Tag: film chember

  • ಸೆ.23ಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಗರಿಗೆದರಿದ ಚಟುವಟಿಕೆ

    ಸೆ.23ಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಗರಿಗೆದರಿದ ಚಟುವಟಿಕೆ

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Film Chember) ಚುನಾವಣೆ ಕೊನೆಗೂ ಘೋಷಣೆಯಾಗಿದೆ. ಇದೇ ಸೆಪ್ಟೆಂಬರ್ 23ರಂದು ಚುನಾವಣೆ (Election) ನಡೆಯುತ್ತಿದ್ದು, ಅಧ್ಯಕ್ಷ ಸ್ಥಾನಕ್ಕೆ ಎಂ.ಎನ್.ಸುರೇಶ್ ಸೇರಿದಂತೆ ಹಲವರು ಸ್ಪರ್ಧಿಸಿದ್ದಾರೆ. ನಿರ್ಮಾಪಕರ ವಲಯದಿಂದ ಅಧ್ಯಕ್ಷ ಸ್ಥಾನಕ್ಕಾಗಿ ಎ.ಗಣೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮೀಳಾ ಜೋಷಾಯ್ (Pramila Joshai) ಹಾಗೂ ನಿರ್ಮಾಪಕರ ವಲಯ ಸಮಿತಿಗೆ ಪ್ರಿಯಾ ಹಾಸನ್ (Priya Hassan) ಸ್ಪರ್ಧಿಸುತ್ತಿದ್ದಾರೆ.

    ಮೊನ್ನೆಯಷ್ಟೇ ಸಾ.ರಾ.ಗೋವಿಂದು ನೇತೃತ್ವದಲ್ಲಿ ವಾಣಿಜ್ಯ ಮಂಡಳಿಗೆ ಆಗಮಿಸಿದ್ದ ಎಂ.ಎನ್. ಸುರೇಶ್ ನಾಮಪತ್ರ ಸಲ್ಲಿಸಿದರು. ಅದಕ್ಕೂ ಮುನ್ನ ವಾಣಿಜ್ಯ ಮಂಡಳಿಯ ಮುಂದಿರುವ ಡಾ.ರಾಜಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು. ನಂತರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಇದನ್ನೂ ಓದಿ:ಪ್ಯಾರಿಸ್‌ನಲ್ಲಿ ಸ್ನೇಹಿತರ ಮದುವೆಯಲ್ಲಿ ಮಿಂಚಿದ ರಾಮ್ ಚರಣ್ ದಂಪತಿ

    ಜಂಭದ ಹುಡುಗಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಪಾದಾರ್ಪಣೆ ಮಾಡಿದ ನಟಿ ಪ್ರಿಯಾ ಹಾಸನ್, ನಂತರದ ದಿನಗಳಲ್ಲಿ ನಿರ್ಮಾಪಕಿ ಹಾಗೂ ನಿರ್ದೇಶಕಿ ಸಹ ಆದರು. ಈಗ ಪ್ರಿಯಾ ಹಾಸನ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಸದ್ಯದಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಯಲಿದ್ದು, ನಿರ್ಮಾಪಕಕರ ವಲಯ ಸಮಿತಿಗೆ ಪ್ರಿಯಾ ಹಾಸನ್ ಸ್ಪರ್ಧಿಸುತ್ತಿದ್ದಾರೆ.

    ಈಗಾಗಲೇ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಪ್ರಿಯಾ ಹಾಸನ್ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆಗೂ ಮುನ್ನ ಪ್ರಿಯಾ ಹಾಸನ್, ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮುಂತಾದ ಗಣ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ನಾಟಕ ಬಂದ್‍ಗೆ ಮತ್ತಷ್ಟು ಅಪಸ್ವರ – ಚಿತ್ರೋದ್ಯಮದ ನಡೆಗೆ ಸಾ.ರಾ.ಗೋವಿಂದು ಕಿಡಿ

    ಕರ್ನಾಟಕ ಬಂದ್‍ಗೆ ಮತ್ತಷ್ಟು ಅಪಸ್ವರ – ಚಿತ್ರೋದ್ಯಮದ ನಡೆಗೆ ಸಾ.ರಾ.ಗೋವಿಂದು ಕಿಡಿ

    ಬೆಂಗಳೂರು: ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಸಂಘಟನೆಗಳು ಏಕಾಏಕಿ ಕರೆ ಕೊಟ್ಟ ಕರ್ನಾಟಕ ಬಂದ್‍ಗೆ ಅಪಸ್ವರ ವ್ಯಕ್ತವಾಗುತ್ತಲೇ ಇದೆ. ಹತ್ತು ಹಲವು ಸಂಘಟನೆಗಳು ಬಂದ್ ಪರವಾಗಿಲ್ಲ. ಕೇವಲ ನೈತಿಕ ಬೆಂಬಲ ಕೊಡುತ್ತೇವೆ ಎನ್ನುತ್ತಿವೆ. ಈ ಸಾಲಿಗೆ ಈಗ ಚಿತ್ರೋದ್ಯಮ ಕೂಡ ಸೇರಿದೆ.

