Tag: finance ministry

  • ಭಾರತದಲ್ಲಿ ಮತದಾನಕ್ಕೆ ಅಮೆರಿಕ ದೇಣಿಗೆ ನೀಡಿಲ್ಲ, 7 ಯೋಜನೆಗಳಿಗಷ್ಟೇ ಧನಸಹಾಯ – ಹಣಕಾಸು ಸಚಿವಾಲಯ

    ಭಾರತದಲ್ಲಿ ಮತದಾನಕ್ಕೆ ಅಮೆರಿಕ ದೇಣಿಗೆ ನೀಡಿಲ್ಲ, 7 ಯೋಜನೆಗಳಿಗಷ್ಟೇ ಧನಸಹಾಯ – ಹಣಕಾಸು ಸಚಿವಾಲಯ

    ನವದೆಹಲಿ: ಭಾರತದ ಚುನಾವಣೆ (Indian Election) ಮೇಲೆ ಪ್ರಭಾವ ಬೀರಲು ಅಮೆರಿಕ ʻಯುಎಸ್‌ಏಡ್‌ʼ (USAID ಮೂಲಕ ಹಣ ಪಡೆಯಲಾಗಿದೆ ಎಂಬ ವಿವಾದ ಕೋಲಾಹಲ ಎಬ್ಬಿಸಿದೆ. ಈ ನಡುವೆ 2023-24ನೇ ಸಾಲಿನಲ್ಲಿ ಮತದಾನ ಪ್ರಮಾಣ ಹೆಚ್ಚಳ ಉದ್ದೇಶಕ್ಕೆ ಅಮೆರಿಕದಿಂದ ಯಾವುದೇ ಹಣಕಾಸು ನೆರವು ಬಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ (Finance Ministry) ಪ್ರಕಟಿಸಿರುವ ವರದಿಯಲ್ಲಿ ಬೆಳಕಿಗೆ ಬಂದಿದೆ.

    ʻಯುಎಸ್‌ಏಡ್‌ʼ ಮೂಲಕ ಭಾರತಕ್ಕೆ ಹರಿದು ಬಂದ ಹಣದ ವಿವರಗಳನ್ನು ಕೇಂದ್ರ ಹಣಕಾಸು ಸಚಿವಾಲಯವನ್ನು ಭಾನುವಾರ ಪ್ರಕಟಿಸಿದೆ. ಇದರಿಂದ ಅಮೆರಿಕದ ವರದಿ ಮಾತ್ರವಲ್ಲ, ಭಾರತದ ಹಣಕಾಸು ಇಲಾಖೆಯ ವರದಿಯಲ್ಲೂ ಚುನಾವಣೆಗಾಗಿ ಅಮೆರಿಕ ಭಾರತಕ್ಕೆ ಯಾವುದೇ ದೇಣಿಗೆ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ.

    ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ವಿತ್ತ ಸಚಿವಾಲಯವು, ಭಾರತದಲ್ಲಿ 6,498 ಕೋಟಿ ರೂ. (750 ದಶಲಕ್ಷ ಡಾಲರ್) ವೆಚ್ಚದ 7 ಯೋಜನೆಗಳಿಗೆ ಅಮೆರಿಕದ ನೆರವು ಬಳಕೆಯಾಗುತ್ತಿದೆ. ಆದರೆ, ಈ ದೇಣಿಗೆಯಲ್ಲಿ ಯಾವುದೂ, ಚುನಾವಣೆ ಅಥವಾ ಮತದಾನಕ್ಕೆ ಸಂಬಂಧಿಸಿ ಬಳಕೆಯಾಗುತ್ತಿಲ್ಲ ಎಂದು ಹೇಳಿದೆ. ಅಲ್ಲದೇ ಭಾರತ ಸರ್ಕಾರ ಮತ್ತು ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ (ಯುಎಸ್‌ಏಡ್‌) ಸಹಯೋಗದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ 2023-24ರಲ್ಲಿ 825 ಕೋಟಿ ರೂ. (97 ದಶಲಕ್ಷ ಡಾಲರ್) ಅಮೆರಿಕದ ನೆರವು ಬಂದಿದೆ ಎಂದು ಎತ್ತ ಇಲಾಖೆಯ ವಾರ್ಷಿಕ ವರದಿ ತಿಳಿಸಿದೆ. ಇದು ರಾಜಕೀಯ ಬಿರುಗಾಳಿ ಎಬ್ಬಿಸಿದೆ.

    ಕೃಷಿ, ಆಹಾರ ಭದ್ರತೆ, ನೀರು, ನೈರ್ಮಲ್ಯ ರಕ್ಷಣೆ, ಮರುಬಳಕೆಯ ಇಂಧನ ಅಭಿವೃದ್ಧಿ, ವಿಪತ್ತು ನಿರ್ವಹಣೆ ಯೋಜನೆಗಳಿಗೆ ‘ಯುಎಸ್‌ಏಡ್‌’ ಮೂಲಕ ನೆರವು ಪಡೆಯಲಾಗಿದೆ. ಇದಲ್ಲದೇ ಸುಸ್ಥಿರ ಅರಣ್ಯ ಅಭಿವೃದ್ಧಿ, ಹವಾಮಾನ ಬದಲಾವಣೆ, ಇಂಧನ ದಕ್ಷತೆ, ತಂತ್ರಜ್ಞಾನ ಸೇರಿ ಹಲವು ಯೋಜನೆಗಳಿಗೆ ಹಣಕಾಸು ನೆರವು ಪಡೆಯಲಾಗಿದೆ ಎಂಬ ಮಾಹಿತಿಯನ್ನು ಹಣಕಾಸು ಸಚಿವಾಲಯ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

    ಭಾರತ-ಅಮೆರಿಕ ದ್ವಿಪಕ್ಷೀಯ ಒಪ್ಪಂದದಂತೆ 1951 ರಿಂದ ʻಯುಎಸ್‌ಏಡ್‌ʼ ಮೂಲಕ ಭಾರತಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ. ಕಳೆದ 70 ವರ್ಷದಲ್ಲಿ ಸುಮಾರು 555 ಯೋಜನೆಗಳಿಗೆ 17 ಬಿಲಿಯನ್‌ ಡಾಲರ್‌ ಹಣದ ನೆರವು ಬಂದಿದೆ ಎಂದು ವರದಿಯಲ್ಲಿ ತಿಳಿಸಿದೆ.

    https://youtu.be/9aRZwimkiN0?si=1pIJY_bEtIdzMSF8

  • ದಾಖಲೆಯ ಜಿಎಸ್‌ಟಿ ಸಂಗ್ರಹ – ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ಸಂಗ್ರಹ – ಕರ್ನಾಟಕದಲ್ಲಿ ಎಷ್ಟು?

    ದಾಖಲೆಯ ಜಿಎಸ್‌ಟಿ ಸಂಗ್ರಹ – ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ಸಂಗ್ರಹ – ಕರ್ನಾಟಕದಲ್ಲಿ ಎಷ್ಟು?

    ನವದೆಹಲಿ: ಈ ಬಾರಿಯ ಏಪ್ರಿಲ್‌ ತಿಂಗಳಿನಲ್ಲಿ ದಾಖಲೆಯ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ (GST) ಸಂಗ್ರಹವಾಗಿದ್ದು, ದೇಶದಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಅತಿಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರೀಯ ಹಣಕಾಸು ಸಚಿವಾಲಯ (Ministry of Finance) ಸೋಮವಾರ ತಿಳಿಸಿದೆ. ಇದನ್ನೂ ಓದಿ: ವಿಚಾರಣೆಗೆ ಹಾಜರಾಗಲು 7 ದಿನ ಅವಕಾಶ ನೀಡಿ – ಪ್ರಜ್ವಲ್‌ ರೇವಣ್ಣ ಮನವಿ

    ಜಿಎಸ್‌ಟಿ ಜಾರಿಯಾದ ನಂತರ ಪ್ರತಿ ಏಪ್ರಿಲ್‌ ತಿಂಗಳಿನಲ್ಲಿ ಹೆಚ್ಚು ತೆರಿಗೆ ಸಂಗ್ರವಾಗುತ್ತಿದೆ. 2022ರ ಏಪ್ರಿಲ್‌ಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾದರೆ ಕಳೆದ ವರ್ಷದ ಏಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.ಇದೇ ಮೊದಲ ಬಾರಿಗೆ ಜಿಎಸ್‌ಟಿ ಸಂಗ್ರಹ 2 ಲಕ್ಷ ಕೋಟಿ ರೂ. ಗಡಿ ದಾಟಿದೆ.

    ಕಳೆದ ಏಪ್ರಿಲ್‌ಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ 12.4% ಏರಿಕೆಯಾಗಿದೆ. ಕರ್ನಾಟಕದಲ್ಲಿ (Karnataka) ಈ ಬಾರಿ 15,978 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ಏಪ್ರಿಲ್‌ನಲ್ಲಿ 14,593 ಕೋಟಿ ರೂ. ಸಂಗ್ರಹವಾಗಿತ್ತು.

    ಯಾವ ರಾಜ್ಯದ್ದು ಎಷ್ಟು?
    ಮಹಾರಾಷ್ಟ್ರ 37,671 ಕೋಟಿ ರೂ., ಗುಜರಾತ್‌ 13,301 ಕೋಟಿ ರೂ., ಉತ್ತರ ಪ್ರದೇಶ 12,290 ಕೋಟಿ ರೂ., ಹರ್ಯಾಣ 12,168 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.

  • ವಿದೇಶಗಳಿಗೆ ಹಣಕಾಸು ಸಚಿವಾಲಯದ ಮಾಹಿತಿ ರವಾನೆ – ಓರ್ವ ಉದ್ಯೋಗಿ ಅರೆಸ್ಟ್‌

    ವಿದೇಶಗಳಿಗೆ ಹಣಕಾಸು ಸಚಿವಾಲಯದ ಮಾಹಿತಿ ರವಾನೆ – ಓರ್ವ ಉದ್ಯೋಗಿ ಅರೆಸ್ಟ್‌

    ನವದೆಹಲಿ: ದೆಹಲಿ ಪೊಲೀಸ್ ಕ್ರೈಂ ಬ್ರ್ಯಾಂಚ್‌ ಬೇಹುಗಾರಿಕೆ ಜಾಲವನ್ನು ಬೇಧಿಸಿದ್ದು, ಕೇಂದ್ರ ಹಣಕಾಸು ಸಚಿವಾಲಯಕ್ಕೆ (Finance Ministry) ಸಂಬಂಧಿಸಿದ ಸೂಕ್ಷ್ಮ ಮಾಹಿತಿ (Sensitive Information) ಸೋರಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಗುತ್ತಿಗೆ ಉದ್ಯೋಗಿಯನ್ನು ಬಂಧಿಸಲಾಗಿದೆ.

    ಸುಮಿತ್‌ ಬಂಧನಕ್ಕೆ ಒಳಗಾದ ಆರೋಪಿ. ಈತ ಹಣಕಾಸು ಸಚಿವಾಲಯದ ಡೇಟಾ ಆಪರೇಟರ್‌ ಆಗಿ ಗುತ್ತಿಗೆ ಉದ್ಯೋಗಿಯಾಗಿ ಸೇರಿದ್ದ. ಹಣ ಪಡೆದು ವಿದೇಶಗಳಿಗೆ ವರ್ಗೀಕೃತ ದತ್ತಾಂಶವನ್ನು ಈತ ಒದಗಿಸುತ್ತಿದ್ದ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಎಂದಿಗೂ ಲಾಡೆನ್ ಭೇಟಿಯಾಗಿಲ್ಲ: ಭಾರತದಿಂದ ತಪ್ಪು ಮಾಹಿತಿ ಎಂದ ಜಾಗತಿಕ ಉಗ್ರ

    ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ (Union Budget) ಮಂಡಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಹಾರಾಷ್ಟ್ರ ಸಿಎಂ ಶಿಂದೆ ಸಂಪುಟದಲ್ಲಿ ದೇವೇಂದ್ರ ಫಡ್ನವಿಸ್‌ಗೆ ಗೃಹ, ಹಣಕಾಸು ಖಾತೆ

    ಮಹಾರಾಷ್ಟ್ರ ಸಿಎಂ ಶಿಂದೆ ಸಂಪುಟದಲ್ಲಿ ದೇವೇಂದ್ರ ಫಡ್ನವಿಸ್‌ಗೆ ಗೃಹ, ಹಣಕಾಸು ಖಾತೆ

    ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರಿಗೆ ಗೃಹ ಹಾಗೂ ಹಣಕಾಸು ಖಾತೆಗಳನ್ನು ನೀಡಲಾಗಿದೆ.

    ಬಿಜೆಪಿ ಹಾಗೂ ಶಿವಸೇನಾದ ಶಿಂದೆ ಬಣ ಮೈತ್ರಿ ಸರ್ಕಾರದ ರಚನೆಯಾಗಿದ್ದು, ಮಂಗಳವಾರ 18 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಶಿಂಧೆ ಅವರು ನಗರಾಭಿವೃದ್ಧಿ ಖಾತೆಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಇನ್ಮುಂದೆ ಒಬ್ಬ ಶಾಸಕನಿಗೆ ಒಂದೇ ಬಾರಿ ಪಿಂಚಣಿ – 100 ಕೋಟಿ ಉಳಿತಾಯಕ್ಕೆ ಸಿಎಂ ಪ್ಲ್ಯಾನ್‌

    ಫಡ್ನವಿಸ್ ಅವರು ಯೋಜನಾ ಖಾತೆಯನ್ನೂ ನಿಭಾಯಿಸಲಿದ್ದಾರೆ. ಬಿಜೆಪಿ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರು ನೂತನ ಕಂದಾಯ ಸಚಿವರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಬಿಜೆಪಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಅರಣ್ಯ ಸಚಿವರಾಗಿದ್ದಾರೆ.

    ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಉನ್ನತ ಮತ್ತು ತಾಂತ್ರಿಕ ಶಿಕ್ಷಣದ ನೂತನ ಸಚಿವರಾಗಿದ್ದು, ಸಂಸದೀಯ ವ್ಯವಹಾರಗಳನ್ನೂ ಅವರು ನಿಭಾಯಿಸಲಿದ್ದಾರೆ. ಇದನ್ನೂ ಓದಿ: ಕೇವಲ ತ್ರಿವರ್ಣ ಧ್ವಜ ಹಾರಿಸುವುದರಿಂದ ನಾವು ದೇಶಭಕ್ತರಾಗುವುದಿಲ್ಲ: ಉದ್ಧವ್ ಠಾಕ್ರೆ ಟಾಂಗ್

    ಏಕನಾಥ್ ಶಿಂಧೆ ಬಣದ ದೀಪಕ್ ಕೇಸರ್ಕರ್ ಅವರು ಶಿಕ್ಷಣ ಸಚಿವರಾಗಿದ್ದರೆ, ಅಬ್ದುಲ್ ಸತ್ತಾರ್ ಅವರಿಗೆ ಕೃಷಿ ಖಾತೆ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಏಪ್ರಿಲ್ ತಿಂಗಳಲ್ಲಿ ದಾಖಲೆಯ 1.68 ಕೋಟಿ ರೂ. ಜಿಎಸ್‍ಟಿ ತೆರಿಗೆ ಸಂಗ್ರಹ

    ಏಪ್ರಿಲ್ ತಿಂಗಳಲ್ಲಿ ದಾಖಲೆಯ 1.68 ಕೋಟಿ ರೂ. ಜಿಎಸ್‍ಟಿ ತೆರಿಗೆ ಸಂಗ್ರಹ

    ನವದೆಹಲಿ: 2022ನೇ ಸಾಲಿನ ಏಪ್ರಿಲ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಸಂಗ್ರಹವು ನೂತನ ದಾಖಲೆ ಬರೆದಿದೆ. ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 1,67,540 ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿದೆ.

    ಈ ಮೂಲಕ ಜಿಎಸ್‍ಟಿ ತೆರಿಗೆ ಸಂಗ್ರಹವು ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ 1.5 ಲಕ್ಷ ಕೋಟಿ ರೂ. ದಾಟಿ ನೂತನ ದಾಖಲೆ ಬರೆದಿದೆ. ಅಲ್ಲದೆ ಕಳೆದ ವರ್ಷದ ಏಪ್ರಿಲ್ ತಿಂಗಳಿಗಿಂತ ಶೇ.20 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಲಿಫ್ಟ್‌ನಲ್ಲಿ ಹೋಗುವುದೆಂದರೆ ನನಗೆ ಭಯ: ಅಜಯ್ ದೇವಗನ್

    ಏಪ್ರಿಲ್ 2022ರಲ್ಲಿ ಜಿಎಸ್‍ಟಿ ಆದಾಯವು ಒಟ್ಟು 1,67,540 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್ ಟಿ 33,159 ಕೋಟಿ ರೂಪಾಯಿ, ಎಸ್‍ಜಿಎಸ್ ಟಿ 41,793 ಕೋಟಿ ರೂಪಾಯಿ, ಐಜಿಎಸ್‍ಟಿ 81,939 ಮತ್ತು ಮತ್ತು ಪರಿಹಾರ ಸೆಸ್ 10,649 ಕೋಟಿ ಆಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ. ಕಳೆದ ಮಾರ್ಚ್‍ನಲ್ಲಿ 1,42,095 ಕೋಟಿ ರೂ. ಸಂಗ್ರಹವಾಗಿ ಈ ಹಿಂದಿನ ದಾಖಲೆ ನಿರ್ಮಿಸಿತ್ತು. ಇದೀಗ ಇನ್ನಷ್ಟು ಏರಿಕೆ ಕಂಡು ಏಪ್ರಿಲ್‍ನಲ್ಲಿ ಅತಿ ಹೆಚ್ಚು ಜಿಎಸ್‍ಟಿ ಸಂಗ್ರಹವಾಗಿದೆ. ಇದನ್ನೂ ಓದಿ: ಶವರ್ಮ ತಿಂದು 16 ವರ್ಷದ ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ

    ಏಪ್ರಿಲ್ ತಿಂಗಳ ಆದಾಯಗಳು ಕಳೆದ ವರ್ಷ ಇದೇ ತಿಂಗಳಿನ ಜಿಎಸ್‍ಟಿನ ಆದಾಯಕ್ಕೆ ಹೋಲಿಕೆ ಮಾಡಿದರೆ ಈ ತಿಂಗಳಲ್ಲಿ ಆಮದು ಸರಕುಗಳಿಂದ ಬರುವ ಆದಾಯವು ಶೇ 30ರಷ್ಟು ಅಧಿಕ ಮತ್ತು ಆಂತರಿಕ ವಹಿವಾಟುಗಳಿಂದ ಬಂದ ಆದಾಯವು ಶೇ 17ರಷ್ಟು ಹೆಚ್ಚಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

    ರಾಜ್ಯಗಳ ಪೈಕಿ ಮಹರಾಷ್ಟ್ರದಲ್ಲಿ 27,495 ಕೋಟಿ ರೂ. ಮತ್ತು ಕರ್ನಾಟಕದಲ್ಲಿ 11,820 ಕೋಟಿ ರೂ. ಜಿಎಸ್‌ಟಿ ಸಂಗ್ರವಾಗಿ ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಮತ್ತಷ್ಟು ಏರಿಕೆ ಕಂಡಿದೆ.

  • ಮಾರ್ಚ್‍ನಲ್ಲಿ GST ದಾಖಲೆ ಸಂಗ್ರಹ – ಯಾವ ರಾಜ್ಯದಲ್ಲಿ ಎಷ್ಟು ಸಂಗ್ರಹ?

    ಮಾರ್ಚ್‍ನಲ್ಲಿ GST ದಾಖಲೆ ಸಂಗ್ರಹ – ಯಾವ ರಾಜ್ಯದಲ್ಲಿ ಎಷ್ಟು ಸಂಗ್ರಹ?

    ನವದೆಹಲಿ: ಹಣಕಾಸು ವರ್ಷಾಂತ್ಯದ ತಿಂಗಳು ಆಗಿರುವ ಮಾರ್ಚ್‍ನಲ್ಲಿ ಬರೋಬ್ಬರಿ 1.42 ಲಕ್ಷ ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

    ಮಾರ್ಚ್ ಒಂದು ತಿಂಗಳಲ್ಲಿ ಒಟ್ಟು 1,42,095 ಲಕ್ಷ ಕೋಟಿ ರೂ ಜಿಎಸ್‍ಟಿ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್‍ಟಿ 25,830 ಕೋಟಿ ರೂ, ಎಸ್‍ಜಿಎಸ್‍ಟಿ 32,378 ಕೋಟಿ ರೂ, ಐಜಿಎಸ್‍ಟಿ 74,470 ಕೋಟಿ (ಇದರಲ್ಲಿ ಸರಕು ಆಮದಿನ ಮೇಲೆ ಸಂಗ್ರಹವಾದ 39,131 ಕೋಟಿ ರೂ, ಹಣವೂ ಸೇರಿದೆ.) ಮತ್ತು ಸೆಸ್ ಮೇಲಿನ ಶುಲ್ಕ 9,417 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹವಾದ 981 ಕೋಟಿ ಶುಲ್ಕ ಸೇರಿದೆ) ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಭಾರತಕ್ಕೆ ರಿಯಾಯಿತಿ ದರದಲ್ಲಿ ರಷ್ಯಾ ಕಚ್ಚಾ ತೈಲ

    ಈ ಮೂಲಕ ಕಳೆದ ವರ್ಷ ಇದೇ ತಿಂಗಳು ಸಂಗ್ರಹವಾದ ಜಿಎಸ್‍ಟಿ ಆದಾಯಕ್ಕಿಂತ ಈ ವರ್ಷದ ಜಿಎಸ್‍ಟಿ ಆದಾಯ ಶೇ.15ರಷ್ಟು ಹೆಚ್ಚಳವಾಗಿದೆ. ಈವರೆಗೆ ಕಳೆದ ಜನವರಿ ತಿಂಗಳಲ್ಲಿ ಸಂಗ್ರಹವಾದ ಜಿಎಸ್‍ಟಿ ತೆರಿಗೆ 1,40,986 ಕೋಟಿ ರೂ. ದಾಖಲೆಯಾಗಿತ್ತು. ಈ ದಾಖಲೆಯನ್ನು ಮಾರ್ಚ್ ತಿಂಗಳು ಮುರಿದಿದ್ದು, ಈ ಒಂದು ತಿಂಗಳಲ್ಲಿ 1.42,095 ಕೋಟಿ ರೂ. ಸಂಗ್ರಹವಾಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇದನ್ನೂ ಓದಿ: ಶಾಲೆಯಲ್ಲಿ ಮಧ್ಯಾಹ್ನದ ಊಟ ಸೇವಿಸಿ 20 ಮಕ್ಕಳು ಅಸ್ವಸ್ಥ

    ರಾಜ್ಯಗಳ ಪೈಕಿ ಮಹರಾಷ್ಟ್ರದಲ್ಲಿ 20,305 ಕೋಟಿ ರೂ. ಅತೀ ಹೆಚ್ಚು ಜಿಎಸ್‍ಟಿ ಸಂಗ್ರವಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ.19ರಷ್ಟು ಏರಿಕೆ ಕಂಡಿದೆ. ಮಹರಾಷ್ಟ್ರ ಬಳಿಕ ಗುಜರಾತ್‍ನಲ್ಲಿ 9,158 ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿದ್ದು, ಕಳೆದ ಬಾರಿಗಿಂತ ಶೇ.12 ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಕಳೆದ ವರ್ಷ 7,915 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ 8,750 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗುವ ಮೂಲಕ  ಶೇ.11ರಷ್ಟು ಏರಿಕೆ ಕಂಡಿದೆ.

    ಇನ್ವರ್ಟೆಡ್ ಡ್ಯೂಟಿ ರಚನೆಯನ್ನು ಸರಿಪಡಿಸಲು ಕೌನ್ಸಿಲ್ ತೆಗೆದುಕೊಂಡ ವಿವಿಧ ಕ್ರಮಗಳಿಂದಾಗಿ ಆದಾಯದಲ್ಲಿ ಸುಧಾರಣೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

  • ಭ್ರಷ್ಟಾಚಾರದ ವಿರುದ್ಧ ಸಮರ – 22 ತೆರಿಗೆ ಅಧಿಕಾರಿಗಳು ವಜಾ

    ಭ್ರಷ್ಟಾಚಾರದ ವಿರುದ್ಧ ಸಮರ – 22 ತೆರಿಗೆ ಅಧಿಕಾರಿಗಳು ವಜಾ

    – ಇತ್ತೀಚೆಗಷ್ಟೇ 27 ಅಧಿಕಾರಿಗಳನ್ನು ವಜಾ ಮಾಡಲಾಗಿತ್ತು

    ನವದೆಹಲಿ: ಭ್ರಷ್ಟಾಚಾರ ಹಾಗೂ ಗಂಭೀರ ಅಕ್ರಮ ಎಸಗಿದ ಆರೋಪ ಹೊಂದಿದ್ದ 22 ತೆರಿಗೆ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ವಜಾ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

    ಭ್ರಷ್ಟಾಚಾರ ಕಿತ್ತೊಗೆಯಲು ಪ್ರಧಾನಿ ಮೋದಿಯವರ ವ್ಯವಸ್ಥೆಯ ಶುದ್ಧೀಕರಣದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೇ ಹಣಕಾಸು ಸಚಿವಾಲಯ 12 ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಸೇರಿ ಕಂದಾಯ ಇಲಾಖೆಯ ಒಟ್ಟು 27 ಹಿರಿಯ ಅಧಿಕಾರಿಗಳನ್ನು ವಜಾ ಮಾಡಿ ಕ್ರಮ ಕೈಗೊಂಡಿತ್ತು.

    ಇದೀಗ ಕೇಂದ್ರ ನೇರ ತೆರಿಗೆ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಐಸಿ) ಇದೀಗ ಸುಪರಿಂಟೆಂಡೆಂಟ್ ಹಾಗೂ ಆಡಳಿತಾಧಿಕಾರಿ ದರ್ಜೆಯ 22 ಹಿರಿಯ ಅಧಿಕಾರಿಗಳನ್ನು ಮೂಲಭೂತ ನಿಯಮ 56(ಜೆ) ಅಡಿ ಭಷ್ಟಾಚಾರ, ಇತರ ಆರೋಪಗಳು ಹಾಗೂ ಸಿಬಿಐ ಬಲೆಗೆ ಬಿದ್ದಿದ್ದರಿಂದ ಅವರು ಕಡ್ಡಾಯ ನಿವೃತ್ತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

    ಈ ಮೂಲಕ ಭ್ರಷ್ಟಾಚಾರ ಹಾಗೂ ಇತರ ಗಂಭೀರ ಆರೋಪಗಳನ್ನು ಮಾಡಿದ ಅಧಿಕಾರಿಗಳಿಗೆ ಕೇವಲ ನೋಟಿಸ್ ಹಾಗೂ ಸಮನ್ಸ್ ನೀಡುವ ಸಂಸ್ಕೃತಿಗೆ ಸರ್ಕಾರ ತಿಲಾಂಜಲಿ ಹಾಡಿದ್ದು, ಭ್ರಷ್ಟಾಚಾರದಲ್ಲಿ ತೊಡಗುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಈ ಕುರಿತು ಖಡಕ್ ಎಚ್ಚರಿಕೆ ನೀಡಿದ್ದು, ಅಕ್ಟೋಬರ್ 1 ರಿಂದ ಆದಾಯ ತೆರಿಗೆ ಅಧಿಕಾರಿಗಳ ಎಲ್ಲ ನೋಟಿಸ್, ಸಮನ್ಸ್ ಹಾಗೂ ಆದೇಶಗಳು ಕೇಂದ್ರೀಕೃತ ಕಂಪ್ಯೂಟರ್ ವ್ಯವಸ್ಥೆಯ ಮೂಲಕ ನೀಡಲಾಗುವುದು. ಅಲ್ಲದೆ, ಕಂಪ್ಯೂಟರ್ ದಾಖಲೆಗಳು ವಿಶೇಷ ಗುರುತಿನ ಸಂಖ್ಯೆಯನ್ನು ಹೊಂದಿರುತ್ತವೆ ಎಂದು ತಿಳಿಸಿದ್ದಾರೆ.

    ಕಂಪ್ಯೂಟರ್ ಜನರೇಟೆಡ್ ಡಿಐಎನ್ ಇಲ್ಲದೆ, ನಡೆಸಲಾಗುವ ಯಾವುದೇ ಸಂವಹನ ಕಾನೂನಿನಿಂದ ಹೊರಗುಳಿಯಲಿದೆ. ಅಲ್ಲದೆ, ಯಾವುದೇ ಕಂಪನಿ ಪ್ರತಿಕ್ರಿಯೆ ನೀಡಿದ ಮೂರು ತಿಂಗಳೊಳಗೆ ತೆರಿಗೆ ಇಲಾಖೆಯು ಆ ಪ್ರಕರಣವನ್ನು ನಿರ್ಧರಿಸದಿದ್ದಲ್ಲಿ ತೆರಿಗೆ ನೋಟಿಸ್ ತನ್ನ ಮೌಲ್ಯವನ್ನು ಕಳೆದುಕೊಳ್ಳಲಿದೆ ಎಂದು ಕಳೆದ ಬಾರಿಯ ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮ್ ತಿಳಿಸಿದ್ದರು.

    ಇತ್ತೀಚೆಗೆ ನಿವೃತ್ತಿ ಹೊಂದಿದ ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳನ್ನು ಈ ಹಿಂದೆ ಕೇಂದ್ರ ತನಿಖಾ ದಳ(ಸಿಬಿಐ)ದ ಅಧಿಕಾರಿಗಳು ಬಂಧಿಸಿದ್ದರು. ಇದರಲ್ಲಿ ಇನ್ನೂ ಕೆಲವರ ವಿಚಾರಣೆಯನ್ನು ನಡೆಸಲಾಗುತ್ತಿದೆ.

    22 ಅಧಿಕಾರಿಗಳಲ್ಲಿ 9 ಮಂದಿ ಭೋಪಾಲ್ ಮೂಲದವರಾಗಿದ್ದು, ಇವರು ಸಿಗರೇಟ್ ತಯಾರಿಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸಿಗರೇಟ್‍ಗಳನ್ನು ರಹಸ್ಯವಾಗಿ ಉತ್ಪಾದಿಸಲು ಅನುಮತಿ ನೀಡಿರುವುದು ಮತ್ತು ಅವುಗಳನ್ನು ಸರಬರಾಜು ಮಾಡಲು ಅನುಕೂಲ ಮಡಿಕೊಡುತ್ತಿದ್ದ ಎಂಬ ಆರೋಪ ಎದುರಿಸುತ್ತಿದ್ದಾರೆ.

    2003ರಲ್ಲಿ ಬೆಂಗಳೂರಿನ ಇನ್ನೊಬ್ಬ ಅಧಿಕಾರಿ ಮೊಬೈಲ್ ಸ್ಮಗ್ಲಿಂಗ್ ಹಾಗೂ ಕಂಪ್ಯೂಟರ್ ಬಿಡಿ ಭಾಗಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲು ಸಂಚು ರೂಪಿಸಿದ್ದವರಿಗೆ ಸಹಾಯ ಮಾಡಿದ್ದರು. ಹೀಗಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು ಈ ವಸ್ತುಗಳನ್ನು ವಶಪಡಿಸಿಕೊಂಡು ಅಧಿಕಾರಿಯನ್ನು ವಜಾ ಮಾಡಲಾಗಿತ್ತು.

    ದೆಹಲಿಯ ಇನ್ನೊಂದು ಪ್ರಕರಣದಲ್ಲಿ, ದೆಹಲಿಯ ಜಿಎಸ್‍ಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ತೆರಿಗೆ ಅಧಿಕಾರಿಯೊಬ್ಬರು ಕಳೆದ ವರ್ಷ ದುಬೈನಿಂದ 1,200 ಗ್ರಾಂ. ತೂಕದ 10 ಬಾರ್ ಚಿನ್ನವನ್ನು ಕಳ್ಳಸಾಗಣೆ ಮಾಡಲು ಸಹಾಯ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಇವರನ್ನು ಕಸ್ಟಮ್ಸ್ ಅಧಿಕಾರಿಗಳು ಹಿಡಿದಿದ್ದರು.

    ಹಣಕಾಸು ಇಲಾಖೆಯ 56 (ಜೆ) ನಿಯಮದ ಹಲವು ದಶಕಗಳಿಂದ ಅಸ್ವಿತ್ವದಲ್ಲಿದ್ದು ಇಲ್ಲಿಯವರೆಗೆ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಆದರೆ ಈಗ ಈ ನಿಯಮದ ಅಡಿ ನಿವೃತ್ತಿ ಪಡೆಯಲು ಸೂಚಿಸಿದ್ದು ಮಹತ್ವ ಎನಿಸಿಕೊಂಡಿದೆ.

  • ಭ್ರಷ್ಟಾಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ – 12 ಉನ್ನತ ತೆರಿಗೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ

    ಭ್ರಷ್ಟಾಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ – 12 ಉನ್ನತ ತೆರಿಗೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ

    ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಮೋದಿ ಸರ್ಕಾರ 12 ಮಂದಿ ತೆರಿಗೆ ಅಧಿಕಾರಗಳಿಗೆ ಕಡ್ಡಾಯವಾಗಿ ನಿವೃತ್ತಿ ಪಡೆಯುವಂತೆ ಸೂಚಿಸಿದೆ.

    ಭಾರತೀಯ ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಮುಖ್ಯ ಕಮೀಷನರ್ ಸ್ಥಾನದಲ್ಲಿರುವ ಹಿರಿಯ ಅಧಿಕಾರಗಳು, ಹಣಕಾಸು ಸಚಿವಾಲಯದ ಪ್ರಧಾನ ಆಯುಕ್ತರು ಮತ್ತು ಆದಾಯ ತೆರಿಗೆ ಇಲಾಖೆಯ ಕಮೀಷನರ್ ಸೇರಿ ಒಟ್ಟು 12 ಜನ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಪಡೆಯುವಂತೆ ಸೂಚಿಸಿದೆ.

    ಈ 12 ಅಧಿಕಾರಿಗಳ ಪೈಕಿ ಕೆಲವರ ಮೇಲೆ ಭ್ರಷ್ಟಾಚಾರ ಮತ್ತು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪವಿದೆ. ಕೆಲವರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯ 56 (ಜೆ) ನಿಯಮದ ಅಡಿ ನಿವೃತ್ತಿ ಹೊಂದಬೇಕು ಎಂದು ಹಣಕಾಸು ಸಚಿವಾಲಯ ನಿರ್ದೇಶನ ಮಾಡಿದೆ.

    ಈ 12 ಜನ ಅಧಿಕಾರಿಗಳ ಪಟ್ಟಿಯಲ್ಲಿ ಜಂಟಿ ಆಯುಕ್ತ ಶ್ರೇಣಿಯ ಅಧಿಕಾರಿ ಅಶೋಕ್ ಅಗರ್‍ವಾಲ್ ಇದ್ದಾರೆ. ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿಗೆ ಸಹಾಯ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವ ಆರೋಪ ಅಶೋಕ್ ಅಗರ್‍ವಾಲ್ ಮೇಲಿದೆ. ಇಬ್ಬರು ಮಹಿಳಾ ಐಆರ್‍ಎಸ್ ಅಧಿಕಾರಿಗಳಿಗೆ ಲೈಂಗಿಕ ಕಿರುಕುಳದ ನೀಡಿದ್ದಾರೆ ಎಂಬ ಆರೋಪ ಬಂದಿರುವ ಎಸ್.ಕೆ ಶ್ರೀವಾಸ್ತವ ಅವರಿಗೂ ನಿವೃತ್ತಿ ಪಡೆಯುವಂತೆ ಸೂಚಿಸಲಾಗಿದೆ.

    ತನ್ನ ಮತ್ತು ತನ್ನ ಕುಟುಂಬದ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ 3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂಪಾದಿಸಿದ 1985 ಬ್ಯಾಚಿನ ಐಆರ್‍ಎಸ್‍ನ ಅಧಿಕಾರಿ ಹೋಮಿ ರಾಜ್ವಂಶ್ ಮತ್ತು ತಮಗೆ ಬೇಕಾದ ರೀತಿಯಲ್ಲಿ ಆದೇಶಗಳನ್ನು ನೀಡುತ್ತಿದ್ದ ಆರೋಪದ ಮೇಲೆ ಬಿ.ಬಿ ರಾಜೇಂದ್ರ ಪ್ರಸಾದ್ ಅವರನ್ನು ಕೊಡ ನಿವೃತ್ತರಾಗಬೇಕು ಎಂದು ಹಣಕಾಸು ಸಚಿವಾಲಯ ಸೂಚನೆ ನೀಡಿದೆ.

    ಇವರನ್ನು ಬಿಟ್ಟರೆ ಅಜಯ್ ಕುಮಾರ್ ಸಿಂಗ್, ಅಲೋಕ್ ಕುಮಾರ್ ಮಿತ್ರ, ಚಂದನ್ ಸೈನಿ ಭಾರ್ತಿ, ಅಂಡಸು ರವಿಂದರ್, ವಿವೇಕ್ ಬಾತ್ರಾ, ಸ್ವತಭ ಸುಮನ್ ಮತ್ತು ರಾಮ್ ಕುಮಾರ್ ಭಾರ್ಗವ ಅವರು ಕೂಡ ಪಟ್ಟಿಯಾಲ್ಲಿದ್ದಾರೆ ಎಂದು ವರದಿಯಾಗಿದೆ.

    ಹಣಕಾಸು ಇಲಾಖೆಯ 56 (ಜೆ) ನಿಯಮದ ಹಲವು ದಶಕಗಳಿಂದ ಅಸ್ವಿತ್ವದಲ್ಲಿದ್ದು ಇಲ್ಲಿಯವರೆಗೆ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಆದರೆ ಈಗ ಈ ನಿಯಮದ ಅಡಿ ನಿವೃತ್ತಿ ಪಡೆಯಲು ಸೂಚಿಸಿದ್ದು ಮಹತ್ವ ಎನಿಸಿಕೊಂಡಿದೆ.

  • ಪರೀಕ್ಷೆ ನಡೆಸಲು ಹಣವಿಲ್ಲ, ಪರಿಸ್ಥಿತಿ ಮುಂದುವರಿದ್ರೆ ವಿಟಿಯು ಮುಚ್ಚಬೇಕಾದಿತು: ಬಸವರಾಜರಾಯ ರೆಡ್ಡಿ

    ಪರೀಕ್ಷೆ ನಡೆಸಲು ಹಣವಿಲ್ಲ, ಪರಿಸ್ಥಿತಿ ಮುಂದುವರಿದ್ರೆ ವಿಟಿಯು ಮುಚ್ಚಬೇಕಾದಿತು: ಬಸವರಾಜರಾಯ ರೆಡ್ಡಿ

    ನವದೆಹಲಿ: ಕೇಂದ್ರ ಸರ್ಕಾರದ ಆದಾಯ ತೆರಿಗೆ ನೀತಿಯಿಂದ ವಿಶೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮುಚ್ಚುವ ಪರಿಸ್ಥಿತಿ ಗೆ ಬಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಕಿಡಿ ಕಾರಿದ್ದಾರೆ.

    ಆದಾಯ ತೆರಿಗೆ ವಿನಾಯತಿ ಪಡೆದಿಲ್ಲ ಎಂದು ವಿಟಿಯುನ 441 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡು, 123 ಕೋಟಿ ದಂಡವನ್ನು ವಿಧಿಸಿರುವ ಹಿನ್ನಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ರು.

    ಮಾತುಕತೆ ವಿಫಲವಾದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದು ಅವರು, ಸರ್ಕಾರದ ಶಿಕ್ಷಣ ಸಂಸ್ಥೆಗಳು ಆದಾಯ ತೆರಿಗೆ ಕಟ್ಟುವ ಪದ್ದತಿ ಇಲ್ಲ ಆದ್ರೆ, ಆದಾಯ ಇಲಾಖೆ ವಿಶ್ವವಿದ್ಯಾಲಯದ ಹಣವನ್ನು ಜಪ್ತಿ ಮಾಡಿದ್ದು ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗ್ತಿಲ್ಲ ಜೊತೆಗೆ ಪರೀಕ್ಷೆಗಳು ಹತ್ತಿರವಾಗುತ್ತಿದ್ದು ಪರೀಕ್ಷೆ ನಡೆಸಲು ವಿವಿ ಬಳಿ ಇಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ವಿಶ್ವವಿದ್ಯಾಲಯ ಮುಚ್ಚಬೇಕಾದಿತು ಅಂತಾ ರಾಯರೆಡ್ಡಿ ಹೇಳಿದರು.

    ಜಪ್ತಿ ಮಾಡಿಕೊಂಡಿದ್ದ ಹಣವನ್ನು ಮರಳಿನೀಡುವಂತೆ ಮನವಿ ಮಾಡಿದ್ರು ಅರುಣ್ ಜೇಟ್ಲಿ ಮನಸ್ಸು ಮಾಡುತ್ತಿಲ್ಲ. ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಕೇಂದ್ರ ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಮನವಿ ಮಾಡಿದ್ರು ಕ್ಯಾರೇ ಮಾಡ್ತಿಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ರು.

    ಆದಾಯ ತೆರಿಗೆ ಇಲಾಖೆಯ ನಿಯಮಗಳ ಅನುಸಾರ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದ ರಾಯರೆಡ್ಡಿ ನಾಲ್ಕು ಲಕ್ಷ ವಿದ್ಯಾರ್ಥಿ ಗಳ ಭವಿಷ್ಯ ಡೋಲಾಯಮಾನವಾಗಿದೆ ಅಂತಾ ಆತಂಕ ವ್ಯಕ್ತಪಡಿಸಿದರು.