Tag: Finale

  • ಎರಡನೇ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಳಪೆ ಬೋರ್ಡ್ ಹಾಕಿಸಿಕೊಂಡ ರಾಕೇಶ್

    ಎರಡನೇ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಳಪೆ ಬೋರ್ಡ್ ಹಾಕಿಸಿಕೊಂಡ ರಾಕೇಶ್

    ಬಿಗ್ ಬಾಸ್ (Bigg Boss) ಮನೆಯ ಆಟ ಸಾಕಷ್ಟು ರೋಚಕ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಈ ಸೀಸನ್ 95 ದಿನಗಳನ್ನು ಪೂರೈಸಿ, ಗ್ರ್ಯಾಂಡ್ ಫಿನಾಲೆಯತ್ತ ಲಗ್ಗೆ ಇಡುತ್ತಿದೆ. ಇದೀಗ ರಾಕೇಶ್ ಅಡಿಗ (Rakesh Adiga) ಎರಡನೇ ಬಾರಿ ಕಳಪೆ ಹಣೆಪಟ್ಟಿ ಪಡೆದು ಜೈಲಿಗೆ ಹೋಗಿದ್ದಾರೆ. ಮನೆಯ ಸದಸ್ಯರು ಈ ವಾರ ಅವರಿಗೆ ಕಳಪೆ ಹಣೆಪಟ್ಟಿ ಕಟ್ಟಿದ್ದಾರೆ.

    ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ 13ನೇ ವಾರ ಸರಣಿ ಟಾಸ್ಕ್‌ಗಳನ್ನು ‘ಬಿಗ್ ಬಾಸ್’ ನೀಡಿದ್ದರು. ಟಾಸ್ಕ್‌ಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿತ್ತು. ಟಾಸ್ಕ್‌ಗಳನ್ನು ಎಷ್ಟು ಬೇಗ ಮುಗಿಸುತ್ತಾರೆ ಎಂಬ ಆಧಾರದ ಮೇಲೆ ಸ್ಪರ್ಧಿಗಳಿಗೆ ಪಾಯಿಂಟ್‌ಗಳನ್ನು ನೀಡಲಾಗಿತ್ತು. ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್ಯವರ್ಧನ್ ಗುರೂಜಿ (Aryardhan Guruji) ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಪಡೆದಿದ್ದಾರೆ. ಇನ್ನೂ, ಒಂದು ಆಟವನ್ನ ಸಂಪೂರ್ಣವಾಗಿ ಮುಗಿಸದೆ ಗಿವಪ್ ಮಾಡಿದ ರಾಕೇಶ್ ಅಡಿಗ ‘ಕಳಪೆ’ ಪಟ್ಟ ಪಡೆದು ಜೈಲಿಗೆ ತೆರಳಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

    ಟಾಸ್ಕ್ ವೊಂದರಲ್ಲಿ ರಾಕಿ ಗಿವಪ್ ಮಾಡಿದ್ದರು. ಇದನ್ನ ಆಧರಿಸಿ‌ ಮನೆಮಂದಿ ಕಳಪೆ ಹಣೆಪಟ್ಟಿ ನೀಡಿದ್ದರು. ಈ ವಾರ ಟಾಸ್ಕ್‌ಗಳನ್ನು ಚೆನ್ನಾಗಿ ಆಡಿದ ಗುರೂಜಿ ಪರವಾಗಿ ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ, ಅಮೂಲ್ಯ ಗೌಡ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಅರುಣ್ ಸಾಗರ್ ವೋಟ್ ಮಾಡಿದರು. ಹೀಗಾಗಿ ಈ ವಾರದ ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಆರ್ಯವರ್ಧನ್ ಗುರೂಜಿ ಪಾಲಾಯಿತು.

    ಇನ್ನೂ ಈ ವಾರ ಡಬಲ್ ಎಲಿಮಿನೇಷನ್ ಆಗಲಿದೆ. ಫಿನಾಲೆಗೆ ಕೆಲವೇ ದಿನಗಳು ಬಾಕಿಯಿರುವ ಬೆನ್ನಲ್ಲೇ ಇಬ್ಬರು ಸ್ಪರ್ಧಿಗಳಿಗೆ ಈ ವಾರ ಮನೆ ಆಟ ಕೊನೆಯಾಗಲಿದೆ. ನವೀನರು ಹಾಗೂ ಪ್ರವೀಣರು ಎಂಬ ಟ್ಯಾಗ್ ಲೈನ್ ನೊಂದಿಗೆ ಶುರುವಾದ ಕನ್ನಡದ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಗೂ ಬಿಗ್ ಬಾಸ್ ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಖು ಬಿಗ್ ಬಾಸ್ ಫಿನಾಲೆ ನಡೆಯುವುದು ನಿಕ್ಕಿಯಾಗಿದೆ. ಸದ್ಯ ಮನೆಯಲ್ಲಿ ಎಂಟು ಜನರು ಇರುವುದರಿಂದ ಈ ವಾರ ಅನಿವಾರ್ಯವಾಗಿ ಡಬಲ್ ಎಲಿಮಿನೇಷನ್ ನಡೆಯಬೇಕಾಗುತ್ತದೆ.

    ಮೊದಲ ದಿನ ಬಿಗ್ ಬಾಸ್ ಮನೆಗೆ ಬಂದವರು 9 ನವೀನರು 9 ಹಳೆಯ ಸ್ಪರ್ಧಿಗಳು. ಈಗ ಮನೆಯಲ್ಲಿ ಇರುವುದು ಎಂಟು ಜನರು ಮಾತ್ರ. ಉಳಿದಿರುವುದು ಎರಡೇ ವಾರ. ಹಾಗಾಗಿ ಈ ವಾರ ಇಬ್ಬರು ಮನೆಯಿಂದ ಹೊರ ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಫಿನಾಲೆಯ ವೇದಿಕೆಯ ಮೇಲೆ ಐದು ಜನರಿಗೆ ಮಾತ್ರ ಅವಕಾಶ ಇರುವುದರಿಂದ ಈ ವಾರ ಇಬ್ಬರು ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವುದ ಕುತೂಹಲ.

    ಸದ್ಯ ಮನೆಯಲ್ಲಿ ರೂಪೇಶ್ ರಾಜಣ್ಣ, ಅಮೂಲ್ಯ ಗೌಡ. ದಿವ್ಯಾ ಉರುಡುಗ, ಅರುಣ್ ಸಾಗರ್, ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಉಳಿದುಕೊಂಡಿದ್ದಾರೆ. ಪ್ರತಿಯೊಬ್ಬರೂ ಚೆನ್ನಾಗಿ ಆಟವಾಡುತ್ತಿದ್ದಾರೆ. ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಹಾಗಾಗಿ ಇವರಲ್ಲಿ ಯಾರು ಈ ವಾರ ಆಚೆ ಬರುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]

  • ಡಿಸೆಂಬರ್ 31, ಜನವರಿ 1ಕ್ಕೆ ಕನ್ನಡ ಬಿಗ್ ಬಾಸ್ ಫಿನಾಲೆ

    ಡಿಸೆಂಬರ್ 31, ಜನವರಿ 1ಕ್ಕೆ ಕನ್ನಡ ಬಿಗ್ ಬಾಸ್ ಫಿನಾಲೆ

    ವೀನರು ಹಾಗೂ ಪ್ರವೀಣರು ಎಂಬ ಟ್ಯಾಗ್ ಲೈನ್ ನೊಂದಿಗೆ ಶುರುವಾದ ಕನ್ನಡದ ಬಿಗ್ ಬಾಸ್ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಗೂ ಬಿಗ್ ಬಾಸ್ ಫಿನಾಲೆ ದಿನಾಂಕವನ್ನು ಘೋಷಣೆ ಮಾಡಿದ್ದು ಡಿಸೆಂಬರ್ 31 ಹಾಗೂ ಜನವರಿ 1ನೇ ತಾರೀಖು ಬಿಗ್ ಬಾಸ್ ಫಿನಾಲೆ ನಡೆಯುವುದು ನಿಕ್ಕಿಯಾಗಿದೆ. ಸದ್ಯ ಮನೆಯಲ್ಲಿ ಎಂಟು ಜನರು ಇರುವುದರಿಂದ ಈ ವಾರ ಅನಿವಾರ್ಯವಾಗಿ ಡಬಲ್ ಎಲಿಮಿನೇಷನ್ ನಡೆಯಬೇಕಾಗುತ್ತದೆ.

    ಮೊದಲ ದಿನ ಬಿಗ್ ಬಾಸ್ ಮನೆಗೆ ಬಂದವರು 9 ನವೀನರು 9 ಹಳೆಯ ಸ್ಪರ್ಧಿಗಳು. ಈಗ ಮನೆಯಲ್ಲಿ ಇರುವುದು ಎಂಟು ಜನರು ಮಾತ್ರ. ಉಳಿದಿರುವುದು ಎರಡೇ ವಾರ. ಹಾಗಾಗಿ ಈ ವಾರ ಇಬ್ಬರು ಮನೆಯಿಂದ ಹೊರ ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಫಿನಾಲೆಯ ವೇದಿಕೆಯ ಮೇಲೆ ಐದು ಜನರಿಗೆ ಮಾತ್ರ ಅವಕಾಶ ಇರುವುದರಿಂದ ಈ ವಾರ ಇಬ್ಬರು ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವುದ ಕುತೂಹಲ. ಇದನ್ನೂ ಓದಿ: ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?

