ಸಾಮಾಜಿಕ ಜಾಲತಾಣಗಳಲ್ಲಿ ತಿಮರೋಡಿ ಗಡಿಪಾರು ವಿರುದ್ಧ ಪ್ರತಿಭಟನೆ ಅಂತಾ ಕರೆ ನೀಡಲಾಗಿತ್ತು. ಪೊಲೀಸರಿಂದ ಅನುಮತಿ ಸಿಗದೇ ಇದ್ದರೂ ಜನ ಸೇರುವಂತೆ ಕರೆ ಕೊಡಲಾಗಿತ್ತು. ಇದರಿಂದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.
– ಸಿಎಂ ಆಗಿ ಮುಂದುವರಿಯುವುದರಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ
ಮಂಗಳೂರು/ಬೆಂಗಳೂರು: ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು (Hatred Speech) ಯಾರು ಮಾಡಿದರೂ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಅವರ ಭಾಷಣದ ಬಗ್ಗೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದ್ವೇಷಪೂರಿತ ಭಾಷಣ ಮಾಡುವವರ ಮೇಲೆ ಎಫ್‌ಐಆರ್ ದಾಖಲಾಗುತ್ತದೆ. ಅವರು ಭಾಷಣದಲ್ಲಿ ಮಹಿಳೆಯರಿಗೆ ಅಗೌರವವಾಗಿ ಮಾತನಾಡಿದ್ದಾರೆ ಎಂದರು. ಇದನ್ನೂ ಓದಿ: CJI ಗವಾಯಿ ಮೇಲೆ ಶೂ ಎಸೆದ ಕೇಸ್ – ಆರೋಪಿ ರಾಕೇಶ್‌ಗೆ ನೋಟಿಸ್ ನೀಡಲು ನಿರಾಕರಿಸಿದ ಸುಪ್ರೀಂ
ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್‌ಐಟಿ ವರದಿ ಸಲ್ಲಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಎಸ್‌ಐಟಿಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಈ ತಿಂಗಳಾಂತ್ಯದಲ್ಲಿ ಎಸ್‌ಐಟಿ ವರದಿಯ ಸಲ್ಲಿಕೆಯಾಗಲಿದೆ ಎಂದು ಎಸ್‌ಐಟಿ ಹೇಳಿದೆ ಎಂದು ಗೃಹಸಚಿವರು ತಿಳಿಸಿರುವುದಾಗಿ ಹೇಳಿದರು. ಇದನ್ನೂ ಓದಿ: ಡಿಕೆಶಿ, JDS ಟ್ರಂಕ್ ವಾರ್ – ಹೆಚ್‌ಡಿಕೆ ಸಾಧನೆ ಪಟ್ಟಿ ಬಿಡುಗಡೆ ಮಾಡಿ ಟಾಂಗ್
ವಾರ್ತಾ ಇಲಾಖೆಗೆ ವಾಹನ ಸೌಲಭ್ಯದ ಬಗ್ಗೆ ಪ್ರತಿಕ್ರಿಯೆ ನೀಡಿ, ಪತ್ರಕರ್ತರ ಅನುಕೂಲಕ್ಕಾಗಿ ವಾರ್ತಾ ಇಲಾಖೆ ವಾಹನ ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಇದನ್ನೂ ಓದಿ: 21 ವರ್ಷದ ಬಳಿಕ ದೇಶಾದ್ಯಂತ ಎಸ್‌ಐಆರ್: ಚುನಾವಣಾ ಆಯೋಗ
ಹೈಕಮಾಂಡ್‌ನದ್ದೇ ಅಂತಿಮ ತೀರ್ಮಾನ:
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿವಿಧ ಸಚಿವರು ಹೇಳಿಕೆ ನೀಡುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾ, ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಗಳ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದಾಗಿದೆ. ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿಯೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ತಿಳಿಸಿದರು. ಇದನ್ನೂ ಓದಿ: ಬ್ರಿಮ್ಸ್ ವೈದ್ಯರಿಗೆ 9 ತಿಂಗಳಿಂದ ನೋ ಸ್ಯಾಲರಿ – ಇತ್ತ ನೋಟಿಸ್ ನೀಡದೇ 40 ವೈದ್ಯರು ಕೆಲಸದಿಂದ ವಜಾ
– ಅಪ್ಪನಿಗೆ ನನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಇದೆ
– ಪುತ್ರನ ಹಳೆಯ ವಿಡಿಯೋ ವೈರಲ್ ಬಳಿಕ ಎಫ್‌ಐಆರ್
ಚಂಡೀಗಢ: ಪಂಜಾಬ್‌ನ ರಾಜಕೀಯ ಹಾಗೂ ಪೊಲೀಸ್ ವಲಯಯದಲ್ಲೇ ಬೆಚ್ಚಿಬೀಳಿಸುವ ಪ್ರಕರಣವೊಂದರಲ್ಲಿ ಮಾಜಿ ಸಚಿವೆ ರಜಿಯಾ ಸುಲ್ತಾನ (Razia Sultana) ಹಾಗೂ ಅವರ ಪತಿ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ (Mohammed Mustafa) ವಿರುದ್ಧ ಮಗನನ್ನೇ ಹತ್ಯೆಗೈದ ಪ್ರಕರಣ ದಾಖಲಾಗಿದೆ. ಪುತ್ರ ಅಖಿಲ್ ಅಖ್ತರ್ (33) ಸಾವಿನ ಹಲವು ದಿನಗಳ ನಂತರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಬಳಿಕ ಕೊಲೆ ಪ್ರಕರಣ ದಾಖಲಾಗಿದೆ.
