Tag: finger

  • ಕೈಬೆರಳಿನ ಶಸ್ತ್ರಚಿಕಿತ್ಸೆಗೆ ಕರೆದೊಯ್ದು ನಾಲಿಗೆಗೆ ಸರ್ಜರಿ ಮಾಡಿದ್ರು!- ತನಿಖೆಗೆ ಆದೇಶ

    ಕೈಬೆರಳಿನ ಶಸ್ತ್ರಚಿಕಿತ್ಸೆಗೆ ಕರೆದೊಯ್ದು ನಾಲಿಗೆಗೆ ಸರ್ಜರಿ ಮಾಡಿದ್ರು!- ತನಿಖೆಗೆ ಆದೇಶ

    ತಿರುವನಂತಪುರಂ: ಆರು ಬೆರಳುಗಳಿರುವ ಮಗುವನ್ನು ಶಸ್ತ್ರಚಿಕಿತ್ಸೆಗೆಂದು ಕರೆದೊಯ್ದು ನಾಲಿಗೆಗೆ ಸರ್ಜರಿ (Tongue Surgery) ಮಾಡಿ ವೈದ್ಯರು ಎಡವಟ್ಟು ಮಾಡಿರುವ ಪ್ರಕರಣವೊಂದು ಕೇರಳದ (Kerala) ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

    ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರದಲ್ಲಿ ನಾಲ್ಕು ವರ್ಷದ ಬಾಲಕಿಯ ಕೈಯಲ್ಲಿರುವ ಆರನೇ ಬೆರಳನ್ನು ತೆಗೆಯುವ ಶಸ್ತ್ರ ಚಿಕಿತ್ಸೆ ನಡೆಯಬೇಕಿತ್ತು. ಈ ಬಾಲಕಿಯ ನಾಲಿಗೆಗೆ ಯಾವುದೇ ತೊಂದರೆ ಇರಲಿಲ್ಲ. ಆದರೆ ವೈದ್ಯರು ಆಕೆಯ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಭಾರೀ ಎಡವಟ್ಟು ಮಾಡಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಕಾಡಿಗೆ ಕರೆದೊಯ್ದು ಮೊಣಕಾಲುಗಳಿಗೆ ಸುತ್ತಿಗೆಯಿಂದ ಹಲ್ಲೆಗೈದು, ಮಚ್ಚು ಬೀಸಿದ ಪತಿ!

    ತನಿಖೆಗೆ ಆದೇಶ: ಶಸ್ತ್ರಚಿಕಿತ್ಸೆಯ ನಂತರ ಆಕೆಯ ಬಾಯಿಯಲ್ಲಿದ್ದ ಹತ್ತಿಯನ್ನು ನೋಡಿದಾಗ ವೈದ್ಯರ ಎಡವಟ್ಟು ಬಯಲಾಗಿದೆ. ಆಕೆಯ ಕೈ ಬೆರಳಿನ ಬದಲು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಘಟನೆ ಕುರಿತು ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಆರೋಗ್ಯ ಸಚಿವೆ ವೀಣಾ (Health Minister Veena) ಸೂಚಿಸಿದ್ದಾರೆ.

    ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ: ಈ ಘಟನೆಯ ನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘೋರ ತಪ್ಪಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

  • ಹೆಲ್ಮೆಟ್‌ ಹಾಕಿಲ್ಲವೆಂದು ತಡೆದಿದ್ದಕ್ಕೆ ಟ್ರಾಫಿಕ್‌ ಪೊಲೀಸ್‌ ಕೈ ಬೆರಳನ್ನೇ ಕಚ್ಚಿದ ಭೂಪ!

    ಹೆಲ್ಮೆಟ್‌ ಹಾಕಿಲ್ಲವೆಂದು ತಡೆದಿದ್ದಕ್ಕೆ ಟ್ರಾಫಿಕ್‌ ಪೊಲೀಸ್‌ ಕೈ ಬೆರಳನ್ನೇ ಕಚ್ಚಿದ ಭೂಪ!

    ಬೆಂಗಳೂರು: ವ್ಯಕ್ತಿಯೊಬ್ಬ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಯ ಕೈ ಬೆರಳನ್ನೇ ಕಚ್ಚಿದ ಪ್ರಸಂಗವೊಂದು ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಈ ಘಟನೆ ವಿಲ್ಸನ್ ಗಾರ್ಡನ್ 10ನೇ ಕ್ರಾಸ್ ಬಳಿ ಜರುಗಿದೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಜೊತೆಗೆ ವ್ಯಕ್ತಿಯ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿದೆ. ಇದನ್ನೂ ಓದಿ: ಜ್ಞಾನವಾಪಿ ತೀರ್ಪು ವಿರೋಧಿಸಿ ನ್ಯಾಯಾಧೀಶರ ನಿಂದನೆ – ವಕೀಲ ಅರೆಸ್ಟ್

    ನಡೆದಿದ್ದೇನು..?: 28 ವರ್ಷದ ಸಯ್ಯದ್ ಸಫಿ ಎಂಬಾತ ಹೆಲ್ಮೆಟ್‌ ಇಲ್ಲದೇ ಸ್ಕೂಟಿ ಚಲಾಯಿಸುತ್ತಿದ್ದ. ಇದನ್ನು ಗಮನಿಸಿದ ಟ್ರಾಫಿಕ್‌ ಪೊಲೀಸ್‌ ಆತನನ್ನು ತಡೆದಿದ್ದಾರೆ. ಬಳಿಕ ಪೇದೆ ಆತನ ಬಳಿಯಿಂದ ಕೀ ಕಿತ್ತುಕೊಂಡಿದ್ದಾರೆ. ಹೆಡ್ ಕಾನ್‌ಸ್ಟೆಬಲ್ ಸಿದ್ದರಾಮೇಶ್ವರ ಕೌಜಲಗಿ ಅವರು ಟ್ರಾಫಿಕ್‌ ಉಲ್ಲಂಘಿಸಿದ ಪ್ರಕರಣ ದಾಖಲಿಸಿಕೊಳ್ಳಲು ವೀಡಿಯೋ ಮಾಡಿದ್ದಾರೆ.

    ಕೀ ಕಿತ್ತುಕೊಂಡಿದ್ದಕ್ಕೆ ಸಿಟ್ಟಿಗೆದ್ದ ಯುವಕ, ಟ್ರಾಫಿಕ್‌ ಪೊಲೀಸ್‌ ಕೈ ಬೆರಳನ್ನೇ ಕಚ್ಚಿದ್ದಾನೆ. ಇತ್ತ ಹೆಡ್ ಕಾನ್‌ಸ್ಟೆಬಲ್‌ನ ಫೋನ್ ಕಿತ್ತುಕೊಂಡ ಸಯ್ಯದ್ ಸಫಿ, ತನ್ನ ವೀಡಿಯೋ ಯಾಕೆ ರೆಕಾರ್ಡ್‌ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ಅಲ್ಲಿಂದ ಎಸ್ಕೇಪ್‌ ಆಗಲು ಪ್ರಯತ್ನಿಸಿದ್ದಾನೆ. ಕೂಡಲೇ ಆತನನ್ನು ಹಿಡಿದು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿ ವಿಲ್ಸನ್ ಗಾರ್ಡನ್ 10ನೇ ಕ್ರಾಸ್‌ನಲ್ಲಿ ಟ್ರಾಫಿಕ್ ಪೇದೆಯನ್ನು ನಿಂದಿಸಿ, ಬೆರಳನ್ನು ಕಚ್ಚಿ ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯನ್ನು ನಿಂದಿಸಿದ ಮತ್ತು ದೈಹಿಕವಾಗಿ ನೋವುಂಟು ಮಾಡಿದ ಆರೋಪದ ಮೇಲೆ ಶಫಿ ವಿರುದ್ಧ (ಕ್ರಿಮಿನಲ್ ಬೆದರಿಕೆ ಮತ್ತು ಶಾಂತಿ ಭಂಗ) ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

  • ಪತ್ನಿಯ ಬೆರಳನ್ನೇ ಕಚ್ಚಿ ತಿಂದ ಪತಿ

    ಪತ್ನಿಯ ಬೆರಳನ್ನೇ ಕಚ್ಚಿ ತಿಂದ ಪತಿ

    ಬೆಂಗಳೂರು: ಜಗಳದ ವೇಳೆ ಪತ್ನಿಯ (Wife) ಎಡಗೈ ಬೆರಳನ್ನೇ (Finger) ಪತಿ (Husband) ಕಚ್ಚಿ ತಿಂದಿರುವ ಘಟನೆ ಬೆಂಗಳೂರಿನ (Bengaluru) ಕೋಣನಕುಂಟೆ (Konanakunte) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪುಷ್ಪಾ (40) ಎಂಬ ಮಹಿಳೆ 23 ವರ್ಷಗಳ ಹಿಂದೆ ವಿಜಯ್‌ಕುಮಾರ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯಾದ ಕೆಲ ವರ್ಷಗಳಿಂದ ವಿಜಯ್‌ಕುಮಾರ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ. ವಿವಾಹದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ದಂಪತಿಗೆ ಒಬ್ಬ ಮಗನೂ ಇದ್ದಾನೆ. ಇದನ್ನೂ ಓದಿ: ಜಾಮೀನಿಗಾಗಿ ವಕೀಲನ ಕಿಡ್ನಾಪ್ – ರಾತ್ರಿ ಇಡೀ ಹಲ್ಲೆ ನಡೆಸಿ ಕ್ರೌರ್ಯ ಮೆರೆದ ರೌಡಿಶೀಟರ್

    ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ಬೇರೆಡೆ ಮನೆ ಮಾಡಿ ಪತಿಯಿಂದ ದೂರವಿದ್ದರು. ಜುಲೈ 28ನೇ ತಾರೀಕು ಪತಿ ವಿಜಯ್‌ಕುಮಾರ್ ಪತ್ನಿ ಇದ್ದ ಮನೆಗೆ ತೆರಳಿ ಜಗಳ ತೆಗೆದಿದ್ದ. ಈ ವೇಳೆ ಪತ್ನಿಯ ಬೆರಳನ್ನು ಪತಿ ಕಚ್ಚಿ ತಿಂದಿದ್ದು, ನಿನ್ನನ್ನು ಕೂಡಾ ಕೊಂದು ಇದೇ ರೀತಿ ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ರೌಡಿಶೀಟರ್‌ಗಳನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಹೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 3 ಸಾವಿರಕ್ಕಾಗಿ ಯುವಕನನ್ನು ಹಾಡಹಗಲೇ ಚುಚ್ಚಿ ಚುಚ್ಚಿ ಕೊಂದ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಳೆಯ ಮೊಬೈಲ್ ಬ್ಯಾಟರಿ ಸ್ಫೋಟ – 10ರ ಬಾಲಕನ ಕೈಗೆ ಗಾಯ

    ಹಳೆಯ ಮೊಬೈಲ್ ಬ್ಯಾಟರಿ ಸ್ಫೋಟ – 10ರ ಬಾಲಕನ ಕೈಗೆ ಗಾಯ

    ಹಾವೇರಿ: ಆಟವಾಡುತ್ತಿದ್ದ ವೇಳೆ ಮೊಬೈಲ್‍ನ ಹಳೆಯ ಬ್ಯಾಟರಿ ಸ್ಫೋಟಗೊಂಡು 10 ವರ್ಷದ ಬಾಲಕನ ಕೈಯ ಮೂರು ಬೆರಳುಗಳು ಕಟ್ ಹಾಗೂ ಮುಖಕ್ಕೆ ಗಾಯವಾದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.

    ಗಾಯಗೊಂಡ ಬಾಲಕನನ್ನ ಕಾರ್ತಿಕ್ ಕಲಾದಗಿ(10) ಎಂದು ಗುರುತಿಸಲಾಗಿದೆ. ಮನೆಯ ಪಕ್ಕದಲ್ಲಿ ಎಸೆದಿದ್ದ ಮೊಬೈಲ್ ನ ಹಾಳಾದ ಬ್ಯಾಟರಿ ತೆಗೆದುಕೊಂಡು ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    ಹಳೆಯ ಮೊಬೈಲ್ ಬ್ಯಾಟರಿಯಲ್ಲಿ ಲೈಟ್ ಹಚ್ಚಲು ಹೋಗಿ ಬ್ಯಾಟರಿ ಸಾರ್ಟ್ ಆಗಿ ಸ್ಫೋಟಗೊಂಡಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳು ಕಾರ್ತಿಕನನ್ನು ಸದ್ಯ ಸವಣೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ:ಡಿನ್ನರ್ ಮೀಟಿಂಗ್ ಪಾಲಿಟಿಕ್ಸ್ ನಡುವೆ ಡಿಕೆಶಿ ರಿವೆಂಜ್ ಪಾಲಿಟಿಕ್ಸ್

  • ಎರಡು ತಿಂಗಳ ಮಗುವಿನ ಬೆನ್ನಿನ ಮೇಲೆ ಬೆಳೆದ ಬೆರಳು

    ಎರಡು ತಿಂಗಳ ಮಗುವಿನ ಬೆನ್ನಿನ ಮೇಲೆ ಬೆಳೆದ ಬೆರಳು

    – ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದ ವೈದ್ಯರು

    ಭೋಪಾಲ್: ಎರಡು ತಿಂಗಳ ಬಾಲಕಿಯ ಬೆನ್ನಿನ ಮೇಲೆ ಬೆರಳು ಕಾಣಿಸಿಕೊಂಡ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ.

    ಖಾರ್ಗೋನ್ ಜಿಲ್ಲೆಯ ಬಾರ್ವಾ ಸಮೀಪ ಹಳ್ಳಿಯ ಎರಡು ತಿಂಗಳ ಹೆಣ್ಣು ಮಗವಿಗೆ ಇಂತಹ ಅಪರೂಪ ಕಾಯಿಲೆ ಕಾಣಿಸಿಕೊಂಡಿದೆ. ಹುಟ್ಟಿನಿಂದಲೇ ಮಗುವಿನ ಹಿಂಭಾಗದಲ್ಲಿ ಬೆರಳಿನಂತೆ ಕಾಣುವ ಉಂಡೆ ಇತ್ತು. ಆದರೆ ಪೋಷಕರು ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಿರಲಿಲ್ಲ. ಇದನ್ನೂ ಓದಿ: 19 ಕಾಲ್ಬೆರಳು, 12 ಕೈಬೆರಳಿರುವ ಅಜ್ಜಿಯನ್ನ ಮಾಟಗಾತಿ ಎಂದು ನಿಂದಿಸಿದ ಜನ

    ಮಗು ಜನಿಸಿದ ಎರಡು ತಿಂಗಳಿಗೆ ಹಿಂಭಾಗದಲ್ಲಿದ್ದ ಗಂಟು ಬೆರಳಿನ ಆಕಾರದಲ್ಲಿ ಬೆಳೆಯಲು ಆರಂಭಿಸಿತ್ತು. ಇದರಿಂದ ಗಾಬರಿಗೊಂದ ಪೋಷಕರು ಹೆಣ್ಣು ಮಗುವಿನೊಂದಿಗೆ ಎಂವೈ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ವಿಭಾಗವನ್ನು ತಲುಪಿದರು. ಆಗ ವೈದ್ಯರು ಎಂಆರ್‌ಐ ಟೆಸ್ಟ್ ಮಾಡಿದಾಗ, ಟೆಥರ್ಡ್ ಕಾರ್ಡ್ ಎಂಬ ಆಂತರಿಕ ಕಾಯಿಲೆ ಇರುವುದು ಕಂಡುಬಂದಿದೆ. ಇದರಲ್ಲಿ, ಒಂದು ದೊಡ್ಡ ರಕ್ತನಾಳ (ಬೆನ್ನುಹುರಿ) ಅದರ ಗೊತ್ತುಪಡಿಸಿದ ಸ್ಥಳಕ್ಕಿಂತ ಕೆಳಗೆ ಅಂಟಿಕೊಂಡಿದೆ ಎನ್ನುವುದನ್ನು ವೈದ್ಯರು ಗುರುತಿಸಿದ್ದರು. ಇದನ್ನೂ ಓದಿ: ವ್ಯಕ್ತಿ ದೇಹದಲ್ಲಿತ್ತು ಬರೋಬ್ಬರಿ 7.4 ಕೆಜಿ ತೂಕದ ಕಿಡ್ನಿ

    ಒಂದು ಸೂಕ್ತ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಈ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಕಾಲುಗಳಲ್ಲಿ ದೌರ್ಬಲ್ಯ, ವಕ್ರತೆ ಮತ್ತು ಅಡಚಣೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಅತ್ಯಂತ ಅಪರೂಪದ ರೋಗ ಎಂದು ಎಂವೈ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ನರಶಸ್ತ್ರಚಿಕಿತ್ಸೆ ವೈದ್ಯರಾದ ರಾಕೇಶ್ ಗುಪ್ತಾ ಮತ್ತು ಡಾ. ಜಾಫರ್ ಶೇಖ್ ಅವರ ನೇತೃತ್ವದ ತಂಡವು ಹೆಣ್ಣು ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸೊಂಟದಿಂದ ಬೆರಳು-ಕೊಂಡಿಯನ್ನು ಬೇರ್ಪಡಿಸುವ ಮೂಲಕ ಬೆನ್ನುಹುರಿಯನ್ನು ಸರಿಪಡಿಸಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ ನಾಲ್ಕು ದಿನಗಳ ನಂತರ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಿದ್ದಾರೆ. ಇದನ್ನೂ ಓದಿ: 25 ಬಾರಿ ಸರ್ಜರಿಗೆ ಒಳಗಾದ್ರೂ ಕೈಯಲ್ಲಿ ತೊಗಟೆ ಬೆಳೆಯುವುದು ನಿಂತಿಲ್ಲ!

  • ನಿಖಿಲ್ ಸೋತಿದ್ದಕ್ಕೆ ಬೆರಳನ್ನೇ ಕತ್ತರಿಸಿಕೊಂಡ ಅಭಿಮಾನಿ?

    ನಿಖಿಲ್ ಸೋತಿದ್ದಕ್ಕೆ ಬೆರಳನ್ನೇ ಕತ್ತರಿಸಿಕೊಂಡ ಅಭಿಮಾನಿ?

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಕ್ಕೆ ಅಭಿಮಾನಿಯೊಬ್ಬ ತನ್ನ ಬೆರಳನ್ನು ಕತ್ತರಿಸಿಕೊಂಡಿದ್ದಾನೆ.

    ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ನಿಖಿಲ್ ಸೋತಿದ್ದಕ್ಕೆ ಅಭಿಮಾನಿ ಮತದಾನ ಮಾಡಿದ ನಂತರ ಕೈಗೆ ಶಾಯಿ ಹಾಕಿಸಿಕೊಂಡಿದ್ದ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತದೆ.

    ಸಾಮಾಜಿಕ ಜಾಲತಾಣದಲ್ಲಿ ಬೆರಳು ಕತ್ತರಿಸಿಕೊಂಡಿದ್ದ ಫೋಟೋ ಹರಿದಾಡುತ್ತಿದೆ. ನಿಖಿಲ್ ಸೋತ ಮೇಲೆ ಅವರಿಗೆ ಮತ ಹಾಕಿ ಶಾಹಿ ಹಾಕಿಸಿಕೊಂಡ ಬೆರಳು ಇರಬಾರದೆಂದು ಕತ್ತರಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

    ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ. ಆ ಮೂಲಕ ಸುಮಲತಾ ಅವರು ಬರೋಬ್ಬರಿ 1,26,436 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

  • ಪಾಕಿಸ್ತಾನಿ ಡ್ರಾಮಾ ನೋಡ್ತಿದ್ದ ಪತ್ನಿಯ ಬೆರಳು ಕಟ್!

    ಪಾಕಿಸ್ತಾನಿ ಡ್ರಾಮಾ ನೋಡ್ತಿದ್ದ ಪತ್ನಿಯ ಬೆರಳು ಕಟ್!

    ಮುಂಬೈ: ತನ್ನೊಂದಿಗೆ ಮಾತನಾಡದೇ ಮೊಬೈಲಿನಲ್ಲಿ ಪಾಕಿಸ್ತಾನಿ ನಾಟಕವನ್ನು ನೋಡುತ್ತಿದ್ದರಿಂದ ಕೋಪಗೊಂಡ ಪತ್ನಿಯ ಕೈ ಬೆಳರನ್ನೇ ಪತಿಯೊಬ್ಬ ಕತ್ತರಿಸಿರುವ ಘಟನೆ ಪುಣೆಯ ಸಲಿಸ್ಬರಿ ಪಾರ್ಕ್ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು, ಆರೋಪಿ ಪತಿಯನ್ನು ಆಸಿಫ್ ಸತ್ತರ್ ನಯಾಬ್ ಎಂದು ಗುರುತಿಸಲಾಗಿದ್ದು, ಈತ ತರಕಾರಿ ಕಟ್ ಮಾಡುವ ಚಾಕು ತೆಗೆದುಕೊಂಡು ಪತ್ನಿಯ ಬಲಗೈಯ ಹೆಬ್ಬೆರಳನ್ನು ಕತ್ತರಿಸಿದ್ದಾನೆ.

    ನಡೆದಿದ್ದೇನೆ?
    ಮಹಿಳೆ ಸೋಮವಾರ ಮುಂಜಾನೆ ತನ್ನ ಮಗನ್ನು ಅಂಗಡಿಯಿಂದ ಹಾಲು ತರುವಂತೆ ಕಳುಹಿಸಿದ್ದಳು. ಮಗ ಹಾಲನ್ನು ತಂದಿದ್ದಾನೆ. ಆದರೆ ಹಾಲಿನ ಪ್ಯಾಕೇಟ್ ಡ್ಯಾಮೇಜ್ ಆಗಿದ್ದು, ಹಾಲು ಕೆಳಗೆ ಚೆಲ್ಲಿತ್ತು. ಹೀಗಾಗಿ ಮಗನನ್ನು ಬೈಯುತ್ತಿದ್ದಳು. ಪತ್ನಿಯ ಧ್ವನಿ ಕೇಳಿ ನಯಾಬ್ ಬಂದಿದ್ದಾನೆ. ಆಗ ಪತ್ನಿ-ಪತಿ ನಡುವೆ ಜಗಳವಾಗಿದೆ. ನಂತರ ಪತಿ ಕೆಲಸಕ್ಕೆ ಹೋಗಿದ್ದಾನೆ.

    ಸಂಜೆ ಮನೆಗೆ ಪತಿ ಬಂದಾಗ ಪತ್ನಿ ಬೆಡ್‍ರೂಮಿನಲ್ಲಿ ಇದ್ದಳು. ಆಕೆಯನ್ನು ಮಾತನಾಡಿಸಲು ನಯಾಬ್ ರೂಮಿಗೆ ಹೋಗಿದ್ದಾನೆ. ಈ ವೇಳೆ ಪತ್ನಿ ನಯಾಬ್ ಜೊತೆ ಮಾತನಾಡದೆ ಆತನನ್ನ ನಿರ್ಲಕ್ಷ್ಯ ಮಾಡಿ ಮೊಬೈಲಿನಲ್ಲಿ ‘ಪಾಕಿಸ್ತಾನಿ ಡ್ರಾಮಾ’ ವನ್ನು ನೋಡುತ್ತಿದ್ದಳು. ಆಗ ತನಗಿಂತ ಧಾರಾವಾಹಿ ನೋಡುವುದೇ ಹೆಚ್ಚಾಯಿತು ಎಂದು ಕೋಪಗೊಂಡ ನಯಾಬ್ ಚಾಕು ತಂದು ಆಕೆಯ ಮೇಲೆ ಹಲ್ಲೆ ಮಾಡಿದ್ದು, ಪತ್ನಿಯ ಬಲಗೈನ ಹೆಬ್ಬೆರಳನ್ನು ಕತ್ತರಿಸಿದ್ದಾನೆ ಎಂದು ಪೊಲೀಸರು ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಪತ್ನಿ ಈ ಕುರಿತು ಸ್ವರ್ಗೇಟ್ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ. ಕೊಲೆ ಯತ್ನದ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಸೋಮವಾರ ಸಂಜೆ ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 3 ತಿಂಗಳ ಹಸುಗೂಸಿನ ಬೆರಳು ಕಟ್ ಮಾಡಿದ ಪಾಪಿ ವೈದ್ಯ

    3 ತಿಂಗಳ ಹಸುಗೂಸಿನ ಬೆರಳು ಕಟ್ ಮಾಡಿದ ಪಾಪಿ ವೈದ್ಯ

    ಬೆಳಗಾವಿ(ಚಿಕ್ಕೋಡಿ): ಪಾಪಿ ವೈದ್ಯನೊಬ್ಬ ಮೂರು ತಿಂಗಳ ಹಸುಗೂಸಿನ ಬೆರಳು ಕಟ್ ಮಾಡಿದ ಘಟನೆ ಬೆಳಗಾವಿ ನಗರದ ಕಿರ್ಲೊಸ್ಕರ್ ರಸ್ತೆಯಲ್ಲಿರುವ ಬೆಳಗಾವಿ ಚಿಲ್ಡ್ರನ್ ಆಸ್ಪತ್ರೆಯಲ್ಲಿ ನಡೆದಿದೆ.

    ಬಾಬಣ್ಣ ಹುಕ್ಕೇರಿ ಎಂಬ ವೈದ್ಯ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಉಮೇಶ್ ಎಂಬವರ ಪುಟ್ಟ ಕಂದಮ್ಮನ ಬೆರಳನ್ನೇ ಕಟ್ ಮಾಡಿದ್ದಾನೆ.

    ಕಂದಮ್ಮ ಜ್ವರದಿಂದ ಬಳಲುತ್ತಿದ್ದ ವೇಳೆ ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಗ ವೈದ್ಯ ಬಾಬಣ್ಣ ಹುಕ್ಕೇರಿ ಸಲಾಯಿನ್ ಹಾಕಿದ್ದ ಬ್ಯಾಂಡೇಜ್ ತೆಗೆಯುವಾಗ ಮಗುವಿನ ಬೆರಳು ಕಟ್ ಮಾಡಿದ್ದಾನೆ. ಬಳಿಕ ತುಂಡಾದ ಬೆರಳು ಜೋಡಿಸಲು ಹರಸಾಹಸ ಪಟ್ಟಿದ್ದಾನೆ.

    ಈ ಬಗ್ಗೆ ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೈದ್ಯ ಬಾಬಣ್ಣ ಹುಕ್ಕೇರಿ, ನರ್ಸ್ ಅಶ್ವಿನಿ ವಿರುದ್ಧ ಕೇಸ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪಾರ್ಟಿ ಮಾಡಿ ಕೊಲೆಗೈದು ವ್ಯಕ್ತಿಯ ಬೆರಳುಗಳನ್ನೇ ಕತ್ತರಿಸಿ ಕೊಂಡೊಯ್ದರು..!

    ಪಾರ್ಟಿ ಮಾಡಿ ಕೊಲೆಗೈದು ವ್ಯಕ್ತಿಯ ಬೆರಳುಗಳನ್ನೇ ಕತ್ತರಿಸಿ ಕೊಂಡೊಯ್ದರು..!

    ಬೆಳಗಾವಿ: ಪಾರ್ಟಿ ಬಳಿಕ ಮಾರಕಾಸ್ತ್ರಗಳಿಂದ ಅಪರಿಚಿತ ವ್ಯಕ್ತಿಯೋರ್ವನನ್ನು ಕೊಚ್ಚಿ ಕೊಲೆಗೈದು ಆತನ ಬೆರಳುಗಳನ್ನು ಕತ್ತರಿಸಿ ಕೊಂಡೊಯ್ದಿರುವ ಭಯಾನಕ ಘಟನೆ ನಗರದ ಅಲಾರವಾಡ ಬ್ರಿಡ್ಜ್ ಬಳಿ ಭಾನುವಾರ ರಾತ್ರಿ ನಡೆದಿದೆ.

    ಹಂತಕರು ಮೊದಲು ಅಪರಿಚಿತ ವ್ಯಕ್ತಿಯ ತಲೆಗೆ ಮಾರಾಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ. ನಂತರ ಆತನ ಎಡಗೈನ ಮೂರು ಬೆರಳುಗಳನ್ನು ಕಟ್ ಮಾಡಿ ಕೊಂಡೊಯ್ದಿದ್ದಾರೆ. ಘಟನಾ ಸ್ಥಳದಲ್ಲಿ ಎಣ್ಣೆ ಪಾರ್ಟಿ ಮಾಡಿರುವ ಗ್ಲಾಸ್‍ಗಳು ಪತ್ತೆಯಾಗಿದ್ದು, ಹೊಸ ವರ್ಷ ಬರುವ ಸಂತಸದಲ್ಲಿ ಮೃತನ ಜೊತೆ ಪಾರ್ಟಿ ಮಾಡಿ ಬಳಿಕ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿಸಿಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಹಂತಕರನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗುವುದು. ಮೃತ ವ್ಯಕ್ತಿಯ ಗುರುತು ಇನ್ನೂ ದೊರಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 1 ಸಾವಿರ ರೂ. ಸಾಲ ವಾಪಸ್ ನೀಡದ್ದಕ್ಕೆ ಬೆರಳನ್ನೇ ಕತ್ತರಿಸಿದ!

    1 ಸಾವಿರ ರೂ. ಸಾಲ ವಾಪಸ್ ನೀಡದ್ದಕ್ಕೆ ಬೆರಳನ್ನೇ ಕತ್ತರಿಸಿದ!

    ತುಮಕೂರು: 1 ಸಾವಿರ ರೂಪಾಯಿ ಸಾಲವನ್ನು ವಾಪಸ್ ನೀಡದ್ದಕ್ಕೆ ವ್ಯಕ್ತಿಯೊಬ್ಬರ ಬೆರಳನ್ನೇ ಕತ್ತರಿಸಿರುವ ಅಮಾನುಷ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ತುಮಕೂರು ತಾಲೂಕಿನ ನಿಡುಹೊಳಲು ಗ್ರಾಮದ ನಿವಾಸಿ ಶಿವಣ್ಣ ಕೈ ಬೆರಳನ್ನು ಕಳೆದುಕೊಂಡ ವ್ಯಕ್ತಿ. ಶಿವಣ್ಣ ಅದೇ ಗ್ರಾಮದ ಕುಮಾರ್ ಎಂಬುವರಿಂದ ಕಳೆದ 15 ದಿನದ ಹಿಂದೆ ಒಂದು ಸಾವಿರ ರೂ. ಸಾಲ ಪಡೆದಿದ್ದರು.

    ಭಾನುವಾರ ಕುಮಾರ್ ಸಾಲ ಹಿಂದಿರುಗಿಸುಂತೆ ಶಿವಣ್ಣಗೆ ತಾಕೀತು ಮಾಡಿದ್ದಾನೆ. ದುಡ್ಡು ಹೊಂದಿಸಲು ಆಗದೇ ಇದ್ದುದರಿಂದ ಇಂದು ಸೋಮವಾರ ಮರಳಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪದ ಕುಮಾರ್ ಹಾಗೂ ಆತನ ಪತ್ನಿ ವೀಣಾ ಶಿವಣ್ಣರ ಜೊತೆ ಜಗಳ ಮಾಡಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.

    ಹಲ್ಲೆ ಮಾಡಿದ ಪರಿಣಾಮ ಶಿವಣ್ಣನ ಬಲಗೈಯ ಮಧ್ಯದ ಬೆರಳು ತುಂಡಾಗಿ ಬಿದ್ದಿದೆ. ಅಷ್ಟೇ ಅಲ್ಲದೇ ಎದೆ ಭಾಗಕ್ಕೂ ಏಟಾಗಿದೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.