    ಮೊನ್ನೆ ಬಂದ್ ಘೋಷಣೆ ಮಾಡಿದ್ದ ಸಾರಾ ಗೋವಿಂದು, ಚಿತ್ರೋದ್ಯಮದ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದ್ದರು. ಆದರೆ ಈ ಘೋಷಣೆಗೆ ಮುನ್ನ, ಫಿಲಂ ಚೇಂಬರ್ ಜೊತೆಯಾಗಲಿ, ಚಿತ್ರೋದ್ಯಮದ ಗಣ್ಯರ ಜೊತೆ ಸಾರಾ ಗೋವಿಂದು ಚರ್ಚೆ ನಡೆಸಿರಲಿಲ್ಲ. ಈ ಬೆನ್ನಲ್ಲೇ ಇಂದು ಸಭೆ ಸೇರಿದ್ದ ಫಿಲ್ಮ್ ಚೇಂಬರ್ ಬಂದ್‍ನಲ್ಲಿ ಚಿತ್ರೋದ್ಯಮ ಭಾಗಿ ಆಗಲ್ಲ. ಆದರೆ ಬಂದ್‍ಗೆ ನೈತಿಕ ಬೆಂಬಲ ಇರಲಿದೆ. ಡಿ.31ರಂದು ಚಿತ್ರರಂಗದ ಎಲ್ಲಾ ಚಟುವಟಿಕೆ ನಡೆಯಲಿವೆ ಎಂದು ಘೋಷಿಸಿತು.

    ಚಿತ್ರರಂಗದ ಈ ನಿರ್ಧಾರಕ್ಕೆ ಸಾರಾ ಗೋವಿಂದು, ನೈತಿಕ ಬೆಂಬಲ ಅಲ್ಲ. ಕನ್ನಡಿಗರಾಗಿ ಬಂದ್‍ಗೆ ಬರೀ ನೈತಿಕ ಬೆಂಬಲ ಅಂತೀರಿ. ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಸ್ಲೋ ಪಾಯಿಸನ್: ಬಾಲಕೃಷ್ಣ ಕಿಡಿ

    ಬಂದ್‍ಗೆ ಚಿತ್ರೋದ್ಯಮ ಸಂಪೂರ್ಣ ಬೆಂಬಲ ನೀಡಬೇಕು ಎಂದು ಒತ್ತಾಯಿಸಿ ಫಿಲ್ಮ್ ಚೇಂಬರ್ ಮುಂದೆ ನಾಳೆ ಪ್ರತಿಭಟನೆ ನಡೆಸಲು ಕನ್ನಡ ಪರ ಸಂಘಟನೆಗಳು ತೀರ್ಮಾನಿಸಿವೆ.

    ಈ ಮಧ್ಯೆ ಮೈಸೂರಲ್ಲಿ ಮಾತನಾಡಿದ ನಟ ಶಿವಣ್ಣ, ಫಿಲಂ ಚೇಂಬರ್ ನಿರ್ಧಾರಕ್ಕೆ ನಾವು ಬದ್ಧ ಎಂದು ಘೋಷಿಸಿದ್ದಾರೆ. ಪರೋಕ್ಷವಾಗಿ ಬಂದ್‍ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಯಕರ್ನಾಟಕ ಸಂಘಟನೆ ಬಂದ್‍ಗೆ ನೀಡಿದ್ದ ಬೆಂಬಲ ಹಿಂಪಡೆದಿದೆ. ಈಗಾಗಲೇ, ಕರವೇ ನಾರಾಯಣಗೌಡ ಕೂಡ ಬಂದ್‍ಗೆ ಬೆಂಬಲ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಹೊಸವರ್ಷದಿಂದ ವಾಟರ್‌ ಟ್ಯಾಕ್ಸಿ ಸೇವೆ ಆರಂಭ – ದರ ಎಷ್ಟು?

  • ಕನ್ನಡ ಚಲನಚಿತ್ರ ಮಂಡಳಿಯಲ್ಲಿ ಇನ್ಮುಂದೆ ಸರ್ಕಾರದ ಆಡಳಿತ?

    ಕನ್ನಡ ಚಲನಚಿತ್ರ ಮಂಡಳಿಯಲ್ಲಿ ಇನ್ಮುಂದೆ ಸರ್ಕಾರದ ಆಡಳಿತ?

    ಬೆಂಗಳೂರು: ಫಿಲಂ ಚೇಂಬರ್‍ಗೆ ಸರ್ಕಾರದ ವತಿಯಿಂದ ಆಡಳಿತಾಧಿಕಾರಿಯನ್ನು ನೇಮಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಟಿ ಪ್ರಕಾಶ್ ಅವರು ಫಿಲಂ ಚೇಂಬರ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.

    ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದು ಅವರ ಅಧಿಕಾರಾವಧಿ ಮುಗಿದು 9 ತಿಂಗಳು ಕಳೆದರೂ ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೇ ನಡೆಯದಿರುವುದೇ ಪ್ರಮುಖ ಕಾರಣವಾಗಿದೆ.

    ಇದೀಗ ಸರ್ಕಾರ, ಚುನಾವಣೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಸೂಚಿಸಿ ಈಗಾಗಲೇ 2 ನೋಟಿಸ್ ಕಳುಹಿಸಿಕೊಟ್ಟಿದೆ. ಆದರೆ ಈ ಕುರಿತು ಫಿಲಂ ಚೇಂಬರ್‍ನಿಂದ ಯಾವುದೇ ಪ್ರತಿಕ್ರಿಯೇ ಬಾರದ ಹಿನ್ನೆಯಲ್ಲಿ ಸರ್ಕಾರದ ಆಡಳಿತ ಅಧಿಕಾರಿಯನ್ನು ನೇಮಕ ಮಾಡಲು ಮುಂದಾಗಿದೆ. ಈ ಕುರಿತು ನೋಟಿಸ್ ಕಳುಹಿಸಿಕೊಡಲಾಗಿದ್ದು 15 ದಿನಗಳ ಒಳಗೆ ಲಿಖಿತ ರೂಪದ ಉತ್ತರವನ್ನು ನೀಡಬೇಕು ಎಂದು ಸೂಚಿಸಿದೆ.