Tag: fire crackers

  • ಪಟಾಕಿ ಸಿಡಿಸುವುದು ಮೂಲಭೂತ ಹಕ್ಕು ಎನ್ನುವವರು ಕೋರ್ಟ್‌ಗೆ ಬರಲಿ – ಶಾಶ್ವತ ಪಟಾಕಿ ನಿಷೇಧದ ಬಗ್ಗೆ ಪ್ರಸ್ತಾಪಿಸಿದ ಸುಪ್ರೀಂ

    ಪಟಾಕಿ ಸಿಡಿಸುವುದು ಮೂಲಭೂತ ಹಕ್ಕು ಎನ್ನುವವರು ಕೋರ್ಟ್‌ಗೆ ಬರಲಿ – ಶಾಶ್ವತ ಪಟಾಕಿ ನಿಷೇಧದ ಬಗ್ಗೆ ಪ್ರಸ್ತಾಪಿಸಿದ ಸುಪ್ರೀಂ

    – ಯಾವುದೇ ಧರ್ಮ ವಾಯುಮಾಲಿನ್ಯ ಉಂಟುಮಾಡುವ ಚಟುವಟಿಕೆ ಪ್ರೋತ್ಸಾಹಿಸಲ್ಲ ಎಂದ ಕೋರ್ಟ್‌

    ನವದೆಹಲಿ: ಯಾವುದೇ ಧರ್ಮವು ವಾಯುಮಾಲಿನ್ಯವನ್ನು ಉಂಟುಮಾಡುವ ಚಟುವಟಿಕೆಯನ್ನು ಪ್ರೋತ್ಸಾಹಿಸುವುದಿಲ್ಲ. ದೀಪಾವಳಿ ಹೆಸರಿನಲ್ಲಿ ಈ ಪ್ರಮಾಣದಲ್ಲಿ ಪಟಾಕಿಗಳನ್ನು (Fire Crackers) ಸುಟ್ಟರೆ, ಅದು ನಾಗರಿಕರ ಆರೋಗ್ಯದ ಮೂಲಭೂತ ಹಕ್ಕಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ಅಸಮಾಧಾನ ವ್ಯಕ್ತಪಡಿಸಿದೆ.

    ದೆಹಲಿಯಲ್ಲಿನ ಮಾಲಿನ್ಯದ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಅಭಯ್ ಎಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ, ಹಬ್ಬದ ಸಮಯದಲ್ಲಿ ಪಟಾಕಿ ನಿಷೇಧವನ್ನು ಜಾರಿಗೊಳಿಸಲು ವಿಫಲವಾಗಿರುವ ದೆಹಲಿ ಸರ್ಕಾರ ಮತ್ತು ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಸೀಮಿತ ತಿಂಗಳಿಗೆ ಮಾತ್ರ ಪಟಾಕಿ ನಿಷೇಧ ಯಾಕೆ? ವರ್ಷವಿಡಿ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿತು. ಅಕ್ಟೋಬರ್ 14 ರಂದು ಜಾರಿಗೊಳಿಸಿದ ದೆಹಲಿ ಸರ್ಕಾರದ ಆದೇಶವನ್ನು ನ್ಯಾಯಾಲಯವು ಪರಿಶೀಲಿಸಿತು. ಇದು ಪಟಾಕಿಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿತು, ಆದರೆ ಚುನಾವಣೆಗಳು ಮತ್ತು ಮದುವೆಗಳಂತಹ ಕಾರ್ಯಕ್ರಮಗಳಿಗೆ ವಿನಾಯಿತಿಗಳನ್ನು ನೀಡಿದೆ. ನಿಮ್ಮ ಆದೇಶದಲ್ಲಿ ಚುನಾವಣೆ, ಮದುವೆ ಇತ್ಯಾದಿಗಳಿಗೆ ಪಟಾಕಿಗಳನ್ನು ಸುಡಬಹುದು ಎಂದು ಹೇಳಿದೆಯೇ? ನಿಮ್ಮ ಪ್ರಕಾರ ಮಾಲಿನ್ಯಕ್ಕೆ (Air Pollution) ಪಾಲುದಾರರು ಯಾರು? ಎಂದು ಕೋರ್ಟ್ ಕೇಳಿತು. ಇದನ್ನೂ ಓದಿ: Bengaluru| ಬೈಕ್ ಡಿಕ್ಕಿ ಹೊಡೆದು 8ರ ಬಾಲಕ ಸಾವು

    ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಪ್ರಸ್ತುತ ಆದೇಶವು ಹಬ್ಬ ಹರಿದಿನಗಳಲ್ಲಿ ಮತ್ತು ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಉಲ್ಬಣಗೊಳಿಸುವ ತಿಂಗಳುಗಳಲ್ಲಿ ಮಾತ್ರ ವಾಯುಮಾಲಿನ್ಯದ ನಿಯಂತ್ರಣದ ಮೇಲೆ ಕೇಂದ್ರೀಕರಿಸಿದೆ ಎಂದು ವಿವರಿಸಿದರು. ಪೀಠವು ಇದನ್ನು ಒಪ್ಪಿಕೊಳ್ಳಲಿಲ್ಲ. ಶಾಶ್ವತ ನಿಷೇಧವನ್ನು ಪರಿಗಣಿಸಬೇಕು ಎಂದು ಸೂಚಿಸಿತು. ನಿಷೇಧ ಆದೇಶದ ಬಗ್ಗೆ ಸಂಬಂಧಪಟ್ಟ ಎಲ್ಲಾ ಮಧ್ಯಸ್ಥಗಾರರಿಗೆ ತಕ್ಷಣವೇ ತಿಳಿಸುವಂತೆ ಮತ್ತು ಪಟಾಕಿಗಳ ಮಾರಾಟ ಮತ್ತು ತಯಾರಿಕೆ ನಿಷೇಧವನ್ನು ಖಚಿತಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿತು. ಇದನ್ನೂ ಓದಿ: ನಿಮ್ಮ ಜೊತೆ ಯೋಗ್ಯನಾಗಿ ಕೆಲಸ ಮಾಡಲು ಇದೊಂದು ಬಾರಿ ಅವಕಾಶ ಮಾಡಿಕೊಡಿ: ನಿಖಿಲ್‌

    ನವೆಂಬರ್ 25ರ ಮೊದಲು ನಗರದಲ್ಲಿ ಪಟಾಕಿಗಳ ಮೇಲೆ ‘ಶಾಶ್ವತ ನಿಷೇಧ’ವನ್ನು ಪರಿಗಣಿಸುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿದೆ. ಪಟಾಕಿ ನಿಷೇಧ ನಿರ್ದಿಷ್ಟ ಅವಧಿಗೆ ಸೀಮಿತವಾಗಿರದೆ ಒಂದು ವರ್ಷದ ಅವಧಿಯ ನಿಷೇಧದ ಅಗತ್ಯವಿದೆ ಎಂದು ನ್ಯಾಯಾಲಯ ಒತ್ತಿಹೇಳಿತು. ಯಾರಾದರೂ ಪಟಾಕಿ ಸಿಡಿಸುವುದು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಲು ಬಯಸಿದರೆ, ಅವರು ನ್ಯಾಯಾಲಯಕ್ಕೆ ಬರಲಿ. ದೀಪಾವಳಿ ಮಾತ್ರವಲ್ಲದೆ ವರ್ಷಪೂರ್ತಿ ಪಟಾಕಿಗಳನ್ನು ನಿಷೇಧಿಸಬೇಕು ಎಂದು ನ್ಯಾಯಾಲಯ ಟೀಕಿಸಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ನಂತರ ದೆಹಲಿಯು ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆಗೆ 5,000 ಕೋಟಿ ಅಕ್ರಮವಾಗಿ ಕಳಿಸಿದ್ದಾರೆ: ಮೋದಿ ಬಳಿಕ ಹೆಚ್‌ಡಿಡಿ ಬಾಂಬ್‌

