Tag: financial budget

  • ಓಲ್ಡ್ ವೈನ್ ಇನ್ ನ್ಯೂ ಬಾಟಲ್ ಎಂಬಂತಿದೆ ಬಜೆಟ್ – ಪ್ರಜ್ವಲ್ ರೇವಣ್ಣ

    ಓಲ್ಡ್ ವೈನ್ ಇನ್ ನ್ಯೂ ಬಾಟಲ್ ಎಂಬಂತಿದೆ ಬಜೆಟ್ – ಪ್ರಜ್ವಲ್ ರೇವಣ್ಣ

    ಬೆಂಗಳೂರು: ನಾನು ಪೂರ್ತಿ ಬಜೆಟ್ ನೋಡಿದೆ. ಇದೊಂದು ಸ್ಲೋಗನ್ ಬಜೆಟ್ ಆಗಿದೆ. ಓಲ್ಡ್ ವೈನ್ ಇನ್ ನ್ಯೂ ಬಾಟಲ್ ಎಂಬಂತಿದೆ ಎಂದು ಬಜೆಟ್ ಬಗ್ಗೆ ನೂತನ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಜ್ವಲ್, ನಾನು ಪೂರ್ತಿ ಪ್ರಮಾಣವಾಗಿ ಬಜೆಟ್ ವೀಕ್ಷಣೆ ಮಾಡಿದೆ. ಇದೊಂದು ಸ್ಲೋಗನ್ ಬಜೆಟ್ ಎಂದು ಹೇಳಬಹುದು. ಯಾವುದೇ ರೀತಿ ಅಧಿಕೃತ ನಂಬರ್ ಕೊಡಲಿಲ್ಲ. ಓಲ್ಡ್ ವೈನ್ ಇನ್ ನ್ಯೂ ಬಾಟಲ್ (it is a old wine in new bottle) ಎಂಬಂತಿದೆ. ಹಳೆಯ ಯೋಜನೆಗಳಿಗೆ ಮತ್ತೆ ಚಾಲನೆ ಕೊಟ್ಟಿದ್ದೇವೆ ಎಂಬ ಭಾವನೆಯಲ್ಲಿ ಮಾತನಾಡಿದ್ದಾರೆ ಎಂದು ಹೇಳಿದರು.

    ನಿರೀಕ್ಷೆ ಮಾಡಿದ ಬಜೆಟ್ ಇದಲ್ಲ. ಇಂದಿನ ಬಜೆಟ್ ಮಂಡನೆಯಲ್ಲಿ ಕಾರ್ಪೋರೇಟರ್ ಟ್ಯಾಕ್ಸ್, ಟಿಡಿಎಸ್ ಬಗ್ಗೆ ಮಾತನಾಡಿದ್ದಾರೆ. ಕೃಷಿ ವಿಷಯದಲ್ಲಿ ನಿರೀಕ್ಷೆಗಳಿಗೆ ತಕ್ಕಂತಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಬಗ್ಗೆ ಏನನ್ನೂ ಹೇಳಿಲ್ಲ. 45 ವರ್ಷಗಳಲ್ಲೇ ಅತಿಹೆಚ್ಚು ನಿರುದ್ಯೋಗ ಸಮಸ್ಯೆ ಇದೆ. ಅದನ್ನು ಹೇಗೆ ಪರಿಹರಿಸುವುದು ಎಂಬುದರ ಬಗ್ಗೆಯೂ ಮಾತನಾಡಿಲ್ಲ ಎಂದರು.

    ಕಂಪನಿಗಳು ಭಾರತಕ್ಕೆ ಬರುವ ರೀತಿಯಲ್ಲಿ ಕಾರ್ಪೋರೇಟ್ ತೆರಿಗೆ ಹಾಕಿಲ್ಲ. ಕಾರ್ಪೋರೇಟ್ ಟ್ಯಾಕ್ಸ್ ಬಗ್ಗೆ ನನಗೆ ಸಮಾಧಾನವಾಗಿಲ್ಲ. ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗಿದೆ. ದುಬಾರಿ ಆಗುತ್ತಿರುವ ಜನಜೀವನ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಬಜೆಟ್‍ನಲ್ಲಿ ಅಂತಹ ಸುಧಾರಣಾ ಕ್ರಮಗಳು ಕಾಣಿಸುತ್ತಿಲ್ಲ ಎಂದು ಹೇಳಿದರು.

    ಟಿಡಿಎಸ್ ವ್ಯಸಸ್ಥೆ ತಂದಿರುವುದು ಒಳ್ಳೆಯದು. ಆದರೆ ಹಂತಹಂತವಾಗಿ ಈ ಕ್ರಮ ಅನುಷ್ಠಾನಕ್ಕೆ ತರಬೇಕಾಗಿತ್ತು. ಇದು ತುಂಬಾ ನಿರಾಸೆ ಮೂಡಿಸಿದ ಬಜೆಟ್ ಆಗಿದೆ. ನಾನು ವಿರೋಧ ಮಾಡುವುದಿಲ್ಲ, ಪರನೂ ನಿಲ್ಲುವುದಿಲ್ಲ. ಪೂರ್ತಿ ಓದಿ ಸಂಸತ್ತಿನಲ್ಲಿ ಬಜೆಟ್ ಬಗ್ಗೆ ಮಾತನಾಡುತ್ತೇನೆ ಎಂದು ಪ್ರಜ್ವಲ್ ತಿಳಿಸಿದರು.

  • 5 ವರ್ಷದ ಹಿಂದೆ ಸ್ಥಾನ ಪಡೆದಿರಲಿಲ್ಲ, ಈಗ ಮೂರು ಶಿಕ್ಷಣ ಸಂಸ್ಥೆಗಳಿಗೆ ಸ್ಥಾನ

    5 ವರ್ಷದ ಹಿಂದೆ ಸ್ಥಾನ ಪಡೆದಿರಲಿಲ್ಲ, ಈಗ ಮೂರು ಶಿಕ್ಷಣ ಸಂಸ್ಥೆಗಳಿಗೆ ಸ್ಥಾನ

    ನವದೆಹಲಿ: 5 ವರ್ಷಗಳ ಹಿಂದೆ ವಿಶ್ವದ ಟಾಪ್ 200 ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಯಾವುದೇ ಸಂಸ್ಥೆ ಸ್ಥಾನ ಪಡೆದಿರಲಿಲ್ಲ. ಆದರೆ ಸರ್ಕಾರ ನೀಡಿದ ಪ್ರೋತ್ಸಾಹದಿಂದ ಈಗ ಈ ಪಟ್ಟಿಯಲ್ಲಿ ಮೂರು ಸಂಸ್ಥೆಗಳು ಸ್ಥಾನ ಪಡೆದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ತಮ್ಮ ಬಜೆಟ್ ಭಾಷಣದಲ್ಲಿ ಸೀತಾರಾಮನ್, ದೇಶದ ಎರಡು ಐಐಟಿ, ಬೆಂಗಳೂರಿನ ಐಐಎಸ್‍ಸಿ ಈ ಪಟ್ಟಿಯಲ್ಲಿ ಈಗ ಸ್ಥಾನ ಪಡೆದಿದೆ. ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದರು.

    2019-20ರ ಸಾಲಿನಲ್ಲಿ ‘ವಿಶ್ವ ದರ್ಜೆಯ ಇನ್‍ಸ್ಟಿಟ್ಯೂಷನ್’ ಅಡಿಯಲ್ಲಿ 400 ಕೋಟಿ ರೂ. ಮೀಸಲಿಟ್ಟಿದ್ದೇವೆ. ಈ ಹಿಂದಿನ ಅವಧಿಗೆ ಹೋಲಿಸಿದರೆ 3 ಪಟ್ಟಿ ಹೆಚ್ಚಳ ಹಣ ಇದಾಗಿದೆ. ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ಉನ್ನತ ಶಿಕ್ಷಣ ಕಲಿಯಲು ಪ್ರೋತ್ಸಾಹ ನೀಡುವ ನಿಟ್ಟಿಲ್ಲಿ ‘ಸ್ಟಡಿ ಇನ್ ಇಂಡಿಯಾ’ ಹೆಸರಿನಲ್ಲಿ ಕಾರ್ಯಕ್ರಮ ತರುತ್ತೇವೆ ಎಂದು ತಿಳಿಸಿದರು.

  • ಚಿನ್ನದ ಸೆಸ್ ಹೆಚ್ಚಿಸಿ ಮಹಿಳೆಯರಿಗೆ ಶಾಕ್ ಕೊಟ್ಟ ಸೀತಾರಾಮನ್

    ಚಿನ್ನದ ಸೆಸ್ ಹೆಚ್ಚಿಸಿ ಮಹಿಳೆಯರಿಗೆ ಶಾಕ್ ಕೊಟ್ಟ ಸೀತಾರಾಮನ್

    ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿ ಮಹಿಳೆಯರಿಗೆ ಶಾಕ್ ನೀಡಿದ್ದಾರೆ.

    ಬಜೆಟ್‍ನಲ್ಲಿ ಬಂಗಾರದ ಮೇಲಿನ ಆಮದು ಸುಂಕವನ್ನು ಶೇ.10ರಿಂದ 12.5ಕ್ಕೆ ಏರಿಸಲಾಗಿದೆ. ಹೀಗಾಗಿ ಬಜೆಟ್ ಅಧಿಕೃತವಾಗಿ ಜಾರಿಯಾದ ಬಳಿಕ ಚಿನ್ನದ ದರ ಏರಿಕೆಯಾಗಲಿದೆ.

    ಎಷ್ಟು ಏರಿಕೆಯಾಗಲಿದೆ?
    10 ಸಾವಿರ ರೂ. ಮೌಲ್ಯದ ಚಿನ್ನದ ಆಭರಣಕ್ಕೆ 1 ಸಾವಿರ ರೂ. ಹಣ ಆಮದು ಸುಂಕವಾಗಿ ಪಾವತಿಯಾಗುತ್ತಿತ್ತು. ಈಗ ಶೇ.12.5 ರಷ್ಟು ಏರಿಕೆಯಾಗಿರುವ ಕಾರಣ 1,250 ರೂ. ಹಣವನ್ನು ಪಾವತಿಸಬೇಕಿದೆ.

  • ಕೆಲಸ ಮಾಡಿದ್ದಕ್ಕೆ ಮತದಾರ ಮತ ಹಾಕಿದ್ದಾನೆ – ಸೀತಾರಾಮನ್

    ಕೆಲಸ ಮಾಡಿದ್ದಕ್ಕೆ ಮತದಾರ ಮತ ಹಾಕಿದ್ದಾನೆ – ಸೀತಾರಾಮನ್

    ನವದೆಹಲಿ: ತಮ್ಮ ಚೊಚ್ಚಲ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮತ್ತೊಮ್ಮೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡುವಲ್ಲಿ ಕಾರಣರಾದ ಎಲ್ಲ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ದೇಶದಲ್ಲಿ ಮೊದಲ ಬಾರಿಗೆ ಶೇ.67.9 ಮತದಾನ ನಡೆದಿದೆ. ಯುವಜನತೆ, ಹೊಸ ಮತದಾರರು, ಮಹಿಳೆಯರು ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.

    2014-19ರ ಅವಧಿಯಲ್ಲಿ ರಾಜ್ಯ ಕೇಂದ್ರಗಳ ಸಂಬಂಧ ಸುಧಾರಣೆಯಾಗಿದೆ. ಜಿಎಸ್‍ಟಿಯನ್ನು ಜಾರಿಗೆ ತಂದಿದ್ದೇವೆ. Reform, Perform, Transform ಮಂತ್ರಗಳನ್ನು ಮುಂದಿಟ್ಟು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    ಹಣಕಾಸು ಸಚಿವರು ಇಲ್ಲಿಯವರೆಗೆ ಬಜೆಟ್ ಪ್ರತಿಯನ್ನು ಸೂಟ್‍ಕೇಸ್‍ನಲ್ಲಿ ಹೊತ್ತುಕೊಂಡು ಸಂಸತ್ ಪ್ರವೇಶಿಸುತ್ತಿದ್ದರು. ಆದರೆ ನಿರ್ಮಲಾ ಸೀತಾರಾಮನ್ ಅವರು ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಕೆಂಪು ಬಣ್ಣದ ಬಟ್ಟೆಯ ಒಳಗಡೆ ಬಜೆಟ್ ಪ್ರತಿಗಳನ್ನು ಇರಿಸಿಕೊಂಡು ಸಂಸತ್ ಪ್ರವೇಶಿಸಿದ್ದಾರೆ.

    ಹಣಕಾಸು ಸಚಿವಾಯಕ್ಕೆ ಆಗಮಿಸಿದ ಸಚಿವೆ ಬಜೆಟ್ ದಾಖಲೆಗಳನ್ನು ಬ್ರೀಫ್‍ಕೇಸ್ ಬದಲು ಬ್ಯಾಗ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿರುವುದು ವಿಶೇಷವಾಗಿತ್ತು. ಈ ವೇಳೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಹಣಕಾಸು ಸಚಿವಾಲಯದ ಇತರೇ ಅಧಿಕಾರಿಗಳು ಸಚಿವೆಗೆ ಸಾಥ್ ನೀಡಿದರು.

    ಕೆಂಪುಬಟ್ಟೆಯಲ್ಲಿ ಬಜೆಟ್ ಗೆ ಸಂಬಂಧಪಟ್ಟ ದಾಖಲೆಗಳನ್ನು ಇಟ್ಟು ಆ ಬಟ್ಟೆಯನ್ನು ನಾಲ್ಕು ಮಡಿಕೆ ಮಾಡಿ ರಿಬ್ಬನ್‍ನಿಂದ ಕಟ್ಟಲಾಗಿದೆ. ಅದರ ಮೇಲೆ ರಾಷ್ಟ್ರಲಾಂಛನವಾದ ನಾಲ್ಕು ಮುಖದ ಸಿಂಹದ ಚಿತ್ರವಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣಿಯನ್ ಅವರು, ಬಟ್ಟೆಯಲ್ಲಿ ಕಟ್ಟುವುದು ನಮ್ಮ ದೇಶದ ಸಂಪ್ರದಾಯ. ಪಾಶ್ಚಾತ್ಯ ಸಂಸ್ಕೃತಿಯಿಂದ ಹೊರಬರಲು ಈ ಬಾರಿ ಬ್ರೀಫ್‍ಕೇಸ್ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

  • 2014-15 ರ ಅವಧಿಯಲ್ಲಿ 1.40 ಲಕ್ಷ ಕಿ.ಮೀ ಉದ್ದದ ರಸ್ತೆ ನಿರ್ಮಾಣ

    ನವದೆಹಲಿ: 2014- 15ರ ಅವಧಿಯಲ್ಲಿ 1.40 ಲಕ್ಷ ಕಿ.ಮೀ ಉದ್ದದ ರಸ್ತೆಯಲ್ಲಿ ನಿರ್ಮಾಣ ಮಾಡಿದ್ದು, ಇದು ಈ ಮೂರು ವರ್ಷದಲ್ಲೇ ಅತ್ಯಧಿಕ ಎಂದು ಹಣಕಾಸು ಸಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಈ ಬಾರಿಯ ಬಜೆಟ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು 64 ಸಾವಿರ ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದಾರೆ.

    2016-17ರ ಅವಧಿಯಲ್ಲಿ ಪ್ರತಿ ದಿನ 41 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು ಇಲಾಖೆ ಗುರಿಯನ್ನು ಹಾಕಿಕೊಂಡಿದೆ ಎಂದು ಈ ಹಿಂದೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. 2015-16 ಅವಧಿಯಲ್ಲಿ ಪ್ರತಿ ದಿನ 16 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿತ್ತು.