Tag: film industry

  • `ಕುರುಕ್ಷೇತ್ರ’ ಸಿನಿಮಾ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್!

    `ಕುರುಕ್ಷೇತ್ರ’ ಸಿನಿಮಾ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ `ಮುನಿರತ್ನ ಕುರುಕ್ಷೇತ್ರ’ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ದೊಡ್ಡ ತಾರಾಗಣವಿದ್ದು, ಜನರಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿದೆ.

    ಈ ಕುರಿತು ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ಚಿತ್ರದಲ್ಲಿ ನಾನು ಯಾವುದೇ ಪರಕಾಯಪ್ರವೇಶ ಮಾಡಲಿಲ್ಲ. ಕ್ಯಾಮರಾ ಆನ್ ಮಾಡಿದ ತಕ್ಷಣ ಅಭಿನಯಿಸಿ ಕಟ್ ಎಂದ ತಕ್ಷಣ ಪಾತ್ರದಿಂದ ಹೊರಬರುತ್ತೇನೆ. ನಾನು ಒಬ್ಬ ರಂಗಭೂಮಿ ಕಲಾವಿದನಾಗಿದ್ದು, ನಿನಾಸಂ ಮಾಡಿದ್ದೇನೆ ಹಾಗೂ ಬೇಸಿಕ್ ಕಲಿತಿದ್ದೇನೆ. ಈಗಿನ ಕಾಲದ ಮಕ್ಕಳಿಗೆ ಕುರುಕ್ಷೇತ್ರ, ರಾಮಾಯಣ, ಮಹಾಭಾರತದ ಬಗ್ಗೆ ತಿಳಿದಿಲ್ಲ. ಅಷ್ಟೇ ಅಲ್ಲದೆ ನನ್ನ ಮಗನಿಗೂ ಇದರ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

    ನಮ್ಮ ಕಾಲದಲ್ಲಿ ಮಹಾಭಾರತ, ರಾಮಾಯಣದ ಬಗ್ಗೆ ಓದಿದ್ದೇವೆ, ಕೇಳಿದ್ದೇವೆ. ಆದರೆ ಈಗಿನ ಕಾಲದ ಮಕ್ಕಳಿಗೆ ಬೇರೆ ರೀತಿಯ ಶಿಕ್ಷಣವಿದ್ದು, ಅವರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ನಮ್ಮ ಕಾಲದಲ್ಲಿ ಟಿಪ್ಪು ಸುಲ್ತಾನ್ ಯಾರು? ಅವರ ಕಥೆ ಏನು? ಎಂಬುದು ನಾವು ಕೇಳಿದ್ದೇವೆ ಹಾಗೂ ಟಿವಿಯಲ್ಲಿ ನೋಡಿದ್ದೇವೆ. ಆದರೆ ಈಗಿನ ಕಾಲದ ಮಕ್ಕಳಿಗೆ ಚೋಟಾ ಭೀಮ್ ಹಾಗೂ ಪೋಕಿಮಾನ್ ಕಥೆಗಳು ಮಾತ್ರ ಅವರಿಗೆ ಗೊತ್ತಿರೋದು. ಆ ಮಕ್ಕಳಿಗಾಗಿ ನಾವು ಈ ಸಿನಿಮಾ ಮಾಡುತ್ತಿದ್ದೇವೆ ಎಂದು ದರ್ಶನ್ ಈಗಿನ ಕಾಲದ ಮಕ್ಕಳ ಬಗ್ಗೆ ಹೇಳಿದ್ದಾರೆ.

    ಬೇರೆ ಚಿತ್ರರಂಗದವರು ಇಂಥ ಸಿನಿಮಾಗಳಿಗೆ ನಾವು 5-6 ವರ್ಷ ತೆಗೆದುಕೊಂಡಿದ್ದೇವೆ ಎಂದು ಹೇಳುತ್ತಾರೆ. ಆದರೆ ನಾವು ಮೇ ತಿಂಗಳಿನಿಂದ ಜನವರಿ 5 ರವರೆಗೂ ಕುರುಕ್ಷೇತ್ರ ಎಂಬ ದೊಡ್ಡ ಸಿನಿಮಾದ ಚಿತ್ರೀಕರಣ ಮಾಡಿದ್ದೇವೆ. ಈ ಸಿನಿಮಾನೇ ದೊಡ್ಡದು ಹಾಗೂ ಈ ಸಿನಿಮಾ ಮುಂದೆ ಯಾರೂ ದೊಡ್ಡವರಿಲ್ಲ. ಈ ಸಿನಿಮಾ 3ಡಿಯಲ್ಲಿದ್ದು, 3ಡಿನೇ ಈ ಸಿನಿಮಾದ ಟ್ರೀಟ್ ಹಾಗೂ 3ಡಿ ಎಫೆಕ್ಟ್ ನಲ್ಲಿ ಇದು ಮೊದಲ ಪೌರಾಣಿಕಾ ಸಿನಿಮಾ ಆಗಿದೆ ಅಂದ್ರು.

    ಇನ್ನು ಕಾಸ್ಟೂಮ್ಸ್ ನ ಬಗ್ಗೆ ಮಾತನಾಡಿದ ದರ್ಶನ್, ನಾನು 50 ರಿಂದ 60 ಕೆ.ಜಿ ತೂಕದ ಕಾಸ್ಟೂಮ್ಸ್ ಹಾಕುತ್ತಿದ್ದೇನೆ. ಇದರಿಂದ ನನ್ನ ತೂಕ ಹೆಚ್ಚಾಗುತ್ತಿದ್ದು, ಮತ್ತೆ ಕಡಿಮೆಯಾಗುತ್ತಿದೆ. ಕುರುಕ್ಷೇತ್ರ ಒಂದು ಒಳ್ಳೆಯ ಸಿನಿಮಾ ಆಗುತ್ತದೆ ಹಾಗೂ ಈಗಿನ ಕಾಲದ ಮಕ್ಕಳಿಗೆ ಮಹಾಭಾರತದ ಬಗ್ಗೆ ಅದರಲ್ಲೂ ಕುರುಕ್ಷೇತ್ರದ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ದುರ್ಯೋಧನ ಪಾತ್ರ ನಿರ್ವಹಿಸುತ್ತಿರೋ ದರ್ಶನ್ ತಿಳಿಸಿದ್ದಾರೆ.

    ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ, ಸೋನು ಸೂದ್ ಹಾಗೂ ಪ್ರಣಯ ರಾಜ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ. ನೀರ್ ದೋಸೆ ಬೆಡಗಿ ಹರಿಪ್ರಿಯಾ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

    https://youtu.be/LZgauZ2OOaM

    https://www.youtube.com/watch?v=K_B9Pw7SXRM


     

  • ಮಹದಾಯಿಗಾಗಿ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿಂದು ವಾಟಾಳ್ ನಾಗರಾಜ್ ಕರಾಳ ದಿನಾಚರಣೆ

    ಮಹದಾಯಿಗಾಗಿ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿಂದು ವಾಟಾಳ್ ನಾಗರಾಜ್ ಕರಾಳ ದಿನಾಚರಣೆ

    ಬೆಂಗಳೂರು: ಮಹದಾಯಿಗಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮುಂದಾಳತ್ವದಲ್ಲಿ ಇಂದು ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಕರಾಳ ದಿನಾಚರಣೆ ನಡೆಯಲಿದೆ.

    ಇದರಲ್ಲಿ ಚಿತ್ರರಂಗದವರು ಕೂಡ ಪಾಲ್ಗೊಳ್ಳಲಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಈ ಹೋರಾಟಕ್ಕೆ ಸಾಥ್ ಕೊಡಲಿದ್ದಾರೆ. ಮಹದಾಯಿ ವಿಚಾರದಲ್ಲಿ ರಾಜಕೀಯ ಖಂಡಿಸಿ ಈ ಹೋರಾಟ ನಡೆಯಲಿದೆ.

    ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪ ಸೇರಿದಂತೆ ರಾಜಕಾರಣಿಗಳ ವಚನ ಭ್ರಷ್ಟತೆ ಖಂಡಿಸಿ ಬುಧವಾರ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಅದರಲ್ಲೂ ಬೆಂಗಳೂರಿನಲ್ಲಿ ರಾಜ್ಯಪಾಲರಿಗೆ ಮನವಿ ನೀಡೋಕೆ ಹೋದರೆ ಅಲ್ಲಿ ಅವಮಾನ ಆಯ್ತು. ಒಂದು ಕಡೆ ರಾಜಕಾರಣಿಗಳಿಂದ ಭರವಸೆ ಸಿಗಲಿಲ್ಲ. ಮತ್ತೊಂದು ಕಡೆ ರಾಜ್ಯದ ಪ್ರಥಮ ಪ್ರಜೆ ಭೇಟಿಗೆ ಅವಕಾಶ ಕೊಡಲಿಲ್ಲ.

    ಇದರಿಂದ ನಿರಾಶಿತರಾದ ಮಹದಾಯಿ ಹೋರಾಟಗಾರರು ರಾತ್ರಿಯೇ ತಮ್ಮ ಊರುಗಳತ್ತ ತೆರಳಿದ್ದು, ಕೆಲವರು ಈಗಲೂ ತೆರಳುತ್ತಿದ್ದಾರೆ. ಐದು ದಿನಗಳಿಂದ ಕೊರೆವ ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದ್ದ ರೈತರು ನಿರಾಸೆಯಿಂದಲೇ ಹೋಗುತ್ತಿದ್ದಾರೆ.

  • ಟಾಪ್ ಸ್ಟಾರ್ ಗಳಿಗೆ ಸಂಭಾವನೆ ಕೊಡ್ತಿದ್ದ ನಿರ್ಮಾಪಕ ಈಗ ಫಿಲಂ ಚೇಂಬರ್ ಮೊರೆ ಹೋದ್ರು!

    ಟಾಪ್ ಸ್ಟಾರ್ ಗಳಿಗೆ ಸಂಭಾವನೆ ಕೊಡ್ತಿದ್ದ ನಿರ್ಮಾಪಕ ಈಗ ಫಿಲಂ ಚೇಂಬರ್ ಮೊರೆ ಹೋದ್ರು!

    ಬೆಂಗಳೂರು: ಕನ್ನಡದ ಮೊದಲ ಸಿನಿಮಾಸ್ಕೋಪ್ ಚಿತ್ರಕ್ಕೆ ಬಂಡವಾಳ ಹಾಕಿ ಚಿತ್ರರಂಗಕ್ಕಾಗಿ ದುಡಿದ ನಿರ್ಮಾಪಕನ ಕರುಣಾಜನಕ ಕಥೆ ಇದು. `ರವಿವರ್ಮನ ಕುಂಚದ ಕಲೆ ಬಲೆ ಸಕಾರವೋ’ ಈ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ.

    ಸೊಸೆ ತಂದ ಸೌಭಾಗ್ಯ ಸಿನಿಮಾದ ಹೆಸರಾಂತ ನಿರ್ಮಾಪಕ ಎಸ್.ಡಿ ಅಂಕಲಗಿ ಅವರ ಈಗಿನ ಪರಿಸ್ಥಿತಿ ನೋಡಿದರೆ ಮನಕಲಕುತ್ತೆ. ಡಾ. ವಿಷ್ಣುವರ್ಧನ್, ಶಂಕರ್ ನಾಗ್, ಅನಂತನಾಗ್, ಶ್ರೀನಾಥ್, ಮಂಜುಳ, ಜಯಂತಿ, ವಜ್ರಮುನಿಯಂತ ಟಾಪ್ ಸ್ಟಾರ್‍ಗಳಿಗೆ ಸಂಭಾವನೆ ಕೊಟ್ಟ ಕೈಯಲ್ಲಿ ಈಗ ಬಿಡಿಗಾಸಿಲ್ಲ.

    8ಕ್ಕೂ ಹೆಚ್ಚು ಸೂಪರ್ ಹಿಟ್ ಸಂಸಾರಿಕ ಸಿನಿಮಾಗಳನ್ನ ಕೊಟ್ಟ ಅಂಕಲಗಿ ಇಂದು ಕಾಲು ಮುರಿದುಕೊಂಡು ಮೂಲೆ ಗುಂಪಾಗಿದ್ದಾರೆ. ಆಸ್ಪತ್ರೆ ಖರ್ಚಿಗೆ ಕಾಸಿಲ್ಲ, ಮಗ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಫಿಲಂ ಚೇಂಬರ್ ಮತ್ತು ನಿರ್ಮಾಪಕರ ಸಂಘದಿಂದ ಬಂದ ಸಹಾಯಧನ ಆಸ್ಪತ್ರೆ ಖರ್ಚಿಗೆ ಖಾಲಿಯಾಗಿದೆ. ಈಗ ನಿರ್ಮಾಪಕ ಎಸ್.ಡಿ ಅಂಕಲಗಿ ಕನ್ನಡ ಚಲನಚಿತ್ರ ಅಕಾಡೆಮಿಯ ಸಹಾಯಾಸ್ತದ ನಿರೀಕ್ಷೆಯಲ್ಲಿದ್ದಾರೆ.

  • ಶಿವರಾಜ್ ಕುಮಾರ್ ಅಭಿಮಾನಿಗಳೆಂದು ಹೇಳ್ಕೊಂಡು ನಿರ್ದೇಶಕರಿಗೆ ಬೆದರಿಕೆ: ದೂರು ದಾಖಲು

    ಶಿವರಾಜ್ ಕುಮಾರ್ ಅಭಿಮಾನಿಗಳೆಂದು ಹೇಳ್ಕೊಂಡು ನಿರ್ದೇಶಕರಿಗೆ ಬೆದರಿಕೆ: ದೂರು ದಾಖಲು

    ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿಮಾನಿಗಳ ಹೆಸರಲ್ಲಿ ನಿರ್ದೇಶಕ ಎಎಂಆರ್ ರಮೇಶ್‍ಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಈ ಬಗ್ಗೆ ರಮೇಶ್ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಗೆ ದೂರು ನೀಡಿದ್ದಾರೆ.