  • ಬೆಳಕಿನ ಹಬ್ಬ ಹಲವರ ಬಾಳಿಗೆ ಕತ್ತಲು – ಪಟಾಕಿ ಸಿಡಿದು ಕಣ್ಣಿಗೆ ಕುತ್ತು

    ಬೆಳಕಿನ ಹಬ್ಬ ಹಲವರ ಬಾಳಿಗೆ ಕತ್ತಲು – ಪಟಾಕಿ ಸಿಡಿದು ಕಣ್ಣಿಗೆ ಕುತ್ತು

    – ಕಳೆದ ಬಾರಿಗಿಂತ ಈ ವರ್ಷ ಪಟಾಕಿ ಅವಘಡ ಸಂಖ್ಯೆ ಹೆಚ್ಚಳ
    – ಶನಿವಾರ ಒಂದೇ ದಿನ 20 ಪ್ರಕರಣ ದಾಖಲು

    ಬೆಂಗಳೂರು: ದೀಪಾವಳಿ (Deepavali) ಹಬ್ಬ ಹಿನ್ನೆಲೆ ಕಳೆದ ಬಾರಿಗಿಂತ ಈ ವರ್ಷ ಪಟಾಕಿ ಅವಘಡ ಸಂಖ್ಯೆ ಹೆಚ್ಚಾಗಿದ್ದು, ಆಪರೇಷನ್ ಸಂಖ್ಯೆಯೂ ಹೆಚ್ಚಾಗಿದೆ.

    ಮಿಂಟೋ ಆಸ್ಪತ್ರೆಯಲ್ಲಿ (Minto Hospital) 5 ದಿನಗಳಲ್ಲಿ 49 ಪಟಾಕಿ ಸಿಡಿತ ಪ್ರಕರಣ ದಾಖಲಾಗಿದೆ. ಪಟಾಕಿ ಅವಘಡದಿಂದ 35 ಮಂದಿ ಚಿಕಿತ್ಸೆ ಪಡೆದು ಹೋಗಿದ್ದರೇ 14 ಮಂದಿ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 32 ಮಕ್ಕಳು ಪಟಾಕಿಯಿಂದ ಕಣ್ಣಿಗೆ ಏಟು ಮಾಡಿಕೊಂಡಿದ್ದಾರೆ. 17 ಮಂದಿ ವಯಸ್ಕರೂ ಸಹ ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. 23 ಮಂದಿಗೆ ಪಟಾಕಿಯಿಂದ ಗಂಭೀರ ಸಮಸ್ಯೆಯಾಗಿದೆ. ಇದನ್ನೂ ಓದಿ: ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ; ಅಪ್ರಾಪ್ತೆ ಕೊಂದು, ಶೌಚಾಲದಲ್ಲಿ ಶವ ಇಟ್ಟು ಗಂಡ-ಹೆಂಡ್ತಿ ಎಸ್ಕೇಪ್‌

    26 ಮಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, 4 ಮಂದಿಗೆ ಈಗಾಗಲೇ ಸರ್ಜರಿ ಮಾಡಲಾಗಿದೆ. ಇನ್ನೂ 10 ಮಂದಿಗೆ ಸರ್ಜರಿಯ ಅವಶ್ಯಕತೆಯಿದೆ. 27 ಮಂದಿ ಪಟಾಕಿ ಸಿಡಿಸುವಾಗ ಗಾಯ ಮಾಡಿಕೊಂಡಿದ್ದು, 22 ಮಂದಿ ಅಕ್ಕಪಕ್ಕ ಇದ್ದವರು ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. ಶನಿವಾರ ಒಂದೇ ದಿನ 20 ಪಟಾಕಿ ಅವಘಡ ಪ್ರಕರಣ ದಾಖಲಾಗಿದೆ. ಈ ಪೈಕಿ 15 ಮಕ್ಕಳು ಪಟಾಕಿಯಿಂದ ಗಾಯಗೊಂಡಿದ್ದಾರೆ. ನಾರಾಯಣ ನೇತ್ರಾಲಯದಲ್ಲೂ (Narayana Nethralaya) 64ಕ್ಕೂ ಹೆಚ್ಚು ಪಟಾಕಿ ಅವಘಡ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನ.7ರ ಒಳಗಡೆ ಬಾಕಿ ಹಣವನ್ನು ಪಾವತಿಸದೇ ಇದ್ದರೆ ವಿದ್ಯುತ್‌ ಕೊಡಲ್ಲ: ಬಾಂಗ್ಲಾಗೆ ಅದಾನಿ ಡೆಡ್‌ಲೈನ್‌

  • ರಾಯಚೂರು| ಪಟಾಕಿ ಕಿಡಿ ತಗುಲಿ ಅಂಗಡಿಗೆ ಬೆಂಕಿ – ಅಂಗಡಿಯಲ್ಲಿದ್ದ ವಸ್ತುಗಳು ಭಸ್ಮ

    ರಾಯಚೂರು| ಪಟಾಕಿ ಕಿಡಿ ತಗುಲಿ ಅಂಗಡಿಗೆ ಬೆಂಕಿ – ಅಂಗಡಿಯಲ್ಲಿದ್ದ ವಸ್ತುಗಳು ಭಸ್ಮ

    – ಕೆಲಕಾಲ ಕನ್ನಡಾಂಬೆ ಮೆರವಣಿಗೆ ಸ್ಥಗಿತ

    ರಾಯಚೂರು: ಪಟಾಕಿ (Fire Crackers) ಕಿಡಿ ತಗುಲಿ ಅಂಗಡಿಗೆ (Shop) ಬೆಂಕಿ ಹೊತ್ತಿಕೊಂಡ ಪರಿಣಾಮ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ರಾಯಚೂರು (Raichur) ನಗರದ ಸದರಬಜಾರ್ ಪೊಲೀಸ್ ಠಾಣೆ (Sadar Bazar Police Station) ಎದುರು ನಡೆದಿದೆ.

