Tag: Film Chamber

  • ಭರ್ಜರಿ ಬ್ಯಾಚುಲರ‍್ಸ್ ರಮೋಲಾ ವಿರುದ್ಧ ದೂರು

    ಭರ್ಜರಿ ಬ್ಯಾಚುಲರ‍್ಸ್ ರಮೋಲಾ ವಿರುದ್ಧ ದೂರು

    ಕಿರುತೆರೆ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ರಮೋಲಾ (Ramola) ವಿರುದ್ಧ ಫಿಲ್ಮ್ ಚೇಂಬರ್‌ಗೆ (Film Chamber) ದೂರು ನೀಡಿದೆ ಚಿತ್ರತಂಡ. ಭರ್ಜರಿ ಬ್ಯಾಚುಲರ್ಸ್‌ (Bharjari Bachelors) ರಿಯಾಲಿಟಿ ಶೋನಲ್ಲಿ ರಕ್ಷಕ್‌ಗೆ ಜೋಡಿಯಾಗಿದ್ದ ರಮೋಲಾ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ ರಿಚ್ಚಿ ಚಿತ್ರತಂಡ.

    ನಟಿ ರಮೋಲಾ ಅವರು `ರಿಚ್ಚಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಈಗ ಚಿತ್ರದ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕ ರಿಚ್ಚಿ ಅವರು ಈ ಬಗ್ಗೆ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದಾರೆ. ಸಿನಿಮಾದ ಪ್ರಮೋಷನ್‌ಗೆ ರಮೋಲಾ ಬರುತ್ತಿಲ್ಲ, ಅವರು ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಗಿಣಿ ಎಂಎಂಎಸ್-3ಗೆ ಮಿಲ್ಕಿ ಬ್ಯೂಟಿ ನಾಯಕಿ?

     

    ಅಂದಹಾಗೆ ರಿಚ್ಚಿ ಸಿನಿಮಾದಲ್ಲಿ ರಮೋಲಾ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಮೋಷನ್ಸ್ ಬನ್ನಿ ಎಂದರೆ ಬರುತ್ತಿಲ್ಲ ಎಂದು ನಿರ್ಮಾಪಕ ಹೇಮಂತ್ ರಿಚ್ಚಿ ಫಿಲ್ಮ್ ಚೇಂಬರ್‌ಗೆ ದೂರು ಕೊಟ್ಟಿದ್ದಾರೆ. ಕನ್ನಡತಿ ಧಾರಾವಾಹಿಯ ಪಾತ್ರದಿಂದ ಜನಪ್ರಿಯತೆ ಗಳಿಸಿರುವ ರಮೋಲಾ ರಿಚ್ಚಿ ಸಿನಿಮಾ ಶೂಟಿಂಗ್ ಬಳಿಕ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸಿನಿಮಾ ತಂಡ ಪ್ರಮೋಷನ್‌ಗೆ ಕರೆಯುತ್ತಿದೆ. ಆದರೆ  ಕರೆ ಸ್ವೀಕರಿಸದೇ ಚಿತ್ರತಂಡಕ್ಕೆ ಸಹಕಾರ ನೀಡ್ತಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಫಿಲ್ಮ್ ಚೇಂಬರ್‌ಗೆ ಇಡೀ ಚಿತ್ರತಂಡ ದೂರು ನೀಡಿದೆ.

  • ಡಿಕೆ ಬ್ರದರ್ಸ್ ಹೆಸ್ರಲ್ಲಿ ವಂಚನೆ ಕೇಸ್; ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ದ `ಬಂಗಾರಿ’ ಗೌಡ!

    ಡಿಕೆ ಬ್ರದರ್ಸ್ ಹೆಸ್ರಲ್ಲಿ ವಂಚನೆ ಕೇಸ್; ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ದ `ಬಂಗಾರಿ’ ಗೌಡ!

    ಬೆಂಗಳೂರು: ಡಿಕೆ ಬ್ರದರ್ಸ್ ಹೆಸರಿನಲ್ಲಿ ಕೋಟಿ ಕೋಟಿ ರೂ. ವಂಚನೆ ಮಾಡಿದ ಐಶ್ವರ್ಯ ಗೌಡ (Aishwarya Gowda) ಪ್ರಕರಣ ಸಂಬಂಧ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಡಿ.ಕೆ.ಸುರೇಶ್ (D K Suresh) ಹಾಗೂ ಡಿ.ಕೆ.ಶಿವಕುಮಾರ್ (D K Shivakumar) ಅವರು ನನ್ನ ಅಣ್ಣಂದಿರು, ನಾನು ಅವರ ತಂಗಿ ಅಂತಾ ಹೇಳಿಕೊಂಡು ವಂಚನೆ ಮಾಡಿರುವ ಐಶ್ವರ್ಯ ಗೌಡ ಪ್ರಕರಣ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ. ತನಿಖೆ ವೇಳೆ ಬಂಗಾರಿ ಗೌಡ ಸಿನಿಮಾ ನಿರ್ಮಾಣ ಮಾಡೋದಕ್ಕೆ ತಯಾರಿ ನಡೆಸಿದ್ದಳು ಅನ್ನೋ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಕಳ್ಳ ಸಂಬಂಧ ಆರೋಪ – ಯುವಕನನ್ನ ಥಳಿಸಿ ಚಿಕ್ಕಮ್ಮನೊಂದಿಗೆ ಮದುವೆ ಮಾಡಿಸಿದ ಗ್ಯಾಂಗ್‌

    ಐಶ್ವರ್ಯ ಗೌಡ, ಎಸ್‌ಎಲ್‌ವಿ ಪ್ರೊಡಕ್ಷನ್ಸ್ ಅನ್ನೋ ಸಂಸ್ಥೆಯನ್ನ ನೊಂದಾಯಿಸಿ ಆ ಮೂಲಕ ಸಿನಿಮಾ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿದ್ದಳು ಎಂಬ ವಿಚಾರ ಬಯಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಲು ಫಿಲ್ಮ್ ಚೇಂಬರ್‌ಗೆ (Film Chamber) ಸಿಐಡಿ ಡಿವೈಎಸ್‌ಪಿ ಅಂಜುಮಾಲ ನಾಯಕ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಮಾದರಿಯಲ್ಲಿ ಭಯಾನಕ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್‌ – ಪ್ರಮುಖ ಆರೋಪಿ ಅರೆಸ್ಟ್‌

    ಇನ್ನು ಈ ವಿಚಾರವಾಗಿ ವಾಣಿಜ್ಯ ಮಂಡಳಿಯಿಂದಲೂ ಪ್ರತಿಕ್ರಿಯೆ ಸಿಕ್ಕಿದ್ದು, ಈ ಹೆಸರಿನಲ್ಲಿ ಯಾವ ಪ್ರೊಡಕ್ಷನ್ ರಿಜಿಸ್ಟರ್ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಮಡೆನೂರು ಮನುಗೆ ಹೇರಿದ್ದ ಅಸಹಕಾರ ತೆರವು – ಫಿಲ್ಮ್ ಚೇಂಬರ್ ವಾರ್ನಿಂಗ್

    ಮಡೆನೂರು ಮನುಗೆ ಹೇರಿದ್ದ ಅಸಹಕಾರ ತೆರವು – ಫಿಲ್ಮ್ ಚೇಂಬರ್ ವಾರ್ನಿಂಗ್

    ಕಾಮಿಡಿ ನಟ ಮಡೆನೂರು ಮನು (Madenuru Manu) ಅತ್ಯಾಚಾರ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಆಚೆ ಬಂದಿದ್ದಾರೆ. ಜೈಲು ಸೇರಿದ ಮೇಲೆ ಅವರ ಮೇಲೆ ಸಾಕಷ್ಟು ಆರೋಪ ಕೇಳಿ ಬಂದಿದ್ದವು. ಸ್ಯಾಂಡಲ್‍ವುಡ್‍ನ ನಟರ ಸಾವಿನ ಬಗ್ಗೆ ಮಾತನಾಡಿದ ಆಡಿಯೋ ವೈರಲ್ ಆಗಿತ್ತು. ಹಿನ್ನೆಲೆ ಫಿಲ್ಮ್ ಚೇಂಬರ್‌ಗೆ (Film Chamber) ಅವರ ಅಭಿಮಾನಿಗಳು ದೂರು ನೀಡಿದ್ರು. ಕಾಮಿಡಿ ನಟನನ್ನ ಶಾಶ್ವತವಾಗಿ ಬ್ಯಾನ್ ಮಾಡುವಂತೆ ಒತ್ತಾಯಿಸಲಾಗಿತ್ತು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಬಂದ ಹಿನ್ನೆಲೆ ಕಾಮಿಡಿ ನಟ ಮಡೆನೂರು ಮನು ಅವರಿಗೆ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಅಸಹಕಾರ ತೋರುವಂತೆ ಫಿಲ್ಮ್ ಚೇಂಬರ್ ನಿರ್ಧಾರ ಮಾಡಿತ್ತು. ಇದೀಗ ತಮ್ಮ ತಪ್ಪಿನ ಅರಿವಾಗಿ ನಟರಿಗೆ ಕ್ಷಮೆ ಕೋರಿ ಪತ್ರ ಬರೆದಿದ್ದ ಕಾಮಿಡಿ ನಟ ಇದೀಗ ಫಿಲ್ಮ್ ಚೇಂಬರ್‌ಗೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: BBK 12 | ಈ ಬಾರಿ ಬಿಗ್‌ ಬಾಸ್‌ನಲ್ಲಿ ವಿವಾದಿತರಿಗೆ ನೋ ಎಂಟ್ರಿ?

    ತಮ್ಮ ಮೇಲೆ ಹೇರಿದ್ದ ಅಸಹಕಾರವನ್ನ ತೆರುವುಗೊಳಿಸಿ, ಮುಂದಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ, ಕಿರುತೆರೆಯಲ್ಲಿ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕೋರಿ ಫಿಲ್ಮ್ ಚೇಂಬರ್‌ಗೆ ಮನವಿ ಮಾಡಿದ್ದಾರೆ ಕಾಮಿಡಿ ನಟ ಮನು. ಕಾಮಿಡಿ ನಟನ ಮನವಿಯನ್ನ ಸ್ವೀಕರಿಸಿದ ಫಿಲ್ಮ್ ಚೇಂಬರ್ ಎಚ್ಚರಿಕೆ ಕೊಟ್ಟು ಮುಂದೆ ಈ ರೀತಿಯಾದ ತಪ್ಪು ಮರುಕಳಿಸಬಾರು ಎಂದು ಹೇಳಿದೆ.

    ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ತೊಡಗಿಕೊಳ್ಳಬಹುದು ಎಂದು ಹೇಳಿದೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇನೆ ಎಂದು ಮನು ಕೂಡಾ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: BBK 12 | ʻಬಿಗ್‌ ಬಾಸ್‌ʼ ಬಿಗ್ ಅಪ್‌ಡೇಟ್ – 12ನೇ ಸೀಸನ್‌ಗೂ ಕಿಚ್ಚನ ನಿರೂಪಣೆ ಫಿಕ್ಸ್‌

  • 22 ಲಕ್ಷ ವಂಚನೆ ಆರೋಪ – ನಂದಕಿಶೋರ್ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು ಕೊಡಲು ಮುಂದಾದ ಶಬರೀಶ್

    22 ಲಕ್ಷ ವಂಚನೆ ಆರೋಪ – ನಂದಕಿಶೋರ್ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು ಕೊಡಲು ಮುಂದಾದ ಶಬರೀಶ್

    ಕಿಚ್ಚ ಸುದೀಪ್ ಹೆಸರು ಹೇಳಿಕೊಂಡು ವಂಚಿಸಿದ (Fraud Case) ನಿರ್ದೇಶಕ ನಂದಕಿಶೋರ್ (Nandakishore) ವಿರುದ್ಧ ಇಂದು ನಟ ಶಬರೀಶ್ (Actor Shabarish) ಶೆಟ್ಟಿ ಫಿಲ್ಮ್ ಚೇಂಬರ್‌ಗೆ (Film Chamber) ದೂರು ಕೊಡಲು ಮುಂದಾಗಿದ್ದಾರೆ.

    ಸಿನಿಮಾದಲ್ಲಿ ಅವಕಾಶ ಕೊಡೋದಾಗಿ 22 ಲಕ್ಷ ರೂ. ಹಣ ವಂಚಿಸಿ ಸಿನಿಮಾವನ್ನೂ ಮಾಡದೇ, ಅವಕಾಶವನ್ನೂ ಕೊಡದೆ ಖ್ಯಾತ ನಿರ್ದೇಶಕ ನಂದಕಿಶೋರ್ ವಂಚಿಸಿದ್ದಾರೆ ಎಂದು ಇತ್ತೀಚೆಗೆ ನಟ ಶಬರೀಶ್ ಶೆಟ್ಟಿ ಆರೋಪ ಮಾಡಿದ್ದರು. ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಂದಕಿಶೋರ್ ವಿರುದ್ಧ ದೂರು ನೀಡಲು ಶಬರೀಶ್ ಮುಂದಾಗಿದ್ದಾರೆ. ಇದನ್ನೂ ಓದಿ: ಸುದೀಪ್‌ ಹೆಸರು ಹೇಳಿ ಯುವ ನಟನಿಗೆ ನಂದಕಿಶೋರ್‌ 22 ಲಕ್ಷ ವಂಚನೆ!

    ನಟ ಶಬರೀಶ್ ಜಿಮ್‍ನಲ್ಲಿ ನಿರ್ದೇಶಕ ನಂದಕೀಶೋರ್‌ ಅವರನ್ನು ಭೇಟಿಯಾದ ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಬಳಿಕ ಹಂತಹಂತವಾಗಿ ನಂದಕಿಶೋರ್ 22 ಲಕ್ಷ ರೂ. ವರೆಗೆ ಹಣ ಪಡೆದಿದ್ದಾರೆ. ಈಗ ಹಣ ವಾಪಸ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಶಬರೀಶ್ ಶೆಟ್ಟಿ ಆರೋಪಿಸಿದ್ದಾರೆ.

    ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್‍ನ ಆಟಗಾರನೂ ಆಗಿದ್ದ ಶಬರೀಶ್ ನಂದಕಿಶೋರ್ ಮಧ್ಯಸ್ಥಿಕೆಯಲ್ಲಿ ಕಿಚ್ಚ ಸುದೀಪ್‍ರನ್ನು ಭೇಟಿ ಮಾಡಲು ಆಸೆ ಪಟ್ಟಿದ್ದರಂತೆ. ಇನ್ನೂ, ಸುದೀಪ್ ಹೆಸರನ್ನ ಹೇಳಿಕೊಂಡು ವಂಚಿಸಿದ್ದ ಆರೋಪ ಹೊತ್ತಿರುವ ನಂದಕೀಶೋರ್ ಮೇಲೆ ಇದೀಗ ಶಬರೀಶ್ ದೂರು ಕೊಡಲು ಮುಂದಾಗಿದ್ದಾರೆ. ಇದನ್ನೂ ಓದಿ: ದರ್ಶನ್ ನೋಡಲು ಮನೆ ಬಳಿ ಕಿಕ್ಕಿರಿದು ಸೇರಿದ ಲೇಡಿಫ್ಯಾನ್ಸ್ !

  • Thug Life | ಹಿಂಸಾಚಾರ, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಯಾಕಿಲ್ಲ – ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

    Thug Life | ಹಿಂಸಾಚಾರ, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಯಾಕಿಲ್ಲ – ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

    ನವದೆಹಲಿ: ನಟ, ರಾಜಕಾರಣಿ ಕಮಲ್ ಹಾಸನ್ (Kamal Hassan) ಅವರ `ಥಗ್ ಲೈಫ್’ (Thag Life) ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಹಿಂಸಾಚಾರ, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳದ ಕರ್ನಾಟಕ ಸರ್ಕಾರ ಮತ್ತು ರಾಜ್ಯ ಚಲನಚಿತ್ರ ಮಂಡಳಿಯನ್ನು ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ.

    ಚಿತ್ರದ ಮೇಲೆ ಯಾವುದೇ ನಿರ್ಬಂಧ ಹೇರಿಲ್ಲ. ನಿರ್ಮಾಪಕರು ಸಿನಿಮಾ ಬಿಡುಗಡೆ ಮಾಡಲು ಮನಸ್ಸು ಮಾಡಿದರೆ ಸಂಪೂರ್ಣ ಭದ್ರತೆಯನ್ನು ಒದಗಿಸುವುದಾಗಿ ರಾಜ್ಯ ಸರ್ಕಾರ ಸಲ್ಲಿಸಿದ ಅಫಿಡವಿಟ್ ಅನ್ನು ದಾಖಲಿಸಿಕೊಂಡ ನ್ಯಾಯಾಲಯ, ಬೆದರಿಕೆ ಹಾಕಿದವರ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿತು. ಇದನ್ನೂ ಓದಿ: ಆರ್‌ಸಿಬಿ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದೆ – ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಬಾಂಬ್

    ದ್ವೇಷ ಭಾಷಣ ಮತ್ತು ಹಿಂಸಾಚಾರದ ಬೆದರಿಕೆಗಳ ಕುರಿತು ಮಾರ್ಗಸೂಚಿಗಳನ್ನು ಕೋರಿ ನಿರ್ಮಾಪಕ ಮತ್ತು ಮೂರನೇ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಪೀಠವು, ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ಎಂದು ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಗುತ್ತಿಗೆ ಆಯ್ತು, ಈಗ ವಸತಿ ಯೋಜನೆಯಲ್ಲೂ ಮುಸ್ಲಿಮ್‌ ಮೀಸಲಾತಿ ಹೆಚ್ಚಳ!

    ಸ್ಟ್ಯಾಂಡ್-ಅಪ್ ಕಾಮಿಕ್ಸ್ ಅನ್ನು ನಿಲ್ಲಿಸಬೇಕೇ? ಕವಿಗಳು ಕವಿತೆಗಳನ್ನು ಹೇಳಬಾರದೇ? ಎಂದು ನ್ಯಾಯಾಲಯವು ಪ್ರಶ್ನಿಸಿತು. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಕೆಲವು ಗುಂಪುಗಳು ಏನು ಬಿಡುಗಡೆ ಮಾಡಬಹುದು ಅಥವಾ ಬಿಡುಗಡೆ ಮಾಡಬಾರದು ಎಂದು ನಿರ್ದೇಶಿಸಲು ಅನುಮತಿಸಬಾರದು ಎಂದು ಒತ್ತಿ ಹೇಳಿತು.

    ಬೆಂಕಿ ಹಚ್ಚುವವರಿಗೆ, ಬೆದರಿಕೆ ಹಾಕುವವರಿಗೆ `ರಾಜನಂತಹ ವಿನಾಯಿತಿ’ ನೀಡಲಾಗಿದೆ ಎಂದು ಅರ್ಜಿದಾರರು ವಾದಿಸಿದರು. ಚಲನಚಿತ್ರ ನಿರ್ಮಾಪಕರು ಮತ್ತು ಚಿತ್ರಮಂದಿರ ಮಾಲೀಕರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದರು. ಇತ್ತೀಚಿನ ಬೆಳವಣಿಗೆಯಿಂದ ನಿರ್ಮಾಪಕರು 30 ಕೋಟಿ ರೂ.ಗಳವರೆಗೆ ನಷ್ಟವಾಗಿದೆ ಇದನ್ನು ಭರಿಸಿಕೊಡಬೇಕು ಇಂತಹ ಸನ್ನಿವೇಶ ನಿಭಾಯಿಸಲು ಮಾರ್ಗಸೂಚಿ ನೀಡಬೇಕು ಎಂದರು. ಇದನ್ನೂ ಓದಿ: ಕರ್ನಾಟಕಕ್ಕೆ ಹೆಚ್‌ಡಿಕೆ, ಜೋಶಿ ಕೊಡುಗೆ ಏನು? ಚರ್ಚೆಗೆ ಬರಲಿ: ಪ್ರದೀಪ್ ಈಶ್ವರ್ ಪಂಥಾಹ್ವಾನ

    ವಾದ ಆಲಿಸಿದ ನ್ಯಾಯಲಯವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿತು. ಹೋರಾಟಗಾರರು ಸಂಸ್ಥೆಗೆ ಮುತ್ತಿಗೆ ಹಾಕಿದರೆ, ನೀವು ಪೊಲೀಸ್ ಭದ್ರತೆ ಪಡೆಯಬೇಕು. ನೀವು ಒತ್ತಡಕ್ಕೆ ಒಳಗಾಗುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಡಳಿ ಪರ ವಕೀಲರು ನಾವು ನಟನಿಗೆ ಕ್ಷಮೆ ಕೇಳುವಂತೆ ಪತ್ರ ಬರೆದಿಲ್ಲ ಎಂದು ಸ್ಪಷ್ಟಪಡಿಸಿದರು.

    ಈ ವೇಳೆ ನಿರ್ಮಾಪಕ ಮತ್ತು ಫಿಲ್ಮ್ ಚೇಂಬರ್ ನಡುವೆ ವಿವಾದ ಉದ್ಭವಿಸಿತು. ನಿರ್ಮಾಪಕರು ಸ್ವಯಂಪ್ರೇರಣೆಯಿಂದ ಚಿತ್ರ ಬಿಡುಗಡೆಯನ್ನು ತಡೆಹಿಡಿದಿದ್ದಾರೆ ಎಂದು ಕರ್ನಾಟಕ ಸರ್ಕಾರ ವಾದಿಸಿತು. ಚಿತ್ರ ಬಿಡುಗಡೆ ಮಾಡಿದರೆ ನಾವು ಅಗತ್ಯ ಭದ್ರತೆ ನೀಡಲು ಸಿದ್ಧವಿದ್ದೇವೆ. ಅಲ್ಲದೇ ರಾಜ್ಯವು ಈಗ ತನ್ನ ಅಫಿಡವಿಟ್‌ಗೆ ಬದ್ಧವಾಗಿದೆ ಎಂದು ಹೇಳಿತು. ಇದನ್ನೂ ಓದಿ: ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಡಾಲಿ, ಶಿವಣ್ಣ

    ರಾಜ್ಯ ಸರ್ಕಾರದ ಅಫಿಡವಿಟ್‌ನಿಂದ ತೃಪ್ತವಾದ ನ್ಯಾಯಲಯವು ನಾವು ಯಾವುದೇ ಪರಿಹಾರಕ್ಕೆ ಸೂಚಿಸುವುದಿಲ್ಲ ಅಥವಾ ಮಾರ್ಗಸೂಚಿ ನೀಡುವುದಿಲ್ಲ. ಸರ್ಕಾರ ಇಂತಹ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು ಮತ್ತು ಚಿತ್ರ ಬಿಡುಗಡೆಗೆ ಅವಕಾಶ ನೀಡಿ, ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕ್ರಿಮಿನಲ್ ಕಾನೂನು ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾ. ಉಜ್ಜಲ್ ಭುಯಾನ್ ನೇತೃತ್ವದ ದ್ವಿ ಸದಸ್ಯ ಪೀಠ ಆದೇಶಿಸಿತು.

  • ಅಡ್ವಾನ್ಸ್‌ ಹಣ ವಾಪಸ್‌ ಕೊಡದ ಆರೋಪ – ರಚಿತಾ ರಾಮ್‌ ವಿರುದ್ಧ ಮತ್ತೊಂದು ದೂರು

    ಅಡ್ವಾನ್ಸ್‌ ಹಣ ವಾಪಸ್‌ ಕೊಡದ ಆರೋಪ – ರಚಿತಾ ರಾಮ್‌ ವಿರುದ್ಧ ಮತ್ತೊಂದು ದೂರು

    ಡ್ವಾನ್ಸ್‌ ಹಣ ವಾಪಸ್‌ ಕೊಡದ ಆರೋಪದಲ್ಲಿ ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ನಲ್ಲಿ ಮತ್ತೊಂದು ದೂರು ದಾಖಲಾಗಿದೆ.

    ‘ಉಪ್ಪಿ ರುಪ್ಪಿ’ ಸಿನಿಮಾಗಾಗಿ ಗುಳಿಕೆನ್ನೆ ಚೆಲುವೆ ರಚಿತಾ ರಾಮ್‌ಗೆ ಅಡ್ವಾನ್ಸ್‌ ನೀಡಲಾಗಿತ್ತು. ಈಗ ಹಣ ವಾಪಸ್‌ ಕೊಡದೇ ನಿರ್ಮಾಪಕಿಯನ್ನು ಸತಾಯಿಸುತ್ತಿದ್ದಾರೆಂದು ದೂರಲಾಗಿದೆ.

    8 ವರ್ಷಗಳ ಹಿಂದೆ ಉಪ್ಪಿ ಮತ್ತು ರಚಿತಾ ನಟನೆಯಲ್ಲಿ ಸಿನಿಮಾ ಮೂಡಿಬರಬೇಕಿತ್ತು. ‘ಉಪ್ಪಿ ರುಪ್ಪಿ’ ಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸಲು ನಟಿ ಒಪ್ಪಿಕೊಂಡಿದ್ದರು. ಈ ಸಿನಿಮಾವನ್ನು ವಿಜಯಲಕ್ಷ್ಮಿ ಅರಸ್ ನಿರ್ಮಾಣ ಮತ್ತು ಕೆ.ಮಾದೇಶ್ ನಿರ್ದೇಶನ ಮಾಡುವುದಿತ್ತು.

    23 ಲಕ್ಷ ಸಂಭಾವನೆಗೆ ನಟಿ ಕಮಿಟ್ ಆಗಿದ್ದರು. ಮುಂಗಡವಾಗಿ 13 ಲಕ್ಷ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದಿದ್ದರು. 2017 ರಲ್ಲಿ ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಬರುವುದಾಗಿ ಒಪ್ಪಿಕೊಂಡು ರಚಿತಾ ರಾಮ್‌ಗೆ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಬಂದಿರಲಿಲ್ಲ. 15 ದಿನಗಳ ಕಾಲ ಈಗ ಬರ್ತೀನಿ, ಆಗ ಬರ್ತೀನಿ ಅಂತಾ ಸತಾಯಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

    ಸೂಟ್ ರೂಮ್ ಬುಕ್ ಮಾಡಿಕೊಂಡು 15 ದಿನ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಕಾದಿದ್ದರು. ಬಂದ ಜಾಗಕ್ಕೆ ಸುಂಕವಿಲ್ಲ ಎಂದು ಹೀರೊ ಪೋರ್ಷನ್ ಶೂಟ್ ಮಾಡಿಕೊಂಡು ಚಿತ್ರತಂಡ ವಾಪಸ್‌ ಆಗಿತ್ತು. ರಚಿತಾ ರಾಮ್‌ನಿಂದ ನಿರ್ಮಾಪಕಿ ಒಂದೂವರೆ ಕೋಟಿ ಕಳೆದುಕೊಂಡರು ಎನ್ನಲಾಗಿದೆ. ಒಂದು ದಿನ ಮಾತ್ರ ಮೈಸೂರಿನಲ್ಲಿ ನಡೆದ ಸಿನಿಮಾ ಶೂಟಿಂಗ್‌ನಲ್ಲಿ ನಟಿ ಭಾಗಿಯಾಗಿದ್ದರು. ನಟಿ ಕಾರಣದಿಂದ ಸಿನಿಮಾ ಅರ್ಧಕ್ಕೆ ನಿಂತು ಹೋಯಿತು.

    35 ಪರ್ಸೆಂಟ್ ಮಾತ್ರ ಕಂಪ್ಲೀಟ್ ಆಗಿ ಸಿನಿಮಾ ನಿಂತು ಹೋಯಿತು. ಹಣವೂ ಇಲ್ಲ ಸಿನಿಮಾನೂ ಕಂಪ್ಲೀಟ್ ಇಲ್ಲ ಎನ್ನುವಂತಾಯಿತು. ಅವತ್ತಿನಿಂದ ಸಂಪರ್ಕಕ್ಕೆ ಸಿಗದೇ ನಟಿ ಸತಾಯಿಸುತ್ತಿದ್ದರು. ಕೊನೆಯದಾಗಿ ಫಿಲ್ಮ್ ಚೇಂಬರ್‌ಗೆ ನಿರ್ಮಾಪಕಿ ದೂರು ಕೊಟ್ಟಿದ್ದಾರೆ.

  • ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್‌ಗೆ ಕರವೇ ಮುತ್ತಿಗೆ

    ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್‌ಗೆ ಕರವೇ ಮುತ್ತಿಗೆ

    ಮಿಳು ನಟ ಕಮಲ್ ಹಾಸನ್ (Kamal Haasan) ವಿವಾದಾತ್ಮಕ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಆದರೆ ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಕಮಲ್ ಹಾಸನ್ ಉದ್ಧಟತನ ತೋರಿದ್ದಾರೆ. ನಾನು ಹೇಳಿದ್ದು ನನ್ನ ಪ್ರಕಾರ ಸರಿ, ನಾನು ಕ್ಷಮೆ ಕೇಳಲ್ಲ ಎಂದಿದ್ದಾರೆ. ಇತ್ತ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ತೀವ್ರಗೊಂಡಿದ್ದು, ಅವರ ಸಿನಿಮಾ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜ್ಯಾದ್ಯಂತ ನಟ ಕಮಲ್ ವಿರುದ್ಧ ಕನ್ನಡಿಗರ ಆಕ್ರೋಶ ಕಟ್ಟೆಯೊಡೆದಿದೆ. ಕರವೇ (Karnataka Rakshana Vedike) ಬಣ, ಕನ್ನಡ ಸಂಘಟನೆಗಳು ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂಭಾಗ ಪ್ರತಿಭಟನೆ ನಡೆಸಿತು. ಕಮಲ್ ಹಾಸನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ: ಸಾರಾ ಗೋವಿಂದು

    ಕಮಲ್ ಚಿತ್ರ ರಾಜ್ಯದಲ್ಲಿ ಬಿಡುಗಡೆ ಸಂಬಂಧ ಫಿಲಂ ಚೇಂಬರ್‌ನಲ್ಲಿ (Film Chamber) ಸಭೆ ನಡೆಯುತ್ತಿದ್ದ ವೇಳೆಯೇ ಫಿಲಂ ಚೇಂಬರ್‌ಗೆ ಕನ್ನಡಪರ ಹೋರಾಟಗಾರರು ಮುತ್ತಿಗೆ ಹಾಕಿದರು. ಕರವೇ ನಾರಾಯಣಗೌಡರ ಬಣ ಮುತ್ತಿಗೆ ಹಾಕಿ ಕಮಲ್ ಕ್ಷಮೆ ಕೇಳೋವರೆಗೂ ಚಿತ್ರ ಬಿಡುಗಡೆ ಮಾಡದಂತೆ ಆಗ್ರಹಿಸಿದರು. ಫಿಲಂ ಚೇಂಬರ್ ಒಳಗೆ ನುಗ್ಗಿ ಅಧ್ಯಕ್ಷರ ಮುಂದೆ ಕೂತು ಕರ್ನಾಟಕದಲ್ಲಿ ಕಮಲ್ ಹಾಸನ್ ಸಿನಿಮಾ ರಿಲೀಸ್ ಆಗಲು ಬಿಡಲ್ಲ. ಸಿನಿಮಾ ಬಿಡುಗಡೆ ಮಾಡುತ್ತಿರುವ ಡಿಸ್ಟ್ರಿಬ್ಯೂಟರ್ ಅವರಿಗೆ ವಾರ್ನಿಂಗ್ ಕೊಡುತ್ತೇವೆ, ಫಿಲಂ ಚೇಂಬರ್ ಚಿತ್ರ ರಿಲೀಸ್ ಆಗೋಕೆ ಬಿಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಕಮಲ್ ಹಾಸನ್ ಸಣ್ಣತನದ ಹೇಳಿಕೆ ನೀಡಿ, ಕನ್ನಡಿಗರಿಗೆ ಕ್ಷಮೆ ಕೇಳದೇ ಮೊಂಡುತನ: ಚೇತನ್

    ಇನ್ನು ಕನ್ನಡದ ಬಗ್ಗೆ ಕಮಲ್ ಹಾಸನ್ ಅವಿವೇಕದ ಮಾತಾಡಿದ್ದಾರೆ. ಅವರ ಚಿತ್ರ ಕರ್ನಾಟಕದಲ್ಲಿ ರಿಲೀಸ್ ಆಗಬಾರದು. ಕರ್ನಾಟಕದ ಅನ್ನ ತಿಂದ ಕನ್ನಡ ನಟರು ಇದರ ಬಗ್ಗೆ ಧ್ವನಿಯೆತ್ತಬೇಕು. ಕಮಲ್ ಹಾಸನ್ ವಿರುದ್ಧ ಕನ್ನಡ ನಟ-ನಟಿಯರು ಯಾಕೆ ಧ್ವನಿ ಎತ್ತಿಲ್ಲ ಎಂದು ಕರವೇ ಶಿವರಾಮೇಗೌಡ ಪ್ರಶ್ನಿಸಿದರು. ಇದನ್ನೂ ಓದಿ: ಕಮಲ್ ಹಾಸನ್ `ಕನ್ನಡ’ ವಿವಾದ – ಸಾಕು ಸರ್ ಎಂದ ನ್ಯಾಚುರಲ್ ಸ್ಟಾರ್

    ಕಮಲ್ ಹಾಸನ್‌ಗೆ ಮತ್ತೆ ಡೆಡ್‌ಲೈನ್:
    ಫಿಲಂ ಚೇಂಬರ್‌ನಲ್ಲಿ ಸಭೆ ಬಳಿಕ ಮಾತಾಡಿದ ಕನ್ನಡ ಹೋರಾಟಗಾರ, ಕರ್ನಾಟಕ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಕಮಲ ಹಾಸನ್‌ಗೆ ಮತ್ತೆ ಡೆಡ್‌ಲೈನ್ ಕೊಟ್ಟಿದ್ದಾರೆ. ಕಮಲ್ ಹಾಸನ್ ಬಗ್ಗೆ ನಮಗೆ ಯಾರಿಗೂ ಕನಿಕರ ಇಲ್ಲ. ಇಂದು ಅಥವಾ ನಾಳೆ ಒಳಗೆ ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಮಾಡಿಕೊಡಲ್ಲ. ಕ್ಷಮಾಪಣೆ ಅಂತಾ ಪದ ಬರದಿದ್ದರೆ ಸಿನಿಮಾ ರಿಲೀಸ್ ಮಾಡೋಕೆ ಬಿಡಲ್ಲ ಎಂದು ಗುಡುಗಿದರು. ಇನ್ನು ಡಿಸ್ಟ್ರಿಬ್ಯೂಟರ್ ವೆಂಕಟೇಶ್ ಮಾತನಾಡಿ, ಕನ್ನಡ ಹಾಗೂ ಬ್ಯುಸಿನೆಸ್ ಎರಡೂ ನನಗೆ ಇಂಪಾರ್ಟೆಂಟ್. ಫಿಲಂ ಚೇಂಬರ್ ಸಭೆಯಲ್ಲಿ ಏನೇನು ಆಯ್ತು ಎಲ್ಲವನ್ನು ಕಮಲ್‌ಗೆ ಹೇಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಮಲ್ ಹಾಸನ್ ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

    ನಟ ಕಮಲ್ ಹಾಸನ್ ವಿವಾದದ ಬಗ್ಗೆ ನಟ ಶಿವರಾಜ್ ಕುಮಾರ್ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿ ಇದೆ. ನಟ ಕಮಲ್ ಹಾಸನ್‌ಗೆ ಇದೆಲ್ಲ ಗೊತ್ತಾಗುತ್ತೆ. ಕಮಲ್ ಅವರೇ ಅದನ್ನ ಸರಿ ಮಾಡಿಕೊಳ್ಳುತ್ತಾರೆ. ಬರೀ ಬಾಯಿ ಮಾತಲ್ಲಿ ಮಾತ್ರ ಕನ್ನಡ ಎನ್ನಬಾರದು. ಕನ್ನಡಕ್ಕಾಗಿ ಸಾಯುತ್ತೀವಿ, ಹೋರಾಟ ಮಾಡ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿಯಿದೆ, ಯಾಕೆ ಅದನ್ನ ದೊಡ್ಡ ವಿಷಯ ಮಾಡ್ತೀರಾ?: ಶಿವಣ್ಣ

    ಇನ್ನು ಕಮಲ ಹಾಸನ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ನಟಿ ಜಯಮಾಲಾ, ಕಮಲ್ ಹಾಸನ್‌ಗೆ ಅವರ ತಪ್ಪು ಮನವರಿಕೆ ಮಾಡಬೇಕು. ಅವರು ತಿಳಿದು ಹೇಳಿದ್ರೋ, ತಿಳಿಯದೇ ಹೇಳಿದ್ರೋ ಗೊತ್ತಿಲ್ಲ. ಒಂದಂತೂ ಸತ್ಯ. ತಮಿಳಿನಿಂದ ಕನ್ನಡ ಹುಟ್ಟಿಲ್ಲ. ಅವರು ಕ್ಷಮೆ ಕೇಳಬೇಕು. ಇನ್ನು ಕಮಲ್ ಹೀಗೆಲ್ಲಾ ಮಾತನಾಡುವಾಗ ಶಿವಣ್ಣ ಸುಮ್ಮನಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿವಣ್ಣ ಅವರಿಗೆ ಅವತ್ತು ಗೊತ್ತಾಗಿಲ್ಲ. ಆರೋಗ್ಯ ದೃಷ್ಟಿಯಿಂದ ಸ್ವಲ್ಪ ಕುಗ್ಗಿದ್ದಾರೆ. ಹೀಗಾಗಿ ಗೊತ್ತಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮತ್ತೆ ಕಮಲ್ ಹಾಸನ್ ಮೊಂಡಾಟ – ಕ್ಷಮೆ ಕೇಳಲ್ಲ ಎಂದ ನಟ

    ಇತ್ತ ನಟ ಕಮಲ್ ಹಾಸನ್ ಚಲನಚಿತ್ರಗಳನ್ನ ಕರ್ನಾಟಕದಲ್ಲಿ ನಿರ್ಬಂಧಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಫಿಲಂ ಚೇಂಬರ್‌ಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಕನ್ನಡ ತಮಿಳಿನಿಂದ ಹುಟ್ಟಿದೆ ಎಂದ ಕಮಲ್ ಹಾಸನ್ ಮಾತು ಒಪ್ಪಲ್ಲ- ಜಗ್ಗೇಶ್ ಖಂಡನೆ

  • ಸೆ.16ರಂದು ಫಿಲ್ಮ್ ಚೇಂಬರ್‌ನಲ್ಲಿ ಸಭೆ- ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲಿಯೂ ರಚಿಸಲು ಒತ್ತಾಯ

    ಸೆ.16ರಂದು ಫಿಲ್ಮ್ ಚೇಂಬರ್‌ನಲ್ಲಿ ಸಭೆ- ಹೇಮಾ ಕಮಿಟಿಯಂತೆ ಸ್ಯಾಂಡಲ್‌ವುಡ್‌ನಲ್ಲಿಯೂ ರಚಿಸಲು ಒತ್ತಾಯ

    ಮಾಲಿವುಡ್‌ನಲ್ಲಿ (Mollywood) ಹೇಮಾ ಸಮಿತಿ (Hema Committee) ವರದಿ ಹೊರಬಿದ್ದ ಬಳಿಕ ಚಿತ್ರರಂಗ ಅಲ್ಲೋಲ ಕಲ್ಲೋಲ ಆಗಿದೆ. ಹೇಮಾ ಕಮಿಟಿಯಂತೆ ಮಹಿಳೆಯರ ಸುರಕ್ಷತೆಗಾಗಿ ಸ್ಯಾಂಡಲ್‌ವುಡ್‌ನಲ್ಲಿಯೂ (Sandalwood) ರಚಿಸಲು ಸೆ.16ರಂದು ಫಿಲ್ಮ್ ಚೇಂಬರ್ ಸಭೆ ಆಯೋಜಿಸಿದೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪೆಟ್ಟಾ’ ಚಿತ್ರದ ನಟಿ ಮೇಘಾ

    ನಾಳೆ ಫಿಲ್ಮ್ ಚೇಂಬರ್‌ನಲ್ಲಿ ಹೈ-ವೋಲ್ಟೇಜ್ ಸಭೆ ನಡೆಯಲಿದೆ. ಕೇರಳದಲ್ಲಿ ಹೇಮಾ ಕಮಿಟಿ ರಚಿಸಿರುವಂತೆ ಇಲ್ಲೂ ರಚಿಸುವಂತೆ ನಟಿಯರು ಸೆ.6ರಂದು ಫಿಲ್ಮ್  ಚೇಂಬರ್ ಪತ್ರ ಬರೆದ್ದರು. ಅದರಂತೆ ನಾಳೆ ಬೆಳಗ್ಗೆ 11:30ಕ್ಕೆ ಈ ಕುರಿತು ಸಭೆ ಮಾಡಲು ನಿರ್ಧರಿಸಿದ್ದಾರೆ.

    ಈ ಸಭೆಯಲ್ಲಿ 100ಕ್ಕೂ ಹೆಚ್ಚು ಮಹಿಳಾ ಕಲಾವಿದೆಯರು ಭಾಗಿಯಾಗಲಿದ್ದಾರೆ. ನಟಿಯರ ಭದ್ರತೆ ಹಾಗೂ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಕಮಿಟಿಗೆ ಮನವಿ ಮಾಡಲಿದ್ದಾರೆ. ಕಮಿಟಿ ವರದಿ ಅನುಸರಿಸಿ ಹಲವು ಕಾರ್ಯಕ್ರಮ ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಲಿದ್ದಾರೆ.

  • ಗೋವಾದಲ್ಲಿ ಹರಿದ ಕನ್ನಡ ನಿರ್ಮಾಪಕರ ರಕ್ತ: ಇಂಚಿಂಚು ಮಾಹಿತಿ

    ಗೋವಾದಲ್ಲಿ ಹರಿದ ಕನ್ನಡ ನಿರ್ಮಾಪಕರ ರಕ್ತ: ಇಂಚಿಂಚು ಮಾಹಿತಿ

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಕಾರ್ಯಕಾರಣಿ ಸಭೆ ಮಾಡಲು ಸರ್ವ ಸದಸ್ಯರು ಗೋವಾ (Goa) ಟ್ರಿಪ್ ಮಾಡಿದ್ದರು. ರಾತ್ರಿ ಹೋಟೆಲ್‍ ನಲ್ಲಿ ಮೋಜು ಮಸ್ತಿ ಮಾಡುವಾಗ ನಿರ್ಮಾಪಕರ ಮಧ್ಯ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಇಬ್ಬರು ನಿರ್ಮಾಪಕರು ತೀವ್ರ ಗಾಯಗೊಂಡಿದ್ದಾರೆ. ಇವರು ಗೋವಾಗೆ ಹೋಗಿದ್ದು ಕನ್ನಡ ಚಿತ್ರೋದ್ಯಮದ ಉದ್ದಾರಕ್ಕೆ. ಸಿನಿ ರಂಗವನ್ನು ಮತ್ತಷ್ಟು ಬಲಿಷ್ಠವಾಗಿ ಬೆಳೆಸೋಕೆ. ಹೋದವರ‍್ಯಾರು ಕಾಂಜಿಪಿಂಜಿಗಳಲ್ಲ. ಪುಡಿರೌಡಿಗಳೂ ಅಲ್ಲವೇ ಅಲ್ಲ. ಕನ್ನಡ ಸಿನಿರಂಗಕ್ಕೆ ಅಪರೂಪದ ಸಿನಿಮಾ ಕೊಟ್ಟವರು. ಸ್ಯಾಂಡಲ್‌ವುಡ್ಡನ್ನು ಹುಲುಸಾಗಿ ಬೆಳೆಸಿದವರು. ಗಟ್ಟಿಯಾಗಿ ನಿಲ್ಲಿಸಿದವರು. ಆದ್ರೆ, ಈ ಗುಂಪಿನಲ್ಲಿದ್ದ ಕೆಲವರು ಮಾಡಿದ್ದೇನು? ಎಣ್ಣೆ ಏಟಲ್ಲಿ ಬಡಿದಾಡ್ಕೊಂಡಿದ್ದಾರೆ. ಕನ್ನಡ ಚಿತ್ರೋದ್ಯಮದ ಮಾನ ಮರ‍್ಯಾದೇನ ಮೂರುಕಾಸಿಗೆ ಹರಾಜಾಕಿದ್ದಾರೆ. ಬಡಿದಾಡ್ಕೊಂಡವ್ರ ಮುಖದಿಂದ ರಕ್ತ ಸೋರಿದೆ, ತಲೆಬುರುಡೆ ಒಡೆದಿದೆ. ಮಾರಣಾಂತಿಕ ಹಲ್ಲೆ ನಡೆದಿದೆ.

    ಕನ್ನಡ ಸಿನಿಮಾ ರಂಗಕ್ಕೀಗ ಬರೋಬ್ಬರಿ 90 ವರ್ಷ. ಈ ಹಾದಿ ಸುಗಮವಾದುದಲ್ಲ. ಮದ್ರಾಸ್‌ನಿಂದ ಬಿಡಿಸಿಕೊಂಡು ಕರ್ನಾಟಕದಲ್ಲೇ ಚಿತ್ರರಂಗ ಕಟ್ಟಿದ ಇತಿಹಾಸವಿದೆಯಲ್ಲ ಅದು ರೋಚಕ. `ಮದ್ರಾಸ್’ ಎಂಬ ನಮ್ಮದಲ್ಲದ ನೆಲದಲ್ಲಿ ನೆಲೆನಿಂತು, ಕಷ್ಟಪಟ್ಟು, ಅವರು ಕೊಟ್ಟ ಸಮಯಕ್ಕೆ ಚಿತ್ರೀಕರಣ ಮಾಡಿ, ಹಗಲು ರಾತ್ರಿ ಲೆಕ್ಕಿಸದೇ ಕಟ್ಟಿದ ಚಿತ್ರರಂಗ ನಮ್ಮದು. ನಾವೀಗ 90ರ ಸಂಭ್ರಮದಲ್ಲಿದ್ದೇವೆ. ಇಡೀ ರಾಷ್ಟ್ರವೇ ಕನ್ನಡ ಸಿನಿಮಾ ರಂಗದತ್ತ ನೋಡುವಂತಾಗಿದೆ. ಮೂಕಿ ಯುಗದಿಂದ ಇಲ್ಲೀತನಕ ಮಾಡಿದ ಪ್ರಯೋಗಗಳು ಇತರ ಚಿತ್ರರಂಗಕ್ಕೆ ಮಾದರಿ ಆಗಿವೆ. ಈ ಮಾದರಿ ಇವರಿಂದಾಗಿ ಮಣ್ಣುಪಾಲಾಗಿದೆ. 90ರ ಸಂಭ್ರಮವನ್ನು ಸೆಲೆಬ್ರೇಟ್ ಮಾಡೋದು ಹೇಗೆ? ಅಂತ ಪ್ಲ್ಯಾನ್ ಮಾಡೋಕೆ ಹೋದವರು ಮಾನ ಕಳೆದು ಬಂದಿದ್ದಾರೆ.

    ಚಿತ್ರರಂಗದ ಮಾತೃಸಂಸ್ಥೆ ಈ ಫಿಲ್ಮ್ ಚೇಂಬರ್. ಚಿತ್ರೋದ್ಯಮದ ಪುಣ್ಯಾತ್ಮರು ನಡೆದಾಡಿದ ಕರ್ಮಭೂಮಿ ಅದು. ಅದಕ್ಕೆ ಅದರದ್ದೇ ಆದ ಗೌರವವಿದೆ. ಈಗದು ತನ್ನ ಖದರ್ ಕಳೆದುಕೊಳ್ಳುತ್ತಿದ್ದರೂ, ಈಗಲೂ ಈ ಸಂಸ್ಥೆಯ ಮೇಲೆ ಅಪಾರ ವಿಶ್ವಾಸ, ನಂಬಿಕೆ ಚಿತ್ರಕರ್ಮಿಗಳದ್ದು. ಇಂಥದ್ದೊಂದು ಜವಾಬ್ದಾರಿಯ ಅರಿವು ಈಗಿರುವವರಿಗೆ ಇರಬೇಕಿತ್ತು ಅಲ್ಲವಾ?.. ಗೋವಾಗೆ ಹೋಗಿದ್ದು ಯಾಕೆ? ಅಲ್ಲಿಗೇ ಯಾಕೆ ಹೋಗಬೇಕಿತ್ತು? ಅಷ್ಟೂ ಜನರನ್ನು ಕರೆದುಕೊಂಡು ಹೋಗಿದ್ದು ಯಾರು? ಹಣ ಎಲ್ಲಿಂದ ಬಂತು? ಈ ಯಾವ ಪ್ರಶ್ನೆಯನ್ನೂ ಜನರು ಕೇಳ್ತಿಲ್ಲ.. ಗೋವಾಗೆ ಹೋಗಿದ್ದು ತಪ್ಪು ಅಂತಾನೂ ಹೇಳ್ತಿಲ್ಲ. ಮಾತೃಸಂಸ್ಥೆಯ ಹೆಸರಿನಲ್ಲಿ ಹೋದರು ಮರ್ಯಾದೆ ಕಳೆಯುವಂಥ ಕೆಲಸ ಮಾಡ್ಬೋದಾ ಅಂತಿದ್ದಾರೆ ಜನರು. ಗೋವಾಗೆ ಹೋದವರೇ ಹೇಳ್ತಿರೋ ಪ್ರಕಾರ.. ಇವರೆಲ್ಲ ಹೋಗಿದ್ದು ಜಾಲಿಟ್ರಿಪ್‌ಗೆ ಅಲ್ಲವಂತೆ. ಸಿನಿಮಾ ರಂಗಕ್ಕೆ 90 ವರ್ಷ ತುಂಬಿರೋ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗ್ತಿದೆ. ಈ ಕಾರ್ಯಕ್ರಮದ ರೂಪರೇಷೆ ಚರ್ಚೆ ಮಾಡೋಕೆ ಗೋವಾಗೆ ಹೋಗಿದ್ದರಂತೆ. ಇದರ ಜೊತೆಗೆ ಫಿಲ್ಮ್ ಚೇಂಬರ್‌ನ ಕಾರ್ಯಕಾರಿಣಿ ಸಭೆ ಕೂಡ ಪ್ಲ್ಯಾನ್ ಆಗಿತ್ತಂತೆ. ಇಷ್ಟೊಂದು ಮಹತ್ವದ ಕೆಲಸ ಇಟ್ಕೊಂಡು ಹೋದವರು ಬಡಿದಾಡಿಕೊಂಡಿದ್ದು ಯಾಕೆ?.. ಉಳಿದುಕೊಂಡ ಹೋಟೆಲ್‌ನಲ್ಲಿ ನೆತ್ತರು ಹರಿಸಿದ್ದು ಯಾಕೆ?.. ಅಷ್ಟಕ್ಕೂ ಇವರೇನು ಸಣ್ಣ ಮಕ್ಕಳಾ? ಫಿಲ್ಮ್ ಚೇಂಬರ್ ಸದಸ್ಯರಾಗಿದ್ದವರಿಗೆ ಕಾಮನ್‌ಸೆನ್ಸ್ ಬೇಡವಾ?.

    ಫಿಲ್ಮ್ ಚೇಂಬರ್‌ನಲ್ಲಿ ಈ ರೀತಿ ಗಲಾಟೆ ಆಗೋದು ಹೊಸದೇನೂ ಅಲ್ಲ. ಚುನಾವಣೆ ಟೈಮ್‌ನಲ್ಲಿ ಒಬ್ಬರಿಗೊಬ್ಬರು ತೊಡೆ ತಟ್ಟಿದ್ದಾರೆ.. ಕೂಗಾಡಿದ್ದಾರೆ.. ಕೈಕೈ ಮಿಲಾಯಿಸೋ ಹಂತಕ್ಕೂ ಹೋಗಿದ್ದಾರೆ. ಆದರೆ, ಈ ಪ್ರಮಾಣದಲ್ಲಿ ಯಾವತ್ತೂ ಜಗಳ ಆಗಿರಲಿಲ್ಲ. ಹಾಗಂತ ಈಗ ಯಾವ ಚುನಾವಣೆನೂ ನಡೆದಿಲ್ಲ. ಗೋವಾದಲ್ಲಿ ನಡೆದಿರೋ ಮಾರಣಾಂತಿಕ ಹಲ್ಲೇಲಿ ನಿರ್ಮಾಪಕ ಎ.ಗಣೇಶ್ ಹಣೆಯಿಂದ ರಕ್ತ ಚಿಮ್ಮಿದೆ. ದೇಹದ ತುಂಬಾ ಗಾಯಗಳಾಗಿವೆ. ಮತ್ತೋರ್ವ ನಿರ್ಮಾಪಕ ರಥಾವರ ಚಂದ್ರು ಕೂಡ ಗಂಭೀರ ಗಾಯದಿಂದ ನೆರಳ್ತಾ ಇದ್ದಾರೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಸೂಕ್ತ ಸಮಯದಲ್ಲಿ ಅಂಬುಲೆನ್ಸ್ ಬಾರದೇ ಇದ್ದರೆ, ಅನಾಹುತಾನೇ ಆಗಿರೋದು ಅಂತಿದ್ದಾರೆ ನಿರ್ಮಾಪಕ ಗಣೇಶ್.

     

    ಅಂಬುಲೆನ್ಸ್ ತಡವಾಗಿದ್ದರೆ ಅನಾಹುತನೇ ಆಗಿರೋದು ಅಂತಿದ್ದಾರೆ ಅಂದ್ಮೇಲೆ.. ಹಲ್ಲೆ ಯಾವ ಪ್ರಮಾಣದಲ್ಲಿ ಆಗಿರೋದು ಅಂತ ನೀವೇ ಅಂದಾಜಿಸಿಕೊಳ್ಳಿ.. ಅಷ್ಟಕ್ಕೂ ಈ ಗಲಾಟೆ ನಡೆದಿದ್ದು ಯಾಕೆ? ವೈಯಕ್ತಿಕ ಕಾರಣ ಏನಾದ್ರೂ ಇತ್ತಾ? ದ್ವೇಷ ತುಂಬಿಕೊಂಡೆ ಇವರು ಗೋವಾಗೆ ಹೋಗಿದ್ದಾರೆ? ದ್ವೇಷದಲ್ಲಿ ಹಲ್ಲು ಮಸೀತಾ ಇದ್ದೋರ್‌ನ ಗೋವಾಗೆ ಕರ‍್ಕೊಂಡು ಹೋಗಿದ್ದು ಯಾರು? ಸತೀಶ್ ಅನ್ನೋರು ಫೋರ್ಕ್ ಸ್ಪೂನ್‌ನಿಂದ ಹಲ್ಲೆ ಮಾಡಿದ್ದು ಯಾಕೆ? ಅಲ್ಲಿದ್ದವರಿಗೆ ಈ ಕಾಳಗವನ್ನು ತಪ್ಪಿಸೋಕೆ ಆಗ್‌ಲಿಲ್ಲವಾ? ಅಬ್ಬಬ್ಬಾ.. ಎಷ್ಟೊಂದು ಪ್ರಶ್ನೆಗಳು.. ಇದಕ್ಕೆ ಉತ್ತರಿಸೋರು ಯಾರು? ನಿರ್ಮಾಪಕ ಗಣೇಶ್ ಅವರೇ ಹೇಳಿದಂತೆ ಹಲ್ಲೆ ಮಾಡಿದ ವ್ಯಕ್ತಿ ಕಂಠಪೂರ್ತಿ ಕುಡಿದಿದ್ನಂತೆ.. ಅದು ಬರೀ ಕುಡಿತದ ಹಾರಾಟ ಮಾತ್ರ ಆಗಿರಲಿಲ್ಲವಂತೆ.. `ಬೇರೆ ಇನ್ನೇನಾದ್ರೂ ತಗೊಂಡಿದ್ನಾ?.’ ಅಂತ ಅನುಮಾನ ಹೊರ ಹಾಕಿದ್ದಾರೆ. `ಬೇರೆದು ಅಂದ್ರೇನು..?’ ಈ ಮಾತು ನಾನಾ ಅನುಮಾನಕ್ಕೆ ಕಾರಣವಾಗಿದೆ. `ಬೇರೆದು ಅಂದ್ರೇನು..?’ ಅಂತ ಗಣೇಶ್ ಅವರೇ ಬಿಡಿಸಿ ಹೇಳಬೇಕಿದೆ. ಒಟ್ನಲ್ಲಿ.. ಗೋವಾ ಟ್ರಿಪ್ ಸುಖಾಂತ್ಯ ಕಾಣದೆ.. ಹೊಡೆದಾಟದಲ್ಲಿ ಕೊನೆಗೊಂಡಿದೆ. ಹೋದ ಕೆಲ್ಸ ಆಯ್ತಾ ಅಂತ ಚೇಂಬರ್ ಅಧ್ಯಕ್ಷರೇ ಹೇಳ್ಬೇಕಿದೆ. ಅಂದಹಾಗೆ ಈ ಘಟನೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್ ತುಟಿಗೂ ಗಾಯ ಆಗಿದೆ ಅನ್ನೋದು ವಿಪರ್ಯಾಸ.

  • ಗೋವಾದಲ್ಲಿ ಕನ್ನಡದ ನಿರ್ಮಾಪಕರ ಹೊಡೆದಾಟ: ನಿರ್ಮಾಪಕ ಗಣೇಶ್ ಪ್ರತಿಕ್ರಿಯೆ

    ಗೋವಾದಲ್ಲಿ ಕನ್ನಡದ ನಿರ್ಮಾಪಕರ ಹೊಡೆದಾಟ: ನಿರ್ಮಾಪಕ ಗಣೇಶ್ ಪ್ರತಿಕ್ರಿಯೆ

    ಸಿನಿಮಾ ರಂಗಕ್ಕೆ 90 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಮುಂದಾಗಿದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ. ಪೂರ್ವಭಾವಿಯಾಗಿ ತಯಾರಿಯ ಕುರಿತಂತೆ ಚರ್ಚೆ ಮಾಡಲು ಮತ್ತು ಕಾರ್ಯಕಾರಿಣಿ ಸಭೆಯನ್ನು ನಡೆಸಲು ಫಿಲ್ಮ್ ಚೇಂಬರ್ (Film Chamber) ಸದಸ್ಯರು ಮತ್ತು ಅಧ್ಯಕ್ಷರು ಗೋವಾಗೆ (Goa) ಹಾರಿದ್ದರು. ಈ ಸಂದರ್ಭದಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ.

    ನಿರ್ಮಾಪಕ ರಥಾವರ ಚಂದ್ರು ಮತ್ತು ಸತೀಶ್ ಆರ್ಯ (Satish Arya) ನಡುವೆಗೆ ಗಲಾಟೆ ಶುರುವಾಗಿ, ಗಲಾಟೆ ತಪ್ಪಿಸಲು ಹೋದ ನಿರ್ಮಾಪಕ ಎ.ಗಣೇಶ್ (Ganesh) ಅವರ ಹಣೆಗೆ ತೀವ್ರ ಗಾಯವಾಗಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್ ಅವರ ತುಟಿಗೂ ಗಾಯವಾಗಿದೆ. ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆ ಗಾಯಾಳು ಗಣೇಶ್ ಎಕ್ಸ್‍ ಕ್ಲ್ಯೂಸಿವ್ ಆಗಿ ಮಾತನಾಡಿದ್ದಾರೆ.

    ಸಿನಿ 90 ಕಾರ್ಯಕ್ರಮದ ಕುರಿತು ಚರ್ಚೆ ಮಾಡೋಕೆ ಪ್ರೋಗ್ರಾಂ ಹೇಗೆ ಮಾಡ್ಬೇಕು ಅನ್ನೋ ಬಗ್ಗೆ ಚರ್ಚೆ ಮಾಡೋಕೆ ಗೋವಾಗೆ ಹೋಗಿದ್ವಿ. ಸತೀಶ್ ಆರ್ಯ ಹಾಗೂ ರಥಾವರ ಮಂಜು ನಡುವೆ ಗಲಾಟೆ ಶುರುವಾಯ್ತು. ಅವ್ರನ್ನ ಬಿಡಿಸೋಕೆ ಅಂತ ನಾನು ಹೋಗಿದ್ದು ಸತೀಶ್ ನನ್ಗೆ ಫೋರ್ಕ್ ಸ್ಪೂನ್ ಯಿಂದ ಚುಚ್ಚಿದ್ರು.  ಎನ್ ಎಂ ಸುರೇಶ್ ತುಟಿಗೂ ಗಾಯ ಆಗಿದೆ.  ಸಿನಿಮಾ ರೀತಿಯಲ್ಲಿ ಸತೀಶ್ ಆರ್ಯ ಹಲ್ಲೆ ಮಾಡಿದ್ರು. ಗೋವಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ವಾಪಾಸ್ಸಾದೆ ಇಲ್ಲಿ ಬಂದು ಮಣಿಪಾಲ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ತಗೊಂಡೆ. ರಥಾವರ ಮಂಜುನಾಥ್ ಗೆ ಗಂಭೀರ ಗಾಯ ಆಗಿದೆ ಅನ್ನುತ್ತಾರೆ ಗಣೇಶ್.

     

    ಸತೀಶ್ ಆರ್ಯ ಯಿಂದ ಕೆಟ್ಟ ಹೆಸರು ಬರ್ಬಾರ್ದು ಅಂತ ಕಂಪ್ಲೇಂಟ್ ಕೊಟ್ಟಿಲ್ಲ. ಹುಚ್ಚ ಸತೀಶ್ ತರದವ್ರು ಚೇಂಬರ್ ಅಲ್ಲಿ ಇದ್ರೆ ಬೆಲೆ ಇರಲ್ಲ. ಸತೀಶ್ ಹೊಡೆದ ತಕ್ಷಣ ಎಸ್ಕೇಪ್ ಆಗಿದ್ದಾರೆ. ಸತೀಶ್ ಗಲಾಟೆ ಮಾಡಿರುವ ಸಿಸಿಟಿವಿ ಫೂಟೆಜ್ ಇದೆ . ರಕ್ತ ಸುರಿತಿದೆ ಆದ್ರೂ ಡಾನ್ಸ್ ಮಾಡ್ತಿದ್ದಾನೆ. ಕುಡಿದ ಅಮಲಿನಲ್ಲಿ ಏನು ಮಾಡಿದ್ದನೋ ಆತನಿಗೆ ಗೊತ್ತಿಲ್ಲ. ಪೆಟ್ಟು ಬಿದ್ದಿರೋ ಕಾರಣ ಕಣ್ಣು ಮಂಜಾಗಿದೆ, ಕಣ್ಣು ಕಳೆದುಕೊಳ್ಳೋ ಸಂದರ್ಭ ಸಹ ಬರ್ತಿತ್ತು. ಎನ್ ಎಂ ಸುರೇಶ್ ದುಡ್ಡಲ್ಲಿ ಗೋವಾ ಹೋಗಿದ್ದು. ಚೇಂಬರ್ ದುಡ್ಡು ಒಂದು ಪೈಸೆ ಬಳಸಿಲ್. ನಾಳೆ 12ಗಂಟೆಗೆ ವಾಣಿಜ್ಯ ಮಂಡಳಿ ಸುದ್ಧಿಗೋಷ್ಠಿ ಆಯೋಜಿಸಿ ತೀರ್ಮಾನ ಕೊಡಲಿದೆ ಎನ್ನುತ್ತಾರೆ ಗಣೇಶ್.