Tag: film producer

  • ನಿರ್ಮಾಪಕನ ಪತ್ನಿ, ಮಗಳು ಬೆಂಕಿಗಾಹುತಿ

    ನಿರ್ಮಾಪಕನ ಪತ್ನಿ, ಮಗಳು ಬೆಂಕಿಗಾಹುತಿ

    ಮುಂಬೈ: ನಿರ್ಮಾಪಕ ಸಂತೋಷ್ ಗುಪ್ತಾ ಅವರ ಪತ್ನಿ ಮತ್ತು ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇದೀಗ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಸಂತೋಷ್ ಗುಪ್ತಾ ಮುಂಬೈನ ಅಂಧೇರಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಸೋಮವಾರ ತಾಯಿ-ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಸಂತೋಷ್ ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

    ತಾಯಿ ಅಸ್ಮಿತಾ ಗುಪ್ತಾರನ್ನ ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗಳು ಸೃಷ್ಠಿ ದೇಹದ ಶೇ.70ರಷ್ಟು ಭಾಗ ಬೆಂಕಿಗಾಹುತಿ ಆಗಿದ್ದರಿಂದ ಮಂಗಳವಾರ ಐರೋಲಿ ನ್ಯಾಷನಲ್ ಬರ್ನ್ಸ್ ಸೆಂಟರ್ ಗೆ ರವಾನಿಸಲಾಗಿತ್ತು. ಆದ್ರೆ ತಾಯಿ ಸಾವನ್ನಪ್ಪಿದ ಮರುವದಿನವೇ ಮಗಳು ಸಹ ಸಾವನ್ನಪ್ಪಿದ್ದಾರೆ.

    ಆತ್ಮಹತ್ಯೆಗೆ ಕಾರಣವೇನು?: ಅಸ್ಮಿತಾ ಕಳೆದ ಹಲವು ದಿನಗಳಿಂದ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅನಾರೋಗ್ಯ ಹಿನ್ನೆಲೆ ಆತ್ಮಹತ್ಯೆಗೆ ಅಸ್ಮಿತಾ ನಿರ್ಧರಿಸಿದ್ದರು. ಇನ್ನು ತಾಯಿ ಕಷ್ಟ ನೋಡಲಾರದೇ ಮಗಳು ಸಹ ಸೂಸೈಡ್ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

  • ಕೆಲಸಕ್ಕೆ ಬರಲಿಲ್ಲ ಅಂತಾ ಡ್ರೈವರ್ ಮೇಲೆ ಹಲ್ಲೆ- ಸಾರಾ ಗೋವಿಂದು ಪುತ್ರನಿಂದ ಗೂಂಡಾಗಿರಿ

    ಕೆಲಸಕ್ಕೆ ಬರಲಿಲ್ಲ ಅಂತಾ ಡ್ರೈವರ್ ಮೇಲೆ ಹಲ್ಲೆ- ಸಾರಾ ಗೋವಿಂದು ಪುತ್ರನಿಂದ ಗೂಂಡಾಗಿರಿ

    ಬೆಂಗಳೂರು: ಚಲನಚಿತ್ರ ನಿರ್ಮಾಪಕ ಸಾರಾ ಗೋವಿಂದು ಪುತ್ರನಿಂದ ಗೂಂಡಾಗಿರಿ ನಡೆದಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಹೌದು. ಸಾರಾ ಗೋವಿಂದು ಅವರ ಪುತ್ರ ಅನೂಪ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಅನೂಪ್ ಸಾರಾ ಗೋವಿಂದು ಮನೆಯ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಸಂಬಳ ನೀಡದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದ್ದಕ್ಕೆ ಈ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಹರೀಶ್‍ರನ್ನು ಬಸವೇಶ್ವರನಗರಕ್ಕೆ ಕರೆಸಿಕೊಂಡು ಫರಿಸ್ತಾ ಕೆಫೆ ಮುಂಭಾಗದಲ್ಲಿ ಅನೂಪ್ ಸೇರಿ ಜೊತೆಯಿದ್ದ ಫ್ರಭಾಕರ್ ಮತ್ತು ಸತ್ಯ ಎಂಬವರು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಹೊರಗಡೆ ಈ ವಿಚಾರ ಗೊತ್ತಾದ್ರೆ ಕೊಲೆ ಮಾಡೋದಾಗಿ ಕೂಡ ಗ್ಯಾಂಗ್ ಬೆದರಿಕೆ ಹಾಕಿದೆ ಅಂತ ಹಲ್ಲೆಗೊಳಗಾದ ಹರೀಶ್ ಹೇಳಿದ್ದಾರೆ.

    ಘಟನೆಯಿಂದ ಕಿವಿ ಕೇಳದ ಸ್ಥಿತಿಯಲ್ಲಿದ್ದ ಹರೀಶ್ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೂಪ್ ಡವ್, ಮಿಸ್ಟರ್ ಫರ್ಫೆಕ್ಟ್, ಸಾಗುವ ದಾರಿಯಲ್ಲಿ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

    ಘಟನೆ ಸಂಬಂಧ ಅನೂಪ್ ಅಂಡ್ ಗ್ಯಾಂಗ್ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews