Tag: film news

  • ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?

    ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?

    ಯೋಗರಾಜ್ ಭಟ್ಟ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಅನೇಕ ನಾಯಕಿಯರು ಈ ಹೊತ್ತಿಗೂ ಕಾಯುತ್ತಿದ್ದಾರೆ. ಭಟ್ಟರ ಸಿನಿಮಾದಲ್ಲಿ ನಟಿಸಿದ ಬಹುತೇಕ ಕಲಾವಿದರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ಇವರ ಸಿನಿಮಾದಲ್ಲಿ ಅವಕಾಶ ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಇಂತಹ ಹೊತ್ತಿನಲ್ಲಿ ಸಿಕ್ಕಿರುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್. ಇದನ್ನೂ ಓದಿ :ಗೆಳೆಯನ ಸಿನಿಮಾದಲ್ಲಿ ಕೊತ್ವಾಲ್ ಆದ ವಸಿಷ್ಠ ಸಿಂಹ

    ಅಂದುಕೊಂಡಂತೆ ಆಗಿದ್ದರೆ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು ರಚಿತಾ ರಾಮ್. ಈ ಚಿತ್ರವನ್ನು ನಟ, ಸಚಿವ ಬಿ.ಸಿ.ಪಾಟೀಲ್ ನಿರ್ಮಾಣ ಮಾಡುತ್ತಿರುವುದರಿಂದ, ಅವರ ಮನೆಗೂ ರಚಿತಾ ಹೋಗಿ ಬಂದಿದ್ದರು. ಸಿನಿಮಾದ ಪೂಜೆ, ಮುಹೂರ್ತ ಇತ್ಯಾದಿ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗಿದ್ದರು. ಇನ್ನೇನು ಭಟ್ಟರು ಶೂಟಿಂಗ್ ಗೆ ಹೊರಡಬೇಕು ಎನ್ನುವಾಗ ರಚಿತಾ ರಾಮ್ ಸಿನಿಮಾದಿಂದ ಹೊರ ನಡೆದಿದ್ದಾರೆ. ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ

    ರಚಿತಾ ರಾಮ್ ಸಿನಿಮಾದಲ್ಲಿ ಇಲ್ಲ ಎನ್ನುತ್ತಿದ್ದಂತೆಯೇ ಗಾಂಧಿನಗರದಲ್ಲಿ ಸಾಕಷ್ಟು ಗಾಸಿಪ್ ಗಳು ಹರಿದಾಡಿದವು. ಈ ಸಿನಿಮಾದಲ್ಲಿ ಯಶಸ್ ಸೂರ್ಯ ನಾಯಕನಾಗಿ ನಟಿಸುತ್ತಿರುವುದೇ ರಚಿತಾ ಹೊರ ಹೋಗಲು ಕಾರಣ ಎನ್ನಲಾಗಿತು. ಸಂಭಾವನೆಯ ವಿಚಾರವೂ ಕೇಳಿ ಬಂತು. ಅಸಲಿ ವಿಚಾರವೆಂದರೆ, ಸದ್ಯ ರಚಿತಾ ರಾಮ್ ಅವರು ‘ಕ್ರಾಂತಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಜತೆಗೆ ರಿಯಾಲಿಟಿ ಶೋ ಜಡ್ಜ್ ಆಗಿ ಒಪ್ಪಿಕೊಂಡಿದ್ದಾರಂತೆ. ಹಾಗಾಗಿ ಗರಡಿ ಸಿನಿಮಾಗೆ ಡೇಟ್ ಹೊಂದಿಸಲು ಸಾಧ್ಯವಾಗದೇ ಸಿನಿಮಾ ಬಿಡಬೇಕಾಗಿ ಬಂತಂತೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ರಚಿತಾ ರಾಮ್ ಜಾಗಕ್ಕೆ ಬೇರೆ ನಟಿಯು ಬಂದಾಗಿದೆ. ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದೆ. ಅಂದಹಾಗೆ ರಚಿತಾ ರಾಮ್ ಮಾಡಬೇಕಿದ್ದ ಪಾತ್ರವನ್ನು ಈಗ ಮಾಡುತ್ತಿರುವುದು ಸೋನಲ್ ಮೆಂಥೆರೋ.

  • ಗೆಳೆಯನ ಸಿನಿಮಾದಲ್ಲಿ ಕೊತ್ವಾಲ್ ಆದ ವಸಿಷ್ಠ ಸಿಂಹ

    ಗೆಳೆಯನ ಸಿನಿಮಾದಲ್ಲಿ ಕೊತ್ವಾಲ್ ಆದ ವಸಿಷ್ಠ ಸಿಂಹ

    ನ್ನಡ ಸಿನಿ ರಂಗದ ಕುಚಿಕು ಗೆಳೆಯರೆಂದೇ ಖ್ಯಾತರಾಗಿರುವ ಡಾಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಇದೀಗ ಮತ್ತೊಂದು ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆಯೇ ಮುಹೂರ್ತವಾಗಿರುವ ‘ಹೆಡ್ ಬುಷ್’ ಸಿನಿಮಾದಲ್ಲಿ ಇಬ್ಬರೂ ಜತೆಯಾಗಿ ತೆರೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ

    ಹೆಡ್ ಬುಷ್ ಭೂಗತ ಜಗತ್ತಿನ ಕುರಿತಾದ ಸಿನಿಮಾ. ಅಂಡರ್ ವರ್ಲ್ಡ್ ಡಾನ್ ಆಗಿದ್ದ ಜಯರಾಜ್ ಅವರ ಜೀವನ ಕುರಿತಾದ ಚಿತ್ರ ಎನ್ನಲಾಗುತ್ತಿದೆ. ಡಾಲಿ ಧನಂಜಯ್ ಜಯರಾಜ್ ಪಾತ್ರ ಮಾಡುತ್ತಿದ್ದು, ಗೆಳೆಯ ವಸಿಷ್ಠ ಸಿಂಹ ಅವರಿಗೆ ಕೊತ್ವಾಲ್ ಪಾತ್ರ ನೀಡಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಕೂಡ ಮುಗಿದಿದ್ದು, ಅಚ್ಚರಿ ಮೂಡಿಸುವಂತಹ ತಾರಾಗಣವನ್ನು ಈ ಸಿನಿಮಾ ಹೊಂದಿದೆ. ಇದನ್ನೂ ಓದಿ : ನನ್ನ ಕಣ್ಣಿಗೆ ಸೇಬು ಹಣ್ಣಿನಂತೆ ಕಾಣುವಿರಿ, ಚಿಯರ್ಸ್ ಪಪ್ಪಾ: ರವೀನಾ ಟಂಡನ್

    ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಈ ಚಿತ್ರದಲ್ಲಿದ್ದಾರೆ. ಅವರು ಕಾಲೇಜು ಉಪನ್ಯಾಸಕರಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಅದೊಂದು ಗಂಭೀರವಾಗಿರುವ ಪಾತ್ರ ಎಂದೂ ಅವರು ಈ ಹಿಂದೆ ಹೇಳಿಕೊಂಡಿದ್ದರು. ಅಲ್ಲದೇ, ಲೂಸ್ ಮಾದ ಯೋಗಿ, ಶ್ರುತಿ ಹರಿಹರನ್ ಸೇರಿದಂತೆ ಅನೇಕ ಅನುಭವಿ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ಈ ಸಿನಿಮಾಗೆ ಕಥೆ ಬರೆದದ್ದು ಅಗ್ನಿ ಶ್ರೀಧರ್, ಶೂನ್ಯ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ಚೊಚ್ಚಲು ಸಿನಿಮಾ ಕೂಡ ಇದಾಗಿದೆ.

  • ರಮ್ಯಾಗಾಗಿ ಕಾದ ದಿಲ್ ಕಾ ರಾಜಾ

    ರಮ್ಯಾಗಾಗಿ ಕಾದ ದಿಲ್ ಕಾ ರಾಜಾ

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಸುದ್ದಿ ಮುನ್ನೆಲೆಗೆ ಬಂದಿದೆ. ಅವರು ಕೂಡ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ. ಒಂದೊಳ್ಳೆ ಕಥೆ ಸಿಕ್ಕ ತಕ್ಷಣವೇ ಸಿನಿಮಾ ರಂಗಕ್ಕೆ ಮರುಪ್ರವೇಶ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅವರ ಈ ಸಂದೇಶ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದೆ. ಪದ್ಮಾವತಿ ಮತ್ತೆ ವಾಪಸ್ಸಾದರೆ ಯಾವೆಲ್ಲ ಸಿನಿಮಾಗಳಲ್ಲಿ ನಟಿಸಬಹುದು, ಯಾರ ಜತೆ ತೆರೆ ಹಂಚಿಕೊಳ್ಳಬಹುದು ಹೀಗೆ ಲೆಕ್ಕಾಚಾರಗಳು ಶುರುವಾಗಿವೆ. ಇದನ್ನೂ ಓದಿ : ಎಲ್ಲ ಓಕೆಯಾದ್ರೆ ಗುಡ್‍ನ್ಯೂಸ್ ಕೊಡ್ತೀನಿ ಎಂದ ರಮ್ಯಾ

    ಕೆಲ ತಿಂಗಳುಗಳಿಂದ ಅವರು ಅತ್ತ ಸ್ಕ್ರಿಪ್ಟ್ ಗಳನ್ನು ಕೇಳುತ್ತಿರುವ ಅವರು, ಇತ್ತ ರಮ್ಯಾ ನಟನೆಯ ‘ದಿಲ್ ಕಾ ರಾಜಾ’ ತೆರೆಗೆ ಬರಲು ಕಾಯುತ್ತಿದೆ. ‘ದಿಲ್ ಕಾ ರಾಜಾ’ ರಮ್ಯಾ ಮತ್ತು ಪ್ರಜ್ವಲ್ ದೇವರಾಜ್ ಕಾಂಬಿನೇಷನ್ ನ ಚಿತ್ರ. 2014ರಲ್ಲಿ ಸೆಟ್ಟೇರಿದ ಈ ಸಿನಿಮಾ ಆ ನಂತರ ಚಿತ್ರೀಕರಣ ನಿಲ್ಲಿಸಿತ್ತು. ಚಿತ್ರದ ನಿರ್ದೇಶಕ ಸೋಮನಾಥ್ ಪಾಟೀಲ್ ನಂತರ ಸದ್ದಿಲ್ಲದೇ ಶೂಟಿಂಗ್ ಶುರು ಮಾಡಿದೆ. ಆಮೇಲೆ ಚಿತ್ರದ ಬಗ್ಗೆ ಯಾವ ಮಾಹಿತಿಯೂ ಸಿಗಲಿಲ್ಲ. 2019 ಜುಲೈನಲ್ಲಿ ಮತ್ತೇ ಈ ಚಿತ್ರಕ್ಕೆ ಮರುಜೀವ ಬಂತು. ಆಗ ಚಿತ್ರತಂಡವು ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿತು. ಟ್ರೇಲರ್ ಬಿಡುಗಡೆಯಾಗಿ ಮತ್ತೆ ಎರಡು ವರ್ಷಗಳು ಗತಿಸಿವೆ. ದಿಲ್ ಕಾ ರಾಜಾನ ಸದ್ದೇ ಇಲ್ಲ. ಇದನ್ನೂ ಓದಿ: ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯಾ ಕಮ್ ಬ್ಯಾಕ್ ಪಕ್ಕಾ

    ರಮ್ಯಾ ಇದೀಗ ಸಿನಿಮಾ ರಂಗಕ್ಕೆ ರೀ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಸಿಗುತ್ತಿದ್ದಂತೆಯೇ ‘ದಿಲ್ ಕಾ ರಾಜಾ’ ಸಿನಿಮಾ ಸುದ್ದಿಯೂ ಮುನ್ನೆಲೆಗೆ ಬಂದಿದೆ. ಬರೋಬ್ಬರಿ ಎಂಟು ವರ್ಷಗಳಿಂದ ಈ ಸಿನಿಮಾಗಾಗಿ ಕಾಯುತ್ತಿದ್ದ ರಮ್ಯಾ ಅಭಿಮಾನಿಗಳು ಈಗಲಾದರೂ ಆ ಚಿತ್ರ ಬಿಡುಗಡೆ ಆಗಬಹುದೆ ಎಂದು ಸೋಷಿಯಲ್ ಮೀಡಿಯಾದ ಮೂಲಕ ಚಿತ್ರತಂಡಕ್ಕೆ ಕೇಳುತ್ತಿದ್ದಾರೆ. ಇದನ್ನೂ ಓದಿ: ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು

    ಈ ಸಿನಿಮಾ ಇಷ್ಟೊಂದು ತಡವಾಗಲು ಕಾರಣ ರಮ್ಯಾ ಎನ್ನುವ ಮಾತಿತ್ತು. ರಾಜಕೀಯ ಪ್ರವೇಶ ಮತ್ತು ಬೇರೆ ಚಿತ್ರಗಳ ಡೇಟ್ ಹೊಂದಾಣಿಕೆ ಕಾರಣದಿಂದಾಗಿ ದಿಲ್ ಕಾ ರಾಜಾ ಸಿನಿಮಾ ತಂಡಕ್ಕೆ ಅವರು ಸರಿಯಾಗಿ ಸ್ಪಂದಿಸಲಿಲ್ಲ ಎನ್ನಲಾಗಿತ್ತು. ಆದರೆ, ಸಿನಿಮಾ ತಡವಾಗಲು ರಮ್ಯಾ ಕಾರಣವಲ್ಲ ಎಂದು ನಿರ್ದೇಶಕರು ಸ್ಪಷ್ಟ ಪಡಿಸಿದ್ದರು. ತಡವಾಗಿದ್ದಕ್ಕೆ ಕಾರಣ ಏನೇ ಇರಲಿ.. ದಿಲ್ ಕಾ ರಾಜಾ ತೆರೆಗೆ ಬರಲಿ ಎನ್ನುವುದು ರಮ್ಯಾ ಅಭಿಮಾನಿಗಳ ಆಸೆ. ರಮ್ಯಾ ಅವರು ಮತ್ತೆ ಸಿನಿಮಾ ರಂಗ ಪ್ರವೇಶಿಸುವ ಈ ಹೊತ್ತಿನಲ್ಲಿ ಆ ಚಿತ್ರಕ್ಕೂ ಮತ್ತೆ ಮರುಜೀವ ಬರಬಹುದು.

  • ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪುನೀತ್, ಸಂಚಾರಿ ವಿಜಯ್

    ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪುನೀತ್, ಸಂಚಾರಿ ವಿಜಯ್

    ಮಾರ್ಚ್ 3 ರಿಂದ ಏಳು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಗಲಿದ ಇಬ್ಬರು ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯಲಿದೆ. ಇದನ್ನೂ ಓದಿ : ಹೊಸ ಮುಖಗಳ ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್

    ಇತ್ತೀಚೆಗಷ್ಟೇ ನಿಧನರಾದ ಪುನೀತ್ ರಾಜ್ ಕುಮಾರ್ ಮತ್ತು ಕಳೆದ ವರ್ಷ ಅಗಲಿರುವ ಸಂಚಾರಿ ವಿಜಯ್ ಅವರ ನೆನಪಿಗಾಗಿ ಚಿತ್ರೋತ್ಸವದಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್.
    ಪುನೀತ್ ಮತ್ತು ಸಂಚಾರಿ ವಿಜಯ್ ನಟನೆಯ ಚಿತ್ರಗಳ ಪ್ರದರ್ಶನ, ಅವರ ಸಾಧನೆ ಅವಲೋಕನ ಹಾಗೂ ಪುನೀತ್ ಮತ್ತು ವಿಜಯ್ ಕುರಿತಾಗಿ ಗಣ್ಯರು ಈ ಸಂದರ್ಭದಲ್ಲಿ ಮಾತನಾಡಲಿದ್ದಾರೆ. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್

