Tag: film industry

  • ಅಭಿನಯಕ್ಕೆ ತಲೈವಾ ರಜನಿಕಾಂತ್ ಗುಡ್‌ಬೈ?

    ಅಭಿನಯಕ್ಕೆ ತಲೈವಾ ರಜನಿಕಾಂತ್ ಗುಡ್‌ಬೈ?

    ಜನಿಕಾಂತ್ (Rajanikanth) ಅಂದರೆ ಕ್ರೇಜ್ ಕಾ ಬಾಪ್. ಅವರ ಚಿತ್ರಗಳು ಮಾಸ್. ಟ್ರೆಂಡ್‌ಗೆ ತಕ್ಕಂತೆ ಸಿನಿಮಾ (Cinema) ಮಾಡಿ ಸೈ ಅನ್ನಿಸಿಕೊಂಡು ಅದನ್ನ ಗೆಲ್ಲಿಸುವ ತಾಕತ್ತು ಹೊಂದಿರೋ ವಿಶ್ವ ಮೆಚ್ಚಿದ ಸೂಪರ್ ಸ್ಟಾರ್. ಇದೀಗ ರಜನಿಕಾಂತ್ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

    ಸದ್ಯಕ್ಕೆ ಇವರ ಕೈಯಲ್ಲಿ ನೂರಾರು ಕೋಟಿಯ ನಾಲ್ಕು ಪ್ರಾಜೆಕ್ಟ್‌ಗಳಿವೆ. `ಜೈಲರ್ 2′ ಸಿನಿಮಾವನ್ನೂ ಪೂರ್ಣಗೊಳಿಸಿದ್ದಾರೆ. ಕಮಲ್ ಹಾಸನ್ ಜೊತೆಗಿನ ಕಾಂಬೋ ಚಿತ್ರ ಘೋಷಣೆಯಾಗಿದೆ. ಡೈರೆಕ್ಟರ್ ನೆಲ್ಸನ್ ಜೊತೆ ಇನ್ನೊಂದು ಚಿತ್ರವೂ ಫಿಕ್ಸ್ ಆಗಿದೆ. ಇಷ್ಟೇ ಅಲ್ಲ ನಿರ್ಮಾಪಕ ಸಿ ಸುಂದರ್ ಜೊತೆಯೂ ರಜನಿಕಾಂತ್ ಡೇಟ್ ಇದೆ. ಹೀಗೆ ಸದ್ಯಕ್ಕೆ ರಜನಿಕಾಂತ್ ಇನ್ನೂ 2027ರವರೆಗೆ ಶೂಟಿಂಗ್ ಮಾಡಿದರೂ ಮುಗಿಯದಷ್ಟು ಪ್ರಾಜೆಕ್ಟ್‌ಗಳನ್ನ ಇಟ್ಟುಕೊಂಡಿದ್ದಾರೆ. ಆದರೆ ಈ ಹೊತ್ತಲ್ಲೇ ರಜನಿಕಾಂತ್ ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿರುವುದರ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

    ಸೂಪರ್‌ಸ್ಟಾರ್ ಕುರಿತು ನಿವೃತ್ತಿ ಮಾತು ಕೇಳಿಬರ್ತಿರೋದು ಇದೇ ಮೊದಲಲ್ಲ. ರಜನಿಕಾಂತ್ ರಾಜಕೀಯ ಪ್ರವೇಶ ಮಾಡ್ತಾರೆ ಎಂಬ ವಿಚಾರ ಬಂದಾಗ ಚಿತ್ರರಂಗಕ್ಕೆ ಗುಡ್‌ಬೈ ಹೇಳುವ ನಿರ್ಧಾರ ಮಾಡಿದ್ದರು. ಆದರೆ ಅನಾರೋಗ್ಯ ಕಾರಣಕ್ಕೆ ರಾಜಕೀಯ ಪ್ರವೇಶಿಸದಿರಲು ನಿರ್ಧರಿಸಿ ಮತ್ತೆ ನಟನೆಯನ್ನು ಕಂಟಿನ್ಯೂ ಮಾಡಿದ್ರು. ಹಾಗಂತ ಈ ಬಾರಿ ವಿದಾಯಕ್ಕೆ ತೀರ್ಮಾನಿಸೋಕೆ ಕಾರಣ ರಾಜಕೀಯ ಪ್ರವೇಶವಂತೂ ಅಲ್ಲ. ಅದಕ್ಕೊಂದು ವಿಶೇಷ ಕಾರಣವಿದೆ.

    ರಜನಿಕಾಂತ್ ತಮ್ಮ ಮನೆಗೆ ಕಥೆ ಪಟ್ಟಿ ಹಿಡ್ಕೊಂಡು ಬರುವ ನಿರ್ದೇಶಕ ಹಾಗೂ ಚೆಕ್‌ಬುಕ್ ಹಿಡ್ಕೊಂಡು ಬರುವ ನಿರ್ಮಾಪಕರನ್ನ ವಾಪಸ್ ಕಳುಹಿಸುತ್ತಿದ್ದಾರಂತೆ. ಇದೇ ವಿಚಾರಕ್ಕೆ ರಜನಿಕಾಂತ್ ವಿದಾಯ ಹೇಳುವ ಸುದ್ದಿ ಗುಲ್ಲಾಗಿದೆ. ಆದರೆ ರಜನಿಕಾಂತ್ ಸಿನಿಮಾ ನಿರಾಕರಿಸುತ್ತಿರುದಕ್ಕೆ ಕಾರಣ ಮಾತ್ರ ಬೇರೆಯೇ ಇದೆ. ರಜನಿಕಾಂತ್ ವಯಸ್ಸು ಏರುತ್ತಿದೆ. 70 ವರ್ಷ ವಯಸ್ಸು ದಾಟಿದ ಬಳಿಕ ಸಹಜವಾಗೇ ದೇಹ ಕ್ವೀಣಿಸುತ್ತದೆ, ಸುಸ್ತೂ ಜಾಸ್ತಿ ಆಗುತ್ತದೆ. ಹಾಗಂತ ಇದುವೇ ವಿದಾಯಕ್ಕೆ ರೀಸನ್ ಅಲ್ವೇ ಅಲ್ಲ.

    ರಜನಿಕಾಂತ್ ಮನಸ್ಸು ಆಧ್ಯಾತ್ಮದತ್ತ ಹೆಚ್ಚಾಗಿ ವಾಲುತ್ತಿದೆ. ಸರಳವಾಗಿ ಬದುಕೋದನ್ನ ಜೀವನದಲ್ಲಿ ರೂಢಿಸಿಕೊಂಡು ಬಂದವರು ರಜನಿ. ಹೀಗಾಗಿ ವರ್ಷಕ್ಕೊಮ್ಮೆಯಾದ್ರೂ ಆಧ್ಯಾತ್ಮಿಕ ಪ್ರವಾಸ ಮಾಡ್ತಾರೆ. ಮನಸ್ಸಾದಾಗೆಲ್ಲ ಕಾರು ಹತ್ತಿ, ಹುಟ್ಟೂರು ಬೆಂಗಳೂರಿಗೆ ಬಂದು ಯಾರಿಗೂ ಗೊತ್ತಾಗದಂತೆ ಇದ್ದುಬಿಡ್ತಾರೆ. ಇಂಥಹ ರಜನಿಕಾಂತ್ ಎಲ್ಲಾ ಮೋಹಗಳನ್ನೂ ತ್ಯಜಿಸಿ ಜೀವಿಸುತ್ತಿರುವ ವ್ಯಕ್ತಿ. ವಯಸ್ಸು ಮಾಗಿದಂತೆ ಮನಸ್ಸೂ ಮಾಗುತ್ತಿದೆ. ಹೀಗಾಗಿ ಕೈಯಲ್ಲಿದ್ದ ಪ್ರಾಜೆಕ್ಟ್‌ಗಳನ್ನ ಮುಗಿಸಿಕೊಟ್ಟು, ಬಳಿಕ ನೋಡಿದ್ರಾಯ್ತು ಎಂದು ಯಾವುದೇ ಪ್ರಾಜೆಕ್ಟ್‌ಗಳನ್ನ ರಜನಿ ಒಪ್ಪಿಕೊಳ್ತಿಲ್ಲ. ಹೀಗಾಗಿ ರಜನಿಕಾಂತ್ ಚಿತ್ರರಂಗಕ್ಕೆ ವಿದಾಯದ ಸುದ್ದಿ ಚರ್ಚೆಯಾಗುತ್ತಿದೆ.