    ರಾಯಚೂರು ನಗರದ ಎಂ.ಜಿ ರೋಡ್ ಬಳಿ ಇರುವ ಬಟ್ಟೆ ತಯಾರಿಸುವ ಉಲ್ಲನ್ ದಾರದ ಅಂಗಡಿಗೆ ಪಟಾಕಿ ಕಿಡಿ ತಗುಲಿ ಬೆಂಕಿ ಬಿದ್ದಿದೆ. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸಪಟ್ಟಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಇಸ್ಪೀಟ್‌ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆ ಪೆಪ್ಪರ್‌ ಸ್ಪ್ರೇ

    ಘಟನೆ ನಡೆದ ವೇಳೆ ಅದೇ ಮಾರ್ಗವಾಗಿ ತಾಯಿ ಭುವನೇಶ್ವರಿ ಮೆರವಣಿಗೆ ಸಾಗುತ್ತಿತ್ತು. ಬೆಂಕಿ ಅವಘಡ ಹಿನ್ನೆಲೆ ಕನ್ನಡಾಂಬೆ ಮೆರವಣಿಗೆಗೆ ಅಡ್ಡಿಯುಂಟಾಗಿದೆ. ಬೆಂಕಿ ಹೊತ್ತಿ ಉರಿದಿದ್ದರಿಂದ ಕೆಲ ಕಾಲ ಕನ್ನಡಾಂಬೆ ಮೆರವಣಿಗೆ ಸ್ಥಗಿತಗೊಂಡಿದೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್

  • ದೀಪಾವಳಿ ಹಬ್ಬ – ಬೆಂಗಳೂರಲ್ಲಿ ಪಟಾಕಿ ಸಿಡಿಸಲು ಬಿಬಿಎಂಪಿ ಮಾರ್ಗಸೂಚಿ

    ದೀಪಾವಳಿ ಹಬ್ಬ – ಬೆಂಗಳೂರಲ್ಲಿ ಪಟಾಕಿ ಸಿಡಿಸಲು ಬಿಬಿಎಂಪಿ ಮಾರ್ಗಸೂಚಿ

    – ಸ್ಫೋಟಕ ಪಟಾಕಿ ನಿಷೇಧ, ಆನ್‌ಲೈನ್‌ನಲ್ಲೂ ಮಾರಾಟ ಇಲ್ಲ

    ಬೆಂಗಳೂರು: ದೀಪಾವಳಿ (Deepavali) ಹಬ್ಬದ ಹಿನ್ನೆಲೆ ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (Karnataka State Pollution Control Board) ಸೂಚನೆ ಮೇರೆಗೆ ಬಿಬಿಎಂಪಿ (BBMP) ಮಾರ್ಗಸೂಚಿ ಪ್ರಕಟಿಸಿದೆ.

    ಸ್ಫೋಟಕ ಪಟಾಕಿಗಳನ್ನು ಸಿಡಿಸುವುದು ಸಂಪೂರ್ಣ ನಿಷೇಧಿಸಿದ್ದು, ಹಸಿರು ಪಟಾಕಿ (Green Crackers) ಮಾತ್ರ ಸಿಡಿಸುವಂತೆ ಸಾರ್ವಜನಿಕರಿಗೆ ಮಾಲಿನ್ಯ ಮಂಡಳಿ ಮನವಿ ಮಾಡಿದೆ. ಅಕ್ಟೋಬರ್ 31ರಿಂದ ನವೆಂಬರ್ 2ರ ವರೆಗೆ ಮೂರು ದಿನ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: 14,201 ಎಕರೆಯಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ: ಕೃಷ್ಣಭೈರೇಗೌಡ

    ಯಾವ ಸಮಯದಲ್ಲಿ ಪಟಾಕಿ ಸಿಡಿಸಬೇಕು?
    ಈ ಮೂರು ದಿನಗಳಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆ ಅವಧಿಯಲ್ಲಿ ಮಾತ್ರ ಹಸಿರು ಪಟಾಕಿ ಸಿಡಿಸಬೇಕು. ಅದರ ಹೊರತಾಗಿ ಬೇಕಾಬಿಟ್ಟಿ ಪಟಾಕಿ ಸಿಡಿಸುವುದಕ್ಕೆ ಕೆಎಸ್‌ಪಿಸಿಬಿ ಸೂಚನೆಯಂತೆ ಪಾಲಿಕೆ ನಿಷೇಧಿಸಿದೆ. ಇದನ್ನೂ ಓದಿ: ನಟ ವಿಜಯ್ ಬಿಜೆಪಿಯ ʻಸಿʼ ಟೀಂ – ತಮಿಳುನಾಡು ಡಿಎಂಕೆ ಸಚಿವ ಟೀಕೆ

    ಅನಗತ್ಯವಾಗಿ ಪಟಾಕಿ ಮನೆ ಹಾಗೂ ಇತರೆ ಜಾಗದಲ್ಲಿ ಶೇಖರಣೆ ಮಾಡದಂತೆಯೂ ಸೂಚನೆ ನೀಡಲಾಗಿದೆ. ಆನ್‌ಲೈನ್‌ನಲ್ಲೂ ಬೇಕಾಬಿಟ್ಟಿ ಸ್ಫೋಟಕ ಪಟಾಕಿ ಮಾರಾಟ ಮಾಡದಂತೆ ತಾಕೀತು ಮಾಡಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶ ಸಂಖ್ಯೆ ಉಲ್ಲೇಖಿಸಿ ಸಾರ್ವಜನಿಕ ಸುತ್ತೋಲೆ ಹೊರಡಿಸಲಾಗಿದೆ. ಇದನ್ನೂ ಓದಿ: 1974 ಮುಂಚಿನ ದಾಖಲೆ ಇದ್ದರೆ ರೈತರು ಟಾಸ್ಕ್‌ ಫೋರ್ಸ್‌ಗೆ ತಂದುಕೊಡಿ – ಎಂ.ಬಿ ಪಾಟೀಲ್‌

    ಕಳೆದ ವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: 13 ವರ್ಷ ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆ ಮದುವೆ – ಡೆತ್ ನೋಟ್ ಬರೆದಿಟ್ಟು ಪ್ರಿಯಕರ  ಆತ್ಮಹತ್ಯೆ