    ಪುನೀತ್ ಬಾಲ್ಯದಲ್ಲಿಯೇ ‘ಬೆಟ್ಟದ ಹೂವು’ ಚಿತ್ರಕ್ಕಾಗಿ ಅತ್ಯುತ್ತಮ ಬಾಲ ನಟ ರಾಷ್ಟ್ರ ಪ್ರಶಸ್ತಿ ಪಡೆದರೆ, ಸಂಚಾರಿ ವಿಜಯ್ ‘ನಾನು ಅವನಲ್ಲ ಅವಳು’ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದವರು. ಹೀಗಾಗಿ ಇಬ್ಬರೂ ಕಲಾವಿದರನ್ನು ಸಿನಿಮೋತ್ಸವದಲ್ಲಿ ಸ್ಮರಿಸಿಕೊಳ್ಳಲಾಗುತ್ತಿದೆ. ಇದನ್ನೂ ಓದಿ :ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು

     

    ಈಗಾಗಲೇ ಸಿನಿಮೋತ್ಸವಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ ಚಲನಚಿತ್ರ ಅಕಾಡಮಿ. ಸಿನಿಮಾಗಳ ಪ್ರದರ್ಶನ, ಸಿನಿಮಾಗಳ ಕುರಿತಾದ ಚರ್ಚೆ, ಅಂತಾರಾಷ್ಟ್ರೀಯ ನಿರ್ದೇಶಕರುಗಳ ಜತೆ ಸಂವಾದ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜನೆ ಮಾಡಲಾಗಿದೆ.

  • ಹೊಸ ಮುಖಗಳ ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್

    ಹೊಸ ಮುಖಗಳ ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್

    ನ್ನಡ ಸಿನಿಮಾ ರಂಗಕ್ಕೆ ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾದಿಂದ ಹೊಸ ಕಲಾವಿದರ ಮತ್ತು ತಂತ್ರಜ್ಞರ ಆಗಮನವಾಗಿದೆ. ಎಂ.ಎನ್. ಶ್ರೀಕಾಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಮೂಲಕ ರಾಘವ್ ಎಂಬ ಹೊಸ ಪ್ರತಿಭೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದೆ. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್

    ಮೊನ್ನೆಯಷ್ಟೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಭಾಸ್ಕರ್ ರಾವ್ ಮತ್ತು ವಸಿಷ್ಠ ಸಿಂಹ ಈ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಪ್ರೀತಿ, ಸಾಹಸ, ಸಸ್ಪೆನ್ಸ್ ಕಥಾ ಹಂದರ ಹೊಂದಿರುವ ಚಿತ್ರ ಇದಾಗಿದ್ದು, ಈ ಹೊತ್ತಿನ ಯುವಕ ಯುವತಿಯರ ತಲ್ಲಣಗಳನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಇದನ್ನೂ ಓದಿ : ಮೇಡ್ ಇನ್ ಚೈನಾ ಅಂತಿದ್ದಾರೆ ನಾಗಭೂಷಣ್

    ಈ ಕುರಿತು ನಿರ್ದೇಶಕರು ಹೇಳಿದ್ದು ಹೀಗೆ, “ಮೈಸೂರು ಮೂಲದವರಾದ ಅಮೆರಿಕನ್‌ ಪ್ರಜೆ ಯಶಸ್ವಿ ಶಂಕರ್ ಅವರಿಗೆ ಕಥೆ ಹೇಳಿದಾಗ ತುಂಬಾನೇ ಖುಷಿ ಪಟ್ಟರು. ಇದೊಂದು ಹೊಸ ಮಾದರಿಯ ಸಿನಿಮಾವಾಗಲಿದೆ ಎಂದು ಬೆನ್ನುತಟ್ಟಿದರು. ಕೊನೆಗೆ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದರು. ಇದೊಂದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರತಿ ದೃಶ್ಯವೂ ನೋಡುಗನನ್ನು ಹಿಡಿದಿಟ್ಟುಕೊಳ್ಳಲಿದೆ’ ಎಂದರು. ಇದನ್ನೂ ಓದಿ :ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು

    ರಾಘವ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದರೆ, ಸಂಜನಾ ಬುರ್ಲಿ ನಾಯಕಿ. ರಾಘವ್ ಕಾಲೇಜ್ ಹುಡುಗನಾಗಿ ಕಾಣಿಸಿಕೊಂಡಿದ್ದು, ಪಾತ್ರಕ್ಕಾಗಿ ಸಾಕಷ್ಟು ರೀತಿಯಲ್ಲಿ ತಯಾರಿ ಮಾಡಿಕೊಂಡಿದ್ದಾರೆ.

