Tag: Film Distributor khajapeer

  • ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ FIR

    ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ FIR

    ಚಿತ್ರದುರ್ಗ: ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

    khajapeer

    ಚಿತ್ರದುರ್ಗದ ಫಿಲಂ ವಿತರಕ ಖಾಜಾಪೀರ್ ಹಾಗೂ ನಿರ್ಮಾಪಕ ಸೂರಪ್ಪ ನಡುವೆ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕೋಟಿಗೊಬ್ಬ-3 ಚಿತ್ರ ವಿತರಣೆ ವಿಚಾರವಾಗಿ 2 ಕೋಟಿ 90 ಲಕ್ಷ ರೂಪಾಯಿಗಳಿಗೆ ಒಪ್ಪಂದವಾಗಿತ್ತು.  ಇದನ್ನೂ ಓದಿ: ನನ್ನ ಜೀವಕ್ಕೆ ಹಾನಿಯಾದ್ರೆ ನಿರ್ಮಾಪಕ ಸೂರಪ್ಪಬಾಬು ಹೊಣೆ: ಖಾಜಾಪೀರ್

    soorappa babu

    ಅದರಂತೆ 60 ಲಕ್ಷ ರೂಪಾಯಿ ಹಣವನ್ನು ಮುಂಗಡವಾಗಿ ಪಡೆದಿದ್ದಾರೆ. ಆದರೆ ಆ ಅಗ್ರಿಮೆಂಟ್‍ನಂತೆ ನಡೆದುಕೊಳ್ಳದ ಸೂರಪ್ಪಬಾಬು, ಬೇರೆಯವರಿಗೆ ಚಿತ್ರವನ್ನು ನೀಡಿದ್ದಾರೆ. ಹೀಗಾಗಿ ನಮ್ಮ ಹಣ ನೀಡುವಂತೆ ಕೇಳಿದರೆ ವಾಪಾಸ್ ಕೊಡದೇ ದೌರ್ಜನ್ಯದಿಂದ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ನಟ ಸುದೀಪ್ ಅವರ ಅಭಿಮಾನಿಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿ ದಮ್ಕಿ ಹಾಕುತ್ತಿದ್ದಾರೆ. ಅಲ್ಲದೇ ಪ್ರಾಣಬೆದರಿಕೆ ಹಾಕಿದ್ದಾರೆ. ಹೀಗಾಗಿ ನಾನು ಚಿತ್ರದುರ್ಗ ನಗರ ಠಾಣೆಗೆ ದೂರು ನೀಡಿದ್ದೂ, ನ್ಯಾಯ ಒದಗಿಸುವಂತೆ ಕೋರಿದ್ದೇನೆಂದು ಖಾಜಾಪೀರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಂದು ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

    ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಎಂ.ಬಿ.ಬಾಬು ವಿರುದ್ಧ ಜೀವ ಬೆದರಿಕೆ ಆರೋಪ ಕೇಳಿಬಂದಿದ್ದು, ಖಾಜಾಪೀರ್ ನೀಡಿರುವ ದೂರಿನ ಮೇರೆಗೆ ನಿರ್ಮಾಪಕ ಸೂರಪ್ಪಬಾಬು ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಐಪಿಸಿ ಕಲಂ 506 ಹಾಗೂ 504 ಅಡಿ ಎಫ್‍ಐಆರ್ ದಾಖಲಾಗಿದೆ. ಈ ವೇಳೆ ಖಾಜಾಪೀರ್ ಅವರೊಂದಿಗೆ ಕುಮಾರ್ ಫಿಲ್ಮಂ ನಿರ್ಮಾಪಕ ಕುಮಾರ್ ಇದ್ದರು.