    ಸದ್ಯ ಮನೆಯಲ್ಲಿ ರೂಪೇಶ್ ರಾಜಣ್ಣ, ಅಮೂಲ್ಯ ಗೌಡ. ದಿವ್ಯಾ ಉರುಡುಗ, ಅರುಣ್ ಸಾಗರ್, ದೀಪಿಕಾ ದಾಸ್, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ಉಳಿದುಕೊಂಡಿದ್ದಾರೆ. ಪ್ರತಿಯೊಬ್ಬರೂ ಚೆನ್ನಾಗಿ ಆಟವಾಡುತ್ತಿದ್ದಾರೆ. ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಹಾಗಾಗಿ ಇವರಲ್ಲಿ ಯಾರು ಈ ವಾರ ಆಚೆ ಬರುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    Live Tv
    [brid partner=56869869 player=32851 video=960834 autoplay=true]

  • ಸೆ.21ಕ್ಕೆ ‘ಡಾನ್ಸ್ ಕರ್ನಾಟಕ ಡಾನ್ಸ್’ ಫಿನಾಲೆ : ಯಾರ ಪಾಲಾಗಲಿದೆ ಪವರ್ ಸ್ಟಾರ್ ಟ್ರೋಫಿ?

    ಸೆ.21ಕ್ಕೆ ‘ಡಾನ್ಸ್ ಕರ್ನಾಟಕ ಡಾನ್ಸ್’ ಫಿನಾಲೆ : ಯಾರ ಪಾಲಾಗಲಿದೆ ಪವರ್ ಸ್ಟಾರ್ ಟ್ರೋಫಿ?

    ದಾ  ವಿನೂತನ ಮನರಂಜನೆ  ನೀಡುತ್ತಿರುವ ಜೀ ಕನ್ನಡ ವಾಹಿನಿಯವರು ಕರ್ನಾಟಕದ ಪ್ರತಿಭೆಗಳಿಗೆಂದೇ  ಅನೇಕ  ಕಾರ್ಯಕ್ರಮಗಳನ್ನು ಮೀಸಲಿಡುತ್ತ ಬಂದಿದ್ದಾರೆ. ಯಶಸ್ವಿ 5 ಸೀಸನ್ ಗಳನ್ನು ಪೂರೈಸಿ ಇದೀಗ 6 ನೇ ಸೀಸನ್ ಅಂತಿಮ ಘಟ್ಟ ತಲುಪಿದೆ ದಕ್ಷಿಣ ಭಾರತದ ಅತಿ ದೊಡ್ಡ ಡಾನ್ಸ್ ರಿಯಾಲಿಟಿ ಶೋ  ಡಾನ್ಸ್ ಕರ್ನಾಟಕ ಡಾನ್ಸ್ -6. (Dance Karnataka Dance)ಇದೇ ಶನಿವಾರ ಸಂಜೆ 6.00 ಕ್ಕೆ ಇದರ ಗ್ರ್ಯಾಂಡ್ ಫಿನಾಲೆ  ಪ್ರಸಾರವಾಗಲಿದೆ.

    ವಿಭಿನ್ನ ರೀತಿಯ ನೃತ್ಯ ಪ್ರಯೋಗಗಳಿಗೆ ಸಾಕ್ಷಿಯಾಗಿರುವ ಈ ವೇದಿಕೆ ನಾಟ್ಯ ವೈಭವವನ್ನು ಇಡೀ ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ. ಅದರಲ್ಲೂ ವಿಶೇಷವಾಗಿ ಈ ಬಾರಿ ನಮ್ಮೆಲ್ಲರ ನೆಚ್ಚಿನ ಅಪ್ಪು ಪುನೀತ್ ರಾಜ್ ಕುಮಾರ್ (Puneeth Rajkumar)ಅವರ ” ಪವರ್ ಸ್ಟಾರ್ ಟ್ರೋಫಿ ” ಯನ್ನು ಭರ್ಜರಿಯಾಗಿ ಅನಾವರಣಗೊಳಿಸಿದ್ದು ಆ ವಿಶಿಷ್ಟ ಟ್ರೋಫಿ ವಿಜೇತರ ಪಾಲಾಗಲಿದೆ. ಅಷ್ಟೇ ಅಲ್ಲದೆ ಅದು ಯಾರ ಕೈಸೇರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಸತತ ಐದು ತಿಂಗಳುಗಳ ಕಾಲ ವೀಕ್ಷಕರನ್ನು ಕುಣಿಸಿ ರಂಜಿಸಿದ ಈ ಕಾರ್ಯಕ್ರಮ ಕಳೆದ ಐದು ಸೀಸನ್ ಗಳಿಗಿಂತ ವಿಶಿಷ್ಟವಾಗಿತ್ತು. ಈ ಬಾರಿ ಕರುನಾಡ ಚಕ್ರವರ್ತಿ ಡಾ . ಶಿವರಾಜ್ ಕುಮಾರ್ (Shivraj Kumar) ಅವರು ಡ್ಯಾನ್ಸಿಂಗ್ ಮಹಾಗುರುವಾಗಿ ಆಗಮಿಸಿದ್ದರಿಂದ ವೇದಿಕೆಗೆ ಮತ್ತಷ್ಟು ಕಳೆಗಟ್ಟಿತು ಹಾಗು ಘನತೆ ಹೆಚ್ಚಿತು ಎನ್ನುವುದು ನೋಡುಗರ ಅಭಿಪ್ರಾಯವಾಗಿದೆ.

    ಆರಂಭದಿಂದಲೂ ಭರ್ಜರಿ ರೇಟಿಂಗ್ ಗಳಿಸುವುದರ ಮೂಲಕ ದಾಖಲೆ ನಿರ್ಮಿಸದ ಈ ಶೋ ವಾರದಿಂದ ವಾರಕ್ಕೆ ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅಂತಿಮವಾಗಿ 7 ಜೋಡಿಗಳು ಫಿನಾಲೆ (Finale) ಹಂತಕ್ಕೆ ತಲುಪಿದ್ದು ಗೆಲುವಿನ ಕಿರೀಟ ಯಾರ ಮುಡಿಗೇರಲಿದೆ ಎನ್ನುವುದನ್ನು ವೀಕ್ಷಕರು ತುದಿಗಾಲಿನಲ್ಲಿ ನಿಂತು ಕಾಯುವಂತೆ ಮಾಡಿದೆ.

    ಇನ್ನು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗುತುಂಬಿದವರೆಂದರೆ ತೀರ್ಪುಗಾರರರಾದ ದೇಶದ ಹೆಮ್ಮೆಯ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ , ಸ್ಯಾಂಡಲ್ ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ (Rakshita) , ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಮತ್ತು ಡ್ಯಾನ್ಸಿಂಗ್ ಮಹಾಗುರುವಾಗಿದ್ದ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು. ಎಂದಿನಂತೆ ಅನುಶ್ರೀ (Anushree) ಅವರ ನಿರೂಪಣೆ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ -6 ನ ಗ್ರಾಂಡ್ ಫಿನಾಲೆ ಚಿತ್ರೀಕರಣ ಇದೇ ಸೆಪ್ಟೆಂಬರ್ 21 ಬುಧವಾರದಂದು ಸಂಜೆ 5.30 ಕ್ಕೆ ಕನಕಪುರದ ರೂರಲ್ ಡಿಗ್ರಿ ಕಾಲೇಜ್ ಮೈದಾನದಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಶೈನ್ ಜೇಬಿಗೆ 50 ಅಲ್ಲ 61 ಲಕ್ಷ ಜೊತೆಗೆ ನ್ಯೂ ಕಾರ್

    ಶೈನ್ ಜೇಬಿಗೆ 50 ಅಲ್ಲ 61 ಲಕ್ಷ ಜೊತೆಗೆ ನ್ಯೂ ಕಾರ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಗೂ ಮುಕ್ತಾಯವಾಗಿದ್ದು, ನಟ ಶೈನ್ ಶೆಟ್ಟಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ‘ಬಿಗ್‍ಬಾಸ್ ಸೀಸನ್ 7’ ರ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಖ್ಯಾತ ಹಾಸ್ಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

    ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್‍ಬಾಸ್ ವೇದಿಕೆಯಲ್ಲಿ ನಟ ಕಿಚ್ಚ ಸುದೀಪ್ ತಮ್ಮ ಎಡಗಡೆ ನಿಂತಿದ್ದ ಶೈನ್ ಶೆಟ್ಟಿ ಕೈಯನ್ನು ಎತ್ತಿ ವಿಜೇತರೆಂದರು ಘೋಷಿಸಿದ್ದಾರೆ. 113 ದಿನಗಳನ್ನು ಕಳೆದಿರುವ ವಿನ್ನರ್ ಶೈನ್ ಶೆಟ್ಟಿ ಅವರಿಗೆ ನಿಗದಿಪಡಿಸಿದ್ದ 50 ಲಕ್ಷ ರೂ. ಬಹುಮಾನ ಸಿಕ್ಕಿದೆ. ಜೊತೆಗೆ ಅಧಿಕವಾಗಿ 11 ಲಕ್ಷ ಸಿಕ್ಕಿದೆ. ಹೀಗಾಗಿ ಒಟ್ಟಾಗಿ ಶೈನ್ ಶೆಟ್ಟಿ ಜೇಬಿಗೆ 61 ಲಕ್ಷ ರೂ. ಸೇರಿದೆ.

    ಬಿಗ್‍ಬಾಸ್ ವಿನ್ನರ್‌ಗೆ ನಿಗದಿ ಪಡಿಸಿದ್ದ 51 ಲಕ್ಷ, ಇಂಡಸ್ಟ್ರಿ 555 ಡಿ. ಟಿಎಂಟಿ ಕಂಪನಿಯಿಂದ ವಿನ್ನರ್‌ಗೆ ಒಂದು ಲಕ್ಷ ರೂ. ಇನ್ನೂ 7 ಅಪ್ ಕಡೆಯಿಂದ 10 ಲಕ್ಷ ರೂ. ಬಹುಮಾನ ಸಿಕ್ಕಿದೆ. ಹೀಗಾಗಿ ಒಟ್ಟಾಗಿ 61 ಲಕ್ಷ ರೂ ಸಿಕ್ಕಿದೆ. ಅಷ್ಟೇ ಅಲ್ಲದೇ 61 ಲಕ್ಷ ಹಣದ ಜೊತೆಗೆ ‘ಬಾಸ್‍ಬಾಸ್ ಸೀಸನ್ 7’ ವಿನ್ನರ್ ಪಟ್ಟ ದೊರೆತಿದೆ. ಇದಲ್ಲದೇ ಹೊಸ ಮಾಡೆಲ್ ಟಾಟಾ ಆಲ್ಟ್ರೋಜ್ ಕಾರನ್ನು ವಿನ್ನರ್ ಆದ ಶೈನ್ ಶೆಟ್ಟಿಗೆ ದೊರೆತಿದೆ.

    ಕುರಿ ಪ್ರತಾಪ್ ಅವರು ತಮ್ಮ ಕಾಮಿಡಿ ಮೂಲಕ ಬಿಗ್ ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡಿದ್ದರು. ಈ ಮೂಲಕ ಸಾಕಷ್ಟು ಅಭಿಮಾನಿಗಳು ಗಳಿಸಿಕೊಂಡಿದ್ದಾರೆ. ಇತ್ತ ಶೈನ್ ಶೆಟ್ಟಿ ಅವರಿಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಇಬ್ಬರ ಮಧ್ಯೆ ಬಿಗ್ ಪೈಟ್ ನಡೆದಿತ್ತು. ಕೊನೆಗೆ ಆಲ್‍ರೌಂಡರ್ ಶೈನ್ ಶೆಟ್ಟಿ ‘ಬಿಗ್‍ಬಾಸ್ ಕನ್ನಡ 7’ ರ ವಿನ್ನರ್ ಆಗಿ ಶೈನ್ ಶೆಟ್ಟಿ ಹೊರಹೊಮ್ಮಿದ್ದಾರೆ.

    https://www.instagram.com/p/B8FjauYnrKl/

    ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ಅಂತಿಮ ವಾರದಲ್ಲಿ ಭೂಮಿ, ಶೈನ್, ವಾಸುಕಿ, ದೀಪಿಕಾ, ಕುರಿ ಪ್ರತಾಪ್ ಐದು ಸ್ಪರ್ಧಿಗಳು ಉಳಿದುಕೊಂಡಿದ್ದರು. ಕೊನೆಗೆ ಭೂಮಿ ಮತ್ತು ದೀಪಿಕಾ ಎಲಿಮಿನೆಟ್ ಆಗುವ ಮೂಲಕ ಫಿನಾಲೆಗೆ ಮೂವರು ಸ್ಪರ್ಧಿಗಳು ತಲುಪಿದ್ದರು. ಶೈನ್, ವಾಸುಕಿ ಮತ್ತು ಕುರಿ ಪ್ರತಾಪ್ ಮಧ್ಯೆ ಭರ್ಜರಿ ಸ್ಪರ್ಧೆ ನಡೆದಿತ್ತು. ಟಾಪ್ 2ರಲ್ಲಿ ವಾಸುಕಿ ವೈಭವ್ ಇರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅವರು ಭೂಮಿ, ದೀಪಿಕಾ ದಾಸ್ ಬಳಿಕ ಭಾನುವಾರದ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್‍ಬಾಸ್ ಮನೆಯಿಂದ ವಾಸುಕಿ ಹೊರ ಬಂದರು. ಹೀಗಾಗಿ ವಾಸುಕಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

     

  • ಸ್ಪರ್ಧಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್

    ಸ್ಪರ್ಧಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಫಿನಾಲೆ ತಲುಪಲಿದೆ. ಹೀಗಾಗಿ ಬಿಗ್‍ಬಾಸ್, ಮನೆಯ ಸದಸ್ಯರಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಡುತ್ತಿದ್ದಾರೆ.

    ಸೋಮವಾರ ಬೆಳ್ಳಂಬೆಳಗ್ಗೆ ಗಾಯಕಿ ಇಂದು ನಾಗರಾಜ್ ಅವರು ಬಿಗ್‍ಬಾಸ್ ಮನೆಗೆ ಬಂದು ಹಾಡು ಹೇಳುವ ಮೂಲಕ ಎಲ್ಲರನ್ನು ಎದ್ದೇಳಿಸಿದ್ದಾರೆ. ಇವರು ಮನೆಯಿಂದ ಹೋದ ತಕ್ಷಣ ಎಲಿಮಿನೇಟ್ ಆಗಿದ್ದ ಸುಜಾತಾ ಹಾಗೂ ದುನಿಯಾ ರಶ್ಮಿ ಆಗಮಿಸಿದ್ದಾರೆ. ಇವರು ಮನೆಯ ಸದಸ್ಯರ ಜೊತೆಗೆ ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ಜೊತೆಗೆ ಅವರೇ ಸ್ಪರ್ಧಿಗಳಿಗೆ ತಿಂಡಿ ಕೂಡ ಮಾಡಿ ಕೊಟ್ಟಿದ್ದಾರೆ.

    ಕೊನೆಗೆ ಸುಜಾತಾ ಹಾಗೂ ರಶ್ಮಿ ಹೊರಡುವಾಗ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿದ್ದಾರೆ. ನಂತರ ಗುರುಲಿಂಗ ಸ್ವಾಮಿಜಿಗಳು ಬಿಗ್‍ಬಾಸ್‍ಗೆ ಬಂದಿದ್ದು, ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಹೋಗಿದ್ದಾರೆ. ಬಳಿಕ ಚೈತ್ರಾ ವಾಸುದೇವನ್ ಆಗಮಿಸಿ, ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತಿದೆ ಎಂದು ಎಲ್ಲರಿಗೂ ದೃಷ್ಟಿ ತೆಗೆದಿದ್ದಾರೆ. ಇದೇ ಸಂದರ್ಭದಲ್ಲಿ ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಡು ಪ್ಲೇ ಆಗಿದೆ. ಆಗ ಮನೆಯವರ ಜೊತೆ ಸೇರಿಕೊಂಡು ಚೈತ್ರಾ ಕೂಡ ಡ್ಯಾನ್ಸ್ ಮಾಡಿ ಬಿಗ್ ಮನೆಯಿಂದ ಹೊರ ಹೋಗಿದ್ದಾರೆ.

    ಜೈ ಜಗದೀಶ್ ಬಿಗ್‍ಬಾಸ್ ಮನೆಗೆ ಆಗಮಿಸಿದ್ದು, ಬಿಗ್‍ಬಾಸ್ ಪಯಣದ ತಮ್ಮ ಅನುಭವವನ್ನು ಸದಸ್ಯರ ಬಳಿ ಹಂಚಿಕೊಂಡು ಮನೆಯಿಂದ ಹೋಗಿದ್ದಾರೆ. ನಂತರ ರಕ್ಷಾ ಅವರು ಮನೆಗೆ ಆಗಮಿಸಿದರು. ಇವರ ಜೊತೆಗೆ ಶೈನ್ ಶೆಟ್ಟಿ, ವಾಸುಕಿ ವೈಭವ್, ಹರೀಶ್ ರಾಜ್ ಹಾಗೂ ಕುರಿ ಪ್ರತಾಪ್ ತುಂಬಾ ಕ್ಲೋಸ್ ಆಗಿ ನಡೆದುಕೊಂಡಿದ್ದಾರೆ. ಜೊತೆಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇದರಿಂದ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಮುನಿಸಿಕೊಂಡು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವಿಶೇಷ ಎಂದರೆ ಕಿಶನ್ ಮನೆಗೆ ಬಂದು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಆದರೆ ಕಿಶನ್ ಸಿಕ್ಕಿದ್ದೇ ಚಾನ್ಸ್ ಎಂಬಂತೆ ಮತ್ತೊಮ್ಮೆ ದೀಪಿಕಾ ದಾಸ್ ಜೊತೆಗೆ ಈಜುಕೊಳಕ್ಕೆ ಜಿಗಿದು ಮನೆಯಿಂದ ಹೊರಹೋಗಿದ್ದಾರೆ.

    ಫಿನಾಲೆ ವಾರದಲ್ಲಿ ಮಿಡ್‍ವೀಕ್ ಎಲಿಮಿನೇಷನ್ ಮೂಲಕ ಮನೆಯಿಂದ ಒಬ್ಬ ಸದಸ್ಯ ಮನೆಯಿಂದ ಹೊರ ಹೋಗುತ್ತಾರೆ. ಈಗಾಗಲೇ ವಾಸುಕಿ ವೈಭವ್ ಟಿಕೆಟ್ ಟು ಫಿನಾಲೆ ಗೆದ್ದು ನೇರವಾಗಿ ಫಿನಾಲೆ ಹಂತ ತಲುಪಿದ್ದಾರೆ. ಉಳಿದ ಐದು ಮಂದಿಯಲ್ಲಿ ಅಂದರೆ ಶೈನ್ ಶೆಟ್ಟಿ, ಕುರಿ ಪ್ರತಾಪ್, ದೀಪಿಕಾ ದಾಸ್, ಹರೀಶ್ ರಾಜ್ ಹಾಗೂ ಭೂಮಿ ಶೆಟ್ಟಿ ಯಾರು ಹೊರಹೋಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

  • ಟಿಕೆಟ್ ಟು ಫಿನಾಲೆ ಗೆದ್ದ ವಾಸುಕಿ

    ಟಿಕೆಟ್ ಟು ಫಿನಾಲೆ ಗೆದ್ದ ವಾಸುಕಿ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ವಾಸುಕಿ ವೈಭವ್ ಮೊದಲ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.

    ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆದರೂ ಬಿಗ್‍ಬಾಸ್ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಒಂದು ಬಿಗ್ ಆಫರ್ ನೀಡಿದ್ದರು. ಈ ವಾರ ಅತಿ ಹೆಚ್ಚು ಪದಕ ಪಡೆಯುವ ಒಬ್ಬ ಸ್ಪರ್ಧಿ ‘ಬಿಗ್‍ಬಾಸ್ ಸೀಸನ್ 7’ ರ ಫಿನಾಲೆ ಹಂತವನ್ನು ತಲುಪುವ ಅವಕಾಶವನ್ನು ಬಿಗ್‍ಬಾಸ್ ನೀಡಿದ್ದರು. ಇದೀಗ ‘ಬಿಗ್‍ಬಾಸ್ ಸೀಸನ್ 7’ ರ ಮೊದಲ ಫೈನಲಿಸ್ಟ್ ಆಗಿ ವಾಸುಕಿ ಆಯ್ಕೆಯಾಗಿದ್ದಾರೆ.

    ಈ ವಾರ ಟಿಕೆಟ್ ಟು ಫಿನಾಲೆ ಸ್ಪರ್ಧೆ ನಡೆದಿತ್ತು. ಅಂದರೆ ಬಿಗ್‍ಬಾಸ್ ಕಾಲಕಾಲಕ್ಕೆ ಟಾಸ್ಕ್ ಕೊಡುತ್ತಿದ್ದರು. ಆ ಟಾಸ್ಕ್ ನಲ್ಲಿ ಗೆದ್ದವರಿಗೆ ಬಿಗ್‍ಬಾಸ್ ಒಂದು ಪದಕ ಕೊಡುತ್ತಿದ್ದರು. ವಾರದ ಕೊನೆಯಲ್ಲಿ ಅತಿ ಹೆಚ್ಚು ಪದಕ ಗೆದ್ದ ಒಬ್ಬ ಸದಸ್ಯ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದು ಫಿನಾಲೆ ತಲುಪುವ ಅವಕಾಶವನ್ನು ಬಿಗ್‍ಬಾಸ್ ನೀಡಿದ್ದರು. ವಾರ ಪೂರ್ತಿ ಬಿಗ್‍ಬಾಸ್ ನೀಡುತ್ತಿದ್ದ ಟಾಸ್ಕ್ ಗೆಲುತ್ತಾ ವಾಸುಕಿ ವೈಭವ್ ನಾಲ್ಕು ಪದಕಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ವಾಸುಕಿ ಮೊದಲ ಫೈನಲಿಸ್ಟ್ ಆಗಿ ಆಯ್ಕೆ ಆಗಿದ್ದಾರೆ.

    ಬಿಗ್‍ಬಾಸ್ ನೀಡಿದ್ದ ಟಾಸ್ಕ್ ಗಳಲ್ಲಿ ವಾಸುಕಿ ವೈಭವ್ ಗೆದ್ದು ನಾಲ್ಕು ಪದಕಗಳನ್ನು ಪಡೆದುಕೊಂಡಿದ್ದರು. ಶೈನ್ ಎರಡು ಪದಕ ಗೆದ್ದಿದ್ದರು. ಅದೇ ರೀತಿ ಭೂಮಿ ಶೆಟ್ಟಿ, ದೀಪಿಕಾ ದಾಸ್, ಪ್ರಿಯಾಂಕಾ ಮತ್ತು ಹರೀಶ್ ರಾಜ್ ನಾಲ್ವರು ಒಂದೊಂದು ಪದಕವನ್ನು ಗೆದ್ದಿದ್ದರು. ಆದರೆ ವಾಸುಕಿ ಉತ್ತಮವಾಗಿ ಆಟವಾಡಿ ನಾಲ್ಕು ಪದಕವನ್ನು ಗೆದ್ದುಕೊಂಡಿದ್ದಾರೆ.

    ಹೀಗಾಗಿ ‘ಬಿಗ್‍ಬಾಸ್ ಸೀಸನ್ 7’ ರ ಫಿನಾಲೆ ಟಿಕೆಟ್ ಅನ್ನು ವಾಸುಕಿ ತಮ್ಮದಾಗಿಸಿಕೊಂಡಿದ್ದಾರೆ. ಆದ್ದರಿಂದ ಈ ವಾರ ಮನೆಯಿಂದ ಹೊರ ಹೋಗಲು ಪ್ರಿಯಾಂಕಾ, ಶೈನ್ ಶೆಟ್ಟಿ, ಹರೀಶ್ ರಾಜ್, ದೀಪಿಕಾ ದಾಸ್, ಕುರಿ ಪ್ರತಾಪ್ ಮತ್ತು ಭೂಮಿ ಶೆಟ್ಟಿ ಆರು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

  • ಫಿನಾಲೆ ತಲುಪಲು ಸ್ಪರ್ಧಿಗಳಿಗೆ ಬಿಗ್ ಆಫರ್

    ಫಿನಾಲೆ ತಲುಪಲು ಸ್ಪರ್ಧಿಗಳಿಗೆ ಬಿಗ್ ಆಫರ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪುತ್ತಿದೆ. ಹೀಗಾಗಿ ಬಿಸ್‍ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಅವಕಾಶವೊಂದನ್ನು ನೀಡಿದ್ದಾರೆ.

    ಸೋಮವಾರ ಬಿಗ್‍ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಸದಸ್ಯರ ಅನುಸಾರ ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ಪ್ರಿಯಾಂಕಾ, ವಾಸುಕಿ ವೈಭವ್, ಶೈನ್ ಶೆಟ್ಟಿ, ಹರೀಶ್ ರಾಜ್, ದೀಪಿಕಾ ದಾಸ್, ಕುರಿ ಪ್ರತಾಪ್ ಮತ್ತು ಭೂಮಿ ಶೆಟ್ಟಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

    ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆದರೂ ಬಿಗ್‍ಬಾಸ್ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಒಂದು ಬಿಗ್ ಆಫರ್ ನೀಡಿದ್ದಾರೆ. ಅದೇನೆಂದರೆ ಈ ವಾರ ಅತಿ ಹೆಚ್ಚು ಪದಕ ಪಡೆಯುವ ಒಬ್ಬ ಸ್ಪರ್ಧಿ ‘ಬಿಗ್‍ಬಾಸ್ ಸೀಸನ್ 7’ ರ ಫಿನಾಲೆ ಹಂತವನ್ನು ತಲುಪಲಿದ್ದಾರೆ.

    ಬಿಗ್‍ಬಾಸ್ ಕಾಲಕಾಲಕ್ಕೆ ಸ್ಪರ್ಧಿಗಳಿಗೆ ಟಾಸ್ಕ್ ಕೊಡುತ್ತಿರುತ್ತಾರೆ. ಆ ಟಾಸ್ಕ್ ನಲ್ಲಿ ಗೆದ್ದವರಿಗೆ ಬಿಗ್‍ಬಾಸ್ ಒಂದು ಪದಕ ಕೊಡುತ್ತಾರೆ. ಹೀಗಾಗಿ ಈ ವಾರದ ಕೊನೆಯಲ್ಲಿ ಅತಿ ಹೆಚ್ಚು ಪದಕ ಗೆದ್ದ ಒಬ್ಬ ಸದಸ್ಯ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದು ಫಿನಾಲೆ ತಲುಪಲಿದ್ದಾರೆ. ಈಗಾಗಲೇ ಸೋಮವಾರ ನಡೆದ ಎರಡು ಸ್ಪರ್ಧೆಗಳಲ್ಲಿ ಒಂದು ಪದಕವನ್ನು ದೀಪಿಕಾ ದಾಸ್ ಗೆದ್ದಿದ್ದರೆ, ಇನ್ನೊಂದನ್ನು ವಾಸುಕಿ ತಮ್ಮದಾಗಿಸಿಕೊಂಡಿದ್ದಾರೆ.