  • ಮೇಡ್ ಇನ್ ಚೈನಾ ಅಂತಿದ್ದಾರೆ ನಾಗಭೂಷಣ್

    ಮೇಡ್ ಇನ್ ಚೈನಾ ಅಂತಿದ್ದಾರೆ ನಾಗಭೂಷಣ್

    ಕೊರೋನಾ ವೈರಸ್ ಮಾಡಿದ ಆವಾಂತರ ನೂರಾರು. ಸಾವಿರಾರು ಜನ ಪ್ರಾಣ ಕಳೆದುಕೊಂಡರೆ, ಸಾಕಷ್ಟು ಜನರ ಬದುಕನ್ನೇ ಈ ಕೋವಿಡ್ ಕಸಿದುಕೊಂಡಿತು. ಕೊರೋನಾ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೆಯೇ ಇಡೀ ಜಗತ್ತೇ ತಲ್ಲಣಗೊಂಡಿತು. ಒಂದು ರೀತಿಯಲ್ಲೇ ಜಗತ್ತಿಗೇ ಬೀಗ ಹಾಕಿದ ರೀತಿಯಲ್ಲಿ ಲಾಕ್ ಡೌನ್ ಘೋಷಣೆಯಾಯಿತು. ಈ ಸಂದರ್ಭದಲ್ಲಿ ಹುಟ್ಟಿದ ಕಥೆಯನ್ನೇ ಕನ್ನಡದಲ್ಲಿ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ‘ಮೇಡ್ ಇನ್ ಚೈನಾ’ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್

    ಕನ್ನಡದ ಮೊದಲ ವರ್ಚುವಲ್ ಸಿನಿಮಾ ಇದಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಪತಿಯು ವಿದೇಶದಲ್ಲಿ ಲಾಕ್ ಆಗುತ್ತಾನೆ. ಹೆಂಡತಿ ಭಾರತದಲ್ಲಿರುತ್ತಾಳೆ. ಇವರ ನಡುವೆ ನಡೆಯುವ ಕಥೆಯೇ ‘ಮೇಡ್ ಇನ್ ಚೈನಾ’. ಇಕ್ಕಟ್ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿರುವ ನಾಗಭೂಷಣ್ ಈ ಸಿನಿಮಾದ ನಾಯಕ. ಇದನ್ನೂ ಓದಿ : ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್‍ನಲ್ಲಿ ಗಮನ ಸೆಳೆಯಲಿದೆ ಸೈಕಲಾಜಿಕಲ್ ಥ್ರಿಲ್ಲರ್ ‘ರುಗ್ನ’

    “ಲಾಕ್ ಡೌನ್ ಟೈಮ್ ನಲ್ಲಿ ವಿದೇಶದಲ್ಲಿ ಲಾಕ್ ಆಗುವ ಪತಿ. ಸ್ವದೇಶಿ ನೆಲದಲ್ಲಿ ಪತ್ನಿ. ಈ ಗಂಡ ಹೆಂಡ್ತಿ‌ ನಡುವಿನ ಪ್ರೀತಿ-ಗೀತಿ-ಇತ್ಯಾದಿ ನಡುವೆ ಒಂದಷ್ಟು ಜಗಳ ಓವರ್ ಆಲ್ ಆಗಿ‌ ಮೇಡ್ ಇನ್ ಚೈನಾ ಫ್ಯಾಮಿಲಿ ಡ್ರಾಮಾ” ಎಂದಿದೆ ಚಿತ್ರತಂಡ. ಇದನ್ನೂ ಓದಿ :ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು

    ಅಯೋಗ್ಯ, ರತ್ನಮಂಜರಿ ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿದ್ದ ಪ್ರೀತಮ್ ತೆಗ್ಗಿನಮನೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದ ಜೊತೆಗೆ ಗ್ರಾಫಿಕ್, ಎಡಿಟಿಂಗ್ ಹಾಗೂ ಸಿನಿಮಾಟೋಗ್ರಾಫಿ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ನಾಗಭೂಷಣ್ ಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

  • ಪುನೀತ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅರ್ಜುನ್ ಸರ್ಜಾ

    ಪುನೀತ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅರ್ಜುನ್ ಸರ್ಜಾ

    ಪುನೀತ್ ರಾಜ್ ಕುಮಾರ್ ಅಗಲಿ ಮೂರು ತಿಂಗಳು ಗತಿಸಿದರೂ, ಅವರ ಕುಟುಂಬಕ್ಕೆ ನಟ ನಟಿಯರು ಸಾಂತ್ವಾನ ಹೇಳುತ್ತಲೇ ಇದ್ದಾರೆ. ಪುನೀತ್ ನಿಧನದ ದಿನದಂದು ಮಗುವಿನಂತೆ ಕಣ್ಣೀರಿಟ್ಟಿದ್ದ ನಟ ಅರ್ಜುನ್ ಸರ್ಜಾ, ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪುನೀತ್ ನಿವಾಸಕ್ಕೆ ಭೇಟಿ ನೀಡಿ, ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಸಾಂತ್ವಾನ ಹೇಳಿದರು. ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.  ಇದನ್ನೂ ಓದಿ: ಶೂಟಿಂಗ್ ಮುಗಿಸಿ ಅಚ್ಚರಿ ಮೂಡಿಸಿದ ಗುರುಪ್ರಸಾದ್

    ಪುಟಾಣಿ ಪುನೀತ್ ಅವರನ್ನು ಎತ್ತಿ ಆಡಿಸಿದ ದಿನಗಳನ್ನು ನೆನಪಿಸಿಕೊಂಡ ಅರ್ಜುನ್ ಸರ್ಜಾ, ಇಂತಹ ಮಹಾನ್ ಕಲಾವಿದನನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಅಂತ ಕನಸು ಮನಸಲ್ಲೂ ಅಂದುಕೊಂಡಿರಲಿಲ್ಲ. ಅವರು ಎಲ್ಲಿಯೂ ಹೋಗಿಲ್ಲ, ನಮ್ಮೊಂದಿಗೆ ಸದಾ ಇರುತ್ತಾರೆ ಎಂದರು. ಇದನ್ನು ಓದಿ : ಕನ್ನಡಕ್ಕೆ ಅಮ್ಮಾವ್ರ ಗಂಡ ನಾಯಕಿಯ ಮಗಳು

    ಈ ಹಿಂದೆ ಪುನೀತ್ ಅವರನ್ನು ಎತ್ತಿಕೊಂಡಿದ್ದ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಶಾಂತಿ ಕೋರಿದ್ದರು ಅರ್ಜುನ್ ಸರ್ಜಾ. ಪುನೀತ್ ಅವರನ್ನು ಬಾಲ್ಯದಲ್ಲಿ ಹಾಗೆ ಎತ್ತಿಕೊಳ್ಳುವ ಭಾಗ್ಯ ಹಲವು ಬಾರಿ ಸಿಕ್ಕಿದೆ ಎಂದು ನೆನಪಿಸಿಕೊಂಡಿದ್ದರು.

  • ಸೆಟ್ಟೇರಿತು ರಾಜವರ್ಧನ್ ಮೂರನೇ ಸಿನಿಮಾ

    ಸೆಟ್ಟೇರಿತು ರಾಜವರ್ಧನ್ ಮೂರನೇ ಸಿನಿಮಾ

    ನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟನೆಯ ಮೂರನೇ ಸಿನಿಮಾ ‘ಹಿರಣ್ಯ’ ಇಂದು ಸೆಟ್ಟೇರಿತು. ಬೆಂಗಳೂರಿನ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು ಮಾಜಿ ಸಚಿವ ಚೆಲುವನಾರಾಯಣ ಸ್ವಾಮಿ.

    ಈಗಾಗಲೇ ‘ಬಿಚ್ಚುಗತ್ತಿ’ ಸಿನಿಮಾದ ಮೂಲಕ ಐತಿಹಾಸಿಕ ಪಾತ್ರ ಮಾಡಿರುವ ರಾಜವರ್ಧನ್, ಹಿರಣ್ಯ ಚಿತ್ರದಲ್ಲಿ ಮತ್ತೊಂದು ಬಗೆಯ ಚಿತ್ರ ಪಾತ್ರ ಮಾಡಿದ್ದಾರಂತೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ರೀತಿಯಲ್ಲಿ ತಯಾರಿ ಕೂಡ ಮಾಡಿಕೊಂಡಿದ್ದಾರಂತೆ. ಪಾತ್ರಕ್ಕೂ ಮತ್ತು ಸಿನಿಮಾದ ಶೀರ್ಷಿಕೆಗೂ ಸಂಬಂಧ ಇರುವುದರಿಂದ ಈ ಟೈಟಲ್ ಗಾಗಿ ಅವರು ಡಾಲಿ ಧನಂಜಯ್ ಅವರನ್ನು ಮೊರೆ ಹೋಗಿದ್ದಾರೆ. ಇದನ್ನೂ ಓದಿ: ವಕೀಲ ಜಗದೀಶ್ ಜತೆ ಸೇರಿಕೊಂಡ ಸ್ಯಾಂಡಲ್‌ವುಡ್‌ ನಿರ್ದೇಶಕ ಯಾರು?

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟ ಡಾಲಿ ಧನಂಜಯ್ ‘ಹಿರಣ್ಯ’ ಶೀರ್ಷಿಕೆಯನ್ನು ನೋಂದಾಯಿಸಿದ್ದರು. ಈ ಶೀರ್ಷಿಕೆಗಾಗಿ ರಾಜವರ್ಧನ್ ಕೂಡ ಅರ್ಜಿ ಸಲ್ಲಿಸಿದ್ದರಂತೆ. ಕೊನೆಗೂ ಗೆಳೆಯನ ಒತ್ತಾಸೆಗೆ ತಮ್ಮ ಶೀರ್ಷಿಕೆಯನ್ನು ಬಿಟ್ಟುಕೊಟ್ಟಿದ್ದಾರೆ ಡಾಲಿ ಧನಂಜಯ್. ಇದನ್ನೂ ಓದಿ: ಶೂಟಿಂಗ್ ಮುಗಿಸಿ ಅಚ್ಚರಿ ಮೂಡಿಸಿದ ಗುರುಪ್ರಸಾದ್

    ಪ್ರವೀಣ್ ಅವ್ಯಕ್ತ ನಿರ್ದೇಶನದಲ್ಲಿ ಹಿರಣ್ಯ ಚಿತ್ರ ಮೂಡಿ ಬರಲಿದ್ದು, ಇದೇ ಮೊದಲ ಬಾರಿಗೆ ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ ಮಾಡೆಲ್ ಆಗಿರುವ ರಿಹಾನಾ. ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿರುವ ರಿಹಾನಾಗೆ ಮೊದಲ ಸಿನಿಮಾದಲ್ಲಿಯೇ ಸವಾಲಿನ ಪಾತ್ರ ಸಿಕ್ಕಿದೆಯಂತೆ.