  • ಕಮಲ್ ಹಾಸನ್ ಕ್ಷಮೆ ಕೇಳದೇ ಹೋದ್ರೆ ಬ್ಯಾನ್ ಮಾಡಬೇಕು: ಶಿವರಾಜ್ ತಂಗಡಗಿ

    ಕಮಲ್ ಹಾಸನ್ ಕ್ಷಮೆ ಕೇಳದೇ ಹೋದ್ರೆ ಬ್ಯಾನ್ ಮಾಡಬೇಕು: ಶಿವರಾಜ್ ತಂಗಡಗಿ

    ಬೆಂಗಳೂರು: ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂಬ ನಟ ಕಮಲ್ ಹಾಸನ್ (Kamal Haasan) ಹೇಳಿಕೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಕಮಲ್ ಹಾಸನ್ ರಾಜ್ಯದ ಜನತೆ ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದ್ದಾರೆ.

    ಕಮಲ್ ಹಾಸನ್ ಹೇಳಿಕೆಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಮಲ್ ಹಾಸನ್ ಮಾತಾಡಿದ್ದು ತಪ್ಪು. ಕನ್ನಡ ನೆಲ, ಜಲದ ವಿಷಯ ಯಾರೇ ಮಾತನಾಡಿದರೂ ಸಹಿಸೋಕೆ ಆಗಲ್ಲ. ಕಮಲ್ ಹಾಸನ್ ತಕ್ಷಣ ರಾಜ್ಯದ ಜನರ ಕ್ಷಮೆ ಕೇಳಬೇಕು. ಕನ್ನಡಿಗರ ಕ್ಷಮೆ ಕೇಳಬೇಕು. ಕಮಲ್ ಹಾಸನ್ ಕ್ಷಮೆ ಕೇಳದೇ ಹೋದರೆ ನಾನೇ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಅವರಿಗೆ ಮತ್ತು ಅವರ ಚಿತ್ರಕ್ಕೆ ನಿಷೇಧ ಹಾಕಬೇಕು ಎಂದು ಆಗ್ರಹ ಮಾಡುತ್ತೇನೆ ಎಂದರು. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು 10 ಬಾರಿ ಇರಿದು ಕೊಂದ ಪತಿ

    ಕನ್ನಡದ ಬಗ್ಗೆ ಹಗುರವಾಗಿ ಮಾತಾಡೋದು ಬಿಟ್ಟು ಕ್ಷಮೆ ಕೇಳಬೇಕು. ಹೀಗೆ ಮಾತಾಡಿ ಗಾಯಕ ಸೋನು ನಿಗಮ್ ಕ್ಷಮೆ ಕೇಳಿದ್ದಾರೆ. ಅದರಂತೆ ಕಮಲ್ ಹಾಸನ್ ಕ್ಷಮೆ ಕೇಳಬೇಕು. ಅವರು ಕ್ಷಮೆ ಕೇಳದೇ ಹೋದರೇ ಅವರನ್ನ ಬ್ಯಾನ್ ಮಾಡಬೇಕು. ಕಮಲ್ ಹಾಸನ್ ಮಾತ್ರವಲ್ಲ, ಯಾರೇ ಹೀಗೆ ಕನ್ನಡದ ಬಗ್ಗೆ ಮಾತನಾಡಿದರೂ ಅವರನ್ನು ನಿಷೇಧ ಮಾಡಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಒತ್ತಾಯ ಮಾಡಿದರು. ಇದನ್ನೂ ಓದಿ: ಟೈಗರ್ ಶ್ರಾಫ್ ಜೊತೆ ಜಾನ್ವಿ ಕಪೂರ್ ಡ್ಯುಯೆಟ್

    ಕಮಲ್ ಹಾಸನ್ ಮಾತನಾಡುವಾಗ ನಟ ಶಿವರಾಜ್‌ಕುಮಾರ್ ಅಲ್ಲೇ ಇದ್ದರೂ ಅದನ್ನ ವಿರೋಧ ಮಾಡಲಿಲ್ಲ. ಶಿವರಾಜ್‌ಕುಮಾರ್ ಈಗಲಾದರೂ ಖಂಡಿಸಲಿ. ರಾಜ್‌ಕುಮಾರ್ ಮಗನಾಗಿ ಕಮಲ್ ಹಾಸನ್ ಹೇಳಿಕೆ ಖಂಡಿಸಬೇಕು. ಹೇಳಿಕೆ ಹೇಳಿದ ಕೂಡಲೇ ಖಂಡಿಸಬೇಕಿತ್ತು. ಈಗಲಾದರೂ ಶಿವರಾಜ್‌ಕುಮಾರ್ ಕಮಲ್ ಹಾಸನ್ ಹೇಳಿಕೆ ಖಂಡಿಸಲಿ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಕಾರವಾರ: ಕಡಲ ತೀರಕ್ಕೆ ತೇಲಿಬಂದ ಹಡಗಿನ ರಾಫ್ಟ್‌ – ಕೇರಳ ಕೊಚ್ಚಿಯಲ್ಲಿ ಮುಳುಗಿದ್ದ ಹಡಗಿನದ್ದಾ?

  • ಪಾಕ್‌ಗೆ ಬೆಂಬಲಿಸಿದ ಟರ್ಕಿಯಲ್ಲಿ ಸಿನಿಮಾ ಶೂಟಿಂಗ್ ಬೇಡ – ಭಾರತೀಯ ಚಿತ್ರರಂಗ ನಿರ್ಧಾರ

    ಪಾಕ್‌ಗೆ ಬೆಂಬಲಿಸಿದ ಟರ್ಕಿಯಲ್ಲಿ ಸಿನಿಮಾ ಶೂಟಿಂಗ್ ಬೇಡ – ಭಾರತೀಯ ಚಿತ್ರರಂಗ ನಿರ್ಧಾರ

    – ಸಿನಿಮಾಗಿಂತಲೂ ದೇಶವೇ ಮುಖ್ಯ ಅಂತ ಖಡಕ್ ಸಂದೇಶ ರವಾನೆ

    ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯಲ್ಲಿ ಉಗ್ರ ಪೋಷಕ ಪಾಕಿಸ್ತಾನಕ್ಕೆ (Pakistan) ಬೆಂಬಲಿಸಿದ ಟರ್ಕಿಗೆ (Turkey) ಭಾರತೀಯ ಚಿತ್ರರಂಗ ಬಿಸಿ ಮುಟ್ಟಿಸಲು ಮುಂದಾಗಿದೆ. ಟರ್ಕಿ ಮತ್ತು ಅಜರ್‌ಬೈಜಾನ್ ಕುತಂತ್ರದ ಬೆನ್ನಲ್ಲೇ ಸಿನಿಮಾ ರಂಗ ಮಹತ್ವದ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ:ಕುಂಭಮೇಳದ ನೀಲಿ ಕಂಗಳ ಚೆಲುವೆಗೆ ಬಿಗ್ ಚಾನ್ಸ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಪಾಕ್ ಬೆಂಬಲಕ್ಕೆ ನಿಂತಿರೋ ಟರ್ಕಿಗೆ ಭಾರತ ಪಾಠ ಕಲಿಸಲು ಮುಂದಾಗಿದೆ. ಟರ್ಕಿ ಮತ್ತು ಅಜರ್‌ಬೈಜಾನ್‌ನಲ್ಲಿ ಯಾವುದೇ ಸಿನಿಮಾದ ಶೂಟಿಂಗ್ ಮಾಡದಿರಲು ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್’ ಕಡೆಯಿಂದ ಭಾರತೀಯ ಚಿತ್ರರಂಗ ನಿರ್ಮಾಪಕರಿಗೆ ಪತ್ರದ ಮೂಲಕ ತಿಳಿಸಲಾಗಿದೆ. ಇದನ್ನೂ ಓದಿ:13 ವರ್ಷಗಳ ಬಳಿಕ ಟಾಲಿವುಡ್‌ಗೆ ಕನ್ನಡದ ‘ಸತ್ಯ ಇನ್ ಲವ್’ ನಟಿ

    ಈ ಎರಡು ದೇಶಗಳ ಜೊತೆ ನಂಟು ಇಟ್ಟುಕೊಳ್ಳದಂತೆ ನಿರ್ದೇಶಕ, ನಿರ್ಮಾಪಕರಿಗೆ ತಿಳಿಸಲಾಗಿದೆ. ಸಿನಿಮಾಗಿಂತಲೂ ದೇಶವೇ ಮುಖ್ಯ. ಟರ್ಕಿ ಜೊತೆ ನಂಟು ಇಟ್ಟುಕೊಂಡರೆ, ಇದರಿಂದ ಭಾರತದ ಭದ್ರತೆ ತೊಂದರೆ ಅಂತ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಚಿತ್ರರಂಗ ಕೂಡ ಸಾಥ್ ನೀಡಿದೆ.

    ಈಗಾಗಲೇ ಪಾಕ್ ಕಲಾವಿದರು, ತಂತ್ರಜ್ಞರು ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡದಂತೆ ಬ್ಯಾನ್ ಮಾಡಲಾಗಿದೆ. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

  • ಅಮೆರಿಕದ ಹೊರಗಡೆ ತಯಾರಾದ ಸಿನಿಮಾಗಳಿಗೆ 100% ಸುಂಕ – ಟ್ರಂಪ್ ಘೋಷಣೆ

    ಅಮೆರಿಕದ ಹೊರಗಡೆ ತಯಾರಾದ ಸಿನಿಮಾಗಳಿಗೆ 100% ಸುಂಕ – ಟ್ರಂಪ್ ಘೋಷಣೆ

    ವಾಷಿಂಗ್ಟನ್: ಅಮೆರಿಕದ (America) ಹೊರಗಡೆ ತಯಾರಾದ ಚಲನಚಿತ್ರಗಳ ಮೇಲೆ 100% ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ.

    ಚಲನಚಿತ್ರ ಉದ್ಯಮವನ್ನು ರಕ್ಷಿಸಲು ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಭರ್ಜರಿ ಪಾರ್ಟಿ ಮಾಡಿದ್ದ ಆರೋಪಿಗಳು!

    ಅಮೆರಿಕದ ಮಾರುಕಟ್ಟೆಯಲ್ಲಿ ವಿದೇಶಿ ಚಿತ್ರಗಳು ಕಡಿಮೆ ವೆಚ್ಚದಲ್ಲಿ ಸ್ಪರ್ಧಿಸುವುದರಿಂದ, ಇದು ಸ್ಥಳೀಯ ನಿರ್ಮಾಪಕರಿಗೆ ಸವಾಲಾಗಿ ಪರಿಣಮಿಸುತ್ತದೆ. ಇದರ ಜೊತೆಗೆ, ಸಾಂಸ್ಕೃತಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ಗುರುತಿನ ಮೇಲೆ ವಿದೇಶಿ ಚಿತ್ರಗಳ ಪ್ರಭಾವ ಹೆಚ್ಚಾಗುತ್ತಿದ್ದು, ಇದನ್ನು ಕಡಿಮೆ ಮಾಡುವ ಉದ್ದೇಶವನ್ನು ಈ ನೀತಿ ಹೊಂದಿದೆ ಎಂದು ತಿಳಿಸಿದರು.

    ಸದ್ಯ ಈ ಘೋಷಣೆಯು ಚಲನಚಿತ್ರ ಉದ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಶ್ವದ ಇತರ ದೇಶಗಳಿಂದ, ವಿಶೇಷವಾಗಿ ಭಾರತ, ಚೀನಾ ಮತ್ತು ಯುರೋಪ್‌ನಿಂದ ತಯಾರಾದ ಚಿತ್ರಗಳು ಅಮೆರಿಕದಲ್ಲಿ ಜನಪ್ರಿಯವಾಗಿವೆ. ಈ ಸುಂಕ ನೀತಿಯಿಂದಾಗಿ ವಿದೇಶಿ ಸಿನಿಮಾಗಳ ಬೆಲೆ ಗಣನೀಯವಾಗಿ ಹೆಚ್ಚಾಗಬಹುದು. ಇದರಿಂದ ಅವುಗಳ ಮಾರುಕಟ್ಟೆ ಸಾಮರ್ಥ್ಯ ಕಡಿಮೆಯಾಗುವ ಸಾಧ್ಯತೆಗಳಿವೆ.

    ಈ ಕ್ರಮವು ಅಂತಾರಾಷ್ಟ್ರೀಯ ವಾಣಿಜ್ಯ ಸಂಬಂಧಗಳ ಮೇಲೆಯೂ ಪರಿಣಾಮ ಬೀರಬಹುದು. ಭಾರತದ ಬಾಲಿವುಡ್ ಚಿತ್ರಗಳು ಅಮೆರಿಕದಲ್ಲಿ ಗಮನಾರ್ಹ ಪ್ರೇಕ್ಷಕರನ್ನು ಹೊಂದಿದ್ದು, ಈ ಸುಂಕವು ಭಾರತೀಯ ನಿರ್ಮಾಪಕರಿಗೆ ಹೊಸ ಸವಾಲುಗಳನ್ನು ಸೃಷ್ಟಿಸಬಹುದು. ಇದಕ್ಕೆ ಪ್ರತಿಯಾಗಿ ಕೆಲವು ದೇಶಗಳು ಅಮೆರಿಕದ ಚಿತ್ರಗಳಿಗೆ ತಮ್ಮದೇ ಆದ ಪ್ರತಿ ಸುಂಕಗಳನ್ನು ವಿಧಿಸುವ ಸಾಧ್ಯತೆಯಿದೆ.

    ಟ್ರಂಪ್ ಈ ನಿರ್ಧಾರದ ಕುರಿತು ಸ್ಪಷ್ಟನೆ ಬೇಕಾಗಿದ್ದು, ಈ ಸುಂಕ ಯಾವಾಗಿನಿಂದ ಜಾರಿಗೆ ಬರಲಿದೆ ಮತ್ತು ಯಾವ ರೀತಿಯ ಚಿತ್ರಗಳಿಗೆ ಇದು ಅನ್ವಯವಾಗಲಿದೆ ಎಂಬುದು ತಿಳಿದುಬಂದಿಲ್ಲ. ಇದಕ್ಕೂ ಮೊದಲು ಟ್ರಂಪ್ ಭಾರತ ಸೇರಿ ಹಲವು ದೇಶಗಳ ಮೇಲೆ ಸುಂಕ ಸಮರ ನಡೆಸಿದ್ದರು.ಇದನ್ನೂ ಓದಿ: ಲಾಯರ್ ಜಗದೀಶ್ ಸಾವಿಗೆ ಟ್ಟಿಸ್ಟ್ – ಪೊಲೀಸರ ತನಿಖೆ ವೇಳೆ ರಹಸ್ಯ ಬಯಲು

  • ಡಾ.ರಾಜ್ ಕುಮಾರ್ ಕನ್ನಡದ ಸಂಸ್ಕೃತಿಯ ಪ್ರತೀಕ – ಶಾಸಕ ರಿಜ್ವಾನ್ ಅರ್ಷದ್

    ಡಾ.ರಾಜ್ ಕುಮಾರ್ ಕನ್ನಡದ ಸಂಸ್ಕೃತಿಯ ಪ್ರತೀಕ – ಶಾಸಕ ರಿಜ್ವಾನ್ ಅರ್ಷದ್

    ಬೆಂಗಳೂರು: ನೂರಾರು ನಟರು, ಸೂಪರ್ ಸ್ಟಾರ್‌ಗಳು ಬಂದಿದ್ದಾರೆ ಆದರೆ ಡಾ.ರಾಜಕುಮಾರ್ ಏರಿದ ಎತ್ತರಕ್ಕೆ ಎಲ್ಲರೂ ಏರಲು ಕಷ್ಟಸಾಧ್ಯ. ಕನ್ನಡಿಗರಾಗಿ ಡಾ.ರಾಜ್‌ಕುಮಾರ್ (Dr. Rajkumar) ಜನಿಸಿದ್ದು ನಮ್ಮ ನಾಡಿನ ಹೆಮ್ಮೆ ಹಾಗೂ ಪುಣ್ಯ. ಅವರು ಕನ್ನಡದ ಸಂಸ್ಕೃತಿಯ ಪ್ರತೀಕವಾಗಿದ್ದರು ಎಂದು ಶಾಸಕ ರಿಜ್ವಾನ್ ಅರ್ಷದ್ (Rizwan Arshad) ಹೇಳಿದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸುಲೋಚನ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ರಾಜ್‌ಕುಮಾರ್ ಅವರ 97 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಇತಿಹಾಸದಲ್ಲಿ ಕೆಲವರು ಛಾಪು ಮೂಡಿಸಿರುವಂತೆ ಡಾ.ರಾಜ್ ಕುಮಾರ್ ಅವರು ಚಿತ್ರರಂದಲ್ಲಿ ಛಾಪು ಮೂಡಿಸಿದ್ದಾರೆ. ಜನಸಾಮಾನ್ಯರ ನೋವು ನಲಿವುಗಳಿಗೆ ಡಾ.ರಾಜ್ ಸ್ಪಂದಿಸಿದ ಮಾದರಿಯಲ್ಲಿ ಮತ್ತೊಂದು ಉದಾಹರಣೆ ಇಲ್ಲ ಎಂದರು. ಇದನ್ನೂ ಓದಿ: ಕಾಶ್ಮೀರದ ಉಗ್ರರ ದಾಳಿ ಹೊಣೆಯನ್ನ ಕೇಂದ್ರ ಸರ್ಕಾರವೇ ಹೊರಬೇಕು: ಹೆಚ್.ಸಿ ಬಾಲಕೃಷ್ಣ

    ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇಡೀ ಜಗತ್ತಿನಾದ್ಯಂತ ಗುರುತಿಸುವಂತೆ ಬೆಳೆದ ಪರಿ ಸಾಮಾನ್ಯವಾದುದಲ್ಲ. ಇಂದಿಗೂ ಅವರ ನಟನೆಗೆ, ಗಾಯನಕ್ಕೆ ಮನಸೋಲದವರೇ ಇಲ್ಲ. ನಾಡು, ನುಡಿ, ನೆಲ, ಜಲದ ವಿಷಯ ಬಂದಾಗ ಕನ್ನಡದ ಕಾರ್ಯಕರ್ತನಾಗಿ ಮೊದಲು ಧ್ವನಿ ಎತ್ತಿ, ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು ಎಂದು ಹೇಳಿದರು.

    ನಟರು ಬದುಕಿದ್ದಾಗ ಅಭಿಮಾನಿಗಳಿರುವುದು ಸಹಜ. ಮರಣದ ನಂತರವೂ ರಾಜ್‌ಕುಮಾರ್ ಅವರು ಅಪಾರ ಅಭಿಮಾನಿ ಬಳಗವನ್ನು ಉಳಿಸಿಕೊಂಡಿರುವುದು ನೋಡಿದರೆ ಅದೊಂದು ದೇವರು ಕೊಟ್ಟಂತಹ ವರವೇ ಸರಿ. ಯಾವುದೇ ಜಾತಿ, ಯಾವುದೇ ಧರ್ಮ ಎನ್ನುವುದು ಇಲ್ಲ. ಎಲ್ಲರೂ ಸಹ ರಾಜ್‌ಕುಮಾರ್ ಅವರ ಅಭಿಮಾನಿಗಳೇ. ಅವರು ಸರಳ, ಸಜ್ಜನಿಕೆ, ವಿನಯವಂತಿಕೆಯ ಆದರ್ಶ ವ್ಯಕ್ತಿಯಾಗಿದ್ದರು. ಅವರ ಆದರ್ಶ ವ್ಯಕ್ತಿತ್ವ ಮುಂದಿನ ಪೀಳಿಗೆಗೂ ಮಾದರಿಯಾಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ನವನಿರ್ದೇಶಕನ ಸಿನಿಮಾಗೆ ಕೈಜೋಡಿಸಿದ ಶಿವಣ್ಣ

    ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಮಾತನಾಡಿ, ರಾಜ್‌ಕುಮಾರ್ ಅವರು ತಮ್ಮ ಬಯಕೆಯಂತೆ ಸಾಕಷ್ಟು ಸದೃಢರಾಗಿದ್ದ ಸಮಯದಲ್ಲಿಯೇ ನಮ್ಮನ್ನೆಲ್ಲ ಅಗಲಿದರು. ನಾನಾ ಬಗೆಯ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ಅವರನ್ನು ವಯೋವೃದ್ಧರಾಗಿ, ಗಾಲಿ ಖುರ್ಚಿಯಲ್ಲಿ ನೋಡುವ ಪರಿಸ್ಥಿತಿ ಬರಬಾರದು ಎಂಬ ಆಸೆ ಅವರದಾಗಿತ್ತು. ತಮ್ಮ ಇಚ್ಛೆಯಂತೆ ಸಾಕಷ್ಟು ಆರೋಗ್ಯವಂತರಾಗಿದ್ದಾಗಲೇ ಅವರು ಭೌತಿಕವಾಗಿ ಅಗಲಿದರು. ಆದರೆ ಅವರ ವಿಚಾರಗಳು ಇಂದಿಗೂ ಜೀವಂತವಾಗಿವೆ ಎಂದರು. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯದಿಂದ ತಲಾ 1 ಲಕ್ಷ ಪರಿಹಾರ

    ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ ಮಾತನಾಡಿ, ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದಾಗಲೂ ಆ ಯಶಸ್ಸಿನ ಅಮಲನ್ನು ತಲೆಗೆ ಏರಿಸಿಕೊಳ್ಳದೇ ಅತ್ಯಂತ ಸರಳವಾಗಿ ಬದುಕಿದವರು ರಾಜ್‌ಕುಮಾರ್. ಬೇಡರ ಕಣ್ಣಪ್ಪ, ಕವಿರತ್ನ ಕಾಳಿದಾಸ, ಭಕ್ತ ಕುಂಬಾರ ಸೇರಿದಂತೆ ನಾವು ನೋಡಿದ ಅನೇಕ ಐತಿಹಾಸಿಕ, ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿ ಅಂತಹ ವ್ಯಕ್ತಿತ್ವಗಳನ್ನು ಕನ್ನಡಿಗರಿಗೆ ಕಟ್ಟಿಕೊಟ್ಟಿದ್ದು ಸಾಮಾನ್ಯ ಸಂಗತಿಯಲ್ಲ ಎಂದು ಅವರ ಸಾಧನೆಯನ್ನು ಹಾಡಿಹೊಗಳಿದರು.

    ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬಾರದಂತೆ ನಿಷೇಧ ತರುವಲ್ಲಿ ರಾಜ್‌ಕುಮಾರ್ ಅವರ ಪಾತ್ರ ಮಹತ್ವದ್ದಾಗಿತ್ತು. ಅವರ ಈ ನಿಲುವಿನಿಂದಾಗಿಯೇ ಕನ್ನಡ ಚಿತ್ರರಂಗ, ಚಿತ್ರೋದ್ಯಮ ಉಳಿದು ಅನೇಕ ಕಲಾವಿದರು, ತಂತ್ರಜ್ಞರು ಬೆಳೆಯಲು, ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು. ರಾಜ್‌ಕುಮಾರ್ ಇರದಿದ್ದರೆ ಚಿತ್ರೋದ್ಯಮ ಈ ಮಟ್ಟದಲ್ಲಿ ಬೆಳೆಯಲು ಸಾಧ್ಯವಿರುತ್ತಿರಲಿಲ್ಲ. ಅಂದು ರಾಜ್ಯದಲ್ಲಿ ಇದ್ದ 182 ಚಿತ್ರಮಂದಿಗಳು, ಅವರ ಪರಿಶ್ರಮದಿಂದಾಗಿ ಸುಮಾರು 1800 ಚಿತ್ರ ಮಂದಿರಗಳಾಗಿ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ನೀಡಿ, ಚಿತ್ರೋದ್ಯಮ ಲಾಭದಾಯಕವಾಗಿ ಬೆಳೆಯುವಂತಾಯಿತು. ಸಣ್ಣ ಸಣ್ಣ ಹಳ್ಳಿಗಳಲ್ಲಿ ಟೆಂಟ್‌ಗಳು ತಲೆ ಎತ್ತಿದವು ಎಂದರು. ಇದನ್ನೂ ಓದಿ: ‘ರಾಮಾಯಣ’ ಚಿತ್ರ ಕೈಬಿಟ್ಟಿದ್ಯಾಕೆ ಶ್ರೀನಿಧಿ ಶೆಟ್ಟಿ?- ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ‘ಕೆಜಿಎಫ್ 2’ ನಟಿ

    ಇಂದು ಉತ್ತಮ ಚಿತ್ರಗಳ ಕೊರತೆಯಿಂದಾಗಿ ಚಿತ್ರಮಂದಿರಗಳು ಮುಚ್ಚುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಚಿತ್ರೋದ್ಯಮದ ಭವಿಷ್ಯ ಆತಂಕ ಹುಟ್ಟಿಸುತ್ತದೆ. ರಾಜ್ ಅಭಿನಯದ ಚಿತ್ರಗಳು ಕನ್ನಡಿಗರನ್ನಷ್ಟೇ ಅಲ್ಲಾ, ಎಲ್ಲಾ ಭಾರತೀಯರನ್ನು ಸೆಳೆದವು. ಶಂಕರ್ ಗುರು ಸೇರಿ ಅನೇಕ ಚಿತ್ರಗಳು ಇತರೆ ಭಾಷೆಗಳಿಗೆ ರಿಮೇಕ್ ಆಗಿ ತಲುಪಿವೆ. ಪ್ರಾರಂಭದಿಂದ ಹಿಡಿದು ಕೊನೆಯವರೆಗೂ ಅವರು ನಟಿಸಿದ ಎಲ್ಲಾ 205 ಚಿತ್ರಗಳು ‘ಯು’ ಸರ್ಟಿಫಿಕೇಟ್ ಪಡೆದದ್ದು ಈಗ ಇತಿಹಾಸ. ಅವರ ಸಮಕಾಲೀನರಾಗಿ ನಾವೆಲ್ಲಾ ಜೀವಿಸಿದ್ದು ಹೆಮ್ಮೆ ಹಾಗೂ ಸಾರ್ಥಕ ಸಂಗತಿ ಎಂದರು.

    ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಸಾಧು ಕೋಕಿಲ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ, ನೆಲ-ಜಲಕ್ಕಾಗಿ ದುಡಿದ ಮೇರು ಚೇತನ ಡಾ.ರಾಜ್‌ಕುಮಾರ್ ಆಗಿದ್ದರು. ಅವರ ಬೆನ್ನ ಹಿಂದಿನ ಶಕ್ತಿಯಾಗಿ ಅವರ ಸಹೋದರ ಎಸ್.ಪಿ.ವರದರಾಜ್ ನಿರ್ವಹಿಸಿದ ಕಾರ್ಯವೂ ಸ್ಮರಣೀಯ ಎಂದರು. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ದಿನವೇ ಗೌತಮ್‌ ಗಂಭೀರ್‌ಗೆ ಜೀವ ಬೆದರಿಕೆ

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಮಾತನಾಡಿ, ಡಾ.ರಾಜ್, ಅಮಿತಾಬ್ ಬಚ್ಚನ್, ಶಿವಾಜಿ ಗಣೇಶನ್ ಮೊದಲಾದ ಹಿರಿಯ ನಟರು ಪ್ರೇಕ್ಷಕರೊಂದಿಗೆ ನೇರ ಸಂಬಂಧ, ಸಂಪರ್ಕ ಸಾಧಿಸಿಕೊಳ್ಳುತ್ತಿದ್ದರು. ಆ ಕಾರಣಕ್ಕಾಗಿ ದೊಡ್ಡ ಹೆಸರು, ಜನಪ್ರಿಯತೆ ಗಳಿಸಲು ಸಾಧ್ಯವಾಯಿತು. ಮರಾಠಿ ಮಾಧ್ಯಮದಲ್ಲಿ ಸಾಂಪ್ರದಾಯಿಕ ಶಿಕ್ಷಣ ಪಡೆದ ತಾವು ಕರ್ನಾಟಕ ಕೇಡರ್‌ಗೆ ಐಪಿಎಸ್ ಅಧಿಕಾರಿಯಾಗಿ ಬಂದಾಗ ಕನ್ನಡ ಕಲಿಯಲು ಡಾ.ರಾಜ್‌ಕುಮಾರ್ ಚಲನಚಿತ್ರಗಳೇ ಗುರುವಾದವು. ಡಾ.ರಾಜ್ ಸಂಭಾಷಣೆಗಳೇ ಸ್ಫೂರ್ತಿ, ಪ್ರೇರಣೆಯಾದವು ಎಂದರು.

    ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ ಮಾತನಾಡಿ, 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ರಾಜ್‌ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ಮಾಡಿದರು. ಅಂದಿನಿಂದ ರಾಜ್‌ಕುಮಾರ್ ಜನ್ಮದಿನಾಚರಣೆಯನ್ನು ರಾಜ್ಯಾದ್ಯಂತ ಸರ್ಕಾರಿ ಕಾರ್ಯಕ್ರಮವಾಗಿ ಪ್ರತಿ ಜಿಲ್ಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: Pahalgam Terrorist Attack | ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಭರತ್ ಭೂಷಣ್ ಅಂತ್ಯಕ್ರಿಯೆ

    ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೆಹಬೂಬ್ ಪಾಷಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ರಾಮಚಂದ್ರ ಹಡಪದ, ಸ್ಪರ್ಶ ಹಾಗೂ ತಂಡದವರಿಂದ ಡಾ.ರಾಜ್‌ಕುಮಾರ್ ಅಭಿನಯದ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು.

  • ಸಿನಿಮಾ ಇಲ್ಲದೇ ಬದುಕೋ ಶಕ್ತಿ ನಮ್ಗೆ ಇದೆ: ಡಿ.ಕೆ ಶಿವಕುಮಾರ್

    ಸಿನಿಮಾ ಇಲ್ಲದೇ ಬದುಕೋ ಶಕ್ತಿ ನಮ್ಗೆ ಇದೆ: ಡಿ.ಕೆ ಶಿವಕುಮಾರ್

    ಬೆಂಗಳೂರು: ಸಿನಿಮಾ ಇಲ್ಲದೇ ಬದುಕುವ ಶಕ್ತಿ ನಮಗೆ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಹೇಳಿದರು.

    `ನಟ್ಟು, ಬೋಲ್ಟು ಟೈಟು’ ಹೇಳಿಕೆಗೆ ಚಿತ್ರರಂಗ ಟೀಕೆ ಮಾಡುತ್ತಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಅವರು ಟೀಕೆ ಮಾಡಲಿ ಅಂತಾನೇ ಹೇಳುತ್ತಿದ್ದೇನೆ. ಅವರಿಗೆಲ್ಲಾ ಎಷ್ಟು ಸಹಾಯ ಮಾಡಿದ್ದೇನೆ ಎಂದು ನನಗೂ ಗೊತ್ತಿದೆ, ಸಹಾಯ ಮಾಡಿಸಿಕೊಂಡವರಿಗೂ ಗೊತ್ತಿದೆ ಎಂದರು. ಇದನ್ನೂ ಓದಿ: ವಿಧಾನಸಭೆಯೊಳಗೆ ಪಾನ್ ಮಸಾಲ ಅಗಿದು, ಉಗಿದ ಶಾಸಕ – ಸ್ವಚ್ಛಗೊಳಿಸಿದ ಸ್ಪೀಕರ್‌

    ಇದು ರಾಜ್ಯದ ಹಣ, ನೆಲ, ಜಲ, ನಿಮ್ಮ ಭಾಷೆ. ಈಗ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಮಾಡಿರುವುದು ಅವರ ಚಿತ್ರ ಬೆಳೆಯಲಿ ಎಂದು. ಅವರ ಚಿತ್ರಗಳಿಗೆ ಪ್ರಚಾರ ಅವ್ರು ಮಾಡದೇ ನಾವು ಬೆಳಗ್ಗೆ ಸಂಜೆ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ʻಕೈʼ ಕಾರ್ಯಕರ್ತೆ ಹಿಮಾನಿ ಹತ್ಯೆ ಕೇಸ್‌ – ಮೃತದೇಹ ಸೂಟ್‌ಕೇಸ್‌ನಲ್ಲಿ ಹಾಕಿ ಆರೋಪಿ ಎಳೆದೊಯ್ಯುವ ಸಿಸಿಟಿವಿ ದೃಶ್ಯ ಪತ್ತೆ

    ನಾಗಾಭರಣ ಅವರನ್ನು ಆಹ್ವಾನ ಮಾಡದೇ ಇರುವ ಬಗ್ಗೆ ಪ್ರತಿಕ್ರಿಯಿಸಿ, ನಾಗಾಭರಣ ಅವರಿಗೆ ಆಮಂತ್ರಣ ಕೊಡದೇ ಇರಬಹುದು. ಇದರಲ್ಲಿ ಇಲಾಖೆಯ ತಪ್ಪಿದೆಯೋ ಗೊತ್ತಿಲ್ಲ. ಆದರೆ ಕಾರ್ಯಕ್ರಮ ಅವರದ್ದು. ನನಗೆ ಗೊತ್ತು ಅವರು ಟೀಕೆ ಮಾಡುತ್ತಾರೆ ಎಂದು. ಅವರು ಟೀಕೆ ಮಾಡಿದರೂ ನನಗೇನೂ ಬೇಜಾರಿಲ್ಲ. ನಾವು ತಪ್ಪು ಮಾಡಿದ್ದರೆ ನಾವು ಸರಿ ಮಾಡಿಕೊಳ್ಳುತ್ತೇವೆ. ಅವ್ರು ತಪ್ಪು ಮಾಡಿದ್ರೆ ಅವ್ರು ಸರಿ ಮಾಡಿಕೊಳ್ಳಲಿ ಎಂದು ಹೇಳಿದರು. ಇದನ್ನೂ ಓದಿ: PUBLiC TV Impact | ಸಿಎಂ ಮನೆ ಬಳಿಯಿದ್ದ ವ್ಯಾಪಾರ ರಹಿತ ವಲಯ ಬೋರ್ಡ್ ತೆಗೆದ ಪಾಲಿಕೆ

    ಫಿಲಂ ಇಲ್ಲದೇ ಬದುಕುವ ಶಕ್ತಿ ನಮಗೆ ಇದೆ. ಆದರೆ ಅವರಿಗೆ ಫಿಲಂ ಪ್ರಮೋಷನ್‌ಗೆ ಜನರೂ ಬೇಕು, ಸರ್ಕಾರವೂ ಬೇಕು ಎಂದು ಹೇಳಿದರು. ಇದನ್ನೂ ಓದಿ: ವಿಜಯಪುರ ಕಾನ್ಸ್‌ಟೇಬಲ್‌ ಭಾವುಕ ಪೋಸ್ಟ್‌ – ಆತನಿಂದ ರಜೆಗೆ ಯಾವ್ದೇ ಮನವಿ ಬಂದಿಲ್ಲ: ಎಸ್ಪಿ ಸ್ಪಷ್ಟನೆ

  • ನ್ಯಾಯಮೂರ್ತಿ ಹೇಮಾ ಸಮಿತಿ ವರದಿ: ಕೇರಳ ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ

    ನ್ಯಾಯಮೂರ್ತಿ ಹೇಮಾ ಸಮಿತಿ ವರದಿ: ಕೇರಳ ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ

    ಲಯಾಳಂ (Malayalam) ಸಿನಿಮಾ ರಂಗದಲ್ಲಿ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಕೇರಳ ಸರಕಾರ, ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮಹಿಳಾ ಲೈಂಗಿಕ ದೌರ್ಜನ್ಯದ ಕುರಿತಂತೆ ವರದಿ ನೀಡಲು ನ್ಯಾಯಮೂರ್ತಿ ಕೆ ಹೇಮಾ ಸಮಿತಿಯನ್ನು (Hema Report) ರಚಿಸಿತ್ತು. ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಈಗ ಆರ್ಟಿಐ ಮೂಲಕ ವರದಿಯು ಬಹಿರಂಗಗೊಂಡಿದೆ. ವರದಿಯಲ್ಲಿ ಉಲ್ಲೇಖವಾಗಿರೋ ಅಂಶಗಳು ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ.

    ಮಲಯಾಳಂ ಸಿನಿಮಾ ರಂಗ (Film Industry) ಕೆಲವು ಪುರುಷ ಹಿಡಿತದಲ್ಲಿದ್ದು, ಅವರು ಹೇಳಿದಂತೆ ಕೇಳದೇ ಇದ್ದರೆ, ಯಾವ ನಟಿಯರಿಗೂ ಅಲ್ಲಿ ಅವಕಾಶ ಸಿಗುವುದಿಲ್ಲ. ಮಹಿಳೆಯರು ಚಿತ್ರೋದ್ಯಮದಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕು, ಇಲ್ಲ ಚಿತ್ರೋದ್ಯಮವನ್ನು ತೊರೆಯಬೇಕು ಅನ್ನು ಅಂಶಗಳನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಚಿತ್ರೋದ್ಯಮದಲ್ಲಿ ಮಾಫಿಯಾ ಎಂಟ್ರಿ ಕೊಟ್ಟಿದೆ ಅನ್ನೋ ಅಂಶವೂ ಸೇರ್ಪಡೆಯಾಗಿದೆ.  ವರದಿಯ ಅಧ್ಯಯನದ ಸಂದರ್ಭದಲ್ಲಿ ಮಲಯಾಳಂ ಚಿತ್ರೋದ್ಯಮವು ಕೆಲ ನಿರ್ಮಾಪಕರ, ನಿರ್ದೇಶಕರ ಹಾಗೂ ನಟರ ಹಿಡಿತದಲ್ಲಿರುವುದು ಕಂಡು ಬಂದಿದೆ. ಇದಿಷ್ಟೇ ಜನರು ಮಲಯಾಳಂ ಚಿತ್ರೋದ್ಯಮವನ್ನ ನಿಯಂತ್ರಿಸುತ್ತಿದ್ದಾರೆ. ಈ ಉದ್ಯಮವು ಅಪರಾಧಿಗಳ ಮತ್ತು ಸ್ತ್ರೀ ದ್ವೇಷಿಗಳಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು  ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

    ಮಹಿಳೆಯರು ಚಿತ್ರೋದ್ಯಮಕ್ಕೆ ಹಣ ಮಾಡಲು ಬರುತ್ತಿದ್ದಾರೆ. ಹಾಗಾಗಿ ಅವರು ಎಲ್ಲದಕ್ಕೂ ರೆಡಿ ಆಗಿರುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದು ನಿಜವಾದದ್ದು ಅಲ್ಲ. ಕಲೆ ಮತ್ತು ನಟನೆಯ ಮೇಲಿನ ಆಸಕ್ತಿ ಕಾರಣದಿಂದಾಗಿ ಮಹಿಳೆಯರು ಸಿನಮಾ ರಂಗಕ್ಕೆ ಬರುತ್ತಿದ್ದಾರೆ. ಕೆಲವರು ಅವಕಾಶ ಪಡೆಯಲು ಅಡ್ಡದಾರಿಯನ್ನೂ ಹಿಡಿದಿದ್ದಾರೆ ಎಂದಿದೆ ವರದಿ. ಇದರ ಜೊತೆಗೆ ತಮ್ಮ ನಿಯಮಗಳಿಗೆ ಒಪ್ಪುವಂಥ ಮಹಿಳೆಯರ ಗುಂಪು ಕೂಡ ಅಲ್ಲಿ ರಚನೆಯಾಗಿದ್ದು, ಅವರನ್ನು ಕೋಡ್‍್ ಹೆಸರುಗಳಿಂದ ಉಲ್ಲೇಖಿಸಲಾಗುತ್ತದೆ. ಎಷ್ಟೋ ಮಹಿಳಯರು ಪಾತ್ರಗಳಿಗಾಗಿ ಈ ರೀತಿ ಗುಂಪಿಗೆ ಸೇರಿದ್ದಾರೆ ಅನ್ನೋ ಆತಂಕಕಾರಿ ಅಂಶ ಕೂಡ ವರದಿಯಲ್ಲಿದೆ. ನಟಿಯೊಬ್ಬಳು ನಟನಿಂದ ದೌರ್ಜನ್ಯಕ್ಕೆ ಒಳಗಾಗಿ, ಮರುದಿನವೇ ಆಕೆ ಆತನೊಂದಿಗೆ ಪತ್ನಿಯಾಗಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆಘಾತದಲ್ಲಿದ್ದ ನಟಿಯು ಆ ದೃಶ್ಯವನ್ನು ಎದುರಿಸೋಕೆ ಆಗದೇ 17 ಟೇಕ್‍ ಗಳನ್ನು ತೆಗೆದುಕೊಂಡಳು. ಮತ್ತು ಅವನನ್ನು ಎದುರಿಸೋಕೆ ಆಗದೇ ದೃಶ್ಯ ಮುಗಿಸಲು ಹರಸಾಹಸ ಪಟ್ಟಳು. ಆ ದೃಶ್ಯದಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವಂಥ ದೃಶ್ಯವಿತ್ತು. ನಿಜಕ್ಕೂ ಅದು ಭಯಾನಕ ಆಗಿತ್ತು ಎಂದು ಆ ನಟಿ ಹೇಳಿಕೊಂಡಿದ್ದಾಳೆ.

    ಮಲಯಾಳಂ ಸಿನಿಮಾ ರಂಗದಲ್ಲಿ ನಟಿಯರ ಮನೆ ಬಾಗಿಲುಗಳು ಅಥವಾ ತಂಗಿದ ಸ್ಥಳಗಳ ಬಾಗಿಲುಗಳು ಬಡಿದುಕೊಳ್ಳುತ್ತಲೇ ಇರುತ್ತವೆ. ನಟಿಯರು ಸ್ಪಂದಿಸದೇ ಹೋದರೆ, ಬಾಗಿಲು ಬಡಿತ  ಇನ್ನೂ ಜೋರಾಗುತ್ತವೆ ಎಂದು ಮತ್ತೋರ್ವ ನಟಿಯೊಬ್ಬರು ಸಮಿತಿಯ ಮುಂದೆ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. ಜೀವಭಯ ಕಾರಣದಿಂದಾಗಿ ಪೊಲೀಸರನ್ನು ಸಂಪರ್ಕಿಸಲು ಸಾಕಷ್ಟು ಜನರು ಹಿಂದೇಟು ಹಾಕಿದ್ದಾರೆ ಅಂತಿದೆ ವರದಿ. ಧೈರ್ಯದಿಂದ ದೂರು ನೀಡಿದರೆ, ಆ ನಟಿಯ ಬದುಕೇ ಮುಗಿದು ಹೋಗುತ್ತದೆ ಅನ್ನೋ ಅಂಶ ಕೂಡ  ಉಲ್ಲೇಖವಾಗಿದೆ. ನಟಿಯ ವೃತ್ತಿ ಜೀವನ ಮುಗಿಸುವುದರ ಜೊತೆಗೆ ಆ ಕುಟುಂಬಗಳನ್ನು ಗುರಿಯಾಗಿಸಿ ನಿತ್ಯ ಬೆದರಿಕೆ ಹಾಕಲಾಗುತ್ತದೆ ಎನ್ನುವುದನ್ನೂ ವರದಿಯಲ್ಲಿ ಉಲ್ಲೇಖ  ಮಾಡಲಾಗಿದೆ. ಕುಟುಂಬಕ್ಕೆ ಬೆದರಿಕೆ ಜೊತೆಗೆ ಮತ್ತೆ ಅವಕಾಶ ಸಿಗುವುದಿಲ್ಲ ಅನ್ನೋ ಕಾರಣಕ್ಕೆ ಅನೇಕ ನಟಿಯರು ಮೌನಕ್ಕೆ ಜಾರಿದ್ದಾರಂತೆ.

    ಜ್ಯೂನಿಯರ್ ಆರ್ಟಿಸ್ಟ್ ಕುರಿತಂತೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಲೈಂಗಿಕ ಹೊಂದಾಣಿಕೆ ಇರದೇ ಹೋದರೆ ಜ್ಯೂನಿಯರ್ ಕಲಾವಿದರಿಗೆ ಅವಕಾಶವೇ ಸಿಗೋದಿಲ್ಲ ಅಂತಿದೆ ವರದಿ. ವಾಟ್ಸಪ್ ಗ್ರೂಪ್ ಗಳನ್ನು ಮಾಡಿಕೊಂಡು ಜ್ಯೂನಿಯರ್ ಆರ್ಟಿಸ್ಟ್ ಸಂಯೋಜಕರು ಮತ್ತು ಮ್ಯಾನೇಜರ್ ಗಳು ನಿತ್ಯ ಕಿರುಕುಳ ನೀಡುತ್ತಲೇ ಇರುತ್ತಾರೆ. ಕೆಲಸ ಬೇಕು ಅಂದರೆ ಸಹಕರಿಸಲೇಬೇಕು ಅಂತಿದೆ ವರದಿ.

  • ಲೈಂಗಿಕ ಕಿರುಕುಳದ ಬಗ್ಗೆ ಆರೋಪಿಸಿದ್ದ ಪೋರ್ನ್‌ಸ್ಟಾರ್‌ ಥೈನಾ ಶವವಾಗಿ ಪತ್ತೆ – ಆತ್ಮಕ್ಕೆ ಶಾಂತಿ ಕೋರುವಂತೆ ಆಪ್ತನಿಂದ ಮನವಿ

    ಲೈಂಗಿಕ ಕಿರುಕುಳದ ಬಗ್ಗೆ ಆರೋಪಿಸಿದ್ದ ಪೋರ್ನ್‌ಸ್ಟಾರ್‌ ಥೈನಾ ಶವವಾಗಿ ಪತ್ತೆ – ಆತ್ಮಕ್ಕೆ ಶಾಂತಿ ಕೋರುವಂತೆ ಆಪ್ತನಿಂದ ಮನವಿ

    ಲೈಮಾ: ವಯಸ್ಕರ ಚಲನಚಿತ್ರ ಉದ್ಯಮದಲ್ಲಿ ತಾನು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದ ಪೆರುವಿನ ನೀಲಿ ಚಿತ್ರತಾರೆ ಥೈನಾ ಫೀಲ್ಡ್ಸ್‌(24) (Thaina Fields) ಅದಾದ ಒಂದೇ ತಿಂಗಳಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

    ಆಕೆಯ ಆಪ್ತ ಸ್ನೇಹಿತ ಅಲೆಜಾಂಡ್ರಾ ಸ್ವೀಟ್ (Alejandra Sweet) ಅವರು ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನನ್ನ ಸ್ನೇಹಿತೆಯ ಸಾವಿನಿಂದ ದುಃಖಿತನಾಗಿದ್ದೇನೆ, ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಆಕೆಯನ್ನು ಪ್ರೀತಿಸುವವರೆಲ್ಲರೂ ಅವಳ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೌನವಾಗಿರಲು ಸಾಧ್ಯವಿಲ್ಲ, ರೂಪಾ ಕ್ಷಮೆ ಕೇಳಬೇಕು- ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಸಿಂಧೂರಿ ಬಿಗಿಪಟ್ಟು

    ಫೀಲ್ಡ್ ನೊಂದಿಗೆ ಕೆಲಸ ಮಾಡಿದ ಉತ್ಪಾದನಾ ಕಂಪನಿಗಳಲ್ಲಿ ಒಂದಾದ ಮಿಲ್ಕಿ ಪೆರು, ಥೈನಾ ಫೀಲ್ಡ್ಸ್‌ಗೆ ಸಂತಾಪ ಸೂಚಿಸಿದೆ. ವಯಸ್ಕ ಉದ್ಯಮದಲ್ಲಿ (Film Industry) ತಾನು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಥೈನಾ ಫೀಲ್ಡ್ಸ್‌ ಇತ್ತೀಚೆಗೆ ಹೇಳಿಕೊಂಡಿದ್ದಳು. ಅಡಲ್ಟ್ಸ್‌ ಕಂಟೆಂಟ್‌ನಲ್ಲಿ ನಟಿಸಲು ಪ್ರಾರಂಭಿಸಿದ ನಂತರ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೆ. ತನ್ನನ್ನು ನೇಮಿಸಿಕೊಂಡವರು ತಮಗೆ ಬೇಕಾದುದ್ದನ್ನು ಮಾಡಬೇಕು ಎಂದು ಬಯಸುತ್ತಾರೆ. ಮಹಿಳೆಯರು ವಯಸ್ಕರ ಚಿತ್ರಗಳಲ್ಲಿ ನಟಿಸುವುದು ತುಂಬಾ ಕಷ್ಟಕರವಾಗಿತ್ತು. ಈ ಆರೋಪಗಳನ್ನು ಮಾಡಿದ ಕೆಲ ತಿಂಗಳ ನಂತರ, ಥೈನಾ ಫೀಲ್ಡ್ಸ್‌ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿನ ಕಾರಣ ಇನ್ನಷ್ಟೇ ಹೊರಬರಬೇಕಿದೆ. ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯಿಂದ ಮತಾಂತರಕ್ಕೆ ಯತ್ನ ಆರೋಪ – ರೊಚ್ಚಿಗೆದ್ದ ಗ್ರಾಮಸ್ಥರು

    ಸದ್ಯ ಬೆಳಕಿಗೆ ಬಂದಿರುವ ಆಘಾತಕಾರಿ ಘಟನೆಯಲ್ಲಿ, ಪೆರುವಿಯನ್ ವಯಸ್ಕ ಚಲನಚಿತ್ರ ತಾರೆ- ಥೈನಾ ಫೀಲ್ಡ್ ಎಂಬ ಹೆಸರಿನಿಂದ ಕೆಲಸ ಮಾಡುತ್ತಿದ್ದು, ನಿಗೂಢ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ 24 ವರ್ಷದ ನಟಿಯ ದೇಹವು ಟ್ರುಜಿಲ್ಲೊದಲ್ಲಿನ ಅವರ ಮನೆಯಲ್ಲಿ ಪತ್ತೆಯಾಗಿದೆ. ಲೈಂಗಿಕ ಉದ್ಯಮದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಆರೋಪ ಮಾಡಿದ ಒಂದು ತಿಂಗಳ ನಂತರ ಈ ಘಟನೆ ವರದಿಯಾಗಿದೆ. ಆಕೆಯ ಉದ್ಯಮದಲ್ಲಿ ತೊಡಗಿದ್ದ ಮಿಲ್ಕಿ ಪೆರು ಕಂಪನಿಯೂ ನಟಿಯ ಸಾವಿಗೆ ಸಂತಾಪ ಸೂಚಿಸಿದೆ. ಇದನ್ನೂ ಓದಿ: ಹಾವೇರಿ ನೈತಿಕ ಪೊಲೀಸ್‍ಗಿರಿ ಪ್ರಕರಣದಲ್ಲಿ ಯಾರ ರಕ್ಷಣೆಯನ್ನೂ ಸರ್ಕಾರ ಮಾಡಲ್ಲ: ಪರಮೇಶ್ವರ್ 

  • ಮಲಯಾಳಂ ಚಿತ್ರೋದ್ಯಮದಲ್ಲಿ ಡ್ರಗ್ಸ್: ಸಿಡಿದೆದ್ದ ಪೊಲೀಸ್ ಕಮಿಷನರ್

    ಮಲಯಾಳಂ ಚಿತ್ರೋದ್ಯಮದಲ್ಲಿ ಡ್ರಗ್ಸ್: ಸಿಡಿದೆದ್ದ ಪೊಲೀಸ್ ಕಮಿಷನರ್

    ಲಯಾಳಂ ಚಿತ್ರೋದ್ಯಮದಲ್ಲಿ (Film Industry) ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಎನ್ನುವ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ವತಃ ಕೇರಳ (Kerala) ಪೊಲೀಸ್ ಕಮಿಷನರ್ ಅಖಾಡಕ್ಕೆ ಇಳಿದಿದ್ದಾರೆ. ಚಿತ್ರೋದ್ಯಮದ ಹಲವು ಗಣ್ಯರು ಡ್ರಗ್ಸ್ ಹಾವಳಿ ಕುರಿತಾಗಿ ಬಹಿರಂಗವಾಗಿಯೇ ಮಾತನಾಡಿದ್ದರು. ಅಲ್ಲದೇ, ಕೆಲ ಚಿತ್ರನಟರು ಡ್ರಗ್ಸ್ ಸೇವಿಸಿ ಸಿನಿಮಾಗಳಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಪೊಲೀಸ್ ಕಮಿಷನರ್ (Commissioner) ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.

    ಈ ಕುರಿತು ಮಾತನಾಡಿರುವ ಪೊಲೀಸ್ (Police) ಕಮಿಷನರ್ ಕೆ.ಸೇತುರಾಮನ್, ‘ಡ್ರಗ್ಸ್ (Drugs) ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಮುಲಾಜಿಗೆ ಒಳಗಾಗುವುದಿಲ್ಲ. ಈಗಾಗಲೇ ಪೊಲೀಸರು ತಮ್ಮ ಕೆಲಸವನ್ನು ಶುರು ಮಾಡಿದ್ದಾರೆ. ಸಣ್ಣದೊಂದು ಸುಳಿವು ಸಿಕ್ಕರೆ, ಅವರ ಮೇಲೆ ಅಗತ್ಯ ಕ್ರಮ ತಗೆದುಕೊಳ್ಳುತ್ತೇವೆ’ ಎಂದಿದ್ದಾರೆ. ಇದನ್ನೂ ಓದಿ:ತಾಯ್ತನದ ಫೋಟೋಶೂಟ್ ಹಂಚಿಕೊಂಡ ‘ರಾಧಾ ಕಲ್ಯಾಣ’ ನಟಿ ರಾಧಿಕಾ ರಾವ್

    ಡ್ರಗ್ಸ್ ಹಾವಳಿ ಕುರಿತು ಚಿತ್ರೋದ್ಯಮದ ಮಲಯಾಳಂ ಚಿತ್ರರಂಗ ಒಕ್ಕೂಟ ( ಅಮ್ಮಾ-Amma) ಸರಕಾರಕ್ಕೆ ಪತ್ರ ಬರೆದಿತ್ತು. ಅಲ್ಲದೇ, ಅನೇಕ ನಿರ್ಮಾಪಕರು ಒಕ್ಕೂಟಕ್ಕೆ ದೂರು ಕೂಡ ನೀಡಿದ್ದರು. ಹೀಗಾಗಿ ಪೊಲೀಸ್ ಇಲಾಖೆಗೆ ಒಕ್ಕೂಟ ಕದತಟ್ಟಿತ್ತು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಶೂಟಿಂಗ್ ನಡೆಯುವ ಸ್ಥಳಕ್ಕೆ ಮಫ್ತಿಯಲ್ಲಿ ಪೊಲೀಸರು ಬಂದು ಪತ್ತೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಚಿತ್ರರಂಗದವರನ್ನು ‘ಕೈ’ ಹಿಡಿಯದ ಮೈಸೂರು ಮತದಾರ!

    ಚಿತ್ರರಂಗದವರನ್ನು ‘ಕೈ’ ಹಿಡಿಯದ ಮೈಸೂರು ಮತದಾರ!

    ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚಲನಚಿತ್ರ ನಟರದ್ದೇ ಅಬ್ಬರ. ರೆಬೆಲ್ ಸ್ಟಾರ್ ಅಂಬರೀಶ್ (Ambareesh), ನಟಿ ರಮ್ಯಾ (Ramya), ಹಿರಿಯ ನಟಿ ಸುಮಲತಾ (Sumalatha), ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೀಗೆ ಸ್ಟಾರ್ ಗಳ ಚುನಾವಣಾ ಸ್ಪರ್ಧೆಯ ಪಟ್ಟಿ ದೊಡ್ಡದಿದೆ.

    ಸೋತು ಗೆದ್ದವರು ಬಳಷ್ಟು ಜನ ಮಂಡ್ಯ ಚುನಾವಣಾ (Mandya Election) ಅಖಾಡದಲ್ಲಿ ಸೋತಿದ್ದಾರೆ, ಗೆದ್ದಿದ್ದಾರೆ. ಆದರೆ ಅವಿಭಜಿತ ಮೈಸೂರು ಜಿಲ್ಲೆಯ ಮತದಾರ ಚಲನಚಿತ್ರ ರಂಗದವರಿಗೆ ಮನ್ನಣೆಯೇ ನೀಡಿಲ್ಲ. ಮೈಸೂರಿನವರಾದ ಖ್ಯಾತ ನಟ, ನಿರ್ಮಾಪಕ ಎಂ.ಪಿ. ಶಂಕರ್ (MP Shankar), ಮೂಲತಃ ಹುಣಸೂರಿನವರಾದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ (Dwarakeesh), ಕೊಳ್ಳೇಗಾಲದವರಾದ ನಟ, ನಿರ್ದೇಶಕ ಎಸ್. ಮಹೇಂದರ್ (S Mahender) ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಇದನ್ನೂ ಓದಿ: ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ – ಪ್ರತಾಪ್‌ಸಿಂಹ ವ್ಯಂಗ್ಯ

    ಎಂ.ಪಿ. ಶಂಕರ್ ಅವರು 1994 ರಲ್ಲಿ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಎಸ್. ಬಂಗಾರಪ್ಪ ಅವರ ಕೆಸಿಪಿ ಅಭ್ಯರ್ಥಿಯಾಗಿ ಕೇವಲ 785 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಆಗ ಗೆದ್ದಿದ್ದು ಬಿಜೆಪಿ ಎ. ರಾಮದಾಸ್ (A Ramdas). 2004 ರಲ್ಲಿ ದ್ವಾರಕೀಶ್ ಅವರು ಹುಣಸೂರಿನಿಂದ ವಿಜಯಸಂಕೇಶ್ವರರ ಕನ್ನಡನಾಡು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, 2264 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್‍ನ ಜಿ.ಟಿ. ದೇವೇಗೌಡ ಗೆದ್ದರು.

    2008 ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಎಸ್. ಮಹೇಂದರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 25,533 ಮತಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದರು. ಆದರೆ ಗೆದ್ದಿದ್ದು ಕಾಂಗ್ರೆಸ್. ಇದಾದ ನಂತರ ಮಹೇಂದರ್ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದರು. ಆದರೆ ಬಿಜೆಪಿಯಲ್ಲಿದ್ದಷ್ಟು ರಾಜಕೀಯವಾಗಿ ಸಕ್ರಿಯರಾಗಿಲ್ಲ.