Tag: Fire accident

  • ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವು

    ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವು

    ಕೋಲಾರ: ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣ ಮುತ್ಯಾಲಪೇಟೆಯಲ್ಲಿ ನಡೆದಿದೆ.

    ಮೇ 20 ರಂದು ಮನೆಯಲ್ಲಿ ಗ್ಯಾಸ್ ರೀಫಿಲ್ಲಿಂಗ್ ಮಾಡುವ ವೇಳೆ ಬೆಂಕಿ ತಗುಲಿ ತಂದೆ ಶ್ರೀಕಂಠ (45) ಹಾಗೂ ಅವರ ಮಕ್ಕಳಾದ 18 ವರ್ಷದ ಮಧುಮತಿ , 10 ವರ್ಷದ ರಕ್ಷಿತ ಗಾಯಗೊಂಡಿದ್ದರು. ಅವರಲ್ಲಿ ರಕ್ಷಿತ ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಾವನ್ನಪ್ಪಿದ್ದಾಳೆ.

    ಮಗಳ ಸಾವಿನ ಸುದ್ದಿ ತಿಳಿದ ತಂದೆ ಶ್ರೀಕಂಠ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಅಪಾರ್ಟ್‍ಮೆಂಟ್‍ನಲ್ಲಿ ಭಾರೀ ಅಗ್ನಿ ಅವಘಡ – ಇಬ್ಬರು ಮಕ್ಕಳು ಸೇರಿ ನಾಲ್ವರ ದುರ್ಮರಣ

    ಅಪಾರ್ಟ್‍ಮೆಂಟ್‍ನಲ್ಲಿ ಭಾರೀ ಅಗ್ನಿ ಅವಘಡ – ಇಬ್ಬರು ಮಕ್ಕಳು ಸೇರಿ ನಾಲ್ವರ ದುರ್ಮರಣ

    ಚೆನ್ನೈ: ಬೆಳ್ಳಂಬೆಳಗ್ಗೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

    ಇಲ್ಲಿನ ವಡಪಲನಿಯಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ಇಂದು ಬೆಳಿಗ್ಗೆ 5.30ರ ವೇಳೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನ ನಿಯಂತ್ರಿಸಿದ್ದಾರೆ.

    ಆದ್ರೆ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದ 7 ಜನರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಅವರು ಸಾಕಷ್ಟು ಹೊಗೆ ಕುಡಿದಿದ್ದರಿಂದ ಸಾವು ಸಂಭವಿಸಿದೆ. ಯಾರಿಗೂ ಸುಟ್ಟ ಗಾಯಗಳಾಗಿರಲಿಲ್ಲ ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಪಾರ್ಟ್‍ಮೆಂಟ್‍ನ ಪಾರ್ಕಿಂಗ್ ಜಾಗದಲ್ಲಿ ವಿದ್ಯುತ್ ದೋಷದಿಂದ ಈ ಅವಘಡ ಸಂಭವಿಸಿರಬಹುದು ಎಂದು ಅಗ್ನಿಶಾಮಕ ಸಳದ ಅಧಿಕಾರಿಗಳು ಶಂಕಿಸಿದ್ದಾರೆ. ಕಟ್ಟಡದಲ್ಲಿ ನಿಲ್ಲಿಸಲಾಗಿದ್ದ 10ಕ್ಕೂ ಹೆಚ್ಚು ಬೈಕ್‍ಗಳು ಸಹ ಸುಟ್ಟು ಭಸ್ಮವಾಗಿವೆ.

  • ಬೆಂಗ್ಳೂರಿನ ಬಿಲ್ವ ಆಸ್ಪತ್ರೆಯಲ್ಲಿ ಅಗ್ನಿ ದುರಂತ

    ಬೆಂಗ್ಳೂರಿನ ಬಿಲ್ವ ಆಸ್ಪತ್ರೆಯಲ್ಲಿ ಅಗ್ನಿ ದುರಂತ

    ಬೆಂಗಳೂರು: ನಗರದ ವೈಯಾಲಿ ಕಾವಲ್‍ನ ಬಿಲ್ವ ಆಸ್ಪತ್ರೆಯಲ್ಲಿ ಬೆಳ್ಳಂ ಬೆಳಗ್ಗೆ ಅಗ್ನಿ ದುರಂತ ಸಂಭವಿಸಿದೆ.

    ಆಸ್ಪತ್ರೆಯ ಎರಡನೇ ಮಹಡಿಯಲ್ಲಿನ ಎಸಿ ಶಾರ್ಟ್ ಸರ್ಕ್ಯೂಟ್‍ನಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ. ಆಸ್ಪತ್ರೆ ಸಂಪೂರ್ಣ ಹೊತ್ತಿ ಉರಿದಿದೆ.

    ಒಳಗೆ ಸಿಲುಕಿಕೊಂಡಿದ್ದ 6 ಮಂದಿಯನ್ನ ರಕ್ಷಿಸಿ, ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಭರದಿಂದ ನಡೀತಿದೆ.

    ನಮಗೆ 6 ಗಂಟೆಗೆ ಕರೆ ಬಂದಿದೆ. ಮೊದಲು ಎರಡು ವಾಹನಗಳು ಬಂದಿತ್ತು. ನಂತರ ಮತ್ತೆ ನಾಲ್ಕು ವಾಹನಗಳು ಹೈಗ್ರೌಂಡ್ ಅಗ್ನಿಶಾಮಕದಳ ಠಾಣೆಯಿಂದ ಸ್ಥಳಕ್ಕೆ ಬಂದವು. ಆಸ್ಪತ್ರೆಯಲ್ಲಿ ಒಟ್ಟು 9 ಜನ ರೋಗಿಗಳು ಇದ್ರು. ಎಲ್ಲರನ್ನೂ ನಮ್ಮ ಸಿಬ್ಬಂದಿ ಗಾಜು ಒಡೆದು ಕಿಟಕಿ ಮೂಲಕ ರಕ್ಷಣೆ ಮಾಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳೀಯ ಪೊಲೀಸರು ತನಿಖೆ ನಡೆಸಬೇಕು ಅಂತ ಅಗ್ನಿಶಾಮಕದಳದ ನಿರ್ದೇಶಕರಾದ ಕೆ.ಯು ರಮೇಶ್ ಹೇಳಿದ್ದಾರೆ.

  • ಯುವಕನೊಬ್ಬನ ಹುಚ್ಚಾಟದಿಂದ ಮದ್ವೆ ಮನೆಯಲ್ಲಿ ಹೊತ್ತಿ ಉರಿದ ಪೆಂಡಾಲ್- ಮಂಗ್ಳೂರಲ್ಲಿ ವಿಡಿಯೋ ವೈರಲ್

    ಯುವಕನೊಬ್ಬನ ಹುಚ್ಚಾಟದಿಂದ ಮದ್ವೆ ಮನೆಯಲ್ಲಿ ಹೊತ್ತಿ ಉರಿದ ಪೆಂಡಾಲ್- ಮಂಗ್ಳೂರಲ್ಲಿ ವಿಡಿಯೋ ವೈರಲ್

    ಮಂಗಳೂರು: ಮದುವೆಯ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬನ ಹುಚ್ಚಾಟ ಇಡೀ ಪೆಂಡಾಲನ್ನೇ ಸುಟ್ಟು ಭಸ್ಮ ಮಾಡಿದ ಘಟನೆ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ನಡೆದಿದೆ.

    ಈ ಬೆಂಕಿ ಆಕಸ್ಮಿಕದಿಂದ ಪೆಂಡಲ್ ಹೊತ್ತಿ ಉರಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನ ಮೂಡಬಿದ್ರೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮೆಹಂದಿ ಕಾರ್ಯಕ್ರಮದಲ್ಲಿ ಯುವಕರು ನಾನಾ ರೀತಿಯಲ್ಲಿ ಡಿಜೆ ಸಾಂಗ್‍ಗೆ ಕುಣಿದು ಕುಪ್ಪಳಿಸಿದ್ದಾರೆ.

    ಈ ಮೆಹೆಂದಿ ಕಾರ್ಯಕ್ರಮದಲ್ಲಿ ಇಬ್ಬರು ಯುವಕರು ವಿಭಿನ್ನವಾಗಿ ಕಾಣಿಸಿಕೊಳ್ಳಲು ದೆವ್ವದಂತೆ ವೇಷವನ್ನು ತೊಟ್ಟು ಕುಣಿಯುತ್ತಿದ್ದರು. ಬಳಿಕ ಓರ್ವ ಎರಡೂ ಕೈಗಳಲ್ಲಿ ಬೆಂಕಿಯ ಪಂಜು ಹಿಡಿದುಕೊಂಡು ಪೆಂಡಾಲ್ ಕೆಳಗೆ ಆಗಮಿಸಿ ಕುಣಿಯಲಾರಂಭಿಸಿದ್ದ. ಪಂಜನ್ನು ಮೇಲಕ್ಕೆತ್ತಿ ಕುಣಿಯುತ್ತಿದ್ದು, ಬೆಂಕಿ ಪೆಂಡಾಲ್‍ಗೆ ಹೊತ್ತಿಕೊಂಡಿದೆ.

    ಸಂಪೂರ್ಣ ಸಿಲ್ಕ್ ನ ಪೆಂಡಾಲ್ ಆಗಿದ್ದರಿಂದ ಕ್ಷಣಾರ್ಧದಲ್ಲಿ ಬೆಂಕಿ ಇಡೀ ಪೆಂಡಾಲ್‍ಗೆ ಹೊತ್ತಿಕೊಂಡಿದೆ. ಪರಿಣಾಮ ಪೆಂಡಾಲ್ ಸಂಪೂರ್ಣ ಕೆಳಗುರುಳಿ ಬಿದ್ದಿದೆ. ಪೆಂಡಾಲ್‍ನ ಕೆಳಗೆ ಜನರಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಾಳಾಗಿದ್ದು ಭಾರೀ ಅನಾಹುತವೊಂದು ತಪ್ಪಿದೆ.

    https://www.youtube.com/watch?v=w4R1EExx5u4

  • ಚೆನ್ನೈನ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಪಾರಾದ ನಟ ಕಮಲ್ ಹಾಸನ್

    ಚೆನ್ನೈನ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಪಾರಾದ ನಟ ಕಮಲ್ ಹಾಸನ್

    ಚೆನ್ನೈ: ಬಹುಭಾಷಾ ನಟ ಕಮಾಲ್ ಹಾಸನ್ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕಳೆದ ರಾತ್ರಿ ಚೈನ್ನೈ ನಗರದ ಆಳ್ವಾರ್‍ಪೇಟ್‍ನಲ್ಲಿರೋ ಕಮಾಲ್ ಹಾಸನ್ ರವರ ಮನೆಯಲ್ಲಿ ದಿಢೀರ್ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಯಾರಿಗೂ ಯಾವುದೇ ಅಪಾಯವಾಗಿಲ್ಲ.

    ಘಟನೆಯಿಂದಾಗಿ ಕೆಲ ಪುಸ್ತಕಗಳು ಸುಟ್ಟಿದ್ದು ಹೊರತುಪಡಿಸಿದರೆ ಮನೆಯಲ್ಲಿ ದೊಡ್ಡ ನಷ್ಟವೇನೂ ಆಗಿಲ್ಲ. ಈ ವಿಷಯವನ್ನು ಕಮಲ್ ಹಾಸನ್ ಅವರೇ ಟ್ವಿಟ್ಟರ್‍ನಲ್ಲಿ ಹೇಳಿಕೊಂಡಿದ್ದಾರೆ.

    ನನ್ನ ಸಿಬ್ಬಂದಿಗೆ ಧನ್ಯವಾದ. ಮನೆಯಲ್ಲಿ ನಡೆದ ಅಗ್ನಿ ಅವಘಡದಿಂದ ಪಾರಾಗಿದ್ದೇನೆ. ಮನೆ ಹೊಗೆಯಿಂದ ಆವೃತ್ತವಾಗಿತ್ತು. ಶ್ವಾಸಕೋಶದ ತುಂಬಾ ಹೊಗೆ. ನಾನು ಮೂರನೇ ಮಹಡಿಯಿಂದ ಇಳಿದು ಬಂದೆ. ಈಗ ಸುರಕ್ಷಿತವಾಗಿದ್ದೇನೆ. ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಗುಡ್ ನೈಟ್ ಎಂದು ಕಮಲ್ ಹಾಸನ್ ಶುಕ್ರವಾರ ರಾತ್ರಿ ಟ್ವೀಟ್ ಮಾಡಿದ್ದರು.

    ಅಗ್ನಿ ಅವಘಡದ ಕುರಿತು ಕಮಲ್ ಹಾಸನ್ ಅವರ ಟ್ವೀಟ್ ನೋಡಿ ನೂರಾರು ಅಭಿಮಾನಿಗಳು ಹಾಗೂ ಹಿತೈಷಿಗಳು ಕಮಲ್ ಹಾಸನ್ ಅವರು ಬಚಾವಾಗಿದ್ದಕ್ಕೆ ಕಾಳಜಿಯಿಂದ ಟ್ವೀಟ್‍ಗಳನ್ನ ಮಾಡಿದ್ದಾರೆ. ನಂತರ ಕಮಲ್ ಹಾಸನ್, ನನ್ನ ಮೇಲಿನ ನಿಮ್ಮಲ್ಲರ ಪ್ರೀತಿ, ಕಾಳಜಿಗೆ ಧನ್ಯವಾದ. ಈಗ ನಿದ್ದೆ ಮಾಡಲು ಹೋಗ್ತಾ ಇದ್ದೀನಿ ಎಲ್ಲರಿಗೂ ಶುಭರಾತ್ರಿ’ ಅಂತಾ ಮತ್ತೊಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

  • ಅರುಣ್ ಸಾಗರ್ ಶೂಟಿಂಗ್ ಶೆಡ್‍ಗೆ ಬೆಂಕಿ – ಧಗಧಗನೆ ಹೊತ್ತಿ ಉರಿದ ಆರ್ಟ್ ಗ್ಯಾಲರಿ

    ಅರುಣ್ ಸಾಗರ್ ಶೂಟಿಂಗ್ ಶೆಡ್‍ಗೆ ಬೆಂಕಿ – ಧಗಧಗನೆ ಹೊತ್ತಿ ಉರಿದ ಆರ್ಟ್ ಗ್ಯಾಲರಿ

    ಬೆಂಗಳೂರು: ನಟ ಅರುಣ್ ಸಾಗರ್ ಅವರಿಗೆ ಸೇರಿದ ಶೂಟಿಂಗ್ ಶೆಡ್ ಬೆಂಕಿಗಾಹುತಿಯಾದ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಅರುಣ್ ಸಾಗರ್ ಅವರಿಗೆ ಸೇರಿದ ಶೂಟಿಂಗ್ ಶೆಡ್ ಹೌಸ್ ಇತ್ತು. ಅದರ ಪಕ್ಕದಲ್ಲೆ ಪ್ಲಾಸ್ಟಿಕ್ ಗೋದಾಮು ಕೂಡಾ ಇತ್ತು. ಆಕಸ್ಮಿಕವಾಗಿ ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಬೆಂಕಿಯ ತೀವ್ರತೆ ಪಕ್ಕದಲ್ಲಿದ್ದ ಶೂಟಿಂಗ್ ಶೆಡ್‍ಗೂ ಆವರಿಸಿದೆ. ಇದರಿಂದಾಗಿ ಶೂಟಿಂಗ್ ಶೆಡ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ.

    ಸುದ್ದಿ ತಿಳಿದು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸುವ ವೇಳೆಗೆ ಶೂಟಿಂಗ್ ಶೆಡ್ ಸಂಪೂರ್ಣವಾಗಿ ಕರಕಲಾಗಿ ಹೋಗಿತ್ತು. ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಬಳ್ಳಾರಿಯ ವಿಮ್ಸ್ ನಲ್ಲಿ ಭಾರಿ ಅಗ್ನಿ ಅವಘಡ- ಆಸ್ಪತ್ರೆಯಿಂದ ಹೊರಗೆ ಓಡಿದ ರೋಗಿಗಳು!

    ಬಳ್ಳಾರಿಯ ವಿಮ್ಸ್ ನಲ್ಲಿ ಭಾರಿ ಅಗ್ನಿ ಅವಘಡ- ಆಸ್ಪತ್ರೆಯಿಂದ ಹೊರಗೆ ಓಡಿದ ರೋಗಿಗಳು!

    ಬಳ್ಳಾರಿ: ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂ ಟ್‍ನಿಂದ ಸಂಭವಿಸಿದ ಅಗ್ನಿ ಅವಘಡಕ್ಕೆ ಸಾಕಷ್ಟು ಪ್ರಮಾಣದ ಔಷಧಿಗಳು ಮತ್ತು ಹಳೆಯ ವಾರ್ಡನಲ್ಲಿದ್ದ ಬೆಡ್‍ಗಳು ಸುಟ್ಟು ಭಸ್ಮವಾಗಿವೆ.

    ಎಂಎಸ್1 ವಾರ್ಡನಲ್ಲಿ ಕಾಣಿಸಿಕೊಂಡ ಬೆಂಕಿಯಲ್ಲಿ ಅದೃಷ್ಟವಶಾತ್ ಯಾವುದೇ ರೋಗಿಗಳಿಗೆ ಅನಾಹುತವಾಗಿಲ್ಲ. ಶಾರ್ಟ್ ಸರ್ಕ್ಯೂ ಟ್‍ನಿಂದ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ವಾರ್ಡ್ ಪಕ್ಕದಲ್ಲಿದ್ದ ರೋಗಿಗಳು ಹಾಗೂ ಸಂಭಧಿಕರು ಆಸ್ಪತ್ರೆಯಿಂದ ಹೊರಗೆ ಓಡಿ ಹೋಗಿದ್ದಾರೆ.

    ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ 2 ವಾಹನಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.