Tag: Final Journey

  • ಬೆಂಗ್ಳೂರಿಗರೇ ಗಮನಿಸಿ, ಅಂಬಿ ಅಂತಿಮ ಯಾನ – ಯಾವ ಸಮಯಕ್ಕೆ ಏನು ನಿಗದಿಯಾಗಿದೆ?

    ಬೆಂಗ್ಳೂರಿಗರೇ ಗಮನಿಸಿ, ಅಂಬಿ ಅಂತಿಮ ಯಾನ – ಯಾವ ಸಮಯಕ್ಕೆ ಏನು ನಿಗದಿಯಾಗಿದೆ?

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ಯಾತ್ರೆಗೆ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಂಡ್ಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 9 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಪಾರ್ಥಿವ ಶರೀರ ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಬರಲಿದೆ. ಬಳಿಕ ಕಂಠೀರವ ಸ್ಟುಡಿಯೋದವರೆಗೆ ಮೆರವಣಿಗೆ ಮೂಲಕ ಅಂತಿಮ ಯಾತ್ರೆ ನಡೆಯಲಿದೆ.

    ಅಂಬಿ ಅಂತಿಮ ಯಾನ:
    * ಬೆಳಗ್ಗೆ 9 ಗಂಟೆ – ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯದಿಂದ ಬೆಂಗಳೂರಿಗೆ ಪಾರ್ಥಿವ ಶರೀರ ರವಾನೆ
    * ಬೆಳಗ್ಗೆ 10 ಗಂಟೆ – ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿರುವ ಅಂಬಿ ಹೊತ್ತ ಹೆಲಿಕಾಪ್ಟರ್
    * ಬೆಳಗ್ಗೆ 10.15 ಗಂಟೆ – ಹೆಚ್‍ಎಎಲ್‍ನಿಂದ ಕಂಠೀರವ ಸ್ಟೇಡಿಯಂಗೆ ಅಂಬುಲೆನ್ಸ್ ನಲ್ಲಿ ಪಾರ್ಥಿವ ಶರೀರ ಶಿಫ್ಟ್ (ಸಾರ್ವಜನಿಕ ದರ್ಶನ ಇರಲ್ಲ)
    * ಬೆಳಗ್ಗೆ 11 ಗಂಟೆ – ಕಂಠೀರವ ಸ್ಟೇಡಿಯಂನಿಂದ ತೆರೆದ ವಾಹನದಲ್ಲಿ ಅಂಬಿ ಅಂತಿಮ ಯಾನ ಆರಂಭ
    * ಮಧ್ಯಾಹ್ನ 1 ಗಂಟೆ – ಕಂಠೀರವ ಸ್ಟುಡಿಯೋಗೆ ಅಂಬರೀಶ್ ಪಾರ್ಥಿವ ಶರೀರ ರವಾನೆ
    * ಮಧ್ಯಾಹ್ನ 2 ಗಂಟೆ – ಸಕಲ ಸರ್ಕಾರಿ ಗೌರವಗಳೊಂದಿಗೆ ಅಣ್ಣಾವ್ರ ಸ್ಮಾರಕದ ಪಕ್ಕದಲ್ಲಿ ಅಂಬಿ ಅಂತ್ಯಕ್ರಿಯೆ


