕೆನ್ನಾಲಿಗೆಗೆ ಮೂವರು ಮಕ್ಕಳು ಬಲಿ

    ಕೋಲ್ಕತ್ತಾ (ಹೌರಾ): ಪಶ್ಚಿಮ ಬಂಗಾಳದ (West Bengal) ಹೌರಾದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಹೌರಾದ (Howrah) ಉಲುಬೇರಿಯಾ ಪಟ್ಟಣದಲ್ಲಿ ಕಾಳಿ ಪೂಜೆ ಸಂದರ್ಭದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 9, 14 ಮತ್ತು 2.5 ವರ್ಷದ ಮೂವರು ಮಕ್ಕಳು ಸಾವನ್ನಪ್ಪಿರುವುದಾಗಿ ಅಗ್ನಿಶಾಮಕ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಇದನ್ನೂ ಓದಿ: ದಶಕಗಳ ಬಳಿಕ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ಸ್ಪೇನ್‌ ತತ್ತರ – ಸಾವಿನ ಸಂಖ್ಯೆ 205ಕ್ಕೆ ಏರಿಕೆ

    ಬೆಂಕಿ ಅವಘಡ ಸಂಭವಿಸಿದ ಬಗ್ಗೆ ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಎರಡು ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಪ್ರಯತ್ನ ಮಾಡಿದವು. ಅಷ್ಟರಲ್ಲಾಗಲೇ ಬೆಂಕಿ ಕೆನ್ನಾಲಿಗೆಗೆ ಮೂವರು ಮಕ್ಕಳು ಜೀವ ತೆತ್ತಿದ್ದರು. ಬೆಂಕಿ ನಂದಿಸಿದ ಬಳಿಕ ಸಿಬ್ಬಂದಿ ಹೌರಾದ ವಿಭಾಗೀಯ ಅಗ್ನಿಶಾಮಕ ಅಧಿಕಾರಿ ರಂಜನ್ ಕುಮಾರ್ ಘೋಷ್ ಅವರು ಮೂರು ಮಕ್ಕಳ ಸುಟ್ಟ ದೇಹಗಳನ್ನು ಹೊರಕ್ಕೆ ತಂದರು. ಸದ್ಯ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

    ಅಗ್ನಿಶಾಮಕ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ:
    ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ ಹೊರತಾಗಿಯೂ ಆ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಬಗ್ಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದವರು ತಮ್ಮ ಕೆಲಸವನ್ನ ಪರಿಣಾಮಕಾರಿಯಾಗಿ ಮಾಡದೇ ಇದ್ದಿದ್ದರೆ ಘಟನೆಯಲ್ಲಿ ಹೆಚ್ಚಿನ ಮನೆಗಳು ಸುಟ್ಟುಹೋಗುವ ಸಾಧ್ಯತೆಯಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್

  • ವಾಯುಸೇನೆ ಕಚೇರಿ ಇರೋ ದೆಹಲಿಯ ಸಿಜಿಒ ಕಾಂಪ್ಲೆಕ್ಸ್‌ನಲ್ಲಿ  ಅಗ್ನಿ ಅವಘಡ

    ವಾಯುಸೇನೆ ಕಚೇರಿ ಇರೋ ದೆಹಲಿಯ ಸಿಜಿಒ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ಅವಘಡ

    ನವದೆಹಲಿ: ವಾಯುಸೇನೆ ಕಚೇರಿ ಇರುವ ಸದೆಹಲಿಯ ಸಿಜಿಒ ಕಾಂಪ್ಲೆಕ್ಸ್‌ನ ಪಂಡಿತ್ ದೀನದಯಾಳ್ ಅಂತ್ಯೋದಯ ಭವನದ ಐದನೇ ಅಂತಸ್ತಿನಲ್ಲಿ ಇಂದು ಬೆಳಗ್ಗೆ ಸುಮಾರು 8.30ಕ್ಕೆ ಅಗ್ನಿ ಅವಘಡ ಸಂಭವಿಸಿದೆ.

    ಕಾಂಪ್ಲೆಕ್ಸ್‌ನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಸ್ಥಳೀಯರು ಬೆಳಗ್ಗೆ ಸುಮಾರು 8.34ಕ್ಕೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸುಮಾರು 24 ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.

    ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್‌ನ ಅಧಿಕಾರಿಯೊಬ್ಬರು ಅಗ್ನಿ ಅವಘಡದಲ್ಲಿ ಸಿಲುಕಿ ಪ್ರಜ್ಞೆ ಕಳೆದುಕೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಕೇಂದ್ರದ ಮಹತ್ವ ಇಲಾಖೆಗಳು ಇಲ್ಲಿ ಕೆಲಸ ಮಾಡುತ್ತಿವೆ. ಪರಿಸರ ಸಚಿವಾಲಯ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯಗಳು ಇದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

    ಈ ಕಟ್ಟಡವನ್ನು ಮೊದಲು ಪರ್ಯಾವರಣ್ ಭವನ್ ಎಂದು ಕರೆಯುತ್ತಿದ್ದರು. ಶಾರ್ಟ್ ಸರ್ಕ್ಯೂಟ್‍ನಿಂದ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv