Tag: Film Chamber of Commerce

  • ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ: ಶಿವಣ್ಣ

    ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ: ಶಿವಣ್ಣ

    ಮೈಸೂರು: ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ನಟ ಶಿವರಾಜ್‍ಕುಮಾರ್ ತಿಳಿಸಿದರು.

    ಡಿ.31ರಂದು ನಡೆಯುವ ಬಂದ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಯಾವತ್ತಿದ್ದರೂ ಕನ್ನಡ ನೆಲ, ಜಲ, ಭಾಷೆಯ ರಕ್ಷಣೆ ಮಾಡಲು ಬದ್ಧರಾಗಿರುತ್ತೇವೆ. ಅದು ಅಲ್ಲದೇ ಈ ಕುರಿತು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದು ನಮಗೆ ಸಂತಸ ತಂದಿದೆ ಎಂದರು.

    ಚೇಂಬರ್ ಏನು ಹೇಳುತ್ತೆ ಅದೇ ರೀತಿ ನಾವು ನಡೆದುಕೊಳ್ಳುತ್ತೇವೆ. ನಾವು ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಡಿ.31 ಅಲ್ಲಿ ನಮ್ಮ ಕನ್ನಡದಲ್ಲಿ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಅದಕ್ಕೆ ನಮ್ಮ ಕನ್ನಡ ಸಿನಿಮಾಗಳಿಗೆ ಯಾವ ರೀತಿಯ ದ್ರೋಹ ಆಗಬಾರದು. ಈ ಒಂದು ಸಮಸ್ಯೆಯನ್ನು ನಾವು ಬಹಳ ಬುದ್ಧಿವಂತಿಕೆಯಿಂದ ಸರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ:  ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು: ಯಶ್

    ಈ ಕುರಿತು ಜವಾಬ್ದಾರಿಯನ್ನು ತೆಗೆದುಕೊಳ್ಳುವವರು ತುಂಬಾ ಜನ ಇದ್ದಾರೆ. ಈ ಕುರಿತು ಅವರು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಎಲ್ಲರಿಗೂ ಅವರ ಭಾಷೆ, ನಾಡಿನ ಮೇಲೆ ಪ್ರೀತಿ, ಗೌರವ ಇದ್ದೇ ಇರುತ್ತೆ. ನಾವೆಲ್ಲರೂ ಕನ್ನಡಿಗರು ಎಂದರು.

  • ಸ್ಪರ್ಧೆಯಲ್ಲಿ ನಾವು ಉಳಿಯುವುದು ಕಷ್ಟವಾಗಿದೆ : ಜಗ್ಗೇಶ್

    ಸ್ಪರ್ಧೆಯಲ್ಲಿ ನಾವು ಉಳಿಯುವುದು ಕಷ್ಟವಾಗಿದೆ : ಜಗ್ಗೇಶ್

    ಬೆಂಗಳೂರು: ಕನ್ನಡಿಗರ ಹೃದಯ ಊರ ಅಗಲ ಇದೆ. ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಇಂಥಹ ಸ್ಪರ್ಧೆಯಲ್ಲಿ ನಾವು ಉಳಿಯುವುದು ಕಷ್ಟವಾಗಿದೆ ಎಂದು ನವರಸನಾಯಕ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.

    ರಾಬರ್ಟ್ ರಿಲೀಸ್ ಸಮಸ್ಯೆ ಕುರಿತು ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ. ರಾಬರ್ಟ್ ನಿಸಿಮಾವನ್ನು ತೆಲುಗಿನಲ್ಲಿ ಬಿಡುಗಡೆಗೊಳಿಸಲು ಕೊಡದೆ ಇರುವುದಕ್ಕೆ ಕಾರಣವೇನು ಎಂದು ಟ್ವೀಟ್ ಮಾಡಿದ್ದಾರೆ.

    ಅಂದು ನಾನಾಡಿದ ಮಾತು ಕನ್ನಡಿಗರೆ ಸ್ವಾಭಿಮಾನಿಯಾಗಿ ಕನ್ನಡಕ್ಕೆ ಮೊದಲು ಕೈ ಎತ್ತಿ ನಿಮ್ಮ ಕೈ ಕಲ್ಪವೃಕ್ಷವಾಗುತ್ತದೆ ಎಂದು ನನ್ನ ಭಾವನೆಯಾಗಿತ್ತು. ಅರ್ಥವಾಗದೆ ಸಮಯಸಾಧಕರು ಜಾಗೃತರಾಗಿ ನನ್ನ ಸತ್ಯದ ಸೊಲ್ಲು ಅಡಗಿಸಲು ಅಪಪ್ರಚಾರ ತಂತ್ರರೂಪಿಸಿದರು. ಕೆಲವರು ನಂಬಿದರು ನನ್ನಪ್ರಾಮಾಣಿಕ ನುಡಿಗಳ ಸತ್ಯ ನಿಧಾನವಾಗಿ ಅರಿವಾಗುತ್ತದೆ. ದೌರ್ಭಾಗ್ಯ ಎಂದು ಟ್ವೀಟ್ ಮಾಡಿದ್ದಾರೆ. ಜೊತೆ ಅವರು ಈ ಹಿಂದೆ ಕಾರ್ಯಕ್ರಮದಲ್ಲಿ ಕನ್ನಡ ಅಭಿಮಾನದ ಕುರಿತಾಗಿ ಮಾತನಾಡಿರುವ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ಟ್ವಿಟ್ಟರ್ ವೀಡಿಯೋನಲ್ಲಿ ಏನಿದೆ?
    ನಮ್ಮಲ್ಲಿ ಕೆಲವು ನ್ಯೂನತೆಗಳಿವೆ ನಮಗೆ ಬಹುತೇಕ ಅಮ್ಮನಿಗಿಂತ ಪಕ್ಕದ ಮೆನೆಯವರು ಚೆನ್ನಾಗಿ ಕಾಣುತ್ತಾರೆ. ಇಂತಹ ಸ್ವಭಾವ ನಮ್ಮಲ್ಲಿದೆ ಏನು ಮಾಡಲು ಸಾಧ್ಯವಿಲ್ಲಿ, ನಾವು ಕೇಳಿಕೊಂಡು ಬಂದಿರುವ ದೌರ್ಭಾಗ್ಯವಾಗಿದೆ. ಬೇರೆ ಊರುಗಳಲ್ಲಿ ಅವರವರದ್ದೇ ಚಿತ್ರಗಳನ್ನು ನೋಡಿಕೊಳ್ಳುತ್ತಾರೆ. ಎಲ್ಲರೂ ನಮ್ಮಂತೆ ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ. ಅವರು ಅವರ ಜಾಗದಲ್ಲಿ ಬಹಳ ಸ್ವಾಭಿಮಾನವಾಗಿ ನಮ್ಮ ಚಿತ್ರಗಳನ್ನು ನಾವು ನೋಡಿಕೊಳ್ಳುತ್ತೇವೆ. ಬೇರೆ ಯಾವುದು ಬೇಡ ಎನ್ನುವ ನಿರ್ಧಾರವನ್ನು ಮಾಡಿರುತ್ತಾರೆ. ಅಷ್ಟೊಂದು ಸ್ವಾಭಿಮಾನವನ್ನು ತೋರಿಸುತ್ತಾರೆ. ನಮ್ಮ ಹಾರ್ಟ್ ದೊಡ್ಡದು, ಊರ ಅಗಲ ಇದೆ ಕನ್ನಡಿಗರ ಹೃದಯ ಹಾಗಾಗಿ ಎಲ್ಲಾ ಭಾಷೆಯ 600ಕ್ಕಿಂತ ಹೆಚ್ಚಿನ ಸಿನಿಮಾಗಳನ್ನು ನಮ್ಮವರು ನೋಡುತ್ತಾರೆ. ಹೀಗಾಗಿ ಇಂಥಹ ಸ್ಪರ್ಧೆಯಲ್ಲಿ ನಾವು ಉಳಿಯುವುದು ಕಷ್ಟವಾಗಿದೆ ಎಂದು ಹಿಂದೆ ಒಮ್ಮೆ ಹೇಳಿರುವ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.