    ಅಂತಿಮ ಯಾನದ ಮಾರ್ಗ
    ಕಂಠೀರವ ಕ್ರೀಡಾಂಗಣದಿಂದ ಹೊರಡುವ ಮೆರವಣಿಗೆ ಕೆಜಿ ರೋಡ್ ಮೂಲಕ ಸಾಗಿ ಹಡ್ಸನ್ ಸರ್ಕಲ್, ಹಲಸೂರು ಗೇಟ್ ಪಿಎಸ್, ಪೊಲೀಸ್ ಕಾರ್ನರ್, ಮೈಸೂರ್ ಬ್ಯಾಂಕ್ ಸರ್ಕಲ್ ಮಾರ್ಗವಾಗಿ ಪ್ಯಾಲೇಸ್ ರೋಡ್ ಮೂಲಕ ಸಾಗಲಿದೆ. ಬಳಿಕ ಸಿಐಡಿ ಜಂಕ್ಷನ್, ಬಸವೇಶ್ವರ ಸರ್ಕಲ್, ಓಲ್ಡ್ ಹೈಗ್ರೌಂಡ್ಸ್ ಪಿಎಸ್, ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಬಾಷ್ಯಂ ಸರ್ಕಲ್, ಸ್ಯಾಂಕಿ ರೋಡ್, ಮಾರಮ್ಮ ಸರ್ಕಲ್, ಬಿಎಚ್‍ಇಐ ಮೂಲಕ ಯಶವಂತಪುರ ಫ್ಲೈಓವರ್ ಮೇಲೇರಿ ಮೆಟ್ರೋ ಬಳಿ ಬಲ ತಿರುವು ಪಡೆದು ಆರ್‍ಎಂಸಿ ಯಾರ್ಡ್ ಪಿಎಸ್ ಮಾರ್ಗವಾಗಿ ಗೊರುಗುಂಟೆಪಾಳ್ಯ ಸಿಗ್ನಲ್ ಬಳಿ ಎಡ ತಿರುವು ಪಡೆದು ಸಿಎಂಟಿಐ ಮಾರ್ಗ ಮೂಲಕ ಕಂಠೀರವ ಸ್ಟುಡಿಯೋ ತಲುಪಲಿದೆ.

    ಮಾರ್ಗ ಬದಲಾವಣೆ:
    ಕಂಠೀರವ ಕ್ರೀಡಾಂಗಣದಿಂದ ಆರಂಭವಾಗುವ ಅಂತಿಮ ಯಾತ್ರೆಯನ್ನು ಮೊದಲು ರಾಜಭವನ, ಕಸ್ತೂರ್ ಬಾ ರಸ್ತೆ ಮೂಲಕ ಕರೆತರಲು ಯೋಜನೆ ರೂಪಿಸಿಲಾಗಿತ್ತು. ಆದರೆ ಟ್ರಾಫಿಕ್ ಜಾಮ್ ಹಾಗೂ ಗಣ್ಯ ವ್ಯಕ್ತಿಗಳ ಸಂಚಾರ ಪ್ರಯುಕ್ತ ಈ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

    ಔಟರ್ ರಿಂಗ್ ರಸ್ತೆಯ ಸುಮನಹಳ್ಳಿ ಜಂಕ್ಷನ್ ನಿಂದ ಗೊರಗುರಂಟೆಪಾಳ್ಯ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಸುಮನಹಳ್ಳಿಯಿಂದ ಮಾಗಡಿ ರಸ್ತೆ, ಕಾಮಾಕ್ಷಿ ಪಾಳ್ಯ, ಕಾರ್ಡ್ ರಸ್ತೆ ಮೂಲಕ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಗೊರಗುಂಟೆಪಾಳ್ಯದಿಂದ ಎಂಇಎ ಜಂಕ್ಷನ್, ಆರೆಂಸಿ ಯಾರ್ಡ್ ನಿಂದ ಸೋಪ್ ಫ್ಯಾಕ್ಟರಿ ಮೂಲಕ ಸುಮನಹಳ್ಳಿಗೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಬಿಎಎಲ್ ರಸ್ತೆ, ಗಂಗಮ್ಮ ಸರ್ಕಲ್ ನಿಂದ ತುಮಕೂರು ರಸ್ತೆಗೆ ಹೋಗಲು ಅವಕಾಶ ನೀಡಲಾಗಿದೆ.

    ಇಂದು ಬೆಳಗ್ಗೆ ಸುಮಾರು 10.30ರ ವೇಳೆಗೆ ಆರಂಭವಾಗುವ ಮೆರವಣಿಗೆಯಿಂದ ಸಂಚಾರದಲ್ಲಿ ಭಾರೀ ವ್ಯತ್ಯಯ ಆಗುವ ಲಕ್ಷಣಗಳು ಇದ್ದು, ಏರ್ ಪೋರ್ಟ್ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಮಾರ್ಗದಲ್ಲಿ ಸಂಚಾರ ದಟ್ಟನೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸೋದು ಉತ್ತಮ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಂಪು ಕಾಂಚಿವರಂ ಸೀರೆ ತೊಟ್ಟು ಅಂತಿಮ ಯಾತ್ರೆಗೆ ಹೊರಟ ತ್ರಿಲೋಕ ಸುಂದರಿ

    ಕೆಂಪು ಕಾಂಚಿವರಂ ಸೀರೆ ತೊಟ್ಟು ಅಂತಿಮ ಯಾತ್ರೆಗೆ ಹೊರಟ ತ್ರಿಲೋಕ ಸುಂದರಿ

    ಮುಂಬೈ: ತ್ರಿಲೋಕ ಸುಂದರಿ ಶ್ರೀದೇವಿ ಆಸೆಯಂತೆಯೇ ಮೃತದೇಹಕ್ಕೆ ಚಿನ್ನ ಲೇಪಿತ ಕೆಂಪು ಕಾಂಚಿವರಂ ಸೀರೆ ಉಡಿಸಿ, ಮಾಂಗಲ್ಯ ಸರದ ಜೊತೆ ಚಿನ್ನಾಭರಣ ಹಾಕಿ, ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜವನ್ನು ಹೊದಿಸಿ ಮೆರವಣಿಗೆ ಮಾಡಲಾಗುತ್ತಿದೆ.

    ಶ್ರೀದೇವಿಗೆ ಬಿಳಿ ಹೂಗಳೆಂದರೆ ಬಹಳ ಪ್ರೀತಿ. ಹಾಗಾಗಿ ಅವರ ಪಾರ್ಥಿವ ಶರೀರಕ್ಕೆ ಮಲ್ಲಿಗೆ ಹೂ ಮುಡಿಸಲಾಗಿದೆ. ಜೊತೆಗೆ ಅವರ ಅಂತಿಮ ಯಾತ್ರೆಯ ವಾಹನವನ್ನೂ ಕೂಡ ಬಿಳಿ ಹೂಗಳಿಂದ ಸಿಂಗರಿಸಲಾಗಿದೆ.

    ವಿಲ್ಲೆ ಪಾರ್ಲೆ ಸೇವಾ ಸಮಾಜ ಚಿತಾಗಾರ, ಹಿಂದೂ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಸಿದ್ಧತೆ ನಡೆದಿದೆ. ಶ್ರೀದೇವಿ ಅವರ ಚಿತೆಗೆ ಪತಿ ಬೋನಿ ಕಪೂರ್ ಅಗ್ನಿ ಸ್ಪರ್ಶ ಮಾಡಲಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಕಪೂರ್ ಕುಟುಂಬದ ಜೊತೆ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದಾರೆ.

     

    ಮುಂಬೈನ ಲೋಖಂಡ್ವಾಲಾದ ಸೆಲೆಬ್ರೇಷನ್ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಟಿ ಐಶ್ವರ್ಯಾ ರೈ ಬಚ್ಚನ್, ಜಯಾ ಬಚ್ಚನ್, ಜಯಪ್ರದಾ, ತಬು, ಸುಶ್ಮಿತಾ ಸೇನ್, ಮಾಧುರಿ ದೀಕ್ಷಿತ್, ಶ್ರೀದೇವಿಯ ಸೋದರ ಸೊಸೆ ಸೋನಂ ಕಪೂರ್, ಕಾಜೋಲ್, ಅಜಯ್ ದೇವಗನ್ ಮುಂತಾದ ಬಾಲಿವುಡ್ ನಟ ನಟಿಯರು ಸೇರಿದಂತೆ ಇತರೆ ಗಣ್ಯರು ಹಾಗೂ ಅಭಿಮಾನಿಗಳು ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

    ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದ ವೇಳೆ ಕಳೆದ ಶನಿವಾರ ಶ್ರೀದೇವಿ ಮೃತಪಟ್ಟಿದ್ದರು. ವೈದ್ಯಕೀಯ ಹಾಗೂ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಮಂಗಳವಾರ ರಾತ್ರಿ ಮುಂಬೈಗೆ ತರಲಾಗಿತ್ತು.

    ಆಕಸ್ಮಿಕವಾಗಿ ಬಾತ್‍ಟಬ್‍ನಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು.