ಅಮರಾವತಿ: ಪಟಾಕಿ ಕಾರ್ಖಾನೆಯಲ್ಲಿ (Cracker Factory) ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮಹಿಳೆಯರು ಸೇರಿ 8 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ (Andhra Pradesh) ಅನಕಪಲ್ಲಿಯಲ್ಲಿ ನಡೆದಿದೆ.
ಅವಘಡದಲ್ಲಿ 8 ಜನರು ಸಾವನ್ನಪ್ಪಿದ್ದು, 7 ಜನರು ಗಾಯಗೊಂಡಿದ್ದಾರೆ. ಬೆಂಕಿ ಅವಘಡದ ಕುರಿತು ಆಂಧ್ರ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು (Chandrababu Naidu) ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನ ಸುಮಿ ಮೇಲೆ ರಷ್ಯಾ ಕ್ಷಿಪಣಿ ದಾಳಿ – 21 ಮಂದಿ ಸಾವು
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಂಜಿ: ಜಾರ್ಖಂಡ್‌ನ (Jharkhand) ಗರ್ವಾದಲ್ಲಿನ (Garhwa) ಪಟಾಕಿ ಅಂಗಡಿಯಲ್ಲಿ ಸೋಮವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಮಕ್ಕಳು ಸೇರಿ ಐವರು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ರಂಕಾ ಎಸ್‌ಡಿಪಿಒ ರೋಹಿತ್ ರಂಜನ್ ಸಿಂಗ್ ಮಾತನಾಡಿ, ಮಧ್ಯಾಹ್ನ 12.30ರ ಸುಮಾರಿಗೆ ಅಂಗಡಿಯಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಐವರು ಮೃತಪಟ್ಟಿದ್ದಾರೆ. ಕೂಡಲೇ ಗಾಯಾಳುಗಳನ್ನು ಛತ್ತೀಸ್‌ಗಢದ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸತತ 3 ಸಿನಿಮಾ, 500 ಕೋಟಿ ಕಲೆಕ್ಷನ್: ಯಾರು ಮಾಡಿರದ ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ
ಮುಖ್ಯಮಂತ್ರಿ ಹೇಮಂತ್ ಸೊರೆನ್ ಘಟನೆಯ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ. ಗರ್ವಾ ಜಿಲ್ಲೆಯ ರಾಂಕಾ ಬ್ಲಾಕ್‌ನಲ್ಲಿರುವ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಐದು ಜನರು ಸಾವನ್ನಪ್ಪಿದ ದುಃಖಕರ ಸುದ್ದಿ ತಲುಪಿದೆ. `ಮರಾಂಗ್ ಬುರು’ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಸ್ಟಾರ್ ಹೋಟೆಲ್ ಮಾಲೀಕನ ಮೊಮ್ಮಗ ಅರೆಸ್ಟ್
ಮುಂಬೈ: ಸ್ಟೀಲ್ ಕಂಪನಿಯೊಂದರಲ್ಲಿ (Steel Company) ಬೆಂಕಿ ಅವಘಡ ಸಂಭವಿಸಿದ ಪರಿಣಾಮ 16 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಮಹಾರಾಷ್ಟ್ರದ (Maharashtra) ವಾರ್ಧಾ (Wardha) ಜಿಲ್ಲೆಯಲ್ಲಿ ನಡೆದಿದೆ.
ವಾರ್ಧಾ ಜಿಲ್ಲೆಯ ಭುಗಾಂವ್ ಸ್ಟೀಲ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 16 ಕಾರ್ಮಿಕರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಾರ್ಧಾ ಜಿಲ್ಲಾಧಿಕಾರಿ ರಾಹುಲ್ ಕಾರ್ಡಿಲೆ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ದೆಹಲಿ, ಮುಂಬೈ ಮೂಲದ ಕಂಪನಿಗಳ ಮೇಲೆ ಐಟಿ ದಾಳಿ
ಬೆಂಗಳೂರು: ಪರ್ಫ್ಯೂಮ್ ಫಿಲ್ಲಿಂಗ್ ವೇಳೆ ಬ್ಲಾಸ್ಟ್‌ಗೊಂಡು ಪರ್ಫ್ಯೂಮ್ ಗೋಡೌನ್‌ಗೆ (Perfume Godown) ಬೆಂಕಿ ತಗುಲಿದ ಪರಿಣಾಮ ಮೂವರು ಸಜೀವ ದಹನವಾಗಿದ್ದು, 5 ಮಂದಿ ಗಾಯಗೊಂಡ ಘಟನೆ ಕುಂಬಳಗೋಡು (Kumbalagodu) ಠಾಣಾ ವ್ಯಾಪ್ತಿಯ ರಾಮಸಂದ್ರದಲ್ಲಿ (Ramasandra) ನಡೆದಿದೆ.
ಕೆಂಗೇರಿಯ (Kengeri) ರಾಮಸಂದ್ರದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಿಂದ ಅಕ್ಕಪಕ್ಕದ ಮನೆಗಳಿಗೂ ಹಾನಿ ಉಂಟಾಗಿದ್ದು, ಒಂದು ಬೈಕ್ ಬೆಂಕಿಗಾಹುತಿಯಾಗಿದೆ. ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಜೀವ ದಹನವಾಗಿದ್ದಾರೆ. ಇನ್ನು ಘಟನೆಯಿಂದ 5 ಮಂದಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಯುಪಿ ಟೈಂ ಬಾಂಬ್ ಪ್ರಕರಣ – ಮುಂಗಡವಾಗಿ 10 ಸಾವಿರ ನೀಡಿದ್ದ ಮಹಿಳೆ ಅರೆಸ್ಟ್
ಮನೆಯೊಂದರಲ್ಲಿ ಫರ್ಪೂಮ್ ಕೆಮಿಕಲ್ ಫಿಲ್ಲಿಂಗ್ ಮಾಡುತ್ತಿದ್ದ ಸಂದರ್ಭ ಸ್ಫೋಟಗೊಂಡು ಅವಘಡ (Fire Accident) ಸಂಭವಿಸಿದೆ. ಘಟನೆ ನಡೆಯುವ ವೇಳೆ ಒಟ್ಟು 8 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಫಿಲ್ಲಿಂಗ್ ವೇಳೆ ಸ್ಫೋಟಗೊಂಡಿದ್ದು, ಇಡೀ ಮನೆಯನ್ನು ಆವರಿಸಿದೆ. ಘಟನೆಯಲ್ಲಿ ಮೂವರು ಸಜೀವ ದಹನ ಆಗಿದ್ದು, ಉಳಿದ ಐವರು ಗೋಡೌನ್‌ನಿಂದ ಹೊರಗಡೆ ಓಡಿಬಂದಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಾಲೀಕರು ಯಾರು ಅನ್ನೋದರ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಕುಂಬಳಗೋಡು ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆರ್‌ಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆತ ಪ್ರಕರಣ- 59 ಮಂದಿ ವಿರುದ್ಧ ಎಫ್‍ಐಆರ್
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆದಿದೆ. ಕ್ಷಣಕ್ಷಣಕ್ಕೂ ಬೆಂಕಿ ಹೆಚ್ಚುತ್ತಿದ್ದು, ಅಕ್ಕಪಕ್ಕದ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಸುಗಂಧ ದ್ರವ್ಯ ತಯಾರಿಸುವ ಕೆಮಿಕಲ್‌ನಿಂದ ಸ್ಫೋಟಗೊಂಡು ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಮಾವೋವಾದಿಗಳ ಅಟ್ಟಹಾಸ – ಕೊಡಲಿಯಿಂದ ಕೊಚ್ಚಿ ಸಶಸ್ತ್ರ ಪಡೆ ಕಮಾಂಡರ್ ಹತ್ಯೆ
ಇದಕ್ಕೂ ಮೊದಲು ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್‌ನಿಂದಾಗಿ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿತ್ತು. ಈ ಕುರಿತು ಕೆಂಗೇರಿ ವಿಭಾಗ ಬೆಸ್ಕಾಂ ಎಇ ಪ್ರತಿಕ್ರಿಯಿಸಿದ್ದು, ಟ್ರಾನ್ಸ್‌ಫಾರ್ಮರ್‌ನಿಂದ ಬೆಂಕಿ ಸಂಭವಿಸಿಲ್ಲ. ಗೋಡೌನ್‌ನಲ್ಲೇ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಖಾಸಗಿ ಬಸ್, ಇನ್ನೋವಾ ಮುಖಾಮುಖಿ ಡಿಕ್ಕಿ – ಅತ್ತೆ, ಸೊಸೆ ಸ್ಥಳದಲ್ಲೇ ಸಾವು
ಗಾಂಧಿನಗರ: ಬುಧವಾರ ಸೂರತ್‌ನ (Surat) ಕೆಮಿಕಲ್ ಫ್ಯಾಕ್ಟರಿಯಲ್ಲಿ (Chemical Factory) ಸಂಭವಿಸಿದ ಅಗ್ನಿ ಅವಘಡದಲ್ಲಿ 24 ಕಾರ್ಮಿಕರು ಗಾಯಗೊಂಡಿದ್ದು, ಒಂದು ದಿನದ ನಂತರ ರಾಸಾಯನಿಕ ಸ್ಥಾವರದ ಆವರಣದಲ್ಲಿ ಕನಿಷ್ಠ ಏಳು ಸುಟ್ಟ ಶವಗಳು ಪತ್ತೆಯಾಗಿವೆ ಎಂದು ಸೂರತ್ ಪೊಲೀಸರು ತಿಳಿಸಿದ್ದಾರೆ.
ಸಚಿನ್ ಜಿಐಡಿಸಿ ಕೈಗಾರಿಕಾ ಪ್ರದೇಶದಲ್ಲಿ ನೆಲೆಗೊಂಡಿರುವ ಈಥರ್ ಇಂಡಸ್ಟ್ರೀಸ್‌ನಲ್ಲಿ ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಸೈಟ್‌ನಲ್ಲಿ ಸುಮಾರು ಏಳು ವ್ಯಕ್ತಿಗಳ ಅಸ್ಥಿಪಂಜರಗಳು ಮತ್ತು ಇತರ ಅವಶೇಷಗಳು ಕಂಡುಬಂದಿವೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಇದನ್ನೂ ಓದಿ: ಸೂರತ್‍ನ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ – 24 ಕಾರ್ಮಿಕರಿಗೆ ಗಾಯ
ಈ ಹಿಂದೆ ಏಳು ಮಂದಿ ಸ್ಥಳದಿಂದ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದರು. ಪೊಲೀಸರು ಮತ್ತು ಇತರ ರಕ್ಷಣಾ ಕಾರ್ಯಕರ್ತರು ಬುಧವಾರ ಒಳಗೆ ಸಿಲುಕಿದ್ದ 24 ವ್ಯಕ್ತಿಗಳನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಘಟನೆಯಲ್ಲಿ ಸುಟ್ಟ ಗಾಯಗಳಾಗಿರುವ ಕಾರ್ಮಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅಂತರ್ಜಾತಿ ಪ್ರೇಮ ವಿವಾಹವಾಗಿದ್ದಕ್ಕೆ ಯುವಕನ ಕಡೆಯವರ ಆಟೋಗೆ ಬೆಂಕಿ ಹಚ್ಚಿದ ಹುಡುಗಿ ಕಡೆಯವರು
ಘಟನೆಗೆ ಏನು ಕಾರಣ ಎಂಬುದನ್ನು ಕಂಡುಹಿಡಿಯುವ ಸಲುವಾಗಿ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಏಕಾಏಕಿ ಸಂಭವಿಸಿದ ಸಮಯದಲ್ಲಿ, 100 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಮಾರಾಟ ಪ್ರಕರಣ- ತರಕಾರಿ ಮಾರುತ್ತಲೇ ಡೀಲ್ ಮಾಡುತ್ತಿದ್ದ ಮಹಾಲಕ್ಷ್ಮಿ
ಸೂರತ್ ಮೂಲದ ಈಥರ್ ಇಂಡಸ್ಟ್ರೀಸ್ ಕೃಷಿ ರಾಸಾಯನಿಕ, ಔಷಧೀಯ ಮತ್ತು ತೈಲ ಮತ್ತು ಅನಿಲ ಉದ್ಯಮಗಳಿಗೆ ರಾಸಾಯನಿಕಗಳನ್ನು ಪೂರೈಸುತ್ತದೆ. ಪಶ್ಚಿಮ ಭಾರತದ ರಾಜ್ಯವಾದ ಗುಜರಾತ್‌ನಲ್ಲಿ ಈಥರ್ ಎರಡು ಕಾರ್ಖಾನೆಗಳನ್ನು ಹೊಂದಿದೆ. ಇದನ್ನೂ ಓದಿ: ಮದುವೆ ಒಪ್ಪಂದಕ್ಕೆ ಒಪ್ಪದ ಶಿಕ್ಷಕಿಯ ಅಪಹರಣ
ಬೆಂಗಳೂರು: ಇಲ್ಲಿನ ವೀರಭದ್ರನಗರದಲ್ಲಿ (Veerabhadra Nagar )ಬೆಂಕಿ ಕೆನ್ನಾಲಿಗೆಗೆ 19 ಬಸ್‌ಗಳು ಸುಟ್ಟು ಕರಕಲಾದ ಘಟನೆ (Bus Fire Incident) ನಡೆದಿದ್ದು, ಗಿರಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಬಳಿಕ ತನಿಖೆ ಆರಂಭಿಸಿರುವ ಪೊಲೀಸರಿಗೆ ಕಚೇರಿಯಲ್ಲಿದ್ದ ಲಕ್ಷ-ಲಕ್ಷ ಹಣವೂ ಸಹ ಬೆಂಕಿಗಾಹುತಿಯಾಗಿದೆ ಅನ್ನೋ ಮಾಹಿತಿಗೆ ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ.
ಸದ್ಯ ಎಫ್‌ಐಆರ್ ದಾಖಲಿಸಿರುವ ಪೊಲೀಸರು FSL, ಅಗ್ನಿಶಾಮಕ ಇಲಾಖೆ, RTO ಮೂರು ಇಲಾಖೆಗಳ ವರದಿಗಾಗಿ ಕಾಯುತ್ತಿದ್ದಾರೆ. ಮೂರು ಇಲಾಖೆಗಳ ವರದಿ ಕೈ ಸೇರಿದ ಬಳಿಕ ಅಧಿಕೃತ ತನಿಖೆ ಆರಂಭಿಸುವುದಾಗಿ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಪಾಕ್ ಕಳಪೆ ಪ್ರದರ್ಶನ – ಮೊದಲನೇಯ ದೊಡ್ಡ ವಿಕೆಟ್ ಪತನ
ಈ ನಡುವೆ ನಿನ್ನೆಯೇ ಲೊ ಬಿಪಿಯಿಂದ ಆಸ್ಪತ್ರೆ ಸೇರಿರುವ ಮಾಲೀಕ ಶ್ರೀನಿವಾಸ್ ಅವರನ್ನಯು ಡಿಸ್ಚಾರ್ಜ್ ಬಳಿಕ ನೋಟಿಸ್ ಕೊಟ್ಟು ಪೊಲೀಶರು ವಿಚಾರಣೆಗೆ ಕರೆತರಲಿದ್ದಾರೆ. ಈ ನಡುವೆ ಆಫೀಸ್ ನಲ್ಲಿ ಇಟ್ಟಿದ್ದ 8 ಲಕ್ಷ ರೂ. ಸಹ ಬೆಂಕಿಗಾಹುತಿ ಅನ್ನೊ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿರುವುದಾಗಿ ಅಧಿಕಾರಿ ಮೂಲಗಳು ತಿಳಿಸಿದ್ದಾರೆ. ಇದನ್ನೂ ಓದಿ: ನ್ಯಾನೋ ಕೇಸ್, ಮಮತಾಗೆ ತೀವ್ರ ಮುಖಭಂಗ – ಕೊನೆಗೂ ಗೆದ್ದ ಟಾಟಾ ಮೋಟಾರ್ಸ್
ಆಕಸ್ಮಿಕ ಬೆಂಕಿಯಿಂದ 19 ಖಾಸಗಿ ಬಸ್‌ಗಳು ಸುಟ್ಟು ಕರಕಲಾದ ಘಟನೆ ಬೆಂಗಳೂರಿನ ವೀರಭದ್ರನಗರದಲ್ಲಿ ನಡೆದಿದೆ. ಎಸ್‌ವಿ ಕೋಚ್ ವರ್ಕ್ಶಾಪ್ ಗ್ಯಾರೇಜ್‌ನಲ್ಲಿ ಈ ಅನಾಹುತ ಸಂಭವಿಸಿದೆ. ಬಸ್‌ನ ಟೈರ್, ಡೀಸೆಲ್ ಟ್ಯಾಂಕ್‌ಗಳು ಸ್ಫೋಟಗೊಂಡು ಒಂದರಿಂದ ಒಂದಕ್ಕೆ ಬೆಂಕಿ ವ್ಯಾಪಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 60ಕ್ಕೂ ಹೆಚ್ಚು ಅಗ್ನಿಶಾಮಕ ಪಡೆಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅವಘಡಕ್ಕೆ ಬ್ಯಾಟರಿಯಲ್ಲಿ ಕಾಣಿಸಿಕೊಂಡ ಬೆಂಕಿಯೇ ಕಾರಣ ಎನ್ನಲಾಗಿದೆ.
ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಘಟನಾ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸ್ಪಾರ್ಕ್ ಉಂಟಾಗುವ ಎಲ್ಲಾ ಸ್ಥಳಗಳಲ್ಲೂ ಅಗ್ನಿಶಾಮಕ ಇಲಾಖೆಯ ನಿಯಮಗಳ ಪಾಲನೆ ಆಗ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸುವಂತೆ ಡಿಸಿಎಂ ಸೂಚನೆ ನೀಡಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಅಗ್ನಿ ಅವಘಡವೊಂದು (Fire Incident) ಸಂಭವಿಸಿದ ಪರಿಣಾಮ 20ಕ್ಕೂ ಹೆಚ್ಚು ಬಸ್‌ಗಳು (Bus) ಸಂಪೂರ್ಣ ಭಸ್ಮವಾದ ಘಟನೆ ವೀರಭದ್ರ ನಗರದಲ್ಲಿ (Veerabhadra Nagar) ನಡೆದಿದೆ.
ನಿಂತಿದ್ದ ಬಸ್‌ಗಳಿಗೆ ಹಠಾತ್ ಬೆಂಕಿ ತಗುಲಿದ್ದು, ಘಟನಾ ಸ್ಥಳಕ್ಕೆ ಎರಡು ಅಗ್ನಿ ಶಾಮಕ ವಾಹನಗಳು ದೌಡಾಯಿಸಿವೆ. 2015ರಲ್ಲಿ ಅಗ್ನಿ ಅವಘಡ ಸಂಭವಿಸಿದ ಜಾಗದಲ್ಲೇ ಈ ಘಟನೆ ನಡೆದಿದೆ. ಬೆಂಕಿ ನಿಯಂತ್ರಣಕ್ಕೆ ಬಾರದ ಪರಿಣಾಮ ಬಸ್ ಟೈರ್‌ಗಳು ಹಾಗೂ ಡೀಸೆಲ್ ಟ್ಯಾಂಕ್‌ಗಳು ಸ್ಫೋಟಗೊಂಡಿವೆ. ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: Kerala Bomb Blast: ಅತ್ತೆ ಕುಳಿತಿದ್ದ ಜಾಗ ತಪ್ಪಿಸಿ ಬಾಂಬ್ ಇಟ್ಟಿದ್ದೆ: ಆರೋಪಿ ಬಾಯ್ಬಿಟ್ಟ ಸತ್ಯವೇನು?
ಎಸ್‌ವಿ ಕೋಚ್ ವರ್ಕ್ಸ್ ಗ್ಯಾರೇಜ್ ಅಲ್ಲಿ ಬೆಂಕಿ ತಗುಲಿದೆ. ಸದ್ಯಕ್ಕೆ 20ಕ್ಕೂ ಹೆಚ್ಚು ಬಸ್‌ಗಳು ಸುಟ್ಟು ಕರಕಲಾಗಿದ್ದು, ಯಾರೂ ಬೆಂಕಿಯಲ್ಲಿ ಸಿಲುಕಿಲ್ಲ. ಬಸ್‌ಗಳನ್ನು ರಿಪೇರಿ ಮಾಡುವ ಜಾಗದಲ್ಲಿ ಈ ಅನಾಹುತ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಗ್ಯಾರೇಜ್ ಸುಪರ್ ವೈಸರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲಾಂಗ್ ಬೀಸಿದ ರೌಡಿಶೀಟರ್ ಮಂಡಿ ಸೀಳಿದ ಖಾಕಿ
ಈ ಹಿಂದೆ 2015ರಲ್ಲಿ ಕಾವೇರಿ ಗಲಾಟೆ ಸಂದರ್ಭದಲ್ಲಿ ಇದೇ ಜಾಗದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. 2015ರಲ್ಲಿ ತಮಿಳುನಾಡಿನ (Tamil Nadu) ಬಸ್‌ಗಳೆಂದು 25 ಬಸ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಲಾಗಿತ್ತು. ಯುವತಿಯೊಬ್ಬಳು ಬಸ್‌ಗಳಿಗೆ ಬೆಂಕಿ ಹಚ್ಚಿದ್ದು, ಬಳಿಕ ಆಕೆಯನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಭತ್ತದ ಗದ್ದೆಗೆ ನೀರುಕಟ್ಟಲು ಹೋದಾಗ ಮಾರಕಾಸ್ತ್ರದಿಂದ ವ್ಯಕ್ತಿಯ ಕೊಲೆ
ವಾಷಿಂಗ್ಟನ್: ವಿವಾಹವಾಗಲು (Wedding) ಕೆಲವೇ ಗಂಟೆಗಳು ಬಾಕಿ ಇರುವಾಗ ಅಗ್ನಿ ಅವಘಡದಲ್ಲಿ (Fire Incident) ವಧು (Bride) ದುರಂತ ಅಂತ್ಯ ಕಂಡ ಘಟನೆ ಅಮೆರಿಕಾದ (America) ವಿಸ್ಕಾನ್ಸಿನ್‌ನಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಪೈಜ್ ರಡ್ಡಿ (19) ಮೃತಪಟ್ಟ ವಧು. ಮೇ 23ರಂದು ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ರೀಡ್ಸ್‌ಬರ್ಗ್ ಮನೆಯ ಎರಡನೇ ಮಹಡಿಯಲ್ಲಿ ಪೈಜ್ ರಡ್ಡಿ ನಿದ್ರಿಸುತ್ತಿದ್ದಳು. ಈ ವೇಳೆ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಬೆಂಕಿಯ ಹೊಗೆಯನ್ನು ಉಸಿರಾಡಿದ ವಧುವಿಗೆ ಮೆದುಳಿನ ರಕ್ತಸ್ರಾವವಾಗಿ (Brain Haemorrhage) ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಬೈಬಲ್ ಹೊಂದಿದ್ದಕ್ಕೆ 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ!
ವಧು ತಮ್ಮ ಭಾವೀ ಪತಿಯಾದ ಲೋಗನ್ ಮಿಚೆಲ್ – ಕಾರ್ಟರ್ ಅವರೊಂದಿಗೆ ಸೋಮವಾರ ಪ್ರತಿಜ್ಞಾ ವಿಧಿಗಳನ್ನು ವಿನಿಮಯ ಮಾಡಿಕೊಂಡಿದ್ದಳು. ಅಲ್ಲದೇ ಸೌಕ್ ಕೌಂಟಿ ಕೋರ್ಟ್‌ಹೌಸ್‌ನಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಣ್ಣ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ವಧು ಮತ್ತು ವರ ನೆಲೆಸಿದ್ದ ಮನೆ ವರನ ಅಜ್ಜಿಗೆ ಸೇರಿದ್ದು, ಘಟನೆ ನಡೆದ ಸಂದರ್ಭ ಹೊಗೆ ತುಂಬಿದ್ದರಿಂದ ವಧುವಿಗೆ ಹೊಗೆಯಿಂದ ಆಚೆಬರಲಾಗಲಿಲ್ಲ ಎಂದು ಅಗ್ನಿಶಾಮಕ (Fire Extinguisher) ವಿಭಾಗದ ಮುಖ್ಯಸ್ಥ ಕ್ರೇಗ್ ಡೌಗ್ಲಾಸ್ ತಿಳಿಸಿದ್ದಾರೆ. ಇದನ್ನೂ ಓದಿ: 72 ವರ್ಷದ ವೃದ್ಧನನ್ನು ಕೊಂದು ತಿಂದ 40 ಮೊಸಳೆಗಳು!
ಪ್ರಾಥಮಿಕ ತನಿಖೆಯು ಆಕೆ ಹೊಗೆ ಸೇವನೆ ಮಾಡಿದ್ದರಿಂದ ಸಾವನ್ನಪ್ಪಿದ್ದಾಳೆ ಎಂದು ತೋರಿಸುತ್ತದೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದ್ದು, ಯಾವುದೇ ಅನುಮಾನಾಸ್ಪದ ಘಟನೆಗಳು ನಡೆದಿಲ್ಲ ಎಂದು ಸೌಕ್ ಕೌಂಟಿಯ ಕರೋನರ್ ಕಚೇರಿಯು ಮಾಹಿತಿ ನೀಡಿದೆ. ಅಲ್ಲದೇ ಘಟನೆ ನಡೆದ ಸಂದರ್ಭ ಇನ್ನೂ ಮೂವರು ಮನೆಯಲ್ಲಿದ್ದು, ಅಗ್ನಿಶಾಮಕ ದಳ ಬರುವಷ್ಟರಲ್ಲಿ ಅವರು ಬೆಂಕಿಯಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಂಡ ಕಂಡಲ್ಲಿ ಉಗೀಬೇಡಿ – ಎಂಜಲು ರಸ ಮಾರಿಯೇ ತಿಂಗಳಿಗೆ 40 ಲಕ್ಷ ಸಂಪಾದಿಸ್ತಾಳೆ ಈ ಮಹಿಳೆ
ಪೈಜ್ ರಡ್ಡಿ ರೀಡ್ಸ್‌ಬರ್ಗ್ ಏರಿಯಾ ಹೈಸ್ಕೂಲ್‌ನಿಂದ ಜೂನ್ 2022ರಲ್ಲಿ ಪದವಿ ಪಡೆದಿದ್ದಳು. ಅಲ್ಲದೇ ಮ್ಯಾಡಿಸನ್ ಏರಿಯಾದ ಟೆಕ್ನಿಕಲ್ ಕಾಲೇಜಿನಲ್ಲಿ ವೆಟ್ ಟೆಕ್ ಕಾರ್ಯಕ್ರಮಕ್ಕೆ ಸೇರಲು ಯೋಚಿಸಿದ್ದಳು ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ. ಮುಂದಿನ ವಾರ ಆಕೆಯ ಅಂತ್ಯಕ್ರಿಯೆ ನಡೆಯಲಿದ್ದು, ಅಂತ್ಯಕ್ರಿಯೆ ಮತ್ತು ಆಕೆಯ ವೈದ್ಯಕೀಯ ಚಿಕಿತ್ಸೆಗಳ ವೆಚ್ಚವನ್ನು ಭರಿಸಲು ಆಕೆಯ ಕುಟುಂಬಸ್ಥರು ಗೋಫಂಡ್‌ಮೀ (GoFundMe) ಅನ್ನು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು
ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ ಒಡೆತನದ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡವಾಗಿದ್ದು, ಬೆಂಕಿ ತಗುಲಿದ್ದ 3 ಕಾರ್ಮಿಕರಲ್ಲಿ ಓರ್ವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ನಗರದ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿ ಇರುವ ಕಾರ್ಖಾನೆಯಲ್ಲಿ ನಡೆದಿದೆ.
ಅಶೋಕ ಚೌಹಾಣ್ (37) ಮೃತ ಕಾರ್ಮಿಕ. ಕಾರ್ಮಿಕರು ಬುಧವಾರ ಬೆಳಗ್ಗೆ ಅತಿಯಾದ ಚಳಿ ಹಿನ್ನೆಲೆ ಬ್ಯಾರಲ್‍ನಲ್ಲಿ ಬೆಂಕಿ ಹಾಕಿ ಕಾಯಿಸಿಕೊಳ್ಳುತ್ತಿದ್ದರು. ಬೆಂಕಿಯೂ ಹೆಚ್ಚು ಉರಿಯ ಬೇಕು ಅಂತ ಥಿನ್ನರ್ ಹಾಕಿದಾಗ ಒಮ್ಮೆಲೆ 3 ಕಾರ್ಮಿಕರಿಗೆ ಬೆಂಕಿ ತಗುಲಿದೆ. ನಂತರ ಓಡೋಡಿ ಬಂದು ನೀರಿನ ಪೈಪ್ ಕೆಳಗೆ ಕೂತು ಬೆಂಕಿ ನಂದಿಸಿಕೊಂಡಿದ್ದರು. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ
ಅದರಲ್ಲಿ ಅಶೋಕ ಎಂಬುವರಿಗೆ ಶೇ.80 ರಷ್ಟು ಬೆಂಕಿ ತಗುಲಿ ಗಾಯವಾಗಿತ್ತು. ಈ ಹಿನ್ನೆಲೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್.ಡಿಎಂ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ನಂತರ ಅಲ್ಲಿಂದ ಬೆಳಗಾವಿ ಕೆಎಲ್‍ಇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ನಿವಾಸಿಯಾದ ಮೃತ ಕಾರ್ಮಿಕನಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ. ಇದನ್ನೂ ಓದಿ: ಅನಿವಾರ್ಯತೆ ಬಂದ್ರೆ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ: ಕೈ ಹೈಕಮಾಂಡ್ ಸೂಚನೆ
ಇನ್ನುಳಿದ ಇಬ್ಬರು ಕಾರ್ಮಿಕರಾದ ಪ್ರಮೋದ ಹಾಗೂ ಮೆಹಬೂಬ್ ಎಂಬುವವರಿಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋಲ್ಕತ್ತ: ಗುರುವಾರ ಬೆಳಗ್ಗೆ ಕೋಲ್ಕತ್ತಾದ ಜವಾಹರ್ ಲಾಲ್ ನೆಹರೂ ರೋಡ್ ನಲ್ಲಿರೋ ಎಲ್‍ಐಸಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಇಂದು ಬೆಳಗ್ಗೆ ಸುಮಾರು 10:20ಕ್ಕೆ ಈ ಅವಘಡ ಸಂಭವಿಸಿದೆ. 16ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವೇಗವಾಗಿ 17ನೇ ಮಹಡಿಗೂ ಆವರಿಸಿದೆ. ಘಟನಾ ಸ್ಥಳಕ್ಕೆ ಹತ್ತು ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ. ಘಟನೆಯಲ್ಲಿ ಪ್ರಾಣಹಾನಿ ಆಗಿರೋ ಬಗ್ಗೆ ಈವರೆಗೆ ಯಾವುದೇ ವರದಿಯಾಗಿಲ್ಲ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ಲೋಬಲ್ ಮಾರ್ಕೆಟ್ ಕಚೇರಿಯ ಸರ್ವರ್ ರೂಮ್ ಕೂಡ ಇದೇ ಮಹಡಿಯಲ್ಲಿದೆ. ಆ ಮಹಡಿಯಲ್ಲಿ ಯಾರೂ ಸಿಲುಕಿರುವ ಬಗ್ಗೆ ಸುದ್ದಿ ಇಲ್ಲ ಎಂದು ಎಸ್‍ಬಿಐನ ಮುಖ್ಯ ವ್ಯವಸ್ಥಾಪಕರಾದ ಪಿ.ಪಿ ಸೇನ್ ಗುಪ್ತಾ ತಿಳಿಸಿದ್ದಾರೆ.
ಜೀವನ್ ಸುಧಾ ಕಟ್ಟಡದ 17ನೇ ಮಹಡಿಯಲ್ಲಿ ಅವರಿಸಿರೋ ಬೆಂಕಿಯನ್ನು ನಂದಿಸಲು ಹತ್ತು ಅಗ್ನಿಶಾಮಕ ವಾಹನಗಳನ್ನ ಬಳಸಿಕೊಳ್ಳಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ವೇಗವಾಗಿ ಬೇರೆ ಕಟ್ಟಡದ ಇತರೆ ಮಹಡಿಗಳಿಗೂ ಆವರಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
19 ಮಹಡಿಯ ಈ ಕಟ್ಟಡದಲ್ಲಿ ಎಸ್‍ಬಿಐನ ಕಚೇರಿ, ಎಲ್‍ಐಸಿ ಬ್ರಾಂಚ್ ಹಾಗೂ ಇತರೆ ಹಣಕಾಸು ಸಂಸ್ಥೆಗಳ ಕಚೇರಿಗಳು ಇವೆ.
#UPDATE Kolkata (West Bengal): Fire breaks out at LIC building on Jawahar Lal Nehru road. 10 fire tenders present at the spot. pic.twitter.com/arPiMJQYnv