Tag: film Shooting

  • ಶೂಟಿಂಗ್ ವೇಳೆ ಯಡವಟ್ಟು: SUVಯಲ್ಲಿ ಸ್ಟಂಟ್ ವೇಳೆ ಅವಘಡ – ತಮಿಳುನಾಡಿನ ಸ್ಟಂಟ್‌ಮೆನ್ ಸಾವು

    ಶೂಟಿಂಗ್ ವೇಳೆ ಯಡವಟ್ಟು: SUVಯಲ್ಲಿ ಸ್ಟಂಟ್ ವೇಳೆ ಅವಘಡ – ತಮಿಳುನಾಡಿನ ಸ್ಟಂಟ್‌ಮೆನ್ ಸಾವು

    ಚೆನ್ನೈ: `ವೆಟ್ಟುವಮ್‌’ ತಮಿಳು ಸಿನಿಮಾ ಶೂಟಿಂಗ್ ವೇಳೆ ಕಾರಿನಲ್ಲಿ ಸ್ಟಂಟ್ ಮಾಡುವಾಗ ಸ್ಟಂಟ್‌ಮ್ಯಾನ್ ಒಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.

    ಕಾಲಿವುಡ್‌ನ ಸಾಹಸ ಕಲಾವಿದ ಮೋಹನ್ ರಾಜು ಮೃತ ಸ್ಟಂಟ್‌ಮ್ಯಾನ್.ಇದನ್ನೂ ಓದಿ: ISSನಿಂದ ಅನ್‌ಡಾಕಿಂಗ್ ಯಶಸ್ವಿ: ಭುವಿಯತ್ತ ಶುಕ್ಲಾ, ಮಂಗಳವಾರ ಮಧ್ಯಾಹ್ನ ಕ್ಯಾಲಿಫೋರ್ನಿಯಾ ತೀರಕ್ಕೆ ವಾಪಸ್

    ಪಾ ರಂಜಿತ್ ನಿರ್ದೇಶನದಲ್ಲಿ ತಮಿಳು ನಟ ಆರ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ವೆಟ್ಟುವಮ್‌ ಸಿನಿಮಾ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದೆ. ಜನಪ್ರಿಯ ಸ್ಟಂಟ್‌ಮ್ಯಾನ್ ರಾಜು ಅವರು ಜು.13ರಂದು ಶೂಟಿಂಗ್ ಸೆಟ್‌ನಲ್ಲಿ ಎಸ್‌ಯುವಿ ಕಾರು ಸ್ಟಂಟ್ ಮಾಡುತ್ತಿದ್ದರು. ಈ ವೇಳೆ ಕಾರು ಪಲ್ಟಿಯಾಗಿ ಸಾವನ್ನಪ್ಪಿದ್ದಾರೆ. ಅತೀ ವೇಗದ ಚಾಲನೆಯಿಂದ ಅಪಘಾತವಾಗಿದೆ ಎಂದು ಮೂಲಗಳು ತಿಳಿಸಿವೆ.

    ಕಾರು ಪಲ್ಟಿಯಾಗುವ ಅವಘಡದ ವಿಡಿಯೋ ಅಲ್ಲಿಯೇ ಇದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ಎಸ್‌ಯುವಿ ಕಾರನ್ನು ಓಡಿಸುತ್ತಾ, ರ‍್ಯಾಂಪ್ ಮೇಲೆ ಹೋಗುತ್ತಾರೆ. ಅಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಬಳಿಕ ಅವರು ತೀವ್ರವಾಗಿ ಗಾಯಗೊಂಡಿದ್ದು, ಅಂಬುಲೆನ್ಸ್‌ನಲ್ಲಿ  ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ.

    ಈ ಕುರಿತು ನಟ ವಿಶಾಲ್ ಮಾಹಿತಿ ಹಂಚಿಕೊಂಡಿದ್ದು, ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ. ರಾಜು ಅವರು ಕಳೆದ ಹಲವು ವರ್ಷಗಳಿಂದ ನನಗೆ ಪರಿಚಯ, ಆದರೆ ಇಂದು ಅವರು ನಮ್ಮ ಜೊತೆ ಇಲ್ಲ ಎನ್ನುವುದು ನಿಜಕ್ಕೂ ಅರಗಿಸಿಕೊಳ್ಳಲು ಕಷ್ಟ. ನನ್ನ ಹಲವು ಸಿನಿಮಾಗಳಲ್ಲಿ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿದ್ದಾರೆ ಹಾಗೂ ಅವರು ತುಂಬಾ ಧೈರ್ಯಶಾಲಿ ವ್ಯಕ್ತಿ ಎಂದು ತಿಳಿಸಿದ್ದಾರೆ.

    ಈ ಚಿತ್ರವು 2021ರ ತಮಿಳು ಸಿನಿಮಾ `ಸರ್ಪಟ್ಟ ಪರಂಬರೈ’ ಚಿತ್ರದ ಮುಂದುವರಿದ ಭಾಗ ಎನ್ನಲಾಗಿದ್ದು, 2026ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ಆಕಾಸ ಏರ್ ವಿಮಾನಕ್ಕೆ ಟ್ರಕ್‌ ಡಿಕ್ಕಿ

  • Mysuru | ಅಣ್ಣಾವ್ರ `ಕಾಮನಬಿಲ್ಲು’ ಶೂಟ್ ಆದ ಜಾಗದಲ್ಲೇ ರಜನಿ ಸಿನಿಮಾ

    Mysuru | ಅಣ್ಣಾವ್ರ `ಕಾಮನಬಿಲ್ಲು’ ಶೂಟ್ ಆದ ಜಾಗದಲ್ಲೇ ರಜನಿ ಸಿನಿಮಾ

    ರಜನಿಕಾಂತ್ (Rajinikanth), ಮೋಹನ್ ಲಾಲ್, ಶಿವರಾಜ್ ಕುಮಾರ್ ಮತ್ತು ಜಾಕಿ ಶ್ರಾಫ್ ಹೀಗೆ ಬಹುತಾರೆಯರನ್ನೊಳಗೊಂಡ ಜೈಲರ್‌ 2 ಸಿನಿಮಾದ (Jailer 2 Cinema) ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ನಟ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಒಂದು ಮಹತ್ವದ ಸ್ಥಳದಲ್ಲಿ ನಡೆಯುತ್ತಿರುವುದು ವಿಶೇಷ.

    ಹೌದು, ಜೈಲರ್ -2 ಸಿನಿಮಾದ ಶೂಟಿಂಗ್ ಮೈಸೂರಿನ (Mysuru) ಹುಲ್ಲೆನಹಳ್ಳಿ ಬಳಿ ನಡೆಯುತ್ತಿದ್ದು, ಹುಲ್ಲೆನಹಳ್ಳಿಯ ಸೇತುವೆ ಮೇಲೆ ಸಾಹಸ ದೃಶ್ಯ ಸೆರೆ ಹಿಡಿಯಲಾಗುತ್ತಿದೆ. ಇಂದಿನಿಂದ ಮೂರು ದಿನಗಳ ಕಾಲ ಹುಲ್ಲೆನಹಳ್ಳಿಯ ಸೇತುವೆ ಮೇಲೆಯೇ ಶೂಟಿಂಗ್ ನಡೆಯಲಿದೆ. ನಟ ರಜನಿಕಾಂತ್ ನೋಡಲು ಸಾವಿರಾರು ಜನರು ಆಗಮಿಸಿದ್ದಾರೆ.

    ವಿಶೇಷವೆಂದ್ರೆ 43 ವರ್ಷಗಳ ಹಿಂದೆ ವರನಟ ಡಾ. ರಾಜ್‌ಕುಮಾರ್‌ ಅವರ ʻಕಾಮನಬಿಲ್ಲುʼ ಚಿತ್ರದ ಹಾಡೊಂದಕ್ಕೆ ಇದೇ ಸ್ಥಳದಲ್ಲಿ ಚಿತ್ರೀಕರಣ ನಡೆದಿತ್ತು. ಇದೀಗ ರಜನಿ ಕಾಂತ್‌ ಅವರ ಬಹುನಿರೀಕ್ಷಿತ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಇದನ್ನೂ ಓದಿ: ಸುದೀಪ್‌ ಹೆಸರು ಹೇಳಿ ಯುವ ನಟನಿಗೆ ನಂದಕಿಶೋರ್‌ 22 ಲಕ್ಷ ವಂಚನೆ!

    ಇನ್ನೂ ಬಹು ತಾರೆಗಳ ದಂಡೇ ಇರುವ ಈ ಚಿತ್ರದಲ್ಲಿ ಬಾಲಿವುಡ್‌ ಬಾದ್‌ ಷಾ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಇದನ್ನೂ ಓದಿ: ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ – ವಿವಾಹ ವಿಚ್ಛೇದನಕ್ಕೆ ಅರ್ಜಿ

    ‘ಜೈಲರ್ 2’ 2023ರ ಸೂಪರ್‌ಹಿಟ್ ಚಿತ್ರ ‘ಜೈಲರ್’ ನ ಮುಂದುವರಿದ ಭಾಗವಾಗಿದೆ. ಈ ಚಿತ್ರದಲ್ಲಿ ತೆಲುಗು ನಟ ನಂದಮೂರಿ ಬಾಲಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗಾರ್ಜುನ ಅಕ್ಕಿನೇನಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ರಜನಿಕಾಂತ್‌ ನಟನೆಯ ‘ಜೈಲರ್ 2’ನಲ್ಲಿಯೂ ನಟಿಸಲಿದ್ದಾರೆ ಶಿವಣ್ಣ

  • ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ – ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

    ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ – ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

    – ಹಸು ಹೋದ್ರೆ ನಮ್ಮ ಮೇಲೆ  ಕೇಸ್ ಹಾಕ್ತಾರೆ, ಶೂಟಿಂಗ್‌ಗೆ ಅನುಮತಿ ನೀಡಿದ್ದು ಹೇಗೆ?
    – 9 ವರ್ಷದ ಹಿಂದೆ ಖಾಸಗಿ ವಾಹನ ಪ್ರವೇಶಕ್ಕೆ ನಿರ್ಬಂಧ

    ಚಾಮರಾಜನಗರ: ಇಲ್ಲಿನ ಬಂಡೀಪುರ ಅಭಯಾರಣ್ಯದ (Bandipur Sanctuary) ಹಿಮವದ್ ಗೋಪಾಲಸ್ವಾಮಿ ಬೆಟ್ಟ (Himavad Gopalaswamy Betta) ಪರಿಸರ ಸೂಕ್ಷ್ಮ ವಲಯದಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವ ಮೂಲಕ ರೈತರ ಹಾಗೂ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಬಂಡೀಪುರವು ರಾಜ್ಯದ ಪ್ರಸಿದ್ಧ ಹುಲಿ ಸಂರಕ್ಷಿತ ಅರಣ್ಯವಾಗಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಸಿನಿಮಾ ಶೂಟಿಂಗ್‌ಗೆ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಅನುಮತಿ ನೀಡಿದ್ದು ಮಲಯಾಳಂ ಸಿನಿಮಾದ ಚಿತ್ರೀಕರಣ ನಡೆದಿದೆ. ಇದೀಗ ಪರಿಸರ ಸೂಕ್ಷ್ಮ ವಲಯದಲ್ಲಿ ಹೇಗೆ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದಾರೆ? ರಾಜ್ಯ ಸರ್ಕಾರ, ಬಂಡೀಪುರವನ್ನು ಕೇರಳ ಸರ್ಕಾರಕ್ಕೆ ಒತ್ತೆ ಇಡ್ತಿದ್ಯಾ ಎಂದು ಪ್ರಶ್ನಿಸುವ ಮೂಲಕ ಸ್ಥಳೀಯರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: Exclusive |  ಕ್ಯಾಬಿನೆಟ್ ಕ್ಲೈಮ್ಯಾಕ್ಸ್, ಜಾತಿ ಗಣತಿ ಮಂಡನೆಗೆ ಪ್ಲ್ಯಾನ್‌ – ಮಾಸ್ಟರ್‌ಸ್ಟ್ರೋಕ್‌ ಕೊಡ್ತಾರಾ ಸಿಎಂ?

    ಇಡೀ ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಹಲಿ ಸಂರಕ್ಷಿತ ಅರಣ್ಯಗಳಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಕೂಡ ಒಂದು. ಈಗ ಕರ್ನಾಟಕ ಸರ್ಕಾರ ಹಾಗೂ ಪಿಸಿಸಿಎಫ್ ಕೇರಳದ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಬಂಡೀಪುರದ ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಅವಕಾಶ ನೀಡುವ ಮೂಲಕ ಹುಬ್ಬೇರುವಂತೆ ಮಾಡಿದೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!

    ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರುವ ಹಿನ್ನಲೆ ಕಾಡು ಪ್ರಾಣಿಗಳಿಗೆ ತೊಂದರೆಯಾಗುವ ನಿಟ್ಟಿನಲ್ಲಿ 2016ರಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಯಾವುದೇ ಶೂಟಿಂಗ್‌ಗಳು ಸಹ ಬೆಟ್ಟದಲ್ಲಿ ನಡೆದಿಲ್ಲ. ಆದರೆ ಇದೀಗ ಶೂಟಿಂಗ್‌ಗೆ ಅವಕಾಶ ಕೊಟ್ಟಿರುವುದು ಏಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಒಂದು ದಿನದ ಮಟ್ಟಿಗೆ ಸರ್ಕಾರ ಮಲಯಾಳಂ ಸಿನಿಮಾ ಶೂಟಿಂಗ್‌ಗೆ ಅವಕಾಶ ಕೊಟ್ಟಿತ್ತು. ಸ್ಥಳೀಯ ಕಾಂಗ್ರೆಸ್ ಶಾಸಕ ಗಣೇಶ್ ಪ್ರಸಾದ್ ಕೂಡ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾಗಿದ್ದಾರೆ. ಸರ್ಕಾರ, ಸಚಿವರಿಗೆ ಪರಿಸರ ಸೂಕ್ಷ್ಮ ವಲಯದ ಅರಿವಿಲ್ಲದಿದ್ದರೂ ಪರವಾಗಿಲ್ಲ, ಸ್ಥಳೀಯ ಶಾಸಕರಿಗಿಲ್ವಾ ಎನ್ನುವ ಪ್ರಶ್ನೆ ಮಾಡುತ್ತಾರೆ. ಅರಣ್ಯದಲ್ಲಿ ನಮ್ಮ ಹಸು ಮೇಯಲು ಹೋದರೆ ಅವಕಾಶ ಕೊಡುವುದಿಲ್ಲ. ನಮ್ಮ ಮೇಲೆ ಕೇಸ್ ಹಾಕಿದ ನಿದರ್ಶನ ಕೂಡ ಇದೆ. ಹೀಗಿರುವಾಗ ಶೂಟಿಂಗ್‌ಗೆ ಸರ್ಕಾರ ಪರ್ಮಿಷನ್ ಕೊಟ್ಟು ಅದರಿಂದ ಬಂಡೀಪುರದ ಆದಾಯ ಹೆಚ್ಚಿಸುವ ಅಗತ್ಯವಿಲ್ಲ ಸ್ಥಳೀಯರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಭಾರತದ ಉದ್ಯಮಿಗೆ ಅಮೆರಿಕದಲ್ಲಿ ಕಹಿ ಅನುಭವ – ಏರ್‌ಪೋರ್ಟ್‌ನಲ್ಲಿ 8 ಗಂಟೆ ಕೂರಿಸಿದ ಆರೋಪ

    ಈ ಬಗ್ಗೆ ಆರಣ್ಯ ಇಲಾಖೆ ಡಿಸಿಎಫ್ ಪ್ರಭಾಕರನ್ ಮಾತ್ರ ರಾಜ್ಯ ಸರ್ಕಾರದಿಂದಲೇ ಮಲಯಾಳಂ ಸಿನಿಮಾ ಚಿತ್ರಿಕರಣಕ್ಕೆ ಅನುಮತಿ ನೀಡಲಾಗಿದೆ. ಅನುಮತಿಯ ಅದೇಶ ಪ್ರತಿ ನಮಗೂ ಬಂದಿದೆ. ಅಗ್ರಿಮೆಂಟ್ ಮಾಡ್ಕೊಂಡಿದ್ದೇವೆಂದು ಪಬ್ಲಿಕ್ ಟಿವಿಗೆ ಡಿಸಿಎಫ್ ಪ್ರಭಾಕರ್ ದೂರವಾಣಿಯಲ್ಲಿ ಮೂಲಕ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್‌ ಅನ್ನು 104% ಹೆಚ್ಚಿಸಿದ ಅಮೆರಿಕ

    ಈಗಾಗ್ಲೇ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ಬೇಡ ಎಂಬ ಕಾವು ಹೊತ್ತಿದೆ. ಈ ಸಮಯದಲ್ಲಿ ಮಲಯಾಳಂ ಸಿನಿಮಾಗೆ ಸರ್ಕಾರ ಅವಕಾಶ ಕಲ್ಪಿಸಿದ್ದು, ರೈತರು ಹಾಗೂ ಪರಿಸರವಾದಿಗಳ ಕಣ್ಣು ಕೆಂಪಾಗಿಸಿದೆ.

  • ಸಿನಿಮಾ ಚಿತ್ರೀಕರಣದ ವೇಳೆ ಹೆಜ್ಜೇನು ದಾಳಿ – ಇಬ್ಬರು ಗಂಭೀರ

    ಸಿನಿಮಾ ಚಿತ್ರೀಕರಣದ ವೇಳೆ ಹೆಜ್ಜೇನು ದಾಳಿ – ಇಬ್ಬರು ಗಂಭೀರ

    ಕಾರವಾರ: ಕನ್ನಡ ಸಿನಿಮಾ ‘ಭಾವಪೂರ್ಣ’ಚಿತ್ರೀಕರಣದ ಸಂದರ್ಭದಲ್ಲಿ ಹೆಜ್ಜೇನು ದಾಳಿಯಾಗಿ (Honey Bee Attack) ಇಬ್ಬರು ಲೈಟಿಂಗ್ ಸಹಾಯಕರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದ ಘಟನೆ ಉತ್ತರ ಕನ್ನಡ (ಜಿಲ್ಲೆಯ ಅಂಕೋಲ ತಾಲೂಕಿನ ಜಮಗೋಡಿನ ರೈಲ್ವೆ ನಿಲ್ದಾಣ ರಸ್ತೆಯ ಕ್ರಾಸ್ ಬಳಿ ಸೋಮವಾರ ನಡೆದಿದೆ.

    ಮಂಡ್ಯ ಮೂಲದ ರಮೇಶ್ ಮತ್ತು ರಾಮು ಹೆಜ್ಜೇನು ಕಡಿತಕ್ಕೊಳಗಾದ ಲೈಟಿಂಗ್ ಸಹಾಯಕರು. ಹೆಜ್ಜೇನು ದಾಳಿ ಮಾಡುತ್ತಲೇ ಸ್ಥಳದಲ್ಲಿದ್ದ ಚಿತ್ರತಂಡದ ಕೆಲಸಗಾರರು, ತಂತ್ರಜ್ಞರು, ನಟರು ಕಾಲ್ಕಿತ್ತಿದ್ದಾರೆ. ಈ ವೇಳೆ ಇಬ್ಬರ ಮೇಲೆ ನೂರಾರು ಜೇನು ನೊಣಗಳು ದಾಳಿ ನಡೆಸಿವೆ. ಇದರಿಂದ ಇಬ್ಬರೂ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಅವರಿಗೆ ಇತರರು ಸಹಾಯ ಮಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನೂ ಓದಿ: ಕೆಜಿಎಫ್‌ ಮ್ಯೂಸಿಕ್‌ ಬಳಕೆ – ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆ ಬ್ಲಾಕ್‌ ಮಾಡುವಂತೆ ಕೋರ್ಟ್‌ ಆದೇಶ

    ಘಟನೆಯ ಬಳಿಕ ಸ್ಥಳೀಯ ಆಟೋ ಚಾಲಕನ ಸಹಾಯದಿಂದ 108ಕ್ಕೆ ಕರೆ ಮಾಡಿದ್ದು, ಗಾಯಾಳುಗಳನ್ನು ರಕ್ಷಿಸಿ ಅಂಕೋಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜ್ಯದಲ್ಲಿ ಆಡಳಿತ ಪಕ್ಷವೂ ಇಲ್ಲ, ವಿರೋಧ ಪಕ್ಷವೂ ಇಲ್ಲ: ಸಿಎಂ ಇಬ್ರಾಹಿಂ

    Live Tv
    [brid partner=56869869 player=32851 video=960834 autoplay=true]

  • ಬಹು ನಿರೀಕ್ಷಿತ ಕೆಜಿಎಫ್ 2 ಸಿನಿಮಾ ಚಿತ್ರೀಕರಣಕ್ಕೆ ಕೋರ್ಟ್ ತಡೆಯಾಜ್ಞೆ

    ಬಹು ನಿರೀಕ್ಷಿತ ಕೆಜಿಎಫ್ 2 ಸಿನಿಮಾ ಚಿತ್ರೀಕರಣಕ್ಕೆ ಕೋರ್ಟ್ ತಡೆಯಾಜ್ಞೆ

    ಕೋಲಾರ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ 2 ಸಿನಿಮಾ ಚಿತ್ರೀಕರಣಕ್ಕೆ ಕೋರ್ಟ್ ತಡೆಯಾಜ್ಞೆ ಹೇರಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್‍ನ ಕೆನಡೀಸ್ ಸೈನೈಡ್ ಗುಡ್ಡದ ಮೇಲೆ ಚಿತ್ರೀಕರಣ ನಡೆಯುತ್ತಿದ್ದು, ದುಬಾರಿಯ ಸೆಟ್ ಹಾಕಲಾಗಿದೆ. ಆದರೆ ಶ್ರೀನಿವಾಸ್ ಎಂಬವರು ಪರಿಸರ ಹಾನಿ ಹಾಗೂ ಚಿತ್ರೀಕರಣದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಕೆಜಿಎಫ್ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆ ಕೋರ್ಟ್ ತಡೆಯಾಜ್ಞೆ ನೀಡಿದೆ.

    ಕೆಜಿಎಫ್ ಸಿನಿಮಾ ಭರ್ಜರಿ ಗೆಲುವು ಸಾಧಿಸಿ, ಪ್ರೇಕ್ಷಕರ ಮನ ಗೆದ್ದಿತ್ತು. ಸದ್ಯ ಕೆಜಿಎಫ್- 2 ಸಿನಿಮಾ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಚಿತ್ರತಂಡವು ಏಪ್ರಿಲ್‍ನಲ್ಲಿ ಆಡಿಷನ್ ನಡೆಸಿ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದೆ. ಮೇ ತಿಂಗಳು ಚಿತ್ರೀಕರಣ ಆರಂಭವಾಗಿದ್ದು, ಶೇ.60 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.

    ಈ ಮಧ್ಯೆ ಶ್ರೀನಿವಾಸ್ ಅವರು ಚಿತ್ರೀಕರಣದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಮನವಿಯನ್ನ ಆಲಿಸಿದ ಕೋರ್ಟ್, ಚಿತ್ರೀಕರಣಕ್ಕೆ ತಡೆಯಾಜ್ಞೆ ಹೊರಡಿಸಿದೆ.

    ಕೆಜಿಎಫ್ 2 ಸಿನಿಮಾದಲ್ಲಿ ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಅವರು ಅಧೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಫಸ್ಟ್ ಲುಕ್ ಫೋಟೋವನ್ನು ಚಿತ್ರತಂಡವು ಜುಲೈ 29ರಂದು ರಿವೀಲ್ ಮಾಡಿತ್ತು.

  • ಚಿತ್ರೀಕರಣದ ವೇಳೆ 10 ಅಡಿ ಎತ್ತರದ ಮರದಿಂದ ಬಿದ್ದ ನಟ – ಇದು ಹಾರರ್ ಎಫೆಕ್ಟ್ ಅಂತಿದೆ ಚಿತ್ರತಂಡ

    ಚಿತ್ರೀಕರಣದ ವೇಳೆ 10 ಅಡಿ ಎತ್ತರದ ಮರದಿಂದ ಬಿದ್ದ ನಟ – ಇದು ಹಾರರ್ ಎಫೆಕ್ಟ್ ಅಂತಿದೆ ಚಿತ್ರತಂಡ

    ಉಡುಪಿ: ನೈಜ ಕಥೆಯನ್ನು ಆಧರಿಸಿ ಶೂಟಿಂಗ್ ನಡೆಸುತ್ತಿರುವ ‘ಕತ್ತಲೆ ಕೋಣೆ’ ಸಿನಿಮಾ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ.