     

  • ಶೂಟಿಂಗ್ ಮುಗಿಸಿ ಅಚ್ಚರಿ ಮೂಡಿಸಿದ ಗುರುಪ್ರಸಾದ್

    ಶೂಟಿಂಗ್ ಮುಗಿಸಿ ಅಚ್ಚರಿ ಮೂಡಿಸಿದ ಗುರುಪ್ರಸಾದ್

    ನಿರ್ದೇಶಕ ಮಠದ ಗುರುಪ್ರಸಾದ್ ಸಿನಿಮಾ ಕೈಗೆತ್ತಿಕೊಂಡರೇ ಅದು ಯಾವತ್ತು ಶುರುವಾಗತ್ತೋ, ಯಾವತ್ತು ಮುಗಿಯತ್ತೋ ಅವರಿಗೇ ಗೊತ್ತಿರುವುದಿಲ್ಲ. ಆದರೆ, ಈ ಬಾರಿ ಹಾಗಾಗಿಲ್ಲ. ಜಗ್ಗೇಶ್ ಜತೆಗಿನ ‘ರಂಗನಾಯಕ’ ಚಿತ್ರವನ್ನು ಅತೀ ವೇಗದಲ್ಲಿ ಚಿತ್ರೀಕರಣ ಮುಗಿಸಿ ಅಚ್ಚರಿ ಮೂಡಿಸಿದ್ದಾರೆ ಗುರು.
    ಈಗಾಗಲೇ ಇವರ ನಿರ್ದೇಶನದಲ್ಲಿ ಮೂಡಿ ಬಂದ ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ ಅವಧಿಗೂ ಮೀರಿ ತಯಾರಾಗಿದ್ದವು. ಇವುಗಳ ನಂತರ ಸೆಟ್ಟೇರಿದ ‘ಅದೇಮಾ’ ನಾಲ್ಕು ವರ್ಷಗಳಾದರೂ ಇನ್ನೂ ಮುಗಿದಿಲ್ಲ. ಈ ನಡುವೆ ಮುಹೂರ್ತ ಕಂಡ ‘ರಂಗನಾಯಕ’ ಚಿತ್ರ ಕೂಡ ಬೇಗ ಬರುವುದು ಅನುಮಾನ ಎನ್ನಲಾಗಿತ್ತು.

     

    2020 ಡಿಸೆಂಬರ್ ಕೊನೆಯ ವಾರದಲ್ಲಿ ಈ ಚಿತ್ರಕ್ಕೆ ಮುಹೂರ್ತವಾಗಿ, ನಂತರ ಕೊರೋನಾ ಕಾರಣದಿಂದಾಗಿ ತಡವಾಗಿತ್ತು. 2021ರ ಮಧ್ಯದಲ್ಲಿ ಶೂಟಿಂಗ್ ಶುರು ಮಾಡಿದ ಗುರು ಪ್ರಸಾದ್, ಕೆಲವೇ ತಿಂಗಳುಗಳಲ್ಲೇ ಸಂಪೂರ್ಣ ಚಿತ್ರೀಕರಣ ಮುಗಿಸಿದ್ದಾರೆ. ಬೆಂಗಳೂರಿನ ವರವಲಯದಲ್ಲಿ ಈ ಸಿನಿಮಾಗಾಗಿಯೇ ಬೃಹತ್ ಸೆಟ್ ಹಾಕಲಾಗಿತ್ತು. ಬಹುತೇಕ ಶೂಟಿಂಗ್ ಅದೇ ಸೆಟ್ ನಲ್ಲಿ ನಡೆದಿದೆ. ಗುರು ಪ್ರಸಾದ್ ವೃತ್ತಿ ಬದುಕಿನಲ್ಲಿ ಅತೀ ಬೇಗ ತಯಾರಾದ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಡಬ್ಬಿಂಗ್, ಹಿನ್ನೆಲೆ ಸಂಗೀತ ಈಗ ಶೂಟಿಂಗ್ ನಂತರದ ಕೆಲಸಗಳು ಸದ್ಯ ನಡೆದದ್ದು, ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರುವ ಯೋಜನೆ ಚಿತ್ರತಂಡದ್ದು.ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸಿನಿಮಾಗೆ ಬಪ್ಪಿ ಲಹರಿ ಹಾಡು

    ‘ರಂಗನಾಯಕ’ ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಮೂರನೇ ಚಿತ್ರ. ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳು ಗೆದ್ದಿವೆ. ನಿರ್ಮಾಪಕರಿಗೂ ಹಣ ತಂದು ಕೊಟ್ಟಿವೆ. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿವೆ. ಹೀಗಾಗಿ ಮೂರನೇ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಮೂಡಿದೆ. ಇದನ್ನೂ ಓದಿ: ವಕೀಲ ಜಗದೀಶ್ ಜತೆ ಸೇರಿಕೊಂಡ ಸ್ಯಾಂಡಲ್‌ವುಡ್‌ ನಿರ್ದೇಶಕ ಯಾರು?

    ಈ ಹಿಂದಿನ ಎರಡೂ ಸಿನಿಮಾಗಳಲ್ಲಿಯೂ ಗುರುಪ್ರಸಾದ್ ವಿಡಂಬನೆಯನ್ನೇ ಪ್ರಧಾನವಾಗಿಟ್ಟುಕೊಂಡು ಚಿತ್ರಕಥೆ ಬರೆದಿದ್ದರು. ರಂಗನಾಯಕ ಸಿನಿಮಾ ಕೂಡ ಅದೇ ಮಾದರಿಯಲ್ಲಿದೆಯಂತೆ. ಕಲಾವಿದರ ಬದುಕಿನ ಮತ್ತೊಂದು ಮುಖವನ್ನು ತೆರೆದಿಡುವ ಪ್ರಯತ್ನವನ್ನು ಗುರು ಪ್ರಸಾದ್ ಮಾಡಿದ್ದಾರಂತೆ.

  • ವಕೀಲ ಜಗದೀಶ್ ಜತೆ ಸೇರಿಕೊಂಡ ಸ್ಯಾಂಡಲ್‌ವುಡ್‌  ನಿರ್ದೇಶಕ ಯಾರು?

    ವಕೀಲ ಜಗದೀಶ್ ಜತೆ ಸೇರಿಕೊಂಡ ಸ್ಯಾಂಡಲ್‌ವುಡ್‌ ನಿರ್ದೇಶಕ ಯಾರು?

    ತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುವ ವಕೀಲ ಜಗದೀಶ್ ಜತೆ ಮೊದ ಮೊದಲು ಕೇವಲ ವಕೀಲರು ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಸ್ಯಾಂಡಲ್ ವುಡ್ ನಿರ್ದೇಶಕರು ಕೂಡ ಜತೆಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ಜಗದೀಶ್ ಜತೆ ಇದ್ದ ವ್ಯಕ್ತಿ ಬೇರೆ ಯಾರೂ ಅಲ್ಲ, ಕನ್ನಡದಲ್ಲಿ ಎರಡು ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಶರತ್ ಕದ್ರಿ.

    2014 ರ ಹೊತ್ತಿಗೆ ಕನ್ನಡ ಸಿನಿಮಾ ರಂಗ ಪ್ರವೇಶ ಮಾಡಿದವರು ಶರತ್. ಅದೇ ವರ್ಷದಲ್ಲೇ ಅವರು “ಸ್ಯಾಂಡಲ್ ವುಡ್ ಸರಿಗಮ” ಚಿತ್ರಕ್ಕೆ ನಿರ್ದೇಶನ ಮಾಡಿದರು. ಈ ಚಿತ್ರಕ್ಕೆ ಸಿಂಧು ಲೋಕನಾಥ್ ನಾಯಕಿ. ಅಷ್ಟೇನೂ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಲಿಲ್ಲ. ಆನಂತರ ಕ್ರೌಡ್ ಫಂಡೆಡ್ ಸಿನಿಮಾ ಮಾಡುತ್ತೇನೆ ಎಂದು ಓಡಾಡಿದರು. ಅದಕ್ಕಾಗಿ ಅವರು ಕೆಲವು ಯೋಜನೆಗಳನ್ನೂ ಹಾಕಿಕೊಂಡರು. ಜನರಿಂದ ಹಣ ಸಂಗ್ರಹಿಸಿ ಮಾಡಬೇಕಾಗಿದ್ದ ಚಿತ್ರಕ್ಕೆ “ಮರೆಯಲಾರೆ” ಎಂದು ಹೆಸರಿಟ್ಟರು. ಆ ಸಿನಿಮಾ ಕೂಡ ಅವರನ್ನು ಕೈ ಹಿಡಿಯಲಿಲ್ಲ. ಅಲ್ಲಿಂದ ಅವರು ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಸಿನಿಮಾ ರಂಗದಲ್ಲಿ ಅಷ್ಟೇನೂ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ವಕೀಲ ಜಗದೀಶ್ ಅವರ ಜತೆಯಾಗಿ ಹೋರಾಟಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸಿನಿಮಾಗೆ ಬಪ್ಪಿ ಲಹರಿ ಹಾಡು

    ಈ ಶರತ್ ಕದ್ರಿ ಸಿನಿಮಾ ರಂಗಕ್ಕೂ ಬರುವ ಮುನ್ನ ಕಾರ್ಪೋರೇಟ್ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದವರು. ವಾರದ ರಜಾ ದಿನಗಳಾದ ಶನಿವಾರ ಮತ್ತು ಭಾನುವಾರವನ್ನು ಹವ್ಯಾಸಕ್ಕೆ ಬಳಸಿಕೊಂಡವರು. ಮೊದ ಮೊದಲ ಕಿರುಚಿತ್ರ, ಜಾಹೀರಾತು ಚಿತ್ರಗಳನ್ನು ಮಾಡಿ ನಂತರ ಸಿನಿಮಾ ಮಾಡಲು ಮುಂದಾದರು. ಈಗಲೂ ಅವರಿಗೆ ಸಿನಿಮಾ ಮಾಡುವ ಆಸಕ್ತಿಯಿದೆ. ಅದಕ್ಕಾಗಿ ಅವರು ನಿರ್ಮಾಪಕರನ್ನು ಹುಡುಕತ್ತಲೇ ಇದ್ದಾರೆ. ಇದನ್ನೂ ಓದಿ: ಬಪ್ಪಿ ಲಹರಿ ಧರಿಸುತ್ತಿದ್ದ ಚಿನ್ನಾಭರಣ ಎಷ್ಟು?