Tag: fire extinguisher

  • ಕೆಲವೇ ಗಂಟೆಗಳಲ್ಲಿ ವಿವಾಹವಾಗಬೇಕಿದ್ದ ವಧು ಅಗ್ನಿ ಅವಘಡದಲ್ಲಿ ಸಾವು

    ಕೆಲವೇ ಗಂಟೆಗಳಲ್ಲಿ ವಿವಾಹವಾಗಬೇಕಿದ್ದ ವಧು ಅಗ್ನಿ ಅವಘಡದಲ್ಲಿ ಸಾವು

    ವಾಷಿಂಗ್ಟನ್: ವಿವಾಹವಾಗಲು (Wedding) ಕೆಲವೇ ಗಂಟೆಗಳು ಬಾಕಿ ಇರುವಾಗ ಅಗ್ನಿ ಅವಘಡದಲ್ಲಿ (Fire Incident) ವಧು (Bride) ದುರಂತ ಅಂತ್ಯ ಕಂಡ ಘಟನೆ ಅಮೆರಿಕಾದ (America) ವಿಸ್ಕಾನ್ಸಿನ್‌ನಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ.

    ಪೈಜ್ ರಡ್ಡಿ (19) ಮೃತಪಟ್ಟ ವಧು. ಮೇ 23ರಂದು ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ರೀಡ್ಸ್‌ಬರ್ಗ್ ಮನೆಯ ಎರಡನೇ ಮಹಡಿಯಲ್ಲಿ ಪೈಜ್ ರಡ್ಡಿ ನಿದ್ರಿಸುತ್ತಿದ್ದಳು. ಈ ವೇಳೆ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಬೆಂಕಿಯ ಹೊಗೆಯನ್ನು ಉಸಿರಾಡಿದ ವಧುವಿಗೆ ಮೆದುಳಿನ ರಕ್ತಸ್ರಾವವಾಗಿ (Brain Haemorrhage) ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಬೈಬಲ್‌ ಹೊಂದಿದ್ದಕ್ಕೆ 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ!

    ವಧು ತಮ್ಮ ಭಾವೀ ಪತಿಯಾದ ಲೋಗನ್ ಮಿಚೆಲ್ – ಕಾರ್ಟರ್ ಅವರೊಂದಿಗೆ ಸೋಮವಾರ ಪ್ರತಿಜ್ಞಾ ವಿಧಿಗಳನ್ನು ವಿನಿಮಯ ಮಾಡಿಕೊಂಡಿದ್ದಳು. ಅಲ್ಲದೇ ಸೌಕ್ ಕೌಂಟಿ ಕೋರ್ಟ್‌ಹೌಸ್‌ನಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಣ್ಣ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ವಧು ಮತ್ತು ವರ ನೆಲೆಸಿದ್ದ ಮನೆ ವರನ ಅಜ್ಜಿಗೆ ಸೇರಿದ್ದು, ಘಟನೆ ನಡೆದ ಸಂದರ್ಭ ಹೊಗೆ ತುಂಬಿದ್ದರಿಂದ ವಧುವಿಗೆ ಹೊಗೆಯಿಂದ ಆಚೆಬರಲಾಗಲಿಲ್ಲ ಎಂದು ಅಗ್ನಿಶಾಮಕ (Fire Extinguisher)  ವಿಭಾಗದ ಮುಖ್ಯಸ್ಥ ಕ್ರೇಗ್ ಡೌಗ್ಲಾಸ್ ತಿಳಿಸಿದ್ದಾರೆ. ಇದನ್ನೂ ಓದಿ: 72 ವರ್ಷದ ವೃದ್ಧನನ್ನು ಕೊಂದು ತಿಂದ 40 ಮೊಸಳೆಗಳು!

    ಪ್ರಾಥಮಿಕ ತನಿಖೆಯು ಆಕೆ ಹೊಗೆ ಸೇವನೆ ಮಾಡಿದ್ದರಿಂದ ಸಾವನ್ನಪ್ಪಿದ್ದಾಳೆ ಎಂದು ತೋರಿಸುತ್ತದೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದ್ದು, ಯಾವುದೇ ಅನುಮಾನಾಸ್ಪದ ಘಟನೆಗಳು ನಡೆದಿಲ್ಲ ಎಂದು ಸೌಕ್ ಕೌಂಟಿಯ ಕರೋನರ್ ಕಚೇರಿಯು ಮಾಹಿತಿ ನೀಡಿದೆ. ಅಲ್ಲದೇ ಘಟನೆ ನಡೆದ ಸಂದರ್ಭ ಇನ್ನೂ ಮೂವರು ಮನೆಯಲ್ಲಿದ್ದು, ಅಗ್ನಿಶಾಮಕ ದಳ ಬರುವಷ್ಟರಲ್ಲಿ ಅವರು ಬೆಂಕಿಯಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಂಡ ಕಂಡಲ್ಲಿ ಉಗೀಬೇಡಿ – ಎಂಜಲು ರಸ ಮಾರಿಯೇ ತಿಂಗಳಿಗೆ 40 ಲಕ್ಷ ಸಂಪಾದಿಸ್ತಾಳೆ ಈ ಮಹಿಳೆ

    ಪೈಜ್ ರಡ್ಡಿ ರೀಡ್ಸ್‌ಬರ್ಗ್ ಏರಿಯಾ ಹೈಸ್ಕೂಲ್‌ನಿಂದ ಜೂನ್ 2022ರಲ್ಲಿ ಪದವಿ ಪಡೆದಿದ್ದಳು. ಅಲ್ಲದೇ ಮ್ಯಾಡಿಸನ್ ಏರಿಯಾದ ಟೆಕ್ನಿಕಲ್ ಕಾಲೇಜಿನಲ್ಲಿ ವೆಟ್ ಟೆಕ್ ಕಾರ್ಯಕ್ರಮಕ್ಕೆ ಸೇರಲು ಯೋಚಿಸಿದ್ದಳು ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ. ಮುಂದಿನ ವಾರ ಆಕೆಯ ಅಂತ್ಯಕ್ರಿಯೆ ನಡೆಯಲಿದ್ದು, ಅಂತ್ಯಕ್ರಿಯೆ ಮತ್ತು ಆಕೆಯ ವೈದ್ಯಕೀಯ ಚಿಕಿತ್ಸೆಗಳ ವೆಚ್ಚವನ್ನು ಭರಿಸಲು ಆಕೆಯ ಕುಟುಂಬಸ್ಥರು ಗೋಫಂಡ್‌ಮೀ (GoFundMe) ಅನ್ನು ಸ್ಥಾಪಿಸಿದ್ದಾರೆ.‌ ಇದನ್ನೂ ಓದಿ: ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು

  • ರಾತ್ರಿ ಹೋಗಿದ್ದು ಬಹಿರ್ದೆಸೆಗೆ, ಬಿದ್ದಿದ್ದು ತೆರೆದ ಬಾವಿಗೆ

    ರಾತ್ರಿ ಹೋಗಿದ್ದು ಬಹಿರ್ದೆಸೆಗೆ, ಬಿದ್ದಿದ್ದು ತೆರೆದ ಬಾವಿಗೆ

    ಶಿವಮೊಗ್ಗ: ರಾತ್ರಿ ವೇಳೆ ಬಹಿರ್ದೆಸೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವ ಕಾಲು ಜಾರಿ ಸುಮಾರು 60 ಅಡಿ ಆಳದ ತೆರೆದ ಬಾವಿಗೆ ಬಿದ್ದ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್. ದೊಡ್ಡೇರಿ ಗ್ರಾಮದಲ್ಲಿ ನಡೆದಿದೆ.

    ಬಾವಿಗೆ ಬಿದ್ದ ವ್ಯಕ್ತಿಯನ್ನು ಹನುಮಂತಪ್ಪ (48) ಎಂದು ಗುರುತಿಸಲಾಗಿದೆ. ಬಾವಿಗೆ ಬಿದ್ದ ಹನುಮಂತಪ್ಪ ನಂತರ ಮೇಲೆ ಬರಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಲಿಲ್ಲ. ನಂತರ ರಕ್ಷಣೆ ಮಾಡುವಂತೆ ಕೂಗಾಡಿಕೊಂಡಿದ್ದಾರೆ. ಹನುಮಂತಪ್ಪನ ಕೂಗಾಟ ಕೇಳಿ ಸ್ಥಳೀಯರು ಬಾವಿಯ ಬಳಿ ಜಮಾಯಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಗಮನಕ್ಕೆ ವಿಷಯ ತಿಳಿಸಿದ್ದಾರೆ.

    ಕ್ಷಣಾರ್ಧದಲ್ಲಿಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬಾವಿಗೆ ಬಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆ ತಂದಿದ್ದಾರೆ. ಸಣ್ಣಪುಟ್ಟ ಗಾಯವಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಸೊರಬದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ಉಪನ್ಯಾಸಕನ ಬರ್ಬರ ಹತ್ಯೆ

    ಬದುಕುಳಿದ ಗಾಯಳು ಹನುಮಂತಪ್ಪ ಅಗ್ನಿ ಶಾಮಕ ಸಿಬ್ಬಂದಿ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ, ಚಾಲಕ ಪ್ರಶಾಂತ್, ಸಿಬ್ಬಂದಗಳಾದ ಮಂಜುನಾಥ, ಪ್ರದೀಪ್, ಪರಶುರಾಮಪ್ಪ, ಪ್ರಸನ್ನ ಕುಮಾರ್, ಭಾಗವಹಿಸಿದ್ದರು. ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿ ಆರೋಗ್ಯದಲ್ಲಿ ಚೇತರಿಕೆ