  • ದೀಪಾವಳಿಗೂ ಮುನ್ನವೇ ಗ್ಯಾಸ್ ಚೇಂಬರಾಗುವ ಭೀತಿಯಲ್ಲಿ ದೆಹಲಿ

    ದೀಪಾವಳಿಗೂ ಮುನ್ನವೇ ಗ್ಯಾಸ್ ಚೇಂಬರಾಗುವ ಭೀತಿಯಲ್ಲಿ ದೆಹಲಿ

    ನವದೆಹಲಿ: ದೀಪಾವಳಿ (Deepavali) ಹಬ್ಬಕ್ಕೂ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿ (New Delhi) ಗ್ಯಾಸ್ ಚೇಂಬರ್ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮುಂದಿನ ಆರು ದಿನಗಳಲ್ಲಿ ಈ ಪ್ರಮಾಣ ಇನ್ನೂ ಏರುವ ನಿರೀಕ್ಷೆ ಇದೆ. ಇದರಿಂದಾಗಿ ಮಕ್ಕಳು ಮತ್ತು ವೃದ್ಧರು ತೀವ್ರ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ದೆಹಲಿಯ ಆನಂದ್ ವಿಹಾರ್ ಸುತ್ತಮುತ್ತಲಿನ ವಾಯು ಗುಣಮಟ್ಟ ಸೂಚ್ಯಂಕವು 405 ರಷ್ಟಿದ್ದು, ಅಪಾಯದ ಮಟ್ಟ ದಾಟಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (Central Pollution Control Board) ಇದನ್ನು ಗಂಭೀರ ವರ್ಗದಲ್ಲಿ ಇರಿಸಿದೆ. ಇದೇ ಸಮಯದಲ್ಲಿ, CPCB ಪ್ರಕಾರ, ಅಕ್ಷರಧಾಮ ದೇವಾಲಯದ ಸುತ್ತಮುತ್ತ AQI 361 ನಲ್ಲಿ ದಾಖಲಾಗಿದೆ. ಬವಾನಾದಲ್ಲಿ AQI 392, ರೋಹಿಣಿ 380, ITO 357, ದ್ವಾರಕಾ ಸೆಕ್ಟರ್-8 335 ಹಾಗೂ ಮುಂಡ್ಕಾದಲ್ಲಿ AQI 356 ದಾಖಲಾಗಿದೆ. ಇದನ್ನೂ ಓದಿ: MUDA SCAM| ಇಡಿ ದಾಳಿ ಬೆನ್ನಲ್ಲೇ ವಾಕಿಂಗ್‌ ಮಾಡುತ್ತಿದ್ದ ಮುಡಾ ಮಾಜಿ ಆಯುಕ್ತ ಪರಾರಿ

    ಭಾನುವಾರದಿಂದ ಮುಂದಿನ ಆರು ದಿನಗಳವರೆಗೆ ರಾಜಧಾನಿಯ ಜನರು ಕೆಟ್ಟ ಗಾಳಿಯನ್ನು ಉಸಿರಾಡಬೇಕಾಗಬಹುದು, ವಾಯು ಗುಣಮಟ್ಟ ಸೂಚ್ಯಂಕ (AQI) 300ಕ್ಕಿಂತ ಹೆಚ್ಚಿರಬಹುದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮುನ್ಸೂಚನೆ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ವಾಯು ಮಾಲಿನ್ಯವು ಜನರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸಲಿದೆ. ಇದನ್ನೂ ಓದಿ: ಸಂಸದ ಪಪ್ಪು ಯಾದವ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ

    ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ದೆಹಲಿ ಸರ್ಕಾರದ ಪರಿಸರ ಸಚಿವ ಗೋಪಾಲ್ ರೈ ಅವರು ಎನ್‌ಸಿಆರ್‌ನಲ್ಲಿ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ನೆರೆ ರಾಜ್ಯಗಳಲ್ಲಿ ಹುಲ್ಲು ಸುಡುವ ಪ್ರಕರಣಗಳನ್ನು ಕಡಿಮೆ ಮಾಡಲು ವಿನಂತಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರದಿಂದ ಲ್ಯಾಂಡ್‌ ಜಿಹಾದ್‌, ಜಮೀರ್ ಒಬ್ಬ ಆಧುನಿಕ ಟಿಪ್ಪು ಸುಲ್ತಾನ್: ಆರ್.ಅಶೋಕ್

    ದೆಹಲಿಯೊಳಗೆ ಪಟಾಕಿ ಉತ್ಪಾದನೆ, ಸಂಗ್ರಹಣೆ ಮತ್ತು ಯಾವುದೇ ರೀತಿಯ ಮಾರಾಟ ಅಥವಾ ಖರೀದಿಗೆ ಸಂಪೂರ್ಣ ನಿಷೇಧವಿದೆ ಎಂದು ಗೋಪಾಲ್ ರೈ ಹೇಳಿದ್ದಾರೆ. ಈ ನಿಷೇಧವು ಆನ್‌ಲೈನ್‌ನಲ್ಲಿ ಪಟಾಕಿ ವಿತರಣೆಯ ಮೇಲೂ ಅನ್ವಯಿಸುತ್ತದೆ. ದೆಹಲಿಯಂತೆಯೇ ಎನ್‌ಸಿಆರ್‌ನಲ್ಲಿಯೂ ಪಟಾಕಿಯನ್ನು ಸಂಪೂರ್ಣ ನಿಷೇಧಿಸಬೇಕು. ಇದರಿಂದ ಉಂಟಾಗುವ ಮಾಲಿನ್ಯವನ್ನು ತಡೆಯಬಹುದು. ಕೃಷಿ ತಾಜ್ಯ ಸುಡುವ ಘಟನೆಗಳು ಕಡಿಮೆಯಾಗಿದ್ದರೂ ದೀಪಾವಳಿ ನಂತರದ ಸಮಯ ನಿರ್ಣಾಯಕವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಎಸ್​ಬಿಐಗೆ ಕನ್ನ – ನಗದು, ಚಿನ್ನಾಭರಣದ ಜೊತೆಗೆ ಸಿಸಿಟಿವಿ ಡಿವಿಆರ್‌ ಹೊತ್ತೊಯ್ದ ಕಳ್ಳರು!

  • ದೆಹಲಿಯಲ್ಲಿ ಪಟಾಕಿ ಬ್ಯಾನ್‌ ಯಾಕೆ?

    ದೆಹಲಿಯಲ್ಲಿ ಪಟಾಕಿ ಬ್ಯಾನ್‌ ಯಾಕೆ?

    ದೀಪಾವಳಿ (Deepavali) ಹಬ್ಬದ ಸಮಯದಲ್ಲಿ ಮನೆಮನೆಯಲ್ಲಿಯೂ ಪಟಾಕಿಯದ್ದೇ ಸದ್ದು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ದೀಪಾವಳಿಗೆ ಪಟಾಕಿ (Fire Crackers) ಇನ್ನಷ್ಟು ಮೆರುಗು ನೀಡುತ್ತದೆ. ಅದರಲ್ಲೂ ಮಕ್ಕಳು ಪಟಾಕಿ ಸಿಡಿಸುವುದನ್ನು ನೋಡಲು ಬಲು ಇಷ್ಟಪಡುತ್ತಾರೆ. ಆದರೆ ಈ ಬಾರಿ ದೀಪಾವಳಿ ಹೊಸ್ತಿಲಲ್ಲಿ ದೆಹಲಿ (New Delhi) ಸರ್ಕಾರ ಜನವರಿ 1ರವರೆಗೂ ಪಟಾಕಿ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ಚಳಿಗಾಲದಲ್ಲಿ ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ದೆಹಲಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.

    ದೆಹಲಿಯಲ್ಲಿ ಪಟಾಕಿ ನಿಷೇಧ ಏಕೆ?
    ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುವ ಅಪಾಯವಿದೆ. ಈ ಸಮಯದಲ್ಲಿ ಪಟಾಕಿಗಳನ್ನು ಸುಡುವುದು ಮಾಲಿನ್ಯವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಆದ್ದರಿಂದ ಕಳೆದ ವರ್ಷದಂತೆ ಈ ವರ್ಷವೂ ಪಟಾಕಿ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಪಟಾಕಿಗಳ ತಯಾರಿಸುವಿಕೆ, ಸಂಗ್ರಹ ಮತ್ತು ಮಾರಾಟದ ಮೇಲಿನ ನಿಷೇಧ 2025ರ ಜನವರಿ 1ರವರೆಗೆ ಜಾರಿಯಲ್ಲಿರುತ್ತದೆ ಎಂದು ಗೋಪಾಲ್‌ ರೈ ಮಾಹಿತಿ ನೀಡಿದ್ದಾರೆ.

    FIRE CRACKERS

    ಆನ್‌ಲೈನ್‌ನಲ್ಲಿಯೂ ಪಟಾಕಿ ಮಾರಾಟ ಹಾಗೂ ಖರೀದಿಸುವಿಕೆಗೆ ನಿಷೇಧ ಹೇರಲಾಗಿದೆ. ಇದರಿಂದ ಜನರನ್ನು ಮಾಲಿನ್ಯದಿಂದ ರಕ್ಷಿಸಬಹುದು. ದೀಪ ಬೆಳಗುವ ಮೂಲಕ ಹಾಗೂ ಸಿಹಿ ಹಂಚುವ ಮೂಲಕ ದೀಪಾವಳಿಯನ್ನು ಹಬ್ಬಗಳನ್ನು ಆಚರಿಸುವಂತೆ ಗೋಪಾಲ್‌ ರೈ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಪಟಾಕಿಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಲುವಾಗಿ ದೆಹಲಿ ವಾಯುಮಾಲಿನ್ಯ ಸಮಿತಿ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ 21ಪ್ರಮುಖ ಅಂಶಗಳನ್ನು ಒಳಗೊಂಡ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಲಾಗುವುದು ಎಂದು ಗೋಪಾಲ್‌ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸುಪ್ರೀಂ ಕೋರ್ಟ್ ವಿಚಾರಣೆಯ ನಂತರ 2017ರಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಪಟಾಕಿಯನ್ನು ನಿಷೇಧಿಸಲಾಯಿತು. ಇದಾದ ಬಳಿಕ ದೆಹಲಿ ಸರ್ಕಾರವು 2020ರಿಂದ ಪ್ರತಿ ಚಳಿಗಾಲದಲ್ಲಿ ಎಲ್ಲಾ ಪಟಾಕಿಗಳ ಉತ್ಪಾದನೆ, ಸಂಗ್ರಹ ಹಾಗೂ ಮಾರಾಟದ ಮೇಲೆ ನಿಷೇಧ ಹೇರಿದೆ. ಅಲ್ಲದೇ ಕೇವಲ ಹಸಿರು ಪಟಾಕಿಯನ್ನು ಬಳಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.

    ಪಟಾಕಿಯಿಂದ ವಾಯುಮಾಲಿನ್ಯ ಹೇಗೆ ಉಂಟಾಗುತ್ತದೆ?
    ನಿಕ್ಕಲ್‌, ಕಾಪರ್, ಲೆಡ್‌ನಂತಹ ಹೆಚ್ಚಿನ ರಾಸಾಯನಿಕ ಮಿಶ್ರಿತ ಪಟಾಕಿ ಸಿಡಿಸಿದರೆ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಪರಿಸರ ಅಧಿಕಾರಿಗಳು ಹೇಳುತ್ತಾರೆ. ಪಟಾಕಿ ಉರಿದು ಸ್ಫೋಟಗೊಳ್ಳಲು ಹಾಗೂ ಪ್ರಕಾಶಮಾನವಾಗಿ ಕಾಣಲು ಅಪಾಯಕಾರಿ ರಾಸಯನಿಕಗಳನ್ನು ಬಳಸುತ್ತಾರೆ. ಆಕ್ಸಿಡೈಸರ್‌ಗಳು, ಇಂಧನ, ಬಣ್ಣ ಮತ್ತು ಬೈಂಡರ್‌ಗಳ ಮಿಶ್ರಣದಿಂದ ಪಟಾಕಿಗಳು ಕಲರ್‌ಫುಲ್‌ ಆಗಿ ಕಾಣಿಸುವುದಲ್ಲದೇ ನೋಡಲು ಆಕರ್ಷಣೀಯವಾಗಿರುತ್ತದೆ. ಪಟಾಕಿಗಳನ್ನು ಸಿಡಿಸಿದಾಗ, ಅವು ವಿಷಕಾರಿ ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡುತ್ತವೆ. ಅದು ಉಸಿರಾಟ, ಆರೋಗ್ಯ ಮತ್ತು ಪರಿಸರಕ್ಕೆ ಹಾನಿ ಮಾಡುತ್ತದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹೇಳಿದೆ.

    ಆರೋಗ್ಯದ ಮೇಲೆ ಪರಿಣಾಮ ಹೇಗೆ?
    ಪಟಾಕಿಗಳು ವಿಷಕಾರಿ ಅನಿಲಗಳನ್ನು ಹೊರಸೂಸುತ್ತವೆ. ಸಲ್ಫರ್‌ ಡೈಆಕ್ಸೈಡ್‌ , ಕಾರ್ಬನ್‌ ಡೈಆಕ್ಸೈಡ್‌, ಕಾರ್ಬನ್‌ ಮೋನಾಕ್ಸೈಡ್‌ ಮತ್ತು ಪರ್ಟಿಕ್ಯುಲೆಟ್‌ ಮ್ಯಾಟರ್‌ ಜೊತೆಗೆ ಹಲವಾರು ರಾಸಾಯನಿಕಗಳು ಗಾಳಿಯ ಗುಣಮಟ್ಟದಲ್ಲಿ ಹಾನಿಕಾರಕ ಪರಿಣಾಮ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.

    ಪಟಾಕಿಯಲ್ಲಿ ಸೀಸವನ್ನು ಬಳಸಲಾಗುತ್ತದೆ. ಇದು ನಮ್ಮ ಮೆದುಳು ಮತ್ತು ನರಗಳ ಮೇಲೆ ಹೆಚ್ಚು ಪರಿಣಾಮ ಬೀರುವ ವಿಷಕಾರಿ ಹೊಗೆಯನ್ನು ಹೊರಸೂಸುತ್ತದೆ. ಮಕ್ಕಳು ಹೆಚ್ಚು ಪಟಾಕಿ ಹಚ್ಚುವುದರಿಂದ ಬೆಳವಣಿಗೆಯಲ್ಲಿ ವಿಳಂಬ ಹಾಗೂ ಕಲಿಕೆಯಲ್ಲಿ ಅಸಮರ್ಥತೆಯನ್ನು ಅನುಭವಿಸಬಹುದು ಎಂದು ಡಾ. ಸಮೀರ್‌ ಗುಪ್ತಾ ಹೇಳಿದ್ದಾರೆ.

    ಮೆಗ್ನೇಸಿಯಂ ಒಳಗೊಂಡ ಪಟಾಕಿಯ ಹೊಗೆಯನ್ನು ಉಸಿರಾಡುವುದರಿಂದ ಮೆಟಲ್‌ ಫ್ಯೂಮ್‌ ಎಂಬ ಜ್ವರ ಕಾಣಿಸಿಕೊಳ್ಳಬಹುದು. ಇದು ಜನರಲ್ಲಿ ಶೀತ ಮತ್ತು ಸ್ನಾಯು ದೌರ್ಬಲ್ಯವನ್ನು ಉಂಟುಮಾಡುತ್ತದೆ.

    ಶಬ್ದ ಮಾಲಿನ್ಯ ಶಬ್ದ ತುಂಬಾ ಜನರಲ್ಲಿ ಆತಂಕವನ್ನುಂಟು ಮಾಡುತ್ತದೆ ಅದರಿಂದ ಪ್ಯಾನಿಕ್ ಅಟ್ಯಾಕ್ಸ್​, ವಯಸ್ಸಾದವರಿಗೆ ಹೃದಯ ಸಂಬಂಧಿತ ತೊಂದರೆಗಳು, ಕೆಲವು ಬಾರಿ ಹೃದಯಾಘಾತವಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಜೊತೆಗೆ ಪಟಾಕಿ ಹೊಡೆದಾಗ ರೇಡಿಯೋ ಆಕ್ಟೀವ್ ಸಬ್​ಸ್ಟೆನ್ಸ್ ಬಿಡುಗಡೆಯಾಗಿರುತ್ತದೆ. ಅದು ದೀರ್ಘಕಾಲದ ಕ್ಯಾನ್ಸರ್ ಅಪಾಯವನ್ನು ಉಂಟು ಮಾಡಬಹುದು, ಮಕ್ಕಳಲ್ಲಿ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಬೆಂಕಿಯ ಅಪಾಯಗಳು ಹೆಚ್ಚಿನ ಪ್ರಮಾಣದಲ್ಲಿ ಆಗುವ ಸಾಧ್ಯತೆ ಇರುತ್ತದೆ, ಏಕಾಏಕಿ ಬೆಂಕಿ ಹೊತ್ತಿಕೊಳ್ಳಬಹುದು. ಇದು ಸುಟ್ಟಗಾಯಗಳು, ಕಣ್ಣು ಹಾಗೂ ಇತರೆ ನಿಮ್ಮ ಅಂಗಗಳಿಗೆ ಹಾನಿಯುಂಟು ಮಾಡಬಹುದು.

    ಬಣ್ಣ ಬರಲು ಹಾಕುವ ಲವಣಾಂಶಗಳು, ಜಿಂಕ್, ಮೆಗ್ನೀಸಿಯಂ ಫ್ಯೂಮ್ ಫೀವರ್ ಉಂಟು ಮಾಡುತ್ತದೆ ಅಂದರೆ ಹೊಗೆಯಿಂದ ಜ್ವರ ಬರುವುದುಂಟು, ಕ್ಯಾಡ್ಮಿಯಂ ದೇಹದಲ್ಲಿ ಅನೀಮಿಯಾ ಅಂದರೆ ರಕ್ತಹೀನತೆಯನ್ನು ಸೃಷ್ಟಿಸುತ್ತದೆ. ಗರ್ಭಿಣಿಯರಿಗೆ, ಪಟಾಕಿ ಮಾಲಿನ್ಯವು ಹೆಚ್ಚು ಅಪಾಯಗಳನ್ನು ಉಂಟುಮಾಡುತ್ತದೆ. ಗರ್ಭಾವಸ್ಥೆಯ ಆರಂಭಿಕ ಹಂತಗಳಲ್ಲಿ, ಪಟಾಕಿಗಳಿಂದ ಉತ್ಪತ್ತಿಯಾಗುವ ದೊಡ್ಡ ಶಬ್ದಗಳಿಗೆ ಒಡ್ಡಿಕೊಳ್ಳುವುದು, ತಾಯಿಗೆ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು.

    ದೀಪಾವಳಿಯ ಸಮಯದಲ್ಲಿ ಜೋರಾಗಿ ಸಿಡಿಯುವ ಪಟಾಕಿಗಳು ಸುಮಾರು 85 ಡೆಸಿಬಲ್‌ಗಿಂತಲೂ ಹೆಚ್ಚಿನ ಶಬ್ದವನ್ನು ಉಂಟುಮಾಡುತ್ತವೆ. ಇದು ಕಿವಿಯ ತಮಟೆಗಳನ್ನು ಹಾನಿಗೊಳಿಸುತ್ತದೆ. ಕೇವಲ 15 ನಿಮಿಷಗಳ ಕಾಲ ಸುಮಾರು 100 ಡಿಬಿ ಧ್ವನಿಯ ತೀವ್ರತೆಗೆ ಒಡ್ಡಿಕೊಳ್ಳುವುದು ತಾತ್ಕಾಲಿಕ ಶ್ರವಣ ನಷ್ಟಕ್ಕೆ ಕಾರಣವಾಗಬಹುದು ಮತ್ತು ದೀರ್ಘಕಾಲ ಈ ಶಬ್ದಕ್ಕೆ ಒಡ್ಡಿಕೊಳ್ಳುವುದರಿಂದ ಕಿವಿ ಕೇಳಿಸದಯೇ ಇರಬಹುದು.

    ಶಬ್ದ ಮಾಲಿನ್ಯವು ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು. ಹಠಾತ್ ದೊಡ್ಡ ಶಬ್ದಗಳು ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಹೃದಯ ಬಡಿತವನ್ನು ಉಲ್ಬಣಗೊಳಿಸಬಹುದು. ಇದು ಹೃದಯಾಘಾತದಿಂದ ಬಳಲುತ್ತಿರುವವರಿಗೆ ಹೆಚ್ಚಿನ ತೊಂದರೆ ಉಂಟುಮಾಡಬಹುದು.

    ವಿಶೇಷವಾಗಿ ಅಸ್ತಮಾ ಅಥವಾ ಇತರ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವ ಜನರು ಪಟಾಕಿಗಳನ್ನು ಹೊಡೆಯಬಾರದು. ವಾಯು ಮಾಲಿನ್ಯ ಇರುವ ಸ್ಥಳದಲ್ಲಿ ಉಸಿರಾಡುವುದರಿಂದ ಅವರ ಆರೋಗ್ಯ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಐಸಿಎಂಆರ್​ ಅಧ್ಯಯನದ ಪ್ರಕಾರ, 2019ರಲ್ಲಿ 1.7 ಮಿಲಿಯನ್ ಸಾವುಗಳು ಅಥವಾ ಭಾರತದಲ್ಲಿನ ಒಟ್ಟು ಸಾವುಗಳಲ್ಲಿ ಶೇ. 18ರಷ್ಟು ಸಾವುಗಳು ವಾಯು ಮಾಲಿನ್ಯಕ್ಕೆ ಕಾರಣವಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ವಾಯು ಮಾಲಿನ್ಯದಿಂದ ರೋಗಿಗಳು ಕಣ್ಣು, ಮೂಗು, ಗಂಟಲು ಮತ್ತು ಚರ್ಮದ ಕಿರಿಕಿರಿ, ಕೆಮ್ಮು, ಉಸಿರಾಟದ ತೊಂದರೆ, ಉಬ್ಬಸ, ಎದೆ ಉರಿಯಂತಹ ಕೆಲವು ಲಕ್ಷಣಗಳನ್ನು ಹೊಂದಬಹುದು. ಅಸ್ವಸ್ಥತೆ, ಎದೆನೋವು, ತಲೆನೋವು, ತಲೆತಿರುಗುವಿಕೆ, ಕೈಕಾಲು ದೌರ್ಬಲ್ಯ ಇತ್ಯಾದಿಗಳನ್ನು ಕೂಡ ಅನುಭವಿಸಬಹುದು.

  • ಪಟಾಕಿ ಕಿಡಿಯಿಂದ ಹೊತ್ತಿ ಉರಿದ ಗುಜರಿ ಅಂಗಡಿ

    ಪಟಾಕಿ ಕಿಡಿಯಿಂದ ಹೊತ್ತಿ ಉರಿದ ಗುಜರಿ ಅಂಗಡಿ

    ಚಿಕ್ಕಬಳ್ಳಾಪುರ: ಪಟಾಕಿ ಕಿಡಿಯಿಂದ ಗುಜರಿ ಅಂಗಡಿಯೊಂದು (Rummage Shop) ಹೊತ್ತಿ ಉರಿದ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

    ವಿಜಯಪುರ ಪಟ್ಟಣದ ಬೈಪಾಸ್ ರಸ್ತೆಯ ಮಂಡಿಬೆಲೆ ರೋಡ್ ಬಳಿ ಘಟನೆ ನಡೆದಿದ್ದು, ಬೆಂಕಿಯ ಕೆನ್ನಾಲಿಗೆಗೆ ಗುಜರಿ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ವಿಜಯಪುರ ಪಟ್ಟಣದ ಭರತ್ ನಗರದ ವಾಸಿ ಮುಬಾರಕ್ ಎಂಬವರಿಗೆ ಸೇರಿದ ಗುಜರಿ ಅಂಗಡಿ ಇದಾಗಿದ್ದು, ಪಟಾಕಿಯ ಕಿಡಿ ಗುಜರಿ ಅಂಗಡಿ ಮೇಲೆ ಬಿದ್ದು ಬೆಂಕಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ಬೆಂಕಿ ಹಚ್ಚಿ ಲ್ಯಾಬ್ ಟೆಕ್ನಿಷಿಯನ್ ಹತ್ಯೆ ಪ್ರಕರಣ – ಇಬ್ಬರ ಬಂಧನ

    ದೀಪಾವಳಿ ಪ್ರಯುಕ್ತ ಪಟ್ಟಣದಾದ್ಯಂತ ಪಟಾಕಿ ಸಿಡಿಸುತ್ತಿದ್ದ ಸಂದರ್ಭ ಪಟಾಕಿ ಕಿಡಿ ಗುಜರಿ ಅಂಗಡಿಗೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಗುಜರಿ ಅಂಗಡಿಯ ಮಾಲೀಕ ಮುಬಾರಕ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಲೀಕರು, ರಾತ್ರಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು, ಬೆಂಕಿ ಹೊತ್ತಿ ಉರಿಯುವ ಸಂದರ್ಭದಲ್ಲಿ ಬಂದು ನೋಡಿದಾಗ ಬೆಂಕಿ ಎಲ್ಲಾ ಕಡೆ ಆವರಿಸಿತ್ತು. ಸುಮಾರು ಎರಡರಿಂದ ಮೂರು ಲಕ್ಷ ಗುಜರಿ ಸಾಮಗ್ರಿಗಳು ನಷ್ಟವಾಗಿದೆ ಎಂದರು. ಸ್ಥಳಕ್ಕೆ ದೇವನಳ್ಳಿಯ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ದಪ್ಪ ಇದ್ದೀನಿ.. ನೋಡೋಕೆ ಚೆನ್ನಾಗಿ ಕಾಣ್ತಿಲ್ಲ ಅಂತ MBBS ವಿದ್ಯಾರ್ಥಿನಿ ಆತ್ಮಹತ್ಯೆ

  • ಪಟಾಕಿ ಮಾರಾಟ ಮಳಿಗೆಗಳಲ್ಲಿ ಮಕ್ಕಳನ್ನ ನೇಮಿಸಿದ್ರೆ 2 ವರ್ಷ ಜೈಲು ಗ್ಯಾರಂಟಿ: ರಿಯಾಜ್ ಪಟೇಲ್

    ಪಟಾಕಿ ಮಾರಾಟ ಮಳಿಗೆಗಳಲ್ಲಿ ಮಕ್ಕಳನ್ನ ನೇಮಿಸಿದ್ರೆ 2 ವರ್ಷ ಜೈಲು ಗ್ಯಾರಂಟಿ: ರಿಯಾಜ್ ಪಟೇಲ್

    – ಯಾದಗಿರಿ ಜಿಲ್ಲೆಯ ಬಾಲ ಕಾರ್ಮಿಕ ಯೋಜನಾಧಿಕಾರಿ ಖಡಕ್ ಎಚ್ಚರಿಕೆ

    ಯಾದಗಿರಿ: ಪಟಾಕಿ ಮಾರಾಟ ಮಳಿಗೆಗಳಲ್ಲಿ (Fire Crackers Shops) ಕೆಲಸಕ್ಕೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ನೇಮಿಸಿಕೊಂಡರೆ ಅಂತಹ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಯಾದಗಿರಿ (Yadgir) ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಯಾದಗಿರಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ (Child Labor Project Society) ವತಿಯಿಂದ ಜಿಲ್ಲೆಯ ಪಟಾಕಿ ಅಂಗಡಿಗಳಿಗೆ ತೆರಳಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು. ನಗರದ ಪಟಾಕಿ ಮಾರುವ ಮಳಿಗೆಗಳಿಗೆ ತೆರಳಿ, ಪಟಾಕಿ ಮಾರುವ ಪ್ರಕ್ರಿಯೆಯಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಕರಪತ್ರದಲ್ಲಿ ಬರೆದು ಹಂಚಲಾಯಿತು. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಶೂ ಬದಲು ಚಪ್ಪಲಿ ಭಾಗ್ಯ – ದ್ವಂದ್ವ ನಿಲುವಿನ ಆದೇಶದಿಂದ ಹಠ ಹಿಡಿದ ಮಕ್ಕಳು

    ಈ ವೇಳೆ ಅವರು ಮಾತನಾಡುತ್ತಾ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡರೆ ಅಂತಹ ಮಾಲೀಕರ ವಿರುದ್ಧ 20,000 ರಿಂದ 50,000 ರೂ.ಗಳ ವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಎರಡನ್ನೂ ವಿಧಿಸಲಾಗುವುದು ಖಡಕ್‌ ಸೂಚನೆ ನೀಡಿದರು. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳಾಗಬೇಕು ಅಂತ ಸಚಿವರಿಗೆ ಹೈಕಮಾಂಡ್‌ ಹೇಳಿಲ್ಲ: ಸತೀಶ್‌ ಜಾರಕಿಹೊಳಿ

    ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ 2016ರ ಕಾಯ್ದೆ ಅನ್ವಯ ಬಾಲಕಾರ್ಮಿಕ ಪದ್ಧತಿ ಕಾನೂನು ಪ್ರಕಾರ ಅಪರಾಧವಾಗುತ್ತದೆ. ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಮೀರಿಯೂ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡರೆ ಅಂತಹ ಮಾಲೀಕರ ವಿರುದ್ಧ 20,000 ರಿಂದ 50,000 ರೂ.ಗಳ ವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅವಳಿ ಮಕ್ಕಳ ಜೊತೆ ಅಮೂಲ್ಯ ದೀಪಾವಳಿ ಸೆಲೆಬ್ರೇಶನ್

  • ಅತ್ತಿಬೆಲೆ ಪಟಾಕಿ ದುರಂತ- ನಾಲ್ವರು ಅಧಿಕಾರಿಗಳ ಅಮಾನತು

    ಅತ್ತಿಬೆಲೆ ಪಟಾಕಿ ದುರಂತ- ನಾಲ್ವರು ಅಧಿಕಾರಿಗಳ ಅಮಾನತು

    ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತಕ್ಕೆ (Fire Crackers incident Attibele) ಸಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

    ಆನೇಕಲ್ ತಾಲೂಕಿನ ಹಿಂದಿನ ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ಉಪ ತಹಶೀಲ್ದಾರ್ ಶ್ರೀಧರ್, ರಾಜಸ್ವ ನಿರೀಕ್ಷಕ ಅತ್ತಿಬೆಲೆ, ಗ್ರಾಮ ಆಡಳಿತಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

    ಅತ್ತಿಬೆಲೆ ಅಗ್ನಿ ಅವಘಡಕ್ಕೆ ಅಧಿಕಾರಿಗಳೇ ಹೊಣೆ ಎಂದು ವರದಿ ಬಂದಿತ್ತು. ಪಟಾಕಿ ಅಂಗಡಿಗೆ 1ಸಾವಿರ ಕೆ.ಜಿ ಮಾತ್ರ ಸ್ಟಾಕ್ ಇಡಲು ಅವಕಾಶ ನೀಡಲಾಗಿತ್ತು. ಪರವಾನಿಗೆ ನೀಡುವಾಗ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಪರವಾನಿಗೆ ನೀಡಿರುವ ಹಿನ್ನಲೆಯಲ್ಲಿ ಈ ಅವಘಡಕ್ಕೆ ಕಾರಣವೆಂದು 4 ಜನ ಅಧಿಕಾರಿಗಳನ್ನ ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ – ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ

    ಮಂಗಳವಾರ ಅಮಾನತಿನ ಬಗ್ಗೆ ಡಿಸಿ, ಎಸ್‍ಪಿಗೆ ಸಿಎಂ ಸೂಚನೆ ನೀಡಿದ್ದರು. ಇದೀಗ ಸಿಎಂ ಸೂಚನೆ ಬೆನ್ನಲ್ಲೆ ಅಧಿಕಾರಿಗಳ ಅಮಾನತು ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್

    ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್

    ಆನೇಕಲ್ (ಬೆಂಗಳೂರು): ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತ (Fire Cracker Tragedy In Attibele) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೋದಾಮು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

    ಪಟಾಕಿ ಸಂಗ್ರಹಕ್ಕೆ ಲೈಸೆನ್ಸ್ ಇರಲಿಲ್ಲ. ಕೇವಲ ಬೇರೆಡೆಗೆ ರವಾನಿಸುವ ಪ್ರೊಸೆಸಿಂಗ್ ಯೂನಿಟ್‍ಗೆ ಮಾತ್ರ ಪರವಾನಿಗೆ ನೀಡಲಾಗಿತ್ತು. ಆದರೆ ಮಾಲೀಕ ಭಾರೀ ಪ್ರಮಾಣದ ಪಟಾಕಿ ಸಂಗ್ರಹಿಸುವ ದಾಸ್ತಾನು ಮಳಿಗೆಯನ್ನಾಗಿ ಬಳಕೆ ಮಾಡ್ತಿದ್ದ. ಪ್ರೊಸೆಸಿಂಗ್ ಯೂನಿಟ್‍ಗೆ 2028ವರೆಗೆ ಪರವಾನಿಗೆ ಇದ್ದು, ಗೋದಾಮಿಗೆ ಅನುಮತಿ ಇರಲಿಲ್ಲ.

    ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಪಟಾಕಿಯನ್ನು ಸಂಗ್ರಹಿಸಿದ್ದ ಕುರಿತು ಗೋದಾಮಿನ ಮಾಲೀಕರ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮಾಲೀಕ ರಾಮಸ್ವಾಮಿ ರೆಡ್ಡಿಯನ್ನ ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. 2018 ರಲ್ಲಿ ಪಟಾಕಿ ಅಂಗಡಿಕಷ್ಟೇ ಅನುಮತಿ ಪಡೆದಿದ್ದಾರೆ. ಗೋದಾಮಿಗೆ ಅನುಮತಿ ನೀಡಿಲ್ಲ ಎಂದು ರಾಮಸ್ವಾಮಿ ವಿಚಾರಣೆ ಬಳಿಕ ಬೆಳಕಿಗೆ ಬಂದಿದೆ.

    ಒಟ್ಟಿನಲ್ಲಿ ಪಟಾಕಿ ಅಂಗಡಿ ಅನುಮತಿ ಪಡೆದು ಗೋಡೌನ್ ಮಾಡಿಕೊಂಡಿದ್ದ ಆರೋಪಿ ರಾಮಸ್ವಾಮಿ ವಿರುದ್ಧ ಸ್ಫೋಟಕ ಕಾಯ್ದೆ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ: ಬೊಮ್ಮಾಯಿ

    ಪಟಾಕಿ ದುರಂತದಲ್ಲಿ ತಮಿಳುನಡು ಮೂಲದ ಗಿರಿ ಬಿನ್ ವೇಡಿಯಪ್ಪನ್, ಸಚೀನ್ ಬಿನ್ ಲೇಟ್ ವೇಡಿಯಪ್ಪನ್, ವಿಜಯರಾಘವನ್, ವಿಳಂಬರತಿ ಬಿನ್ ಸೆಂದಿಲ್, ಆಕಾಶ ಬಿನ್ ರಾಜಾ, ವೆಡಿಯಪ್ಪನ್, ಆದಿಕೇಶವ ಬಿನ್ ಪೆರಿಯಾಸ್ವಾಮಿ, ಪ್ರಕಾಶ್ ಬಿನ್ ರಾಮು, ವಸಂತರಾಜು ಬಿನ್ ಗೋವಿಂದ ರಾಜು, ಅಬ್ಬಾಸ್ ಬಿಸ್ ಶಂಕರ್, ಪ್ರಭಾಕರನ್ ಬಿನ್ ಗೋಪಿನಾಥ್, ನಿತೀಶ್ ಬಿನ್ ಮೇಘನಾಥ್, ಸಂತೋಷ್ ಬಿನ್ ಕುಮಾರ್ ಮೃತಪಟ್ಟಿದ್ದು, ಇನ್ನೊಬ್ಬನ ಹೆಸರು ಗುರುತು ಪತ್ತೆಯಾಗಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]