ಹೌದು. ಅಖಿಲ್ ಅಖ್ತರ್ (Aqil Akhtar) ನಿಗೂಢವಾಗಿ ಮೃತಪಟ್ಟ ಪ್ರಕರಣ ಈಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಅಖಿಲ್ ಅಖ್ತರ್ ಗುರುವಾರ ತಡರಾತ್ರಿ ಪಂಚಕುಲದ ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕುಟುಂಬ ಸದಸ್ಯರು ಅವರನ್ನ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಅವರನ್ನ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಮಿತಿಮೀರಿದ ಡ್ರಗ್ಸ್ ಸೇವನೆಯಿಂದ ಅಖಿಲ್ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಹೇಳಿಕೊಂಡಿದೆ. ಯಾವುದೋ ಔಷಧ ಸೇವನೆಯಿಂದ ಆರೋಗ್ಯ ಸಮಸ್ಯೆಗೊಳಗಾಗಿ ಅಖಿಲ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದ್ದರು.
ಮಗನ ಹೆಂಡ್ತಿ ಜೊತೆಯೇ ಅಕ್ರಮ ಸಂಬಂಧ
ಅಖಿಲ್ ಅಖ್ತರ್ ನಿಗೂಢವಾಗಿ ಮೃತಪಟ್ಟ ಬೆನ್ನಲ್ಲೇ ಅಖಿಲ್ ಪತ್ನಿ ಹಾಗೂ ಆತನ ತಂದೆ ಮಧ್ಯೆ ಅನೈತಿಕ ಸಂಬಂಧವಿತ್ತು ಎಂಬ ಆರೋಪಗಳು ಕೇಳಿಬಂದಿದೆ. ಅಖಿಲ್ ರೆಕಾರ್ಡ್ ಮಾಡಿದ್ದ ಹಳೆಯ ವಿಡಿಯೋವೊಂದು ವೈರಲ್ (Old Video Viral) ಆದ ಪ್ರಕರಣಕ್ಕೆ ಈ ತಿರುವು ಸಿಕ್ಕಿದೆ.
ವೀಡಿಯೊದಲ್ಲಿ, ʻನನ್ನ ತಂದೆ ಹಾಗೂ ನನ್ನ ಪತ್ನಿಯ ನಡ್ವೆ ಅನೈತಿಕ ಸಂಬಂಧವಿದೆ. ನಾನು ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದೇನೆ. ನನಗೇನು ಮಾಡಬೇಕೆಂದು ತೋಚುತ್ತಿಲ್ಲ. ಅವರು ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಬಹುದು ಎಂದು ನನಗೆ ಪ್ರತಿದಿನ ಆತಂಕವಾಗುತ್ತಿದೆ. ನನ್ನ ತಾಯಿ ರಜಿಯಾ, ಸಹೋದರಿ ನನ್ನ ವಿರುದ್ಧದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ನನ್ನ ತಂದೆಗೆ ನನ್ನ ಮದುವೆಗೆ ಮುಂಚೆಯೇ ನನ್ನ ಪತ್ನಿಯ ಪರಿಚಯವಿತ್ತು ಎಂಬ ಅನುಮಾನ ನನಗಿದೆ. ಅವಳು ನನ್ನನ್ನ ಮದುವೆಯಾಗಲಿಲ್ಲ, ಅವಳು ನನ್ನ ತಂದೆಯನ್ನ ಮದುವೆಯಾದಳು. ನನ್ನ ಕುಟುಂಬದ ಸದಸ್ಯರು ನಾನು ಭ್ರಮೆಯಲ್ಲಿ ಬದುಕುತ್ತಿದ್ದೇನೆ ಎಂದು ಹೇಳುತ್ತಿದ್ದರು. ನನ್ನನ್ನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ರು. ನಾನು ಮಾನಸಿಕವಾಗಿ ಸ್ಥಿರವಾಗಿಲ್ಲದಿದ್ದರೆ ನನ್ನನ್ನ ವೈದ್ಯರ ಬಳಿಗೆ ಕರೆದೊಯ್ಯಬೇಕಿತ್ತು. ಆದರೆ ಅವರು ನನ್ನನ್ನು ಪುನರ್ವಸತಿ ಕೇಂದ್ರಕ್ಕೆ ಕಳಹಿಸಿದರು ಎಂದು ಅಖಿಲ್ ವಿಡಿಯೋದಲ್ಲಿ ಆರೋಪಿಸಿದ್ದರು.
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಉಪ ಪೊಲೀಸ್ ಆಯುಕ್ತೆ ಸೃಷ್ಟಿ ಗುಪ್ತಾ, ಅಖಿಲ್ ಕೇಸ್‌ನಲ್ಲಿ ಕುಟುಂಬದವರ ಪಾತ್ರ ಇದೆ ಅಂತ ನಮಗೆ ದೂರು ಬಂದಿತ್ತು. ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಹಾಗೂ ಕೆಲ ವಿಡಿಯೋಗಳು ಇನ್ನಷ್ಟು ಅನುಮಾನ ಹುಟ್ಟುಹಾಕಿದವು. ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆಗೆ ವಿಶೇಷ ತಂಡವನ್ನೂ ಕೂಡ ರಚನೆ ಮಾಡಿದ್ದೇವೆ. ತನಿಖಾ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದರು.
ಮಲೇರ್ಕೋಟ್ಲಾ ಕ್ಷೇತ್ರದ ಮಾಜಿ ಶಾಸಕಿ ರಜಿಯಾ ಸುಲ್ತಾನ ಅವರು 2017-2022ರ ವರೆಗೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. 2022ರ ರಾಜ್ಯ ಚುನಾವಣೆಯಲ್ಲಿ ಅವರು ಮಲೇರ್ಕೋಟ್ಲಾದಲ್ಲಿ ಪರಾಭವಗೊಂಡರು.
ರಾಯಚೂರು: ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಪದಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ರಮೇಶ್ ಕತ್ತಿ (Ramesh Katti) ವಿರುದ್ಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ನಿನ್ನೆ ವಾಲ್ಮಿಕಿ ಸಮುದಾಯದ ಮುಖಂಡರು, ಯುವಕರು ಜಿಲ್ಲೆಯ ಹಲವೆಡೆ ಪ್ರತಿಭಟನೆ ಮಾಡಿ ವಿವಿಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರಲ್ಲಿ ರಾಯಚೂರು ಗ್ರಾಮೀಣ ಠಾಣೆಯಲ್ಲಿ ವಾಲ್ಮೀಕಿ ಸಮುದಾಯದ (Valmiki Community) ಕಾಶೀನಾಥ್ ಎಂಬುವವರು ದೂರು ದಾಖಲಿಸಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ವಾಲ್ಮೀಕಿ ಸಮುದಾಯದ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವ ಆರೋಪ ಹಿನ್ನೆಲೆ ರಮೇಶ್ ಕತ್ತಿ ವಿರುದ್ಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲು ಸಾಲು ದೂರು, ಜಾತಿನಿಂದನೆ ಪ್ರಕರಣ
ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಪದಬಳಕೆ ಮಾಡಿದ್ದ ರಮೇಶ್ ಕತ್ತಿಗೆ ಸಂಕಷ್ಟ ಎದುರಾಗಿದೆ. ವಾಲ್ಮೀಕಿ ಸಮಾಜದ ಮುಖಂಡರು ಸಾಲು ಸಾಲು ದೂರು ದಾಖಲಿಸಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲೂ ಅಟ್ರಾಸಿಟಿ ದಾಖಲಾಗಿತ್ತು. ನಿನ್ನೆ ಬಾಗಲಕೋಟೆಯ ಮುಧೋಳ, ದಾವಣಗೆರೆ, ಬಳ್ಳಾರಿಯಲ್ಲಿ ಜಾತಿನಿಂದನೆ ಕೇಸ್‌ಗಳು ದಾಖಲಾಗಿವೆ. ರಮೇಶ್ ಕತ್ತಿ ಅವಹೇಳನಕಾರಿ ಪದಬಳಕೆ ಖಂಡಿಸಿ ಇಂದು ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದಿಂದ ಪ್ರತಿಭಟನೆಗೆ ಕರೆ ಕೊಡಲಾಗಿತ್ತು. ಬಾಗಲಕೋಟೆಯ ಮುಧೋಳದಲ್ಲಿ ವೀರ ಸಿಂಧೂರ ಲಕ್ಷ್ಮಣ ಯುವಸೇನೆ ಪ್ರತಿಭಟನೆ ನಡೆಸಿ ಕತ್ತಿ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಕತ್ತಿ ಬಂಧನಕ್ಕೆ ಆಗ್ರಹಿಸಿ ಮುಧೋಳ ನಗರ ಠಾಣೆಯಲ್ಲಿ ಜಾತಿನಿಂದನೆ ಕೇಸ್ ದಾಖಲಿಸಿದ್ರು. ಇತ್ತ ಬೆಳಗಾವಿಯ ಗೋಕಾಕ್ ಪಟ್ಟಣದಲ್ಲಿ ಸಾವಿರಾರು ಜನ ಮಾನವ ಸರಪಳಿ ನಿರ್ಮಿಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯ್ತು. ರಮೇಶ್ ಕತ್ತಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು. ಹಾವೇರಿಯಲ್ಲಿ ವಾಲ್ಮೀಕಿ ಸಮುದಾಯದಿಂದ ಪ್ರತಿಭಟನಾ ಮೆರವಣಿಗೆ ನಡೀತು. ರಮೇಶ್ ಕತ್ತಿ ವಿರುದ್ಧ ಹರಿಹರ ತಾಲೂಕಿನ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಕ್ರೋಶ ಹೊರಹಾಕಿದ್ರು.
ಬೆಂಗಳೂರು: ಕುರುಬರ ಎಸ್ಟಿ ಮೀಸಲಾತಿಯ ಬಗ್ಗೆ ಮಾತನಾಡಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಮತ್ತು ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ಶ್ರೀವತ್ಸ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನ (Bengaluru) ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಪರಿಶಿಷ್ಟ ಪಂಗಡ ಮತ್ತು ವಾಲ್ಮೀಕಿ ಸಮುದಾಯದವರು ಕುರುಬ ಸಮುದಾಯದ ಬಗ್ಗೆ ದಂಗೆ ಏಳಬೇಕು ಅಂತ ಎಂಎಲ್‌ಸಿ ಹಾಗೂ ಶಾಸಕರು ಹೇಳಿಕೆ ಕೊಟ್ಟಿದ್ರು. ಈ ಸಂಬಂಧ ಕುರುಬ ಸಮುದಾಯದ ಮುಖಂಡ ಸಿದ್ದಣ್ಣ ತೇಜಿ, ಡಿಜಿ & ಐಜಿಪಿಗೆ ದೂರು ನೀಡಿದ್ದರು. ಇದನ್ನೂ ಓದಿ: ಸೆ.22 ರಿಂದ ಜಾತಿ ಜನಗಣತಿ ಆರಂಭ – ಸರ್ಕಾರದಿಂದ ಅಧಿಕೃತ ಆದೇಶ ಜಾರಿ
ಕೊಪ್ಪಳ: ದಲಿತ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಕಳೆದ ಎರಡು ದಿನಗಳ ಹಿಂದೆ ಯತ್ನಾಳ್ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಹಿಂದೂಗಳ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡಲಿರುವ ಬಾನು ಮುಷ್ತಾಕ್ ವಿರುದ್ಧ ಮಾತನಾಡುವ ಭರಾಟೆಯಲ್ಲಿ ಸನಾತನ ಧರ್ಮದವರು ಮಾತ್ರ ತಾಯಿ ಚಾಮುಂಡಿಗೆ ಹೂ ಮುಡಿಸಬೇಕು ಹೊರತು ಒಬ್ಬ ದಲಿತ ಮಹಿಳೆಗೂ ಅವಕಾಶ ಕೊಡಲ್ಲ ಎಂದು ಹೇಳಿಕೆ ನೀಡಿ ದಲಿತ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದಲಿತ ಹೆಣ್ಣುಮಕ್ಕಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿರುವುದು ದಲಿತ ಸಮುದಾಯಕ್ಕೆ ನೋವಾಗಿದೆ. ಅವರು ಮಾತನಾಡಿರುವ ವಿಡಿಯೋ ಆಧಾರದಲ್ಲಿ ಅವರ ವಿರುದ್ಧ SC/ST ಜಾತಿನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಮತ್ತು ಯತ್ನಾಳ್ ಅವರು ರಾಜ್ಯದ ಹಲವು ಜಿಲ್ಲೆಗಳಿಗೆ ತೆರಳಿ ಕೋಮು ಸಂಘರ್ಷ ಸೃಷ್ಟಿಸುವಂತಹ ಹೇಳಿಕೆ ನೀಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಮದುವೆ ವಿಚಾರಕ್ಕೆ ಗಲಾಟೆ; ಮನನೊಂದು ಯುವತಿ ಆತ್ಮಹತ್ಯೆ – ರಕ್ಷಣೆಗೆ ಹೋದ ತಾಯಿಯೂ ಸಾವು
ತುಮಕೂರು: ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಶನಿವಾರ (ಸೆ.13) ತುಮಕೂರಿನಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ, ಅನ್ಯಕೋಮಿನ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಪೊಲೀಸ್ ಸಿಬ್ಬಂದಿ ರಘುನಾಥ್ ಎಂಬುವವರು ದೂರು ನೀಡಿದ್ದು, ದೂರಿನನ್ವಯ ತುಮಕೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ಗವಿ ಆಂಜನೇಯ ದೇವಸ್ಥಾನ ಹತ್ತಿರ ಪ್ರತಿಷ್ಠಾಪಿಸಲಾದ ಹಿಂದೂ ಮಹಾಗಣಪತಿಗೆ ಇಂದು ಪೂಜೆ ಸಲ್ಲಿಸಿ ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಿದ ಬಳಿಕ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದೆ. ಇದಕ್ಕೂ ಮೊದಲು ಅತ್ಯಂತ ಅದ್ದೂರಿಯಾಗಿ ಪಟ್ಟಣಕ್ಕೆ ಸ್ಬಾಗತಿಸಿ, ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಗಣೇಶ ಮಂಟಪಕ್ಕೆ… pic.twitter.com/yG0IsxgWIH
ಎಫ್‌ಐಆರ್ ದಾಖಲಾಗುವ ಮುನ್ನ ತುಮಕೂರು ಶೋಭಾಯಾತ್ರೆಯಲ್ಲಿ ಭಾಷಣ ಮಾಡಿದ್ದ ಯತ್ನಾಳ್, ನನ್ನ ವಿರುದ್ಧ ಮದ್ದೂರಿನಲ್ಲಿ 70ನೇ ಪ್ರಕರಣ ದಾಖಲಾಗಿದೆ. ಇದೀಗ ತುಮಕೂರಿನಲ್ಲಿ 71ನೇ ಪ್ರಕರಣ ದಾಖಲಾಗಬಹುದು ಎಂದು ಹೇಳಿದ್ದರು ಎನ್ನಲಾಗಿದೆ.
ಕೋಲಾರ: ಬಿಜೆಪಿಯವರ ವಿರುದ್ಧ ನೂರು ಎಫ್‌ಐಆರ್ (FIR) ದಾಖಲು ಮಾಡಿದರೂ ಹೆದರಲ್ಲ ಎಂದು ಕೋಲಾರ (Kolar) ಮಾಜಿ ಸಂಸದ ಎಸ್.ಮುನಿಸ್ವಾಮಿ (S Muniswamy) ಹೇಳಿದ್ದಾರೆ.
ಕೋಲಾರದ ಹೊರವಲಯದ ರತ್ನ ಕನ್ವೆನ್ಷನ್ ಹಾಲ್‌ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸೇವಾ ಪ್ರಾಕ್ಷಿಕ ಕಾರ್ಯಾಗಾರದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ನಲ್ಲಿ 42 ಸಂಘಟನೆಗಳಿವೆ. ಅದರಲ್ಲಿ ಭಾರತೀಯ ಜನತಾ ಪಾರ್ಟಿ ಒಂದು. ದೇಶ ಮತ್ತು ಧರ್ಮದ ರಕ್ಷಣೆಗೆ ಆರ್‌ಎಸ್‌ಎಸ್ ಹುಟ್ಟಿರೋದು, ದೇಶಕ್ಕೋಸ್ಕರ ಪ್ರಾಣ ಕೊಡಲು ಸಿದ್ಧ. ವೋಟ್ ಬ್ಯಾಂಕ್‌ಗೋಸ್ಕರ ಸಿದ್ದರಾಮಯ್ಯ ಒಂದು ಸಮುದಾಯವನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ನಿಮ್ಮ ಜೊತೆಗಿದ್ದೇನೆ: ಮಣಿಪುರ ಜನರಿಗೆ ಪ್ರಧಾನಿ ಮೋದಿ ಭರವಸೆ
ಒಂದಲ್ಲ ನೂರು ಎಫ್‌ಐಆರ್ ಹಾಕಿದರು ಹೆದುರುವುದಿಲ್ಲ, ಭಯ ಅನ್ನೋದು ನಮ್ಮಲ್ಲಿ ಇಲ್ಲ. ಸಿಟಿ ರವಿ, ವಿಕ್ರಂ ಹೆಗ್ಡೆ, ರಾಜೀವ್ ಮೇಲೆ ಹಾಕಿರುವ ಪ್ರಕರಣ ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ, ಸುಳ್ಳು ಗ್ಯಾರೆಂಟಿಗಳನ್ನು ಹೇಳಿ ಜನರನ್ನ ದಾರಿ ತಪ್ಪಿಸಿದೆ. ಮುಂದಿನ ದಿನಗಳಲ್ಲಿ ಜನ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಿಧಾನ ಮಂಡಲದಲ್ಲಿಯ ಆರೋಗ್ಯಪೂರ್ಣ ಚರ್ಚೆಗಳೇ ಪ್ರಜಾಪ್ರಭುತ್ವದ ಯಶಸ್ಸಿನ ಮೂಲಾಧಾರ: ಬಸವರಾಜ ಹೊರಟ್ಟಿ
ಹಿಂದು ಸಂಘಟನೆಗಳ ಮುಖಂಡ ಮತ್ತು ದೇಶ ಭಕ್ತರನ್ನು ಒಳಗೆ ಹಾಕಿಸುತ್ತಿದ್ದೀರಿ. ಮುಂದೆ ಒಂದು ದಿನ ನಿಮ್ಮನ್ನು ಒಳಗೆ ಹಾಕಿಸುವಂತಹ ಕಾಲ ಹತ್ತಿರ ಬರುತ್ತದೆ. ಸಚಿವ ಸಂಪುಟದಲ್ಲಿ ಅನೇಕ ಸಚಿವರು ಭ್ರಷ್ಟಚಾರದಲ್ಲಿ ಸಿಕ್ಕಿ ಹಾಕಿಕೊಂಡು ಜಾಮೀನು ಮೇಲೆ ಹೊರಗಡೆ ಇದ್ದಾರೆ. ಮುಂದೆ ಶಾಶ್ವತವಾಗಿ ಒಳಗೆ ಹಾಕಿಸುವಂತಹ ಕೆಲಸ ನಮ್ಮ ಸರ್ಕಾರ ಬಂದ ಮೇಲೆ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: Hassan Tragedy | ಟ್ರಕ್ ಅಪಘಾತ ನಡೆದ ಜಾಗದಲ್ಲಿ ಹಂಪ್ಸ್ ನಿರ್ಮಿಸಲು ತೀರ್ಮಾನ
ವಿಜಯಪುರ: ಕಾಂಗ್ರೆಸ್ (Congress) ಪಕ್ಷದ ಅಂತ್ಯ ಮದ್ದೂರಿನಿಂದಲೇ ಪ್ರಾರಂಭ, ಇದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳೇ ಸಾಕ್ಷಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ತಮ್ಮ ವಿರುದ್ಧ ಮದ್ದೂರಿನಲ್ಲಿ ದಾಖಲಾಗಿರುವ ಎಫ್‌ಐಆರ್ (FIR) ವಿಚಾರವಾಗಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸರ್ಕಾರ ಅದೆಷ್ಟೇ ಎಫ್‌ಐಆರ್ ದಾಖಲಿಸಿದರೂ ಕೂಡ ನಾನು ವಿಚಲಿತನಾಗುವುದಿಲ್ಲ. ಹಿಂದೂಗಳ ಉತ್ಸವ, ಆಚರಣೆಗಳನ್ನು ಗುರಿಯಾಗಿಸಿಕೊಂಡು ಶಾಂತಿ ಕದಡುತ್ತಿರುವ ದುಷ್ಟ ಶಕ್ತಿಗಳ ಹೆಡೆಮುರಿಕಟ್ಟಲು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಹೀಗಾಗಿ ಹಿಂದೂಗಳ ಹಕ್ಕುಗಳನ್ನು ಪ್ರತಿಪಾದಿಸಿದ ನಮ್ಮಂತವರ ಮೇಲೆ ಕೇಸು ಹಾಕುತ್ತಿದೆ. ಹೆದರಿಸುವ, ಬೆದರಿಸುವ ಪ್ರಯತ್ನಕ್ಕೆ ಜಗ್ಗುವ ಮಾತೆ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ:ಮದ್ದೂರಲ್ಲಿ ಪ್ರಚೋದನಕಾರಿ ಭಾಷಣ – ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಎಫ್‌ಐಆರ್
ಎಕ್ಸ್‌ನಲ್ಲಿ ಏನಿದೆ?
ಮದ್ದೂರಿನಲ್ಲಿ ಮಾಡಿದ ಭಾಷಣಕ್ಕಾಗಿ ನನ್ನ ಮೇಲೆ ರಾಜ್ಯ ಸರ್ಕಾರ ಎಫ್‌ಐಆರ್ ದಾಖಲಿಸಿದೆ. ಸರ್ಕಾರ ಅದೆಷ್ಟೇ ಎಫ್‌ಐಆರ್‌ಗಳನ್ನು ಹಾಕಿದರೂ ಸಹ ನಾನು ವಿಚಲಿತನಾಗುವುದಿಲ್ಲ. ಗೋಮಾತೆಯ ಕೆಚ್ಚಲನ್ನು ಕತ್ತರಿಸಿದಾಗ, ಗಣೇಶ ವಿಸರ್ಜನೆ ನಡೆಯುತ್ತಿರುವಾಗ ಕಲ್ಲು ತೂರಾಟ ನಡೆಸಿದವರ ಮೇಲೆ, ಮಸೀದಿಯಲ್ಲಿ ಕಲ್ಲು ಶೇಖರಣೆ ಮಾಡಿ ಗಣೇಶನ ಮೆರವಣಿಗೆ ಹೋಗುತ್ತಿರುವಾಗ ಕಲ್ಲು ತೂರಿದವರ ಮೇಲೆ ಮೊದಲು ಕ್ರಮ ಕೈಗೊಳ್ಳಲಿ.
ಹಿಂದೂಗಳ ಉತ್ಸವ, ಆಚರಣೆಗಳನ್ನು ಗುರಿಯಾಗಿಸಿಕೊಂಡು ಶಾಂತಿ ಕದಡುತ್ತಿರುವ ದುಷ್ಟ ಶಕ್ತಿಗಳ ಹೆಡೆಮುರಿಕಟ್ಟಲು ಆಗದ ರಾಜ್ಯ ಸರ್ಕಾರ ಹಿಂದೂಗಳ ಹಕ್ಕುಗಳನ್ನು ಪ್ರತಿಪಾದಿಸಿದ ನಮ್ಮಂತವರ ಮೇಲೆ ಕೇಸು ಹಾಕುತ್ತಿದೆ. ಕಾಂಗ್ರೆಸ್ ಪಕ್ಷದ ಅಂತ್ಯ ಮದ್ದೂರಿನಿಂದಲೇ ಪ್ರಾರಂಭವಾಗಲಿದೆ. ಇದಕ್ಕೆ ಮೊನ್ನೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳೇ ಸಾಕ್ಷಿ. ಹೆದರಿಸುವ, ಬೆದರಿಸುವ ಪ್ರಯತ್ನಕ್ಕೆ ಜಗ್ಗುವ ಮಾತೆ ಇಲ್ಲ. ಜೈ ಶ್ರೀರಾಮ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈ ಎಂದವರ ಬಾಯಿಗೆ ಗುಂಡು ಹೊಡೆಯಬೇಕು: ಯತ್ನಾಳ್ ಕಿಡಿ
ಬೆಂಗಳೂರು: ಹಿಂದೂ ಆಗಲಿ, ಮುಸ್ಲಿಂ (Hindu Or Muslims) ಆಗಲಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ರೆ ಪೊಲೀಸರು ಕ್ರಮ ತೆಗೆದುಕೊಳ್ತಾರೆ. ಮದ್ದೂರಿನಲ್ಲಿ ಎಂಎಲ್‌ಸಿ ಸಿಟಿ ರವಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚೋದನಕಾರಿ ಭಾಷಣ ಮಾಡಿದ್ರು ಅಂತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ತಿಳಿಸಿದ್ರು.