    ಶಿವರಾಜ್ ಕುಮಾರ್ ಅಭಿಮಾನಿಗಳು ಅಂತಾ ಹೇಳಿಕೊಂಡು ದೂರವಾಣಿ ಮತ್ತು ವಾಟ್ಸಪ್ ಮೂಲಕ ಬೆದರಿಕೆಗಳು ಬರುತ್ತಿವೆ. ಈ ಬೆದರಿಕೆಗಳು ಲೀಡರ್ ಟೈಟಲ್ ವಿವಾದದ ನಂತರ ಬರುತ್ತಿವೆ. ಅಲ್ಲದೇ ವಾಟ್ಸಪ್ ಗ್ರೂಪ್ ಮಾಡಿ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದಾರೆ. ಈ ಬಗ್ಗೆ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿತ್ತು. ಆದ್ರೆ ಕ್ರಮ ಕೈಗೊಳ್ಳಲು ಚಲನಚಿತ್ರ ವಾಣಿಜ್ಯ ಮಂಡಳಿ ಹಿಂದೇಟು ಹಾಕುತ್ತಿದೆ ಅಂತಾ ದೂರಿನಲ್ಲಿ ಹೇಳಿದ್ದಾರೆ.

    ಇಂತಹವರ ಬಗ್ಗೆ ಕ್ರಮಕೈಗೊಂಡು ರಕ್ಷಣೆ ನೀಡುವಂತೆ ಮನವಿ ಮಾಡಿದ ನಿರ್ದೇಶಕ ರಮೇಶ್ ನಗರ ಪೊಲೀಸ್ ಆಯುಕ್ತರ ಜೊತೆ ಮನವಿ ಮಾಡಿದ್ದಾರೆ. ವಾಟ್ಸಪ್ ಮಾಡಿದ ಗ್ರೂಪಲ್ಲಿ ಶಿವಣ್ಣ ಫೋಟೋ ಡಿಪಿ ಹಾಕಿಕೊಂಡು ಕಿಡಿಕೇಡಿಗಳು ಬೆದರಿಕೆ ಹಾಕುತ್ತಿದ್ದಾರೆ ಅಂತಾ ಹೇಳಿದ್ದಾರೆ.

    ಇದನ್ನೂ ಓದಿ: ಲೀಡರ್ ಟೈಟಲ್ ಯಾರದ್ದು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿತು

  • ನಟ ಉಪೇಂದ್ರ ಅಣ್ಣನ ಮಗ ಸಿನಿಮಾ ರಂಗಕ್ಕೆ ಎಂಟ್ರಿ

    ನಟ ಉಪೇಂದ್ರ ಅಣ್ಣನ ಮಗ ಸಿನಿಮಾ ರಂಗಕ್ಕೆ ಎಂಟ್ರಿ

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣ ಸುರೇಂದ್ರರ ಮಗ ನಿರಂಜನ್ ಸಿನಿಮಾ ರಂಗಕ್ಕೆ ಪಾದಾರ್ಪಣೆಯಾಗುತ್ತಿದ್ದಾರೆ.

    ನಿರಂಜನ್ ಇದೀಗ ಓದು ಮುಗಿಸಿದ್ದು ಬಣ್ಣ ಹಚ್ಚೋಕೆ ತಯಾರಾಗಿದ್ದಾರೆ. ಇದೇ ತಿಂಗಳು 10 ರಂದು ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಇನ್ನೂ ಹೆಸರಿಡದ ಈ ಚಿತ್ರವನ್ನ ಹೊಸ ಪ್ರತಿಭೆ ಯೋಗಿ ದೇವಗಂಗೆ ನಿರ್ದೇಶಿಸುತ್ತಿದ್ದಾರೆ.

    ಈ ಚಿತ್ರದಲ್ಲಿ ನಿರಂಜನ್ ಚಿಕ್ಕಮ್ಮ ಪ್ರಿಯಾಂಕ ಉಪೇಂದ್ರ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗ್ಲೇ ನಿರಂಜನ್ ಫೋಟೋಶೂಟ್ ಮಾಡಲಾಗಿದೆ. ಇದೀಗ ನಿರಂಜನ್ ಎಂಟ್ರಿಯಾಗೋದರ ಮೂಲಕ ಉಪೇಂದ್ರ ಫ್ಯಾಮಿಲಿಯಲ್ಲಿ ಇನ್ನೊಬ್ಬ ಸದಸ್ಯರು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಂತಾಗಿದೆ.