Tag: Finland

  • 3ನೇ ಮಹಾಯುದ್ಧ ಎದುರಿಸೋಕೆ ಸಿದ್ಧರಾಗಿ.. ಆಹಾರ, ಔಷಧ ಸಂಗ್ರಹಿಸಿ ಇಟ್ಕೊಳ್ಳಿ – ಜನರಿಗೆ ಸ್ವೀಡನ್, ಫಿನ್‌ಲ್ಯಾಂಡ್ ಕರೆ

    3ನೇ ಮಹಾಯುದ್ಧ ಎದುರಿಸೋಕೆ ಸಿದ್ಧರಾಗಿ.. ಆಹಾರ, ಔಷಧ ಸಂಗ್ರಹಿಸಿ ಇಟ್ಕೊಳ್ಳಿ – ಜನರಿಗೆ ಸ್ವೀಡನ್, ಫಿನ್‌ಲ್ಯಾಂಡ್ ಕರೆ

    – ‘ಬಿಕ್ಕಟ್ಟು ಅಥ್ವಾ ಯುದ್ಧ ಆದ್ರೆ’; 32 ಪುಟಗಳ ಕಿರುಪುಸ್ತಕ ರಿಲೀಸ್
    – ಜನರಿಗೆ ಲಕ್ಷ ಲಕ್ಷ ಪ್ರತಿ ಹಂಚುತ್ತಿರುವ ಪುಸ್ತಕದಲ್ಲೇನಿದೆ?

    ವಿಶ್ವದಲ್ಲಿ ಮೂರನೇ ಮಹಾಯುದ್ಧ (World War 3) ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಒಂದೆಡೆ ರಷ್ಯಾ-ಉಕ್ರೇನ್ ಯುದ್ಧ ಮತ್ತೊಂದೆಡೆ ಇಸ್ರೇಲ್-ಇರಾನ್ ಸಂಘರ್ಷ ನಡೆಯುತ್ತಿದೆ. ದಿನೇ ದಿನೇ ಯುದ್ದೋನ್ಮಾದ ಹೆಚ್ಚುತ್ತಿದೆ. ಒಬ್ಬರ ಮೇಲೊಬ್ಬರು ಹಗೆಯ ಶಸ್ತಾçಸ್ತçಗಳನ್ನು ಪ್ರಯೋಗಿಸುತ್ತಿದ್ದಾರೆ. ಪರಮಾಣು ಯುದ್ಧವಾದರೆ ಏನಾಗುತ್ತದೆಯೋ ಎಂಬ ಆತಂಕ ಜಗತ್ತಿನ ರಾಷ್ಟ್ರಗಳಲ್ಲಿ ಮನೆಮಾಡಿದೆ. 3ನೇ ಮಹಾಯುದ್ಧ ಊಹಿಸುವುದು ಬಲು ಕಷ್ಟ. ಜಗತ್ತಿನಲ್ಲಿ ಗತಿಸಿದ ಎರಡು ಮಹಾಯುದ್ಧಗಳಿಂದ ಸತ್ತವರ ಸಂಖ್ಯೆ ಅದೆಷ್ಟೋ. ದಶಕಗಳ ಹಿಂದೆ ಅಣುಬಾಂಬ್ ದಾಳಿಗೆ ತುತ್ತಾದ ನಗರಗಳು ಈಗಲೂ ಅದರ ಪರಿಣಾಮ ಎದುರಿಸುತ್ತಿವೆ. ಲಕ್ಷಾಂತರ ಜನರ ಮಾರಣಹೋಮ, ಬದುಕಿದವರ ಡೋಲಾಯಮಾನ ಸ್ಥಿತಿ, ಬಿಕ್ಕಟ್ಟುಗಳ ಸರಮಾಲೆ, ಅಸ್ತಿತ್ವದ ಪ್ರಶ್ನೆ ಎಲ್ಲವೂ ಕಾಡುತ್ತದೆ. ಮಾನವಪ್ರೇರಿತ ದುರಂತಗಳು ಜಗತ್ತನ್ನು ವಿನಾಶದ ಅಂಚಿಗೆ ನೂಕುತ್ತವೆ. ಈಗ ಮತ್ತದೇ ಯುದ್ಧದ ಕಾರ್ಮೋಡದ ಭೀತಿ ಆವರಿಸಿದೆ.

    ರಷ್ಯಾ-ಉಕ್ರೇನ್ ಯುದ್ಧ ಭರ್ತಿ 1,000 ದಿನ ಪೂರೈಸಿದೆ. ಈ ಹೊತ್ತಿನಲ್ಲಿ, ಅಮೆರಿಕ ನಿರ್ಮಿತ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ರಷ್ಯಾ ಮೇಲೆ ಉಡಾಯಿಸಲು ಉಕ್ರೇನ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕರೆ ನೀಡಿದರು. ಅದರಂತೆ ರಷ್ಯಾ ಮೇಲೆ ಉಕ್ರೇನ್ ಕ್ಷಿಪಣಿಗಳನ್ನು ಪ್ರಯೋಗಿಸಿತು. ಇತ್ತ ಪರಮಾಣು ದಾಳಿಗಳಿಗೆ ಇದ್ದ ಬಿಗಿ ನಿಯಮಗಳನ್ನು ಸಡಿಲಗೊಳಿಸುವ ನೀತಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹಿ ಹಾಕಿದ್ದಾರೆ. ಮತ್ತೊಂದು ಕಡೆ ಇಸ್ರೇಲ್-ಇರಾನ್ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಎಲ್ಲಾ ಬೆಳವಣಿಗೆಗಳು 3ನೇ ಮಹಾಯುದ್ಧ ಸಾಧ್ಯತೆಯ ಆತಂಕ ಮೂಡಿಸಿವೆ. ಇದರ ನಡುವೆ ಅದಾಗಲೇ ಕೆಲವು ರಾಷ್ಟçಗಳು ಯುದ್ಧದ ಪರಿಣಾಮಗಳನ್ನು ಮೆಟ್ಟಿ ನಿಲ್ಲಲು ತಮ್ಮ ನಾಗರಿಕರಿಗೆ ಎಚ್ಚರಿಕೆ ಕರೆ ನೀಡಿವೆ. ಯುದ್ಧ ನಡೆದು ಬಿಕ್ಕಟ್ಟು ತಲೆದೋರಿದರೆ ಅದನ್ನು ಹೇಗೆ ಎದುರಿಸಬೇಕು ಎಂದು ಜನರಿಗೆ ಮಾರ್ಗದರ್ಶನ ನೀಡುತ್ತಿವೆ. ಹೆಚ್ಚಿದ ಭದ್ರತಾ ಬೆದರಿಕೆಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಮಧ್ಯೆ ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ತಮ್ಮ ನಾಗರಿಕರನ್ನು ಯುದ್ಧದಿಂದಾಗುವ ಸಂಭಾವ್ಯ ಬಿಕ್ಕಟ್ಟುಗಳಿಗೆ ಸಿದ್ಧರಾಗುವಂತೆ ಸೂಚಿಸಿದೆ.

    ಬಿಕ್ಕಟ್ಟು ಅಥವಾ ಯುದ್ಧ ಆದ್ರೆ?
    ಸ್ವೀಡನ್‌ನ (Sweden) ಮಾಜಿ ಸೇನಾ ಮುಖ್ಯಸ್ಥ ಮೈಕೆಲ್ ಬೈಡೆನ್ ಈಚೆಗೆ ಒಂದು ಕರೆ ನೀಡಿದ್ದರು. ‘ಸ್ವೀಡನ್ ಜನತೆ ಮಾನಸಿಕವಾಗಿ ಯುದ್ಧಕ್ಕೆ ಸಿದ್ಧರಾಗಬೇಕು’ ಎಂದು ಹೇಳಿದ್ದರು. ಇದನ್ನು ಸರ್ಕಾರ ಅಭಿಯಾನವಾಗಿ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ, ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ದೇಶಗಳು ‘ಬಿಕ್ಕಟ್ಟು ಅಥವಾ ಯುದ್ಧ ನಡೆದರೆ’ ಎಂಬ ಶೀರ್ಷಿಕೆಯ ಕಿರುಪುಸ್ತಕವನ್ನು ಹೊರತಂದಿದೆ. ಅದನ್ನು ತಮ್ಮ ನಾಗರಿಕರಿಗೆ ಲಕ್ಷ ಲಕ್ಷ ಪ್ರತಿಗಳನ್ನಾಗಿ ಮುದ್ರಿಸಿ ಹಂಚುತ್ತಿದೆ. ಸುಮಾರು 32 ಪುಟಗಳ ಈ ಕಿರುಪುಸ್ತಕವು ಯುದ್ಧದಂತಹ ಬಿಕ್ಕಟ್ಟಿನ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಮುನೆಚ್ಚರಿಕೆಯಾಗಿ ಏನೇನು ಕ್ರಮಕೈಗೊಳ್ಳಬೇಕು ಎಂಬುದರ ಸಾರವನ್ನು ಒಳಗೊಂಡಿದೆ. ನಿಜಕ್ಕೂ ಅದರಲ್ಲಿರುವ ಅಂಶಗಳು ಕುತೂಹಲಕರಿಯಾಗಿವೆ.

    ಸ್ವೀಡನ್ ಬಿಕ್ಕಟ್ಟಿನ ಬುಕ್‌ಲೆಟ್ ಲಕ್ಷ ಲಕ್ಷ ಹಂಚಿಕೆ
    ಸ್ವೀಡಿಷ್ ಸಿವಿಲ್ ಕಾಂಟಿಎಜೆನ್ಸಿಸ್ ಏಜೆನ್ಸಿ (ಎಂಎಸ್‌ಬಿ), ‘ಬಿಕ್ಕಟ್ಟು ಅಥವಾ ಯುದ್ಧ ಬಂದರೆ’ ಶೀರ್ಷಿಕೆಯ ಬಿಕ್ಕಟ್ಟಿನ ಸನ್ನದ್ಧತೆಯ ಕಿರುಪುಸ್ತಕದ ಆವೃತ್ತಿಯನ್ನು ಐದು ದಶಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿತರಿಸಲು ಪ್ರಾರಂಭಿಸಿದೆ. ಸ್ವೀಡನ್ 2ನೇ ಮಹಾಯುದ್ಧದಲ್ಲಿ ಇದೇ ರೀತಿ ತನ್ನ ನಾಗರಿಕರಿಗಾಗಿ ಐದು ಬಾರಿ ಕರಪತ್ರಗಳನ್ನು ಹಂಚಿತ್ತು. ಅದನ್ನು ನವೀಕರಿಸಿ ಕಿರುಪುಸ್ತಕ ಬಿಡುಗಡೆ ಮಾಡಿದೆ. ವಿಶ್ವ ಸಮರ 3 ರ ಜೊತೆಗೆ ಎದುರಾಗಬಹುದಾದ ಸೈಬರ್ ದಾಳಿಗಳು, ಭಯೋತ್ಪಾದನೆ ಮತ್ತು ಹವಾಮಾನ ವೈಪರಿತ್ಯದಂತಹ ಸಮಕಾಲೀನ ಸಮಸ್ಯೆಗಳಿಗೆ ಸಜ್ಜಾಗಲು ಕಿರುಪುಸ್ತಕದಲ್ಲಿ ತಿಳಿಸಲಾಗಿದೆ. ಎಂಎಸ್‌ಬಿ ನಿರ್ದೇಶಕ ಮೈಕೆಲ್ ಫ್ರಿಸೆಲ್ ಅವರು ಪುಸ್ತಕದಲ್ಲಿ ವಿವರ ನೀಡಿದ್ದಾರೆ. ‘ಭದ್ರತಾ ಪರಿಸ್ಥಿತಿಯು ಗಂಭೀರವಾಗಿದೆ. ನಾವೆಲ್ಲರೂ ವಿವಿಧ ಬಿಕ್ಕಟ್ಟುಗಳು ಮತ್ತು ಅಂತಿಮವಾಗಿ ಯುದ್ಧವನ್ನು ಎದುರಿಸಲು ನಮ್ಮ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಬೇಕಾಗಿದೆ’ ಎಂದು ಕರೆ ನೀಡಿದ್ದಾರೆ.

    ಕಿರುಪುಸ್ತಕದಲ್ಲಿ ಏನಿದೆ?
    ನೀರು, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸುವುದು, ವಿದ್ಯುತ್ ಮತ್ತು ಸಂವಹನ ಕಡಿತಕ್ಕೆ ಈಗಲಿಂದಲೇ ತಯಾರಿ ಮಾಡುವುದು, ಬಿಕ್ಕಟ್ಟಿನ ಸಮಯದಲ್ಲಿ ಆತಂಕವನ್ನು ನಿಭಾಯಿಸುವುದು, ಶಿಶುಗಳಿಗಾಗಿ ಆಹಾರ ಮತ್ತು ಔಷಧಿಗಳನ್ನು ಸಂರಕ್ಷಿಸುವುದು, ತುರ್ತು ಸಂದರ್ಭಗಳಲ್ಲಿ ಸಾಕುಪ್ರಾಣಿಗಳ ಆರೈಕೆಯನ್ನು ಖಾತ್ರಿಪಡಿಸುವುದು ಮುಂತಾದ ಪ್ರಾಯೋಗಿಕ ಸಲಹೆಯನ್ನು ಕಿರುಪುಸ್ತಕ ನೀಡಿದೆ. ಜೊತೆಗೆ, ರಾಷ್ಟ್ರೀಯ ಏಕತೆ ಮತ್ತು ಪ್ರತಿರೋಧವನ್ನು ಸಹ ಒತ್ತಿಹೇಳುತ್ತದೆ. ‘ಸ್ವೀಡನ್ ಅನ್ನು ಇನ್ನೊಂದು ದೇಶವು ಆಕ್ರಮಣ ಮಾಡಿದರೆ, ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ. ಪ್ರತಿರೋಧ ಇರುವುದಿಲ್ಲ ಎಂದುಕೊಳ್ಳುವ ಮಾಹಿತಿಯು ಸುಳ್ಳು’ ಎಂದು ಸ್ಪಷ್ಟಪಡಿಸಲಾಗಿದೆ.

    ಸುಲಭವಾಗಿ ಬೇಯಿಸಬಹುದಾದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಿ. ದೇಹಕ್ಕೆ ಅಗತ್ಯ ಪೋಷಕಾಂಶ ನೀಡುವ ತಿನಿಸುಗಳು ಮತ್ತು ಔಷಧಿಗಳನ್ನು ಶೇಖರಿಸಿಕೊಳ್ಳಿ. ಯುದ್ಧ ನಡೆದರೆ ಕನಿಷ್ಠ ಮೂರು ದಿನಗಳ ವರೆಗೆ ನಿಮ್ಮ ಅಗತ್ಯಗಳನ್ನು ನೀವೇ ಪೂರೈಸಿಕೊಳ್ಳುವಷ್ಟು ಈಗಲಿಂದಲೇ ಸಿದ್ಧತೆ ಮಾಡಿಕೊಳ್ಳಿ. ಪರಮಾಣು ದಾಳಿಗಳಿಂದ ಆಹಾರ, ವಿದ್ಯುತ್, ಮೂಲಸೌಕರ್ಯ ಬಿಕ್ಕಟ್ಟುಗಳು ಎದುರಾಗಬಹುದು. ಆದ್ದರಿಂದ ಆಹಾರ ಸಂರಕ್ಷಣೆಗೆ ಒತ್ತು ಕೊಡಿ. ದೀರ್ಘ ಕಾಲದ ವಿದ್ಯುತ್ ಕಡಿತದಂತಹ ಸಮಸ್ಯೆ ನಿಭಾಯಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಿ. ಜಾನುವಾರುಗಳ ರಕ್ಷಣೆಗೂ ಆದ್ಯತೆ ನೀಡಿ. ನಿಮ್ಮ ಮಕ್ಕಳನ್ನು ಯುದ್ಧದ ಸನ್ನಿವೇಶಗಳಿಗೆ ಭಯಪಡೆದಂತೆ ಮಾನಸಿಕವಾಗಿ ಸಿದ್ಧಗೊಳಿಸಿ. ಹಿರಿಯ ನಾಗರಿಕರು, ದುರ್ಬಲ ಜನರಿಗಾಗಿ ಕಾಳಜಿ ಕ್ರಮಗಳನ್ನು ವಹಿಸಿ ಎಂದು ಸಲಹೆಗಳನ್ನು ನೀಡಲಾಗಿದೆ.

    ವಿವಿಧ ಭಾಷೆ, ಡಿಜಿಟಲ್‌ನಲ್ಲೂ ಪುಸ್ತಕ ಲಭ್ಯ
    ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ಅರೇಬಿಕ್, ಪಾರ್ಸಿ ಮತ್ತು ಉಕ್ರೇನಿಯನ್ ಸೇರಿದಂತೆ ಬಹು ಭಾಷೆಗಳಲ್ಲಿ ಡಿಜಿಟಲ್ ರೂಪದಲ್ಲಿ ಪುಸ್ತಕ ಲಭ್ಯವಿದೆ. ಹೆಚ್ಚಿನ ಸಂಖ್ಯೆಯ ಜನರು ಡಿಜಿಟಲ್ ಆವೃತ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಪುಸ್ತಕ ಬಿಡುಗಡೆಯಾಗಿದ್ದು, ಇದುವರೆಗೂ ಡಿಜಿಟಲ್‌ನಲ್ಲೇ 55,000 ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

    ಫಿನ್‌ಲ್ಯಾಂಡ್‌ನಿಂದಲೂ ಪುಸ್ತಕ ಬಿಡುಗಡೆ
    ರಷ್ಯಾ ಜೊತೆಗೆ 830 ಮೈಲಿಯಷ್ಟು ಗಡಿಯನ್ನು ಫಿನ್‌ಲ್ಯಾಂಡ್ ಹಂಚಿಕೊಂಡಿದೆ. ಆದ್ದರಿಂದ ಸಹಜವಾಗಿ ದೇಶವು ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿದೆ. ಉಕ್ರೇನ್‌ನ ಮೇಲೆ ಮಾಸ್ಕೋದ ಆಕ್ರಮಣದ ನಂತರ, ಫಿನ್‌ಲ್ಯಾಂಡ್ 200 ಕಿಲೋಮೀಟರ್ ಗಡಿ ಬೇಲಿಯನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿತು. ಗಡಿಯುದ್ದಕ್ಕೂ 10 ಅಡಿ ಎತ್ತರ ಮತ್ತು ಮುಳ್ಳುತಂತಿ ಬೇಲಿ ಹಾಕಲು ಮುಂದಾಗಿದೆ. ಇದು 2026 ರ ವೇಳೆಗೆ ಪೂರ್ಣಗೊಳ್ಳಲಿದೆ. ಯುದ್ಧದ ಭೀಕರ ಸನ್ನಿವೇಶಗಳನ್ನು ನಿಭಾಯಿಸಲು ಫಿನ್‌ಲ್ಯಾಂಡ್ ಕೂಡ ಕರೆ ನೀಡಿ ಪುಸ್ತಕ ಹೊರತಂದಿದೆ. ಫಿನ್‌ಲ್ಯಾಂಡ್‌ನ ಆಂತರಿಕ ಸಚಿವಾಲಯವು, ದೀರ್ಘಾವಧಿಯ ವಿದ್ಯುತ್ ಕಡಿತ, ದೂರಸಂಪರ್ಕ ಅಡೆತಡೆಗಳು ಮತ್ತು ಮಿಲಿಟರಿ ಸಂಘರ್ಷಗಳನ್ನು ನಿಭಾಯಿಸಲು ಈಗಲಿಂದಲೇ ತಯಾರಾಗುವಂತೆ ತನ್ನ ನಾಗರಿಕರಿಗೆ ಸಲಹೆ ನೀಡಿದೆ.

    ನ್ಯಾಟೊ ಸೇರಿದ ಸ್ವೀಡನ್, ಫಿನ್‌ಲ್ಯಾಂಡ್
    2022ರಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ಎರಡೂ ನ್ಯಾಟೋಗೆ ಸೇರಿಕೊಂಡವು. ತಮ್ಮ ದೀರ್ಘಕಾಲದ ತಟಸ್ಥ ನೀತಿಗಳನ್ನು ತ್ಯಜಿಸಿದವು. ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯ ನಡುವೆ ಈ ದೇಶಗಳು ತಮ್ಮ ರಕ್ಷಣಾ ಕ್ರಮಗಳನ್ನು ಹೆಚ್ಚಿಸಿವೆ. ಈ ಬದಲಾವಣೆಯು ಒಕ್ಕೂಟದೊಳಗೆ ಸಾಮೂಹಿಕ ರಕ್ಷಣೆ ಮತ್ತು ಬಿಕ್ಕಟ್ಟಿನ ಸಿದ್ಧತೆಗೆ ಕರೆ ನೀಡಲು ಪ್ರಮುಖ ಕಾರಣವಾಗಿದೆ. ಯೂರೋಪ್ ಎದುರಿಸುತ್ತಿರುವ ಭದ್ರತಾ ಸವಾಲುಗಳನ್ನು ಸ್ವೀಡಿಷ್ ಎಂಎಸ್‌ಬಿಯ ಹೇಳಿಕೆಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ‘ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದ ಸ್ಥಿತಿಯು ತೀವ್ರವಾಗಿ ಹದಗೆಟ್ಟಿದೆ. ನಮ್ಮ ಆಸುಪಾಸಿನಲ್ಲಿ ಯುದ್ಧ ನಡೆಯುತ್ತಿದೆ. ಹವಾಮಾನ ವೈಪರಿತ್ಯಗಳು ಸಾಮಾನ್ಯವಾಗುತ್ತಿವೆ. ನಮ್ಮನ್ನು ದುರ್ಬಲಗೊಳಿಸಲು ಭಯೋತ್ಪಾದಕ ಬೆದರಿಕೆಗಳು, ಸೈಬರ್ ದಾಳಿಗಳು ಹೆಚ್ಚುತ್ತಿವೆ’ ತಿಳಿಸಿದೆ.

    ರಷ್ಯಾ-ಉಕ್ರೇನ್ ಯುದ್ಧವು ಅನೇಕ ಯುರೋಪಿಯನ್ ರಾಷ್ಟ್ರಗಳು ತಮ್ಮ ರಕ್ಷಣಾ ಕಾರ್ಯತಂತ್ರಗಳನ್ನು ಮರುಮೌಲ್ಯಮಾಪನ ಮಾಡಲು ಪ್ರೇರೇಪಿಸಿದೆ. ಸ್ವೀಡನ್ ಮತ್ತು ಫಿನ್‌ಲ್ಯಾಂಡ್ (Finland) ದೇಶಗಳು ತಮ್ಮ ಮಿಲಿಟರಿ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿವೆ. ನ್ಯಾಟೋ ಒಕ್ಕೂಟದ 32 ಸದಸ್ಯ ರಾಷ್ಟ್ರಗಳ ಪೈಕಿ 23 ದೇಶಗಳು ತಮ್ಮ ಜಿಡಿಪಿಯ 2 ಪ್ರತಿಶತದಷ್ಟನ್ನು ಮಿಲಿಟರಿಗಾಗಿ ಖರ್ಚು ಮಾಡುವ ನಿರ್ಣಯ ಕೈಗೊಂಡಿವೆ. ಇತ್ತ ಒಕ್ಕೂಟದ ಭಾಗವಾಗಿರುವ ಸ್ವೀಡನ್, ಫಿನ್‌ಲ್ಯಾಂಡ್ ದೇಶಗಳು ಸಾಮಾಜಿಕ ಸ್ಥಿತಿಸ್ಥಾಪಕತ್ವಕ್ಕಾಗಿ ಸಮಗ್ರ ಸಾರ್ವಜನಿಕ ಜಾಗೃತಿ ಉಪಕ್ರಮಗಳನ್ನು ಪರಿಚಯಿಸಿವೆ. ಪರಮಾಣು, ಜೈವಿಕ ಅಥವಾ ರಾಸಾಯನಿಕ ದಾಳಿಗಳಂತಹ ಭೀಕರ ಸನ್ನಿವೇಶಗಳನ್ನು ಎದುರಿಸಲು ಸಿದ್ಧರಾಗಬೇಕೆಂದು ಸೂಚಿಸಿವೆ.

    ರಷ್ಯಾ-ಉಕ್ರೇನ್ ಯುದ್ಧ
    ಉಕ್ರೇನ್ ನ್ಯಾಟೋ ಒಕ್ಕೂಟ ಸೇರುವುದನ್ನು ವಿರೋಧಿಸಿದ ರಷ್ಯಾ ಯುದ್ಧ ಘೋಷಿಸಿತು. 2022ರ ಫೆಬ್ರವರಿ 4 ರಂದು ಉಕ್ರೇನ್ ಮೇಲೆ ದಾಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶ ಹೊರಡಿಸಿದರು. ಎರಡು ದೇಶಗಳ ನಡುವಿನ ಯುದ್ಧದಿಂದ ಇದುವರೆಗೂ ಲಕ್ಷಾಂತರ ಸಾವುನೋವುಗಳಾಗಿವೆ. ರಷ್ಯಾದಲ್ಲೇ 6,96,410 ಸೈನಿಕರು ಮೃತಪಟ್ಟಿದ್ದಾರೆ. ರಷ್ಯಾ ಆಕ್ರಮಣದಿಂದ ಉಕ್ರೇನ್‌ನಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ.

    ಇಸ್ರೇಲ್-ಹಮಾಸ್ ಯುದ್ಧ
    2023ರ ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿ ಹಲವು ನಾಗರಿಕರ ಹತ್ಯೆಗೆ ಕಾರಣರಾದರು. 200 ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡರು. ಇದಕ್ಕೆ ಪ್ರತಿಯಾಗಿ ಹಮಾಸ್ ಬಂಡುಕೋರರ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿತು. ಪರಿಣಾಮವಾಗಿ ಪ್ಯಾಲೆಸ್ತೀನ್‌ನಲ್ಲಿ ಸಾವಿರಾರು ಜನರ ಸಾವುನೋವಾಯಿತು. ಹಮಾಸ್ ಜೊತೆಗೆ ಹಿಜ್ಬುಲ್ಲಾ ಗುಂಪು ಕೈಜೋಡಿಸಿದ್ದು ಸಂಘರ್ಷ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಳ್ಳಲು ಕಾರಣವಾಗಿದೆ. ಈ ನಡುವೆ ಇರಾನ್ ಕೂಡ ಇಸ್ರೇಲ್ ಮೇಲೆ ದಾಳಿಯನ್ನು ನಡೆಸಿದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

  • ಪಾವೊ ನೂರ್ಮಿ ಗೇಮ್ಸ್‌ನಿಂದ ಚಿನ್ನದ ಹುಡುಗ ನೀರಜ್ ಚೋಪ್ರಾ ಔಟ್

    ಪಾವೊ ನೂರ್ಮಿ ಗೇಮ್ಸ್‌ನಿಂದ ಚಿನ್ನದ ಹುಡುಗ ನೀರಜ್ ಚೋಪ್ರಾ ಔಟ್

    ಹೆಲ್ಸಿಂಕಿ/ನವದೆಹಲಿ: ಇದೇ ಜೂನ್ 13 ರಂದು ಫಿನ್‌ಲ್ಯಾಂಡ್‌ನಲ್ಲಿ ನಡೆಯಲಿರುವ ಪಾವೊ ನೂರ್ಮಿ ಗೇಮ್ಸ್-2023 (Paavo Nurmi Games 2023) ರಿಂದ ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ (Neeraj Chopra) ಹೊರಗುಳಿಸಿದ್ದಾರೆ. ಅಲ್ಲದೆ, ಮಾಜಿ ವಿಶ್ವ ಚಾಂಪಿಯನ್ ಜರ್ಮನಿಯ ಜೊಹಾನ್ಸ್ ವೆಟರ್ (Johannes Vetter) ಕೂಡ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

    ನೀರಜ್ ಚೋಪ್ರಾ ಅವರು ಕಳೆದ ತಿಂಗಳು ತರಬೇತಿ ಸಮಯದಲ್ಲಿ ಅನುಭವಿಸಿದ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಜೂನ್ 4ರಂದು ನೆದರ್‌ಲೆಂಡ್‌ನಲ್ಲಿ ನಡೆದ FBK ಗೇಮ್ಸ್‌ನಿಂದಲೂ ಹೊರಗುಳಿದಿದ್ದರು. ಇದನ್ನೂ ಓದಿ: ಮತ್ತೊಂದು ಇತಿಹಾಸ – ಡೈಮಂಡ್‌ ಟ್ರೋಫಿ ಗೆದ್ದ ನೀರಜ್‌ ಚೋಪ್ರಾ

    NEERAJ

    ಪಾವೊ ನೂರ್ಮಿ ಗೇಮ್ಸ್ 1957 ರಿಂದ ಟುರ್ಕ್‌ನಲ್ಲಿ ನಡೆಯುವ ವಾರ್ಷಿಕ ಫಿನ್ನಿಷ್ ಅಥ್ಲೆಟಿಕ್ಸ್ ಕೂಟವಾಗಿದೆ. ಈ ಸ್ಪರ್ಧೆಯು ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಗೋಲ್ಡ್ ಕಾರ್ಯಕ್ರಮ ಎಂದೇ ಹೆಸರುವಾಸಿಯಾಗಿದೆ.

    ನೀರಜ್ ಚೋಪ್ರಾ ಕಳೆದ ವರ್ಷ ಫಿನ್‌ಲ್ಯಾಂಡ್ ಟೂರ್ನಿಯಲ್ಲಿ 89.30 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕ ಬಾಚಿಕೊಂಡಿದ್ದರು. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾಗೆ ಪರಮ ವಿಶಿಷ್ಟ ಸೇವಾ ಪದಕ

    NEERAJ

    ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಲಾಸನ್‌ನಲ್ಲಿ ನಡೆದ ಡೈಮಂಡ್ ಲೀಗ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. 89.04 ಮೀ. ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದು, ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎಂಬ ಗೌರವಕ್ಕೆ ನೀರಜ್ ಪಾತ್ರರಾಗಿದ್ದರು.

  • ಪತಿಗೆ ವಿಚ್ಛೇದನ ಘೋಷಿಸಿ, ಸ್ನೇಹಿತರಾಗಿ ಇರ್ತೀವಿ ಅಂದ ನಿರ್ಗಮಿತ ಪ್ರಧಾನಿ ಸನ್ನಾ ಮರಿನ್‌

    ಪತಿಗೆ ವಿಚ್ಛೇದನ ಘೋಷಿಸಿ, ಸ್ನೇಹಿತರಾಗಿ ಇರ್ತೀವಿ ಅಂದ ನಿರ್ಗಮಿತ ಪ್ರಧಾನಿ ಸನ್ನಾ ಮರಿನ್‌

    ಹೆಲ್ಸಿಂಕಿ: ಫಿನ್‌ಲ್ಯಾಂಡ್‌ನ ನಿರ್ಗಮಿತ ಪ್ರಧಾನಿ (Finland PM) ಸನ್ನಾ ಮರಿನ್‌ (Sanna Marin) ವಿಚ್ಛೇದನ ಘೋಷಣೆ ಮಾಡಿದ್ದು, ಪತಿ ಮಾರ್ಕಸ್‌ ರೈಕೊನೆನ್‌ ಅವರೊಂದಿಗೆ ಜೊತೆಯಾಗಿ ವಿಚ್ಛೇದಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    19‌ ವರ್ಷಗಳ ನಮ್ಮ ಸುದೀರ್ಘ ಜೀವನಕ್ಕೆ ಹಾಗೂ ನಮ್ಮ ಪುಟ್ಟ ಮಗಳಿಗೆ ಕೃತಜ್ಞರಾಗಿರುತ್ತೇವೆ. ಉತ್ತಮ ಸ್ನೇಹಿತರಾಗಿ ಉಳಿಯುತ್ತೇವೆ. ತಮ್ಮ 5 ವರ್ಷದ ಮಗಳನ್ನು ಇಬ್ಬರೂ ಸಮಾನವಾಗಿ ನೋಡಿಕೊಳ್ಳುವುದಾಗಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಮ್ರಾನ್‌ ಖಾನ್‌ ಬೆನ್ನಲ್ಲೇ ಪಾಕ್‌ ವಿದೇಶಾಂಗ ಮಾಜಿ ಸಚಿವ ಅರೆಸ್ಟ್‌ – ಅಜ್ಞಾತ ಸ್ಥಳಕ್ಕೆ ಶಿಫ್ಟ್‌

    2020ರಲ್ಲಿ ಕೋವಿಡ್‌ (Covid) ಬಿಕ್ಕಟ್ಟಿನ ವೇಳೆ ರೈಕೊನೆನ್‌ ಹಾಗೂ ಮರಿನ್‌ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಬಳಿಕ ಇಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಿದ್ದರು.

    ಮರಿನ್ ಮತ್ತು ಅವರ ಸೋಶಿಯಲ್ ಡೆಮಾಕ್ರಟಿಕ್ ಪಕ್ಷವು ಕಳೆದ ತಿಂಗಳು ಫಿನ್‌ಲ್ಯಾಂಡ್‌ನ ಸಂಸತ್ತಿನ ಚುನಾವಣೆಯಲ್ಲಿ ರಾಷ್ಟ್ರೀಯ ಒಕ್ಕೂಟದ ಪಕ್ಷ ಮತ್ತು ರಾಷ್ಟ್ರೀಯವಾದಿ ಫಿನ್ಸ್ ಪಕ್ಷದ ಎದುರು ಪರಾಭವಗೊಂಡಿತ್ತು. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್- ಪ್ರತಿಭಟನೆಯಲ್ಲಿ 8 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

    2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಮರಿನ್‌ ವಿಶ್ವದ ಕಿರಿಯ ಪ್ರಧಾನಿ ಹಾಗೂ ಹೊಸ ನಾಯಕರಿಗೆ ರೋಲ್‌ ಮಾಡೆಲ್‌ ಎನಿಸಿಕೊಂಡಿದ್ದರು.

  • ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ

    ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ

    ಹೆಲ್ಸಿಂಕಿ: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಕ್ರೀಡಾತಾರೆ ನೀರಜ್ ಚೋಪ್ರಾ ಫಿನ್‌ಲ್ಯಾಂಡ್‌ನಲ್ಲಿ ನಡೆದ ಕುರ್ಟೇನ್ ಗೇಮ್ಸ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಂದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

    ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲೇ 86.69 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL

    ಫಿನ್‌ಲ್ಯಾಂಡ್‌ನಲ್ಲಿ ಈ ವಾರದ ಆರಂಭದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ 89.30 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದರು, ಈ ಮೂಲಕ ತಮ್ಮದೇ ದಾಖಲೆ ಮುರಿದಿದ್ದರು. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದಿದ್ದ ಭಾರತದ ನೀರಜ್ ಚೋಪ್ರಾರಿಂದ ಮತ್ತೊಂದು ದಾಖಲೆ

    ನೀರಜ್ ಚೋಪ್ರಾ ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್ ಮತ್ತು ಗ್ರೆನಡಾದ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್‌ಗಿಂತ ಮೊದಲು ಗುರಿ ತಲುಪಿದರು.

    ಚೋಪ್ರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರಾದರು. ಕೆಶೋರ್ನ್ ವಾಲ್ಕಾಟ್ 86.64 ಮೀ. ಜಾವೆಲಿನ್ ಎಸೆದು 2ನೇ ಸ್ಥಾನ ಪಡೆದರೆ, ಆ್ಯಂಡರ್ಸನ್ ಪೀಟರ್ಸ್ 84.75 ಮೀಟರ್ ಎಸೆಯುವ ಉತ್ತಮ ಪ್ರಯತ್ನದೊಂದಿಗೆ 3ನೇ ಸ್ಥಾನ ಪಡೆದರು.

    Live Tv

  • ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದಿದ್ದ ಭಾರತದ ನೀರಜ್ ಚೋಪ್ರಾರಿಂದ ಮತ್ತೊಂದು ದಾಖಲೆ

    ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದಿದ್ದ ಭಾರತದ ನೀರಜ್ ಚೋಪ್ರಾರಿಂದ ಮತ್ತೊಂದು ದಾಖಲೆ

    ನವದೆಹಲಿ: ಒಲಿಂಪಿಕ್ಸ್‌ ನಲ್ಲಿ ಚಿನ್ನಗೆದ್ದು ದಾಖಲೆ ಬರೆದಿದ್ದ ಭಾರತೀಯ ಕ್ರೀಡಾ ತಾರೆ ನೀರಜ್ ಚೋಪ್ರಾ ಮತ್ತೊಂದು ದಾಖಲೆ ಮಾಡಿದ್ದಾರೆ.

    ಫಿನ್‌ಲೆಂಡ್ ದೇಶದ ಪಾವೋ ನುರ್ಮಿ ಗೇಮ್ಸ್ ಕೂಟದಲ್ಲಿ 89.30 ಮೀಟರ್ ಜಾವೆಲಿನ್ (ಭರ್ಜಿ) ಎಸೆದು ಹಿಂದೆ ತಾವೇ ನಿರ್ಮಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಇದನ್ನೂ ಓದಿ: ಋತುರಾಜ್‌ – ಇಶಾನ್‌ ಶೈನ್‌, ಹರ್ಷಲ್‌ ಬೌಲಿಂಗ್‌ ಕಮಾಲ್‌ – ಭಾರತಕ್ಕೆ 48 ರನ್‌ಗಳ ಭರ್ಜರಿ ಜಯ

    ಫಿನ್‌ಲೆಂಡ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ರಾಷ್ಟ್ರೀಯ ದಾಖಲೆ ಮುರಿದರೂ ಚಿನ್ನದ ಪದಕ ಗೆಲ್ಲಲಾಗಲಿಲ್ಲ. ತಮ್ಮ ಈ ಸಾಧನೆಗೆ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಕ್ರೀಡಾಕೂಟದಲ್ಲಿ ಫಿನ್‌ಲೆಂಡ್ ದೇಶದ ಸ್ಥಳೀಯ ಜಾವೆಲಿನ್ ಪಟು ಓಲಿವರ್ ಹೆಲಂದರ್ 89.83 ಮೀ ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL

    24 ವರ್ಷದ ನೀರಜ್ ಚೋಪ್ರಾ ಜಪಾನ್‌ನಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್ ಬಳಿಕ ಪಾಲ್ಗೊಂಡ ಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟ ಇದಾಗಿದೆ. 2021, ಆಗಸ್ಟ್ 7ರಂದು ಅವರು ಟೋಕಿಯೋ ಒಲಿಂಪಿಕ್ಸ್‌ ನಲ್ಲಿ 87.58 ಮೀಟರ್ ಜಾವೆಲಿನ್ ಎಸೆದು ದಾಖಲೆ ಬರೆದಿದ್ದರು.

    ಫಿನ್‌ಲೆಂಡ್‌ನ ಪಾವೊ ನುರ್ಮಿ ಗೇಮ್ಸ್ನಲ್ಲಿ 90 ಮೀಟರ್ ಜಾವೆಲಿನ್ ಎಸೆದವರಿಗೆ ಫೋರ್ಡ್ನ ಒಂದು ಕಾರನ್ನು ಉಡುಗೊರೆ ನೀಡುವುದಾಗಿ ಸಂಘಟಕರು ಘೋಷಣೆ ಮಾಡಿದ್ದರು. ಯಾರೂ ಕೂಡ ಆ ಸಾಧನೆ ಮಾಡಲಾಗಲಿಲ್ಲ. ಇದನ್ನೂ ಓದಿ: ಕನ್ನಡ ಸಿನಿಮಾದಲ್ಲಿ ನಟಿಸಿದ್ರಾ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ?: ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಮಾಜಿ ಕ್ರಿಕೆಟ್ ನಾಯಕ

    ಕ್ರೀಡೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಚೋಪ್ರಾ, 90 ಮೀಟರ್‌ಗಿಂತ ಹೆಚ್ಚು ದೂರ ಜಾವೆಲಿನ್ ಎಸೆಯಬೇಕು ಎನ್ನುವ ಒತ್ತಡಕ್ಕೆ ನಾನು ಸಿಲುಕುವುದಿಲ್ಲ. ಮುಂದಿನ ತಿಂಗಳು ಜುಲೈ 15 ರಿಂದ 24ರ ವರೆಗೆ ಅಮೆರಿಕದ ಯುಜಿನ್‌ನಲ್ಲಿ ವಿಶ್ವಚಾಂಪಿಯನ್ ಶಿಪ್ ನಡೆಯಲಿದ್ದು, ಅದರಲ್ಲಿ ಉತ್ತುಂಗಕ್ಕೇರಲು ಪ್ರಯತ್ನಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೂ ಮುನ್ನ ಚೋಪ್ರಾ ಇದೇ ಜೂನ್ 30ರಂದು ಫಿನ್‌ಲೆಂಡ್‌ನಲ್ಲಿ ನಡೆಯಲಿರುವ ಸ್ಟಾಕ್‌ಹೋಮ್ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ.

  • ಫಿನ್ಲೆಂಡ್‌ಗೆ ರಷ್ಯಾ ಶಾಕ್ – ನೈಸರ್ಗಿಕ ಅನಿಲ ಸರಬರಾಜು ಸ್ಥಗಿತ

    ಫಿನ್ಲೆಂಡ್‌ಗೆ ರಷ್ಯಾ ಶಾಕ್ – ನೈಸರ್ಗಿಕ ಅನಿಲ ಸರಬರಾಜು ಸ್ಥಗಿತ

    ಮಾಸ್ಕೋ: ನ್ಯಾಟೋಗೆ ಸೇರಲು ಮುಂದಾದ ಫಿನ್ಲೆಂಡ್‌ಗೆ ರಷ್ಯಾ ಈಗ ಶಾಕ್ ಕೊಟ್ಟಿದೆ. ಇಂದಿನಿಂದ ಫಿನ್ಲೆಂಡ್‌ಗೆ ನೈಸರ್ಗಿಕ ಅನಿಲ ಸರಬರಾಜನ್ನು ಸ್ಥಗಿತಗೊಳಿಸಿದೆ.

    ರಷ್ಯಾ-ಉಕ್ರೇನ್ ಯುದ್ಧದ ನಡುವೆ ನ್ಯಾಟೋ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ ಫಿನ್ಲೆಂಡ್ ರುಬೆಲ್‌ನಲ್ಲಿ ಪಾವತಿಸುವ ಷರತ್ತನ್ನು ನಿರಾಕರಿಸಿತ್ತು. ಈ ಕಾರಣಕ್ಕೆ ರಷ್ಯಾ ಫಿನ್ಲೆಂಡ್‌ಗೆ ನೈಸರ್ಗಿಕ ಅನಿಲ ಸರಬರಾಜನ್ನು ಸ್ಥಗಿತಗೊಳಿಸಿದೆ ಎಂದು ಫಿನ್ನಿಷ್ ಸರ್ಕಾರಿ ಸ್ವಾಮ್ಯದ ಕಂಪೆನಿ ಹೇಳಿದೆ. ಇದನ್ನೂ ಓದಿ: ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ – ಬಾಯಿ ಮುಚ್ಚಿಸಲು ಕೋಟಿ ಹಣ ಸಂದಾಯ

     

    ಉಕ್ರೇನ್‌ನಲ್ಲಿನ ಯುದ್ಧದಿಂದಾಗಿ ರಷ್ಯಾದ ಕಚ್ಚಾತೈಲಗಳ ಮೇಲೆ ಯುರೋಪಿಯನ್ ಒಕ್ಕೂಟಗಳು ರಷ್ಯಾಮೇಲೆ ನಿರ್ಬಂಧ ಹೇರಲು ಮುಂದಾಗಿದ್ದವು. ಈ ವೇಳೆ ಸ್ನೇಹಪರವಲ್ಲದ ವಿದೇಶಿ ಖರೀದಿದಾರರು ರಷ್ಯಾದ ಕರೆನ್ಸಿಯಲ್ಲೇ ಗ್ಯಾಸ್‌ಗೆ ಖರೀದಿಸಬೇಕು ಎಂದು ರಷ್ಯಾ ಒತ್ತಾಯಿಸಿತ್ತು. ಫಿನ್ಲೆಂಡ್‌ ನ್ಯಾಟೋ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ರಷ್ಯಾ ಈ ಕ್ರಮಕೈಗೊಂಡಿರುವುದು ವಿಶೇಷ. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?

    ಕಳೆದ ತಿಂಗಳ ಕೊನೆಯಲ್ಲಿ ಪೋಲೆಂಡ್ ಮತ್ತು ಬಲ್ಗೇರಿಯಾಗೆ ನೈಸರ್ಗಿಕ ಅನಿಲವನ್ನು ಸ್ಥಗಿತಗೊಳಿಸಿತ್ತು. ಆದರೆ, ಫಿನ್ಲೆಂಡ್‌ಗೆ ಅನಿಲ ಕಡಿತಗೊಳಿಸಿದ್ದು, ಇದರೊಂದಿಗೆ ಇತರ ಸಣ್ಣ-ಸಣ್ಣ ಗ್ರಾಹಕರೂ ರಷ್ಯಾದ ನೈಸರ್ಗಿಕ ಅನಿಲದಿಂದ ದೂರ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

    12 ಸೇನಾ ಘಟಕ ಸ್ಥಾಪಿಸಲು ನಿರ್ಧಾರ: ನ್ಯಾಟೋ ವಿಸ್ತರಣೆಗೆ ಪ್ರತಿಯಾಗಿ ಪಶ್ಚಿಮದ ಮಿಲಿಟರಿ ಜಿಲ್ಲೆಯಲ್ಲಿ 12 ಹೊಸ ಸೇನಾ ಘಟಕಗಳು ಮತ್ತು ವಿಭಾಗಗಳ ನೆಲೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವ ಸೆರ್ಗೈ ಶೋಯಿಗು ತಿಳಿಸಿದ್ದಾರೆ.

    ಸ್ವೀಡನ್ ಮತ್ತು ಫಿನ್ಲೆಂಡ್‌ ನ್ಯಾಟೋ ಸೇರಲು ಅರ್ಜಿ ಸಲ್ಲಿಸಿರುವುದನ್ನು ವರ್ಚುವಲ್ ಸಭೆಯಲ್ಲಿ ಉಲ್ಲೇಖಿಸಿದ ಅವರು, ಪಶ್ಚಿಮದ ಮಿಲಿಟರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೆದರಿಕೆಗೆ ಪ್ರತಿಯಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಸೇನೆಯು ಎರಡು ಸಾವಿರಕ್ಕೂ ಹೆಚ್ಚು ಯೂನಿಟ್ ಸೇನಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಶೀಘ್ರವೇ ಪಡೆಯಲಿದೆ ಎಂದು ಹೇಳಿದ್ದಾರೆ.

  • ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು?

    ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು?

    ಬ್ರಸೆಲ್ಸ್: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಮ್ಮ ಯುರೋಪ್ ಪ್ರವಾಸದಲ್ಲಿ ಫಿನ್‍ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದರು.

    ಮೋದಿ ಅವರು ಟ್ವೀಟ್ ಮಾಡುವ ಮೂಲಕ ವಿಷಯವನ್ನು ತಿಳಿಸಿದ್ದು, ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದ ಫೋಟೋ ಮತ್ತು ಔತಣಕ್ಕೆ ಕುಳಿತುಕೊಂಡಿದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಮೋದಿ ಅವರು ಫಿನ್‍ಲ್ಯಾಂಡ್ ಪ್ರಧಾನಿ ಜೊತೆ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ. ಈ ಕುರಿತು ಮೋದಿ ಅವರು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮದಲ್ಲಿ ಅಶ್ವತ್ಥ ನಾರಾಯಣ್ ಶಾಮೀಲು: ಸಿದ್ದು ಆರೋಪ 

    ಮೋದಿ ಅವರು ಟ್ವೀಟ್‍ನಲ್ಲಿ, ಇಂದು ಫಿನ್‍ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಅವರನ್ನು ಭೇಟಿ ಮಾಡಿದ್ದು ತುಂಬಾ ಅನುಕೂಲವಾಯಿತು. ಭಾರತ-ಫಿನ್‍ಲ್ಯಾಂಡ್ ಡಿಜಿಟಲ್ ಪಾಲುದಾರಿಕೆ, ವ್ಯಾಪಾರ ಪಾಲುದಾರಿಕೆ ಮತ್ತು ಹೂಡಿಕೆ ಸಂಬಂಧಗಳನ್ನು ವಿಸ್ತರಿಸು ಕುರಿತು ಮಾತುಕತೆ ಮಾಡಿದ್ದು, ಅದಕ್ಕೆ ಅಪಾರ ಸಾಮರ್ಥ್ಯವಿದೆ. ನಮ್ಮ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಗಾಢವಾಗಿಸುವ ಮಾರ್ಗಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ ಎಂದು ಬರೆದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.

    ಮೋದಿ ಅವರು ನಾರ್ವೆ, ಸ್ವೀಡನ್ ಮತ್ತು ಐಸ್‍ಲ್ಯಾಂಡ್‍ನ ತಮ್ಮ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆಗಳ ಸರಣಿಯನ್ನು ನಡೆಸಿದರು. ಇದನ್ನೂ ಓದಿ: ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾನೇನು ದನಕಾಯೋನ: ಹೆಚ್‍ಡಿ.ರೇವಣ್ಣ