Tag: Financial Problem

  • ಹೈದರಾಬಾದ್‌ನಲ್ಲಿ ದಂಪತಿ ಆತ್ಮಹತ್ಯೆ – ಇಬ್ಬರು ಮಕ್ಕಳು ಶವವಾಗಿ ಪತ್ತೆ

    ಹೈದರಾಬಾದ್‌ನಲ್ಲಿ ದಂಪತಿ ಆತ್ಮಹತ್ಯೆ – ಇಬ್ಬರು ಮಕ್ಕಳು ಶವವಾಗಿ ಪತ್ತೆ

    – ಹಣಕಾಸು ಸಮಸ್ಯೆ, ಅನಾರೋಗ್ಯದಿಂದ ಬಳಲುತ್ತಿರೋದಾಗಿ ಡೆತ್ ನೋಟ್

    ಹೈದರಾಬಾದ್: ಹಣಕಾಸು ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಇಬ್ಬರು ಮಕ್ಕಳು ಕೂಡ ಶವವಾಗಿ ಪತ್ತೆಯಾದ ಘಟನೆ ಹೈದರಾಬಾದ್‌ನ (Hyderabad) ಹಬ್ಸಿಗುಡದಲ್ಲಿ (Habsiguda) ನಡೆದಿದೆ.

    ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಕ್ಕಳನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗಂಡ-ಹೆಂಡತಿಯ ಮೃತದೇಹ ಬೇರೆಬೇರೆ ಕೋಣೆಗಳಲ್ಲಿ ಪತ್ತೆಯಾಗಿದ್ದು, ಅಪ್ರಾಪ್ತ ಮಕ್ಕಳು ಬೆಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಭಾರತೀಯ ಕುಸ್ತಿ ಒಕ್ಕೂಟದ ಮೇಲಿನ ಅಮಾನತು ವಾಪಸ್

    ಹಬ್ಸಿಗುಡ ಪ್ರದೇಶದ ರವೀಂದ್ರನಗರ ಕಾಲೋನಿಯಲ್ಲಿರುವ ನಿವಾಸದಲ್ಲಿ ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಬಳಿಕ ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಂಪತಿ ಮೊದಲು ತಮ್ಮ ಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ನೇಣು ಹಾಕಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಉಸ್ಮಾನಿಯಾ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎನ್ ರಾಜೇಂದರ್ ತಿಳಿಸಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದು ತವರಿಗೆ ಬಂದ ಕ್ಯಾಪ್ಟನ್ ರೋಹಿತ್‌ಗೆ ಭರ್ಜರಿ ಸ್ವಾಗತ

    ಇನ್ನು ಘಟನೆಗೆ ಸಂಬಂಧಿಸಿದಂತೆ ಆತ್ಮಹತ್ಯೆಗೂ ಮುನ್ನ ಪತಿ ಬರೆದಿದ್ದ ಡೆತ್ ನೋಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಝೀರೋ ಬ್ಯಾಲೆನ್ಸ್ ಇದ್ದ ರನ್ಯಾ ಅಕೌಂಟ್‌ಗೆ 2 ದಿನದಲ್ಲಿ 10 ಲಕ್ಷ ಹಣ!

    ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಜೀವನವನ್ನು ಕೊನೆಗೊಳಿಸುವುದನ್ನು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನನ್ನ ವೃತ್ತಿಜೀವನದಲ್ಲಿ ಕಷ್ಟಪಡುತ್ತಿದ್ದೇನೆ ಮತ್ತು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿದ್ದೇನೆ. ನಾನು ಮಧುಮೇಹ, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮೂತ್ರಪಿಂಡದ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದೇನೆ ಎಂದು ತೆಲುಗಿನಲ್ಲಿ ಪತಿ ಡೆತ್ ನೋಟ್ ಬರೆದಿದ್ದಾರೆ. ಇದನ್ನೂ ಓದಿ: ಕೊಪ್ಪಳ ಗ್ಯಾಂಗ್‌ರೇಪ್ ಪ್ರಕರಣ – ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

    ಮೆಹಬೂಬ್‌ನಗರ ಜಿಲ್ಲೆಯ ಕಲ್ವಕುರ್ತಿ ಬ್ಲಾಕ್‌ನ ಮುಕುರಲ್ಲಾ ಗ್ರಾಮದವರಾದ ದಂಪತಿ ತಮ್ಮ ಮಕ್ಕಳೊಂದಿಗೆ ಒಂದು ವರ್ಷದ ಹಿಂದೆ ಹಬ್ಸಿಗುಡಕ್ಕೆ ಬಂದು ನೆಲೆಸಿದ್ದರು. ಖಾಸಗಿ ಕಾಲೇಜುವೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತಿದ್ದ ಪತಿ ಕಳೆದ ಆರು ತಿಂಗಳಿನಿಂದ ನಿರುದ್ಯೋಗಿಯಾಗಿದ್ದರು. ದೀರ್ಘಕಾಲದ ನಿರುದ್ಯೋಗದಿಂದಾಗಿ ಆರ್ಥಿಕ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರಬಹುದು. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ರಾಜೇಂದರ್ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಿರೋಧ

  • ಕೊರೊನಾಗೆ ಔಷಧಿ ಅಂತ ತನ್ನ ಕುಟುಂಬದವರಿಗೆ ವಿಷ ನೀಡಿದ

    ಕೊರೊನಾಗೆ ಔಷಧಿ ಅಂತ ತನ್ನ ಕುಟುಂಬದವರಿಗೆ ವಿಷ ನೀಡಿದ

    – ಪತ್ನಿ ಮೂವರು ಮಕ್ಕಳಿಗೆ ನೀಡಿ, ತಾನೂ ಕುಡಿದ

    ರಾಯ್ಪುರ: ವ್ಯಕ್ತಿಯೊಬ್ಬ ತೀವ್ರ ಆರ್ಥಿಕ ಸಮಸ್ಯೆಯಿಂದಾಗಿ ಕೊರೊನಾಗಾಗಿ ಔಷಧಿ ಎಂದು ಸುಳ್ಳು ಹೇಳಿ ತನ್ನದೇ ಕುಟುಂಬದ ಐವರಿಗೆ ವಿಷ ನೀಡಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.

    ಖರೋರಾ ಗ್ರಾಮದ ನಿವಾಸಿ ನಾರಾಯಣ್ ದೇವಾಂಗನ್ ಎಂಬಾತ ತನ್ನ ಕುಟುಂಬಸ್ಥರಿಗೆ ವಿಷ ನೀಡಿ ಕೊಲೆ ಮಾಡಲು ಯತ್ನಿಸಿದ್ದಾನೆ. ಇದೀಗ ಐವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ವಿಷ ಸೇವಿಸಿದವರನ್ನು ಪತ್ನಿ ದಾಮಿನಿ (30), ಇಬ್ಬರು ಹೆಣ್ಣು ಮಕ್ಕಳಾದ ಪ್ರಿಯಾ (11) ಮತ್ತು ಗಾಯತ್ರಿ (10) ಹಾಗೂ ಮಗ ಕುಲೇಶ್ವರ (7) ಎಂದು ಗುರುತಿಸಲಾಗಿದೆ. ಇವರಿಗೆಲ್ಲಾ ಕೋವಿಡ್ -19 ಸೋಂಕನ್ನು ಎದುರಿಸಲು ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸುಳ್ಳು ಹೇಳಿ ವಿಷ ಕುಡಿಸಿದ್ದಾನೆ. ನಾರಾಯಣ್ ದಿವಾಂಗನ್ ತನ್ನ ಕುಟುಂಬದ ಎಲ್ಲರಿಗೂ ವಿಷ ನೀಡಿದ ನಂತರ ತಾನೂ ಅದೇ ವಿಷವನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೊರೊನಾ ಹಿನ್ನೆಲೆ ಕಳೆದ ಐದು ತಿಂಗಳುಗಳಿಂದ ಕೆಲಸ ಇಲ್ಲದೆ ಕುಟುಂಬ ನಿರ್ವಹಣೆಗೆ ಹಣವೂ ಇಲ್ಲದೆ ಪರದಾಡುತ್ತಿದ್ದನು. ಕೆಲವು ತಿಂಗಳ ಹಿಂದೆ ತನ್ನ ಕೃಷಿ ಭೂಮಿಯನ್ನು ಸಹ ಮಾರಾಟ ಮಾಡಿದ್ದನು. ಆದರೆ ವಿಪರೀತ ಸಾಲ ಮಾಡಿಕೊಂಡಿದ್ದನು. ಇದಲ್ಲದೇ ಆತ ಕುಡಿತದ ದಾಸನಾಗಿದ್ದನು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

    ದೇವಾಂಗನ್ ಕೊರೊನಾ ಸೋಂಕು ನಿವಾರಣೆಗೆ ಔಷಧಿ ತಂದಿದ್ದೇನೆ ಎಂದು ಪಾನೀಯದೊಳಗೆ ಮಿಕ್ಸ್ ಮಾಡಿ ಕೊಟ್ಟಿದ್ದಾನೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಜಗಳ ಮಾಡಿಕೊಂಡು ಗಂಡ-ಹೆಂಡತಿ ಆತ್ಮಹತ್ಯೆ

    ಜಗಳ ಮಾಡಿಕೊಂಡು ಗಂಡ-ಹೆಂಡತಿ ಆತ್ಮಹತ್ಯೆ

    – ಲಾಕ್‍ಡೌನ್‍ನಲ್ಲಿ ಕೆಲಸ ಕಳ್ಕೊಂಡ ಪತಿ
    – ಅನಾಥವಾದ ಮಕ್ಕಳು

    ಲಕ್ನೋ: ಕೌಟುಂಬಿಕ ಕಲಹದಿಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್‌ನಲ್ಲಿ ನಡೆದಿದೆ.

    ರಾಕೇಶ್ ಕುಮಾರ್ ಸಿಂಗ್ (40) ಮತ್ತು ಪತ್ನಿ ಅರ್ಚನಾ (36) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಗುರುವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

    ಕುಟುಂಬದವರು ಮತ್ತು ನೆರೆಹೊರೆಯವರು ಅವರನ್ನು ತಕ್ಷಣ ಕೆಳಗಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ದಂಪತಿ ಮೃತಪಟ್ಟಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಆದರೆ ಘಟನೆ ನಡೆದ ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ರಾಜ್‍ಕುಮಾರ್ ಅಗರ್ವಾಲ್ ಹೇಳಿದ್ದಾರೆ.

    ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದ್ದ ವೇಳೆ ಸಿಂಗ್ ಕೆಲಸ ಕಳೆದುಕೊಂಡಿದ್ದ. ಇದರಿಂದ ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಅಲ್ಲದೇ ಆರ್ಥಿಕ ಸಂಕಷ್ಟದಲ್ಲಿದ್ದ ದಂಪತಿ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಶ್ರೀವಾಸ್ತವ ಹೇಳಿದ್ದಾರೆ.

  • ಅಡಲ್ಟ್ ಸಿನಿಮಾ ಮಾಡುತ್ತಿರುವುದಕ್ಕೆ ನನ್ನ ತಂದೆ ಹೆಮ್ಮೆ ಪಡುತ್ತಾರೆ: ರೆನೀ ಗ್ರೇಸಿ

    ಅಡಲ್ಟ್ ಸಿನಿಮಾ ಮಾಡುತ್ತಿರುವುದಕ್ಕೆ ನನ್ನ ತಂದೆ ಹೆಮ್ಮೆ ಪಡುತ್ತಾರೆ: ರೆನೀ ಗ್ರೇಸಿ

    ಸಿಡ್ನಿ: ಸೂಪರ್ ಕಾರ್ ರೇಸರ್ ಆಗಿದ್ದ ನಾನು ಅಡಲ್ಟ್ ಇಂಡಸ್ಟ್ರಿ ಬಂದಿದಕ್ಕೆ ನನ್ನ ತಂದೆ ಹೆಮ್ಮೆ ಪಡುತ್ತಾರೆ ಎಂದು ನೀಲಿ ಚಿತ್ರ ತಾರೆ ರೆನೀ ಗ್ರೇಸಿ ಹೇಳಿದ್ದಾಳೆ.

    25 ವರ್ಷದ ರೆನೀ ಗ್ರೇಸಿ ಈಗ ಡ್ರೈವಿಂಗ್ ವೃತ್ತಿಯನ್ನು ಸಂಪೂರ್ಣವಾಗಿ ತ್ಯಜಿಸಿದ್ದಾಳೆ. ಈ ಹೊಸ ವೃತ್ತಿಗೆ ಕುಟುಂಬದ ಪೂರ್ಣ ಸಹಕಾರವಿದೆ. ಹೀಗಾಗಿ ಅಡಲ್ಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದಾಳೆ. ಜೊತೆಗೆ ನನಗೆ ಸೂಪರ್ ಕಾರ್ ರೇಸಿಂಗ್‍ನಲ್ಲಿ ಹೆಚ್ಚು ಯಶಸ್ಸು ಸಿಗಲಿಲ್ಲ. ಜೊತೆಗೆ ಆರ್ಥಿಕ ಸಮಸ್ಯೆಯಿಂದ ತನ್ನ ವೃತ್ತಿಯನ್ನು ಈಗ ಬದಲಾವಣೆ ಮಾಡಿದ್ದೇನೆ ಎಂದು ಹೇಳಿದ್ದಾಳೆ.

    ಆಸ್ಟ್ರೇಲಿಯಾದ ಮೊದಲ ಮಹಿಳಾ ಫುಲ್ ಟೈಮ್ ಕಾರ್ ರೇಸರ್ ಆಗಿದ್ದ ರೆನೀ, ಅಲ್ಲಿ ಹೆಚ್ಚು ಹಣ ಸಿಗಲ್ಲ ಎಂಬ ಕಾರಣಕ್ಕೆ ನೀಲಿ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಜೊತೆಗೆ ಇನ್ನೂ ಮುಂದಿನ ತನ್ನ ವೃತ್ತಿ ಜೀವನವನ್ನು ನೀಲಿ ಚಿತ್ರತಾರೆಯಾಗಿ ಕಳೆಯಲು ತೀರ್ಮಾನಿದ್ದಾಳೆ. ಜನ ನಾವು ಏನೂ ಮಾಡುತ್ತಿದ್ದೇವೆ ಎಂಬದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾವು ಏನೂ ಸಾಧನೆ ಮಾಡಿದ್ದೇವೆ ಎಂದು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ರೆನೀ ಹೇಳಿದ್ದಾಳೆ.

    ಈ ವಿಚಾರದ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡಿರುವ ರೇನಿ, ನೀವು ನಂಬಿ ಬಿಡಿ ಇದಕ್ಕೆ ನಮ್ಮ ತಂದೆಯೂ ಕೂಡ ಸಪೋರ್ಟ್ ಮಾಡಿದ್ದಾರೆ. ನಮ್ಮ ಆರ್ಥಿಕ ಪರಿಸ್ಥಿತಿಗೆ ನೊಡಿಕೊಂಡರೆ, ನಮ್ಮ ತಂದೆ ನಾನು ಮಾಡುತ್ತೀರುವ ಕೆಲಸದ ಬಗ್ಗೆ ಹೆಮ್ಮೆ ಪಡುತ್ತಾರೆ. ನೀವು ನಾನು ಏನೂ ಮಾಡುತ್ತಿದ್ದೇನೆ ಎಂಬುದಕ್ಕಿಂತ ನಾನು ಏನೂ ಸಾಧಿಸಿದ್ದೇನೆ ಎಂದು ನೋಡಲು ಇಷ್ಟಪಡುತ್ತೀರಾ ಅಲ್ಲವೇ ಎಂದು ತಿಳಿಸಿದ್ದಾಳೆ.

    ಆಸ್ಟ್ರೇಲಿಯಾದಲ್ಲಿ ನಡೆದ ಸೂಪರ್-2 ಕಾರ್ ರೇಸಿಂಗ್‍ನಲ್ಲಿ ಒಟ್ಟು 17 ರೇಸ್‍ನಲ್ಲಿ ಭಾಗವಹಿಸಿದ್ದ ರೆನೀ ಕೇವಲು ಒಂದು ಬಾರಿ ಮಾತ್ರ ಟಾಪ್-10ರಲ್ಲಿ ಕಾಣಿಸಿಕೊಂಡಿದ್ದಳು. ಈ ವಿಚಾರದ ಬಗ್ಗೆಯೂ ಮಾತನಾಡಿರುವ ರೆನೀ ಗ್ರೇಸಿ, ಕಾರ್ ರೇಸಿಂಗ್‍ನಲ್ಲಿ ನಾವು ನಮ್ಮ ಜೀವವನ್ನೇ ಪಣಕ್ಕೆ ಇಟ್ಟು ಕಾರನ್ನು ಓಡಿಸುತ್ತೇವೆ. ಅಲ್ಲಿ ಒಂದು ಸೆಕೆಂಡ್ ಕೂಡ ಲೆಕ್ಕಕ್ಕೆ ಬರುತ್ತದೆ. ಆದರೆ ಅಲ್ಲಿ ಹಣ ಗಳಿಸುವುದು ಬಹಳ ಕಷ್ಟ ಎಂದು ಅಭಿಪ್ರಾಯ ಪಟ್ಟಿದ್ದಾಳೆ.

    2014ರಲ್ಲಿ ನಡೆದ ಆಸ್ಟ್ರೇಲಿಯಾನ್ ಕಾರ್ ರೇಸಿಂಗ್‍ನಲ್ಲಿ ರೆನೀ ಗ್ರೇಸಿ ಮೊದಲು ಕಾರ್ ಓಡಿಸಿದ್ದಳು. ಈಗ ಸಂಪೂರ್ಣವಾಗಿ ನಾನು ಕಾರ್ ರೇಸ್ ಬಿಟ್ಟಿದ್ದೇನೆ. ಸದ್ಯ ನನ್ನ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಹಣ ಮಡುತ್ತಿದ್ದೇನೆ. ನನಗೆ ಇನ್ನೂ ಮುಂದೆ ಜೀವನವಿದೆ. ನಾನೂ ಬೇರೆ ಕೆಲಸ ಮಾಡುತ್ತೇನೆ ಎಂದು ರೆನೀ ತಿಳಿಸಿದ್ದಾಳೆ.