Tag: Fire Station

  • ಕಟ್ಟಿಗೆ ಸಾಮಿಲ್‍ಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ಮೌಲ್ಯದ ಕಟ್ಟಿಗೆ ಪರಿಕರಗಳು ಭಸ್ಮ

    ಕಟ್ಟಿಗೆ ಸಾಮಿಲ್‍ಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ಮೌಲ್ಯದ ಕಟ್ಟಿಗೆ ಪರಿಕರಗಳು ಭಸ್ಮ

    ಬಳ್ಳಾರಿ: ಕಟ್ಟಿಗೆ ಸಾಮಿಲ್‍ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಪರಿಕರಗಳು ಸುಟ್ಟು ಭಸ್ಮವಾಗಿರುವ ಘಟನೆ ಬಳ್ಳಾರಿಯ ಮಿಲ್ಲರ್ ಪೇಟೆ ವ್ಯಾಪ್ತಿಯ ಕಣೇಕಲ್ ಬಸ್ ನಿಲ್ದಾಣದ ಬಳಿಯಿರುವ ಕಟ್ಟಿಗೆ ಸಾಮಿಲ್‍ವೊಂದರಲ್ಲಿ ನಡೆದಿದೆ.

    ಕಟ್ಟಿಗೆ ಸಾಮಿಲ್‍ಗೆ ಆಕಸ್ಮಿಕ ಬೆಂಕಿ ತಗುಲಿದೆ. ಈ ವೇಳೆ ಬೆಂಕಿಯ ಕೆನ್ನಾಲಿಗೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಟ್ಟಿಗೆ ಪರಿಕರಗಳು ಸುಟ್ಟು ಭಸ್ಮವಾಗಿವೆ. ಘಟನೆಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.

    ಕಟ್ಟಿಗೆ ಸಾಮಿಲ್‍ಗೆ ತಗುಲಿದ ಬೆಂಕಿ ಪಕ್ಕದ ಜೀನ್ಸ್ ಗಾಮೆರ್ಂಟ್ಸ್ ಗೋದಾಮುಗೆ ವ್ಯಾಪಿಸಿ, ಜೀನ್ಸ್ ಗೋದಾಮಿನಲ್ಲಿದ್ದ ಜೀನ್ಸ್ ಬಟ್ಟಗಳ ಸಹ ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿ ಬಸವರಾಜ ನೇತೃತ್ವದಲ್ಲಿ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ.

  • ಪಟಾಕಿ ಲಾರಿ ಅಪಘಾತ – ತಪ್ಪಿತು ಭಾರೀ ಅನಾಹುತ

    ಪಟಾಕಿ ಲಾರಿ ಅಪಘಾತ – ತಪ್ಪಿತು ಭಾರೀ ಅನಾಹುತ

    ಧಾರವಾಡ: ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ, ಲಾರಿಯಿಂದ ಹೊರಬಿದ್ದ ಪಟಾಕಿ ಬಾಕ್ಸ್ ಕೆಲಹೊತ್ತು ಜನರಲ್ಲಿ ಆತಂಕ ಸೃಷ್ಟಿಸಿದ್ದ ಘಟನೆ ಧಾರವಾಡ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

    ಧಾರವಾಡ ಬೈಪಾಸ್‍ನ ಇಟ್ಟಿಗಟ್ಟಿ ಬಳಿ 2 ಲಾರಿಗಳ ನಡುವೆ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಪಟಾಕಿ ಹಾರದಂತೆ ಎಚ್ಚರಿಕೆಯಿಂದ ನೋಡಿಕೊಂಡಿದ್ದಾರೆ. ಶಿವಕಾಶಿಯಿಂದ ಮುಂಬೈಗೆ ಹೊರಟಿದ್ದ ಈ ಪಟಾಕಿ ಲಾರಿ, ಅಗ್ನಿ ಅವಘಡ ತಡೆ ಸಲಕರಣೆಯಿಲ್ಲದೇ ಹೋಗುತಿತ್ತು. ಅಗ್ನಿ ಅವಘಡ ನಿಯಮಗಳನ್ನು ಉಲ್ಲಂಘಿಸಿಯೇ ಪಟಾಕಿ ಸಾಗಾಟ ಮಾಡಲಾಗುತಿತ್ತು.

    ಲಾರಿಗಳ ಡಿಕ್ಕಿ ರಭಸಕ್ಕೆ ಪಟಾಕಿಗೆ ಬೆಂಕಿ ಹೊತ್ತಿಕೊಂಡಿದ್ದರೆ ಭಾರೀ ಅನಾಹುತ ಸಂಭವಿಸಲಿತ್ತು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಹಟ್ಟೇಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟಾಕಿ ಹಾರುವ ಸಂಭವ ಇದ್ದ ಕಾರಣ ಪಟಾಕಿ ಇದ್ದ ಲಾರಿಯನ್ನು ಕೆರೆ ಪಕ್ಕದಲ್ಲೇ ನಿಲ್ಲಿಸಿ ಪರಿಶೀಲನೆ ನಡೆಸಲಾಯಿತು.

  • ಕಟ್ಟಡದಲ್ಲಿ ಏಕಾಏಕಿ ಬೆಂಕಿ- ಕಿವುಡ ಕಾರ್ಮಿಕ ಹೊರಗೆ ಬರಲಾಗದೆ ಸಜೀವ ದಹನ

    ಕಟ್ಟಡದಲ್ಲಿ ಏಕಾಏಕಿ ಬೆಂಕಿ- ಕಿವುಡ ಕಾರ್ಮಿಕ ಹೊರಗೆ ಬರಲಾಗದೆ ಸಜೀವ ದಹನ

    ಮುಂಬೈ: ಕಾರ್ಮಿಕರು ತಂಗಿದ್ದ ಕಟ್ಟಡಕ್ಕೆ ಬೆಂಕಿ ತಗುಲಿದ್ದು, ಈ ವೇಳೆ ಕಿವುಡ ಕಾರ್ಮಿಕನೊಬ್ಬ ಹೊರಗೆ ಬರಲಾಗದೆ ಸಜೀವ ದಹನವಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಮೃತನನ್ನು 25 ವರ್ಷದವನೆಂದು ಗುರುತಿಸಲಾಗಿದೆ. ಈತನಿಗೆ ಕಿವುಡುತನವಿತ್ತು. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ಹೊರಗೆ ಬರಲಾಗದೆ ಸಾವನ್ನಪ್ಪಿದ್ದಾನೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾನೆ.

    ನಿನ್ನೆ ಬೆಳಗ್ಗೆ 6. 30 ರ ಸುಮಾರಿಗೆ ಕಾರ್ಮಿಕರು ವಾಸವಾಗಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅನಾಹುತದಿಂದಾಗಿ 120 ಮನೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಮತ್ತು ಒರ್ವ ಕಾರ್ಮಿಕ ಸುಟ್ಟು ಸಜೀವ ದಹನವಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಗ್ನಿಶಾಮಕದಳ ಸಿಬ್ಬಂದಿ ತಿಳಿಸಿದ್ದಾರೆ.

    ಅಡುಗೆ ಮಾಡುವ ಸಮಯದಲ್ಲಿ ಅನಿಲ ಸೋರಿಕೆಯಾಗಿದೆ. ಆಗ ಬೇರೆ ಕೋಣೆಗಳಿಗೂ ಬೆಂಕಿ ವ್ಯಾಪಿಸಿದೆ ಎಂದು ತಿಳಿದು ಬಂದಿದೆ. ಬೆಂಕಿನಂದಿಸಲು ಅಗ್ನಿಶಾಮಕದಳ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.