ರಾಯಚೂರು: ಜಿಲ್ಲೆಯ ಯರಮರಸ್ ಬಳಿಯ ವೈಟಿಪಿಎಸ್ (YTPS) ವಿದ್ಯುತ್ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ಕೆನ್ನಾಲಿಗೆಗೆ ಕೋಟ್ಯಂತರ ರೂ. ಮೌಲ್ಯದ ಯಂತ್ರಗಳು ಸುಟ್ಟು ಭಸ್ಮವಾಗಿದೆ.
ಕಲ್ಲಿದ್ದಲು ಸಾಗಣೆ ವೇಳೆ ಬೆಂಕಿ ಕಾಣಿಸಿಕೊಂಡು ಕನ್ವೇರ್ ಬೆಲ್ಟ್ ಸುಟ್ಟಿದೆ. ಪರಿಣಾಮ ಕೋಟ್ಯಂತರ ರೂ. ಮೌಲ್ಯದ ಯಂತ್ರಗಳು ಸುಟ್ಟು ಕರಕಲಾಗಿವೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಎಚ್ಚೆತ್ತ ಸಿಬ್ಬಂದಿ ಹೊರಗೆ ಬಂದಿದ್ದರಿಂದ, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದನ್ನೂ ಓದಿ: ದಾವಣಗೆರೆ | ಇಬ್ಬರು ಬೈಕ್ ಕಳ್ಳರ ಬಂಧನ – 16.52 ಲಕ್ಷ ಮೌಲ್ಯದ 30 ಬೈಕ್ ವಶಕ್ಕೆ
ಬೆಂಕಿ ದುರಂತಕ್ಕೆ ವೈಟಿಪಿಎಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದು, ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬಾಗಲಕೋಟೆ: ತಾಲೂಕಿನ (Bagalkote) ಗದ್ದನಕೇರಿ ಕ್ರಾಸ್‍ನ ಮನೆಯೊಂದರಲ್ಲಿ ದೀಪಾವಳಿ (Deepavali) ಹಬ್ಬದ ಆಚರಣೆ ವೇಳೆ ದೀಪದಿಂದ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ (Fire Accident) ಗಾಯಗೊಂಡಿದ್ದ ಯುವತಿ ಸಾವನ್ನಪ್ಪಿದ್ದಾಳೆ.
ಅಕ್ಟೋಬರ್ 19 ರಂದು ಅಗ್ನಿ ಅವಘಡ ಸಂಭವಿಸಿತ್ತು. ಬಾಗಿಲಿನ ಮುಂದೆ ಹಚ್ಚಿದ್ದ ದೀಪ ಮನೆ ಮುಂದೆ ಬಿದ್ದ ಆಯಿಲ್‍ಗೆ ತಗುಲಿ. ಮನೆಗೆ ಬೆಂಕಿ ತಗುಲಿತ್ತು. ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಬೆಂಕಿ ತೀವ್ರತೆ ಇನ್ನಷ್ಟು ಹೆಚ್ಚಾಗಿತ್ತು.
ಘಟನೆಯಲ್ಲಿ 8 ಜನ ಗಾಯಗೊಂಡಿದ್ದರು. ಅಲ್ಲದೇ ಮನೆ ಮುಂದೆ ನಿಲ್ಲಿಸಿದ್ದ 8 ಬೈಕ್ ಸುಟ್ಟು ಕರಕಲಾಗಿದ್ದವು. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಇದನ್ನೂ ಓದಿ:
ಬಳ್ಳಾರಿ: ಡ್ರೈವರ್, ಕಂಡಕ್ಟರ್ ಬೆಂಕಿ ನಂದಿಸುತ್ತಿದ್ದರು, ನಾವು 5 ಸೆಕೆಂಡ್‌ಲ್ಲಿ ಜೀವ ಉಳಿಸಿಕೊಂಡೆವು ಎಂದು ಕರ್ನೂಲ್ ಬಸ್ ಅಪಘಾತದಲ್ಲಿ (Karnool Bus Fire) ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕ ಆಕಾಶ್ ಭಯಾನಕ ದೃಶ್ಯವನ್ನು ಬಿಚ್ಚಿಟ್ಟಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಾನು ಗುರುವಾರ (ಅ.23) ರಾತ್ರಿ 10:30ಕ್ಕೆ ಹೈದರಾಬಾದ್‌ನಲ್ಲಿ ಬಸ್ ಹತ್ತಿ, ಬೆಂಗಳೂರಿಗೆ ಹೊರಟಿದ್ದೆವು. ಮಧ್ಯರಾತ್ರಿ 2:35ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ನಾವೆಲ್ಲ ಮಲಗಿಕೊಂಡಿದ್ದೆವು. ಆಗ ಬೈಕ್ ಡಿಕ್ಕಿ ಹೊಡೆದ ಶಬ್ದವೊಂದು ಕೇಳಿಸಿತು. ಆ ಶಬ್ದಕ್ಕೆ ಪಕ್ಕದಲ್ಲಿದ್ದ ಅಂಕಲ್ ಒಬ್ಬರು ನಮ್ಮನ್ನು ಎಬ್ಬಿಸಿದ್ದರು. ಎದ್ದು ನೋಡಿದಾಗ ಬಸ್ಸಿನ ಎಡಗಡೆ ಭಾಗ ಹಾಗೂ ರಸ್ತೆಯ ಮೇಲೆ ಬೆಂಕಿ ಹೊತ್ತಿಕೊಂಡಿತ್ತು. ಡೀಸೆಲ್ ಚೆಲ್ಲಿತ್ತಾ? ಪೆಟ್ರೋಲ್ ಚೆಲ್ಲಿತ್ತಾ? ಗೊತ್ತಿಲ್ಲ. ನಮಗೆ ಹೊರಬರೋಕೆ ಕೇವಲ 5 ಸೆಕೆಂಡ್ ಮಾತ್ರ ಇತ್ತು. ಆ ಸಮಯದಲ್ಲಿ ಡ್ರೈವರ್ ಹಾಗೂ ಕಂಡಕ್ಟರ್ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದರು. ಅವರೇನಾದರೂ ಎಬ್ಬಿಸಿದ್ರೆ ಹೆಚ್ಚಿನ ಜನ ಆಚೆ ಬರಬಹುದಿತ್ತು ಎಂದು ಹೇಳಿದರು.ಇದನ್ನೂ ಓದಿ: Kurnool Bus Fire | ಸೂರ್ಯೋದಯಕ್ಕೂ ಮುನ್ನ ಸಾವಿನ ಮನೆ ಕದ ತಟ್ಟಿದ ಸುಂದರ ಕುಟುಂಬ
ನಮ್ಮನ್ನು ಎಬ್ಬಿಸಿದ ಅಂಕಲ್ ಡ್ರೈವರ್ ಸೀಟಿನ ಪಕ್ಕದ ಕಿಟಿಕಿಯಿಂದ ಆಚೆ ಹೋದರು. ನಾನು ಆ ಕಿಟಕಿಯನ್ನು ಕೈಯಿಂದ ಒಡೆದು, ಕಾಲಿಂದ ಒದ್ದು ಗಾಜು ಬಿಳಿಸಿ ಆಚೆ ಬಂದೆ. ನನ್ನ ಜೊತೆ ಮೂವರು ಆಚೆ ಬಂದರು. ಹೊರಗಡೆ ಬಂದ 5 ರಿಂದ 10 ಸೆಕೆಂಡ್‌ನಲ್ಲಿ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಯಿತು. ಆ ಸಮಯದಲ್ಲಿ ನಾವು ಯಾರಿಗೂ ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ. ಇದನ್ನೆಲ್ಲ ನೋಡಿದರೆ ನಮಗೆ ಪುನರ್ಜನ್ಮ ಸಿಕ್ಕಿದಂತಾಗಿದೆ ಎಂದರು.
ಏನಿದು ಅವಘಡ?
ಆಂಧ್ರದ ಕರ್ನೂಲ್ ಬಳಿಯ ಚಿನ್ನಟೇಕೂರು ಬಳಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಅವಘಡ ಸಂಭವಸಿದೆ. ದುರಂತದಲ್ಲಿ 23 ಮಂದಿ ಪ್ರಯಾಣಿಕರು ಪಾರಾದರೂ 19 ಮಂದಿ ಜೀವಂತವಾಗಿ ಸುಟ್ಟು ಹೋಗಿದ್ದಾರೆ. ಪ್ರಯಾಣಿಕರನ್ನು ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಪ್ರಯಾಣಿಕರು ಹೈದರಾಬಾದ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ
ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಆಗಮಿಸಿದವು. ರಕ್ಷಣಾ ತಂಡಗಳು ಸ್ಥಳಕ್ಕೆ ಬರುವಷ್ಟರಲ್ಲಿ ಬಸ್ಸು ಬಹುತೇಕ ಸುಟ್ಟುಹೋಗಿತ್ತು. ಈಗ ಅಧಿಕಾರಿಗಳು ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವ ಕೆಲಸ ಆರಂಭಿಸಿದ್ದಾರೆ. ಸ್ಲೀಪರ್ ಕೋಚ್ ಬಸ್ಸು ಆಗಿದ್ದ ಕಾರಣ ಪ್ರಯಾಣಿಕರು ನಿದ್ದೆ ಮಾಡುತ್ತಿದ್ದರು. ಸಾಧಾರಣವಾಗಿ ವೋಲ್ವೋ ಬಸ್ಸಿನಲ್ಲಿ ಕಿಟಕಿಯ ಗಾಜುಗಳು ಸಂಪೂರ್ಣವಾಗಿ ಲಾಕ್ ಆಗಿರುತ್ತದೆ. ಹೀಗಿದ್ದರೂ ಬೆಂಕಿ ಕಾಣಿಸಿದ ಕೂಡಲೇ ಕೆಲ ಪ್ರಯಾಣಿಕರು ಗಾಜನ್ನು ಒಡೆದು ಕೆಳಗೆ ಹಾರಿ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್ ಗುದ್ದಿದ್ದಾಗ ಏನಾಯ್ತು?
– ಗ್ಯಾಸ್ ಸೋರಿಕೆ, ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿ
ಬಾಗಲಕೋಟೆ: ದೀಪಾವಳಿ (Deepavali) ಹಿನ್ನೆಲೆ ಮನೆ ಬಾಗಿಲಿನ ಬಳಿ ಹಚ್ಚಿದ ದೀಪದಿಂದ ಸಂಭವಿಸಿದ ಅಗ್ನಿ ಅವಘಡದಿಂದ (Fire Accident) 7 ಮಂದಿ ಗಾಯಗೊಂಡ ಘಟನೆ ಬಾಗಲಕೋಟೆ (Bagalkote) ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ.
ನಗರದ ರಾಜೇಂದ್ರ ತಪಶೆಟ್ಟಿಯವರ ಮನೆಯ ಎದುರು ದೀಪ ಹಚ್ಚಲಾಗಿತ್ತು. ದೀಪದಿಂದ ಮನೆ ಎದುರಿಗೆ ಚೆಲ್ಲಿದ್ದ ಆಯಿಲ್‌ಗೆ ತಗುಲಿ ಬೆಂಕಿ ಹೊತ್ತಿದೆ. ಇದರಿಂದ ಮನೆ ಮುಂದಿನ 3 ಬೈಕ್ ಸುಟ್ಟು ಕರಕಲಾಗಿವೆ. ಬಳಿಕ ಮನೆಗೆ ಬೆಂಕಿ ತಗುಲಿದ್ದು, ಅಡುಗೆ ಮನೆಯ ಸಿಲಿಂಡರ್ ಕೂಡ ಸೋರಿಕೆಯಾಗಿದೆ. ಇದರಿಂದ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಖಾಸಗಿ ವಸತಿ ಶಾಲೆಯಲ್ಲಿ ಅಗ್ನಿ ಅವಘಡ – ವಿದ್ಯಾರ್ಥಿ ಸಜೀವ ದಹನ
ತಪಶೆಟ್ಟಿ ಕುಟುಂಬಸ್ಥರು ಮನೆ ಬಿಟ್ಟು ಹೊರಗೆ ಬಂದು ಬಚಾವ್ ಆಗಿದ್ದಾರೆ. ಮೇಲ್ಮಹಡಿಯಲ್ಲಿದ್ದ 7 ಮಂದಿಗೆ ಬೆಂಕಿಯ ಜಳದಿಂದ ಸಣ್ಣಪುಟ್ಟಗಾಯಗಳಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಯಚೂರು: ಬೆಂಗಳೂರಿನಿಂದ (Bengaluru) ರಾಯಚೂರಿಗೆ ಬರುತ್ತಿದ್ದ ಖಾಸಗಿ ಎಸಿ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡ ಹಿನ್ನೆಲೆ ಟ್ರಾವೆಲ್ ಏಜೆನ್ಸಿ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಖಾಸಗಿ ಟ್ರಾವೆಲ್ ಏಜೆನ್ಸಿ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಕಂಡಿಷನ್‌ನಲ್ಲಿಲ್ಲದ ಬಸ್ ಬಿಟ್ಟಿದ್ದಲ್ಲದೇ, ಚಾಲಕನ ನಿರ್ಲಕ್ಷ್ಯದಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಅದಲ್ಲದೇ ಶಾಲಾ-ಕಾಲೇಜು ದಾಖಲೆಗಳು, ಚಿನ್ನಾಭರಣ, ಮೊಬೈಲ್, ಲ್ಯಾಪ್‌ಟಾಪ್, ನಗದು ಬೆಂಕಿಗಾಹುತಿಯಾಗಿವೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಂದ ಹೊರಟಿದ್ದ ಖಾಸಗಿ ಬಸ್ ಏಕಾಏಕಿ ಬೆಂಕಿಗಾಹುತಿ – 36 ಮಂದಿ ಪ್ರಯಾಣಿಕರು ಸೇಫ್
ಸದ್ಯ ಬಸ್ ಚಾಲಕನನ್ನ ಅನಂತಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಕಿ ಹೊತ್ತಿಕೊಂಡಿದ್ದು ಹೇಗೆ?
ಗ್ರೀನ್ ಲೈನ್ ಟ್ರಾವೆಲ್ಸ್‌ಗೆ ಸೇರಿದ ಈ ಬಸ್ ಬೆಂಗಳೂರು-ಅನಂತಪುರ ಹೈವೇನಲ್ಲಿ ಹೊರಟಿತ್ತು. ಈ ವೇಳೆ ಟಯರ್ ಬ್ಲಾಸ್ಟ್ ಆಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬ್ಲಾಸ್ಟ್ ಆಗುತ್ತಿದ್ದಂತೆ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನೂ ಬಿಟ್ಟು ಬಸ್‌ನಿಂದ ಜಿಗಿದಿದ್ದಾರೆ. ಹೀಗಾಗಿ ಪ್ರಯಾಣಿಕರ ಸಂಪೂರ್ಣ ಲಗೇಜ್‌ಗಳು ಬೆಂಕಿಗೆ ಆಹುತಿಯಾಗಿದೆ. ವಿದ್ಯಾರ್ಥಿಗಳ ಪ್ರಮಾಣ ಪತ್ರ, ದುಬಾರಿ ವಸ್ತುಗಳು ಸುಟ್ಟು ಭಸ್ಮವಾಗಿದೆ.
ಬಸ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದರೂ ಚಾಲಕ ನಿರ್ಲಕ್ಷ್ಯ ವಹಿಸಿದ್ದಾನೆ. ಇದೇ ವೇಳೆ ನಿದ್ರೆ ಮಂಪರಿನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಎಚ್ಚರವಾಗಿದೆ. ಕೂಡಲೇ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ಕಿರುಚಿದ್ದಾರೆ. ಆದಾಗ್ಯೂ ಡ್ರೈವರ್ ಅರ್ಧ ಕಿಮೀ ಬಸ್ ನಿಲ್ಲಿಸದೇ ಹೊರಟಿದ್ದಾನೆ ಎಂಬ ಆರೋಪ ಕೂಡ ಕೇಳಿಬಂದಿದೆ. ಸದ್ಯ ಪ್ರಯಾಣಿಕರು ಸೇಫ್ ಆಗಿದ್ದರೂ, ಅವರ ಬಳಿಯಿದ್ದ ಮಹತ್ವದ ದಾಖಲೆಗಳು, ಹಬ್ಬಕ್ಕೆ ಕೊಂಡೊಯ್ಯುತ್ತಿದ್ದ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿದೆ. ಹೀಗಾಗಿ ಪ್ರಯಾಣಿಕರು ಗ್ರೀನ್‌ಲೈನ್ ಟ್ರಾವೆಲ್ಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ – ತೀರ್ಥರೂಪಿಣಿಯಾಗುವ ವಿಸ್ಮಯ ಕಾಣಲು ಜನ ಕಾತರ
ಬೆಂಗಳೂರು: ನಗರದಿಂದ ಹೊರಟಿದ್ದ ಖಾಸಗಿ ಬಸ್‌ವೊಂದು (Private Bus) ನಡು ರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆ ಅನಂತಪುರ ಜಿಲ್ಲೆಗೆ 15 ಕಿಮೀ ದೂರದಲ್ಲಿರುವ ಗರ‍್ಲದಿನ್ನೆಯಲ್ಲಿ ನಡೆದಿದೆ.
ಗ್ರೀನ್ ಲೈನ್ ಟ್ರಾವೆಲ್ಸ್‌ಗೆ ಸೇರಿದ ಈ ಬಸ್ ಬೆಂಗಳೂರು-ಅನಂತಪುರ ಹೈವೇನಲ್ಲಿ ಹೊರಟಿತ್ತು. ಈ ವೇಳೆ ಟಯರ್ ಬ್ಲಾಸ್ಟ್ ಆಗಿ ಏಕಾಏಕಿ ಬೆಂಕಿ (Bus Fire) ಹೊತ್ತಿಕೊಂಡಿದೆ. ಬ್ಲಾಸ್ಟ್ ಆಗುತ್ತಿದ್ದಂತೆ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನೂ ಬಿಟ್ಟು ಬಸ್‌ನಿಂದ ಜಿಗಿದಿದ್ದಾರೆ. ಹೀಗಾಗಿ ಪ್ರಯಾಣಿರ ಸಂಪೂರ್ಣ ಲಗೇಜ್‌ಗಳು ಬೆಂಕಿಗೆ ಆಹುತಿಯಾಗಿದೆ. ವಿದ್ಯಾರ್ಥಿಗಳ ಪ್ರಮಾಣ ಪತ್ರ, ದುಬಾರಿ ವಸ್ತುಗಳು ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ ಕಿಟಕಿಯಿಂದ ಕೈ ಹಾಕಿ ನಿದ್ದೆಯಲ್ಲಿದ್ದ ಮಹಿಳೆಯ ಚಿನ್ನದ ಸರ ಕಿತ್ತ ಕಳ್ಳ
ದೀಪಾವಳಿ ಹಬ್ಬಕ್ಕೆ ಹೊರಟಿದ್ದಾಗಲೇ ದುರಂತ
ಬಸ್‌ನಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ ಇತರ ಪ್ರಯಾಣಿಕರೂ ಇದ್ದರು. ಸಾಲು ಸಾಲು ರಜೆ ಇದ್ದ ಕಾರಣ ದೀಪಾವಳಿ ಹಬ್ಬಕ್ಕೆಂದು ಊರಿಗೆ ಹೊರಟಿದ್ದರು. ಟಯರ್ ಬ್ಲಾಸ್ಟ್ ಆಗಿ ತಡರಾತ್ರಿ 2:30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಆದ್ರೂ ಚಾಲಕ ನಿರ್ಲಕ್ಷ್ಯ ವಹಿಸಿದ್ದಾನೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಪ್ರಿಯಕರನಿಂದ ವಿದ್ಯಾರ್ಥಿನಿಯ ಬರ್ಬರ ಕೊಲೆ
ಮಹಿಳೆಯ ಸಮಯಪ್ರಜ್ಞೆ ಉಳಿಸಿತು 36 ಜೀವ
ಬಸ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದರೂ ಚಾಲಕ ನಿರ್ಲಕ್ಷ್ಯ ವಹಿಸಿದ್ದಾನೆ. ಇದೇ ವೇಳೆ ನಿದ್ರೆ ಮಂಪರಿನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಎಚ್ಚರವಾಗಿದೆ. ಕೂಡಲೇ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ಕಿರುಚಿದ್ದಾರೆ. ಆದಾಗ್ಯೂ ಡ್ರೈವರ್ ಅರ್ಧ ಕಿಮೀ ಬಸ್ ನಿಲ್ಲಿಸದೇ ಹೊರಟಿದ್ದಾನೆ ಎಂಬ ಆರೋಪ ಕೂಡ ಕೇಳಿಬಂದಿದೆ. ಸದ್ಯ ಪ್ರಯಾಣಿಕರು ಸೇಫ್ ಆಗಿದ್ದರೂ, ಅವರ ಬಳಿಯಿದ್ದ ಮಹತ್ವದ ದಾಖಲೆಗಳು, ಹಬ್ಬಕ್ಕೆ ಕೊಂಡೊಯ್ಯುತ್ತಿದ್ದ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿದೆ. ಹೀಗಾಗಿ ಪ್ರಯಾಣಿಕರು ಗ್ರೀನ್‌ಲೈನ್ ಟ್ರಾವೆಲ್ಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಎಲೆಕ್ಟ್ರಿಕ್ ಬೈಕ್ ಮುಕೇಶ್ ಎಂಬವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಬೈಕ್ ಹೊತ್ತಿ ಉರಿಯುತ್ತಿದ್ದಂದೆ, ಮನೆಯಲ್ಲಿದ್ದವರು ಟೆರಸ್ ಮೇಲೆ ಹೋಗಿದ್ದಾರೆ. ಘಟನೆಯಲ್ಲಿ ಒಂದು ಸೈಕಲ್ ಕೂಡ ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇವಿ ಬೈಕ್ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಇತ್ತೀಚೆಗೆ ಯಲಚೇನಹಳ್ಳಿಯ ಕಮರ್ಷಿಯಲ್ ಕಟ್ಟಡವೊಂದರ ಬೇಸ್ಮೆಂಟ್‌ನಲ್ಲಿದ್ದ ಇವಿ ಬೈಕ್ ಚಾರ್ಜಿಂಗ್ ಪಾಯಿಂಟ್ ಓವರ್ ಹೀಟ್ ಆಗಿ ಅಲ್ಲಿದ್ದ ಬೈಕ್‌ಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಜೊತೆಗೆ ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಆರು ಸಿಲಿಂಡರ್‌ಗಳ ಗ್ಯಾಸ್ ಸೋರಿಕೆಯಾಗಿದ್ದು, ಒಂದು ಸಿಲಿಂಡರ್ ಬ್ಲಾಸ್ಟ್ ಆಗಿತ್ತು. ಇದನ್ನೂ ಓದಿ: ಬೆಂಗ್ಳೂರಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ ಶೋರೂಂ – 70 ಬೈಕ್‌ಗಳು ಭಸ್ಮ
ರಾಮನಗರ: ಬಿಡದಿ (Bidadi) ಸಮೀಪದ ಬೀಮೇನಹಳ್ಳಿ ಬಳಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ (Fire Accident) ಗಾಯಗೊಂಡಿದ್ದ 7 ಕಾರ್ಮಿಕರ ಪೈಕಿ, 4 ಮಂದಿ ಕಾರ್ಮಿಕರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಜಾಯಿದ್ ಅಲಿ, ಶಪೀಜುಲ್ ಶೇಕ್, ಮನ್ರೂಲ್ ಶೇಕ್, ಜಿಯಾಬುರ್ ಶೇಕ್ ಮೃತ ಕಾರ್ಮಿಕರಾಗಿದ್ದಾರೆ. ಮಂಗಳವಾರ (ಅ.7) ಶೆಡ್‌ನಲ್ಲಿ ಗ್ಯಾಸ್ ಲೀಕ್ ಆಗಿ ಈ ಅಗ್ನಿ ಅವಘಡ ಸಂಭವಿಸಿತ್ತು. ಈ ಅವಘಡದಲ್ಲಿ 7 ಮಂದಿಗೆ ಸುಟ್ಟಗಾಯಗಳಾಗಿದ್ದವು. ಗಾಯಾಳುಗಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಆಗಿದ್ದ ದರ್ಶನ್ ಸಾಂಗ್ ರಿಲೀಸ್
ಗಾಯಗೊಂಡ ಮೂವರು ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಕಟ್ಟಡ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯ ಕಾರಣ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ಸೂಕ್ತ ಪರಿಹಾರಕ್ಕೆ ಒತ್ತಾಯಿಸಿವೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕನಕರಾಜನಾದ ನಟ ಅನೂಪ್ ರೇವಣ್ಣ – ಇದು ಸಿಎಂ ಅಭಿಮಾನಿ ಸ್ಟೋರಿ
– ತಪ್ಪಿಸಿಕೊಳ್ಳಲು ಯತ್ನಿಸಿದಾಕೆ ಬಾತ್ ರೂಮಲ್ಲಿ ಉಸಿರುಗಟ್ಟಿ ಸಾವು
– ಒಂದು ವಾರದಿಂದಲೂ ಲಾಡ್ಜ್‌ನಲ್ಲಿ ಉಳಿದಿದ್ದ ಬಗ್ಗೆ ಮಾಹಿತಿ
ಬೆಂಗಳೂರು: ಬೆಂಗಳೂರಿನ ಯಲಹಂಕ ನ್ಯೂಟೌನ್‌ನ (Yelahanka New Town) ಲಾಡ್ಜ್ ನಲ್ಲಿ ಬೆಂಕಿ ಅವಘಡ ಉಂಟಾಗಿ ಗದಗ ಮೂಲದ ರಮೇಶ್ ಮತ್ತು ಕಾವೇರಿ ಅನ್ನೋರು ಸಾವನ್ನಪ್ಪಿದ್ದಾರೆ.
ಇಂದು ಸಂಜೆ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಲಾಡ್ಜ್ ನಲ್ಲಿ ಬೆಂಕಿ (Yelahanka Lodge Fire) ಹೊತ್ತಿಕೊಂಡ ತಕ್ಷಣ ಅಲ್ಲಿನ ಸಿಬ್ಬಂದಿ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆದ ವೇಳೆ ರಮೇಶ್ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದು, ಯುವತಿ ಕಾವೇರಿ ಉಸಿರುಗಟ್ಡಿ ಸಾವನ್ನಪ್ಪಿರೋದು ಗೊತ್ತಾಗಿದೆ. ಇದನ್ನೂ ಓದಿ: ಯಲಹಂಕ ಲಾಡ್ಜ್‌ನಲ್ಲಿ ಅಗ್ನಿ ದುರಂತ – ಪೆಟ್ರೋಲ್ ಸುರಿದುಕೊಂಡು ಪ್ರೇಮಿಗಳ ಆತ್ಮಹತ್ಯೆ
ಇವರಿಬ್ಬರು ಪ್ರೇಮಿಗಳು ಅಂತ ಹೇಳಲಾಗ್ತಿದೆ. ಇಬ್ಬರ ನಡುವೆ ಜಗಳ ನಡೆದು ರಮೇಶ್ ಪೆಟ್ರೋಲ್ ಸುರಿದುಕೊಂಡು ಯುವತಿಗೂ ಪೆಟ್ರೋಲ್ ಸುರಿಯೋಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ಬಾತ್ ರೂಂ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಆಗ ರಮೇಶ್ ತಾನು ಬೆಂಕಿ ಹಚ್ಚಿಕೊಂಡು ಬಾತ್ ರೂಂ ಬಾಗಿಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದಲೇ ಲಾಡ್ಜ್ ಪೂರ್ತಿ ಬೆಂಕಿ ಆವರಿಸಿಕೊಂಡಿದೆ ಅನ್ನೋ ಶಂಕೆ ವ್ಯಕ್ತವಾಗಿದೆ. ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರು ತನಿಖೆ ಕೈಗೊಂಡಿದ್ದು, ಇದು ಆತ್ಮಹತ್ಯೆ ನಾ ಅಥವಾ ಬೆಂಕಿಯ ಅವಘಡ ದಿಂದ ನಡೆದಿದ್ಯಾ ಅನ್ನೋದು ಗೊತ್ತಾಗಬೇಕಿದೆ. ಇದನ್ನೂ ಓದಿ: ವೀರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ – 51 ಕೋಟಿ ಮೌಲ್ಯದ 40 ಕೆಜಿ ಚಿನ್ನದ ಗಟ್ಟಿ ವಶ
ಯುವಕ-ಯುವತಿ ಒಂದು ವಾರದಿಂದ ಲಾಡ್ಜ್‌ನಲ್ಲಿದ್ದರು ಎಂಬ ಮಾಹಿತಿ ಕೂಡ ಇದೆ. ಇಂದು 3 ಗಂಟೆ ಸುಮಾರಿಗೆ ಯುವಕ ರಮೇಶ್ ಹೊರಗಿನಿಂದ ಪೆಟ್ರೋಲ್ ತೆಗೆದುಕೊಂಡು ಬಂದಿದ್ದಾನೆ. ರೂಮ್ ಒಳಗೆ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೇಳೆ ರಮೇಶ್ ಪೆಟ್ರೋಲ್ ಸುರಿದುಕೊಂಡು ಯುವತಿಗೂ ಹಾಕಲು ಮುಂದಾಗಿದ್ದಾನೆ ಎಂದು ಹೇಳಲಾಗ್ತಿದೆ. ತನಿಖೆ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿ ಹೊರಬರಲಿದೆ. ಇದನ್ನೂ ಓದಿ: ಜಾತಿಗಣತಿಗೆ ತೆರಳಿದ್ದ ಶಿಕ್ಷಕನ ಮೇಲೆ ಬೀದಿ ನಾಯಿ ದಾಳಿ – ಕಾಲಿಗೆ ಗಂಭೀರ ಗಾಯ
– ಮನೆಯಲ್ಲಿ ಪ್ರೀತಿಗೆ ಒಪ್ಪದಿದ್ದಕ್ಕೆ ಲಾಡ್ಜ್‌ನಲ್ಲಿ ಆತ್ಮಹತ್ಯೆ
ಬೆಂಗಳೂರು: ಇಲ್ಲಿನ ಯಲಹಂಕ ನ್ಯೂ ಟೌನ್ (Yelahanka Lodge New Town) ವ್ಯಾಪ್ತಿಯಲ್ಲಿಂದು ಮಧ್ಯಾಹ್ನ ನಡೆದ ದಾರುಣ ಘಟನೆಯೊಂದು ನಡೆದಿದೆ. ಪ್ರೇಮಿಗಳಿಬ್ಬರು ಲಾಡ್ಜ್‌ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ಪರಿಣಾಮ ರೆಸ್ಟೋರೆಂಟ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಪ್ರೇಮಿಗಳು (Lovers) ಸಜೀವ ದಹನವಾಗಿದ್ದಾರೆ. ಘಟನೆ ಸ್ಥಳೀಯರನ್ನ ಬೆಚ್ಚಿ ಬೀಳುವಂತೆ ಮಾಡಿದೆ.