ಬೆಂಗಳೂರಿನಲ್ಲಿ (Bengaluru) ಮಾತಾಡಿದ ಪರಮೇಶ್ವರ್, ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿರೋದನ್ನ ಸಮರ್ಥಿಸಿಕೊಂಡರು. ಮದ್ದೂರು ಘಟನೆಯ ವಿಚಾರದಲ್ಲಿ ನಾವು ಮೊದಲಿಂದ ಹೇಳುತ್ತಿದ್ದೇವೆ. ಇದರಲ್ಲಿ ರಾಜಕೀಯ ಮಾಡಬೇಡಿ. ಪೊಲೀಸರಿಗೆ ಬಿಡಿ. ಕಲ್ಲು ಹೊಡೆದವರನ್ನು ಹಿಡಿದು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಮುಸಲ್ಮಾನ ಆಗಿರಲಿ, ಹಿಂದೂ ಆಗಿರಲಿ, ಮತ್ತೊಬ್ಬ ಆಗಿರಲಿ, ಯಾರೇ ಕಾನೂನು ವಿರುದ್ಧವಾಗಿ ನಡೆದುಕೊಂಡಿದ್ದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಈ ವಿಚಾರವನ್ನು ಪೊಲೀಸರಿಗೆ ಬಿಟ್ಟುಬಿಡಬೇಕು. ಅದೆಲ್ಲ ಬಿಟ್ಟು, ಇವರು ಹೋಗಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿ, ಮತ್ತೆ ಜನರನ್ನೆಲ್ಲ ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ನಿವಾಸದ ಮುಂದೆ ಹೊತ್ತಿ ಉರಿದ ಕಾರು – ಕೂದಲೆಳೆ ಅಂತರದಲ್ಲಿ ಚಾಲಕ ಪಾರು
ಬಿಜೆಪಿಯವ್ರು ವೀರಾವೇಷದಲ್ಲಿ ಮಾತಾಡಿ, ಬಳಸಬಾರದ ಪದಗಳನ್ನು ಬಳಸುವುದರಿಂದ ಏನು ಸಾಧನೆ ಮಾಡುತ್ತಾರೆ? ಅವರು ರಾಜಕೀಯ ಕಾರಣಕ್ಕಾಗಿ ಇದೆಲ್ಲ ಮಾಡುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ. ಯಾರು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೋ, ಅಂಥವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪರಮೇಶ್ವರ್ ಹೇಳಿದ್ದಾರೆ. ಇದನ್ನೂ ಓದಿ: ನೇಪಾಳದ ಪ್ರಧಾನಿ ರೇಸ್‌ನಲ್ಲಿ ಬೆಂಗ್ಳೂರು ನಂಟಿನ ಬಲೇನ್ ಶಾ ಹೆಸರು ಮುನ್ನಲೆಗೆ
ಎಎಸ್ಪಿ ವರ್ಗಾವಣೆಗೆ ಸಮರ್ಥನೆ
ಇನ್ನೂ ಮದ್ದೂರು ಗಲಾಟೆ ಹಿನ್ನೆಲೆಯಲ್ಲಿ ಎಎಸ್‌ಪಿ ತಿಮ್ಮಯ್ಯ ವರ್ಗಾವಣೆ ಮಾಡಿದ್ದನ್ನು ಗೃಹ ಸಚಿವರು ಸಮರ್ಥಿಸಿಕೊಂಡರು. ಮದ್ದೂರಿನಲ್ಲಿ ಭದ್ರತಾ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಎಎಸ್‌ಪಿ ವರ್ಗಾವಣೆ ಮಾಡಿದ್ದಾರೆ. ಆಂತರಿಕವಾಗಿ ಎಲ್ಲಿ ಲೋಪ ಕಂಡಿದೆ, ಅದಕ್ಕೆ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಒಬ್ಬ ಇನ್‌ಸ್ಪೆಕ್ಟರ್ ಆಗಿರಬಹುದು, ಸಬ್ ಇನ್‌ಸ್ಪೆಕ್ಟರ್ ಆಗಿರಬಹುದು, ಅವರ ಕರ್ತವ್ಯ ಲೋಪ ಕಂಡು ಬಂದಾಗ ಇಲಾಖೆಯಿಂದ ಕ್ರಮ ತೆಗೆದುಕೊಳ್ಳುತ್ತಾರೆ. ಇದರಲ್ಲೂ ಲೋಪ ಕಂಡುಬಂದಿದ್ದು ಆಂತರಿಕವಾಗಿ ಇಲಾಖೆಯಿಂದ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.