Tag: finance

  • ಫೈನಾನ್ಸ್ ಸಿಬ್ಬಂದಿ ಕಿರುಕುಳ – ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವಕ

    ಫೈನಾನ್ಸ್ ಸಿಬ್ಬಂದಿ ಕಿರುಕುಳ – ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವಕ

    ದಾವಣಗೆರೆ: ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವುದು ನ್ಯಾಮತಿ ತಾಲೂಕಿನ ಮಾಚಿಗೊಂಡನಹಳ್ಳಿಯಲ್ಲಿ ನಡೆದಿದೆ.

    ಯಶವಂತ್ ನಾಯ್ಕ (24) ನೇಣಿಗೆ ಶರಣಾದ ಯುವಕ. ಈತ ಶಿವಮೊಗ್ಗದ ಫೈನಾನ್ಸ್ ಒಂದರಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದ. ಸಾಲ‌ ಕಟ್ಟಲಿಲ್ಲ‌ ಎಂದರೆ ಮನೆ ಜಪ್ತಿ ಮಾಡುವುದಾಗಿ ಖಾಸಗಿ ಪೈನಾನ್ಸ್ ಸಿಬ್ಬಂದಿ ಬೆದರಿಕೆ ಹಾಕಿದ್ದರು. ಇನ್ನೊಂದು ಕಡೆ ಬೈಕ್ ಅಡವಿಟ್ಟು ಶಿವಮೊಗ್ಗದ ವ್ಯಕ್ತಿಯೊಬ್ಬರ ಬಳಿ 40 ಸಾವಿರ ರೂ. ಸಾಲ ಮಾಡಿದ್ದ. ಸಾಲ ಕಟ್ಟದ ಹಿನ್ನೆಲೆ ಮನೆ ಮುಂದೆ ಬಂದು ಅವರು ಗಲಾಟೆ ಮಾಡಿದ್ದರು. ಇದರ ಜೊತೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಸಹ ಕಿರುಕುಳ ನೀಡುತ್ತಿದ್ದರು ಎಂದು ಯುವಕನ ತಾಯಿ ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತದ ಮೇಲೆ ದಾಳಿ ಮಾಡಿ – ಪಾಕ್ ಸೇನಾ ಮುಖ್ಯಸ್ಥನಿಗೆ ಬೆಂಗಳೂರಿನ ಅಲ್‌ಖೈದಾ ಭಯೋತ್ಪಾದಕಿ ಮನವಿ

    ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಮೃತ ಯುವಕನ ತಾಯಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆಗಾಗಿ ರೈಲ್ವೆ ಹಳಿ ಮೇಲೆ ಮಲಗಿದ್ದ ವೃದ್ಧನ ರಕ್ಷಣೆ – 30 ಸೆಕೆಂಡ್ ತಡವಾಗಿದ್ರೂ ದೇಹ ಛಿದ್ರ!

    ಡೆತ್‌ನೋಟ್‌ನಲ್ಲಿ ಏನಿದೆ?
    ಸಾಲಗಾರರ ಕಿರುಕುಳಕ್ಕಾಗಿ ಸಾಯುತ್ತಿದ್ದೇನೆ. ಅಪ್ಪ ನೀನು ಅಂದು ಕೊಂಡಂತೆ ನಾನು ದುಡ್ಡು ಹಾಳು ಮಾಡಿಲ್ಲ. ಈ ಕೇಸ್‌ನಲ್ಲಿ ನಾನು ಇಷ್ಟಪಡುತ್ತಿದ್ದ ಹುಡುಗಿಯನ್ನು ಎಳೆದು ತರಬೇಡಿ. ಅವಳು ಎಲ್ಲಿದ್ದರೂ ಚೆನ್ನಾಗಿರಬೇಕು. ಅವಳು ನನ್ನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದಳು ಎಂದು ಬರೆದಿದ್ದಾನೆ. ಅಲ್ಲದೇ, ತಾನು ಮಾಡಿದ್ದ ಸಾಲದ ಬಗ್ಗೆ ಬರೆದು, ದಯವಿಟ್ಟು ನನ್ನನ್ನು ಕ್ಷಮಿಸಿ ಅಪ್ಪ ಅಮ್ಮ ಎಂದು ಉಲ್ಲೇಖಿಸಿದ್ದಾನೆ.

  • ನಿಲ್ಲದ ಫೈನಾನ್ಸ್‌ ಕಿರುಕುಳ – ದಾವಣಗೆರೆಯಲ್ಲಿ ಶಿಕ್ಷಕಿ ಆತ್ಮಹತ್ಯೆ

    ನಿಲ್ಲದ ಫೈನಾನ್ಸ್‌ ಕಿರುಕುಳ – ದಾವಣಗೆರೆಯಲ್ಲಿ ಶಿಕ್ಷಕಿ ಆತ್ಮಹತ್ಯೆ

    ದಾವಣಗೆರೆ: ಖಾಸಗಿ ಫೈನಾನ್ಸ್‌ (Finance) ಕಿರುಕುಳಕ್ಕೆ ಬೇಸತ್ತು ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು (Teacher) ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾಳಿ (Honnali) ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ನಿವಾಸಿ ಪುಷ್ಪಲತ (46) ಅತ್ಮಹತ್ಯೆಗೆ ಶರಣಾದ ಶಿಕ್ಷಕಿ ಎಂದು ತಿಳಿದು ಬಂದಿದೆ. ಅವರು ತುಂಗಾಭದ್ರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನಾಳಿಯಲ್ಲಿ ಮನೆ ಕಟ್ಟಲು ಶಿವಮೊಗ್ಗ ಮೂಲದ ಖಾಸಗಿ ಮೈಕ್ರೋ ಫೈನಾನ್ಸ್ ಹಾಗೂ ಕೈಗಡವಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದರು.

    ಸರಿಯಾಗಿ ಪಾವತಿ ಮಾಡದ ಹಿನ್ನೆಲೆ 20 ದಿನಗಳ ಹಿಂದೆ ಪುಷ್ಪಲತ ದಂಪತಿ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಫೈನಾನ್ಸ್‌ ಸಿಬ್ಬಂದಿ ದೂರು ನೀಡಿದ್ದರು. ದೂರು ದಾಖಲಾದ ಬಳಿಕ ಹೊನ್ನಾಳಿ ಠಾಣೆ ಪೊಲೀಸರು ಫೈನಾನ್ಸ್ ಕಂಪನಿಯಿಂದ ಮುಚ್ಚಳಿಕೆ ಬರೆಸಿಕೊಂಡಿದ್ದರು. ಸೋಮವಾರ ಬೆಳಗಿನ ಜಾವ ತುಂಗಾಭದ್ರ ನದಿಗೆ ಹಾರಿ ಅವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತುಂಗಭದ್ರಾ ನದಿಗೆ ಪುಷ್ಪಲತ ಹಾರಲು ಹೊರಟಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ನದಿ ದಂಡೆಯ ಬಳಿ ಕುಳಿತು ಆಳವಾಗಿ ಯೋಚಿಸಿ ನದಿಗೆ ದುಮುಕಿದ್ದಾರೆ. ಈ ದೃಶ್ಯ ರಾಘವೇಂದ್ರಸ್ವಾಮಿ ಮಠದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಶಿಕ್ಷಕಿಯ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಹೊನ್ನಾಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • 2ನೇ ತ್ರೈಮಾಸಿಕದಲ್ಲಿ ದೇಶದ ಬೆಳವಣಿಗೆ ದರವು 5.4% ರಷ್ಟಿದೆ – ನಿರ್ಮಲಾ ಸೀತಾರಾಮನ್

    2ನೇ ತ್ರೈಮಾಸಿಕದಲ್ಲಿ ದೇಶದ ಬೆಳವಣಿಗೆ ದರವು 5.4% ರಷ್ಟಿದೆ – ನಿರ್ಮಲಾ ಸೀತಾರಾಮನ್

    ನವದೆಹಲಿ: 2024-25ರ ಆರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ ದೇಶದ ಬೆಳವಣಿಗೆ (GDP Growth) ದರವು 5.4% ರಷ್ಟಿದೆ. ಈ ಅಂಕಿ ಅಂಶವು ನಿರೀಕ್ಷೆಗಿಂತ ಕಡಿಮೆಯಾಗಿದೆ. ಆದರೆ ಮುಂಬರುವ ತ್ರೈಮಾಸಿಕಗಳಲ್ಲಿ ಇದು ಸುಧಾರಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಲೋಕಸಭೆಯಲ್ಲಿ ತಿಳಿಸಿದ್ದಾರೆ.

    ಲೋಕಸಭೆಯಲ್ಲಿ (Lok Sabha) ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಮೊದಲ ಬ್ಯಾಚ್‌ನ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ಭಾರತವು ಸ್ಥಿರ ಮತ್ತು ನಿರಂತರ ಬೆಳವಣಿಗೆ ಕಂಡಿದೆ ಮತ್ತು ಅದರ GDP ಬೆಳವಣಿಗೆ ದರವು ಕಳೆದ ಮೂರು ವರ್ಷಗಳಲ್ಲಿ ಸರಾಸರಿ 8.3% ಹೊಂದಿದೆ ಎಂದು ಹೇಳಿದ್ದಾರೆ.

    ಆದಾಗ್ಯೂ ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ. 2ನೇ ತ್ರೈಮಾಸಿಕ ಬೆಳವಣಿಗೆ ದರವು ಕೇವಲ ತಾತ್ಕಾಲಿಕ ಕುಸಿತ ಮತ್ತು ಮುಂಬರುವ ತ್ರೈಮಾಸಿಕಗಳಲ್ಲಿ ಆರ್ಥಿಕತೆಯು ಉತ್ತಮ ಬೆಳವಣಿಗೆಯನ್ನು ಕಾಣಲಿದೆ ಎಂದು ಸೀತಾರಾಮನ್ ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: Delhi Assembly Election | ಚುನಾವಣಾ ಆಯೋಗದಿಂದ ಪೂರ್ವಸಿದ್ಧತಾ ಸಭೆ – ಮುಂದಿನ ವಾರವೇ ದಿನಾಂಕ ಪ್ರಕಟ ಸಾಧ್ಯತೆ

    ಉತ್ಪಾದನಾ ವಲಯದಲ್ಲಿ ಯಾವುದೇ ವ್ಯಾಪಕವಾದ ಮಂದಗತಿ ಇಲ್ಲ, ಒಟ್ಟಾರೆ ಉತ್ಪಾದನಾ ವಲಯದ ಅರ್ಧದಷ್ಟು ಬಲವಾಗಿ ಉಳಿದಿದೆ. ಭಾರತದ ಆರ್ಥಿಕತೆಯು ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) 6.7 ಪ್ರತಿಶತ ಮತ್ತು ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 5.4 ಪ್ರತಿಶತದಷ್ಟು ಬೆಳೆದಿದೆ. ಇದನ್ನೂ ಓದಿ: ಫಾಲೋ ಆನ್‌ನಿಂದ ಭಾರತ ಬಚಾವ್‌ – ಕೊನೆಯ ವಿಕೆಟ್‌ಗೆ 39 ರನ್‌ಗಳ ಜೊತೆಯಾಟ ಉಳಿಸಿತು ಮಾನ!

    ಹಣದುಬ್ಬರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸೀತಾರಾಮನ್, ಎನ್‌ಡಿಎ ಆಡಳಿತದಲ್ಲಿ ಇದನ್ನು ಉತ್ತಮವಾಗಿ ನಿಯಂತ್ರಿಸಲಾಗಿತ್ತು, ಆದ್ರೆ ಯುಪಿಎ ಆಡಳಿತದಲ್ಲಿ ಇದು ಎರಡಂಕಿಗಳನ್ನು ಮುಟ್ಟಿತ್ತು ಎಂದು ಹೇಳಿದರು. 2017-18ರಲ್ಲಿ ನಿರುದ್ಯೋಗ ದರವು ಶೇ.6 ರಿಂದ ಈಗ ಶೇ. 3.2ಕ್ಕೆ ಇಳಿದಿದೆ ಎಂದು ಹೇಳಿದರು.

  • ಮಹಿಳೆಯರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಲೂಟಿ- ಆರೋಪಿ ಅಂದರ್

    ಮಹಿಳೆಯರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಲೂಟಿ- ಆರೋಪಿ ಅಂದರ್

    ಹಾವೇರಿ: ಮೈಕ್ರೋಫೈನಾನ್ಸ್ (Microfinance) ಒಂದರ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಸೇರಿ ಗ್ರಾಹಕರ ನಕಲಿ ದಾಖಲೆಗಳನ್ನು ಬಳಸಿ ಕೋಟ್ಯಂತರ ರೂ. ಹಣವನ್ನು ಸಾಲ (Loan) ಪಡೆದು ವಂಚಿಸಿರುವ ಘಟನೆ ಹಿರೇಕೆರೂರಿನಲ್ಲಿ (Hirekerur) ನಡೆದಿದೆ.

    ಇಲ್ಲಿನ ಮೈಕ್ರೋಫೈನಾನ್ಸ್‌ ಒಂದರ ಕ್ಯಾಶಿಯರ್ ಶಿವಾನಂದಪ್ಪ ಹಾಗೂ ಮ್ಯಾನೇಜರ್ ಬಸವರಾಜಯ್ಯ ಕೋಟಿ ಕೋಟಿ ಹಣ ವಂಚಿಸಿರುವ ಆರೋಪಿಗಳಾಗಿದ್ದಾರೆ. ಆರೋಪಿಗಳು ಗ್ರಾಮೀಣ ಭಾಗದ ಮಹಿಳೆಯರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲ ನೀಡಿದ್ದೇವೆ ಎಂದು ತೋರಿಸಿ, ಸುಮಾರು 4,16,14000 ರೂ. ಹಣವನ್ನು ತಾವೇ ಪಡೆದು ಬಳಸಿಕೊಂಡಿದ್ದಾರೆ. ಇದನ್ನೂ ಓದಿ: ವ್ಯಕ್ತಿಗೆ ಇರಿದಿದ್ದ ಚಾಕುವಿನಿಂದ್ಲೇ ಪೊಲೀಸರ ಮೇಲೆ ಹಲ್ಲೆಗೆ ಯತ್ನ- ರೌಡಿಶೀಟರ್ ಕಾಲಿಗೆ ಗುಂಡೇಟು

    ಮೈಕ್ರೋಫೈನಾನ್ಸ್ ಶಾಖೆಯಲ್ಲಿ ಒಂದು ಲೆಕ್ಕ ಹಾಗೂ ಕೇಂದ್ರ ಕಚೇರಿಯಲ್ಲಿ ಮತ್ತೊಂದು ಹಣಕಾಸು ಲೆಕ್ಕಾಚಾರ ತೋರಿಸಿದ್ದು ಆರೋಪಿಗಳ ಕಳ್ಳಾಟ ಬಯಲಾಗಿದೆ. ಆರೋಪಿಗಳು ನಕಲಿ ಕ್ಯಾಶ್ ಬುಕ್ ಬಳಸಿ ಅನುಮಾನ ಮೂಡದಂತೆ 87,33,931 ರೂ. ಹಣವನ್ನು ಗ್ರಾಹಕರ ಹೆಸರಿನಲ್ಲಿ ಜಮೆ ಮಾಡಿದಂತೆ ತೋರಿಸಿದ್ದಾರೆ. ಆದರೆ ಕಚೇರಿಗೆ 8,60,000 ರೂ. ಮಾತ್ರ ಜಮೆಯಾಗಿದೆ. ಇದರಿಂದ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ.

    ಈ ಸಂಬಂಧ ಫೈನಾನ್ಸ್ ಸಂಸ್ಥೆಯ ವಲಯದ ವ್ಯವಸ್ಥಾಪಕ ತಿಮ್ಮರಾಜು, ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಶಿವಾನಂದಪ್ಪನನ್ನು ಬಂಧಿಸಲಾಗಿದ್ದು, ಬಸವರಾಜಪ್ಪ ತಲೆಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಯಾಣಿಸ್ತಿದ್ದ ಕಾರು ಅಪಘಾತ

  • ನಿರೀಕ್ಷೆಗೂ ಮೀರಿ ವೃದ್ಧಿ – ಜಿಡಿಪಿ ಬೆಳವಣಿಗೆಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ ಭಾರತ – ಯಾವ ದೇಶದ್ದು ಎಷ್ಟು?

    ನಿರೀಕ್ಷೆಗೂ ಮೀರಿ ವೃದ್ಧಿ – ಜಿಡಿಪಿ ಬೆಳವಣಿಗೆಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ ಭಾರತ – ಯಾವ ದೇಶದ್ದು ಎಷ್ಟು?

    ನವದೆಹಲಿ: ಜುಲೈ- ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ(Indian Economy) ನಿರೀಕ್ಷೆಗೂ ಮೀರಿ ವೃದ್ಧಿಯಾಗಿದೆ.

    ಈ ಅವಧಿಯಲ್ಲಿ ಹಲವು ಸಂಸ್ಥೆಗಳು ಜಿಡಿಪಿ (GDP) 6.8% ರಷ್ಟು ಪ್ರಗತಿ ಸಾಧಿಸಬಹುದು ಎಂದು ಅಂದಾಜು ಮಾಡಿತ್ತು. ಆರ್‌ಬಿಐ (RBI) 6.5% ಅಭಿವೃದ್ಧಿ ಸಾಧಿಸಬಹುದು ಎಂದು ನಿರೀಕ್ಷೆ ಮಾಡಿತ್ತು.ಆದರೆ ಈ ನಿರೀಕ್ಷೆಗೂ ಮೀರಿ ಜಿಡಿಪಿ 7.6% ರಷ್ಟು ಪ್ರಗತಿ ಸಾಧಿಸಿದೆ.

    ಎರಡನೇ ತ್ರೈಮಾಸಿಕದಲ್ಲಿ ಈ ಸಾಧನೆ ಮಾಡುವ ಮೂಲಕ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಲ್ಲಿ (World Fastest Economic Growth) ಮೊದಲ ಸ್ಥಾನದಲ್ಲೇ ಭಾರತ ಮುಂದುವರಿದಿದೆ.

    ಉತ್ಪದನಾ ವಲಯ (13.9%), ನಿರ್ಮಾಣ(13.3%), ಗಣಿಗಾರಿಕೆ(10.0%) ಕ್ಷೇತ್ರದ ಬೆಳವಣಿಗೆಯಿಂದ ಜಿಡಿಪಿ ದರ ವೃದ್ಧಿಯಾಗಿದೆ. ಮೊದಲ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಕೃಷಿ (1.2%), ಹೋಟೆಲ್‌, ಸಾರಿಗೆ, ಸಂವಹನ (4.3%), ಫೈನಾನ್ಸ್‌, ರಿಯಲ್‌ ಎಸ್ಟೇಟ್‌(6.0%) ಬೆಳವಣಿಗೆ ಕಡಿಮೆಯಾಗಿದೆ.

    2022-23ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 6.2% ಜಿಡಿಪಿ ಬೆಳವಣಿಗೆ ಸಾಧಿಸಿದ್ದರೆ ಈ ಹಣಕಾಸು ವರ್ಷದ ಏಪ್ರಿಲ್‌-ಜೂನ್‌ ಅವಧಿಯ ಮೊದಲ ತ್ರೈಮಾಸಿಕದಲ್ಲಿ 7.8% ರಷ್ಟು ಬೆಳವಣಿಗೆ ಸಾಧಿಸಿತ್ತು. ಇದನ್ನೂ ಓದಿ: ಜಪಾನ್‌ ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತಾ ಭಾರತ?

    ಯಾವ ದೇಶದ್ದು ಎಷ್ಟು?
    ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಭಾರತ 7.6%, ಫಿಲಿಪೈನ್ಸ್ 5.9%, ರಷ್ಯಾ 5.5%, ಅಮೆರಿಕ 5.2%, ಚೀನಾ 4.9%, ಯುಕೆ 0.6%, ಜರ್ಮನಿ -0.4%, ಜಪಾನ್‌ -2.1% ಜಿಡಿಪಿ ಪ್ರಗತಿ ಸಾಧಿಸಿದೆ.

    ಜಿಡಿಪಿ ಎಂದರೇನು?
    ಜಿಡಿಪಿ ಅಂದರೆ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಷನ್ ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನ ಅಂತ ಅರ್ಥ. ಅಂದರೆ ಒಂದು ದೇಶದ ಅರ್ಥವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪದನೆಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ. ಕೃಷಿ ಉತ್ಪನ್ನ, ಕೈಗಾರಿಕಾ ಉತ್ಪನ್ನ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿನ ವಹಿವಾಟು, ಜನರ ಸಂಬಳ, ಗಣಿಗಾರಿಕೆ, ರಿಯಲ್‌ ಎಸ್ಟೇಟ್‌, ಆಮದು ರಫ್ತು ಎಲ್ಲವೂ ಸೇರಿ ಲೆಕ್ಕ ಹಾಕಿದಾಗ ಜಿಡಿಪಿ ಎಷ್ಟು ಎಂದು ಲೆಕ್ಕ ಹಾಕಲಾಗುತ್ತದೆ.

  • ಸಾಲ ನೀಡಲು ಡೇಟಿಂಗ್ ಬೇಡಿಕೆ ಆರೋಪ – ಫೈನಾನ್ಸ್ ಸಿಬ್ಬಂದಿ ಮೇಲೆ ಹಲ್ಲೆ

    ಸಾಲ ನೀಡಲು ಡೇಟಿಂಗ್ ಬೇಡಿಕೆ ಆರೋಪ – ಫೈನಾನ್ಸ್ ಸಿಬ್ಬಂದಿ ಮೇಲೆ ಹಲ್ಲೆ

    ಕೊಪ್ಪಳ: ಸಾಲ (Loan) ವಸೂಲಿಗೆ ತೆರಳಿದ್ದ ಫೈನಾನ್ಸ್ (Finance) ಸಿಬ್ಬಂದಿ ಮೇಲೆ ಮಹಿಳೆಯೊಬ್ಬಳು ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿದ ಘಟನೆ ಹಳೆಬಂಡಿಹರ್ಲಾಪುರದಲ್ಲಿ ನಡೆದಿದೆ.

    ಮೈಕ್ರೋಫೈನಾನ್ಸ್ ಕಂಪನಿ ಒಂದರ ಮಹಿಳಾ ಗುಂಪಿನ ಸದಸ್ಯರಾಗಿರುವ ನಾಗಮ್ಮ ಎಂಬುವವರು ಸಾಲದ ಬೇಡಿಕೆ ಇಟ್ಟಿದ್ದರು. ಈ ವೇಳೆ ಸಾಲ ಪಡೆಯಲು ಸಿಬ್ಬಂದಿ ಯಮನೂರಪ್ಪ ಎಂಬಾತ ಡೇಟಿಂಗ್‍ಗೆ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಬಳಿಕ ಸಾಲ ಮಂಜೂರಾಗಿದ್ದು, ಕರೆ ಮಾಡಿ ಅಶ್ಲೀಲ ಪದ ಬಳಸಿ ಮಾತಾಡಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಇದೇ ಕಾರಣಕ್ಕೆ ಮಹಿಳೆ ಆತನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಇದನ್ನೂ ಓದಿ: ಮಾಜಿ ಸಿಬಿಐ ಅಧಿಕಾರಿ ಹೆಸರಲ್ಲಿ ಹಣದ ಬೇಡಿಕೆ – ಖಾಸಗಿ ವೀಡಿಯೋ ವೈರಲ್ ಬೆದರಿಕೆ

    ಆದರೆ ಈ ಬಗ್ಗೆ ಕಾಲ್ ರೆಕಾರ್ಡ್ ಒದಗಿಸುರುವ ಮೈಕ್ರೋಫೈನಾನ್ಸ್ ಸಿಬ್ಬಂದಿ ಮಹಿಳೆಯ ಆರೋಪವನ್ನು ನಿರಾಕರಿಸಿದ್ದಾನೆ. ಬಳಿಕ ಮಹಿಳೆ ಹಾಗೂ ಸಿಬ್ಬಂದಿ ನಡುವೆ ಮುನಿರಾಬಾದ್ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ವೇಳೆ ಅಶ್ಲೀಲ ಪದ ಬಳಕೆ ಮಾಡಿದ್ದಕ್ಕೆ ಹೊಡೆದಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ. ಇದನ್ನೂ ಓದಿ: 13 ವರ್ಷ ಭಾರತಾಂಬೆಯ ಸೇವೆ ಮಾಡಿದ ಕೊಡಗಿನ ಯೋಧ ಅನಾರೋಗ್ಯದಿಂದ ನಿಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಣಕಾಸಿನ ವಿಷಯಕ್ಕೆ ಗೆಳೆಯನನ್ನೆ ಕೊಲೆ ಮಾಡಿಸಿದ ಕಿಡಿಗೇಡಿ

    ಹಣಕಾಸಿನ ವಿಷಯಕ್ಕೆ ಗೆಳೆಯನನ್ನೆ ಕೊಲೆ ಮಾಡಿಸಿದ ಕಿಡಿಗೇಡಿ

    ಹಾಸನ: ಹಣಕಾಸಿನ ವಿಷಯಕ್ಕೆ ಗೆಳೆಯನನ್ನೆ ದುಷ್ಕರ್ಮಿ ಕೊಲೆ ಮಾಡಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

    ಮೇ.10ರ ರಾತ್ರಿ ಹಾಸನದ ಹೊಸ ಬಸ್ ನಿಲ್ದಾಣದ ಬಳಿ ಆಟೋಚಾಲಕ ಗಿರೀಶ್ ಕೊಲೆ ನಡೆದಿದ್ದು, ಪೊಲೀಸರ ನಿದ್ದೆಗೆಡಿಸಿತ್ತು. ಆ ಕ್ಷಣಕ್ಕೆ ಆರೋಪಿಗಳು ಯಾರೂ ಎಂದೇ ಪತ್ತೆಯಾಗಿರಲಿಲ್ಲ. ನಿಂತಿದ್ದ ಆಟೋ ಒಳಗಡೆಯೇ ಗಿರೀಶ್‍ನನ್ನು ಕೊಲೆ ಮಾಡಲಾಯಿತು. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನು ಹುಡುಕಿಕೊಂಡು ಹೋಗಿದ್ದು, ಗಿರೀಶ್ ಗೆಳೆಯರೇ ಕೊಲೆಗಾರರು ಎಂಬುದು ತಿಳಿದುಬಂದಿದೆ.

    ನಡೆದಿದ್ದೇನು?
    ಕೊಲೆಯಾದ ಹೊಸಕೊಪ್ಪಲು ಆಟೋ ಚಾಲಕ ಗಿರೀಶ್ ಮತ್ತು ಪ್ರಮುಖ ಆರೋಪಿ ವಾಸು ಇಬ್ಬರು ಬೆಂಗಳೂರಿನಲ್ಲಿ ಆಟೋ ಚಾಲಕರಾಗಿದ್ದರು. ಹಾಗಾಗಿ ಇಬ್ಬರ ನಡುವೆ ಸ್ನೇಹದ ಜೊತೆಗೆ ಹಣಕಾಸಿನ ವ್ಯವಹಾರವೂ ಇತ್ತು. ಕೊರೊನಾ ಹಿನ್ನೆಲೆಯಲ್ಲಿ ಇಬ್ಬರೂ ಬೆಂಗಳೂರು ಬಿಟ್ಟು ಹಾಸನಕ್ಕೆ ಬಂದಿದ್ದರು. ಆಗಲೂ ಇಬ್ಬರ ಸ್ನೇಹ ಮುಂದುವರಿದಿತ್ತು.

    ಕೊಲೆಯಾದ ಗಿರೀಶ್ ಬೆಳಗ್ಗೆ ಹಿಮತ್ ಸಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡಿ, ರಾತ್ರಿ ವೇಳೆ ಆಟೋ ಓಡಿಸುತ್ತಿದ್ದ. ವಾಸು ನಗರದ ಎಪಿಎಂಪಿಯಲ್ಲಿ ಸುಂಕ ವಸೂಲಿ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ದುಡ್ಡು ಕೊಡುವ, ತೆಗೆದುಕೊಳ್ಳುವ ಸಂಬಂಧ ಮನಸ್ತಾಪವಿತ್ತು. ಇದೇ ಕಾರಣಕ್ಕೆ ಇಬ್ಬರು ಜಗಳ ಮಾಡಿಕೊಂಡಿದ್ದರು. ಈ ವೈಷಮ್ಯದಿಂದಲೇ ಗಿರೀಶ್ ಹತ್ಯೆಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ:  ತಲೆಗೆ 25 ಲಕ್ಷ ಬಹುಮಾನ ಘೋಷಣೆಗೆಯಾಗಿದ್ದ ನಕ್ಸಲ್‌ ನಾಯಕ ಶವವಾಗಿ ಪತ್ತೆ

    CRIME 2

    ಗಿರೀಶ್ ದಿನಚರಿ ಗೊತ್ತಿದ್ದ ವಾಸು ಹಾಗೂ ಅವರ ತಂಡ ಅವನನ್ನು ಸಾಯಿಸಲು ಯೋಜನೆ ರೂಪಿಸಿದ್ದಾರೆ. ಈ ಹಿನ್ನೆಲೆ ವಾಸು ಮತ್ತು ಅವರ ತಂಡ ಹಾಸನದ ಹೊಸ ಬಸ್ ನಿಲ್ದಾಣಕ್ಕೆ ಬಂದು ರಾತ್ರಿ 9 ಗಂಟೆ ಸುಮಾರಿಗೆ ಗಿರೀಶ್‍ನನ್ನು ಮದ್ಯಪಾನ ಮಾಡಲು ಕರೆದುಕೊಂಡು ಹೋಗಿದ್ದಾರೆ. ನಂತರ ಹಣಕಾಸು ವಿಷಯಕ್ಕೆ ಜಗಳ ತೆಗೆದು ಅದು ತಾರಕಕ್ಕೇ ಹೋಗಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದರು. ಇವರಲ್ಲಿ ಐದು ಮಂದಿಯನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಾಗಿ ಶೋಧಕಾರ್ಯ ಮುಂದುವರಿದಿದೆ.

    ಒಟ್ಟಿನಲ್ಲಿ ಹಣಕಾಸು ವಿಷಯಕ್ಕೆ ಸ್ನೇಹಿತರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಮುಖ ಆರೋಪಿ ಪರಾರಿಯಾಗಿದ್ದು, ಉಳಿದ ಐವರು ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.

  • ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು – ಯಾಸೀನ್ ಮಲಿಕ್ ದೋಷಿ

    ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು – ಯಾಸೀನ್ ಮಲಿಕ್ ದೋಷಿ

    ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಪ್ರಕರಣದ ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಗಾರ ಯಾಸೀನ್ ಮಲಿಕ್ ದೋಷಿ ಎಂದು ಎನ್‍ಐಎ ಕೋರ್ಟ್ ಘೋಷಿಸಿದೆ. ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ತೀರ್ಪು ಪ್ರಕಟಿಸಿದೆ.

    ಎನ್‍ಐಎ ಅಧಿಕಾರಿಗಳು ಯಾಸೀನ್ ಮಲಿಕ್ ಆರ್ಥಿಕ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲಿದ್ದು, ಶಿಕ್ಷೆಯ ಪ್ರಮಾಣದ ಬಗ್ಗೆ ಮೇ 25 ರಂದು ವಿಚಾರಣೆ ನಡೆಯಲಿದೆ. ಮೂಲಗಳ ಪ್ರಕಾರ, ಯಾಸಿನ್ ಮಲಿಕ್ ಮುಂದಿನ ವಿಚಾರಣೆಯ ದಿನಾಂಕದೊಳಗೆ ತಮ್ಮ ಹಣಕಾಸಿನ ಆಸ್ತಿಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ:  ಪೋಸ್ಟರ್‌ಗಳಲ್ಲಿ ಹುಲಿ ಚಿತ್ರಗಳನ್ನ ಹಾಕಿಬಿಟ್ರೆ ಮೈಸೂರು ಹುಲಿ ಆಗಿಬಿಡ್ತಾನಾ?: ಪ್ರತಾಪ್ ಸಿಂಹ 

    ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಸೇರಿದಂತೆ ವಿವಿಧ ಪ್ರಕರಣಗಳು ಯಾಸಿನ್ ಮಲ್ಲಿಕ್ ಮೇಲೆ ದಾಖಲಾಗಿತ್ತು. ತನ್ನ ಮೇಲೆ ದಾಖಲಾದ ಆರೋಪಗಳ ಸಂಬಂಧ ಮೇ 10 ರಂದು ಕೋರ್ಟ್‍ನಲ್ಲಿ ಮಲ್ಲಿಕ್ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಪು ಪ್ರಕಟವಾಗಿದೆ. 2017 ರಲ್ಲಿ ಯಾಸೀನ್ ಮಲಿಕ್ ವಿರುದ್ಧ ದೂರು ದಾಖಲಾಗಿತ್ತು.

    ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರಾದ ಫಾರೂಕ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ, ಶಬ್ಬೀರ್ ಶಾ, ಮಸರತ್ ಆಲಂ, ಎಂಡಿ ಯೂಸುಫ್ ಷಾ, ಅಫ್ತಾಬ್ ಅಹ್ಮದ್ ಶಾ, ಅಲ್ತಾಫ್ ಅಹ್ಮದ್ ಶಾ, ನಯೀಮ್ ಖಾನ್, ಎಂಡಿ ಅಕ್ಬರ್ ಖಾಂಡೆ, ರಾಜಾ ಮೆಹರಾಜುದ್ದೀನ್ ಕಲ್ವಾಲ್ ಸೇರಿದಂತೆ ಇತರ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರ ವಿರುದ್ಧವೂ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಇದನ್ನೂ ಓದಿ:  ಭಾರೀ ಮಳೆಗೆ ಕೊಚ್ಚಿ ಹೋಯ್ತು ಬೆಂಗಳೂರು -ಮೈಸೂರು ಹೆದ್ದಾರಿ – ಟ್ರಾಫಿಕ್ ಜ್ಯಾಮ್ 

  • ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಟ್ಟ BBMP!

    ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಟ್ಟ BBMP!

    ಬೆಂಗಳೂರು: ರಾಜಧಾನಿಗೆ ಬಿಬಿಎಂಪಿ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ವಿದ್ಯುತ್ ಬಿಲ್ ಮೂಲಕ ಕಸ ನಿರ್ವಹಣೆ ಸೆಸ್ ಸಂಗ್ರಹಕ್ಕೆ ಬಿಬಿಎಂಪಿ ಪ್ಲಾನ್ ಮಾಡ್ತಿದೆ.

    ಬಿಬಿಎಂಪಿ ಸೆಸ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ. ಸರ್ಕಾರ ಒಪ್ಪಿಗೆ ಸೂಚಿಸಿದ್ರೇ ಸದ್ಯದಲ್ಲೇ ಸಿಲಿಕಾನ್ ಸಿಟಿ ಜನರ ಮನೆಗೆ ತಿಂಗಳಿಗೊಮ್ಮೆ ಕರೆಂಟ್ ಬಿಲ್ ಜೊತೆಗೆ ಗಾರ್ಬೇಜ್ ಬಿಲ್ ಬರಲಿದೆ.

    2011 ರಿಂದ ಆಸ್ತಿ ತೆರಿಗೆ ಮೇಲೆ ಶೇ.19 ರಷ್ಟು ಸೆಸ್ ಸಂಗ್ರಹಿಸಲಾಗುತ್ತಿದೆ. ಆದರೆ ಇದರಿಂದ ಕಸ ನಿರ್ವಹಣಾ ವೆಚ್ಚದ ಶೇ.15 ರಷ್ಟು ಸಂಗ್ರಹಣೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಮೂಲಕ ಪ್ರತಿ ತಿಂಗಳು ಕಸ ನಿರ್ವಹಣೆ ಸೆಸ್ ಸಂಗ್ರಹಿಸಲು ಬಿಬಿಎಂಪಿ ಮುಂದಾಗಿದೆ. ಇದರಿಂದ ಮಾಸಿಕ 48 ಕೋಟಿ ರೂ. ಆದಾಯದ ನಿರೀಕ್ಷೆಯಲ್ಲಿದೆ.

    ವಾಣಿಜ್ಯ ಉತ್ಪಾದಕರಿಂದ 23.93 ಕೋಟಿ ರೂ. ಸಂಗ್ರಹದ ಗುರಿಯನ್ನು ಬಿಬಿಎಂಪಿ ಹೊಂದಿದೆ. ಈ ಆದಾಯದ ಮೂಲಕ ಗುತ್ತಿಗೆದಾರರ ಬಿಲ್, ಪೌರಕಾರ್ಮಿಕರ ಸಂಬಳಕ್ಕೆ ಅನುಕೂಲ ಮಾಡಿಕೊಳ್ಳಲು ತೀರ್ಮಾನಿಸಿದೆ ಎನ್ನಲಾಗಿದೆ. ಆದರೆ ಬಿಬಿಎಂಪಿ ಮುಖ್ಯ ಆಯುಕ್ತರು ಮಾತ್ರ ಇಂಥಾ ಯಾವುದೇ ಪ್ರಸ್ತಾವನೆಯನ್ನು ಬಿಬಿಎಂಪಿ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಗೃಹ ತ್ಯಾಜ್ಯ ಉತ್ಪಾದಕರಿಗೆ ವಿದ್ಯುತ್ ಬಿಲ್ ಆಧರಿಸಿ ಪ್ರಸ್ತಾಪಿಸಿರುವ ಸೆಸ್ ವಿವರ ಹೀಗಿದೆ:

    ವಿದ್ಯುತ್ ಬಿಲ್                      ಕಸ ಸೆಸ್
    * 200 ರೂ. ವರೆಗೆ               30 ರೂ.
    * 200-500 ರೂ.                60 ರೂ.
    * 500-1000 ರೂ.              100 ರೂ.
    * 1001-2000 ರೂ.             200 ರೂ.
    * 2001-3000 ರೂ.             350 ರೂ.
    * 3000 ರೂ.ಗಿಂತ ಹೆಚ್ಚು         500 ರೂ.

  • ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿಸಿಕೊಂಡ ಖಾಸಗಿ ಫೈನಾನ್ಸ್

    ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿಸಿಕೊಂಡ ಖಾಸಗಿ ಫೈನಾನ್ಸ್

    ಯಾದಗಿರಿ: ನಗರದಲ್ಲಿ ಬಡ್ಡಿ ವ್ಯವಹಾರ ಮೀತಿ ಮೀರಿದ್ದು, ಖಾಸಗಿ ಫೈನಾನ್ಸ್​ಗಳಿಂದ ಸಾಲಗಾರರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಖಾಸಗಿ ಫೈನಾನ್ಸ್ ವೊಂದು ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿರಿಸಿದೆ.

    yadagiri finance

    ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಶಿವಶಂಕರ್ ಫೈನಾನ್ಸ್ ನಿಂದ ಸಾಲಗಾರರ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದೆ. ಶಿವಶಂಕರ್ ಫೈನಾನ್ಸ್‌ನಲ್ಲಿ ಮಹ್ಮದ್ ಮೂರು ಲಕ್ಷ ಸಾಲ ಪಡೆದಿದ್ದರು. ಸಮಯಕ್ಕೆ ಸರಿಯಾಗಿ ಅಸಲು ಮತ್ತು ಬಡ್ಡಿ ಕಟ್ಟಿದ್ದರು. ಹೀಗಿದ್ದರೂ ಫೈನಾನ್ಸ್‌ನಿಂದ ಹೆಚ್ಚಿನ ಬಡ್ಡಿ ನೀಡಲು ಒತ್ತಾಯ ಮಾಡಿತ್ತು. ಇದಕ್ಕೆ ಮಹ್ಮದ್ ಒಪ್ಪಿರಲಿಲ್ಲ. ಇದನ್ನೂ ಓದಿ:ನದಿಗೆ ಹಾರಿ ವೃದ್ಧೆ ಆತ್ಮಹತ್ಯೆ ಯತ್ನ- ಯುವಕನಿಂದ ರಕ್ಷಣೆ

    yadagiri finance

    ಹೀಗಾಗಿ ಆತನ ಹೆಂಡತಿ ರಿಜ್ವಾನರನ್ನು ಆಫೀಸ್​ಗೆ ಕರೆದುಕೊಂಡು ಹೋಗಿ ಒತ್ತೆಯಾಳಾಗಿಸಿಕೊಂಡ ಫೈನಾನ್ಸ್ ಮಾಲೀಕರು, ಮೂತ್ರ ವಿಸರ್ಜನೆಗೂ ಬಿಡದೇ  ಚಿತ್ರ ಹಿಂಸೆ ನೀಡಿದ್ದಾರೆ. ಫೈನಾನ್ಸ್ ನಡೆಸುವ ಶಿವಶಂಕರ್, ಚಂದ್ರಕಲಾ, ಶಿವಮ್ಮ, ಪಾರ್ವತಿ ಎಂಬವರಿಂದ ಈ ಕೃತ್ಯ ನಡೆದಿದೆ. ಇನ್ನೂ ಫೈನಾನ್ಸ್‌ನವರ ಕಿರುಕುಳವನ್ನು ರಿಜ್ವಾನ್‍ರವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದ್ದಾರೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್