ಪ್ರೀತಿಗೆ ಮನೆಯವರ ವಿರೋಧ
ಅಗ್ನಿ ದುರಂತದಲ್ಲಿ ಮೃತಪಟ್ಟ ಪ್ರೇಮಿಗಳಿಬ್ಬರು ಕೆಲಸ ಮಾಡ್ತಿದ್ದರು. ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಯುವತಿ ಸ್ಪಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಇವರಿಬ್ಬರಿಗೂ ಹಲವು ವರ್ಷಗಳಿಂದ ಪ್ರೇಮ ಸಂಬಂಧವಿತ್ತು. ಆದರೆ ಮನೆಯವರಿಂದ ಈ ಸಂಬಂಧಕ್ಕೆ ಒಪ್ಪಿಗೆ ಸಿಗದ ಹಿನ್ನೆಲೆ ಸಾವಿನ ನಿರ್ಧಾರ ಕೈಗೊಂಡರು ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.
ಇಂದು ಮಧ್ಯಾಹ್ನ ಇಬ್ಬರೂ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ (Yelahanka New Town Police Station) ವ್ಯಾಪ್ತಿಯಲ್ಲಿರುವ ಕಿಚನ್-6 ಫ್ಯಾಮಿಲಿ ರೆಸ್ಟೋರೆಂಟ್ ಕಟ್ಟಡದ ಮೂರನೇ ಮಹಡಿಯಲ್ಲಿರುವ ಲಾಡ್ಜ್‌ಗೆ ಬಂದಿದ್ದರು. ಲಾಡ್ಜ್‌ನಲ್ಲಿ ಕೊಠಡಿ ಪಡೆದ ಕೆಲವೇ ಸಮಯದಲ್ಲಿ, ಪೆಟ್ರೋಲ್ ತಂದು ತಮ್ಮ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ಯುವಕ ಮತ್ತು ಯುವತಿ ಚೀರಾಡಿದ ಧ್ವನಿ ಕೇಳಿ ಲಾಡ್ಜ್ ಸಿಬ್ಬಂದಿ ದೌಡಾಯಿಸಿದ್ದಾರೆ. ತಕ್ಷಣ ಅಲ್ಲಿನ ಸಿಬ್ಬಂದಿ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಂತರ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
ಉಸಿರುಗಟ್ಟಿ ಯುವತಿ ಸಾವು
ಸದ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಯಲಹಂಕ ನ್ಯೂ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆದ ವೇಳೆ ರಮೇಶ್ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದು, ಯುವತಿ ಕಾವೇರಿ ಉಸಿರುಗಟ್ಡಿ ಸಾವನ್ನಪ್ಪಿರೋದು ಗೊತ್ತಾಗಿದೆ. ಇವರಿಬ್ಬರು ಪ್ರೇಮಿಗಳು ಅನ್ನೋ ಶಂಕೆ ಕೂಡ ವ್ಯಕ್ತವಾಗಿದೆ. ಇಬ್ಬರ ನಡುವೆ ಜಗಳ ನಡೆದು ರಮೇಶ್ ಪೆಟ್ರೋಲ್ ಸುರಿದುಕೊಂಡು ಯುವತಿಗೂ ಪೆಟ್ರೋಲ್ ಸುರಿಯೋಕೆ ಯತ್ನಿಸಿದ್ದಾನೆ.
ಈ ವೇಳೆ ಯುವತಿ ಬಾತ್ ರೂಂ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಆಗ ರಮೇಶ್ ತಾನು ಬೆಂಕಿ ಹಚ್ಚಿಕೊಂಡು ಬಾತ್ ರೂಂ ಬಾಗಿಲಿಗೂ ಪೆಟ್ರೋಲ್ ಸುರಿದು ಬೆಂಕಿಹಾಕಿದ್ದಾನೆ. ಅದರಿಂದಲೇ ಲಾಡ್ಜ್ ಪೂರ್ತಿ ಬೆಂಕಿ ಅವರಿಸಿಕೊಂಡಿದೆ ಅನ್ನೋ ಶಂಕೆ ವ್ಯಕ್ತವಾಗಿದೆ. ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರು ತನಿಖೆ ಕೈಗೊಂಡಿದ್ದು, ಇದು ಆತ್ಮಹತ್ಯೆ ನಾ ಅಥವಾ ಬೆಂಕಿಯ ಅವಘಡ ದಿಂದ ನಡೆದಿದ್ಯಾ ಅನ್ನೋದು ಗೊತ್ತಾಗಬೇಕಿದೆ.