    `ಕತ್ತಲೆ ಕೋಣೆ’ ಚಿತ್ರ ಕುಂದಾಪುರದ ಸಂದೇಶ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ಕೇರಳ ಮತ್ತು ಮುಂಬೈ ಮೂಲದ ಕಲಾವಿದರು ಮತ್ತು ಟೆಕ್ನಿಷಿಯನ್ ಗಳು ಕೆಲಸ ಮಾಡುತ್ತಿದ್ದಾರೆ.

    ಜಿಲ್ಲೆಯ ಕುಂದಾಪುರದ ಕಾಡು, ಪಶ್ಚಿಮಘಟ್ಟದ ತಪ್ಪಲಿನ ಕಾಡುಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹಲವು ಭಯಾನಕ ಅನುಭವಗಳು ಆಗಿವೆ ಎಂದು ಚಿತ್ರತಂಡ ಹೇಳುತ್ತಿದೆ. ದಟ್ಟ ಕಾಡಿನ ನಡುವೆ ಒಂದು ಶಾಲೆ, ಶಾಲೆಯ ಮಕ್ಕಳು ಮರ ಹತ್ತಿ ಮಾವಿನ ಕಾಯಿಯನ್ನು ಕೀಳುವ ಸೀನ್ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನಟ ಮರದ ಮೇಲೆ ಕುಳಿತು ಮಾವಿನ ಕಾಯಿ ಕಿತ್ತು ಕೆಳಗೆ ನಿಂತಿದ್ದ ತನ್ನ ಸಹಪಾಠಿಗಳಿಗೆ ಕೊಡುತ್ತಿದ್ದ ವೇಳೆ ಕೊಂಬೆ ಮುರಿದು ಅವಘಡ ಸಂಭವಿಸಿದೆ.

    ಸುಮಾರು 10 ಅಡಿ ಎತ್ತರದಿಂದ ವಿದ್ಯಾರ್ಥಿಯ ಪಾತ್ರಧಾರಿ ಮಂಗಳೂರು ಮೂಲದ ರವಿ ಹಠಾತ್ತನೆ ಕೆಳಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತರಚಿದ ಗಾಯಗಳಾಗಿದ್ದು, ಪ್ರಾಣಾಯದಿಂದ ಪಾರಾಗಿದ್ದಾನೆ. ಆದರೆ ಈ ಘಟನೆಯಿಂದ ಕಲಾವಿದ ವಾರಗಳ ಕಾಲ ಜ್ವರಕ್ಕೆ ತುತ್ತಾಗಿದ್ದಾನೆ. ಕತ್ತಲೆಕೋಣೆ ಹಾರರ್ ಚಿತ್ರವಾಗಿದ್ದು, ಬೆಚ್ಚಿಬೀಳುವ ಹಲವು ಘಟನೆಗಳು ನಡೆದಿದೆ ಎಂದು ಚಿತ್ರತಂಡ ತಿಳಿಸಿದೆ.

    ಈ ಹಿಂದೆ ಚಿತ್ರೀಕರಣ ಮಾಡುವಾಗ ಲೈಟ್ ಇಂಜಿನಿಯರ್ ಕಟ್ಟಿದ್ದ ಲೈಟ್ ಅವರ ತಲೆಗೆ ಬಿದ್ದು ಗಾಯವಾದ ಘಟನೆಯೂ ನಡೆದಿದೆ. ಮಧ್ಯರಾತ್ರಿಯ ಶೂಟಿಂಗ್ ನಡೆಯುತ್ತಿದ್ದಾಗ, ಜನರೇಟರ್‍ನಲ್ಲಿ ಒಮ್ಮೆಲೇ ಬೆಂಕಿ ಕಾಣಿಸಿಕೊಂಡಿದ್ದು, ಆಶ್ಚರ್ಯದ ಜೊತೆ ಭಯವಾಗುತ್ತಿದೆ. ಮುಂದೆ ಏನೆಲ್ಲ ಕಾದಿದಿಯೋ ಎಂದು ಆತಂಕ ಶುರುವಾಗಿದೆ ಎಂದು ಚಿತ್ರ ತಂಡ ಭಯದಿಂದ ಹೇಳುತ್ತಿದೆ.